Thursday, March 19, 2026
Thursday, March 19, 2026
Home Blog Page 1482

ಸ್ಥಳೀಯ ಸಂಸ್ಥೆ ಕಾರ್ಮಿಕರಿಗೆ ವೇತನ ಹೆಚ್ವಳ

0

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕಾರ್ಮಿಕರ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಕನಿಷ್ಠ ವೇತನ ಶೇಕಡ 10 ರಷ್ಟು ಹೆಚ್ಚಳ ಮಾಡಲಾಗಿದೆ.

ಕನಿಷ್ಠ ವೇತನಕ್ಕೆ ತುಟ್ಟಿಭತ್ಯೆ, ಭವಿಷ್ಯ ನಿಧಿ ಶೇಕಡ 12, ಇಎಸ್‌ಐ ಶೇಕಡ 3.5 ರಷ್ಟು ಸೇರಿಸಿ ಕಾರ್ಮಿಕರ ಮಾಸಿಕ ವೇತನ ನಿಗದಿಪಡಿಸಲಾಗುತ್ತದೆ. ಈ ಬಾರಿ ವೇತನ ಪರಿಷ್ಕರಿಸಿ ಕನಿಷ್ಠ ವೇತನ ಶೇಕಡ 10 ರಷ್ಟು ಹೆಚ್ಚಳ ಮಾಡಿದ್ದು ಆಗಸ್ಟ್ ತಿಂಗಳಿನಿಂದಲೇ ಪರಿಷ್ಕೃತ ವೇತನ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

5 ವರ್ಷಕ್ಕೊಮ್ಮೆ ಕನಿಷ್ಠ ವೇತನ ಪರಿಷ್ಕರಣೆ ಮಾಡಲಾಗುತ್ತಿದ್ದು, ಕೊನೆಯದಾಗಿ 2016ರಲ್ಲಿ ವೇತನ ಪರಿಷ್ಕರಿಸಲಾಗಿತ್ತು. ಕಳೆದ ಐದು ವರ್ಷದಲ್ಲಿ ಅನೇಕ ಕಾರಣಗಳಿಂದ ವೇತನ ಪರಿಷ್ಕರಿಸಿರಲಿಲ್ಲ. ಜೀವನ ನಿರ್ವಹಣೆ ವೆಚ್ಚ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಕನಿಷ್ಠ ವೇತನ ಪರಿಷ್ಕರಿಸಬೇಕೆಂದು ಕಾರ್ಮಿಕ ಸಂಘಟನೆಗಳಿಂದ ಒತ್ತಾಯಿಸಲಾಗಿತ್ತು.

ನಕಲಿ ಪಡಿತರ ಚೀಟಿ ಹೊಂದಿದ್ದರೆ ಕಠಿಣ ಕ್ರಮ

0

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈಗ ಪಡಿತರ ಚೀಟಿಗಳ ಬಗ್ಗೆ ಕಠಿಣ ನಿಲುವು ತಳೆಯುತ್ತಿವೆ.

ಈ ಹಿಂದೆಯೂ, ಅನರ್ಹರು ಪಡಿತರ ಚೀಟಿಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಸರ್ಕಾರವು ಅವರನ್ನು ಗುರುತಿಸುತ್ತಿದೆ.ಇಲ್ಲಿಯವರೆಗೆ ನೀಡಿದ ಪಡಿತರವನ್ನ ವಸೂಲು ಮಾಡುತ್ತದೆ.

ಅನರ್ಹರು ಎಂದು ಕಂಡುಬಂದಲ್ಲಿ ಅವರಿಗೆ ಹೆಚ್ಚಿನ ದರದಲ್ಲಿ ಆಹಾರ ಬೆಲೆಗಳನ್ನ ವಿಧಿಸಲಾಗುತ್ತದೆ. ಆದರೆ, ದೇಶಾದ್ಯಂತ ಕೋಲಾಹಲ ಉಂಟಾದಾಗ, ಸರ್ಕಾರವು ಅಂತಹ ಯಾವುದೇ ಉದ್ದೇಶವನ್ನ ಹೊಂದಿಲ್ಲ ಎಂದು ಹೇಳಿಕೆಯನ್ನ ನೀಡಬೇಕಾಯಿತು. ಈಗ ಸರ್ಕಾರ ಮತ್ತೆ ಕಾರ್ಯಪ್ರವೃತ್ತವಾಗಿದೆ. ಅಂತಹ ಜನರ ಹೆಸರುಗಳನ್ನ ಗುರುತಿಸಲಾಗುತ್ತಿದೆ. ಮತ್ತು ಅವರ ಹೆಸರುಗಳನ್ನು ಪಡಿತರ ಚೀಟಿಯಿಂದ ಕಡಿತಗೊಳಿಸಲಾಗುತ್ತಿದೆ.

ಪಡಿತರ ಚೀಟಿಯಿಂದ ತೆಗೆದುಹಾಕುತ್ತಿರುವ ಅನರ್ಹರ ಹೆಸರು ಈಗ ಪಡಿತರ ಚೀಟಿಗೆ ಹೊಸ ಜನರ ಹೆಸರುಗಳನ್ನ ಸೇರಿಸಲು ಸಾಧ್ಯವಿಲ್ಲ.ಇದಕ್ಕಾಗಿ ಹಳೆಯ ಪಡಿತರ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ. ಪಡಿತರ ಚೀಟಿದಾರರು ಅನರ್ಹರು ಎಂದು ಕಂಡುಬಂದವರ ಕಾರ್ಡ್ ಗಳನ್ನ ರದ್ದುಗೊಳಿಸಲಾಗುತ್ತಿದೆ. ಈ ರೀತಿಯಾಗಿ, ಪಡಿತರ ಚೀಟಿಗಳನ್ನ ಹೊಂದಿರದ ಅರ್ಹ ಜನರಿಗೆ ಪಡಿತರವನ್ನ ನೀಡಲಾಗುತ್ತಿದೆ ಮತ್ತು ಅವರ ನಿಜವಾಗಿಯೂ ಅರ್ಹರಾಗಿದ್ದಾರೆ ಮಾತ್ರ.

2011ರ ಜನಗಣತಿಯ ಆಧಾರದ ಮೇಲೆ, ಪಡಿತರ ಚೀಟಿಗಳಲ್ಲಿ ಹೊಸ ಜನರ ಹೆಸರುಗಳನ್ನ ಹೆಚ್ಚಿಸಲಾಗುತ್ತಿದೆ. ಇದಕ್ಕಾಗಿ, ಕಾರ್ಡ್ ಗಳನ್ನ ಪರಿಶೀಲಿಸುವ ಮೂಲಕ ಅನರ್ಹರ ಹೆಸರುಗಳನ್ನ ಕಡಿತಗೊಳಿಸಲಾಗುತ್ತಿದೆ.

2011ರ ಜನಗಣತಿಯ ಬಳಿಕ ಅನೇಕ ನಗರಗಳ ಜನಸಂಖ್ಯೆಯು 2022 ರ ವೇಳೆಗೆ ದ್ವಿಗುಣಗೊಂಡಿದೆ.

ಆ.6.ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ

0

ರಾಷ್ಟ್ರಪತಿ ಚುನಾವಣೆಯ ಬಳಿಕ, ಚುನಾವಣಾ ಆಯೋಗವು ಈಗ ಆಗಸ್ಟ್ 6 ರಂದು ನಿಗದಿಯಾಗಿರುವ 16 ನೇ ಉಪರಾಷ್ಟ್ರಪತಿ ಚುನಾವಣೆಗೆ ಸಜ್ಜಾಗಿದೆ.

ಅಭ್ಯರ್ಥಿಗಳ ನಾಮನಿರ್ದೇಶನ ಪ್ರಕ್ರಿಯೆಯೊಂದಿಗೆ ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಜುಲೈ 5 ರಂದು 16 ನೇ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಯಿತು. ಜುಲೈ 19 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು.

ಜುಲೈ 20ರಂದು ನಾಮಪತ್ರ ಪರಿಶೀಲನೆ ನಡೆದಿತ್ತು. ಹಾಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಈ ಬಾರಿ ಉಪರಾಷ್ಟ್ರಪತಿ ಹುದ್ದೆಗೆ ಎನ್​​ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನ್​​​ಖರ್
ಹಾಗೂ ಯುಪಿಎ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಕಣದಲ್ಲಿದ್ದಾರೆ.

ತಪ್ಪು ಮಾಡದ ವ್ಯಕ್ತಿಯನ್ನ ಬಂಧಿಸಿದರೆ ಪೋಲೀಸರದೇ ತಪ್ಪು- ಹೈಕೋರ್ಟ್

0

ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸಿದರೆ ಅದಕ್ಕೆ ಪೊಲೀಸರೇ ಜವಾಬ್ದಾರರಾಗಿದ್ದು, ವ್ಯಕ್ತಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಯೇ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಒಬ್ಬ ವ್ಯಕ್ತಿ ಮೇಲೆ ಯಾವುದೇ ರೀತಿಯ ಆಪಾದನೆ ವಾರಂಟ್ ಹೊರಡಿಸಿದಾಗ ಜಾಮೀನು ಅಥವಾ ಜಾಮೀನು ರಹಿತವಾಗಿದ್ದರೂ ಬಂಧಿತ ವ್ಯಕ್ತಿ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿರುವುದು ಪೊಲೀಸರ ಜವಾಬ್ದಾರಿ.

ನಿಂಗರಾಜು ಎನ್ ಎಂಬ ಅಮಾಯಕರೊಬ್ಬರನ್ನು ಪೊಲೀಸರು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಇಂತದ್ದೊಂದು ಮಹತ್ವದ ತೀರ್ಪು ಪ್ರಕಟಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಗೊಂದಲ ಆಗಿರುವ ಹಿನ್ನೆಲೆಯಲ್ಲಿ ಅಕ್ರಮ ಬಂಧನಕ್ಕಾಗಿ 5 ಲಕ್ಷ ರೂಪಾಯಿ ಪರಿಹಾರವನ್ನು ಬಂಧಿಸಿದ ಪೊಲೀಸ್ ಅಧಿಕಾರಿಯೇ ನೀಡುವಂತೆ ಸೂಚನೆ ನೀಡಿದೆ

ಉದಯೋನ್ಮುಖ ಆರ್ಥಿಕತೆಯು ವಿವಿಧ ಸವಾಲು ಎದುರಿಸುತ್ತಿದೆ-ಶಕ್ತಿಕಾಂತ್ ದಾಸ್

0

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಆರ್ಥಿಕ ಬೆಳವಣಿಗೆಗಿಂತ ಹಣದುಬ್ಬರವನ್ನು ನಿಯಂತ್ರಿಸಲು ಆದ್ಯತೆ ನೀಡಿದೆ.

ದೇಶದ ಕೇಂದ್ರೀಯ ಬ್ಯಾಂಕ್ ರೆಪೊ ದರಗಳನ್ನು ಶೇ.0.5 ಪ್ರತಿಶತದಷ್ಟು ಹೆಚ್ಚಿಸಿದೆ. ಇದರೊಂದಿಗೆ, ರೆಪೊ ದರಗಳು ಶೇಕಡಾ 5.4 ರ ಮಟ್ಟಕ್ಕೆ ಏರಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ.ವಿಶ್ವದಾದ್ಯಂತ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದ ಬಗ್ಗೆ ಕಳವಳ ವ್ಯಕ್ತಪಡಿಸಿ, ದುರ್ಬಲ ದೇಶೀಯ ಕರೆನ್ಸಿ ಮತ್ತು ವಿದೇಶಿ ನಿಧಿಗಳ ನಿರ್ಗಮನ ಮತ್ತು ಕುಸಿಯುತ್ತಿರುವ ವಿದೇಶಿ ವಿನಿಮಯ ಮೀಸಲು ಸೇರಿದಂತೆ ಉದಯೋನ್ಮುಖ ಆರ್ಥಿಕತೆಯು ವಿವಿಧ ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಶೇಕಡಾ 5.4 ಕ್ಕೆ ಅರ್ಧದಷ್ಟು ಹೆಚ್ಚಿಸಿದೆ. ಹೊಸ ದರಗಳು ತಕ್ಷಣದಿಂದ ಜಾರಿಗೆ ಬರುತ್ತವೆ. ಎಸ್ಡಿಎಫ್ ದರಗಳನ್ನು ಶೇಕಡಾ 4.65 ರಿಂದ ಶೇಕಡಾ 5.15 ಕ್ಕೆ ಹೆಚ್ಚಿಸಲಾಗಿದೆ.

ಎಂಎಸ್‌ಎಫ್ ದರಗಳನ್ನು ಶೇಕಡಾ 5.15 ರಿಂದ ಶೇಕಡಾ 5.65 ಕ್ಕೆ ಹೆಚ್ಚಿಸಲಾಗಿದೆ – ಹಣದುಬ್ಬರವು ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲೂ ಮೇಲೆ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ – 2022-23 ರಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 7.2 ಕ್ಕೆ ಅಂದಾಜಿಸಲಾಗಿದೆ.

ರಾಜ್ಯದ 11 ಇಲಾಖೆಗಳ ನಿರ್ದಿಷ್ಟ ಹುದ್ದೆಗಳ ವೇತನ ಪರಿಷ್ಕರಣೆ

0

ಕರ್ನಾಟಕದಲ್ಲಿ ಇನ್ನೂ ಕೆಲವು ದಿನಗಳ ಕಾಲ ಭಾರಿ ಮಳೆ ಮುಂದುವರಿಯಲಿದೆ.

ಆಗಸ್ಟ್6ರಂದು ಶನಿವಾರ ಅತ್ಯಧಿಕ ಭಾರಿ ಮಳೆ ಆಗುವ ಕಾರಣಕ್ಕೆ ಐದು ಜಿಲ್ಲೆಗಳಿಗೆ ‘ರೆಡ್‌ ಅಲರ್ಟ್’ ಘೋಷಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಗಸ್ಟ್ 6ರಂದು ಕರ್ನಾಟಕ ಕರಾವಳಿಯ ಮತ್ತು ಮಲೆನಾಡಿನ ಉಡುಪಿ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಅಂದು ಈ ಜಿಲ್ಲೆಗಳ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ನಿರಂತರವಾಗಿ ಮಳೆ ಅಬ್ಬರಿಸಲಿದೆ. ಈ ಜಿಲ್ಲೆಗಳಲ್ಲಿ ಒಂದು ದಿನ ಸುಮಾರು 20ಸೆಂ.ಮೀ.ಗಿತಂಲೂ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇನ್ನೂ ಇದೇ ಮೂರು ದಿನದ ಅವಧಿಯಲ್ಲಿ ಬೀದರ್, ಬೆಳಗಾವಿ, ಹಾವೇರಿ, ಗದಗ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಂದೆರಡು ಕಡೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಆಗಾಗ ಸಾಧಾರಣದಿಂದ ಭಾರಿ ಮಳೆ ಬೀಳುವ ಸಂಭವವಿದೆ.

ರಾಜ್ಯದಲ್ಲಿ ಆಗಸ್ಟ್ 07ರವರೆಗೆ ಅತೀ ಭಾರಿ ಮಳೆ ಮುಂದುವರಿಯಲಿದೆ. ಈ ಮೂರು ದಿನ ಕರವಳಿ ಜಿಲ್ಲೆಗಳೂ ಒಳಗೊಂಡಂತೆ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಒಂದು ದಿನ ಹಾಗೂ ಚಿಕ್ಕಮಗಳೂರು, ಕೊಡಗು, ಮಡಿಕೇರಿ, ಶಿವಮೊಗ್ಗ ಜಿಲ್ಲೆಗಳಿಗೆ ಎರಡು ದಿನ ‘ಆರೆಂಜ್‌ ಅಲರ್ಟ್’ ಕೊಡಲಾಗಿದೆ.

ಮಂಕಿಪಾಕ್ಸ್ ಪ್ರಕರಣ:ಕೇಂದ್ರದಲ್ಲಿ ಉನ್ನತಮಟ್ಟದ ಸಭೆ

0

ದೇಶದಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆಯತ್ತಿದೆ.

ಭಾರತದಲ್ಲಿ ಇದುವರೆಗೆ ಒಂದು ಸಾವು ಸೇರಿದಂತೆ 9 ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.
ಮಂಕಿಪಾಕ್ಸ್ ಕುರಿತ ಪರಿಶೀಲನಾ ಸಭೆಯನ್ನು ಆರೋಗ್ಯ ಸೇವೆಗಳ ನಿರ್ದೇಶನಾಲಯ ನಡೆಸುತ್ತಿದೆ. ಇದು ಅಂತರರಾಷ್ಟ್ರೀಯ ಅಥವಾ ರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.

ಬಂಡೆ ಮತ್ತು ಟಗರು ನೋ ಡಿ ಫರೆನ್ಸ್ ಆಲಿಂಗನ

0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಗಿದಪ್ಪಿಕೊಳ್ಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಕಾರ್ಯಕರ್ತರಿಗೆ ನಮ್ಮ ಮಧ್ಯೆ ಮುನಿಸಿಲ್ಲ ಎನ್ನುವ ಸಂದೇಶ ನೀಡಿದರು.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕ್ರಮ ಉದ್ಘಾಟಿಸಿ ಆಸೀನರಾಗಿತ್ತಿದ್ದಂತೆ ಅವರೊಂದಿಗೆ ಸಿದ್ದರಾಮಯ್ಯ ಕೂಡ ಆಸೀನರಾದರು.

ಈ ವೇಳೆ ವೇದಿಕೆಗೆ ಸಿದ್ದರಾಮಯ್ಯ ಅವರು ಕುಳಿತಿದ್ದ ಜಾಗಕ್ಕೆ ಹೋದ ಡಿಕೆಶಿ ಅವರನ್ನು ಕೈ ಹಿಡಿ ಎಬ್ಬಿಸಿ ರಾಮನಗರ ರೇಷ್ಮೆ ಶಾಲನ್ನು ಹಾಕಿ ಸನ್ಮಾನಿಸಿ ಬಿಗಿದಪ್ಪಿಕೊಂಡರು.

ನಂತರ ನೆರೆದಿದ್ದ ಅಪಾರ ಜನಸ್ತೋಮದ ಮುಂದೆ ಉಭಯ ನಾಯಕರು ಪರಸ್ಪರ ಹಿಡಿದುಕೊಂಡಿದ್ದ ಕೈಗಳನ್ನು ಮೇಲಕ್ಕೆತ್ತಿದರು.

ಪಿಎಸ್ ಐ ಪ್ರಕರಣ ಶೀಘ್ರವೇ ಮರುಪರೀಕ್ಷೆ- ಆರಗ ಜ್ಞಾನೇಂದ್ರ

0

ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣದಿಂದ ರದ್ದು ಪಡಿಸಿರುವ ಪರೀಕ್ಷೆಯ ಮರುಪರೀಕ್ಷೆಯನ್ನು ಶೀಘ್ರದಲ್ಲಿಯೇ ನಡೆಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಭೇಟಿಯಾದ ಪಿಎಸ್‌ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳಿಗೆ, ಈ ಕುರಿತು ಭರವಸೆ ನೀಡಿದೆ. ಮರು ಪರೀಕ್ಷೆ ನಡೆಸಲು ಶೀಘ್ರದಲ್ಲಿಯೇ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದೆ. ಈ ಪ್ರಕ್ರಿಯೆ ಮುಗಿದ ನಂತರ ಮರು ಪರೀಕ್ಷೆ ನಡೆಸುವ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು.ರದ್ದಾದ ಪರೀಕ್ಷೆ ಬರೆದಿದ್ದ ಹಾಗೂ ಅಕ್ರಮದಲ್ಲಿ ಭಾಗಿಯಾಗದಿದ್ದ ಎಲ್ಲಾ 56000 ಅಭ್ಯರ್ಥಿಗಳು ಮರು ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಹೊಂದಿದೆ. ಯಾವುದೇ ಆತಂಕ ಬೇಡ ಎಂದು ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.

ಮರು ಪರೀಕ್ಷೆ ನಡೆಸುವುದು ತಡವಾದರೆ, ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಭಯ ಬೇಡ, ಪರೀಕ್ಷೆ ತಯಾರಿ ಮುಂದುವರೆಸಿ, ಎಂದು ಸಚಿವರು ಕಿವಿಮಾತು ಹೇಳಿದ್ದಾರೆ.

ರಾಜ್ಯದ 11 ಇಲಾಖೆಗಳ ನಿರ್ದಿಷ್ಟ ಹುದ್ದೆಗಳ ವೇತನ ಪರಿಷ್ಕರಣೆ

0

ರಾಜ್ಯ ಸರ್ಕಾರ 11 ಇಲಾಖೆಗಳ ನಿರ್ದಿಷ್ಟ ಹುದ್ದೆಗಳ ವೇತನ ಶ್ರೇಣಿ ಪರಿಷ್ಕರಿಸಿ ಆದೇಶ ಹೊರಡಿಸಿದೆ. 6ನೇ ವೇತನ ಆಯೋಗ ಸಲ್ಲಿಸಿದ ವರದಿಯಂತೆ ಅರಣ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ 11 ಅನೇಕ ಇಲಾಖೆಗಳ ನಿರ್ದಿಷ್ಟ ವೃಂದದ ಹುದ್ದೆಗಳ ವೇತನ ಶ್ರೇಣಿಯನ್ನು ಪರಿಷ್ಕರಿಸಲಾಗಿದೆ.

ಆಗಸ್ಟ್ ತಿಂಗಳಿನಿಂದಲೇ ಪರಿಷ್ಕೃತ ವೇತನ ಶ್ರೇಣಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಅರಣ್ಯ ಇಲಾಖೆಯ ಅರಣ್ಯ ರಕ್ಷಕರು, ಉಪವಲಯ ಅರಣ್ಯಾಧಿಕಾರಿಗಳು, ಆನೆ ಕಾವಾಡಿಗರು, ಮಾವುತರ ಹುದ್ದೆಗಳು, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳ ಆಶ್ರಮ ಶಾಲಾ ಶಿಕ್ಷಕರು, ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯ ಇಲಾಖೆಯ ಸಹಾಯಕ ಕ್ಯುರೇಟರ್ ಹಾಗೂ ಸರ್ವೆಯರ್, ಆರ್ಕಿಯಾಲಾಜಿಕ್ ಸಹಾಯಕ ಶಾಸನ ತಜ್ಞರು, ಕ್ಯುರೇಟರ್, ಪ್ರಾಚ್ಯವಸ್ತು ಸಹಾಯಕ ನಿರ್ದೇಶಕರು, ಅಬಕಾರಿ ಇಲಾಖೆಯ ಅಬಕಾರಿ ಉಪ ಅಧೀಕ್ಷಕರು, ಪೊಲೀಸ್ ವಿಧಿ ವಿಜ್ಞಾನ ಪ್ರಯೋಗಾಲಯ ಇಲಾಖೆಯ ಜಮೆದಾರ್, ಪ್ರಯೋಗಾಲಯ ಸಹಾಯಕರು, ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು, ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳು ಇಲಾಖೆಯ ಸಹಾಯಕ ನಿರ್ದೇಶಕರು, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಸಹ ನಿರ್ದೇಶಕರ ಹುದ್ದೆಗಳ ವೇತನ ಶ್ರೇಣಿಯನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.