Thursday, March 19, 2026
Thursday, March 19, 2026
Home Blog Page 1487

ಕೆಪಿಎಸ್ ಸಿ ಉದ್ಯೋಗವಾರ್ತೆ

0

ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಸಿಹಿಸುದ್ದಿ ನೀಡಿದೆ. ರೇಷ್ಮೆ ವಿಸ್ತರಣಾಧಿಕಾರಿಗಳ 72 ಹುದ್ದೆಗಳ ಭರ್ತಿಗೆ ಕೆಪಿಎಸ್ ಸಿ ಅಧಿಸೂಚನೆ ಹೊರಡಿಸಿದೆ.

ರೇಷ್ಮೆ ವಿಸ್ತರಣಾಧಿಕಾರಿಗಳ 72 ಹುದ್ದೆಗಳಿಗೆ ಆಗಸ್ಟ್ 10 ರಿಂದ ಸೆ.9 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಪ್ರವರ್ಗ 2ಎ, ಬಿ, 3 ಎ, ಬಿ ಅಭ್ಯರ್ಥಿಗಳಿಗೆ 300 ರೂ. ಮಾಜಿ ಸೈನಿಕರಿಗೆ 50 ರೂ.ಶುಲ್ಕ ವಿಧಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಪ್ಪಂದ ಅವಧಿ ಪೂರೈಸಿದ ನಂತರ ಚೆಕ್ ಬೌನ್ಸ್ ಆದರೆ ಶಿಕ್ಷಾರ್ಹವಲ್ಲ

0

ಸಾಲ ಮರುಪಾವತಿಸುವ ಬಗ್ಗೆ ಮಾಡಿಕೊಂಡ ಒಪ್ಪಂದದಲ್ಲಿ ನಮೂದಿಸಿದ ಅವಧಿ ಮುಕ್ತಾಯವಾದ ನಂತರ ಬ್ಯಾಂಕಿಗೆ ಸಲ್ಲಿಸಿದ ಚೆಕ್‌ ಬೌನ್ಸ್‌ ಆದಾಗ ಸಾಲ ಪಡೆದ ವ್ಯಕ್ತಿ ವಿರುದ್ಧ ‘ನೆಗೋಶಿಯಬಲ್‌ ಇನ್‌ಸ್ಟ್ರುಮೆಂಟ್‌ ಆಯಕ್ಟ್-1881ರ ಸೆಕ್ಷನ್‌ 138ರ ಅಡಿಯಲ್ಲಿ ಶಿಕ್ಷಿಸಲು ಅವಕಾಶವಿಲ್ಲ ಎಂದು ಹೈಕೋರ್ಚ್‌ ಆದೇಶಿಸಿದೆ.

ಬೆಂಗಳೂರಿನ ಜಯನಗರದ 9ನೇ ಬ್ಲಾಕ್‌ ನಿವಾಸಿ ಕೆ.ಎನ್‌.ರಾಜು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಇದೇ ವೇಳೆ ರಾಜು ಅವರಿಂದ ಸಾಲ ಪಡೆದಿದ್ದ ಮಂಜುನಾಥ್‌ ಅವರನ್ನು ಖುಲಾಸೆಗೊಳಿಸಿದ ಮ್ಯಾಜಿಸ್ಪ್ರೇಟ್‌ ಕೋರ್ಚ್‌ ಆದೇಶವನ್ನು ಪುರಸ್ಕರಿಸಿದೆ. ಉತ್ತರಹಳ್ಳಿಯ ಬಂಗಾರಪ್ಪ ಲೇಔಟ್‌ ನಿವಾಸಿ ಟಿ.ವಿ.ಮಂಜುನಾಥ್‌, ಮೇಲ್ಮನವಿದಾರ ರಾಜು ಅವರಿಂದ 2004ರ ಅ.29ರಂದು 70 ಸಾವಿರ ರು. ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತಾ ಖಾತರಿಯಾಗಿ 3 ಚೆಕ್‌ ನೀಡಿದ್ದ ಮಂಜುನಾಥ್‌, 3 ವರ್ಷದಲ್ಲಿ ಸಾಲ ಮರು ಪಾವತಿ ಮಾಡುವುದಾಗಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು.

ಮಂಜುನಾಥ್‌ ಸೂಚನೆ ಮೇರೆಗೆ ರಾಜು 2008ರ ಮೇ 28ರಂದು 3 ಚೆಕ್‌ಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ, ಮಂಜುನಾಥ್‌ ಸಹಿ ವ್ಯತ್ಯಾಸ ಅಥವಾ ಅಪೂರ್ಣ ಇದ್ದ ಮತ್ತು ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕೆ 2008ರ ಆ.29ರಂದು ಚೆಕ್‌ ಬೌನ್ಸ್‌ ಆಗಿತ್ತು. ಇದರಿಂದ ರಾಜು 2008ರ ಸೆ.26ರಂದು ಲೀಗಲ್‌ ನೋಟಿಸ್‌ ನೀಡಿ ಹಣ ಹಿಂದಿರುಗಿಸುವಂತೆ ಸೂಚಿಸಿದ್ದರು. ಲೀಗಲ್‌ ನೋಟಿಸ್‌ ಸ್ವೀಕರಿಸಿದರೂ ಮಂಜುನಾಥ್‌ ಉತ್ತರ ನೀಡಲಿಲ್ಲ.

ಸಾಲದ ಹಣ ಹಿಂದಿರುಗಿಸದೆ ಇದ್ದಾಗ ರಾಜು ಅವರು ಎನ್‌ಐ ಕಾಯ್ದೆ ಸೆಕ್ಷನ್‌ 138ರ ಅಡಿಯಲ್ಲಿ ಚೆಕ್‌ ಬೌನ್ಸ್‌ ಆರೋಪ ಸಂಬಂಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 16ನೇ ಎಸಿಎಂಎಂ ನ್ಯಾಯಾಲಯ ಮಂಜುನಾಥ್‌ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ 2009ರ ಡಿ.17ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜು ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮಂಕಿಪಾಕ್ಸ್ ಸೋಂಕಿನ ಬಗ್ಗೆ ಆರೋಗ್ಯಾಧಿಕಾರಿಗಳೊಂದಿಗೆ ಸಭೆ- ಬೊಮ್ಮಾಯಿ

0

ರಾಜ್ಯದಲ್ಲಿ ಮಂಕಿಪಾಕ್ಸ್‌ ಸೋಂಕಿನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೋಂಕಿನ ಕುರಿತು ಚರ್ಚೆ ನಡೆಸಲಿದ್ದು, ಇದರ ಬಗ್ಗೆ ಮಾಹಿತಿ ಪಡೆಯಲಿದ್ದೇನೆ. ನಂತರ ಮುಂದಿನ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಕಬ್ಬನ್ ಪಾರ್ಕಿಗೆ ಸಂಜೆ 6:30 ನಂತರ ಪ್ರವೇಶ ನಿಷಿದ್ಧ

0

ಭದ್ರತೆ ಒದಗಿಸುವುದು ಕಷ್ಟಸಾಧ್ಯ ಹಾಗೂ ಅನೈತಿಕ ಚಟುವಟಿಕೆ ತಡೆಯುವ ಉದ್ದೇಶದಿಂದ ಕಬ್ಬನ್‌ ಉದ್ಯಾನದಲ್ಲಿ ಸಂಜೆ 6.30ರ ನಂತರ ಸಾರ್ವಜನಿಕರ ಪ್ರವೇಶ ಮತ್ತು ವಾಯು ವಿಹಾರ ಮಾಡುವುದನ್ನು ತೋಟಗಾರಿಕೆ ಇಲಾಖೆ ನಿರ್ಬಂಧಿಸಿದೆ.

ಆದರೆ ವಾಹನಗಳ ಸಂಚಾರ ಎಲ್ಲ ದ್ವಾರಗಳಲ್ಲಿ ರಾತ್ರಿ 10ರವರೆಗೆ ಇರುತ್ತದೆ. ಸಂಜೆ ರಾತ್ರಿ 7.30ರ ವರೆಗೂ ಪ್ರವಾಸಿಗರು ಓಡಾಡುವುದು ಸಾಮಾನ್ಯವಾಗಿತ್ತು. ಆದರೆ, ಇನ್ನು ಮುಂದೆ ಪ್ರತಿ ದಿನ ಸಂಜೆ 6.30ರ ನಂತರ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಉದ್ಯಾನಕ್ಕೆ ಪ್ರವೇಶ ನಿರ್ಬಂಧಿಸುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲಾಲ್‌ಬಾಗ್‌ನಲ್ಲಿ ಸಂಜೆ 6.30ಕ್ಕೆ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಕಬ್ಬನ್‌ ಪಾರ್ಕ್ನಲ್ಲೂ ಕ್ರಮ ಕೈಗೊಳ್ಳಲಾಗಿದೆ. ಪ್ರವೇಶ ದ್ವಾರಗಳಲ್ಲಿ ಇರುವ ಭದ್ರತಾ ಸಿಬ್ಬಂದಿ ಸಂಜೆ 6.30ರ ನಂತರ ಬರುವವರಿಗೆ ಅವಕಾಶ ನಿರಾಕರಿಸಲಿದ್ದಾರೆ.
ಈ ವೇಳೆ ಉದ್ಯಾನದಲ್ಲಿ ಯಾರಾದರೂ ಸಂಚರಿಸುತ್ತಿದ್ದರೆ ಅಂತಹವರನ್ನು ಹೊರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನವೆಂಬರ್‌ನಿಂದ ಫೆಬ್ರವರಿಯವರೆಗೆ ಬೇಗ ಕತ್ತಲಾಗುತ್ತದೆ. ಉದ್ಯಾನದೊಳಗೆ ರಾತ್ರಿ 7ರ ನಂತರ ಜನ ಇದ್ದರೆ ಅವರಿಗೆ ಭದ್ರತೆ ಒದಗಿಸುವುದು ಕಷ್ಟಸಾಧ್ಯ.
ಉದ್ಯಾನದ ಎಲ್ಲಾ ಕಡೆ ಭದ್ರತಾ ಸಿಬ್ಬಂದಿ ನೇಮಕ ಅಥವಾ ಸಿಸಿ ಕ್ಯಾಮೆರಾ ಅಳವಡಿಕೆ ಸಾಧ್ಯವಿಲ್ಲ. ಅಲ್ಲದೆ ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್‌ಪಾರ್ಕ್ ಉಸ್ತುವಾರಿ) ಎಚ್‌.ಟಿ.ಬಾಲಕೃಷ್ಣ ತಿಳಿಸಿದರು.

ಸಂವಿಧಾನದ ಹಕ್ಕುಗಳ ಬಗ್ಗೆ ಜನಜಾಗೃತರಾದರೆ ಗಣರಾಜ್ಯದ ಅಭಿವೃದ್ಧಿ- ನ್ಯಾ.ರಮಣ

0

ಸಂವಿಧಾನದಲ್ಲಿ ನೀಡಿರುವ ಹಕ್ಕುಗಳ ಕುರಿತು ನಾಗರಿಕರು ಜಾಗೃತರಾದಾಗ ಮಾತ್ರ ಸಂವಿಧಾನತ್ಮಕ ಗಣರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅಭಿಪ್ರಾಯಪಟ್ಟರು.

ರಾಯಪುರದ ಹಿದಾಯತ್‌ ಉಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎನ್‌ಎಲ್‌ಯು) 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು,
ತಾಪಮಾನ ಬಿಕ್ಕಟ್ಟು ಅಥವಾ ಮಾನವಹಕ್ಕುಗಳ ಉಲ್ಲಂಘನೆಯೇ ಇರಲಿ. ವಿಶ್ವದಾದ್ಯಂತ ಒಂದು ಸಂಘಟಿತ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿವೆ. ವಾಸ್ತವವಾಗಿ ತಂತ್ರಜ್ಞಾನದ ಕ್ರಾಂತಿಯು ಪ್ರತಿಯೊಬ್ಬರನ್ನು ವಿಶ್ವದ ನಾಗರಿಕರನ್ನಾಗಿ ರೂಪಿಸಿದೆ. ಎಲ್ಲರೂ ಈ ಕ್ರಾಂತಿಯ ಭಾಗವಾಗಬೇಕಾಗಿದೆ ಎಂದು ಹೇಳಿದರು.

ಸಂವಿಧಾನದ ಪರಿಮಿತಿಯಲ್ಲಿಯೇ ಸಾಮಾಜಿಕ ಬದಲಾವಣೆ ತರುವಲ್ಲಿ ಯುವಜನರ ಪಾತ್ರ ಕುರಿತು ಒತ್ತಿ ಹೇಳಿದ ಅವರು, ಆಧುನಿಕ ಭಾರತದ ಸ್ವರೂಪ ವಿವರಿಸುವ ಸಂವಿಧಾನವು ಕೇವಲ ಕಾನೂನು ವಿದ್ಯಾರ್ಥಿಗಳು, ವಕೀಲರು ಮತ್ತು ಜನಸಂಖ್ಯೆಯ ಸೀಮಿತ ವರ್ಗಕ್ಕೆ ಮಾತ್ರವೇ ಸೇರಿದಂತಾಗಿದೆ ಎಂದು ವಿಷಾದಿಸಿದರು.

ಪ್ರತಿಯೊಬ್ಬ ನಾಗರಿಕನಿಗೂ ತನ್ನ ಕರ್ತವ್ಯ ಮತ್ತು ಹಕ್ಕುಗಳ ಕುರಿತು ಅರಿವು ಇರಬೇಕು. ಸರಳವಾಗಿ ಇವುಗಳನ್ನು ಜನರಿಗೆ ಮನನ ಮಾಡಿಕೊಡಬೇಕಾದ ಹೊಣೆಗಾರಿಕೆ ಕಾನೂನು ಪದವೀಧರರದ್ದಾಗಿದೆ ಎಂದು ಹೇಳಿದರು.

ಸಾಮಾಜಿಕ ಬದಲಾವಣೆ ತರಲು ಕಾನೂನು ಕೂಡಾ ಒಂದು ಅಸ್ತ್ರ. ಕಾನೂನು ಪದವೀಧರರನ್ನು ಸಾಮಾಜಿಕ ಕಾರ್ಯಕರ್ತರಾಗಿಯೂ ರೂಪಿಸುವಂತೆ ಕಾನೂನು ಶಿಕ್ಷಣ ಇರಬೇಕು ಎಂದರು.
ಸಂವಿಧಾನ ಎಂಬುದು ಪ್ರತಿಯೊಬ್ಬರಿಗೂ ಇರುವಂತಹದ್ದು. ಪ್ರತಿಯೊಬ್ಬರಿಗೂ ಇದರ ಅರಿವು ಇರಬೇಕು. ಸಂವಿಧಾನದ ಸಂಸ್ಕೃತಿ ಬೆಳೆಸುವ ಮತ್ತು ಜಾಗೃತಿ ಮೂಡಿಸುವುದು ಒಂದು ಸಂಘಟನಾತ್ಮಕ ಹೊಣೆಗಾರಿಕೆಯಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಪ್ರತಿಪಾದಿಸಿದರು.

ಮೊದಲು ದೇಶದ ಜನರ ಹಕ್ಕುಗಳನ್ನ ಗೌರವಿಸಿ ತಾಲಿಬಾನ್ ಗೆ ವಿಶ್ವಸಂಸ್ಥೆ ಕಿವಿಮಾತು

0

ಅಂತಾರಾಷ್ಟ್ರೀಯ ಒಪ್ಪಿಗೆ ಬಯಸುವ ತಾಲಿಬಾನ್ ಮೊದಲು ತಮ್ಮ ದೇಶದ ಜನರ ಮಾನವ ಹಕ್ಕುಗಳನ್ನು ಗೌರವಿಸಿಬೇಕು ಎಂದು ವಿಶ್ವಸಂಸ್ಥೆ ತಾಲಿಬಾನ್ ಗೆ ಸಂದೇಶವನ್ನು ನೀಡಿದೆ.

ಯುಎಸ್ ಮಿಷನ್ ಮುಖ್ಯಸ್ಥ ಇಯಾನ್ ಮೆಕ್ಕಾರಿ ಈ ಕುರಿತು ಟ್ವಿಟ್ಟರ್ನಲ್ಲಿ ಉತ್ತರ ಕೊಟ್ಟಿದ್ದು, ಕಳೆದ ವರ್ಷ ದೋಹಾದಲ್ಲಿ, ನಾವು ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ತಾಲಿಬಾನ್ನೊಂದಿಗೆ ಸಂವಾದವನ್ನು ನಡೆಸಿದ್ದೇವೆ.

ನಾವು ಯುಎನ್ ನಾಗರಿಕರು ಮತ್ತು ಅಫ್ಘಾನ್ ಜನರೊಂದಿಗೆ ವ್ಯಾಪಕವಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹಲವು ಸವತ್ತುಗಳನ್ನು ಒದಗಿಸಿದ್ದೇವೆ. ನಾವು ಸಹಾಯ ಮಾಡಲು ಸಾಧ್ಯವಾಗಿದೆ ಎಂದು ನನಗೆ ಸಂತೋಷವಾಗಿದೆ. ಆದರೆ ಅಫ್ಘಾನಿಸ್ತಾನದಲ್ಲಿ ನಾವು ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಳತಾಲಿಬಾನ್ ಸರ್ಕಾರ ಅಂತರಾಷ್ಟ್ರೀಯ ಒಪ್ಪಿಗೆ ಪಡೆಯಬೇಕು ಎಂದು ವಿಶ್ವಸಂಸ್ಥೆಗೆ ಮನವಿ ಮಾಡಿತ್ತು.

ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ- ಸಿದ್ಧರಾಮಯ್ಯ

0

ರಾಜ್ಯಾದ್ಯಂತ ದಾವಣಗೆರೆಯಲ್ಲಿ ಆ.3 ರಂದು ನಡೆಯಲಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಸಮಾವೇಶದ ಬಗ್ಗೆಯೇ ಚರ್ಚೆ ನಡೆದಿದೆ. ವರ್ಷದೊಳಗೆ ಎದುರಾಗಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಸಿದ್ದರಾಮೋತ್ಸವ ರಾಜಕೀಯ ವಲಯದಲ್ಲಿ ಮಹತ್ವ ಪಡೆದಿದೆ. ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ರಾಜ್ಯ ರಾಜಕೀಯದ ಬೆಳವಣಿಗೆಗಳು, ಬಿಜೆಪಿ ಆಡಳಿತ, ಕಾಂಗ್ರೆಸ್ ಮುಂದಿರುವ ಸವಾಲುಗಳ ಬಗ್ಗೆ ಸಿದ್ದರಾಮಯ್ಯನವರು ಮುಕ್ತವಾಗಿ ಮಾತನಾಡಿದ್ದಾರೆ.

ನಾನು ಯಾವತ್ತೂ ಜನ್ಮದಿನ ಆಚರಿಸಿಕೊಂಡವನಲ್ಲ. ಏಕೆಂದರೆ ಅದು ನನ್ನ ನಿಜವಾದ ಹುಟ್ಟುಹಬ್ಬವಲ್ಲ. ಶಾಲೆಯಲ್ಲಿ ಮಾಸ್ಟರ್ ನಮೂದಿಸಿದ ದಿನಾಂಕ. ನನ್ನ ಕೆಲ ಸ್ನೇಹಿತರು ಹಾಗೂ ಹಿತೈಷಿಗಳು ಆ ದಿನಾಂಕದ ಪ್ರಕಾರ 75 ವರ್ಷ ಆಗುತ್ತದೆ, ರಾಜಕಾರಣಕ್ಕೆ ಬಂದು 45 ವರ್ಷ ಆಗುತ್ತದೆ ಎಂಬ ಕಾರಣಕ್ಕೆ ಆಚರಣೆ ಮಾಡುತ್ತಿದ್ದಾರೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಇದು ನನಗಾಗಿ ಮಾಡುತ್ತಿರುವ ಉತ್ಸವವೂ ಅಲ್ಲ. ಇಂದಿನ ರಾಜಕೀಯ ವ್ಯವಸ್ಥೆ, ದೇಶದ ಮುಂದಿರುವ ಸಮಸ್ಯೆ ಮೆಲಕು ಹಾಕಲು, ಪರಿಹಾರ ಕಂಡುಕೊಳ್ಳಲು, ಜನರನ್ನು ಎಚ್ಚರಿಸಲು ಚರ್ಚೆಗಳು ನಡೆಯುವ ಒಂದು ಕಾರ್ಯಕ್ರಮವಾಗಿರುತ್ತದೆ. ನಾನು ನಿಮಿತ್ತ ಮಾತ್ರ ಎಂದಿದ್ದಾರೆ.

ಕೋವಿಡ್ ಕಾರಣ ಸ್ಥಗಿತಗೊಂಡಿದ್ದ ರೈಲುಸೇವೆ ಮತ್ತೆ ಪುನರಾರಂಭ

0

ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ 2020ರಿಂದಲೂ ಸೇವೆಯನ್ನು ನಿಲ್ಲಿಸಿದ್ದ 500 ಪ್ಯಾಸೆಂಜರ್ ರೈಲು ಸೇವೆಗಳನ್ನು ಭಾರತೀಯ ರೈಲ್ವೆ ಪುನಾರಂಭಿಸಿದೆ.

ಈ ಮೂಲಕ ಎರಡು ವರ್ಷಗಳ ನಂತರದಲ್ಲಿ ಎಲ್ಲಾ ರೈಲು ಸೇವೆಗಳನ್ನು ನೀಡಲಾಗುತ್ತಿದೆ.
ದೇಶದಲ್ಲಿ ಕೋವಿಡ್-19 ರೋಗದಿಂದಾಗಿ ಸ್ಥಗಿತಗೊಂಡಿರುವ ಎಲ್ಲಾ ರೈಲುಗಳ ಸೇವೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರೈಲ್ವೆ ಮಂಡಳಿಯು ವಲಯ ರೈಲ್ವೆಗಳಿಗೆ ನಿರ್ದೇಶನ ನೀಡಿದೆ.

ಕೋವಿಡ್ -19 ಪಿಡುಗಿಗೂ ಮೊದಲು ದೇಶದಲ್ಲಿ ಒಟ್ಟು 2,800 ಪ್ಯಾಸೆಂಜರ್ ರೈಲುಗಳು ಸೇವೆ ಒದಗಿಸುತ್ತಿದ್ದವು. ಈ ಪೈಕಿ ಪ್ರಸ್ತುತ 2300 ರೈಲುಗಳು ಮಾತ್ರ ಸೇವೆಯಲ್ಲಿವೆ. ಮುಂದಿನ ಎರಡು ವಾರಗಳಲ್ಲಿ ಇನ್ನುಳಿದ 500 ರೈಲುಗಳು ಕಾರ್ಯಾಚರಣೆಯನ್ನು ಪುನರಾರಂಭಿಸಲಿವೆ. ಈ 500 ರೈಲುಗಳಲ್ಲಿ 100 ಎಕ್ಸ್‌ಪ್ರೆಸ್ ರೈಲುಗಳಾದರೆ, 400 ಇಂಟರ್-ಸಿಟಿ ಪ್ಯಾಸೆಂಜರ್ ರೈಲುಗಳಾಗಿವೆ.

ಭಾರತದಲ್ಲಿ ಖಾಸಗಿ ನಿರ್ಹಾಹಕರಿಂದ ಪ್ಯಾಸೆಂಜರ್ ರೈಲುಗಳ ನಿರ್ವಹಣೆಗೆ ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟವಾಗಿ ಹೇಳಿದೆ.

ಸದ್ಯಕ್ಕಂತೂ ಖಾಸಗಿ ನಿರ್ವಾಹಕರಿಂದ ನಿಯಮಿತವಾಗಿ ಪ್ಯಾಸೆಂಜರ್ ರೈಲುಗಳನ್ನು ಓಡಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮತದಾರರು ಸ್ವಯಂಪ್ರೇರಿತರಾಗಿ ಪಟ್ಟಿಯಲ್ಲಿ ಆಧಾರ್ ಸಂಖ್ಯೆ ನೋಂದಾಯಿಸಿ

0

ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಮತದಾರರು ಸ್ವಯಂಪ್ರೇರಿತರಾಗಿ ಆಧಾರ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ತರಲಾಗಿರುವ ತಿದ್ದುಪಡಿಗಳ ಕುರಿತಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿರುವುದನ್ನು ಗುರುತಿಸುವ ಉದ್ದೇಶದಿಂದ ಆಧಾರ್ ಸಂಖ್ಯೆ ಜೋಡಣೆ ವ್ಯವಸ್ಥೆ ಮಾಡಲಾಗಿದೆ.

ನಮೂನೆ 6-ಬಿ ಮೂಲಕ ಬಿಎಲ್‍ಒ ಕಚೇರಿಯಲ್ಲಿ, ಮನೆ ಮನೆ ಭೇಟಿ ವೇಳಿ ಇಆರ್‍ಒಗಳ ಬಳಿ ಅಥವಾ ವೆಬ್‍ಸೈಟ್‍ನಲ್ಲಿಯೂ ಸ್ವಯಂ ನೋಂದಾವಣಿ ಮಾಡಬಹುದಾಗಿದೆ. ಸಂಗ್ರಹಿಸಲಾಗುವ ಆಧಾರ್ ಸಂಖ್ಯೆಯ ಭದ್ರತೆಯನ್ನು ಖಾತ್ರಿಪಡಿಸಲಾಗುವುದು. ಒಂದು ವೇಳೆ ಆಧಾರ್ ಸಂಖ್ಯೆ ಇಲ್ಲದಿದ್ದರೆ ನಿಗದಿಪಡಿಸಲಾಗಿರುವ ಇತರ 11 ದಾಖಲೆಗಳ ಪೈಕಿ ಒಂದು ದಾಖಲೆ ಒದಗಿಸಿ ನೋಂದಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ಗುರುತಿಸಲಾಗಿದೆ. ಇದುವರೆಗೆ ಜನವರಿ 1ರಂದು 18ವರ್ಷ ತುಂಬುವವರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ ಮಾಡಲು ಅವಕಾಶವಿತ್ತು. ಇದೀಗ ಇದರೊಂದಿಗೆ ಎಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಅರ್ಹತಾ ದಿನಾಂಕವಾಗಿ ಪರಿಗಣಿಲಾಗುವುದು.
ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಪರಿಷೃತ ನಮೂನೆ-6ರಲ್ಲಿ ಕೇವಲ ಹೊಸ ಮತದಾರರ ನೋಂದಣಿಗೆ ಮಾತ್ರ ಅವಕಾಶವಿದೆ ಎಂದರು

ವಿಧಾನಸಭಾ ಕ್ಷೇತ್ರಗಳಲ್ಲಿನ ಬೂತ್ ಮಟ್ಟದಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವ ಕುರಿತು ಮತದಾರರಿಗೆ ಅರಿವು ಮೂಡಿಸಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಎಲ್ಲಾ ರಾಜಕೀಯ ಪಕ್ಷಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ತೃತೀಯ ಲಿಂಗಿ/ಅನಾಥ ಸಂದರ್ಭದಲ್ಲಿ ಕಾನೂನು ರಕ್ಷಕರ ವಿವರಗಳನ್ನು ಸಂಬಂಧಿಕರ ವಿವರಗಳ ಅಡಿಯಲ್ಲಿ ನೀಡಬಹುದಾಗಿದೆ. ಅಂಗವಿಕಲ ಮತದಾರರಿಗೆ ಅಂಗವೈಕಲ್ಯದ ಶೇಕಡಾವಾರು ಪ್ರಮಾಣವನ್ನು ಅದರ ಪ್ರಮಾಣಪತ್ರದೊಂದಿಗೆ ನಮೂದಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಭಾರತೀಯ ವಿಮಾನ ಯಾನಅತ್ಯಂತ ಸುರಕ್ಷಿತ- ಅರುಣ್ ಕುಮಾರ್

0

ಭಾರತೀಯ ವಿಮಾನಯಾನ ಸೇವೆ ಅತ್ಯಂತ ಸುರಕ್ಷಿತವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ರಕ್ಷಣಾ ಗುಣಮಟ್ಟವನ್ನು ಪಾಲನೆ ಮಾಡಲಾಗುತ್ತಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್‍ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಂತರ ಸುಮಾರು 6 ಸಾವಿರ ಕಾರ್ಯಾಚರಣೆಗಳು ನಡೆದಿವೆ. ಕೆಲವು ವೇಳೆ ಒತ್ತಡದ ಸಂದರ್ಭದಲ್ಲಿ ಅದು 7 ಸಾವಿರಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸಕ್ತ ವರ್ಷದ ಏಪ್ರಿಲ್ 1ರಿಂದ ಜೂ.30ರವರೆಗೆ ಸುಮಾರು 150 ಕಾರ್ಯಾಚರಣೆ ದೋಷಗಳು ಕಂಡುಬಂದಿವೆ.
ಮೇ 2ರಿಂದ ಜು.13ರ ನಡುವೆ 353 ಸ್ಥಳ ಪರಿಶೀಲನೆ ನಡೆಸಲಾಗಿದೆ. ವಿಶೇಷ ಕಾರ್ಯಾಚರಣೆ ಮೂಲಕ ಭಾರತೀಯ ವಿಮಾನ ಸಂಚಾರ ಸುರಕ್ಷಿತ ಎಂಬುದು ಪುನರುಚ್ಚರಿಸಲ್ಪಟ್ಟಿದೆ ಎಂದರು.

ಕಳೆದ 15 ದಿನಗಳಲ್ಲಿ 15 ಸಣ್ಣ ಪ್ರಮಾಣದ ತಾಂತ್ರಿಕ ಸಮಸ್ಯೆಗಳು ಕಂಡುಬಂದಿವೆ.
ಆದರೆ ಇವಾವೂ ದೊಡ್ಡ ಸಮಸ್ಯೆಗಳಲ್ಲ. ಭಾರತೀಯ ವಿಮಾನಯಾನ ಸೇವಾ ವ್ಯವಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟದ ಖಾತ್ರಿಯನ್ನು ಹೊಂದಿದೆ ಎಂದಿದ್ದಾರೆ.

ಸಾವಿರಾರು ವಿಮಾನಗಳು ಲಕ್ಷಾಂತರ ಪ್ರಯಾಣಿಕರನ್ನು ಸಾಗಾಟ ಮಾಡುತ್ತದೆ. 40ರಿಂದ 50 ಗಂಟೆಗಳ ಕಾಲ ಆಕಾಶದಲ್ಲಿ ತೇಲುವ ವಿಮಾನಗಳ ಸುರಕ್ಷತೆಗೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದಿದ್ದಾರೆ.
ಸ್ಪೈಸ್‍ಜೆಟ್‍ನ ಶೇ.50ರಷ್ಟು ವಿಮಾನಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 8 ವಾರಗಳ ಕಾಲ ಅವುಗಳ ಮೇಲೆ ತೀವ್ರ ನಿಗಾ ಇಟ್ಟು ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈವರೆಗಿನ ಎಲ್ಲ ವರದಿಯ ಪ್ರಕಾರ ಅಪಾಯಕಾರಿಯಾಗಿರುವ ಯಾವುದೇ ಸಂಭವಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

ವಿಮಾನಯಾನ ಸಚಿವ ಜ್ಯೋತಿರಾತ್ಯ ಶಿಂಧೆ ಅವರು ಕಳೆದೆರಡು ದಿನಗಳ ಹಿಂದೆ ಲೋಕಸಭೆಯಲ್ಲಿ ಉತ್ತರ ನೀಡಿ, 2021ರ ಜುಲೈ 1ರಿಂದ 2022ರ ಜೂ.30ರ ನಡುವೆ 478 ತಾಂತ್ರಿಕ ದೋಷಗಳು ಕಂಡುಬಂದಿರುವುದಾಗಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ವಿಮಾನಯಾನದ ಸುರಕ್ಷತೆಯ ಬಗ್ಗೆ ಪ್ರಶ್ನೆ ಉದ್ಭವಿಸಿತ್ತು.