Thursday, March 19, 2026
Thursday, March 19, 2026
Home Blog Page 1489

ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಶಿಕ್ಷಕರ ನೇಮಕಾತಿ ಬೇಡ- ಹೈಕೋರ್ಟ್

0

ಸರ್ಕಾರಿ ವಸತಿ ಶಾಲೆಗಳಿಗೆ ಟೆಂಡರ್ ಆಹ್ವಾನಿಸಿ ಹೊರಗುತ್ತಿಗೆ ಏಜೆನ್ಸಿಗಳ ಮುಖಾಂತರ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ ಮಾಡಬಾರದು ಎಂದು ಸರ್ಕಾರಕ್ಕೆ ಆದೇಶಿಸಿರುವ ಹೈಕೋರ್ಟ್, ಸಾಧ್ಯವಾದಷ್ಟೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನುಸರಿಸಬೇಕು ಎಂದು ನಿರ್ದೇಶಿಸಿದೆ.

ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಶಿಕ್ಷಕರು ತಮ್ಮ ಹುದ್ದೆ ಕಾಯಂಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶವನ್ನು ನೀಡಿದೆ.

ವಿದ್ಯಾರ್ಥಿಗಳ ಆಸಕ್ತಿ ಮತ್ತು ಅವರ ಶಿಕ್ಷಣಕ್ಕೆ ಸಂಬಂಧಿಸಿದ ಗಂಭೀರ ವಿಚಾರವಾಗಿರುವುದರಿಂದ ಶಿಕ್ಷಕರ ನೇಮಕಾತಿ ಜವಾಬ್ದಾರಿಯನ್ನು ಹೊರಗುತ್ತಿಗೆ ಏಜೆನ್ಸಿಗಳಿಗೆ ನೀಡುವುದು ಮಕ್ಕಳ ದೃಷ್ಟಿಯಿಂದ ಒಳ್ಳೆಯ ಕ್ರಮವಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಸರ್ಕಾರದಿಂದ ಸ್ಥಾಪನೆಯಾಗಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಟೆಂಡರ್ ಕರೆದು ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ವಸತಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಪದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಶಿಕ್ಷಕರ ನೇಮಕ ಮಾಡಿಕೊಳ್ಳುವ ನೀತಿಯಿಂದ ಕಳೆದ 10 ರಿಂದ 15 ವರ್ಷಗಳಲ್ಲಿ ಹೊರಗುತ್ತಿಗೆ ಏಜೆನ್ಸಿಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.

ಸಾವಿಗೆ ಸಾವು ಪರಿಹಾರವಲ್ಲ- ಆರಗ ಜ್ಞಾನೇಂದ್ರ

0

ಸಾವಿಗೆ ಸಾವು ಅಥವಾ ಎನ್‌ಕೌಂಟರ್‌ಗಳು ಪರಿಹಾರವಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಶಿವಮೊಗ್ಗದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ. ಮಂಗಳೂರು ಈಗ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕೊಲೆ ನಡೆದಾಗ ಹಂತಕರನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಅನ್ನಿಸುವುದು ಸಹಜ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ. ಇವೆಲ್ಲವೂ ನಿಲ್ಲಬೇಕು. ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗೆ ಮನವಿ ಮಾಡುತ್ತಿದ್ದೇವೆ. ಬೇಗ ತೀರ್ಪು ಬಂದು ಬಿಸಿ ಇದ್ದಾಗಲೇ ತಟ್ಟಿದರೆ ಮುಂದೆ ಇಂಥಹ ಕೃತ್ಯ ನಡೆಸುವವರಿಗೆ ಎಚ್ಚರಿಕೆ ಗಂಟೆಯಾದಂತಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.

ಸರ್ಕಾರಿ ನೌಕರರ ಮನೆಗಳ ಮೇಲೆ ತ್ರಿವರ್ಣ ರಂಜಿತ ಬಾವುಟ ಹಾರಿಸಲು ಸರ್ಕಾರದ ಸೂಚನೆ

0

ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಕರೆ ನೀಡಿದ್ದಾರೆ.

ರಾಜ್ಯ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಇಡೀ ದೇಶಕ್ಕೆ ಮಾದರಿಯಾಗಲು ರಾಜ್ಯ ಸರ್ಕಾರಿ ನೌಕರರಿಗೆ ಇದೊಂದು ಸದಾವಕಾಶ ಎಂದು ಅವರು ಬಣ್ಣಿಸಿದ್ದಾರೆ.

ರಾಷ್ಟ್ರದೆಲ್ಲೆಡೆಯಂತೆ, ರಾಜ್ಯದಲ್ಲಿಯೂ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಂದರೆ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವನ್ನು ಆಯೋಜಿಸಲಾಗಿದೆ. ಭಾರತ ಸ್ವಾತ್ರಂತ್ಯ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೆ 3 ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಅದರಂತೆ ಈ ಅಭಿಯಾನಕ್ಕೆ ಕರ್ನಾಟದಲ್ಲೂ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದೆ.

ರಾಜ್ಯದಲ್ಲಿ ಒಂದು ಕೋಟಿ ಧ್ವಜಾರೋಹಣ ಮಾಡುವ ಗುರಿ ಹೊಂದಿದೆ. ಸಾರ್ವಜನಿಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಜನರು ಧ್ವಜವನ್ನು ಹಾರಿಸಬಹುದು, ಸೆಲ್ಫಿ ತೆಗೆದುಕೊಳ್ಳಬಹುದು. ಅದನ್ನು https://harghartirang.com ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ.

ಅಕ್ಷರ ಕಲಿಕೆ ಚಿತ್ರರೂಪದಲ್ಲಿದ್ದರೆ ಮಕ್ಕಳಿಗೆ ಸುಲಭ- ಮಂಜುನಾಥ್

0

ಅಕ್ಷರಗಳು ಭಾಷೆಯ ದೃಶ್ಯ ರೂಪ ಗಳಾಗಿದೆ. ಅಕ್ಷರಗಳ ಬರವಣಿಗೆಯನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡುವಾಗ ಚಿತ್ರ ರೂಪದಲ್ಲಿ ಹೇಳಿ ಕೊಟ್ಟಲ್ಲಿ ಮಕ್ಕಳಿಗೆ ಕಷ್ಟವಾಗದೇ ಇಷ್ಟವಾಗುತ್ತದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ಅವರು ಅಭಿಪ್ರಾಯಪಟ್ಟಿದ್ದಾರೆ.

ದಾವಣಗೆರೆ ಸಮೀಪದ ಅವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ, ಪುಟ್ಟ ಮಕ್ಕಳಿಗೆ ಯಾವುದೇ ಭಾಷೆಯ ವರ್ಣಮಾಲೆ ಬರವಣಿಗೆ ಕಲಿಸಿಕೊಡುವಾಗ ಅಕ್ಷರಗಳನ್ನು ಆ ಅಕ್ಷರದ ರೂಪಕ್ಕೆ ಹೋಲಿಕೆಯಾಗುವ ಹಣ್ಣು ತರಕಾರಿ ಪ್ರಾಣಿ ಪಕ್ಷಿ ಅಥವಾ ಯಾವುದೇ ವಸ್ತುಗಳ ರೂಪಕ್ಕೆ ಹೋಲಿಸಿ ಬರೆದು ತೋರಿಸಿದಾಗ ಇಷ್ಟವಾಗುತ್ತದೆ. ಇದರಿಂದ ಅಕ್ಷರ ಅಭ್ಯಾಸದಲ್ಲಿ ಮಕ್ಕಳಿಗೆ ಆಸಕ್ತಿ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳವರು ಅಕ್ಷರದಿಂದ ವಿದ್ಯೆ, ವಿದ್ಯೆಯಿಂದ ಜ್ಞಾನ,ಜ್ಞಾನದಿಂದ ಬದುಕಿನ ಸಾರ್ಥಕತೆ, ಆದ್ದರಿಂದ, ಅಕ್ಷರಾಭ್ಯಾಸವು ಪ್ರಮುಖ ಘಟ್ಟವಾಗಿದೆ ಎಂದು ಹೇಳಿದ್ದಾರೆ.

ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ. ಗುರುಸಿದ್ಧ ಸ್ವಾಮಿ ಮುಖ್ಯ ಅತಿಥಿಗಳಾಗಿ ಮಾತುಗಳನ್ನಾಡಿದರು.

ಸಂಸ್ಥೆಯ ಶಿವಮೂರ್ತಿ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ಛಾಯಾದೇವಿ, ಸಂಸ್ಥೆಯ ನಿರ್ದೇಶಕಿ ಸುಗಲಾ ದೇವಿ, ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದು. ಗುಣಶೀಲ ಪ್ರಾರ್ಥನೆ ಹಾಡಿದರೆ ಸಹಶಿಕ್ಷಕಿ ನೇತ್ರಾವತಿ ಸ್ವಾಗತ ಕೋರಿದರು. ಅನ್ನಪೂರ್ಣ ವಂದನೆ ಸಮರ್ಪಿಸಿದರು.

ಹಿರಿಯ ಪ್ರಾಥಮಿಕ ಶಾಲೆಗಳ ಉನ್ನತೀಕರಣ

0

ರಾಜ್ಯದಲ್ಲಿ ಹೊಸದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ, ಪ್ರೌಢಶಾಲೆಯನ್ನು ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ರಾಜ್ಯ ಸರ್ಕಾರದಿಂದ 95 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ಮಂಜೂರಾತಿ ನೀಡಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಬಾಗಲಕೋಟೆಯ ಎರಡು, ಬಳ್ಳಾರಿಯ 11, ಬೆಂಗಳೂರು ಸೌಥ್ ನ 3 ಶಾಲೆ, ಬೆಳಗಾವಿಯ ಐದು ಶಾಲೆಗಳು, ಬೆಳಗಾವಿ ಚಿಕ್ಕೋಡಿ ವಿಭಾಗದಿಂದ 7, ಬೆಂಗಳೂರು ನಾರ್ಥ್ ನ 2, ಚಾಮರಾಜನಗರ ಒಂದು, ಚಿತ್ರದುರ್ಗ ಒಂದು, ದಾವಣಗೆರೆ ಒಂದು, ಧಾರವಾಡ ಮೂರು, ಗದಗ ಎರಡು, ಹಾವೇರಿಯ 16 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯಾಗಿ ಉನ್ನತೀಕರಿಸಿದೆ.

ಕಲಬುರ್ಗಿ ಜಿಲ್ಲೆಯ ನಾಲ್ಕು, ಕೊಪ್ಪಳದ 6, ಮಂಡ್ಯ 1, ರಾಯಚೂರು 6, ಉತ್ತರ ಕನ್ನಡ ಸಿರಸಿ 1, ವಿಜಯಪುರ 5 ಮತ್ತು ಯಾದಗಿರಿಯ 18 ಶಾಲೆಗಳನ್ನು ಪ್ರೌಢ ಶಾಲೆಯಾಗಿ ಉನ್ನತೀಕರಿಸಲಾಗಿದೆ

ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ಹೆಮ್ಮೆಯ ಸಾಧನೆ

0

ಕಾರ್ಕಳ ಕ್ರಿಯೇಟಿವ್‌ ಪಿ ಯು ಕಾಲೇಜು ಪ್ರಥಮ ವರ್ಷದಲ್ಲಿಯೇ ಅಮೋಘ ಸಾಧನೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂನ್ -2022 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್‌ ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆಗಳಿಸಿದ್ದಾರೆ.

ರಾಜ್ಯದ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ನಡೆಸುವ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪಾಸನ ಬಿ. ಪಿ.ರಾಜ್ಯಕ್ಕೆ 42 ನೇ ರ‍್ಯಾಂಕ್‌ ಹಾಗೂ ಪಶುವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಯಲ್ಲಿ 103 ನೇ ರ‍್ಯಾಂಕ್‌ ಗಳಿಸಿರುತ್ತಾರೆ. ಮಧುಶ್ರೀ ವಿ. ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 72 ನೇ ರ‍್ಯಾಂಕ್‌, ಪಶುವೃದ್ಯಕೀಯ ಪ್ರಾಯೋಗಿಕದಲ್ಲಿ 126 ನೇ ರ‍್ಯಾಂಕ್‌ ಪಡೆದಿರುತ್ತಾರೆ.

ಕಾಲೇಜಿನ ರಾಘವೇಂದ್ರ ತಾಳಿಕೋಟಿ ಪಶುವೈದ್ಯಕೀಯದಲ್ಲಿ ರಾಜ್ಯಕ್ಕೆ 110 ನೇ ರ‍್ಯಾಂಕ್‌, ಬಿ-ಫಾರ್ಮಾ ದಲ್ಲಿ 150 ನೇ ರ‍್ಯಾಂಕ್‌ , ಬಿ.ಎನ್‌.ವೈ.ಎಸ್‌ ವಿಭಾಗದಲ್ಲಿ 165 ನೇ ರ‍್ಯಾಂಕ್‌, ಕೃಷಿ ವಿಜ್ಞಾನದಲ್ಲಿ 186 ನೇ ರ‍್ಯಾಂಕ್‌ ಹಾಗೂ ಇಂಜಿನಿಯರಿಂಗ್ ನಲ್ಲಿ 636 ನೇ ರ‍್ಯಾಂಕ್‌ ಪಡೆದಿರುತ್ತಾರೆ. ಸಾತ್ವಿಕ್‌ ಶ್ರೀಕಾಂತ ಹೆಗಡೆ ಬಿ.ಎನ್‌.ವೈ.ಎಸ್‌ ನಲ್ಲಿ 116 ರ‍್ಯಾಂಕ್‌, ಪಶುವೈದ್ಯಕೀಯದಲ್ಲಿ 222 ನೇ ರ‍್ಯಾಂಕ್‌, ಬಿ.ಫಾರ್ಮಾ ದಲ್ಲಿ 383 ನೇ ರ‍್ಯಾಂಕ್‌ ಪಡೆದಿರುತ್ತಾರೆ.

ಕುಮಾರಿ ಸಿಂಚನ ಕೆ ಎಸ್‌, ಬಿ.ಎನ್‌.ವೈ.ಎಸ್‌ ವಿಭಾಗದಲ್ಲಿ 745 ನೇ ರ‍್ಯಾಂಕ್‌, ಕೃಷಿ ವಿಜ್ಞಾನದಲ್ಲಿ 835 ನೇ ರ‍್ಯಾಂಕ್‌, ಅಗಸ್ತ್ಯ ಸಮ್ಯಕ್‌ ಜ್ಞಾನ್‌ ಕೃಷಿ ವಿಜ್ಞಾನದಲ್ಲಿ 679 ನೇ ರ‍್ಯಾಂಕ್‌, ಬಿ.ಎನ್‌.ವೈ.ಎಸ್‌ ವಿಭಾಗದಲ್ಲಿ 924 ನೇ ರ‍್ಯಾಂಕ್‌ ಹಾಗೂ ಅನ್ವಿನ್ ಬಿ. ಪಿ. ಇಂಜಿನಿಯರಿಂಗ್‌ ವಿಭಾಗದಲ್ಲಿ 681 ನೇ ರ‍್ಯಾಂಕ್‌ ಪಡೆದಿರುತ್ತಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟದ 1 ರಿಂದ 1000 ರ‍್ಯಾಂಕ್‌ ನ ಒಳಗೆ 31 ವಿದ್ಯಾರ್ಥಿಗಳು, 2000 ದ ಒಳಗೆ 66 ವಿದ್ಯಾರ್ಥಿಗಳು ರ‍್ಯಾಂಕ್‌ ನ್ನು ಗಳಿಸಿರುತ್ತಾರೆ. ತನ್ನ ಪ್ರಥಮ ವರ್ಷದ ಸಿ.ಇ.ಟಿ ಫಲಿತಾಂಶದಲ್ಲಿಯೇ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜು ಈ ಅಮೋಘ ಸಾಧನೆ ದಾಖಲಿಸಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲೂ 100 ಶೇಕಡಾ ಫಲಿತಾಂಶ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಿ.ಇ.ಟಿ ಸಂಯೋಜಕರಾದ ಶ್ರೀ ಸುಜಯ್‌ ಬಿ ಟಿ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 10 ಜಿಲ್ಲೆಯಾದ್ಯಂತ ಜಂತುಹುಳು ನಿವಾರಣೆ ದಿನಾಚರಣೆ

0

ಆ.10 ರ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಎಲ್ಲ ಶಾಲೆ, ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಜಂಟುಹುಳು ನಿವಾರಣಾ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಂತುಹುಳು ಸೋಂಕಿನಿಂದಾಗಿ ಮಕ್ಕಳು ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ಹಸಿವಾಗದಿರುವುದು. ನಿಶಕ್ತಿ, ಏಕಾಗ್ರತೆ ಕೊರತೆ, ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ ಮುಂತಾದ ಅಪಾಯಕಾರಿ ಸಮಸ್ಯೆಗಳಿಂದ ಬಳಲುತ್ತಾರೆ.

ಈ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಆಗಸ್ಟ್ 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಆಚರಿಸಲಾಗುತ್ತಿದೆ. ಅಂದು ಎಲ್ಲ ಮಕ್ಕಳಿಗೆ ಉಚಿತವಾಗಿ ಅಲ್ಬೆಂಡಝೋಲ್ ಮಾತ್ರೆಗಳನ್ನು ಕೊಡಲಾಗುತ್ತದೆ. ಅಂದು ಕೊಡದೇ ಬಾಕಿ ಇರುವ ಮಕ್ಕಳಿಗೆ ಆ.17 ರಂದು ನೀಡಲಾಗುತ್ತದೆ. ಅಂದು ಕೂಡ ಶೇ.100 ಪ್ರಗತಿ ಸಾಧಿಸದಿದ್ದರೆ ಮತ್ತೊಂದು ದಿನ ನಿಗದಿಪಡಿಸಲಾಗುತ್ತದೆ. ಜಂತುಹುಳು ನಾಶಕ ಮಾತ್ರೆ ನೀಡುವಲ್ಲಿ ಶೇ.100 ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಮಾತನಾಡಿ, ಜಂತುಹುಳು ನಿವಾರಣೆಯಿಂದ ರಕ್ತಹೀನತೆಯನ್ನು ನಿವಾರಿಸಬಹುದು. ಏಕಾಗ್ರತೆ, ಕಲಿಕಾ ಸಾಮಥ್ರ್ಯ ಹೆಚ್ಚುವುದರೊಂದಿಗೆ ಪರಿಸರದಲ್ಲಿ ಜಂತುಹುಳು ಕಡಿಮೆ ಮಾಡುವ ಮೂಲಕ ಸಮುದಾಯಕ್ಕೆ ಪ್ರಯೋಜನವಾಗುತ್ತದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು.

1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಹಾಗೂ 19 ವರ್ಷದವರೆಗಿನ ಮಕ್ಕಳಿಗೆ ಒಂದು ಜಂತುಹುಳು ನಾಶಕ ಮಾತ್ರೆಯನ್ನು ಜಗಿಯಲು ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 5,50,000 ಮಕ್ಕಳಿಗೆ ಮಾತ್ರೆ ನೀಡುವ ಗುರಿ ನೀಡಲಾಗಿದೆ. ಶಾಲಾ-ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಆ.10 ರಂದು ಮಾತ್ರೆಗಳನ್ನು ನೀಡಲಾಗುವುದು. ಅಂದು ಕೊಡದೇ ಬಾಕಿ ಇರುವ ಮಕ್ಕಳಿಗೆ ಆ.17 ರಂದು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟಿಲ್, ಎಲ್ಲ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ, ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ಬ್ಯಾಂಕ್ ಗಳು ಶೀಘ್ರ ಪೇಪರ್ ಲೆಸ್ ಮಾಡಲು ಚಿಂತನೆ

0

ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿಯಮವೇ ಈಗ ಅವ್ಯವಹಾರಕ್ಕೆ ಆಸ್ಪದವಾಗಿದೆ.

ಅನೇಕ ಬಾರಿ ಪರೀಕ್ಷೆ ಬರೆದರೂ ಅನುತ್ತೀರ್ಣರಾಗಿರುವವರು ಮತ್ತು ಕಂಪ್ಯೂಟರ್ ಜಜ್ಞಾನವಿಲ್ಲದೆ ಪರೀಕ್ಷೆಗೆ ಹಾಜರಾಗಲು ಹೆದರುತ್ತಿರುವ ನೌಕರರು ಅಡ್ಡದಾರಿ ಹಿಡಿದಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ತಲಾ ನೌಕರನಿಂದ 20ರಿಂದ 30 ಸಾವಿರ ರೂ. ಲಂಚ ಪಡೆದು ಪಾಸ್ ಆಗಲು ಸಹಾಯ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು, ನಿಗಮ ಮಂಡಳಿಗಳ ಅಧಿಕಾರಿ ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳುವ ಅವಧಿಯನ್ನು 2022ರ ಡಿ.31ರವರೆಗೂ ಸರ್ಕಾರ ವಿಸ್ತರಿಸಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಿಗಮ-ಮಂಡಳಿ ಸೇರಿ ಕೆಲ ಇಲಾಖೆಗಳ ನೌಕರರು ಅನೇಕ ಬಾರಿ ಪರೀಕ್ಷೆಗೆ ಹಾಜರಾದರೂ, ಉತ್ತೀರ್ಣರಾಗಿಲ್ಲ. ಪ್ರಥಮ ಬಾರಿ ಪರೀಕ್ಷೆಗೆ ಉಚಿತ ಅವಕಾಶ ಇರುತ್ತದೆ. ಬಳಿಕ ಅವಕಾಶಗಳಿಗೆ 359 ರೂ. ಮತ್ತು ಬ್ಯಾಂಕ್ ಸರ್ವೀಸ್ ಶುಲ್ಕವನ್ನು ನೌಕರನೇ ಪಾವತಿಸಬೇಕು.

2021ರ ಅಂತ್ಯದವರೆಗೆ 2.55 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದು, 2.46 ಲಕ್ಷ ನೌಕರರು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 1.65 ಲಕ್ಷ ನೌಕರರ ಮಾತ್ರವೇ ಉತ್ತೀರ್ಣರಾಗಿದ್ದರು. ಉಳಿದ 90 ಸಾವಿರಕ್ಕೂ ಅಧಿಕ ಮಂದಿ ಫೇಲ್ ಆಗಿದ್ದರು. ರಾಜ್ಯದಲ್ಲಿ ಇನ್ನೂ ಅಂದಾಜು 3.50 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಮತ್ತು ನೌಕರರು ಪರೀಕ್ಷೆ ತೆಗೆದುಕೊಳ್ಳಬೇಕಿದೆ. ಹೀಗಾಗಿಯೇ 2022ರ ಅಂತ್ಯದವರೆಗೂ ಅವಧಿ ವಿಸ್ತರಿಸಲಾಗಿದೆ. ಆದರೆ, ಈಗಾಗಲೆ ಹಲವರು ಹಲವು ಸಲ ಪರೀಕ್ಷೆ ತೆಗೆದುಕೊಂಡರೂ ಪಾಸ್ ಆಗಿಲ್ಲ. ಪ್ರತಿ ಬಾರಿಯೂ ಒ ಒ ಮೂಲಕ ಜೇಬಿಗೂ ಕತ್ತರಿ. ಆದ್ದರಿಂದ, ಲಂಚ ಕೊಟ್ಟು ಪಾಸ್ ಆಗೋಣ ಎನ್ನುವ ಮನಃಸ್ಥಿತಿಗೆ ನೌಕರರು ಬಂದಿದ್ದಾರೆ.

ಯಾವುದೇ, ಇಲಾಖೆ ಪರೀಕ್ಷೆಯಾದರೂ ತರಬೇತಿ ಕೊಟ್ಟು ಬಳಿಕ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕೊಡಬೇಕು. ಆದರೆ, ಸಿಎಲ್​ಟಿ ಪರೀಕ್ಷೆ ಬಗ್ಗೆ ಯಾವುದೇ ಟ್ರೖೆನಿಂಗ್ ಕೊಡದೆ ನೇರವಾಗಿ ಹೋಗಿ ಪರೀಕ್ಷೆ ಬರೆಯಬೇಕಿದೆ. ಹೀಗಾಗಿ ಕಂಪ್ಯೂಟರ್ ಜ್ಞಾನ ಇಲ್ಲದ ನೌಕರರು, ಎಷ್ಟು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಗಣಕೀಕೃತ ಪದಗಳಾಗಿರುವುದರಿಂದ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲೂ ಆಗಲ್ಲ.

ಎಂಎಸ್ ವರ್ಡ್​ನಲ್ಲಿ ಫಾಂಟ್ ಸೈಜ್ ಹೆಚ್ಚು ಮಾಡಲು ಯಾವ ಮೆನುಗೆ ಹೋಗಬೇಕು? ಕೀ ಪ್ಯಾಡ್​ನಲ್ಲಿ ಎಷ್ಟು ಅಕ್ಷರಗಳಿವೆ? ಸಿಪಿಯು ಎಂದರೇನು? ಹೀಗೆ 80 ಪ್ರಶ್ನೆಗಳಿಗೆ 90 ನಿಮಿಷದಲ್ಲಿ ಉತ್ತರಿಸಬೇಕು. ಟೆಕ್ನಿಕಲ್ ಕೋರ್ಸ್ ಮಾಡಿರುವವರು ಹಾಗೂ ದಿನನಿತ್ಯ ಕಂಪ್ಯೂಟರ್ ಒಡನಾಟ ಇರುವ ಕ್ಲರಿಕಲ್ ಸಿಬ್ಬಂದಿ ಹೊರತುಪಡಿಸಿ ಬೇರೆಯವರು ಸರಳವಾಗಿ ಉತ್ತರಿಸಲು ಸಾಧ್ಯವಿಲ್ಲ ಎನ್ನುವುದು ಬಹುತೇಕ ಅಧಿಕಾರಿ ಮತ್ತು ನೌಕರರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿ ಅತಿಸಾರ ನಿಯಂತ್ರಣ ಕಾರ್ಯಕ್ರಮ ಯಶಸ್ವಿಗೊಳಿಸಿ-ಡಾ.ಸೆಲ್ವಮಣಿ

0

ಶಿವಮೊಗ್ಗ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳಲ್ಲಿ ಆ.01 ರಿಂದ 15 ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆಚರಿಸಲಾಗುತ್ತಿದೆ.
ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದ್ದಾರೆ.

ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2014-15 ನೇ ಸಾಲಿನಿಂದ ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ ಎಂಬ ಧ್ಯೇಯವಾಕ್ಯದೊಂದಿಗೆ ಈ ಪಾಕ್ಷಿಕ ಆಚರಿಸಲಾಗುತ್ತಿದೆ. ಜನಸಾಮಾನ್ಯರಲ್ಲಿ ಮುಖ್ಯವಾಗಿ ಪೋಷಕರು ಮತ್ತು ಮಕ್ಕಳಲ್ಲಿ ಪರಿಸರ ನೈರ್ಮಲ್ಯ, ಕೈತೊಳೆಯುವ ವಿಧಾನ, ವೈಯಕ್ತಿಕ ಶುಚಿತ್ವದ ಬಗ್ಗೆ ಹಾಗೂ ಅತಿಸಾರ ಬೇಧಿಗೆ ಒಳಗಾದ ಮಕ್ಕಳಿಗೆ ಆರೈಕೆ ಮತ್ತು ಚಿಕಿತ್ಸೆಯನ್ನು ನೀಡುವ ವಿಧಾನದ ಅರಿವು ಮೂಡಿಸಿ, 0 ಯಿಂದ 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು ಈ ಪಾಕ್ಷಿಕ ಆಚರಣೆ ಮುಖ್ಯ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಅತಿಸಾರ ಭೇದಿ ನಿಯಂತ್ರಣ ಕುರಿತು ಸಮುದಾಯದಲ್ಲಿ ವಿಶೇಷವಾಗಿ 5 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರು ಅಥವಾ ಪೋಷಕರಿಗೆ ಅರಿವು ಕಾರರ್ಯಕ್ರಮಗಳನ್ನು ಮಾಡಬೇಕು. ಅತಿಸಾರ ಭೇದಿಯಿಂದ ಮಗು ತುಂಬಾ ಬಳಲಿದ ನಂತರ ಆಸ್ಪತ್ರೆಗೆ ಕರೆತರುವ ಬದಲು ಮೊದಲೇ ಕರೆತರುವಂತೆ, ನಿರ್ಜಲೀಕರಣದಿಂದಾಗುವ ಸಮಸ್ಯೆಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸಬೇಕು ಹಾಗೂ ಪ್ರತಿ ಮನೆಗಳಿಗೆ ಓಆರ್‍ಎಸ್ ಪೊಟ್ಟಣ ನೀಡಿ ಇದರ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ಮತ್ತು ಶಾಲೆಗಳಲ್ಲಿ ಕೈತೊಳೆಯುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರೊಂದಿಗೆ ಅತಿಸಾರ ಬೇಧಿಗೆ ಕಾರಣವಾಗುವ ಅಂಶಗಳ ಬಗ್ಗೆ ತಿಳಿ ಹೇಳಬೇಕು ಎಂದು ಹೇಳಿದ್ದಾರೆ.

ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಅವರು ಮಾತನಾಡಿ, ಅತಿಸಾರ ಭೇದಿ ಬಾರದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಲೆಗಳಲ್ಲಿ, ಅಂಗನವಾಡಿಗಳ ಮೂಲಕ ತಿಳಿಸಲಾಗುವುದು. ಆಗಸ್ಟ್ 1 ರಂದು ಎಲ್ಲ ಶಾಲೆಗಳಲ್ಲಿ ಅತಿಸಾರ ಬೇಧಿ ನಿಯಂತ್ರಣ ಕುರಿತು ಜಾಥಾ ಹಾಗೂ ಆಗಸ್ಟ್ 06 ರಂದು ಎಲ್ಲ ಶಾಲೆಗಳಲ್ಲಿ ಕೈತೊಳೆಯುವ ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಓಆರ್‍ಎಸ್ ಮತ್ತು ಜಿಂಕ್ ಮಾತ್ರೆಗಳ ಕಾರ್ನರ್ ತೆರೆಯಲು ಕ್ರಮ ವಹಿಸಬೇಕು ಎಂದ ಅವರು ಈಗಾಗಲೇ ಆಶಾ, ಅಂಗನವಾಡಿ, ಎಎನ್‍ಎಂ ಕಾರ್ಯಕರ್ತೆಯರಿಗೆ ಓಆರ್‍ಎಸ್ ಬಳಕೆ ಬಗ್ಗೆ ತರಬೇತಿ ನೀಡಿದೆ.ಇವರು ಪ್ರತಿ ಮನೆಗೆ ತೆರಳಿ ಒಂದು ಓಆರ್‍ಎಸ್ ಪೊಟ್ಟಣ ನೀಡುತ್ತಾರೆ. ಅತಿಸಾರ ಭೇದಿ ಇದ್ದವರ ಮನೆಗೆ 2 ಓಆರ್‍ಎಸ್ ಮತ್ತು 16 ಜಿಂಕ್ ಮಾತ್ರೆಗಳನ್ನು ನೀಡಲಾಗುತ್ತದೆ.

ಈ ಹಿಂದೆ ಅತಿಸಾರ ಭೇದಿ ಹೆಚ್ಚು ಪತ್ತೆಯಾದ ಸ್ಥಳಗಳು, ಶುಚಿತ್ವ ಮತ್ತು ನೀರಿನ ವ್ಯವಸ್ಥೆ ಇಲ್ಲದಿರುವ ಪ್ರದೇಶಗಳು ಸೇರಿದಂತೆ ಆದ್ಯತೆ ಪ್ರದೇಶಗಳನ್ನು ಹುಡುಕಿ ಅರಿವು ಮೂಡಿಸಿ, ಓಆರ್‍ಎಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟಿಲ್, ಎಲ್ಲ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ, ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ದಸರಾ ಆಚರಣೆ ಮೈಸೂರಿಗೆ ನವ ಗಜಗಳ ಪಡೆ ಆಗಮಿಸಲಿವೆ

0

ವಿಶ್ವವಿಖ್ಯಾತ ಅದ್ದೂರಿ ದಸರಾ ಆಚರಣೆ ಹಿನ್ನೆಲೆ ಆಗಸ್ಟ್‌ 7 ರಂದು ಮೈಸೂರಿಗೆ ಗಜಪಡೆಗಳು ಆಗಮಿಸಲಿವೆ. ಮೊದಲ ಹಂತದಲ್ಲಿ ಮೈಸೂರಿಗೆ 9 ಅನೆಗಳು ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎರಡನೇ ಹಂತದಲ್ಲಿ 5 ಅಥವಾ 6 ಆನೆಗಳು ಆಗಮಿಸಲಿದೆ. ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದೆ. ಈ ಬಾರಿ 4 ರಿಂದ 5 ಹೊಸ ಆನೆಗಳು ಬರುವ ಸಾಧ್ಯತೆಯಿದೆ.