Thursday, March 19, 2026
Thursday, March 19, 2026
Home Blog Page 1483

ನೋಟೀಸ್ ನೀಡದೇ ಬಾಡಿಗೆದಾರರನ್ನ ಹೊರ ಹಾಕುವಂತಿಲ್ಲ

0

ದೆಹಲಿ ಅಭಿವೃದ್ಧಿ ಪ್ರಾಧಿಕಾರವು ನೋಟಿಸ್‌ ನೀಡದೆಯೇ ಅತಿಕ್ರಮಣದಾರರನ್ನು ಮನೆಗಳಿಂದ ಹೊರಹಾಕುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ತಿಳಿಸಿದೆ.

ಡಿಡಿಎ ಅಧಿಕಾರಿಗಳು ಶಾಕರ್‌ಪುರ ಪ್ರದೇಶದಲ್ಲಿನ ಹಲವು ಮನೆಗಳನ್ನು ನೆಲಸಮ ಮಾಡಿದ್ದರು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್‌, ಡಿಡಿಎ ಅಧಿಕಾರಿಗಳು ಬುಲ್ಡೋಜರ್‌ಗಳನ್ನು ತೆಗೆದುಕೊಂಡು ಹೋಗಿ ಏಕಾಏಕಿ ಮನೆಗಳನ್ನು ಕೆಡವುವಂತಿಲ್ಲ. ಮನೆ ತೆರವುಗೊಳಿಸಲು ನಿವಾಸಿಗಳಿಗೆ ನಿರ್ದಿಷ್ಟ ಕಾಲಾವಕಾಶ ನೀಡಬೇಕು. ಒಂದೊಮ್ಮೆ ಕೆಡವಲೇ ಬೇಕಾದ ಪರಿಸ್ಥಿತಿ ಎದುರಾದರೆ ಜನರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

ದತ್ತಾಂಶ ಸಂರಕ್ಷಣಾ ಮಸೂದೆ ಸಂಸತ್ತಿನಲ್ಲಿಹಿಂಪಡೆಯಲಾಗಿದೆ

0

ಕೇಂದ್ರ ಸರ್ಕಾರವು ಲೋಕಸಭೆಯಿಂದ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಹಿಂತೆಗೆದುಕೊಂಡಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಲೋಕಸಭೆಯಲ್ಲಿ ನಿಲುವಳಿ ಸೂಚನೆಯನ್ನು ಮಂಡಿಸಿದರು.

ಈ ಮಸೂದೆಯು ವೈಯಕ್ತಿಕ ಡೇಟಾದ ರಕ್ಷಣೆಗಾಗಿ ಒಂದು ಕಾನೂನನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು. ಈ ಮಸೂದೆಯನ್ನು 2019 ರ ಡಿಸೆಂಬರ್ 11 ರಂದು ಮಂಡಿಸಲಾಯಿತು.

ಮಸೂದೆಯನ್ನು ಪರಿಶೀಲನೆ ಮತ್ತು ವರದಿಗಾಗಿ ಸದನಗಳ ಜಂಟಿ ಸಮಿತಿಗೆ ಕಳುಹಿಸಲಾಯಿತು ಮತ್ತು ಜಂಟಿ ಸಮಿತಿಯ ವರದಿಯನ್ನು 16.12.2021 ರಂದು ಲೋಕಸಭೆಗೆ ಸಲ್ಲಿಸಲಾಯಿತು.

ನಿರ್ಣಯವನ್ನು ಧ್ವನಿಮತದಲ್ಲಿ ಅಂಗೀಕರಿಸಲಾಯಿತು ಮತ್ತು ಮಸೂದೆಯನ್ನು ಹಿಂತೆಗೆದುಕೊಳ್ಳಲಾಯಿತು.

“ಶಾ”ಣಕ್ಯ ನೊಂದಿಗೆ ರಾಜಾಹುಲಿ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ

0

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಮಿತ್ ಶಾ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಇಬ್ಬರು ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಯಡಿಯೂರಪ್ಪ ಅವರನ್ನು ಭೇಟಿಯಾಗುವ ಕುರಿತು ನಿನ್ನೆಯೇ ಅಮಿತ್ ಶಾ ಅವರು ಸಂದೇಶ ಕಳುಹಿಸಿದ್ದರು ಎನ್ನಲಾಗಿದ್ದು, ಅದರಂತೆ ಇಂದು ಹೋಟೆಲ್ ಗೆ ತೆರಳಿದ್ದ ಯಡಿಯೂರಪ್ಪ, ಅವರೊಂದಿಗೆ ಉಪಹಾರ ಸೇವಿಸುವುದರ ಜೊತೆಗೆ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಶಿಕಾರಿಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ತಮ್ಮ ಕಿರಿಯ ಪುತ್ರ ವಿಜಯೇಂದ್ರ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ಈ ವಿಚಾರಗಳ ಬಗ್ಗೆಯೇ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದಾರೆ

ಇಡಿ ಆದೇಶದನ್ವಯ ನ್ಯಾಷನಲ್ ಹೆರಾಲ್ಡ್ ಕಚೇರಿಗೆ ಮೊಹರುಬೀಗ

0

ಜಾರಿ ನಿರ್ದೇಶನಾಲಯದಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೆಹಲಿಯಲ್ಲಿರುವ ನ್ಯಾಷನಲ್ ಹೆರಾಲ್ಡ್ ಕಚೇರಿಯನ್ನು ಸೀಲ್ ಮಾಡಲಾಗಿದೆ. ಇದಲ್ಲದೇ ಏಜೆನ್ಸಿಯ ಪೂರ್ವಾನುಮತಿಯಿಲ್ಲದೆ ಆವರಣವನ್ನು ತೆರೆಯಬಾರದು ಎಂದು ಸೂಚಿಸಿದೆ.

ದೇಶದಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಠಿಸಿದ್ದ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ, ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಸರಣಿ ವಿಚಾರಣೆಯನ್ನು ಇಡಿ ಅಧಿಕಾರಿಗಳು ನಡೆಸಿದ್ದರು.

ಇದಲ್ಲದೇ ಕಾಂಗ್ರೆಸ್ ನ ಸಾಲು ಸಾಲು ನಾಯಕರನ್ನು ಇಡಿ ವಿಚಾರಣೆ ನಡೆಸಿತ್ತು. ಹೀಗಾಗಿ ಇಡಿ ಕಿರುಕುಳ ವಿರೋಧಿಸಿ ಕಾಂಗ್ರೆಸ್ ನಿಂದ ದೇಶಾದ್ಯಂತ ಪ್ರತಿಭಟನೆ ಕೂಡ ನಡೆಸಲಾಗಿತ್ತು.

ಈ ಬೆನ್ನಲ್ಲೇ ಇದೀಗ ನ್ಯಾಷನಲ್ ಹೆರಾಲ್ಡ್ ಕಚೇರಿಗೆ ಇಡಿ ಅಧಿಕಾರಿಗಳು ಬೀಗಮುದ್ರೆ ಜಡಿದಿದ್ದಾರೆ. ಅಲ್ಲದೇ ತಮ್ಮ ಪೂರ್ವಾನುಮತಿ ಇಲ್ಲದೆ ಕಚೇರಿಯ ಆವರಣವನ್ನು ತೆರೆಯದಂತೆ ಖಡಕ್ ಸೂಚನೆ ನೀಡಿದ್ದಾರೆ

ಮುಖ್ಯ ರಸ್ತೆಗಳ ಸನಿಹ ಅನಧೀಕೃತ ಕಟ್ಟಡಗಳನ್ನ ನಿಷೇಧಿಸಿ ನಿಯಮ ಜಾರಿಗೆ

0

ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಅಕ್ಕಪಕ್ಕ ಅನಧಿಕೃತ ಕಟ್ಟಡಗಳನ್ನು ನಿರ್ಮಿಸದಂತೆ ತಡೆಗಟ್ಟಲು ಸ್ಪಷ್ಟ ನಿಯಮ ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲರು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರುಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಿಸಲಾಗಿದ್ದು, ರಸ್ತೆಯಿಂದ ಕಟ್ಟಡಗಳ ಅಂತರ ನಿಗದಿಪಡಿಸುವುದು ಹಾಗೂ ರಸ್ತೆ ಗಡಿಯನ್ನು ನಿಗದಿಪಡಿಸುವುದು ಅವರ ಜವಾಬ್ದಾರಿಯಾಗಿರುತ್ತದೆ ಎಂದು ಸಿ.ಸಿ. ಪಾಟೀಲರು ವಿವರಿಸಿದ್ದಾರೆ.

ಹೆದ್ದಾರಿಗಳ ಅಕ್ಕಪಕ್ಕ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ಎಷ್ಟು ಪ್ರಮಾಣದ ಅಂತರ ಕಾಯ್ದುಕೊಳ್ಳಬೇಕೆಂಬ ಎಂಬುದರ ಬಗ್ಗೆ ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಈ ನಿಯಮದನ್ವಯ ರಾಜ್ಯ ಹೆದ್ದಾರಿಗಳ ಮಧ್ಯ ಭಾಗದಿಂದ 40 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ಅಥವಾ ಅಂಗಡಿಗಳನ್ನು ನಿರ್ಮಿಸುವಂತಿಲ್ಲ. ಜಿಲ್ಲಾ ಮುಖ್ಯ ರಸ್ತೆಗಳ ಮಧ್ಯಭಾಗದಿಂದ 25 ಮೀಟರ್ ಅಂತರದವರೆಗೆ ಯಾವುದೇ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶವಿಲ್ಲ.
ಸಿಟಿ ಕಾರ್ಪೋರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಪರಿಮಿತಿಗಳಲ್ಲಿ ಈ ಅಂತರವನ್ನು ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿ ಅಂಚಿನಿಂದ ಕನಿಷ್ಠ 6 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಸಿಟಿ ಕಾರ್ಪೋರೇಷನ್ ಪರಿಮಿತಿಯಿಂದ 15 ಕಿ.ಮೀ ದೂರದವರೆಗೆ 12 ಮೀಟರ್ ಅಂತರ ಪಾಲಿಸುವುದು ಕಡ್ಡಾಯವಾಗಿದೆ.

ಈ ನಿಬಂಧನೆಗಳನ್ನು ಪಾಲಿಸುವುದರಿಂದ ರಸ್ತೆಗಳಲ್ಲಿ ಅತಿಕ್ರಮಣ ತಡೆಯಲು ನೆರವಾಗುವುದಲ್ಲದೇ, ಸುಗಮ ಸಂಚಾರಕ್ಕೆ ಅವಕಾಶವಾಗಲಿದೆ. ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಗತಿಯ ಹಾದಿಯಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್

0

ಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಮಲೆನಾಡಿನ ಕೇಂದ್ರವಾದ ಸಿಹಿಮೊಗೆ ಕೊಡುಗೆ ಅಪಾರ, ಪ್ರಕೃತಿದತ್ತವಾದ ಈ ಸುಂದರ ನಗರಿಯಲ್ಲಿ 1912ರಲ್ಲಿ ಸಮಾನ ಮನಸ್ಸಿನ ಸಹಕಾರಿ ದಿಗ್ಗಜರಲ್ಲಿ ಮೇಳೆಯಿಸಿ ಎಸ್‌.ಆರ್. ಬಾಲಕೃಷ್ಣರಾವ್‌, ಇವರ ಅಧ್ಯಕ್ಷತೆಯಲ್ಲಿ ಹುಟ್ಟುಹಾಕಿದ ಸಹಕಾರಿ ಸಂಸ್ಥೆ ಈ ನಮ್ಮ ಹೆಮ್ಮೆಯ “ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿ.,

ಈ ಸಹಕಾರಿ ಸೌಧಕ್ಕೆ ಕಳಸಪ್ರಾಯವಾಗಿ 1974ರಲ್ಲಿ ನಗರದ ಹೃದಯಭಾಗವಾದ ನೆಹರು ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಈ ಬ್ಯಾಂಕಿನ ಶಾಖೆಯನ್ನು ತೆರೆಯಲಾಯಿತು. ಈ ಶಾಖೆಯು ಇಂದು ಬೃಹದಾಕಾರವಾಗಿ ಬೆಳೆದು ಸರ್ವಜನಾಂಗದವರ ಆರ್ಥಿಕ ತೊಂದರೆಗಳನ್ನು ನೀಗಿಸುವಲ್ಲಿ ಗಣನೀಯ ಪಾತ್ರ ವಹಿಸಿದೆ.

ಈ ಬ್ಯಾಂಕು 25 ವರ್ಗಕ್ಕೆ ಬೆಳ್ಳಿ ಹಬ್ಬ, 50 ವರ್ಷಕ್ಕೆ ಗಟ್ಟಿ‌ ಹಾಲಿ, 60 ವರ್ಷಕ್ಕೆ ಮೈಮುಟ್

ಜ್ಯುಬಿಲಿ, 75 ವರ್ಷಕ್ಕೆ ಪ್ಲಾಟಿನಂ ಜ್ಯುಬಿಲಿ ಆಚರಿಸಿಕೊಂಡು ದಿನಾಂಕ 05-03-2012 ಕ್ಕೆ ತನ್ನ 100

ವರ್ಷ ಪೂರೈಸಿ ಶತಮಾನೋತ್ಸವದ ಕಾರ್ಯಕ್ರಮವನ್ನು ದಿನಾಂಕ:01-09-2014 ರಲ್ಲಿ ಸಹಕಾರಿ

ಧುರೀಣರಾಗಿದ್ದ ಎಸ್.ಕೆ. ಮರಿಯಪ್ಪನವರ ಅಧ್ಯಕ್ಷತೆಯಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.
ಯಡಿಯೂರಪ್ಪನವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಬ್ಯಾಂಕಿನ ಶಾಖಾ ಕಛೇರಿಯು ಶಿವಮೊಗ್ಗ ನಗರದ ಅಮೀರ್ ಅಹ್ಮದ್‌ ಸರ್ಕಲ್‌ನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿದ್ದು, ಶಾಖಾ ಕಛೇರಿಗೆಂದು ಸ್ವಂತ ಕಟ್ಟಡ ಹೊಂದುವ ಸಲುವಾಗಿ ಶಿವಮೊಗ್ಗ ನಗರದ ಎಲ್.ಎಲ್.ಆರ್ ರಸ್ತೆಯಲ್ಲಿ ನಿವೇಶನವನ್ನು ಖರೀದಿಸಲಾಗಿರುತ್ತದೆ. ನಿವೇಶನದಲ್ಲಿ ಶಾಖಾ ಕಛೇರಿಗೆಂದು ಕಟ್ಟಡ ಕಟ್ಟಲು ಮಹಾನಗರ ಪಾಲಿಕೆ ವತಿಯಿಂದ ಪರವಾನಿಗೆ ಬಂದಿರುತ್ತದೆ.

ಪ್ರಸ್ತುತ ಶ್ರೀಯುತ ಎಂ.ಉಮಾಶಂಕರ ಉಪಾಧ್ಯರವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಎನ್.ಪಿ.ಎ ಶೇ.6% ಗೆ ತರಲಾಗಿರುತ್ತದೆ. ಈ ಬಾರಿಯೂ ಬ್ಯಾಂಕ್ ರೂ.85 ಲಕ್ಷ ಲಾಭ ಗಳಿಸಿದ್ದು, 2010 ರಿಂದ ಡಿವಿಡೆಂಟ್ ಶೇ.10% ಘೋಷಿಸಲಾಗುತ್ತಿದೆ.

ಕಾಮನ್ ವೆಲ್ತ್ ಕ್ರೀಡಾಕೂಟ22 ಭಾರತಕ್ಕೆ ಕಂಚಿನ ಪದಕ

0

ಭಾರತದ ತೇಜಸ್ವಿನ್ ಶಂಕರ್ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಪುರುಷರ ಹೈಜಂಪ್ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕಾಗಿ ಸ್ಪರ್ಧಿಸುತ್ತಿರುವ ತೇಜಸ್ವಿನ್ ಹೈಜಂಪ್‌ನಲ್ಲಿ 2.22 ಮೀ. ಎತ್ತರ ಜಿಗಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಇನ್ನೂ, ನ್ಯೂಜಿಲೆಂಡ್‌ನ ಹ್ಯಾಮಿಶ್ ಕೆರ್ ಚಿನ್ನ ಗೆದ್ದರೆ,
ಆಸ್ಟ್ರೇಲಿಯಾದ ಬ್ರಾಂಡನ್ ಸ್ಟಾರ್ಕ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಈ ಇಬ್ಬರೂ 2.25 ಮೀಟರ್‌ಗಳಷ್ಟು ಎತ್ತರ ಜಿಗಿದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಹೈಜಂಪ್ ಪದಕ ಗೆದ್ದ ಮೊದಲ ಭಾರತ ಎಂಬ ಹೆಗ್ಗಳಿಕೆಗೆ ಶಂಕರ್ ಪಾತ್ರರಾದರು.

ಅಮೃತ ಮಹೋತ್ಸವ: ಪ್ರಾಚ್ಯಸ್ಥಳ ವೀಕ್ಷಣೆಗೆ ಉಚಿತ ಪ್ರವೇಶ

0

ಭಾರತದ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಕೇಂದ್ರ ಸಂಸ್ಕೃತಿ ಸಚಿವಾಲಯವು ದೇಶಾದ್ಯಂತದ ಎಲ್ಲಾ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕಗಳು ಮತ್ತು ಸ್ಥಳಗಳಿಗೆ ಆಗಸ್ಟ್ 5 ರಿಂದ 15 ರವರೆಗೆ ಉಚಿತ ಪ್ರವೇಶವನ್ನು ಘೋಷಿಸಿದೆ.

ಎಲ್ಲಾ ಟಿಕೆಟ್ ಕೇಂದ್ರ ಸಂರಕ್ಷಿತ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು ಮತ್ತು ಪುರಾತತ್ವ ಸ್ಥಳಗಳಲ್ಲಿ ದೇಶೀಯ ಅಥವಾ ವಿದೇಶಿ ಸಂದರ್ಶಕರಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.
‘ಆಜಾದಿ ಕಾ ಅಮೃತ ಮಹೋತ್ಸವ್’ ಮತ್ತು 75 ನೇ ಐ-ಡೇ ಆಚರಣೆಯ ಭಾಗವಾಗಿ, @ASIGoI 2022 ರ ಆಗಸ್ಟ್ 5 ರಿಂದ 15 ರವರೆಗೆ ದೇಶಾದ್ಯಂತದ ತನ್ನ ಎಲ್ಲಾ ಸಂರಕ್ಷಿತ ಸ್ಮಾರಕಗಳು / ಸ್ಥಳಗಳಿಗೆ ಸಂದರ್ಶಕರು / ಪ್ರವಾಸಿಗರಿಗೆ ಪ್ರವೇಶವನ್ನು ಉಚಿತವಾಗಿ ಮಾಡಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ಆಜಾದಿ ಕಾ ಅಮೃತ್ ಮಹೋತ್ಸವವು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಮತ್ತು ಅದರ ಜನರ ಭವ್ಯ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳನ್ನು ಆಚರಿಸಲು ಮತ್ತು ಸ್ಮರಿಸಲು ಒಂದು ಉಪಕ್ರಮವಾಗಿದೆ.

ಆಜಾದಿ ಕಾ ಅಮೃತ ಮಹೋತ್ಸವದ ಅಧಿಕೃತ ಪ್ರಯಾಣವು ಮಾರ್ಚ್ 12, 2021 ರಂದು ಪ್ರಾರಂಭವಾಯಿತು, ಇದು ಭಾರತದ 75 ನೇ ಸ್ವಾತಂತ್ರ್ಯೋತ್ಸವಕ್ಕೆ 75 ವಾರಗಳ ಕೌಂಟ್ಡೌನ್ ಅನ್ನು ಪ್ರಾರಂಭಿಸಿತು.

ದೆಹಲಿಯಲ್ಲಿ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆ ಪ್ರವೇಶಕ್ಕೆ ಕಠಿಣ ನಿಯಮ

0

ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಹಾಗೂ ಇತರೇ ಉಗ್ರ ಸಂಘಟನೆಗಳಿಂದ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರೀಯ ಗುಪ್ತಚರ ಇಲಾಖೆ (ಐಬಿ) ಎಚ್ಚರಿಸಿದೆ.

ರೋಹಿಂಗ್ಯಾ, ಅಫ್ಘಾನಿಸ್ತಾನ ಹಾಗೂ ಸುಡಾನ್ ದೇಶದ ಹೆಚ್ಚಿನ ಜನರು ವಾಸಿಸುವ ದೆಹಲಿಯಲ್ಲಿ ಹದ್ದಿನಕಣ್ಣು ಇಡುವಂತೆ ಹಾಗೂ ಟಿಫಿನ್ ಬಾಂಬ್, ಸ್ಟಿಕ್ಕಿ ಬಾಂಬ್ ಮತ್ತು ವಿವಿಐಡಿ ಬೆದರಿಕೆಯನ್ನು ಎದುರಿಸಲು ಜಾಗರೂಕರಾಗಿರುವಂತೆ ಹೇಳಿದೆ.

ಲಷ್ಷರ್, ಜೆಇಎಂ ಮತ್ತು ಇತರೆ ಕೆಲವು ಭಯೋತ್ಪಾದನಾ ಸಂಘಟನೆಗಳಿಂದ ದಾಳಿಯ ಅಪಾಯವಿರುವ ಬಗ್ಗೆ ಐಬಿ 10 ಪುಟಗಳ ವರದಿ ನೀಡಿದೆ.

ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಮೇಲಿನ ದಾಳಿ, ಉದಯಪುರ ಹತ್ಯೆ ಹಾಗೂ ಅಮರಾವತಿಗಳಲ್ಲಿ ನಡೆದ ಘಟನೆಗಳನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಕೆಂಪುಕೋಟೆಗೆ ಪ್ರವೇಶಿಸಲು ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆ ಅದು ದೆಹಲಿ ಪೊಲೀಸರಿಗೆ ಸೂಚಿಸಿದೆ.

ಶಿವಮೊಗ್ಗದಲ್ಲಿ ಪೆಸಿಟ್ ವತಿಯಿಂದ ಮಿನಿ ಉದ್ಯೋಗ ಮೇಳ

0

ಶಿವಮೊಗ್ಗದಲ್ಲಿ ಆಗಸ್ಟ್ 6ರಂದು ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ಕಾಲೇಜು ವತಿಯಿಂದ ಈ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.

ಆಗಸ್ಟ್ 6ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮಿನಿ ಉದ್ಯೋಗ ಮೇಳ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ ಕಾಲೇಜು, ಶಿವಮೊಗ್ಗ ಇಲ್ಲಿ ನಡೆಯಲಿದೆ.

ಯಾವುದೇ ಪದವಿ ಹೊಂದಿದ ಅಭ್ಯರ್ಥಿಗಳು ಆನ್‍ಲೈನ್ ಲಿಂಕ್ https://forms.gle/8F4Uw5ieZFWCxnju5 ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಮೇಳದಲ್ಲಿ ಪಾಲ್ಗೊಳ್ಳಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-255294ಗೆ ಕರೆ ಮಾಡಬಹುದಾಗಿದೆ. ಮೊಬೈಲ್ ಸಂಖ್ಯೆ 8217478207.