Wednesday, March 18, 2026
Wednesday, March 18, 2026
Home Blog Page 1493

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ರಷ್ಯ ನಿರ್ಗಮನ ನಿರ್ಧಾರ

0

2024 ರ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತೊರೆಯಲು ರಷ್ಯಾ ನಿರ್ಧರಿಸಿದೆ ಎಂದು ಮಾಸ್ಕೋದ ಬಾಹ್ಯಾಕಾಶ ಏಜೆನ್ಸಿಯ ಹೊಸದಾಗಿ ನೇಮಕಗೊಂಡ ಮುಖ್ಯಸ್ಥರು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಮಂಗಳವಾರ ತಿಳಿಸಿದರು.

ಖಂಡಿತವಾಗಿಯೂ, ನಾವು ನಮ್ಮ ಪಾಲುದಾರರಿಗೆ ನಮ್ಮ ಎಲ್ಲಾ ಬಾಧ್ಯತೆಗಳನ್ನು ಪೂರೈಸುತ್ತೇವೆ. ಆದರೆ, 2024 ರ ನಂತರ ಈ ನಿಲ್ದಾಣವನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರೊಸ್ಕೋಸ್ಮೋಸ್ ಮುಖ್ಯಸ್ಥ ಯುರಿ ಬೊರಿಸೊವ್ ಕ್ರೆಮ್ಲಿನ್ ಬಿಡುಗಡೆ ಮಾಡಿದ ಪ್ರತಿಕ್ರಿಯೆಗಳಲ್ಲಿ ಪುಟಿನ್ ಗೆ ತಿಳಿಸಿದರು.

ಉಚಿತ ಉಡುಗೊರೆ ನೀಡಿಕೆ ತಡೆಯಲು ಪರಿಹಾರ ಕಂಡುಹಿಡಿಯಿರಿ- ಸುಪ್ರೀಂ ಕೋರ್ಟ್

0

ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತವಾಗಿ ಉಡುಗೊರೆಗಳನ್ನು ನೀಡುವುದನ್ನು ತಡೆಯಲು ಪರಿಹಾರವನ್ನ ಕಂಡುಹಿಡಿಯುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನ ನೀಡುವುದನ್ನ ತಡೆಯಲು ಪರಿಹಾರವನ್ನ ಕಂಡುಹಿಡಿಯಲು ಸುಪ್ರೀಂಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯವು ಈ ವಿಷಯದ ಹೆಚ್ಚಿನ ವಿಚಾರಣೆಗಾಗಿ ಆಗಸ್ಟ್ 3 ನಿಗದಿಪಡಿಸಿದೆ.

ಹಣಕಾಸು ಆಯೋಗದೊಂದಿಗೆ ಸರ್ಕಾರ ಮಾತುಕತೆ
ರಾಜಕೀಯ ಪಕ್ಷಗಳ ವಿಷಯದ ಬಗ್ಗೆ ಹಣಕಾಸು ಆಯೋಗದೊಂದಿಗೆ ಮಾತುಕತೆ ನಡೆಸುವಂತೆ ಮತ್ತು ಅದನ್ನ ನಿಯಂತ್ರಿಸುವ ಸಾಧ್ಯತೆ ಇದೆಯೇ ಎಂಬುದನ್ನ ಗಮನದಲ್ಲಿಟ್ಟುಕೊಂಡು, ಉಚಿತವಾಗಿ ಖರ್ಚು ಮಾಡಿದ ಹಣದಿಂದ ಅದನ್ನ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಸಮಯಪಾಲನೆ ಆದೇಶ

0

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಅವರು ಆದೇಶ ಹೊರಡಿಸಿದ್ದಾರೆ. ಸರಿಯಾದ ವೇಳೆಗೆ ಕೆಲಸಕ್ಕೆ ಹಾಜರುವಂತೆ ಆದೇಶ ಹೊರಡಿಸಿದ್ದರೂ, ಅನೇಕ ಮಂದಿ ಕಚೇರಿಗೆ ತಡವಾಗಿ ಬರುತ್ತಿರುವುದಾಗಿ ಅವರು ಹೇಳಿದ್ದಾರೆ.

ಒಂದು ವೇಳೆ ನೌಕರರು ತಡವಾಗಿ ಬಂದರೆ ಅಥವಾ ಕಚೇರಿ ವೇಳೆಯಲ್ಲಿ ತಮ್ಮ ಕುರ್ಚಿಯಲ್ಲಿ ಕುಳಿತಿರದಿದ್ದರೆ, ಉನ್ನತ ಅಧಿಕಾರಿಗಳು ಕಾರಣಗಳೊಂದಿಗೆ ತಿಳಿಸಬೇಕು. ಅಂತಹ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಂದಿತಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ಇದು ಕೆಲಸದಲ್ಲಿನ ಬದ್ದತೆ ಕೊರತೆಯನ್ನು ತೋರಿಸುತ್ತದೆ. ನೌಕರರು ಬೆಳಗ್ಗೆ 10 ಗಂಟೆಗೂ ಮುನ್ನ ಕಚೇರಿಗೆ ಬರಬೇಕು. ಕಚೇರಿ ಅವಧಿ ಮುಗಿಯುವವರೆಗೂ ತಮ್ಮ ಕುರ್ಚಿಗಳಲ್ಲಿ ಕುಳಿತಿರಬೇಕು. ಅನುಮತಿ ಪಡೆದ ನಂತರ ಮಾತ್ರ ಅವರು
ಹೊರಗಡೆ ಹೋಗಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.

ಮಹಾದಾಯಿ ಯೋಜನೆ: ರಾಜ್ಯದಿಂದ ಪರಿಷ್ಕೃತ ವರದಿ ಸಲ್ಲಿಕೆ

0

ಮಹದಾಯಿ ಯೋಜನೆಯ ಸ್ವರೂಪವನ್ನೇ ಬದಲಿಸಿರುವ ಕರ್ನಾಟಕ ಸರ್ಕಾರ, ಪರಿಷ್ಕೃತ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆ.

ಈ ಯೋಜನೆಯು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ.
2012ರಲ್ಲಿ ಈ ಯೋಜನೆಯ ವೆಚ್ಚ ₹840 ಕೋಟಿ ಆಗಿತ್ತು. ಕರ್ನಾಟಕ ಸರ್ಕಾರ 2021-22ರಲ್ಲಿ ಯೋಜನಾ ಮೊತ್ತವನ್ನು ₹1,677 ಕೋಟಿಗೆ ಏರಿಸಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಯೋಜನೆಯ ಸ್ವರೂಪ ಬದಲಿಸಿದ್ದರಿಂದ ಯೋಜನಾ ಮೊತ್ತ ₹1 ಸಾವಿರ ಕೋಟಿಗೆ ಇಳಿಕೆಯಾಗಿದೆ. ಈ ಸಲದ ಬಜೆಟ್‌ನಲ್ಲಿ ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ₹500 ಕೋಟಿ ಮೀಸಲಿಡಲಾಗಿದೆ.

ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣವು 2018ರ →ಆಗಸ್ಟ್‌ 14ರಂದು ಕಳಸಾ- →ಬಂಡೂರಿ ಯೋಜನೆಗೆ 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿದೆ. ಬಳಿಕ ಕರ್ನಾಟಕ ಸರ್ಕಾರವು ಯೋಜನೆಯ ಪೂರ್ವ- ಕಾರ್ಯಸಾಧ್ಯತಾ ವರದಿಗಳನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಆಯೋಗವು, ‘ನ್ಯಾಯಮೂರ್ತಿ ಬಚಾವತ್‌ ಆಯೋಗದ ವರದಿಯ ಪ್ರಕಾರ, ಈ ಯೋಜನೆಗೆ ಕೃಷ್ಣಾ ನದಿ ತೀರದ ಇತರ ರಾಜ್ಯಗಳ ಅನುಮತಿ ಕೂಡ ಅಗತ್ಯ ಎಂದು ಸ್ಪಷ್ಡಪಡಿಸಿತ್ತು.

ಬಚಾವತ್‌ ಅಯೋಗದ ಷರತ್ತಿನ ಪ್ರಕಾರ, ಮಹದಾಯಿ ಯೋಜನೆಗೆ ನದಿ-ತೀರದ ಇತರ ರಾಜ್ಯಗಳ ಅನುಮತಿ ಪಡೆಯುವುದು ಕಡ್ಡಾಯವಲ್ಲ’ ಎಂದು ಕರ್ನಾಟಕ ಸರ್ಕಾರವು ಆಯೋಗಕ್ಕೆ ಸ್ಪಷ್ಟನೆ ನೀಡಿದೆ.

ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ‘ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ-2006’ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ಯಾವುದೇ ತಕರಾರು ಇಲ್ಲ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 2019ರಲ್ಲೇ ಸ್ಪಷ್ಟಪಡಿಸಿದೆ.

ಆದರೂ, ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಒಪ್ಪಿಗೆ ಪಡೆಯಬೇಕಿದೆ. ಕಾಲುವೆಗಳ ಮೂಲಕ ನೀರು ಹರಿಸಿದರೆ 499 ಹೆಕ್ಟೇರ್‌ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.
ಹಾಗಾಗಿ, ಅಗತ್ಯ ಇರುವ ಕಡೆಗಳಲ್ಲಷ್ಟೇ ಕಾಲುವೆ ನಿರ್ಮಿಸಿ ಉಳಿದ ಕಡೆಯಲ್ಲಿ ಪೈಪ್‌ ಮೂಲಕ (ರಸ್ತೆ ಅಂಚಿನಲ್ಲಿ) ನೀರು ಕೊಂಡೊಯ್ಯಲು ಪರಿಷ್ಕೃತ ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಇದರಿಂದಾಗಿ, ಅರಣ್ಯ ಭೂಮಿ ಸ್ವಾಧೀನ ಪ್ರಮಾಣ 59 ಹೆಕ್ಟೇರ್‌ಗೆ ಇಳಿದಿದೆ.
40 ಹೆಕ್ಟೇರ್‌ಗಿಂತ ಕಡಿಮೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ ಅನುಮತಿ ಪಡೆದರೆ ಸಾಕು. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಎರಡು ಹಂತಗಳಾಗಿ ವಿಭಜಿಸಿ ಎರಡು ಪ್ರತ್ಯೇಕ ಪ್ರಸ್ತಾವಗಳನ್ನು ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗಿದೆ.

ಕೇಂದ್ರ ಜಲ ಆಯೋಗವು ಕೆಲವೇ ದಿನಗಳಲ್ಲಿ ಪೂರ್ವ-ಕಾರ್ಯಸಾಧ್ಯತಾ ವರದಿಗೆ ಒಪ್ಪಿಗೆ ನೀಡುವ ವಿಶ್ವಾಸ ಇದೆ. ಬಳಿಕ ಡಿಪಿಆರ್‌ಗೆ ಅನುಮೋದನೆ ಪಡೆಯುವುದು ಕಷ್ಟದ ಕೆಲಸವೇನಲ್ಲ’ ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.

ಕಟ್ಟಕಡೆಯ ಜನರಿಗೆ ಯೋಜನೆಗಳನ್ನ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು

0

ಜಾತಿಯ ವಿಷ ಬೀಜ ಇಂದು ನಮ್ಮ ದೇಶದ ಪ್ರಗತಿಗೆ ಮಾರಕವಾಗಿದ್ದು, ಇಂತಹ ಸಂಕೋಲೆ ಹಾಗೂ ಸ್ವಾರ್ಥ ದಿಂದ ಹೊರಬಂದು ದೇಶಕ್ಕೆ ಕೊಡುಗೆ ನೀಡಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಕರೆ ನೀಡಿದರು.

ಕೇಂದ್ರ ವಿದ್ಯುತ್ ಸಚಿವಾಲಯ, ವಿಜಯನಗರ ಜಿಲ್ಲಾಡಳಿತ ಮತ್ತು ಜೆಸ್ಕಾಂ ಸಹಯೋಗದೊಂದಿಗೆ ಆಝಾದಿ ಕಾ ಅಮೃತ್ ಮಹೋತ್ಸವ ಆಚರಣೆ ನಿಮಿತ್ತ ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಉಜ್ವಲ ಭಾರತ-ಉಜ್ವಲ ಭವಿಷ್ಯ ದಿವಸ ವಿದ್ಯುತ್@2047’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಇಲ್ಲದಿದ್ದರೂ ನಮ್ಮ ಕೆಲಸಗಳು ಸಾರ್ವಜನಿಕರ ನೆನಪಿನಲ್ಲಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಪದವಿಯ ಆಸೆಯನ್ನು ಬಿಟ್ಟು ವಿಜಯನಗರ ಜಿಲ್ಲೆ ರಚನೆಯಾಗಲು ಶ್ರಮಿಸಿದ್ದೇನೆ ಎಂದು ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ರಚನೆಯ ಬಗ್ಗೆ ಅವರು ಸ್ಮರಿಸಿಕೊಂಡರು.
ಆಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲೆಯಲ್ಲಿ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣವಾಗುತ್ತಿದ್ದು, ಇದು ವಿಶ್ವದ ಎತ್ತರದ ಸ್ತಂಭಗಳಲ್ಲಿ 9ನೇ ಸ್ಥಾನದಲ್ಲಿದೆ. ಇದು ವಿಜಯನಗರ ಜಿಲ್ಲೆಯ ಹೆಮ್ಮ ವಿಷಯದ ಸಂಕೇತವಾಗಿದೆ ಎಂದು ಆನಂದ್ ಸಿಂಗ್ ಹೇಳಿದರು.

ಅತಿಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದಾಗಿದ್ದು, ಯುವಕರು ನಮ್ಮ ದೇಶದ ಭವಿಷ್ಯಕ್ಕಾಗಿ, ಅಭಿವೃದ್ಧಿಗಾಗಿ ಶ್ರಮ ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ನಾಡಿನ ಕಟ್ಟಕಡೆಯ ಜನರಿಗೂ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಅವರು ಹೇಳಿದರು.
ಪ್ರಪಂಚದಲ್ಲಿಯೇ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾ ತಂತ್ರಜ್ಞಾನದಲ್ಲಿ ಜಗತ್ತನ್ನೆ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹಾದಿಯಲ್ಲಿ ಸಾಗುತ್ತಿದೆ. ಆದರೆ ಭಾರತ ದೇಶವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ಹಾದಿಯಲ್ಲಿ ಸಾಗುತ್ತಿದ್ದು, ತಂತ್ರಜ್ಞಾನದಲ್ಲಿ ಹಿಂದೆ ಉಳಿದಿದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅಗತ್ಯತೆ ಇದ್ದು, ನಮ್ಮ ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಬೇಕಾಗಿದೆ ಎಂದು ಆನಂದ್ ಸಿಂಗ್ ತಿಳಿಸಿದರು.

ಸರಕಾರವು ವಿದ್ಯುತ್ ನಿಯಮಗಳು 2020 ಅನ್ನು ಪರಿಚಯಿಸಿದ್ದು, ಹೊಸ ಸಂಪರ್ಕವನ್ನು ಪಡೆಯಲು ಗರಿಷ್ಠ ಸಮಯದ ಮಿತಿಯನ್ನು ಸೂಚಿಸಿದೆ, ಮೀಟರ್ ಸಂಬಂಧಿತ ದೂರುಗಳನ್ನು ಪರಿಹರಿಸಲು ಟೈಮ್‍ಲೈನ್‍ಗಳನ್ನು ಮತ್ತು ಗ್ರಾಹಕರ ದೂರುಗಳನ್ನು ಪರಿಹರಿಸಲು 24/7 ಕಾಲ್ ಸೆಂಟರ್‍ಗಳನ್ನು ಸ್ಥಾಪಿಸಲಾಗುತ್ತಿವೆ. ಗ್ರಾಹಕರು ಈಗ ರೂಫ್ ಟಾಫ್ ಸೋಲಾರ್ ಅಳವಡಿಸಿಕೊಳ್ಳುವ ಮೂಲಕ ಸಾಧಕರಾಗಬಹುದಾಗಿದ್ದು, ಸೌರ ಪಂಪ್‍ಗಳನ್ನು ಅಳವಡಿಸಿಕೊಳ್ಳಲು ಕೆಂದ್ರ ಸರಕಾರ ಶೇ.30 ಮತ್ತು ರಾಜ್ಯ ಸರಕಾರದಿಂದ ಶೇ.30ರಷ್ಟು ಸಬ್ಸಿಡಿ ನೀಡುವುದರ ಜೊತೆಗೆ ಶೇ.30ರಷ್ಟು ಬ್ಯಾಂಕ್ ಸಾಲ ದೊರೆಯಲಿದೆ ಎಂದು ಅವರು ತಿಳಿಸಿದರು.

ಎನ್‍ಟಿಪಿಸಿ ಎಜಿಎಂ ಕುಲದೀಪ್ ಪರಿಹಾರ್ ಮಾತನಾಡಿ, 2014ರಲ್ಲಿ 2.48 ಲಕ್ಷ ಮೆಗಾವ್ಯಾಟ್ ನಿಂದ ಇಂದು 4 ಲಕ್ಷ ಮೆಗಾವ್ಯಾಟ್‍ಗೆ ಉತ್ಪಾದನೆ ಸಾಮಥ್ರ್ಯ ಹೆಚ್ಚಳವಾಗಿದ್ದು, ಇದು ನಮ್ಮ ಬೇಡಿಕೆಗಿಂತ 1.85 ಲಕ್ಷ ಮೆಗಾವ್ಯಾಟ್ ಹೆಚ್ಚು ಉತ್ಪಾದನೆಯಾಗಿದೆ. 1.63 ಲಕ್ಷ ಸಿಸಿಎಮ್ ಟ್ರಾನ್ಸ್‍ಮಿಷನ್ ಲೈನ್‍ಗಳನ್ನು ಸೇರಿಸಲಾಗಿದ್ದು, ಇಡೀ ದೇಶವನ್ನು ಒಂದು ಆವರ್ತನದಲ್ಲಿ ಚಲಿಸುವ ಒಂದು ಗ್ರಿಡ್‍ಗೆ ಸಂಪರ್ಕಿಸುತ್ತದೆ. ಲಡಾಕ್‍ನಿಂದ ಕನ್ಯಾಕುಮಾರಿವರೆಗೆ ಮತ್ತು ಕಚ್‍ನಿಂದ ಮ್ಯಾನ್ಮಾರ್ ಗಡಿಯವರೆಗೆ ಇದು ವಿಶ್ವದ ಅತಿದೊಡ್ಡ ಸಮಗ್ರ ಗ್ರಿಡ್ ಆಗಿ ಹೊರಹೊಮ್ಮಿದೆ ಎಂದರು.
ಈ ಗ್ರೀಡ್ ಬಳಸಿ ನಾವು 1.12ಲಕ್ಷ ಮೆಗಾವ್ಯಾಟ್ ವಿದ್ಯುತ್ ಅನ್ನು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ರವಾನಿಸಬಹುದಾಗಿದೆ. 2030ರ ವೇಳೆಗೆ ಶೇ.40ರಷ್ಟು ಇಂಧನ ಮೂಲಗಳಿಂದ ನಮ್ಮ ಉತ್ಪದನಾ ಸಾಮರ್ಥ್ಯದ ನವೀಕರಿಸಬಹುದಾಗಿದ್ದು, ನಾವು ಈ ಗುರಿಯನ್ನು ನವೆಂಬರ್ 2021ರ ವೇಳೆಗೆ ನಿಗಧಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿಯೇ ಸಾಧಿಸಿದ್ದೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಬಳ್ಳಾರಿ ಜೆಸ್ಕಾಂನ ಅಧೀಕ್ಷಕ ಅಭಿಯಂತರ ವೆಂಕಟೇಶುಲು, ಜೆಸ್ಕಾಂ ಹೊಸಪೇಟೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜನಿಯರ್ ಶ್ರೀನಿವಾಸ್ ಜಿ.ಜೆ ಮತ್ತು ಹಗರಿಬೊಮ್ಮನಹಳ್ಳಿ ಜೆಸ್ಕಾಂ ಕಾರ್ಯನಿರ್ವಾಹಕ ಎಂಜನಿಯರ್ ರಾಮಚಂದ್ರ ಡಿ.ಸುತಾರ್, ಜೆಸ್ಕಾಂ ಕಂಟ್ರೋಲರ್ ಆನಂದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ವಾಯುಮಾಲಿನ್ಯ ಪಟ್ಟಿಯಲ್ಲಿ ಬೆಂಗಳೂರಿನ ಹೆಸರಿದೆ

0

ಬೆಂಗಳೂರು ಸೋಮವಾರ ಬೆಳಗ್ಗೆ ಅತ್ಯಂತ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕ ಹೊಂದಿರುವ ಭಾರತದ ಅಗ್ರ ನಗರಗಳಲ್ಲಿ ಒಂದಾಗಿದೆ.

ಬೆಳಿಗ್ಗೆ 7.30ಕ್ಕೆ ನಗರವು 101ರ ವಾಯು ಗುಣಮಟ್ಟ ಸೂಚ್ಯಂಕವನ್ನ ದಾಖಲಿಸಿದ್ದು, ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ 6ನೇ ಸ್ಥಾನದಲ್ಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ಪಂಜಾಬ್‌ನ ರೂಪನಗರ 141 ಎಕ್ಯೂಐನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಾಟ್ನಾ, ಧರುಹೇರಾ, ದೆಹಲಿ ಮತ್ತು ಚಂದ್ರಾಪುರ ಕ್ರಮವಾಗಿ 113, 114, 106 ಮತ್ತು 104 ರೀಡಿಂಗ್‌ಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಸೋಮವಾರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ, ಬೆಂಗಳೂರಿನಲ್ಲಿ ಎಕ್ಯೂಐ ತೃಪ್ತಿಕರ ಮಟ್ಟಕ್ಕೆ ಮರಳಿದ್ದು, ಅದು 67ಕ್ಕೆ ಇಳಿಯಿತು ಎಂದಿದೆ. ಆದಾಗ್ಯೂ, ಬಿಟಿಎಂ ಲೇಔಟ್ 101 ರೀಡಿಂಗ್ ದಾಖಲಿಸುವುದನ್ನ ಮುಂದುವರಿಸಿದ್ದು, ಇದು ನಗರದ ಅತ್ಯಂತ ಕಲುಷಿತ ಪ್ರದೇಶವೆಂದು ನೋಂದಾಯಿಸಲ್ಪಟ್ಟಿತು.
ಸಿಪಿಸಿಬಿ ಪ್ರಕಾರ, 100ಕ್ಕಿಂತ ಹೆಚ್ಚಿನ ಎಕ್ಯೂಐ ಮೌಲ್ಯವನ್ನ ಮಧ್ಯಮವಾಗಿ ತೀವ್ರ ಮತ್ತು ಉಸಿರಾಟದ ಸಮಸ್ಯೆ ಇರುವ ಜನರಲ್ಲಿ ತೊಂದರೆಗಳನ್ನ ಉಂಟುಮಾಡಬಹುದು ಎಂದು ಪರಿಗಣಿಸಲಾಗುತ್ತದೆ.

ಇನ್ನು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟವು ಈಗ ಕೆಲವು ಸಮಯದಿಂದ ನಾಗರಿಕರನ್ನು ಚಿಂತೆಗೀಡು ಮಾಡುತ್ತಿದೆ.
ಜನವರಿಯಲ್ಲಿ ಗ್ರೀನ್ ಇಂಡಿಯಾ ಎಂಬ ಸಂಸ್ಥೆಯ ವರದಿಯ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತ ವಾಯುಮಾಲಿನ್ಯ ಹೆಚ್ಚಿರುವ ದಕ್ಷಿಣ ಭಾರತದ 10 ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ.

ಸಿಪಿಸಿಬಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದಾದ್ಯಂತ ಮಾಲಿನ್ಯ ಮಟ್ಟವನ್ನು ಪತ್ತೆಹಚ್ಚಲು 10 ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಿವೆ. ಬಿಟಿಎಂ ಲೇಔಟ್, ಬಾಪೂಜಿ ನಗರ, ಹೊಂಬೇಗೌಡ ನಗರ, ಜಯನಗರ 5ನೇ ಬ್ಲಾಕ್, ಸಿಟಿ ರೈಲ್ವೆ ನಿಲ್ದಾಣ, ಸಾಣೇಗುರುವನಹಳ್ಳಿ, ಹೆಬ್ಬಾಳ, ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ಬಿಡಬ್ಲ್ಯೂಎಸ್‌ಎಸ್ಬಿ ಕಡುಬೀಸನಹಳ್ಳಿಗಳಲ್ಲಿ ಮಾಲಿನ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ

0

ರಾಜ್ಯದೆಲ್ಲೆಡೆ ಮಳೆ ಅಬ್ಬರ ಜೋರಾಗಿದ್ದು, ಹಳ್ಳ, ಕೆರೆ, ಜಲಪಾತಗಳೆಲ್ಲಾ ಧುಮ್ಮಿಕ್ಕಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿಗಳಿಗೆ ಬಾಗೀನ ಸಹ ಅರ್ಪಿಸಲಾಗುತ್ತಿದೆ.

ನೀರು, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖವಾಗಿ ಬೇಕಾಗುತ್ತದೆ.
ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ.

ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.
ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.

ತುಂಗಭದ್ರಾ ಜಲಾಶಯ –
ಗರಿಷ್ಠ ನೀರಿನ ಮಟ್ಟ – 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ – 104.91 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 83.28 ಟಿಎಂಸಿ
ಇಂದಿನ ಒಳಹರಿವು – 20,781 ಕ್ಯೂಸೆಕ್ಸ್
ಇಂದಿನ ಹೊರಹರಿವು – 31,004 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ-
ಗರಿಷ್ಠ ಮಟ್ಟ – 1,704 ಅಡಿ
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 100.05 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 71.92 ಟಿಎಂಸಿ
ಇಂದಿನ ಒಳಹರಿವು- 35,350 ಕ್ಯೂಸೆಕ್ಸ್
ಇಂದಿನ ಹೊರಹರಿವು – 6,451 ಕ್ಯೂಸೆಕ್ಸ್

ಘಟಪ್ರಭಾ ಜಲಾಶಯ-
ಗರಿಷ್ಠ ಮಟ್ಟ – 662.91 ಮೀಟರ್
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 35.57 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 46.38 ಟಿಎಂಸಿ
ಇಂದಿನ ಒಳಹರಿವು – 4,864 ಕ್ಯೂಸೆಕ್ಸ್
ಇಂದಿನ ಹೊರಹರಿವು – 166 ಕ್ಯೂಸೆಕ್ಸ್

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ – 2,922 ಅಡಿ
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 37.10 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 32.18 ಟಿಎಂಸಿ
ಇಂದಿನ ಒಳಹರಿವು – 5,214 ಕ್ಯೂಸೆಕ್ಸ್
ಇಂದಿನ ಹೊರಹರಿವು – 1,805 ಕ್ಯೂಸೆಕ್ಸ್

ಕೆಆರ್‌ಎಸ್ ಜಲಾಶಯ –
ಗರಿಷ್ಠ ಮಟ್ಟ – 124.80 ಅಡಿ
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 49.28 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 30.65 ಟಿಎಂಸಿ
ಇಂದಿನ ಒಳಹರಿವು – 13,838 ಕ್ಯೂಸೆಕ್ಸ್
ಇಂದಿನ ಹೊರಹರಿವು – 12,030 ಕ್ಯೂಸೆಕ್ಸ್

ಕಬಿನಿ ಜಲಾಶಯ-
ಗರಿಷ್ಠ ನೀರಿನ ಮಟ್ಟ – 2,284 ಅಡಿ
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಮಟ್ಟ – 19.40 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 17.01 ಟಿಎಂಸಿ
ಇಂದಿನ ಒಳಹರಿವು – 8,862 ಕ್ಯೂಸೆಕ್ಸ್
ಇಂದಿನ ಹೊರಹರಿವು – 8,063 ಕ್ಯೂಸೆಕ್ಸ್

ಭದ್ರಾ ಜಲಾಶಯ-
ಗರಿಷ್ಠ ಮಟ್ಟ – 657.73 ಮೀಟರ್
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 70.02 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 61.24 ಟಿಎಂಸಿ
ಇಂದಿನ ಒಳಹರಿವು- 6,230 ಕ್ಯೂಸೆಕ್ಸ್
ಇಂದಿನ ಹೊರಹರಿವು – 3,233 ಕ್ಯೂಸೆಕ್ಸ್

ಮಲಪ್ರಭಾ ಜಲಾಶಯ-
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಇಂದಿನ ನೀರಿನ ಮಟ್ಟ – 24.42 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 33.39 ಟಿಎಂಸಿ
ಇಂದಿನ ಒಳಹರಿವು – 2,755 ಕ್ಯೂಸೆಕ್ಸ್
ಇಂದಿನ ಹೊರಹರಿವು – 394 ಕ್ಯೂಸೆಕ್ಸ್

ವರಾಹಿ ಜಲಾಶಯ-
ಗರಿಷ್ಠ ಮಟ್ಟ – 594.36 ಮೀಟರ್
ಒಟ್ಟು ಸಾಮರ್ಥ್ಯ – 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 14.35 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 10.26 ಟಿಎಂಸಿ
ಇಂದಿನ ಒಳಹರಿವು – 1,712 ಕ್ಯೂಸೆಕ್ಸ್
ಇಂದಿನ ಹೊರಹರಿವು – 0 ಕ್ಯೂಸೆಕ್ಸ್

ಲಿಂಗನಮಕ್ಕಿ ಜಲಾಶಯ-
ಗರಿಷ್ಠ ಮಟ್ಟ – 554.44 ಮೀಟರ್
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 91.38 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 106.0 ಟಿಎಂಸಿ
ಇಂದಿನ ಒಳಹರಿವು – 9,879 ಕ್ಯೂಸೆಕ್ಸ್
ಇಂದಿನ ಹೊರಹರಿವು – 6,125ಕ್ಯೂಸೆಕ್ಸ್

ನಾರಾಯಣಪುರ ಜಲಾಶಯ-
ಗರಿಷ್ಠ ಮಟ್ಟ – 492.25 ಮೀಟರ್
ಒಟ್ಟು ಸಾಮರ್ಥ್ಯ – 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 29.82 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 21.82 ಟಿಎಂಸಿ
ಇಂದಿನ ಒಳಹರಿವು – 52,232 ಕ್ಯೂಸೆಕ್ಸ್
ಇಂದಿನ ಹೊರಹರಿವು – 4,737 ಕ್ಯೂಸೆಕ್ಸ್

ಹಾರಂಗಿ ಜಲಾಶಯ-
ಗರಿಷ್ಠ ಮಟ್ಟ – 871.38 ಮೀಟರ್
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 7.61 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 6.91 ಟಿಎಂಸಿ
ಇಂದಿನ ಒಳಹರಿವು – 4137 ಕ್ಯೂಸೆಕ್ಸ್
ಇಂದಿನ ಹೊರಹರಿವು – 2820 ಕ್ಯೂಸೆಕ್ಸ್

ರಾಜ್ಯದ ದಲಿತ ಸಮುದಾಯಕ್ಕೆ ಶೀಘ್ರದಲ್ಲೇ ಶುಭಲಗ್ನ ಯೋಜನೆ

0

ರಾಜ್ಯ ಸರ್ಕಾರವು ದಲಿತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ.ಸಪ್ತಪದಿ ಮಾದರಿಯಲ್ಲೇ ಶುಭಲಗ್ನ ಹೆಸರಿನಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.

ಈ ಕುರಿತು ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು,ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಶುಭಲಗ್ನ ಯೋಜನೆ ಶೀಘ್ರವೇ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಶುಭಲಗ್ನ ಯೋಜನೆಯಿಂದ ಎಸ್. ಸಿ. ಸಮುದಾಯದ ಕುಟುಂಬಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ ಪ್ರತಿ ಜಿಲ್ಲೆಗಳಿಂದ ಪರಿಶಿಷ್ಟ ಜಾತಿ, ಉಪಜಾತಿಗಳ ಸಮಗ್ರ ವರದಿಯನ್ನು ತರಿಸಿಕೊಂಡಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಶುಭಲಗ್ನ ಘೋಷಣೆ ಆಗಲಿದೆ. ಶುಭಲಗ್ನ ಕಾರ್ಯಕ್ರಮಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದರು.

ಕಾರ್ಗಿಲ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಶೌರ್ಯದ ಸಂಕೇತ- ರಾಷ್ಟ್ರಪತಿ

0

ಕಾರ್ಗಿಲ್ ವಿಜಯ್ ದಿವಸ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯದ ಸಂಕೇತವಾಗಿದೆ. ಹಾಗೂ ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರಿಗೆ ಜನರು ಯಾವಾಗಲೂ ಋಣಿಯಾಗಿರುತ್ತಾರೆ ಎಂದು ರಾಷ್ಟಾಪತಿ ದ್ರೌಪದಿ ಮುರ್ಮು ಅವರು ತಿಳಿಸಿದ್ದಾರೆ.

ಕಳೆದ 1999. ಜುಲೈ 26 ರಂದು, ಭಾರತೀಯ ಸೇನೆಯು ಆಪರೇಷನ್ ವಿಜಯ್ ಜಯಿಸಿ ಪರಾಕಾಷ್ಠೆಯನ್ನು ಘೋಷಿಸಿತು. ಲಡಾಕ್‍ನ ಕಾರ್ಗಿಲ್ ಹಿಮಾವೃತ ಪರ್ವತದಲ್ಲಿ ಸುಮಾರು 3 ತಿಂಗಳ ಸುದೀರ್ಘ ಯುದ್ಧದ ಬಳಿಕ ವಿಜಯ ಸಾಧಿಸಲಾಗಿತ್ತು .

ಭಾರತಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ವೀರ ಸೈನಿಕರಿಗೆ ನಾನು ನಮಿಸುತ್ತೇನೆ. ಅವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ದೇಶವು ಯಾವಾಗಲೂ ಋಣಿಯಾಗಿರುತ್ತದೆ. ಜೈ ಹಿಂದ್ ಎಂದು ಮುರ್ಮು ಅವರು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು-ಕೆಆರ್ ಪುರಂವರೆಗೆ ಮೆಟ್ರೋ ನೇರಳೆಮಾರ್ಗ ವಿಸ್ತರಣೆ

0

ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ.
ಕೆಆರ್ ಪುರಂವರೆಗೆ ಬೆಂಗಳೂರು ಮೆಟ್ರೋ ನೇರಳೆ ಮಾರ್ಗ ವಿಸ್ತರಣೆಯಾಗಿದ್ದು ಇದರ ಪ್ರಾಯೋಗಿಕ ಓಡಾಟ ಸೆಪ್ಟೆಂಬರ್​ನಿಂದ ನಡೆಯಲಿದೆ.

ಈ ವರ್ಷ ಡಿಸೆಂಬರ್‌ ವೇಳೆಗೆ ವೈಟ್‌ಫೀಲ್ಡ್‌ವರೆಗೆ ಮಾರ್ಗ ವಿಸ್ತರಣೆಯನ್ನು ಪೂರ್ಣಗೊಳಿಸಲು ಮೆಟ್ರೊ ರೈಲು ನಿಗಮವು ಪ್ರಯತ್ನಿಸುತ್ತಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ ಪರ್ಪಲ್ ಲೈನ್ ವಿಸ್ತರಣೆಯ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಚಾಲನೆ ಪ್ರಾರಂಭವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಡುವಿನ ನೇರಳೆ ಮಾರ್ಗದ ಪ್ರಯೋಗಿಕ ಓಡಾಟ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು, ಬಿಎಂಆರ್‌ಸಿಎಲ್ ಡಿಸೆಂಬರ್ 2022 ರೊಳಗೆ ವೈಟ್‌ಫೀಲ್ಡ್‌ಗೆ ವಿಸ್ತರಣೆಯನ್ನು ಪೂರ್ಣಗೊಳಿಸಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.