Thursday, March 19, 2026
Thursday, March 19, 2026
Home Blog Page 1488

ಅಸಾಂಪ್ರದಾಯಿಕ ಇಂಧನ ಬಳಕೆ ಹೆಚ್ಚಾಗಬೇಕು- ಆರಗ ಜ್ಞಾನೇಂದ್ರ

0

ವಿದ್ಯುತ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ, ಅಸಾಂಪ್ರದಾಯಿಕ ಇಂಧನದ2047 ಬಳಕೆಯನ್ನು ಹೆಚ್ಚಿಸಬೇಕಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದರು.

ಜಿಲ್ಲಾಡಳಿತ, ಇಂಧನ ಇಲಾಖೆ ಹಾಗೂ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಶಿವಮೊಗ್ಗ ವೃತ್ತ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಉಜ್ವಲ ಭಾರತ, ಉಜ್ವಲ ಭವಿಷ್ಯ ಘೋಷಣೆಯಡಿ ವಿದ್ಯುತ್ @ 2047 ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಡಿದರು.

ವಿದ್ಯುತ್ ನಮ್ಮ ಬಾಳಿನಲ್ಲಿ ಬದಲಾವಣೆ ತಂದಿದೆ. ವಿದ್ಯುತ್ ಒಂದು ದೊಡ್ಡ ಜಾಲ, ಗ್ರಾಹಕರಿಗೆ ಉತ್ತಮ ವಿದ್ಯುತ್ ಸೇವೆ ನೀಡಲು ಅಧಿಕಾರಿ/ಸಿಬ್ಬಂದಿಗಳು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ವಿಶೇಷವಾಗಿ ಲೈನ್‍ಮನ್‍ಗಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ.

ಹಿಂದೆ ನಮ್ಮ ಊರಿಗೆ ಮೊದಲ ಬಾರಿಗೆ ವಿದ್ಯುತ್ ದೀಪ ಬಂದಾಗ ಎಣ್ಣೆ ಇಲ್ಲದ ದೀಪ ಹೇಗಿರುತ್ತದೆಂದು ಕುತೂಹಲದಿಂದ ನೋಡುತ್ತಿದ್ದೆವು. ಆ ನಂತರ ವಿದ್ಯುತ್ ಜಾಲ ದೊಡ್ಡದಾಗಿ ಬೆಳೆದು ಈಗ ಶೇ.100 ವಿದ್ಯುದೀಕರಣಕ್ಕೆ ಬಂದು ತಲುಪಿರುವುದು ಒಳ್ಳೆಯ ಬೆಳವಣಿಗೆ.

ಅಸಾಂಪ್ರದಾಯಿಕ ಇಂಧನವನ್ನು ನಾವು ಹೆಚ್ಚಿಸಬೇಕಿದೆ. ಈಗಾಗಲೇ ವಿದ್ಯುತ್ ಚಾಲಿನ ವಾಹನಗಳು ಬಂದಿವೆ. ಇನ್ನು 10 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್‍ನಿಂದ ಓಡುವ ವಾಹನಗಳು ಕಡಿಮೆ ಆಗಲಿವೆ. ರೈಲ್ವೆಯಲ್ಲಿ ಸಹ ವಿದ್ಯುತ್ ಬಳಕೆ ಹೊಸ ಬದಲಾವಣೆ ತಂದಿದೆ. ದೇಶದ ಆರ್ಥಿಕ ಪ್ರಗತಿಗೆ ಸಹ ಇದು ಕೊಡುಗೆ ನೀಡುತ್ತಿದ್ದು, ದೇಶದ ಭವಿಷ್ಯ ಉಜ್ವಲವಾಗಿ ನಿರ್ಮಾಣ ಮಾಡುವಲ್ಲಿ ಪೂರ್ಣ ಪ್ರಮಾಣದ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಅಭಿನಂದನೀಯ ಎಂದರು.

ಕಾರ್ಯಕ್ರಮದ ಉದ್ಘಾಟಿಸಿದ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ಅಭಿವೃದ್ದಿ ಪಥದಲ್ಲಿ ಶಿವಮೊಗ್ಗ ನಂ.1 ಸ್ಥಾನದಲ್ಲಿದೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ನೂರು ವರ್ಷ ತುಂಬುವ 2047 ರ ಹೊತ್ತಿಗೆ ಇಡೀ ದೇಶಕ್ಕೆ ಶಕ್ತಿ ತುಂಬುವ ಕೆಲಸ ಆಗಲಿದೆ.

ಪ್ರಧಾನಿಯವರ ನೇತೃತ್ವದಲ್ಲಿ ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಅತ್ಯುತ್ತಮ ಸಾಧನೆ ಆಗಿದೆ. ಹಳ್ಳಿ-ಹಳ್ಳಿ, ಗುಡ್ಡಗಾಡು ಪ್ರದೇಶಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಅವರ ಕನಸು ಸಾಕಾರಗೊಂಡಿದೆ. ಮುಂದೆ ನಮ್ಮ ದೇಶ ಇಡೀ ವಿಶ್ವದಲ್ಲಿ 1ನೇ ಸ್ಥಾನಕ್ಕೆ ಬರಲಿದ್ದು, ಆ ನಿಟ್ಟಿನಲ್ಲಿ ಸಾಧನೆ ಪ್ರಗತಿಯಲ್ಲಿದೆ ಎಂದರು.

ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸರ್ವಾಂಗೀಣ ಅಭಿವೃದ್ದಿಗೆ ಅನೇಕ ಉತ್ತಮ ಯೋಜನೆಗಳನ್ನು ನೀಡಿದೆ. 2047 ರ ಹೊತ್ತಿಗೆ ಆಮದು ಮಾಡಿಕೊಳ್ಳುವುದು ನಿಂತು, ರಫ್ತು ಮಾಡುವ ಸಂಕಲ್ಪ ನಮ್ಮದಾಗಬೇಕು ಎಂದ ಅವರು ನವೀಕರಿಸಬಹುದಾದ ಇಂಧನದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ವಿದ್ಯುತ್ ಕ್ಷೇತ್ರದಲ್ಲಿ ಹೊಸ ಮನ್ವಂತರ ಸೃಷ್ಟಿಸುವ ಪ್ರಯತ್ನಗಳು ಆಗುತ್ತಿವೆ. ಶೇ.100 ಗ್ರಾಮೀಣ ವಿದ್ಯುದೀಕರಣ ಸಾಧಿಸಲಾಗಿದೆ. 18,500 ಗ್ರಾಮಗಳು, 2.86 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರೈತರ ಪಂಪ್‍ಸೆಟ್‍ಗಳಿಗೆ ರಾಜ್ಯ ಮತ್ತು ಕೇಂದ್ರದ ತಲಾ ಶೇ.30 ಸಬ್ಸಿಡಿ ತಲುಪಿದೆ. 2015 ರಲ್ಲಿ ಪ್ಯಾರಿಸ್‍ನಲ್ಲಿ ನಡೆದ ಸಭೆಯಲ್ಲಿ 2030 ರ ಹೊತ್ತಿಗೆ ಶೇ.40 ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡಬೇಕೆಂಬ ಘೋಷಣೆಯಾಗಿದ್ದು, ರಾಜ್ಯದ ಇಂಧನ ಇಲಾಖೆ ಮುಂಗಡವಾಗಿಯೇ ಈ ಗುರಿ ತಲುಪಿರುವುದು ಅಭಿನಂದನೀಯ.

2.68 ಲಕ್ಷ ಸಕ್ರ್ಯುಟ್ ಕಿ.ಮೀ ಹೆಚ್.ಡಿ ಲೈನ್ ಸ್ಥಾವರ, 6,500 ಸಕ್ರ್ಯುಟ್ ಕಿ.ಮೀ ಎಲ್‍ಟಿ ಲೈನ್ ಸ್ಥಾವರ ಸ್ಥಾಪನೆ ಆಗಿದೆ. ರಾಜ್ಯದಲ್ಲಿ 25 ಲಕ್ಷ ರೈತರ ಪಂಪ್‍ಸೆಟ್ ಇದ್ದು ರೂ.11 ಸಾವಿರ ಕೋಟಿ ಮೌಲ್ಯದ ವಿದ್ಯುತ್‍ನ್ನು ಉಚಿತವಾಗಿ ನೀಡಿದ್ದು, ಇನ್ನೂ ಅನೇಕ ಜನಪರ ಯೋಜನೆಗಳ ಮೂಲಕ ಇಂಧನ ಇಲಾಖೆ ಗೌರವ ತರುವ ಕೆಲಸ ಮಾಡುತ್ತಾ ಉತ್ತಮ ಕೊಡುಗೆಯನ್ನು ರಾಜ್ಯಕ್ಕೆ ನೀಡಿದೆ. ವಿದ್ಯುತ್ ಕಳ್ಳತನ, ಸೋರಿಕೆಯನ್ನು ಸಹ ಕಡಿಮೆ ಮಾಡುವ ಪ್ರಯತ್ನ ಇನ್ನೂ ಆಗಬೇಕು ಎಂದು ಹೇಳಿದರು.

ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಂದ್ರ.ಹೆಚ್.ಆರ್ ಸ್ವಾಗತಿಸಿದರು. ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿ. ನ ಉಪ ಮಹಾಪ್ರಬಂಧಕ ಮಂಗೇಶ್.ಎಸ್.ಬನ್ಸೊಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲತೇಶ್, ರಾಜೇಶ್ ಕಾಮತ್, ಮೆಸ್ಕಾಂ ನಿರ್ದೇಶಕರಾದ ದಿನೇಶ್, ಗಿರಿರಾಜ್, ಶಿವರುದ್ರಪ್ಪ, ಹಾಗೂ ವಸಂತಕುಮಾರ್, ಮೋಹನ್, ರಮೇಶ್ ಹೆಗ್ಡೆ, ಮುಖ್ಯ ಇಂಜಿನಿಯರ್ ಬಸಪ್ಪ, ಇತರರಿದ್ದರು.

ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದ ಗೆದ್ದ ಕನ್ನಡಿಗ

0

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್‌ನ ವೇಯ್ಟ್ ಲಿಪ್ಟಿಂಗ್‌ ವಿಭಾಗದ 61 ಕೆಜಿ ವಿಭಾಗದಲ್ಲಿ ಕನ್ನಡಿಗ ಉಡುಪಿ ಮೂಲದ ಗುರುರಾಜ್ ಪೂಜಾರಿ ಕಂಚಿನ ಪದಕ ಗೆಲ್ಲುವ ಭಾರತದ ತ್ರಿವರ್ಣ ಧ್ವಜ ಹಾರಿಸುವುದರ ಜೊತೆಗೆ ರಾಜ್ಯಕ್ಕೂ ಹೆಮ್ಮೆ ತಂದಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪು ತಾಲೂಕಿನ ವಂಡ್ಸೆ ಗ್ರಾಮದ ಮಹಾಬಲ ಹಾಗೂ ಪದ್ದು ಪೂಜಾರಿ ದಂಪತಿ ಮಗನಾಗಿರುವ ಗುರುರಾಜ್ ಪೂಜಾರಿ ಬರ್ಮಿಂಗ್‌ ಹ್ಯಾಮ್‌ನಲ್ಲಿ ಪದಕ ಖಚಿತಪಡಿಸಿಕೊಳ್ಳುತ್ತಿದ್ದಂತೆ ಕುಟುಂಬಸ್ಥರು ಗುರುರಾಜ್ ಗೆಲುವನ್ನು ಪಟಾಕಿ ಸಿಡಿಸಿ ಸಿಹಿ‌ ಹಂಚುವ ಮೂಲಕ ಕುಣಿದು ಸಂಭ್ರಮಿಸಿದ್ದಾರೆ.

ಗುರುರಾಜ್ ಪೂಜಾರಿ ಅವರು ಪುರುಷರ 61 ಕೆ.ಜಿ ವಿಭಾಗದಲ್ಲಿ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸಿ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಮಲೇಷ್ಯಾದ ಕ್ರೀಡಾಪಟು ಚಿನ್ನ ಹಾಗೂ ಪಪುವಾ ನ್ಯೂಗಿನಿಯಾ ಕ್ರೀಡಾಪಟು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.

ಟ್ರಕ್ ಚಾಲಕನ ಮಗನಾಗಿರುವ ಗುರುರಾಜ ಬಡತನದಲ್ಲೇ ಬೆಳೆದರೂ, ಸಾಧನೆ ಮಾಡಬೇಕೆಂಬ ಛಲ ಮತ್ತು ಕ್ರೀಡೆ ಮೇಲಿನ ಆಸಕ್ತಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದೆ. ವಿಶೇಷವೆಂದ್ರೆ ವೇಟ್ ಲಿಫ್ಟರ್ ಆಗಿರುವ ಗುರುರಾಜ ಮೊದಲು ಕುಸ್ತಿಪಟು ಆಗಿದ್ದರು.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ನೋಡಿ ಪ್ರಭಾವಿತರಾಗಿದ್ದ ಗುರುರಾಜ್ ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ್ದರು. ಆದರೆ, ಶಾಲೆಯ ಶಿಕ್ಷಕರ ಸಲಹೆಯ ನಂತರ ವೇಟ್‌ಲಿಫ್ಟಿಂಗ್​ ಕಡೆಗೆ ಜಾರಿದ್ದರು. ಇದೀಗ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ತಮ್ಮ 2ನೇ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಣಿಗ ಜಾತಿ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟನೆ-ತೀರ್ಪು

0

ಉತ್ತರ ಕರ್ನಾಟಕದಲ್ಲಿ ಕಂಡುಬರುವ ಗಾಣಿಗೇರ್ ಎಂಬುದು ಗಾಣಿಗ ಪದದ ರೂಪಾಂತರವಾಗಿದೆ. ಹಿಂದೂ ಗಾಣಿಗ ಮತ್ತು ಲಿಂಗಾಯತ ಗಾಣಿಗ 2 ವಿಭಿನ್ನ ಜಾತಿಗಳಲ್ಲ. ಎರಡೂ ಒಂದೇ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಒಬಿಸಿ ಮೀಸಲಾತಿಗಾಗಿ ಸಂಗಪ್ಪ ಹಸನಪ್ಪ ಮಾಳೆಣ್ಣನವರ್ ಎಂಬುವರಿಗೆ ನೀಡಿದ್ದ ಗಾಣಿಗ ಜಾತಿ ಪ್ರಮಾಣ ಪತ್ರದ ವಿರುದ್ಧ ಏಕ ಪೀಠದ ತೀರ್ಪನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಎಂವಿ ಚಂದ್ರಕಾಂತ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರ ಪೀಠ ವಜಾಗೊಳಿಸಿದೆ.

ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿಗೆ ಆಯ್ಕೆಯಾದ 1999ರ ಬ್ಯಾಚ್ ಅಭ್ಯರ್ಥಿಗಳಲ್ಲಿ ಸಂಗಪ್ಪ ಕೂಡ ಒಬ್ಬರು. ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಚಂದ್ರಕಾಂತ್ ಹಾಗೂ ಸಹಾಯಕ ಆಯುಕ್ತ ಹುದ್ದೆಗೆ ಸಂಗಪ್ಪ ಆಯ್ಕೆಯಾಗಿದ್ದಾರೆ. 2005ರಲ್ಲಿ ಸಂಗಪ್ಪ ಅವರ ತಂದೆ ಲಿಂಗಾಯತ ಜಾತಿಗೆ ಸೇರಿದವರು ಎಂದು ತನಗೆ ಗೊತ್ತಾಯಿತು. ಆದರೆ, ಸಂಗಪ್ಪ ಅವರು ಗಾಣಿಗ ಜಾತಿಗೆ ಸೇರಿದವರು ಎಂದು ಹೇಳಿಕೊಂಡು ಮೀಸಲಾತಿಯ ಲಾಭವನ್ನು ಪಡೆದಿದ್ದರು ಎಂದು ಚಂದ್ರಕಾಂತ್ ವಾದಿಸಿದರು.

ಈ ವಿಷಯ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಪೀಠವು, ಸಂಗಪ್ಪ ಅವರ ತಂದೆ ಹಿಂದೂ ಲಿಂಗಾಯತ ಜಾತಿಗೆ ಸೇರಿದವರು ಎಂದು ಶಾಲೆಯ ದಾಖಲೆಗಳು ಬಹಿರಂಗಪಡಿಸುತ್ತವೆ. ಆದರೆ, ಅವರ ಮಗ ಗಾಣಿಗ ಸಮುದಾಯ ಎಂದು ಹೇಳಿಕೊಂಡಿರುವುದು ಸರಿಯಲ್ಲ ಎಂದಿತ್ತು. ಆದರೆ, ವಿಭಾಗೀಯ ಪೀಠವು ಏಕ ಪೀಠದ ಆದೇಶವನ್ನು ತಳ್ಳಿಹಾಕಿತು.

ದೇಶದಲ್ಲಿ ಶೇ 98.48 ರಷ್ಟು ಕೋವಿಡ್ ಸೋಂಕಿತರು ಗುಣಮುಖ

0

ಇನ್ನು ದೇಶದಲ್ಲಿ 1,43,676 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ.98.48ರಷ್ಟು ಜನ ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಈವರೆಗೆ 4,33,49,778 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 31,36,029 ಜನರಿಗೆ ಕೊರೋನಾ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ 2,04,25,69,509 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 3,96,424 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ.

ಭಾರತದಲ್ಲಿ ಶ್ರೀಲಂಕಾ ಪಾಕ್ ನಂತೆ ಪರಿಸ್ಥಿತಿ ಉದ್ಭವಿಸದು-ರಘುರಾಂ ರಾಜನ್

0

ಭಾರತದಲ್ಲಿ ಶ್ರೀಲಂಕಾ ಅಥವಾ ಪಾಕಿಸ್ತಾನದ ಸ್ಥಿತಿ ಉದ್ಭವವಾಗದು ಎಂದು ಆರ್‌ಬಿಐನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ವಿನಿಮಯ ಸಂಗ್ರಹ ವಿಚಾರದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಉತ್ತಮ ಕೆಲಸ ಮಾಡುತ್ತಿದೆ.
ಅಲ್ಲದೇ, ಭಾರತದಲ್ಲಿ ವಿದೇಶಿ ವಿನಿಮಯ ಸಂಗ್ರಹದ ಪ್ರಮಾಣವೂ ಚೆನ್ನಾಗಿಯೇ ಇದೆ. ನಮ್ಮ ವಿದೇಶಿ ಸಾಲದ ಪ್ರಮಾಣವೂ ಕಡಿಮೆ ಇದೆ ಎಂದು ಹೇಳಿದ್ದಾರೆ.

ಹೀಗಾಗಿ, ಶ್ರೀಲಂಕಾ ಮತ್ತು ಪಾಕಿಸ್ತಾನದ ಸಮಸ್ಯೆಗಳೂ ನಮ್ಮಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಜು.22ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹ 571 ಬಿಲಿಯನ್‌ ಡಾಲರ್‌ನಷ್ಟಿದೆ. ಆದರೆ, ಅದೇ ಅವಧಿಯಲ್ಲಿ ವಿದೇಶಿ ವಿನಿಮಯ ಸಂಗ್ರಹ 1.152 ಬಿಲಿಯನ್‌ ಡಾಲರ್‌ನಷ್ಟು ಕಡಿಮೆಯಾಗಿದೆ.

ಬಿಜೆಪಿ ತನ್ನ ಕಾರ್ಯಕರ್ತರನ್ನ ಮತೀಯ ವ್ಯಸನಿಗಳನ್ನಾಗಿ ಮಾಡುತ್ತಿದೆ- ಎಚ್ ಡಿ ಕೆ

0

ಕಾರ್ಯಕರ್ತರನ್ನು ಮತೀಯ ವ್ಯಸನಿಗಳನ್ನಾಗಿ ಮಾಡಿ ಸ್ವಾರ್ಥ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜ್ಯ ಬಿಜೆಪಿಯ ಅಸಲಿ ಮುಖವಾಡ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಯಿಂದ ಬಹಿರಂಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಮಾಧ್ಯಮವರ ಮೇಲೆ ಹಲ್ಲೆ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಸರಣಿ ಟ್ವಿಟ್ ಮಾಡಿದ್ದಾರೆ. ಕಂಡ ಕಂಡವರ ಬಡ ಮಕ್ಕಳ ಕಗ್ಗೊಲೆ, ಬಡ ಯುವಕರ ನೆತ್ತರಿನ ಮೇಲೆ ಸುಖದಸೌಧ ಕಟ್ಟುತ್ತಿರುವ ಬಿಜೆಪಿಗೆ ಪಾಪಪ್ರಜ್ಞೆ ಇಲ್ಲ. ಇದು ಅತ್ಯಂತ ಹೇಯ ಮತ್ತು ಪಾತಕ, ರಾಕ್ಷಸೀ ರಾಜಕಾರಣದ ಪರಾಕಾಷ್ಠೆ ಎಂದು ಅವರು ಖಾರವಾಗಿ ಬಿಜೆಪಿಯ ನಾಯಕರ ವರ್ತನೆ ಕುರಿತು ಜರಿದಿದ್ದಾರೆ.

ಬಿಜೆಪಿ ಯುವ ಮೋರ್ಚಾ ಕಾರ್ಯಾಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ವಿರೋಧಿಸಿ ಕೆಲವು ಬಿಜೆಪಿ ಕಾರ್ಯಕರ್ತರು ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕಾರ್ಯಕರ್ತರಲ್ಲಿ ಪ್ರಬುದ್ಧತೆ ಇಲ್ಲ. ಹೀಗಾಗಿ ಹತ್ಯೆ ಖಂಡಿಸಿ ರಾಜೀನಾಮೆ ನೀಡುತ್ತಿದ್ದಾರೆ.
ರಾಜೀನಾಮೆ ವಾಪಸ್ ಪಡೆಯಬೇಕು. ಬಿಜೆಪಿ ರಾಜ್ಯ ಘಟಕ ಒಂದೇ ವೇಳೆ ರಾಜೀನಾಮೆ ಸ್ವೀಕರಿಸಿದರೆ ಬೇರೆ ಕಾರ್ಯಕರ್ತರು ಬರುತ್ತಾರೆ. ಬಿಜೆಪಿಗೇನು ಕಾರ್ಯಕರ್ತರು ಸಿಗುವುದಿಲ್ಲವೇ ಎಂದರು.

ಕೆ.ಎಸ್. ಈಶ್ವರಪ್ಪನವರ ಈ ಹೇಳಿಕೆ ವಿರುದ್ಧ ಹಾಗೂ ಕಾರ್ಯಕರ್ತರ ವಿಚಾರದ, ಕೊಲೆ ಪ್ರಕರಣಗಳಲ್ಲಿ ಬಿಜೆಪಿ ನಡೆದುಕೊಳ್ಳುವ ಕುರಿತು ಮಾಜಿ ಕುಮಾರಸ್ವಾಮಿ ಸರಣಿ ಟ್ವಟ್ ಮಾಡಿ ಕಿಡಿ ಕಾರಿದ್ದಾರೆ.

ಹತ್ಯೆಗೊಳಗಾದ ಪ್ರವೀಣ್ ಮನೆಗೆ ಬೋಮ್ಮಾಯಿ ಭೇಟಿಸಾಂತ್ವನ

0

ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭೇಟಿ ನೀಡಿದರು.
ಕುಟುಂಬಕ್ಕೆ ಸಾಂತ್ವಾನ ಹೇಳಿ, 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.

ಬಿಜೆಪಿ ಮುಖಂಡನ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸುಳ್ಯ ತಾಲೂಕಿನ ನೆಟ್ಟೂರು ಗ್ರಾಮಕ್ಕೆ ಭೇಟಿ ನೀಡಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲೂ ಸರ್ಕಾರ ತನಿಖೆ ನಡೆಸುತ್ತಿದೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು. ಸರ್ಕಾರ ಮತ್ತು ಬಿಜೆಪಿ ನಿಮ್ಮೊಂದಿಗೆ ಇದೆ ಎಂದು ಸಿಎಂ ಬೊಮ್ಮಾಯಿ ಪ್ರವೀಣ್ ಕುಟುಂಬಕ್ಕೆ ಧೈರ್ಯ ತುಂಬಿದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹ ಇದ್ದರು.

ಇದಕ್ಕು ಮುನ್ನ ನೆಟ್ಟೂರಿಗೆ ಹೋಗುವ ದಾರಿ ಮಧ್ಯೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪ್ರವೀಣ್ ನೆಟ್ಟಾರು ಹತ್ಯೆಯಾದ ಕ್ಷಣದಿಂದ ದಕ್ಷಿಣ ಕನ್ನಡ ಎಸ್ಪಿ ಜತೆ ಸಂಪರ್ಕದಲ್ಲಿದ್ದೇನೆ. ನಮ್ಮ ಡಿಜಿಪಿಯವರು ಕೇರಳ ಡಿಜಿಪಿ ಜತೆ ಮಾತನಾಡಿದ್ದು, ನಮ್ಮ ಪೊಲೀಸರು ಕಾಸರಗೋಡು ಎಸ್ಪಿ ಜತೆಯೂ ಸಂಪರ್ಕದಲ್ಲಿದ್ದಾರೆ.

ಕೊಲೆಗೆ ಕೇರಳದ ಜತೆ ಸಂಪರ್ಕವಿದೆ ಎಂಬ ಪ್ರಾಥಮಿಕ ಮಾಹಿತಿ ಹಿನ್ನೆಲೆಯಲ್ಲಿ ತನಿಖೆಗೆ ನಡೆಯುತ್ತಿದ್ದು, ಕೇರಳ ಪೊಲೀಸರು ಸಹಕಾರ ಕೊಡುತ್ತಿದ್ದಾರೆ ಎಂದರು.

ಮಹಾರಾಜ ಟ್ರೋಫಿ ತಂಡಗಳು ಪ್ರಕಟ

0

ಮಹಾರಾಜಾ ಟ್ರೋಫಿ ತಂಡಗಳ ಮಾಹಿತಿ ಇಲ್ಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನೂತನವಾಗಿ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸುತ್ತಿದ್ದು, ಮಹಾರಾಜಾ ಟ್ರೋಫಿಗಾಗಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಸೆಣಸಾಟ ನಡೆಸಲಿವೆ.

ಕ್ರಿಕೆಟ್ ಪಂದ್ಯಾವಳಿ ಆಗಷ್ಟ್ 7 ರಿಂದ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ರಾಜ್ಯದ ಪ್ರಮುಖ ಕ್ರಿಕೆಟಿಗರು ವಿವಿಧ ತಂಡಗಳ ಪರವಾಗಿ ಆಡಲಿದ್ದಾರೆ. ಈ ಹಿಂದೆ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹೆಸರಿನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಟಿ-20 ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಎಂಟು ಆವೃತ್ತಿಗಳನ್ನು ಯಶಸ್ಸಿಯಾಗಿ ಸಂಘಟಿಸಿತ್ತು.

ಆದರೆ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 2019 ರಿಂದ ಟೂರ್ನಿಯನ್ನು ಸ್ಥಗಿತಗೊಳಿಸಲಾಯಿತು. ಮಹಾರಾಜಾ ಟ್ರೋಫಿಗಾಗಿ ನಡೆಯಲಿರುವ ಟಿ-20 ಮಾದರಿಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಮುಖ ಆಟಗಾರರಾದ ಮಯಾಂಕ್ ಅಗರವಾಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಆರ್ ಸಮರ್ಥ್, ವೈಶಾಕ್ ವಿಜಯ್ ಕುಮಾರ್, ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗಡೆ, ಪವನ್ ದೇಶಪಾಂಡೆ, ಆರ್.ಸಮರ್ಥ್ ಮುಂತಾದ ಖ್ಯಾತ ಆಟಗಾರರು ವಿವಿಧ ತಂಡಗಳ ಪರ ಕಣಕ್ಕೆ ಇಳಿಯಲಿದ್ದಾರೆ.


ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಯುನೈಟೆಡ್, ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಟ್ರೋಫಿಗಾಗಿ ಹೋರಾಟ ನಡೆಸಲಿವೆ.

ಶಿವಮೊಗ್ಗ ಸ್ಟ್ರೈಕರ್ಸ್:
ಕೃಷ್ಣಪ್ಪ ಗೌತಮ್, ಕೆಸಿ ಕಾರಿಯಪ್ಪ, ರೋಹನ್ ಕದಮ್, ಕೆವಿ ಸಿದ್ಧಾರ್ಥ, ದರ್ಶನ್ ಎಂಬಿ, ಸ್ಟಾಲಿನ್ ಹೂವರ್, ಅವಿನಾಶ್ ಡಿ, ಸ್ಮರಣ್ ಆರ್, ಶರತ್ ಬಿಆರ್, ರಣವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯಪ್ಪ, ಚೈತನ್ಯ ಎಸ್, ಶ್ರೇಯಸ್ ಬಿಎಂ, ಕೆಎಸ್ ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್ಪಿ ಮತ್ತು ಪುನಿತ್ ಎಸ್

ಮಂಗಳೂರು ಯುನೈಟೆಡ್:
ಅಭಿನವ್ ಮನೋಹರ್, ಆರ್ ಸಮರ್ಥ್, ವೈಶಾಕ್ ವಿಜಯ್ ಕುಮಾರ್, ಅಮಿತ್ ವರ್ಮಾ, ಎಂ ವೆಂಕಟೇಶ್, ಅನೀಶ್ವರ್ ಗೌತಮ್, ಸುಜಯ್ ಸತ್ಯಹರಿ, ರೋಹಿತ್ ಕುಮಾರ್ ಎಸಿ, ಮ್ಯಾಕ್ನೀಲ್ ನೊರೊನ್ಹಾ, ಎಚ್.ಎಸ್ ಶರತ್, ಶಿವಕುಮಾರ್ ಕೆ, ನಿಕಿನ್ ಜೋಸ್, ರಘುವೀರ್ ಪಾವಲೂರ್, ಅಮೋಘ್ ಎಸ್, ಚಿನ್ಮಯ್ ಎನ್.ಎ, ಆದಿತ್ಯ ಸೋಮಣ್ಣ, ಯಶವರ್ಧನ್, ಧೀರಜ್ ಗೌಡ

ಹುಬ್ಬಳ್ಳಿ ಟೈಗರ್ಸ್:
ಅಭಿಮನ್ಯು ಮಿಥುನ್, ಲವ್ನಿತ್ ಸಿಸೋಡಿಯಾ, ವಿ ಕೌಶಿಕ್, ಲಿಯಾನ್ ಖಾನ್, ನವೀನ್ ಎಂಜಿ, ಆನಂದ್, ಶಿವಕುಮಾರ್ ಬಿಯು, ತುಷಾರ್ ಸಿಂಗ್, ಆಕ್ಷಣ್ ರಾವ್, ಜಹೂರ್ ಫಾರೂಕಿ, ರೋಹನ್ ನವೀನ್, ಸೌರಭ್ ಶ್ರೀವಾಸ್ತವ, ಸಾಗರ್ ಸೋಲಂಕಿ, ಗೌತಮ್ ಸಾಗರ್, ರೋಷನ್ ಎ, ರಾಹುಲ್ ಸಿಂಗ್ ರಾವತ್, ಶಿಶಿರ್ ಭಾವನೆ ಮತ್ತು ಶರಣ್ ಗೌಡ

ಮೈಸೂರು ವಾರಿಯರ್ಸ್
ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗಡೆ, ಪವನ್ ದೇಶಪಾಂಡೆ, ವಿದ್ಯಾಧರ್ ಪಾಟೀಲ್, ಉಳ್ಳಾಲ್, ಪ್ರತೀಕ್ ಜೈನ್, ಲೋಚನ್ ಅಪ್ಪಣ್ಣ, ಚಿರಂಜೀವಿ, ನಾಗ ಭರತ್, ಭರತ್ ದೂರಿ, ಶಿವರಾಜ್ ಎಸ್, ಮೋನಿಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಭಿಲ್ಲೆ, ಆದಿತ್ಯ ಗೋಯಲ್, ಅಭಿಷೇಕ್ ಅಹ್ಲಾವತ್

ಬೆಂಗಳೂರು ಬ್ಲಾಸ್ಟರ್ಸ್;
ಮಯಾಂಕ್ ಅಗರ್ವಾಲ್, ಜೆ ಸುಚಿತ್, ರೋನಿತ್ ಮೋರೆ, ಅನಿರುಧ್ ಜೋಶಿ, ಪ್ರದೀಪ್ ಟಿ, ಕ್ರಾಂತಿ ಕುಮಾರ್, ಚೇತನ್ ಎಲ್.ಆರ್, ಅನೀಶ್ ಕೆವಿ, ಕುಮಾರ್ ಎಲ್.ಆರ್, ರಕ್ಷಿತ್ ಎಸ್, ರಿಷಿ ಬೋಪಣ್ಣ, ಸಂತೋಕ್ ಸಿಂಗ್, ಸೂರಜ್ ಅಹುಜಾ, ಪಾರಸ್ ಗುರ್ಬಕ್ಸ್ ಆರ್ಯ, ಲೋಚನ್ ಎಸ್ ಗೌಡ, ಸೀನ್ ಇಶಾನ್ ಜೋಸೆಫ್, ಕುಹುಶ್ ಮರಾಠೆ, ತನಯ್ ವಾಲ್ಮಿಕ್.

ಗುಲ್ಬರ್ಗಾ ಮಿಸ್ಟಿಕ್ಸ್
ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಸಿಎ ಕಾರ್ತಿಕ್, ಮನೋಜ್ ಭಾಂಡ್ಗೆ, ಶ್ರೀಜಿತ್ ಕೆಎಲ್, ವಿ ಕಾವೇರಪ್ಪ, ಕೃತಿಕ್ ಕೃಷ್ಣ, ಅಭಿಲಾಷ್ ಶೆಟ್ಟಿ, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ಮೋಹಿತ್ ಬಿಎ, ರೋಹನ್ ಪಾಟೀಲ್, ಧನಿಶ್ ಗೌಡ, ಮೊಹಮ್ಮದ್ ಅಕಿಬ್ ಜಾವೇದ್, ಶ್ರೀಶ ಆಚಾರ್, ಜೇಶ್ವಂತ್ ಆಚಾರ್ಯ, ಆರೋನ್ ಕ್ರಿಸ್ಟಿ

ತೂಗುಯ್ಯಾಲೆಯಲ್ಲಿ ರಿಷಿ ಸುನಕ್ ಭವಿಷ್ಯ

0

ಯುಕೆ ಪ್ರಧಾನಮಂತ್ರಿ ಹುದ್ದೆಯ ಪೈಪೋಟಿ ಅಂತಿಮ ಹಂತಕ್ಕೆ ಬಂದಿದೆ.
ಅಚ್ಚರಿಯ ವಿದ್ಯಮಾನದಲ್ಲಿ ರಿಷಿ ಸುನಕ್​ ಅವರು ಪ್ರಧಾನಿ ಸ್ಥಾನ ಅಲಂಕರಿಸುತ್ತಾರೆ ಎನ್ನುವ ಮಾತುಗಳೀಗ ತಲೆಕೆಳಗಾಗುತ್ತಿವೆ.

ಮುಂದಿನ ಪ್ರಧಾನಿಯಾಗುವ ಓಟದಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್​​ ಟ್ರಸ್​ ಅವರಿಗಿಂತ ಶೇ. 90 ರಷ್ಟು ಹಿಂದಿದ್ದಾರೆ ಎಂದು ಬೆಟ್ಟಿಂಗ್​ ವಿನಿಮಯ ಸಂಸ್ಥೆ ಸ್ಮಾರ್ಕೆಟ್ಸ್​ ಅಂದಾಜಿಸಿದೆ.

ಲೀಡ್ಸ್​ನಲ್ಲಿ ಕನ್ಸರ್ವೇಟಿವ್​ ಪಕ್ಷದ ಸದಸ್ಯರ ಸಮ್ಮುಖದಲ್ಲಿ ನಡೆದ ಮೊದಲ ಅಧಿಕೃತ ಚರ್ಚೆಯಲ್ಲಿ ಇಬ್ಬರು ಅಭ್ಯರ್ಥಿಗಳು ಮುಖಾಮುಖಿಯಾದರು.

ಸ್ಮಾರ್ಕೆಟ್ಸ್​ ಪ್ರಕಾರ, ಇಲ್ಲಿ ನಡೆದ ಪಕ್ಷದ ಸದಸ್ಯರ ಸಮೀಕ್ಷೆಯಲ್ಲಿ ರಿಷಿ ಸುನಕ್​ ಅವರು ಪ್ರಧಾನಿಯಾಗುವ ಅವಕಾಶ ಶೇ. 10ಕ್ಕೆ ಕುಸಿದಿದ್ದು, ಟ್ರಸ್​ ಶೇ.89.29ರಷ್ಟು ರೇಟಿಂಗ್​ ಪಡೆದಿದ್ದಾರೆ.

ತಮ್ಮ ಕೊನೆಯ ಚರ್ಚೆಯಲ್ಲಿ ಲಿಜ್​​ ಟ್ರಸ್​, ತೈಲ ಮತ್ತು ಅನಿಲ ಕಂಪೆನಿಗಳ ಮೇಲೆ ಮತ್ತಷ್ಟು ವಿಂಡ್​ಫಾಲ್​ ತೆರಿಗೆಗಳನ್ನು ವಿಧಿಸದಿರಲು ಬಯಸುತ್ತೇನೆ ಎಂದು ಹೇಳಿರುವುದು ಅವರ ಶೇಕಡಾವಾರು ಅವಕಾಶವನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದಿದೆ. ಜೀವನಮಟ್ಟ ಕುಸಿತ ಎದುರಿಸುತ್ತಿರುವ ಬ್ರಿಟನ್​ನಲ್ಲಿ ತಕ್ಷಣ ತೆರಿಗೆ ಕಡಿತಗೊಳಿಸುವ ಕುರಿತು ಪ್ರತಿಜ್ಞೆ ಮಾಡಿದ ಟ್ರಸ್​, ಸದಸ್ಯರ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಮೀಕ್ಷೆಯ ಪ್ರಕಾರ, ಶೇಕಡಾ 31 ರಷ್ಟು ಸದಸ್ಯರು ರಿಷಿ ಸುನಕ್‌ಗೆ ಮತ ಹಾಕಲು ಉದ್ದೇಶಿಸಿದ್ದರೆ, ಶೇಕಡಾ 49 ರಷ್ಟು ಜನರು ಲಿಜ್ ಟ್ರಸ್‌ಗೆ ಮತ ಹಾಕಲು ತೀರ್ಮಾನಿಸಿದ್ದಾರೆ. ಇನ್ನೂ 15 ಪ್ರತಿಶತದಷ್ಟು ಸದಸ್ಯರು ಯಾರಿಗೆ ಮತ ಚಲಾಯಿಸುತ್ತಾರೆ ಎಂಬುದು ತಿಳಿದಿಲ್ಲ.
ಅದಲ್ಲದೆ 6 ಪ್ರತಿಶತದಷ್ಟು ಸದಸ್ಯರು ಪ್ರಸ್ತುತ ಮತದಾನದಿಂದ ದೂರವಿರುವುದಾಗಿ ಹೇಳಿದ್ದಾರೆ.

ಇನ್ನು 8 ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆ-ಭಗವಂತ ಖೂಬ

0

ಮನುಷ್ಯನ ಆಧುನಿಕ ಜೀವನಕ್ಕೆ ನೀರು, ಆಹಾರದಷ್ಟೇ ವಿದ್ಯುತ್ತಿನ ಅವಶ್ಯಕತೆ ಇದೆ. 8 ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆ ಮಾಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಹೇಳಿದ್ದಾರೆ.

ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಉಜ್ಜಲ ಭಾರತ, ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ವಿದ್ಯುತ್ ಇಲ್ಲದಿದ್ದರೆ ಆ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ. ದೇಶದಲ್ಲಿ ಪವನ ಶಕ್ತಿ, ಸೌರಶಕ್ತಿ ಮತ್ತು ಜಲಶಕ್ತಿ ಬಳಸಿಕೊಂಡು ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಭಾರತ ಶೇ. 40ರಷ್ಟು ಪ್ರತಿಶತ ನವೀಕರಿಸಬಹುದಾದ ಇಂಧನ ಮೂಲಗಳಿಂದ 175l ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಈ ಹಿಂದೆ ಸರಾಸರಿ ಎರಡು ಲಕ್ಷ ಮೆಗಾವ್ಯಾಟ್ ವಿದ್ಯುತ್‍ನ್ನು ಉತ್ಪಾದನೆಯಾಗುತ್ತಿತ್ತು, ಈಗ ನಾಲ್ಕು ಲಕ್ಷ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿಯೊಬ್ಬ ನಾಗರಿಕರು ಆಗಸ್ಟ್ 13 ರಿಂದ ಆಗಸ್ಟ್ 15ರ ವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಉತ್ಸಾಹದಿಂದ ಹಾರಿಸಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಜೆಸ್ಕಾಂ ಅಧಿಕಾರಿಗಳು ನಿರಂತರವಾಗಿ ರೈತರಿಗೆ ವಿದ್ಯುತ್ ಕೊಡಬೇಕು. ಹಳ್ಳಿಗಳಲ್ಲಿ ಬೋರ್‌ವೆಲ್ ಹಾಕಿದ ಮೇಲೆ ಅವುಗಳಿಗೆ ಅಳವಡಿಸುವ ಮೋಟರ್‌ಗಳಿಗೆ ತ್ವರಿತ ವಿದ್ಯುತ್‌ ಸಂಪರ್ಕ ಕೊಡಬೇಕು ಎಂದು ಸೂಚಿಸಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಮ್ ಖಾನ್ ಮಾತನಾಡಿ, ವಿದ್ಯುತ್, ಆಸ್ಪತ್ರೆ, ಪೊಲೀಸ್ ಸೇರಿದಂತೆ ಪ್ರಮುಖ ಇಲಾಖೆಗಳು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಜನರಿಗೆ ತೊಂದರೆಯಾಗುತ್ತದೆ. ಕಳೆದ 10 ವರ್ಷಗಳಲ್ಲಿ ಕೆ.ಇ.ಬಿ.ಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಮುಂದಿನ ದಿನಮಾನಗಳಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಜೆಸ್ಕಾಂ ಬೀದರ್ ವಿಭಾಗದ ಅಧೀಕ್ಷಕ ಎಂಜಿನಿಯರ್ ಸಚಿನ್ ಹುಂಡೆಕರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.