Thursday, March 19, 2026
Thursday, March 19, 2026
Home Blog Page 1486

ಸಿನಿಮಾ ರೇಸ್ ನಲ್ಲಿಹಿಂದಿ ಶಂಶೇರಾ ಗಿಂತ ಕನ್ನಡ ವಿಕ್ರಾಂತ್ ರೋಣ ಗೆ ಭರ್ಜರಿ ಓಪನಿಂಗ್

0

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಚಿತ್ರ ಬಿಡುಗಡೆಯಾದ 3 ದಿನಗಳಲ್ಲಿ ರಣಬೀರ್ ಕಪೂರ್ ಅಭಿನಯದ ಶಂಶೇರಾ ಚಿತ್ರದ ಮೊದಲ ವಾರಾಂತ್ಯದ ಕಲೆಕ್ಷನ್‌ ನ್ನು ಹಿಂದಿಕ್ಕಿದೆ.

ವಿಕ್ರಾಂತ್ ರೋಣಾಗೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು 3 ನೇ ದಿನಕ್ಕೆ ಸುಮಾರು 10 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗುತ್ತಿದೆ.

ವಿಕ್ರಾಂತ್ ರೋಣ ಒಂದು ಫ್ಯಾಂಟಸಿ ಆ್ಯಕ್ಷನ್ ಚಿತ್ರವಾಗಿದ್ದು, ಅನೂಪ್ ಭಂಡಾರಿ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ರಕ್ಕಮ್ಮ ಹಾಡು ಎಲ್ಲೆಡೆ ಫೇಮಸ್ ಆಗಿದೆ.

ವಿಕ್ರಾಂತ್ ರೋಣಾ ಸಿನಿಮಾವನ್ನು ರಣಬೀರ್ ಕಪೂರ್ ಅವರ ಬಾಲಿವುಡ್ ಸಿನಿಮಾ ಶಂಶೇರಾಗೆ ಹೋಲಿಸಿದರೆ, ಕಳೆದ 3 ದಿನಗಳಿಂದ ಶಂಶೇರಾ ಕೇವಲ 31 ಕೋಟಿ ರೂಪಾಯಿ ಗಳಿಸಿದೆ. ಜುಲೈ 22ರಂದು ತೆರೆಕಂಡ ಶಂಶೇರಾ ಸಿನಿಮಾದ ಕಲೆಕ್ಷನ್, ವಿಕ್ರಾಂತ್ ರೋಣ ಬಿಡುಗಡೆಯಾದ ಬಳಿಕ ಮತ್ತಷ್ಟು ಕಡಿಮೆಯಾಗಿದೆ.
ಇನ್ನು ವಿಕ್ರಾಂತ್ ರೋಣಾ ಚಿತ್ರ 2500 ಪರದೆಗಳಲ್ಲಿ ರಿಲೀಸ್ ಆಗಿದ್ದರೆ, ಶಂಶೇರಾ 5,250 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಹೀಗಿದ್ದರೂ ಕಲೆಕ್ಷನ್ ವಿಚಾರದಲ್ಲಿ ಅದು ಸೋತಿದೆ.

ಅಂಜನಾದ್ರಿಗೆ ಎಲ್ಲ ಸೌಕರ್ಯ ಕಲ್ಪಿಸುವಗುರಿ ನಮ್ಮದು- ಬೊಮ್ಮಾಯಿ

0

ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ ಇದನ್ನು ಸಾವಿರ ಸಾವಿರ ಸಾರಿ ಒತ್ತಿ ಹೇಳುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಈಗಾಗಲೇ ಸರ್ಕಾರದ ಆದೇಶದೊಂದಿಗೆ ಅಂಜನಾದ್ರಿಗೆ ಬಂದಿದ್ದೇನೆ. ಅಂಜನಾದ್ರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸುವ ದೊಡ್ಡ ಗುರಿ ನಮ್ಮದಾಗಿದೆ. ಇಲ್ಲಿ ಯಾತ್ರಿಕರಿಗೆ ಆಸ್ಪತ್ರೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಚಿಂತನೆಯಾಗಿದೆ. ಬೆಟ್ಟಕ್ಕೆ ರೋಪ್ ವೇ ವ್ಯವಸ್ಥೆ ಮಾಡಿ ವಯಸ್ಸಾದವರಿಗೂ ಸಹ ಹನುಮಂತನ ದರ್ಶನ ಕಲ್ಪಿಸುವ ಚಿಂತನೆ ಇದೆ . ಬಜೆಟ್ ನಲ್ಲಿ ಜಿಲ್ಲೆಗೆ ನೀಡಿದ ಅನುದಾನದ ಕಾಮಗಾರಿಗಳಿಗೆ ಚಾಲನೆ ಕೊಡಲು ಬಂದಿದ್ದೇನೆ ಎಂದರು.

ಹನುಮ ಜನಿಸಿದ್ದು ಅಂಜನಾದ್ರಿಯಲ್ಲಿಯೇ ಎಂದು ನಾನು ಸಾವಿರ ಸಲ ಹೇಳುತ್ತೇನೆ. ಸಾವಿರಾರು ವರ್ಷಗಳಿಂದ ಇರುವ ಕಿಷ್ಕಿಂದ ಪುರಾವೆಗಳೆ ಹನುಮ ಹುಟ್ಟಿದ್ದು ಇಲ್ಲೇ ಎಂದು ಸಾರಿ ಸಾರಿ ಹೇಳುತ್ತವೆ. ಇದನ್ನು ಬಿಟ್ಟು ಹೇಳಲು ಬೇರೆ ಪುರಾವೆಗಳು ಬೇಕಿಲ್ಲ. ಇತ್ತೀಚಿನ ದಿನಗಳಲ್ಲಿ ಆಂಜನೇಯ ಅಲ್ಲಿ ಜನಿಸಿದ್ದ ಇಲ್ಲಿ ಜನಸಿದ್ದ ಎಂಬ ವಿವಾದಗಳು ಕೇಳಿಬರುತ್ತಿವೆ. ಅಂಜನಾದ್ರಿಯೇ ಹನುಮಂತನು ಜನಸಿದ ಪ್ರದೇಶವಾಗಿದೆ ಎಂದು ಹೇಳುವುದುಕ್ಕೆ ಎರಡು ಮಾತಿಲ್ಲ. ಹಾಗಾಗಿ ಈ ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ನಾವು ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದ್ದೇವೆ ಎಂದರು.

ನಮ್ಮೆಲ್ಲರ ಆರಾಧ್ಯ ದೈವ ಅಂಜನಾದ್ರಿಯ ಹನುಮಂತನ ದರ್ಶನಕ್ಕೆ ಆಗಮಿಸಿದ್ದೇವೆ.
ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಅನುದಾನ‌ ಘೋಷಣೆ ಮಾಡಿದ್ದೇನೆ. ಅಂಜನಾದ್ರಿಗೆ ಪ್ರತಿವರ್ಷವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ‌ಕರ್ತವ್ಯ. ಬರುವ ದಿನಗಳಲ್ಲಿ ಯಾತ್ರಿಗಳು ಆಗಮಿಸುವ ಸಂಖ್ಯೆ ಹೆಚ್ಚಳವಾಗಲಿದೆ. ಹೀಗಾಗಿ ಅಂಜನಾದ್ರಿ ಬೆಟ್ಟದ ಮೇಲೂ ಮತ್ತು ಕೆಳಗೂ ಅಭಿವೃದ್ಧಿ ಆಗಬೇಕಾದ ಅಗತ್ಯವಿದೆ ಎಂದರು.

ಅಂಜನಾದ್ರಿಯಲ್ಲಿ ರೋಪ್ ವೇ ಗೆ ಮುಂದಿನ ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲಯ ಸೂಚನೆ‌ ನೀಡಿದ್ದೇನೆ. ಅಂಜನಾದ್ರಿಯ ಅಭಿವೃದ್ಧಿಗೆ ಈಗಾಗಲೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದೇವೆ. ಅಂಜನಾದ್ರಿಯ ಜೊತೆಗೆ ಸುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುವುದು. ಬಜೆಟ್ ನಲ್ಲಿ ಘೋಷಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಂಪಿ ಟೂರಿಸಂ ಸರ್ಕಿಟ್ ನ್ನು ಮಾಡಲು ಯೋಜಿಸಲಾಗಿದೆ. ಹಂಪಿ ಮತ್ತು ಮೈಸೂರನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸರ್ಕಿಟ್ ಮಾಡಲು ಚಿಂತಿಸಿದ ಕಾರಣ ಯೋಜನೆ ರೂಪಿಸಲಾಗಿದೆ.
ಪುರಾತತ್ವ ಇಲಾಖೆ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದರ ಜತೆಗೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೂ ವ್ಯವಸ್ಥೆ ಕಲ್ಪಿಸಲಾಗುವುದು. ಈ ಭಾಗದ ಐತಿಹಾಸಿಕ ಪ್ರವಾಸಿತಾಣಗಳ ಅಭಿವೃದ್ಧಿಗೆ ಒತ್ತುಕೊಡಲಿದ್ದೇವೆ ಎಂದರು.

ಹನುಮ ಜನ್ಮಭೂಮಿ ಅಂಜನಾದ್ರಿ ಎನ್ನುವ ನಮ್ಮ ನಂಬಿಕೆಯೆ ಘೋಷಣೆಯಾಗಿದೆ. ಕರ್ನಾಟಕ, ಅಂಧ್ರ ಅಥವಾ ಬೇರೆ ರಾಜ್ಯ ಎಂಬ ಮಾತೇ ಇಲ್ಲ. ಇಡೀ ಭಾರತಕ್ಕೆ ಗೊತ್ತಿದೆ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು. ಇದನ್ನು ಸಾವಿರ ಬಾರಿ ಸಾರಿ ಸಾರಿ ಹೇಳುತ್ತೇನೆ. ಅಂಜನಾದ್ರಿಯ ಅಭಿವೃದ್ಧಿಗೆ ಬೇಕಾದ ಜಮೀನು ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಈಗಾಗಲೆ ಒಂದು ಸಭೆ ಮಾಡಿರುವೆ ಎಂದರು.

ಕಾಮನ್ ವೆಲ್ತ್ ಕ್ರೀಡಾಕೂಟ22 ಭಾರತಕ್ಕೆ ಏಳನೇ ಪದಕ

0

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರ ಮಹಿಳೆಯರ 71 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.

ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ.
ಕ್ಲೀನ್ ಮತ್ತು ಜರ್ಕ್ ಸುತ್ತಿನ ಮೊದಲ ಪ್ರಯತ್ನದಲ್ಲಿ ಹರ್ಜಿಂದರ್ ಕೌರ್ 113 ಕೆಜಿ ಎತ್ತಿದ್ದು, ಈ ಮೂಲಕ ಕಂಚಿನ ಪದಕದ ವಿಜೇತೆಯಾಗಿದ್ದಾರೆ.
ಮಹಿಳೆಯರ 71 ಕೆಜಿ ವಿಭಾಗದ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಸಾರಾ ಡೇವಿಸ್ ಚಿನ್ನದ ಪದಕವನ್ನು ಗೆದ್ದರು.

ಈ ಮಾಲಕ 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಇದು ಭಾರತಕ್ಕೆ 7ನೇ ಪದಕವಾಗಿದೆ.

ಬ್ಯಾಕ್ ಲಾಗ್ ಮೀಸಲಾತಿ:ಅರ್ಹ ಮಹಿಳೆ ಅಲಭ್ಯತೆಯಿದ್ದರೆ ಪುರುಷರಿಗೆ ನೇಮಕಾತಿ

0

ಬ್ಯಾಕ್‍ಲಾಗ್ ಮಹಿಳಾ ಮೀಸಲು ವರ್ಗದ ಹುದ್ದೆಗಳಿಗೆ ಅರ್ಹರು ಸಿಗದಿದ್ದರೆ ಆ ಹುದ್ದೆಗಳಿಗೆ ಅದೇ ಪ್ರವರ್ಗದ ಅರ್ಹ ಪುರುಷರನ್ನು ನೇಮಕ ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ಆದೇಶಿಸಿದೆ.

ರಾಜ್ಯ 2002ರ ನ.22ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಹೇಳಿರುವಂತೆ ಬೆಂಗಳೂರು ವಿವಿಯು ವಾಸ್ತುಶಿಲ್ಪ ವಿಭಾಗದಲ್ಲಿ ಎಸ್‍ಟಿ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪ್ರಕ್ರಿಯೆ ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದಲ್ಲಿ ಎಸ್‍ಟಿ ಮಹಿಳಾ ವರ್ಗಕ್ಕೆ ಮೀಸಲಾದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಮ್ಮನ್ನು ನೇಮಕ ಮಾಡುವಂತೆ ದ್ಯಾವಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಬೆಂವಿವಿ 2011ರ ಮಾ.21ರಂದು ಮುಕ್ತ ಕೆಟಗರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ, ಎಸ್‍ಟಿ ಮಹಿಳೆಯರ ವರ್ಗದಲ್ಲಿ ಯಾವ ಅಭ್ಯರ್ಥಿ ಆಯ್ಕೆಗೆ ಅರ್ಜಿ ಸಲ್ಲಿಸದ ಕಾರಣ ಆ ಹುದ್ದೆ ಭರ್ತಿ ಆಗಿರಲಿಲ್ಲ. ಆ ವಿಷಯ ತಿಳಿದ ಅರ್ಜಿದಾರರು, ಎಸ್‍ಟಿ ಮಹಿಳಾ ವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದ್ದರು.

2002 ನ.22ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಉಲ್ಲೇಖಿಸಿದ್ದರು. ಅವರ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಕನ್ನಡತಿ ಪತ್ರಕರ್ತೆಗೆ ಅಖಿಲ ಭಾರತ ಸಾಧಕ ಮಹಿಳಾ ಪ್ರಶಸ್ತಿ

0

ಮಹಾಲಿಂಗಪುರ ಸಮೀಪದ ಮಿರ್ಜಿ ಗ್ರಾಮದ ಯುವ ಪತ್ರಕರ್ತೆ ಕು. ದೀಪಾ ತಟ್ಟಿಮನಿ ಅವರು ಬೆಂಗಳೂರಿನ ಟ್ವೇಲ್ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನವರು ನೀಡುವ ಅಖಿತ ಭಾರತ ಸಾಧಕ ಮಹಿಳಾ ಪ್ರಶಸ್ತಿ-2022ಕ್ಕೆ ಆಯ್ಕೆಯಾಗಿದ್ದಾರೆ.

ಪತ್ರಕರ್ತೆ ಕು.
ದೀಪಾ ತಟ್ಟಿಮನಿಯವರು ಮಹಾಲಿಂಗಪುರದ ಕೆಎಲ್‌ಇ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಪದವಿ ಪೂರೈಸಿ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಪತ್ರಿಕೋದ್ಯಮ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ವಿವಿಧ ಪತ್ರಿಕೆಗಳ ವರದಿಗಾರರಾಗಿ, ಎನ್‌ಜಿಓ ಸಂಸ್ಥೆಯೊಂದರ ಸಕ್ರೀಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಟ್ವೇಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನವರು ಅಖಿತ ಭಾರತ ಸಾಧಕ ಮಹಿಳಾ ಪ್ರಶಸ್ತಿ-2022( ಚೇಂಚ್ ಮೇಕರ್) ಆಯ್ಕೆಯಾಗಿದ್ದಾರೆ ಎಂದು ಟ್ವೇಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಸಿಇಓ ದೀಪಕ್ ಟಾಟರ್ ಜೈನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ದೀಪಾ ತಟ್ಟಿಮನಿಯವರು ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ| ಓಂಕಾರ ಕಾಕಡೆ ಅವರ ಮಾರ್ಗದರ್ಶನದಲ್ಲಿ ಮಹಿಳೆಯರ ಮೇಲೆ ಡಿಜಿಟಲ್ ಇಂಡಿಯಾದ ಪ್ರಭಾವ ಎ ಕೇಸ್ ಸ್ಟಡಿ ಆಫ್ ಕರ್ನಾಟಕ ರಾಜ್ಯ ಕುರಿತು ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.

ನಾನು ನಿಜಕ್ಕೂ ನನ್ನ ದೇಶ ಭಾರತವನ್ನು ಪ್ರೀತಿಸುತ್ತೇನೆ-ಅಮೀರ್ ಖಾನ್

0

ಸಾಮಾಜಿಕ ಜಾಲತಾಣಗಳಲ್ಲಿ ಆಮೀರ್‌ ಖಾನ್‌ರವರ ಹೊಸ ಚಿತ್ರ ಲಾಲ್‌ ಸಿಂಗ್‌ ಛಡ್ಡಾ ವನ್ನು ಬಹಿಷ್ಕರಿಸುವಂತೆ ಕೆಲವರು ಅಭಿಯಾನ ಆರಂಭಿಸಿದ್ದಾರೆ.

ಇದು ಟ್ವಿಟರ್‌ನಲ್ಲಿ ಇದು ಟ್ರೆಂಡ್‌ ಆಗಿದೆ. ಇದಕ್ಕೆ ನಟ ಆಮೀರ್‌ ಖಾನ್‌ ಉತ್ತರಿಸಿದ್ದಾರೆ.
ಬಾಲಿವುಡ್ಡನ್ನು ಬಹಿಷ್ಕರಿಸಲಿ, ಆಮೀರ್‌ ಖಾನ್‌ನನ್ನು ಬಹಿಷ್ಕರಿಸಲಿ, ಅಷ್ಟೇ ಏಕೆ, ಲಾಲ್‌ ಸಿಂಗ್‌ ಛಡ್ಡಾವನ್ನೂ ಬಹಿಷ್ಕರಿಸಲಿ. ಆದರೆ, ಆಮೀರ್‌ ಖಾನ್‌ಗೆ ಭಾರತದ ಮೇಲೆ ಪ್ರೀತಿಯಿಲ್ಲ ಎನ್ನುತ್ತಿರುವುದು ನನಗೆ ಹೆಚ್ಚು ಬೇಸರ ತರಿಸಿದೆ.
ನಾನು ನಿಜಕ್ಕೂ ನನ್ನ ದೇಶ ಭಾರತವನ್ನು ಪ್ರೀತಿಸುತ್ತೇನೆ. ಇದನ್ನು ಅರಿಯದ ಜನ ನನ್ನ ಬಗ್ಗೆ ಅಪಪ್ರಚಾರ ಮಾಡುವುದು ನನಗೆ ಬೇಸರ ತರಿಸಿದೆ ಎಂದಿದ್ದಾರೆ.
ಜೊತೆಗೆ ದಯವಿಟ್ಟು ಸಿನಿಮಾವನ್ನು ನೋಡಿ ಎಂದೂ ಮನವಿ ಮಾಡಿದ್ದಾರೆ.

ಸಿದ್ಧರಾಮೋತ್ಸವ ನಿಮಿತ್ತ ಸಾರ್ವಜನಿಕರಿಗೆ ಬಸ್ ಲಭ್ಯತೆ ವ್ಯತ್ಯಯ

0

ದಾವಣಗೆರೆಯಲ್ಲಿ ಬುಧವಾರ ನಡೆಯುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಕಾರ್ಯಕ್ರಮ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಈ ಕಾರ್ಯಕ್ರಮದ ಹಿನ್ನೆಲೆ ಜನರು ಸಹ ಬಸ್‌ಗಳು ಇಲ್ಲದೇ ಪರದಾಡಬೇಕಿದೆ.
ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬವನ್ನು ‘ಸಿದ್ದರಾಮೋತ್ಸವ’ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತಿದೆ.

ಇದಕ್ಕಾಗಿ ಸುಮಾರು 7 ಸಾವಿರ ಬಸ್‌ಗಳಲ್ಲಿ ಜನರು ತೆರಳಲಿದ್ದು, ವಿವಿಧೆಡೆ ಬಸ್ ಸಂಚಾರದಲ್ಲಿ ಆಗಸ್ಟ್ 3 ಮತ್ತು 4ರಂದು ವ್ಯತ್ಯಯ ಉಂಟಾಗಲಿದೆ.
ಬಸ್‌ಗಳು ದಾವಣಗೆರೆಗೆ ಸಂಚಾರ ನಡೆಸುವ ಕಾರಣ ಆಗಸ್ಟ್ 3ರ ಬುಧವಾರ ಮತ್ತುಆಗಸ್ಟ್‌ 4ರ ಗುರುವಾರ ವಿವಿಧೆಡೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಇದೇ ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದದಿಂದ ಸುಮಾರು 200 ಬಸ್‍ಗಳನ್ನು ಕರಾರು ಒಪ್ಪಂದದ ಮೇಲೆ ಒದಗಿಸಲಾಗಿದೆ ಎಂದು ಹೇಳಿದೆ.

ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆ, ಕುರುಗೋಡು, ಕುಡಿತಿನಿ, ಕಂಪ್ಲಿ, ಸಂಡೂರು ಕಡೆಗಳಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್ಸುಗಳ ದೈನಂದಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

7 ಸಾವಿರ ಬಸ್ ಬುಕ್ ಆಗಿವೆ. ದಾವಣಗರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸಮಾವೇಶಕ್ಕೆ ಸಿದ್ದರಾಮಯ್ಯ ತವರು ಕ್ಷೇತ್ರ ಬಾದಾಮಿಯಿಂದಲೇ 25 ಸಾವಿರ ಜನರು ಆಗಮಿಸಲಿದ್ದಾರೆ. ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಲು ಸುಮಾರು 7 ಸಾವಿರ ಬಸ್‌ಗಳನ್ನು ಬುಕ್ ಮಾಡಲಾಗಿದೆ

ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಸ್ಟ್ 2ರ ರಾತ್ರಿಯಿಂದ ಆಗಸ್ಟ್ 4ರ ತನಕ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ದೂರ ಪ್ರಯಾಣ ಮಾಡುವ ಯೋಜನೆ ಹಾಕಿಕೊಂಡವರು ಬಸ್‌ಗಳ ಲಭ್ಯತೆ ಬಗ್ಗೆ ಒಮ್ಮೆ ಪರಿಶೀಲಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಓಬಿಸಿ ಪಟ್ಟಿಗೆ ಸೇರಿಸಲು ವೀರಶೈವ ಲಿಂಗಾಯತ ಸಮುದಾಯ ಪ್ರತಿಭಟನೆ

0

ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಶಿವಮೊಗ್ಗದ ಬಸವೇಶ್ವರ ವೃತ್ತದಲ್ಲಿನ ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ,ವೀರಶೈವ ಲಿಂಗಾಯತ ಸಮಾಜ ಸಂವಿಧಾನದ ಹಲವಾರು ಸೌಲಭ್ಯಗಳಿಂದ ವಂಚಿತವಾಗುತ್ತಿದೆ ಇದರಿಂದ ಶಿಕ್ಷಣ,ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ.

ವೀರಶೈವ ಸಮುದಾಯದಲ್ಲಿಯೂ ಅನೇಕರು ಆರ್ಥಿಕವಾಗಿ ಹಿಂದುಳಿದವರಿದ್ದಾರೆ.ಅವರಿಗೆ ನ್ಯಾಯ ಕೊಡಿಸಬೇಕಿರುವುದು ನಮ್ಮ ಕರ್ತವ್ಯ ಮರಾಧೀಶರಾದ ನಾವು ಈ ಒಬಿಸಿ ಹೋರಾಟಕ್ಕೆ ಬೆಂಬಲಿಸುತ್ತಿದ್ದೇವೆ.
ಆದ್ದರಿಂದ ಇಡೀ ವೀರಶೈವ ಸಮಾಜದ ಎಲ್ಲಾ ಒಳಪಂಗಡಗಳನ್ನು ಒಬಿಸಿ ಗೆ ಸೇರಿಸಬೇಕು ಎಂದು ಮನವಿ ಮಾಡಿದರು.

ವೈದ್ಯಕೀಯ ಇಂಜಿನಿಯರಿಂಗ್ ಅಲ್ಲದೇ ಸಾಕಷ್ಟು ವೃತ್ತಿಪರ ಕೋರ್ಸ್ ಗಳಿವೆ-ಸೀತಾಲಕ್ಷ್ಮಿ

0

ಪ್ರಸ್ತುತ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಹೊರತಾಗಿ ಸಾಕಷ್ಟು ವೃತ್ತಿಪರ ಕೋರ್ಸ್ ಗಳಿದ್ದು, ಸಂಬಳದ ಜೊತೆ ಸಮಾಜದಲ್ಲಿ ಗುರುತಿಸಿಕೊಳ್ಳುವ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಶ್ರೀಮತಿ ಎಂ.ಆರ್. ಸೀತಾ ಲಕ್ಷೀ ಉದಾಹರಣೆ ಸಹಿತ ವಿವರಿಸಿದರು ‌.

ಅವರು ಭದ್ರಾವತಿ ಸಂಸ್ಕೃತಿ ಸೌರಭ ಜುಲೈ 31 ರಂದು ನಯನ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಸಾಕಷ್ಟು ಅಂಕಗಳಿಸಿ ಪ್ರತಿಭಾನ್ವಿತರಾಗಿದ್ದರೂ, ಸಂದರ್ಶನದಲ್ಲಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಇಂಗ್ಲಿಷ್ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡು ಸುಲಲಿತವಾಗಿ ಮಾತನಾಡಲು ಅಭ್ಯಾಸ ಮಾಡಬೇಕೆಂದು ಕರೆ ನೀಡಿದರು. ಸಂಸ್ಕೃತಿ ಸೌರಭದ ಅಧ್ಯಕ್ಷರಾದ ಶ್ರೀ ಹೆಚ್.ಎನ್. ಸುಬ್ರಹ್ಮಣ್ಯ ನವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಎಚ್. ಎನ್. ಕೃಷ್ಣ ಸ್ವಾಮಿ ಸ್ವಾಗತಿಸಿದರು. ಶ್ರೀ ರಮೇಶ್ ಬಾಬು ಅವರು ವಂದಿಸಿದರು. ಶ್ರೀಮತಿ ಶಾರದಾ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.

ಲೋಕಸಭೆಯಲ್ಲಿ ಪ್ರಮುಖ ಸಮಸ್ಯೆಗಳ ಚರ್ಚೆ: ರಾಜ್ಯಸಭೆ ಕಲಾಪದ ಬಗ್ಗೆ ಉಪಾಧ್ಯಕ್ಷರ ಬೇಸರ

0

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಉಭಯ ಸದನಗಳಲ್ಲಿ ಉಂಟಾಗಿದ್ದ 2 ವಾರದ ಬಿಕ್ಕಟ್ಟು ಸೋಮವಾರದಿಂದ ಶಮನಗೊಳ್ಳುವ ಸಾಧ್ಯತೆ ಇದೆ.

ವಿಪಕ್ಷಗಳ ಪ್ರಮುಖ ಬೇಡಿಕೆಯಾಗಿದ್ದ ಬೆಲೆ ಏರಿಕೆಯ ಕುರಿತಾಗಿ ಚರ್ಚೆ ಆರಂಭವಾಗಲಿದೆ.
ಉದ್ಧವ್‌ ಠಾಕ್ರೆ ಬಣದಲ್ಲಿರುವ ಶಿವಸೇನೆಯ ಸಂಸದ ವಿನಾಯಕ್‌ ರಾವುತ್‌ ಮತ್ತು ಕಾಂಗ್ರೆಸ್‌ನ ಮನೀಶ್‌ ತಿವಾರಿ ಬೆಲೆ ಏರಿಕೆ ಚರ್ಚೆಯನ್ನು ಆರಂಭಿಸಲಿದ್ದಾರೆ. ಹಾಗಾಗಿ ಈ ವಾರದಿಂದ ಉಪಯುಕ್ತ ಚರ್ಚೆ ನಡೆಯಬಹುದು ಎಂದು ಭರವಸೆಯಿಡಲಾಗಿದೆ.

ಲೋಕಸಭೆಯಲ್ಲಿ ಮಂಗಳವಾರ ರಾಜ್ಯಸಭೆಯಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆ ನಡೆಯಲಿದೆ. ಅಗತ್ಯ ವಸ್ತು ಬೆಲೆ ಏರಿಕೆ ಹಾಗೂ ಜಿಎಸ್‌ಟಿ ಹೇರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಈ ವೇಳೆ, ರಾಜ್ಯಸಭೆ ಉಪ ಸಭಾಪತಿಗಳ ಮುಖದ ಮೇಲೆ ಕಾಗದ ಎಸೆದ ಆಪ್‌ ಸಂಸದ ಸಂಜಯ ಸಿಂಗ್‌ ಅವರನ್ನು ಶುಕ್ರವಾರದವರೆಗೆ ಸದನದಿಂದ ಅಮಾನತು ಮಾಡಲಾಗಿತ್ತು.

ಇದರೊಂದಿಗೆ ರಾಜ್ಯಸಭೆಯಲ್ಲಿ ಅಮಾನತಾದ ಸಂಸದರ ಸಂಖ್ಯೆ 20ಕ್ಕೇರಿತ್ತು.
ಮುಂಗಾರು ಅಧಿವೇಶ ಆರಂಭದಿಂದಲೂ ಪ್ರತಿಭಟನೆಗೆ ಒಳಗಾಗಿರುವುದರಿಂದ 2ನೇ ವಾರದ ಅಂತ್ಯಕ್ಕೆ ರಾಜ್ಯಸಭೆಯ ಉತ್ಪಾದಕತೆ ಕೇವಲ ಶೇ.16ರಷ್ಟಿದೆ. ಅಲ್ಲದೇ ರಾಜ್ಯಸಭೆಯಲ್ಲಿ ಯಾವುದೇ ಮಸೂದೆಗಳು ಅಂಗೀಕಾರ ಪಡೆದುಕೊಂಡಿಲ್ಲ. 10 ದಿನಗಳಲ್ಲಿ ರಾಜ್ಯಸಭೆಯ ಕಲಾಪ ಕೇವಲ 11 ಗಂಟೆ 8 ನಿಮಿಷಗಳ ಕಾಲ ಮಾತ್ರ ನಡೆದಿದೆ.

ಇದನ್ನು ಪ್ರಜಾಪ್ರಭುತ್ವದ ವಿನಾಶ ಎಂದು ಕರೆದಿರುವ ಸಭಾಧ್ಯಕ್ಷ ವೆಂಕಯ್ಯನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.