Wednesday, March 18, 2026
Wednesday, March 18, 2026
Home Blog Page 1492

ನಿಲ್ಲದ ಯುದ್ಧ: ರಷ್ಯದಿಂದ ಉಕ್ರೇನಿನ ದೊಡ್ಡ ವಿದ್ಯುತ್ ಘಟಕ ವಶ

0

ಕಳೆದ ಐದು ತಿಂಗಳಿನಿಂದ ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ, ಉಕ್ರೇನ್‍ನ ಎರಡನೇ ಅತಿದೊಡ್ಡ ವಿದ್ಯುತ್ ಘಟಕವನ್ನು ವಶಪಡಿಸಿಕೊಂಡಿದೆ.

ಇದರೊಂದಿಗೆ ಉಕ್ರೇನ್ ದಕ್ಷಿಣ ಭಾಗದ ಮೂರು ಪ್ರದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಪಡೆಯನ್ನು ನಿಯೋಜಿಸುತ್ತಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹಿರಿಯ ಸಲಹೆಗಾರರು ಪ್ರಕಟಿಸಿದ್ದಾರೆ.

ಸೋವಿಯತ್ ಯುಗದ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವ ವುಲೇರಿಕ್ ಘಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇದಕ್ಕೂ ಮುನ್ನ ರಷ್ಯಾ ಬೆಂಬಲಿತ ಪಡೆಗಳು ಈ ಮೊದಲು ಪ್ರಕಟಿಸಿದ್ದವು.
“ಅವರ ಪುಟ್ಟ ಆಯಕಟ್ಟಿನ ಲಾಭವನ್ನು ಸಾಧಿಸಿದ್ದು, ಅವರು ವುಲೇರಿಕ್ ಘಟಕ ವಶಪಡಿಸಿಕೊಂಡಿದ್ದಾರೆ” ಎಂದು ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಅರೆಸ್ಟೊವಿಚ್ ಅವರು ಸ್ಪಷ್ಟಪಡಿಸಿದ್ದಾರೆ.

ಕಾನೂನಿನ್ವಯ ಬೇಬಿ ಬೆಟ್ಟ ಅರಮನೆ ಆಸ್ತಿ ಅಲ್ಲಿ ಬ್ಲಾಸ್ಟ್ ಬೇಡ- ಪ್ರಮೋದಾ ದೇವಿ

0

ವಿಶ್ವವಿಖ್ಯಾತ ಕೆಆರ್​ಎಸ್​ ಅಣೆಕಟ್ಟಿಗೆ ಗಣಿಗಾರಿಕೆಯಿಂದ ಸಮಸ್ಯೆ ಇದೆಯೇ,ಇಲ್ಲವೇ ಎಂಬುದನ್ನು ತಿಳಿಯಲು ಮಂಡ್ಯದ ಬೇಬಿ ಬೆಟ್ಟದಲ್ಲಿ ಟಟ್ರಯಲ್ ಬ್ಲಾಸ್ಟ್ ನಡೆಸಲು ಉದ್ದೇಶಿಸಲಾಗಿದೆ. ಈ ಕುರಿತು ಪರವಿರೋಧ ಅಭಿಪ್ರಾಯಗಳನ್ನು ವ್ಯಕ್ತವಾಗಿದೆ. ರೈತರಿಂದ ಪ್ರತಿಭಟನೆಯೂ ನಡೆದಿದೆ.

ಈ ನಡುವೆ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದು ಖಾಸಗಿ ಆಸ್ತಿ, ಟ್ರಯಲ್ ಬ್ಲಾಸ್ಟ್​​ಗೆ ತಜ್ಞರು ಸರ್ಕಾರಿ ಜಾಗ ಗುರುತಿಸಿ ಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

1950ರ ಕಾಲದಿಂದ ಆ ಬೆಟ್ಟದ 1,650 ಎಕರೆ ನಮ್ಮದು. ಭಾರತ ಸರ್ಕಾರದ ಜೊತೆ ಮೈಸೂರು ಸಂಸ್ಥಾನ ಮಾಡಿಕೊಂಡ ಆಸ್ತಿ ಹಂಚಿಕೆಯ ಪತ್ರದಲ್ಲಿ ಬೇಬಿ ಬೆಟ್ಟ ಇದೆ. ಇದು ಖಾಸಗಿ ಆಸ್ತಿ, ಬೇಬಿ ಬೆಟ್ಟದ ಜಾಗವನ್ನು ಉದ್ದೇಶಪೂರ್ವಕವಾಗಿ ಬಿ ಖರಬ್ ಪಟ್ಟಿಗೆ ಸೇರಿಸಲಾಗಿತ್ತು.

ಹೀಗಾಗಿ, ನಾನು ಆ ಜಾಗದ ವಿಚಾರದಲ್ಲಿ ನಾನು ಕೋರ್ಟ್​​ಗೆ ಹೋಗಿರಲಿಲ್ಲ. ಮೈಸೂರಿನ ಕುರುಬರಹಳ್ಳಿ ಬಿ ಖರಾಬ್ ಜಾಗದ ವಿವಾದದಲ್ಲಿ ಸುಪ್ರೀಂಕೋರ್ಟ್​​ನಲ್ಲಿ ಅರಮನೆಗೆ ಜಯವಾಗಿದೆ. ಆ ತೀರ್ಪು ಈ ಬೆಟ್ಟದ ಜಾಗಕ್ಕೂ ಅನ್ವಯ. ಆ ಜಾಗ ನಮ್ಮ ವ್ಯಾಪ್ತಿಗೆ ಬಂದರೆ ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲ್ಲ. ಸರ್ಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಾವೇನೂ ಯಾರದ್ದೋ ಆಸ್ತಿ ಕಬಳಿಸಲು ಹೊರಟ್ಟಿದ್ದೇವೆ ಎಂಬ ರೀತಿ ಸರ್ಕಾರಗಳು ಯೋಚಿಸುತ್ತಿವೆ.

ಇದು ನಮಗೆ ಸರ್ಕಾರಗಳು ಕೊಡುತ್ತಿರುವ ಕಿರುಕುಳ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರ್ಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹತ್ತು ರೂಪಾಯಿ ಬೆಲೆ ಬಾಳುವುದನ್ನು ಹತ್ತು ಪೈಸೆಗೆ ತೆಗೆದು ಕೊಳ್ಳುವ ಮನಸ್ಥಿತಿ ಸರ್ಕಾರ ಪ್ರದರ್ಶಿಸುತ್ತಿದೆ. ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತಿದ್ದೇನೆ.

ಇವರಿಂದ ನನ್ನ ಕಾನೂನು ಜ್ಞಾನ ಹೆಚ್ಚಾಯಿತು. ಬೇಬಿ ಬೆಟ್ಟದ ವಿಚಾರದಲ್ಲಿ ಈಗ ಕಾನೂನುತಜ್ಞರ ಜೊತೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ. ನಾನು ಪ್ರತಿಭಟನೆ ಸ್ಥಳಕ್ಕೆ ಹೋಗುವುದಿಲ್ಲ. ಕೆಆರ್​ಎಸ್​ ಜಲಾಶಯದ ದೃಷ್ಟಿಯಿಂದ ಅಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಅಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವುದು ಕೂಡ ಸರಿಯಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಬಲಿಷ್ಠವಿದ್ದ ಶ್ರೀಲಂಕಾ ಆರೋಗ್ಯ ವ್ಯವಸ್ಥೆಯೀಗ ದುರ್ಬಲ

0

ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾದಲ್ಲಿ ಆಸ್ಪತ್ರೆಗಳೂ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿದ್ದು ವಿದ್ಯುತ್ ಪೂರೈಕೆಯಿಲ್ಲದೆ ವಾರ್ಡ್ಗಳು ಕಗ್ಗತ್ತಲಿನಲ್ಲಿ ಮುಳುಗಿದೆ. ದೇಶದ ಪ್ರಮುಖ ಆಸ್ಪತ್ರೆ ನ್ಯಾಷನಲ್ ಹಾಸ್ಪಿಟಲ್ನಲ್ಲಿ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ರೋಗಿಗಳು ಪೂರ್ಣ ಗುಣಮುಖರಾಗುವ ಮುನ್ನವೇ ಅವರನ್ನು ಡಿಸ್ಚಾರ್ಜ್ ಮಾಡಿ, ಮುಂದಿನ ಔಷಧವನ್ನು ಖಾಸಗಿ ಕ್ಲಿನಿಕ್ನಲ್ಲಿ ಪಡೆಯಲು ಸೂಚಿಸಲಾಗುತ್ತಿದೆ. ವೈದ್ಯರ ಪಾಳಿ (ಶಿಫ್ಟ್) ಕೂಡಾ ನಿಂತುಹೋಗಿದೆ ಎಂದು ತಿಳಿದುಬಂದಿದೆ.

ಆರ್ಥಿಕ ಬಿಕ್ಕಟ್ಟು ಉಚಿತ ಮತ್ತು ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಗೆ ಮಾರಣಾಂತಿಕ ಪ್ರಹಾರ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶ್ರೀಲಂಕಾ ತನ್ನ 85% ಔಷಧ ಮತ್ತು ಔಷಧ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಆದರೆ ದೇಶವು ಈಗ ದಿವಾಳಿಯ ಅಂಚಿನಲ್ಲಿರುವುದರಿಂದ ವಿದೇಶಿ ವಿನಿಮಯ ದಾಸ್ತಾನು ಬರಿದಾಗಿದೆ. ಇದರಿಂದ ಸಾಕಷ್ಟು ಪ್ರಮಾಣದ ತೈಲ ಮತ್ತು ಔಷಧವನ್ನು ಆಮದು ಮಾಡಿಕೊಳ್ಳಲು ತೊಡಕಾಗುತ್ತಿದೆ. ಸಾಮಾನ್ಯ ನೋವು ನಿವಾರಕಗಳು, ಆಯಂಟಿ ಬಯಾಟಿಕ್ಗಳು, ಶಿಶುಗಳ ಔಷಧಗಳ ತೀವ್ರ ಕೊರತೆಯಿದೆ. ಇತರ ಔಷಧಗಳು ಅಲ್ಪಪ್ರಮಾಣದಲ್ಲಿ ಲಭ್ಯವಿದ್ದರೂ ಕಳೆದ 3 ತಿಂಗಳಲ್ಲಿ ದರ ನಾಲ್ಕುಪಟ್ಟು ಹೆಚ್ಚಿದೆ ಎಂದು ಔಷಧ ಅಂಗಡಿಯ ಮಾಲಕರು ಹೇಳಿದ್ದಾರೆ.

ಒಂದೊಮ್ಮೆ ಬಲಿಷ್ಟವಾಗಿದ್ದ ಶ್ರೀಲಂಕಾದ ಆರೋಗ್ಯಸೇವಾ ವ್ಯವಸ್ಥೆ ಈಗ ಅಪಾಯದಲ್ಲಿದೆ. ದುರ್ಬಲ ವರ್ಗದವರು ಅತೀ ಹೆಚ್ಚಿನ ತೊಂದರೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಹನಾ ಸಿಂಗರ್-ಹಮ್ದಿ ಆತಂಕ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ತುರ್ತು ಅಗತ್ಯವಿರುವ ಔಷಧಗಳ ಮತ್ತು ರೇಬೀಸ್ ನಿರೋಧಕ ಲಸಿಕೆಗಳ ಆಮದಿಗೆ ನೆರವು ನೀಡುವುದಾಗಿ ವಿಶ್ವಬ್ಯಾಂಕ್ ಘೋಷಿಸಿದೆ.

ಈಗ ಇರುವ ಆರ್ಥಿಕ ವಿಪತ್ತು ಮುಂದುವರಿದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಕುಸಿತದ ಅಂಚಿಗೆ ತಲುಪಬಹುದು. ಶ್ರೀಲಂಕಾದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಪರಾಕಾಷ್ಟೆಗೆ ತಲುಪಿ ಇನ್ನಷ್ಟು ಶಿಶುಗಳು ಸಾವನ್ನಪ್ಪಬಹುದು ಎಂದು ಡಾ. ವಾಸನ್ ರತ್ನಸಿಂಗಮ್ ಹೇಳಿದ್ದಾರೆ.

ಮಂಡಕ್ಕಿಗೆ ಜಿಎಸ್ ಟಿ: ಸಿದ್ಧರಾಮಯ್ಯ ಕಟಕಿ

0

ಕೇಂದ್ರ ಸರ್ಕಾರದಿಂದ ದಿನೇ ದಿನೇ ಹುಡುಕಿ ಹುಡುಕಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ಹಾಕುತ್ತಾ ಇದ್ದಾರೆ. ಇದೇ ಕಾರಣದಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುವಂತೆ ಆಗಿದೆ. ಅಲ್ಲಾ ಮಂಡಕ್ಕಿ ಮೇಲೆ ಯಾರಾದ್ರು ತೆರಿಗೆ ಹಾಕ್ತಾರಾ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಸರ್ಕಾರದ ಸಾಧಾನ ರಿಪೋರ್ಟ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದಂತ ಅವರು, ಕೇಂದ್ರ ಸರ್ಕಾರ ಜಿಎಸ್ಟಿ ಹೆಸರಿನಲ್ಲಿ ಬಡವರ ರಕ್ತ ಕುಡಿಯೋ ಕೆಲಸ ಮಾಡುತ್ತಿದೆ. ಜಿಎಸ್ಟಿ ಹಾಕಿದ್ದರಿಂದಲೇ ಅಗತ್ಯವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ.ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗುವಂತೆ ಆಗಿದೆ ಎಂದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧ ವ್ಯಾಪರಸೌಧ ಆಗಿದೆ. ದಿನೇ ದಿನೇ ಬ್ರಹ್ಮಾಂಡ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ದೇಶದಲ್ಲಿ ಐಪಿಎಸ್ ಅಧಿಕಾರಿ ಬಂಧನವಾಗಿದ್ದು ರಾಜ್ಯದಲ್ಲೇ ಆಗಿದೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ರಾಜಕಾರಣಿಗಳು ಭಾಗಿಯಾಗಿಲ್ವಾ.? ಬರೀ ಅಭ್ಯರ್ಥಿಗಳು, ಅಧಿಕಾರಿಗಳೇನಾ ಎಂಬುದಾಗಿ ಪ್ರಶ್ನಿಸಿದರು

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ

0

ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಅಥವಾ ಇಟ್ಟಿಗೆ ಗೂಡಂಗಡಿಗಳಲ್ಲಿ ಅಸಂಘಟಿತ ವಲಯದ ಇತರ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ’ ಪ್ರಾರಂಭಿಸಿದೆ.

ಮಾಸಿಕ ಪಿಂಚಣಿ ರೂಪದಲ್ಲಿ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆಯನ್ನು ಪ್ರಾರಂಭಿಸಿತು.

ಶ್ರಮಯೋಗಿ ಮಾನ್‌ಧನ್ ಯೋಜನೆ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ತಿಂಗಳಿಗೆ ರೂ 15,000 ಅಥವಾ ಅದಕ್ಕಿಂತ ಕಡಿಮೆ ಆದಾಯವಿರುವ ಕಾರ್ಮಿಕರನ್ನು ಸೇರಿಸಲಾಗಿದೆ.

ಚಾಲಕರು, ರಿಕ್ಷಾ ಚಾಲಕರು, ಚಮ್ಮಾರರು, ಟೈಲರ್‌ಗಳು, ಕಾರ್ಮಿಕರು, ಮನೆ ಕೆಲಸಗಾರರು, ಇಟ್ಟಿಗೆ ಗೂಡು ಕಾರ್ಮಿಕರು ಮುಂತಾದ ಅಸಂಘಟಿತ ವಲಯಗಳ ಕಾರ್ಮಿಕರು ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆಯ ಲಾಭ ಪಡೆಯಬಹುದು.

ಈ ಯೋಜನೆಯಡಿ ಕಾರ್ಮಿಕರಿಗೆ 60 ವರ್ಷದ ನಂತರ ಕನಿಷ್ಠ 3,000 ರೂ.ಗಳ ಮಾಸಿಕ ಪಿಂಚಣಿ ನೀಡಲಾಗುತ್ತದೆ.

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಪಿಂಚಣಿ ಯೋಜನೆಯಡಿ ಅಸಂಘಟಿತ ವಲಯದ ಸುಮಾರು 46 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಕಾರ್ಮಿಕ ಸಚಿವಾಲಯದ ಪ್ರಕಾರ, ನವೆಂಬರ್ 25, 2021 ರಂತೆ, ಅಸಂಘಟಿತ ವಲಯದ ಒಟ್ಟು 45,77,295 ಕಾರ್ಮಿಕರು ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.

18 ವರ್ಷದಿಂದ 40 ವರ್ಷದೊಳಗಿನ ಮತ್ತು ತಿಂಗಳಿಗೆ 15,000 ರೂ.ಗಿಂತ ಹೆಚ್ಚಿನ ಆದಾಯವಿಲ್ಲದ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು, ಕಾರ್ಮಿಕರು ಮೊಬೈಲ್ ಫೋನ್, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು.

ಶ್ರಮಯೋಗಿ ಮಾನ್‌ಧನ್ ಯೋಜನೆಗೆ ಅರ್ಜಿ ಸಲ್ಲಿಸಲು, ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಅಥವಾ ಜನಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಬಹುದು.

ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ ಅಡಿಯಲ್ಲಿ ಆನ್‌ಲೈನ್ ಅರ್ಜಿಯನ್ನು ಸಹ ಮಾಡಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, www.maandhan.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಇಲ್ಲಿ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ.

ಈ ಪುಟದಲ್ಲಿ, ನೀವು ಸ್ವಯಂ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ಕ್ಲಿಕ್ ಮಾಡಿದ ನಂತರ, ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು (Mobile Number) ನಮೂದಿಸಬೇಕು. ಅದರ ನಂತರ ನೀವು ಮುಂದುವರಿಸು ಕ್ಲಿಕ್ ಮಾಡಬೇಕು. ಅದರ ನಂತರ ಹೆಸರು, ಇ-ಮೇಲ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡುವ ಮೂಲಕ ಒಟಿಪಿ ರಚಿಸಿ ಕ್ಲಿಕ್ ಮಾಡಿ.

OTP ನಮೂದಿಸಿದ ನಂತರ, ನೀವು ಪರಿಶೀಲನೆಯ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಈಗ ನಿಮ್ಮ ಮುಂದೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ನೀವು ಆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಈ ಯೋಜನೆಯ ಲಾಭ ಪಡೆಯಲು ನೀವು ಪ್ರತಿ ತಿಂಗಳು 55 ರೂ. ಜಮೆ ಮಾಡಬೇಕು. 18ನೇ ವಯಸ್ಸಿನಲ್ಲಿ ಈ ಯೋಜನೆ ಆರಂಭಿಸಿದ್ರೆ 2 ರೂಪಾಯಿ, 40 ವಯಸ್ಸಿನಿಂದ ಪ್ರಾರಂಭಿಸಿದ್ರೆ ಮಾಸಿಕ 200 ರೂಪಾಯಿ ಪಾವತಿಸಬೇಕು. ನಿಮ್ಮ ವಯಸ್ಸಿನ ಆಧಾರದ ಮೇಲೆ ಠೇವಣಿ ಮೊತ್ತ ನಿರ್ಧರಿತವಾಗುತ್ತದೆ.

ರಾಜ್ಯದ ಹಲವೆಡೆ ವರುಣನ ಕೃಪೆ:ಉಕ್ಕಿ ಹರಿದ ಜಲಾಶಯಗಳು

0

ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳ ಕೆಲವೆಡೆ ಮತ್ತೆ ಮಳೆಯಾಗುತ್ತಿದೆ.

ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಹೆಚ್ಚಾಗಲಿದೆ.
ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ.

ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳ ಕೆಲವೆಡೆ ಮತ್ತೆ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡಿನ ವಿವಿಧ ಪ್ರದೇಶಗಳಲ್ಲಿ ಇಂದಿನಿಂದ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದು ಭಾರೀ ಮಳೆ ಸುರಿಯಲಿದೆ.

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ತುಸು ದುರ್ಬಲಗೊಂಡಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಚುರುಕುಗೊಂಡಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇಂದು ಸಂಜೆಯ ವೇಳೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ರಾಯಚೂರು ಮತ್ತು ಬಳ್ಳಾರಿಯಲ್ಲಿ ಬಿಸಿಲು ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಳೆ ಪ್ರಮಾಣ ಕಡಿಮೆಯಾದರೂ ರಾಜ್ಯದ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.

ಸಿದ್ಧರಾಮೋತ್ಸವವು ವ್ಯಕ್ತಿ ಉತ್ಸವ: ಬಿಜೆಪಿಯದು ಜನೋತ್ಸವ-ಸುನೀಲ್ ಕುಮಾರ್

0

ಬಸವರಾಜ ಬೊಮ್ಮಾಯಿ ಸರ್ಕಾರ 28ರಂದು ಒಂದು ವರ್ಷ ಪೂರೈಸುತ್ತಿದೆ. ಇದರ ಅಂಗವಾಗಿ ರಾಜ್ಯಾದ್ಯಂತ ಜನೋತ್ಸವ ಕಾರ್ಯಕ್ರಮ ಮೂರು ದಿನ ನಡೆಯಲಿದೆ. ಕಾಂಗ್ರೆಸ್ ನವರು ವ್ಯಕ್ತಿ ಉತ್ಸವ ಮಾಡುತ್ತಿದ್ದಾರೆ.

ಆದರೆ ಬಿಜೆಪಿ ಜನತೆಯ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ 28ರಿಂದ 30ರ ವರೆಗೂ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. 28ರಂದು ದೊಡ್ಡಬಳ್ಳಾಪುರ ಬಿಜೆಪಿ ಪಕ್ಷದಿಂದ ಕಾರ್ಯಕ್ರಮ ನಡೆಯಲಿದೆ. 29 ಹಾಗೂ 30 ರಂದು ಆಯಾ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.

ಜನೋತ್ಸವದ ಮೂಲಕ ಜನರ ಮುಂದೆ ಹೋಗುತ್ತಿದ್ದೇವೆ. ಬಿಜೆಪಿ ಜನರನ್ನು ಮುಂದಿಟ್ಟುಕೊಂಡು ಜನೋತ್ಸವ ಮಾಡುತ್ತಿದ್ದೇವೆ. ಕಾಂಗ್ರೆಸ್ ವ್ಯಕ್ತಿ ಉತ್ಸವ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಿದ್ದರಾಮಯ್ಯ ಉತ್ಸವ ಮಾಡ್ತಿದ್ದಾರೆ. ನಾವು ವ್ಯಕ್ತಿ ಪೂಜೆ ಮಾಡಲ್ಲ ಎಂದರು.

ವಿದ್ಯುತ್ ರಹಿತ ಮನೆಗೆ ಬೆಳಕು ಯೋಜನೆ ಅಡಿ ವಿದ್ಯುತ್ ಕೊಡಲಾಗುತ್ತಿದೆ. ಪರಿಶಿಷ್ಟ ಜಾತಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ.

ಟ್ರಾನ್ಸ್ ಫಾರ್ಮರ್ ಒಂದು ವಾರದಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ಕ್ಲಿಯರೆನ್ಸ್ ಕೊಡಲ್ಲ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿತ್ತು. ನಾವು ಅದನ್ನ ಕೈಬಿಟ್ಟಿದ್ದೇವೆ. ಹೊಸದಾಗಿ 1,500 ಕಿ.ಮೀ ವಿದ್ಯುತ್ ಕೇಬಲ್ ಎಳೆದಿದ್ದೇವೆ. 200 ಕಡೆ ಸಬ್ ಸ್ಟೇಷನ್ ಉನ್ನತೀಕರಣ ಮಾಡಿದ್ದೇವೆ. ಒಂದೊಂದು ಇಲಾಖೆ ಮುಖಾಂತರ ಜನರ ತಲುಪೋ ಕೆಲಸ ಮಾಡುತ್ತಿದ್ದೇವೆ ಎಂದರು.

ಜಮೀರ್‌ಗೆ ನೋಟಿಸ್ ನೀಡಿರೋ ವಿಚಾರವಾಗಿ ಮಾತನಾಡಿದ ಸಚಿವ ಸುನೀಲ್, ಕಾಂಗ್ರೆಸ್ ಜಮೀರ್‌ ಗೆ ನೋಟಿಸ್ ನೀಡಿದೆ. ಸಿದ್ದರಾಮಯ್ಯ ಹೇಳುವ ಮಾತನ್ನ ಜಮೀರ್ ಮೂಲಕ ಹೇಳಿಸಿದ್ದಾರೆ. ಎಐಸಿಸಿ ಕೊಟ್ಟಿರೋ ನೋಟಿಸ್ ಜಮೀರ್‌ ಗೆ ಅಲ್ಲ, ಸಿದ್ದರಾಮಯ್ಯ ಅವರಿಗೆ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬೊಮ್ಮಾಯಿ ಸರ್ಕಾರದ ಜನೋತ್ಸವವು ಭ್ರಷ್ಟೋತ್ಸವ- ಸಿದ್ಧರಾಮಯ್ಯ

0

ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 1 ವರ್ಷ ಪೂರೈಸಿದ ಹಿನ್ನೆಲೆ ಜುಲೈ 28ರಂದು ಚಿಕ್ಕಬಳ್ಳಾಪುರದಲ್ಲಿ ವರ್ಷಾಚರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.

ಭ್ರಷ್ಟ ಹಣದಿಂದಲೇ ಅಧಿಕಾರಕ್ಕೆ ಬಂದು, ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಈ ಸರ್ಕಾರದ ವರ್ಷದ ಸಂಭ್ರಮವನ್ನು ಭ್ರಷ್ಟೋತ್ಸವ ಎಂದು ಕರೆದರೆ ಅರ್ಥಪೂರ್ಣವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಶೇ. 40 ರಷ್ಟು ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ, ಪಿಎಸ್‌ಐ ನೇಮಕಾತಿ ಹಾಗೂ ಉಪನ್ಯಾಸಕರ ನೇಮಕಾತಿ ಹಗರಣಗಳು ಬಿಜೆಪಿ ಸರ್ಕಾರದ ವರ್ಷದ ಸಾಧನೆಯಾಗಿದೆ.

ಇಷ್ಟೆಲ್ಲಾ ಆರೋಪಗಳಿದ್ದರೂ ಒಮ್ಮೆಯೂ ತಮ್ಮನ್ನು ತಾವು ನ್ಯಾಯಯುತ ತನಿಖೆಗೆ ಒಳಪಡಿಸಿಕೊಳ್ಳದೆ ಸರ್ಕಾರ ಭಂಡತನ ಮೆರೆದಿದೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಆಪರೇಷನ್ ಕಮಲದ ಮೂಲಕ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು, ಜುಲೈ 26, ಬಸವರಾಜ್ ಬೊಮ್ಮಾಯಿಯವರು ಆರ್ ಎಸ್ ಎಸ್ ನಿಂದ ನೇಮಕಗೊಂಡದ್ದು ಜುಲೈ 28ರಂದು. ದಿನಾಂಕ ಬದಲಿಸಿ ಸಂಭ್ರಮಾಚರಣೆ ಮಾಡಿದ ಮಾತ್ರಕ್ಕೆ ಇಬ್ಬರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬದಲಾವಣೆ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಆಪರೇಷನ್ ಕಮಲದ ಮೂಲಕ ಬಿ ಎಸ್ ವೈ ಅವರು ಮುಖ್ಯಮಂತ್ರಿಯಾಗಿದ್ದು ಜುಲೈ 26, ಬೊಮ್ಮಾಯಿ ಅವರು ಆರ್.ಎಸ್.ಎಸ್ ನಿಂದ ನೇಮಕಗೊಂಡದ್ದು ಜುಲೈ 28.
ದಿನಾಂಕ ಬದಲಿಸಿ ಸಂಭ್ರಮಾಚರಣೆ ಮಾಡಿದ ಮಾತ್ರಕ್ಕೆ ಇಬ್ಬರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬದಲಾವಣೆ ಆಗುತ್ತದೆಯೇ

15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ರೂ. ವಿಶೇಷ ಅನುದಾನ ತರಲಾಗದೆ ಕೇಂದ್ರದ ಬಿಜೆಪಿ ನಾಯಕರ ಎದುರು ಮಂಡಿಯೂರಿ ಶರಣಾದ ಬಸವರಾಜ್ ಬೊಮ್ಮಾಯಿಯವರ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಎಸಗಿದ ದ್ರೋಹವನ್ನೇ ಸಂಭ್ರಮಾಚರಣೆ ಮಾಡಲು ಹೊರಟಿದೆಯೇ ಎಂದು ಟ್ವೀಟ್ ಮುಖಾಂತರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಚಾರಣಾಧಿನ ಕೈದಿಗಳಿಗೆ ಬಿಡುಗಡೆ ನಿರ್ಧಾರದಲ್ಲಿ ವಿಫಲವಾದರೆ ಸುಪ್ರೀಂ ಜಾಮೀನು ಆದೇಶ

0

ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲು ವಿಫಲವಾದರೆ ನಾವೇ ಜಾಮೀನು ಆದೇಶವನ್ನು ಹೊರಡಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿದೆ ಎಂದು ಮಾಧ್ಯಮಯೊಂದರ ವರದಿಯಿಂದ ತಿಳಿದುಬಂದಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಎಂಎಂ ಸುಂದ್ರೇಶ್ ಅವರು 853 ಜನರು 10 ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದಾರೆ ಮತ್ತು ಅವರ ಕ್ರಿಮಿನಲ್ ಮೇಲ್ಮನವಿಗಳನ್ನು ನಿರ್ಧರಿಸಲಾಗಿಲ್ಲ ಎಂದು ತಿಳಿಸಿದರು.

12 ವರ್ಷಗಳಿಂದ ಜೈಲಿನಲ್ಲಿರುವ ಸುಲೇಮಾನ್ ಎಂಬ ಉತ್ತರ ಪ್ರದೇಶದ ನಿವಾಸಿಯ ಅರ್ಜಿಯನ್ನು ನ್ಯಾಯಮೂರ್ತಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಅವರ ಮನವಿಯ ವಿಚಾರಣೆಗೆ ಹೈಕೋರ್ಟ್ ಪೀಠ ಲಭ್ಯವಾಗದ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ನೀವು ಅದನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ನಾವು ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೈಕೋರ್ಟ್ ಹಾಗೂ ರಾಜ್ಯ ಎರಡರಲ್ಲೂ ಸಮಸ್ಯೆ ಇದೆ. ನೀವು ಈ ಜನರನ್ನು ಅನಿರ್ದಿಷ್ಟವಾಗಿ ಕಂಬಿಗಳ ಹಿಂದೆ ಹಾಕಲು ಸಾಧ್ಯವಿಲ್ಲ ಎಂದು ಕಟುವಾಗಿ ಹೇಳಿಕೆ ನೀಡಿದೆ.

ಎಷ್ಟು ಏಕ ಅಪರಾಧ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಜಾಮೀನಿಗೆ ಪರಿಗಣಿಸಬಹುದು ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪರ್ಷದ್ ಅವರನ್ನು ನ್ಯಾಯಾಲಯ ಪ್ರಶ್ನಿಸಿದೆ ಎಂದು ಮಾಧ್ಯಮದ ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯವು ಇನ್ನೂ ಪಟ್ಟಿಯನ್ನು ಪರಿಶೀಲಿಸಬೇಕಾಗಿದೆ. ಮತ್ತು ಒಂದೇ ಅಪರಾಧಗಳನ್ನು ಮಾಡಿದ ವ್ಯಕ್ತಿಗಳನ್ನು ಅನೇಕ ಪ್ರಕರಣಗಳಲ್ಲಿ ಬಂಧಿಯಾಗಿರುವವರಿಂದ ಪ್ರತ್ಯೇಕಿಸಬೇಕಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಮೇ 9 ರಂದು, ಈ ಪ್ರಕರಣದ ಕೊನೆಯ ವಿಚಾರಣೆಯ ವೇಳೆ, ಉತ್ತರ ಪ್ರದೇಶ ಸರ್ಕಾರ ಹಾಗೂ ಅಲಹಾಬಾದ್ ಹೈಕೋರ್ಟ್ 350 ಅಪರಾಧಿಗಳ ಜಾಮೀನು ಅರ್ಜಿಗಳು 10 ವರ್ಷಗಳಿಂದ ಬಾಕಿ ಉಳಿದಿವೆ ಮತ್ತು 159 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿರುವವರು ಎಂದು ತಿಳಿಸಿತ್ತು.

ಭಾರತೀಯ ಸೇನೆ ಸೇರಲು ಅರ್ಜಿ ಆಹ್ವಾನ

0

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಭಾರತೀಯ ಸೇನೆ ಅಥವಾ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ), ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ 2022-23ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ ಹಾಗೂ ವಸತಿಯೊಂದಿಗೆ ನೀಡಲಾಗುತ್ತಿದೆ.ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

10ನೇ ತರಗತಿ ಉತ್ತೀರ್ಣರಾಗಿರುವ 18-22 ವಯೋಮಿತಿಯೊಳಗಿನ ಅಭ್ಯರ್ಥಿ ಮತ್ತು ಕುಟುಂಬದ ವಾರ್ಷಿಕ ಆದಾಯ ಪ್ರ-1ಕ್ಕೆ ರೂ. 2.50 ಲಕ್ಷ ಹಾಗೂ ಪ್ರ-2(ಎ), 3(ಎ), ಹಾಗೂ 3(ಬಿ) ಗಳಿಗೆ ರೂ. 1.00 ಲಕ್ಷಗಳ ಮಿತಿಯಲ್ಲಿರಬೇಕು.

ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೀಡಲಾಗುತ್ತದೆ. ಈ ಮೂರು ಜಿಲ್ಲೆಗಳಲ್ಲಿ ತರಬೇತಿಗೆ ಆಯ್ಕೆ ಮಾಡಿಕೊಳ್ಳುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು. ನಿಗದಿತ ನಮೂನೆ ಅರ್ಜಿಯನ್ನು ಇಲಾಖಾ ವೆಬ್‍ಸೈಟ್ www.bcwd.karnataka.gov.in ರಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಿ: 30/07/2022 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ದ.ಕ.ಜಿಲ್ಲೆ ದೂ.ಸಂ.: 0824-2225078, ಉಡುಪಿ ಜಿಲ್ಲೆ -ದೂ.ಸಂ.: 0820-2574881, ಉತ್ತರಕನ್ನಡ ಜಿಲ್ಲೆ ದೂ.ಸಂ.: 08382-226589 ಹಾಗೂ ಕೇಂದ್ರ ಕಚೇರಿ ಬೆಂಗಳೂರು 8050770004 ಗಳನ್ನು ಸಂಪರ್ಕಿಸುವುದು.