Thursday, March 19, 2026
Thursday, March 19, 2026
Home Blog Page 1481

ಇನ್ಫೋಸಿಸ್ ನಲ್ಲಿ ನೇಮಕಾತಿ ಅಧಿಸೂಚನೆ

0

ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್​ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಈ ನೇಮಕಾತಿ ಆರಂಭವಾಗಿದೆ. ಡಿಜಿಟಲ್ ಸೇವೆಗಳು ಮತ್ತು ಸಲಹಾ ಕ್ಷೇತ್ರದಲ್ಲಿ ನೇಮಕಾತಿಗೆ ಸಂಸ್ಥೆ ಮುಂದಾಗಿದ್ದು, ಫ್ರೇಶರ್​ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬಿಎಸ್ಸಿ, ಬಿಇ ಮತ್ತು ಬಿಟೆಕ್​ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ಫೋಸಿಸ್​ನ ವ್ಯವಹಾರ ಪ್ರಕ್ರಿಯೆ ನಿರ್ವಹಣಾ ಅಂಗಸಂಸ್ಥೆಯನ್ನು ಬಿಪಿಎಂನಲ್ಲಿ ಈ ನೇಮಕಾತಿ ನಡೆಸಲಾಗುವುದು. ಸಂಸ್ಥೆಯಲ್ಲಿ ಕಸ್ಟಮರ್​ ಸರ್ವಿಸ್​ನಲ್ಲಿ ಕಾರ್ಯ ನಿರ್ವಹಿಸಲು ತಾಂತ್ರಿಕ ಪ್ರಕ್ರಿಯೆ ಕಾರ್ಯನಿರ್ವಾಹಕ ಸೇರಿದಂತೆ ವಿವಿಧ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ: ಅಧಿಸೂಚನೆ ಅನುಸಾರ ಅಧಿಕೃತ ವಿಶ್ವವಿದ್ಯಾಲಯ ಮತ್ತು ಮಂಡಳಿಗಳಿಂದ ಅಭ್ಯರ್ಥಿಗಳು ಬಿಎಎಸ್ಸಿ, ಬಿಇ, ಮತ್ತು ಬಿಟೆಕ್​ ಪದವಿಯನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ

ಅನುಭವ: ಫ್ರೇಶರ್​ ಮತ್ತು ಒಂದು ವರ್ಷ ಸಂಬಂಧಿತ ಕ್ಷೇತ್ರದಲ್ಲಿ ಅನುಭವ

ವಯೋಮಿತಿ: ಇನ್ಫೋಸಿಸ್​ ನಿಯಮದ ಅನುಸಾರ

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಸಂದರ್ಶನ

ಹುದ್ದೆಯ ಜವಾಬ್ದಾರಿ
ಕರೆಗಳು ಮತ್ತು ಇಮೇಲ್‌ಗಳ ಮೂಲಕ ಗ್ರಾಹಕರಿಗೆ ಸಹಾಯ ಮಾಡುವುದು ಪ್ರಧಾನ ಪಾತ್ರವಾಗಿದೆ.
ಗ್ರಾಹಕರ ಆಂತರಿಕ ವಿವಾದಗಳು, ಗ್ರಾಹಕರ ಕಾಳಜಿ ಮತ್ತು ಪರಿಹಾರವನ್ನು ಪಡೆಯಲು ಇಲಾಖೆಗಳ ನಡುವೆ ಕೆಲಸ ಮಾಡುವುದನ್ನು ಅನುಸರಿಸಿ.

ವ್ಯಾಪಾರ ಘಟಕಗಳ ಕರೆಯನ್ನು ನಿರ್ವಹಿಸುವಲ್ಲಿ ತೊಡಗಿಸಿಕೊಳ್ಳಬೇಕು
ಗ್ರಾಹಕರ ಪ್ರಶ್ನೆಗಳನ್ನು ಪರಿಹರಿಸುವುದು.

ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: www.infosys.com

ಅರ್ಜಿ ಸಲ್ಲಿಸುವ ವಿಧಾನ

ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

ಅರ್ಜಿ ಸಲ್ಲಿಸುವವರು ಈ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು

ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಅರಿವು ಮೂಡಿಸಬೇಕು- ವೈಶಾಲಿ

0

ರಸ್ತೆ ಸುರಕ್ಷತಾ ನಿಯಮಗಳ ಸಮರ್ಪಕ ಪಾಲನೆಯಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದ್ದು, ವಿದ್ಯಾರ್ಥಿಗಳು, ಹದಿಹರೆಯದ ಯುವಜನತೆಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾರಿಗೆ ಇಲಾಖೆ ವತಿಯಿಂದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಸ್ತೆ ಸುರಕ್ಷತಾ ಆಂದೋಲನ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಅವರು, ಪ್ರೌಢಶಾಲಾ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತಾದ ಮಾಹಿತಿ ರವಾನೆ ಮಾಡುವ ಉದ್ದೇಶದಿಂದ ಈ ಕಾರ್ಯಾಗಾರ ನಡೆಸುತ್ತಿರುವುದು ಉತ್ತಮ ಕಾರ್ಯ ಎಂದರು.

ವಾಹನ ಚಾಲನೆ ವೇಳೆ ಎಲ್ಲರೂ ಜಾಗೃತರಾಗಿರಬೇಕು. ಹಾಗೂ ಎಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚಾಲನೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಅಪಘಾತಗಳು ಸಂಭವಿಸಿ ಹೆಚ್ಚಿನ ಸಾವು ನೋವುಗಳಾಗುತ್ತಿವೆ. ನಾವು ಎಚ್ಚರವಾಗಿದ್ದರೂ ಎದುರಿನ ಚಾಲಕ ಸರಿಯಿಲ್ಲದಿದ್ದರೂ ಅಪಘಾತವಾಗುವ ಸಂಭವ ಹೆಚ್ಚಿರುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು.

ಕೆಲ ಕಾಲೇಜು ವಿದ್ಯಾರ್ಥಿಗಳು, ಹದಿವಯಸ್ಸಿನ ಮಕ್ಕಳು ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು, ಟ್ರಾಫಿಕ್ ಸೂಚನೆಗಳನ್ನು ಉಲ್ಲಂಘಿಸುವುದು ಸೇರಿದಂತೆ ನಿಯಮಗಳನ್ನು ಪಾಲಿಸದೇ ಅಪಘಾತಕ್ಕೀಡಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ತಪ್ಪಿಸಲು ಪ್ರೌಢಶಾಲಾ ಹಂತದಿಂದಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ, ಶಾಲಾ ಬಸ್ಸುಗಳ ಚಾಲಕರಿಗೆ ಸಂಚಾರಿ ನಿಯಮಗಳ ಕುರಿತು ಮಾಹಿತಿ ರವಾನೆ ಮಾಡುತ್ತಿರುವುದು ಉತ್ತಮ ಪ್ರಯತ್ನವಾಗಿದೆ. ಈ ರೀತಿಯ ಪ್ರಯತ್ನದಿಂದಾಗಿ ಸುರಕ್ಷಿತ ನಿಯಮಗಳ ಶಿಸ್ತುಬದ್ದ ಪಾಲನೆ ಸಾಧ್ಯವಾಗಲಿದೆ ಎಂದು ಆಶಿಸಿದರು.

ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್ ಮಾತನಾಡಿ, ನಿಮ್ಮ ರಸ್ತೆ ಸುರಕ್ಷತಾ ಕ್ರಮಗಳು ನಿಮ್ಮ ಕುಟುಂಬದ ರಕ್ಷಣೆ ಮಾಡುತ್ತದೆ. ಆದ್ದರಿಂದ ಯಾರೇ ಸ್ವಯಂ ಚಾಲಿತ ವಾಹನ ಓಡಿಸುವವರು ತಮ್ಮ ಅಮೂಲ್ಯ ಜೀವದ ಬಗ್ಗೆ ಹಾಗೂ ರಸ್ತೆಯಲ್ಲಿರುವವರ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಮಕ್ಕಳನ್ನು ಸರಿದಾರಿಗೆ ತರುವ ಶಕ್ತಿ ಶಾಲಾ ಶಿಕ್ಷಕರಲ್ಲಿದೆ. ಆದ್ದರಿಂದ ಇಂದು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತು ಈ ಕಾರ್ಯಾಗಾರ ನಡೆಸಲಾಗುತ್ತಿದೆ.

ಶಿಕ್ಷಕರು ಬೋಧನೆಯೊಂದಿಗೆ ಈ ನಿಯಮಗಳ ಕುರಿತು ಸಹ ಮಕ್ಕಳಿಗೆ ತಿಳಿ ಹೇಳಿದಲ್ಲಿ ಬಹಳ ಅನುಕೂಲವಾಗಲಿದೆ.

ಶಾಲಾ ಶಿಕ್ಷಕರು ಮಕ್ಕಳು ಶಾಲೆಗೆ ಬೈಕ್‍ಗಳನ್ನು ತರುವುದಕ್ಕೆ ಕಡಿವಾಣ ಹಾಕಬೇಕು. ಹಾಗೂ ಪೋಷಕರಿಂದ ತಮ್ಮ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಓಡಿಸಲು ಬಿಡುವುದಿಲ್ಲವೆಂಬ ಲಿಖಿತ ಒಪ್ಪಿಗೆ ಪತ್ರ ಪಡೆಯಬೇಕು. ಸ್ವಯಂಚಾಲಿತ ವಾಹನ ಓಡಿಸುವ ಯಾವುದೇ ತಮ್ಮ ಮತ್ತು ಇತರರ ಅಮೂಲ್ಯ ಜೀವನ ಕಾಪಾಡಲು ವಾಹನ ಚಾಲನೆ ಪರವಾನಗಿ, ವಿಮೆ, ಅರ್ಹತಾ ಪತ್ರ, ವಾಯು ಮಾಲಿನ್ಯ ಪತ್ರವನ್ನು ಕಡ್ಡಾಯವಾಗಿ ತಮ್ಮ ಜೊತೆ ಹೊಂದಿರಬೇಕು. ಹೀಗೆ ಹೊಂದಿರುವವರು ಮಾತ್ರ ಅರ್ಹ ವಾಹನ ಚಾಲಕರು. ತಮ್ಮ ವಾಹನ ಚಾಲನೆ ದಾಖಲೆಗಳನ್ನು ಸಕಾಲದಲ್ಲಿ ಊರ್ಜಿತಗೊಳಿಸಬೇಕು. ಹಾಗೂ ಎಲ್ಲ ರೀತಿಯ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ತಾಳ್ಮೆಯಿಂದ ವಾಹನ ಓಡಿಸಬೇಕೆಂದು ಕಿವಿಮಾತು ಹೇಳಿದರು.

ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯುವಜನ ಉಪ ಸಮನ್ವಯಾಧಿಕಾರಿ ಉಮಾ ಮಹೇಶ್ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಆರ್ಟಿಓ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಶಿವಮೊಗ್ಗ, ಭದ್ರಾವತಿ ತಾಲ್ಲೂಕಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಜರಿದ್ದರು.

ಪರಿಶಿಷ್ಟಜಾತಿ ವಿದ್ಯಾರ್ಥಿಗಳಿಗೆ ಬಹುಮಾನ ಪಡೆಯಲು ಅರ್ಜಿ ಆಹ್ವಾನ

0

2022 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ/ಸ್ನಾತಕೋತ್ತರ ಪದವಿ/ಇಂಜಿನಿಯರಿಂಗ್/ವೆಟರ್ನರಿ/ಅಗ್ರಿಕಲ್ಚರ್/ಮೆಡಿಕಲ್ ಕೋರ್ಸುಗಳಲ್ಲಿ ಎಲ್ಲಾ ಸೆಮಿಸ್ಟರ್ ಗಳಲ್ಲಿ ಹೆಚ್ಚು ಅಂಕ ಗಳಿಸಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯೊಂದಿಗೆ ಎಸ್ ಎಸ್‍ಎಲ್‍ಸಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ವಿದ್ಯಾಭ್ಯಾಸ ಮಾಡಿದ ಕೋರ್ಸಿಗೆ ಸಂಬಂಧಿಸಿದ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ರಾಷ್ಟ್ರೀಕೃತ ಬ್ಯಾಂಕಿನ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಈ ದಾಖಲೆಗಳ ಪ್ರತಿಗಳನ್ನು ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರಿಂದ ದೃಢೀಕರಣ ಮಾಡಿಸಿಕೊಂಡು, ಕಾಲೇಜು ಸಂಸ್ಥೆಗಳು ಯಾವ ತಾಲ್ಲೂಕಿಗೆ ಸಂಬಂಧಿಸಿರುತ್ತವೆಯೋ ಆಯಾ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಮುದ್ದಾಂ ಭೇಟಿ ಮೂಲ ದಾಖಲೆಗಳ ಪರಿಶೀಲನೆಯೊಂದಿಗೆ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್-1 ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-249241 ನ್ನು ಸಂಪರ್ಕಿಸುವುದು.

ಆಸಕ್ತ ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್‍ಸೈಟ್ www.sw.kar.nic.in ನಲ್ಲಿ ದಿ:31/10/2022 ರೊಳಗೆ ಅರ್ಜಿ ಸಲ್ಲಿಸುವುದು.

ರಾಜ್ಯದಲ್ಲಿ ವ್ಯಾಪಕ ಮಳೆ: ಜಲಾಶಯಗಳು ಭರ್ತಿಯಾಗುತ್ತಿವೆ

0

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿಯೇ ಇದೆ. ಪರಿಣಾಮ ಈಗಾಗಲೇ ಭರ್ತಿಯಾಗಿರುವ ಕೆಲವು ಜಲಾಶಯಗಳಲ್ಲಿ ಹೆಚ್ಚಿನ ಒಳಹರಿವು ಬರುತ್ತಿದ್ದು ಇದೀಗ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ ಎಂದು ವರದಿಯಾಗಿದೆ.

ಜಲ, ಜೀವನದ ಅತಿ ಪ್ರಮುಖ ಅವಶ್ಯಕತೆಗಳಲ್ಲಿ ಹೇಗೆ ಒಂದಾಗಿದೆಯೋ ಅದೇ ರೀತಿಯಲ್ಲಿ ಕೃಷಿ ಚಟುವಟಿಕೆಗಳಲ್ಲೂ ನೀರು ಅತಿ ಪ್ರಮುಖ. ರಾಜ್ಯವು ಕೃಷಿ ಪ್ರಧಾನವಾಗಿದ್ದು ರೈತಾಪಿ ವರ್ಗದವರಿಗೆ ಜಲದ ಅವಶ್ಯಕತೆ ಇದ್ದೇ ಇರುತ್ತದೆ. ಅಲ್ಲದೆ ರಾಜ್ಯಾದ್ಯಂತ ಜನರಿಗೆ ಕುಡಿಯುವ ನೀರು ಒದಗಿಸುವುದು ಸಹ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಜಲಾಶಯಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ ಕರ್ನಾಟಕದಲ್ಲಿ ವಿವಿಧೋದ್ದೇಶಗಳ ಹಲವು ಜಲಾಶಯಗಳಿದ್ದು ಅದರಿಂದ ಕುಡಿಯುವ ನೀರು, ನೀರಾವರಿ ಯೋಜನೆಗಳು ಹಾಗೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದ ಪ್ರಸಿದ್ಧ ಜಲಾಶಯವಾದ ಕೆಆರ್‌‌‌‌ಎಸ್ ಸೇರಿದಂತೆ ಕೆಲವು ಜಲಾಶಯಗಳು ಭರ್ತಿಯಾಗಿವೆ.

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಜೋರಾಗುತ್ತಿದೆ. ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಬಾರಿ ಹಲವೆಡೆ ವಾಡಿಕೆಗಿಂತ ಜಾಸ್ತಿ ಮಳೆ ಬಿದ್ದಿದ್ದು ಜಲಾಶಯಗಳಿಗೆ ಸಾಕಷ್ಟು ನೀರು ಹರಿದುಬರುತ್ತಿದೆ.

ಕೆಲ ದಿನಗಳಿಂದ ಮಳೆ ಕಡಿಮೆಯಾದಂತೆ ತೋರಿದ್ದರೂ ಕಳೆದ ಎರಡು ದಿನಗಳಲ್ಲಿ ರಾಜ್ಯದ ಹಲವೆಡೆ ಮತ್ತೆ ಮಳೆ ಸುರಿದಿದ್ದು ಇದರ ಪರಿಣಾಮದಿಂದಾಗಿ ಮತ್ತೆ ನೀರಿನ ಹರಿವು ಏರುವ ಪಥದಲ್ಲಿದೆ. ರಾಜ್ಯದ ವಿವಿಧ ಜಲಾಶಯಗಳು ಮತ್ತೆ ತುಂಬಲು ಪ್ರಾರಂಭಿಸಿದ್ದು ಈಗಾಗಲೇ ಕೆಲವು ಜಲಾಶಯಗಳು ಭರ್ತಿಯಾಗಿವೆ.

ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ. (04-08-2022 ರಂತೆ)

ತುಂಗಭದ್ರಾ ಜಲಾಶಯ – Tungabhadra Dam
ಗರಿಷ್ಠ ನೀರಿನ ಮಟ್ಟ – 1,633 ಅಡಿ
ಒಟ್ಟು ಸಾಮರ್ಥ್ಯ- 105.79 ಟಿಎಂಸಿ
ಇಂದಿನ ನೀರಿನ ಮಟ್ಟ – 100.91 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 98.32 ಟಿಎಂಸಿ
ಇಂದಿನ ಒಳಹರಿವು – 69984 ಕ್ಯೂಸೆಕ್ಸ್​
ಇಂದಿನ ಹೊರಹರಿವು – 70887 ಕ್ಯೂಸೆಕ್ಸ್​

ಕಬಿನಿ ಜಲಾಶಯ-Kabini Dam
ಗರಿಷ್ಠ ನೀರಿನ ಮಟ್ಟ – 2,284 ಅಡಿ
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಮಟ್ಟ – 19.17 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 17.41 ಟಿಎಂಸಿ
ಇಂದಿನ ಒಳಹರಿವು – 13012 ಕ್ಯೂಸೆಕ್ಸ್​
ಇಂದಿನ ಹೊರಹರಿವು – 16500 ಕ್ಯೂಸೆಕ್ಸ್​

ಕೆಆರ್​ಎಸ್​ ಜಲಾಶಯ – KRS Dam
ಗರಿಷ್ಠ ಮಟ್ಟ – 124.80 ಅಡಿ
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಇಂದಿನ ನೀರಿನ ಮಟ್ಟ – 49.40 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 37.56 ಟಿಎಂಸಿ
ಇಂದಿನ ಒಳಹರಿವು – 67712 ಕ್ಯೂಸೆಕ್ಸ್​
ಇಂದಿನ ಹೊರಹರಿವು – 68150 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ-Almatti Dam
ಗರಿಷ್ಠ ಮಟ್ಟ – 1,704 ಅಡಿ
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 108.35 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 107.57 ಟಿಎಂಸಿ
ಇಂದಿನ ಒಳಹರಿವು- 14828 ಕ್ಯೂಸೆಕ್ಸ್​
ಇಂದಿನ ಹೊರಹರಿವು – 18451 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ-Ghataprabha Dam
ಗರಿಷ್ಠ ಮಟ್ಟ – 662.91 ಮೀಟರ್
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 39.11 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 49.31 ಟಿಎಂಸಿ
ಇಂದಿನ ಒಳಹರಿವು – 4742 ಕ್ಯೂಸೆಕ್ಸ್​​
ಇಂದಿನ ಹೊರಹರಿವು – 165 ಕ್ಯೂಸೆಕ್ಸ್

ಭದ್ರಾ ಜಲಾಶಯ-Bhadra Dam
ಗರಿಷ್ಠ ಮಟ್ಟ – 657.73 ಮೀಟರ್
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 69.53 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 68.19 ಟಿಎಂಸಿ
ಇಂದಿನ ಒಳಹರಿವು- 5660 ಕ್ಯೂಸೆಕ್ಸ್​
ಇಂದಿನ ಹೊರಹರಿವು – 4768 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ-Malaprabha Dam
ಗರಿಷ್ಠ ಮಟ್ಟ-633.80 ಮೀಟರ್
ಒಟ್ಟು ಸಾಮರ್ಥ್ಯ – 37.73 ಟಿಎಂಸಿ
ಇಂದಿನ ನೀರಿನ ಮಟ್ಟ – 26.20 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 32.47 ಟಿಎಂಸಿ
ಇಂದಿನ ಒಳಹರಿವು – 5225 ಕ್ಯೂಸೆಕ್ಸ್​
ಇಂದಿನ ಹೊರಹರಿವು – 294 ಕ್ಯೂಸೆಕ್ಸ್​

ವರಾಹಿ ಜಲಾಶಯ-Varahi Dam
ಗರಿಷ್ಠ ಮಟ್ಟ – 594.36 ಮೀಟರ್
​ಒಟ್ಟು ಸಾಮರ್ಥ್ಯ – 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 15.20 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 13.29 ಟಿಎಂಸಿ
ಇಂದಿನ ಒಳಹರಿವು – 750 ಕ್ಯೂಸೆಕ್ಸ್​
ಇಂದಿನ ಹೊರಹರಿವು – 0 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ-Hemavathi Dam
ಗರಿಷ್ಠ ಮಟ್ಟ – 2,922 ಅಡಿ​
ಒಟ್ಟು ಸಾಮರ್ಥ್ಯ – 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 37.10 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 34.63 ಟಿಎಂಸಿ
ಇಂದಿನ ಒಳಹರಿವು – 14112 ಕ್ಯೂಸೆಕ್ಸ್​​
ಇಂದಿನ ಹೊರಹರಿವು – 14000 ಕ್ಯೂಸೆಕ್ಸ್​

ಹಾರಂಗಿ ಜಲಾಶಯ-Harangi Dam
ಗರಿಷ್ಠ ಮಟ್ಟ – 871.38 ಮೀಟರ್
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 7.72 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 7.67 ಟಿಎಂಸಿ
ಇಂದಿನ ಒಳಹರಿವು – 2147 ಕ್ಯೂಸೆಕ್ಸ್​
ಇಂದಿನ ಹೊರಹರಿವು – 6034 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ-Linganamakki Dam
ಗರಿಷ್ಠ ಮಟ್ಟ – 554.44 ಮೀಟರ್
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 96.42 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 120.1 ಟಿಎಂಸಿ
ಇಂದಿನ ಒಳಹರಿವು – 8215 ಕ್ಯೂಸೆಕ್ಸ್​
ಇಂದಿನ ಹೊರಹರಿವು – 4318 ಕ್ಯೂಸೆಕ್ಸ್

ನಾರಾಯಣಪುರ ಜಲಾಶಯ- Narayanapura Dam
ಗರಿಷ್ಠ ಮಟ್ಟ – 492.25 ಮೀಟರ್
ಒಟ್ಟು ಸಾಮರ್ಥ್ಯ – 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 31.45 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ – 29.82 ಟಿಎಂಸಿ
ಇಂದಿನ ಒಳಹರಿವು – 29458 ಕ್ಯೂಸೆಕ್ಸ್​
ಇಂದಿನ ಹೊರಹರಿವು – 31559 ಕ್ಯೂಸೆಕ್ಸ್

ಸೂಪಾ ಜಲಾಶಯ-Supa Dam
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ – 145.33 ಟಿಎಂಸಿ
ಇಂದಿನ ನೀರಿನ ಮಟ್ಟ- 67.59 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 101.2 ಟಿಎಂಸಿ
ಇಂದಿನ ಒಳಹರಿವು – 5284 ಕ್ಯೂಸೆಕ್ಸ್​
ಇಂದಿನ ಹೊರಹರಿವು – 2497 ಕ್ಯೂಸೆಕ್ಸ್​

ಶಿವಮೊಗ್ಗ ನಗರ ಬಿಜೆಪಿವತಿಯಿಂದ ತಿರಂಗ ಬೈಕ್ ರ್ಯಾಲಿ

0

ಸ್ವಾತಂತ್ರೃದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಗರ ಬಿಜೆಪಿ ಘಟಕವು ಆ.8ರಂದು ತಿರಂಗ ಬೈಕ್ ರ‌್ಯಾಲಿ ಹಾಗೂ ಆ.15ರಂದು 289 ಮತಗಟ್ಟೆಗಳ ಪೇಜ್ ಪ್ರಮುಖರ ಸಭೆ ಏರ್ಪಡಿಸಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎನ್.ಕೆ. ಜಗದೀಶ್ ತಿಳಿಸಿದರು.

ಆ.8ರ ಬೆಳಗ್ಗೆ 8ಕ್ಕೆ ಎಂಆರ್‌ಎಸ್ ವೃತ್ತದಲ್ಲಿ ಆರಂಭವಾಗುವ ತಿರಂಗ ಯಾತ್ರೆ ಬೈಕ್ ರ‌್ಯಾಲಿ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ವಿನೋಬನಗರದ ಪೊಲೀಸ್ ಚೌಕಿಯಲ್ಲಿ ಮುಕ್ತಾಯಗೊಳ್ಳಲಿದೆ.

ಆ.15ರ ಬೆಳಗ್ಗೆ 11ಕ್ಕೆ ಗೋಪಿವೃತ್ತದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವಮೊಗ್ಗ ವಿಧಾನಸಭೆ ವ್ಯಾಪ್ತಿಯ ಎಲ್ಲ 289 ಬೂತ್‌ಗಳ ಪೇಜ್ ಪ್ರಮುಖರ ಸಭೆ ಏರ್ಪಡಿಸಲಾಗಿದೆ. ಸುಮಾರು ಎಂಟು ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುಮಾರು 3,500 ಬೈಕ್ ಸವಾರರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ.13 ರಿಂದ 15 ರವರೆಗೆ ಪ್ರತಿ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯಿಂದ ಎಲ್ಲ ಮನೆಗಳಿಗೆ ಉಚಿತವಾಗಿ ಧ್ವಜ ವಿತರಣೆ ಮಾಡಲಾಗುತ್ತದೆ. ವಾರ್ಡ್ ಹಂತದಲ್ಲಿ ಬಿಜೆಪಿ ಕಾರ್ಯಕರ್ತರು ಈ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ ಎಂದು ಎನ್.ಕೆ.ಜಗದೀಶ್ ತಿಳಿಸಿದರು.

ಶಾಸಕ ಕೆ.ಎಸ್. ಈಶ್ವರಪ್ಪ, ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸದಸ್ಯ ಎಸ್.ಜ್ಞಾನೇಶ್ವರ್, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ನಗರ ಬಿಜೆಪಿ ಘಟಕದ ಪದಾಧಿಕಾರಿಗಳಾದ ಮೋಹನ್ ರೆಡ್ಡಿ, ಸಂತೋಷ್ ಬಳ್ಳೇಕೆರೆ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಸ್ವಾವಲಂಬನೆಗೆ ಮುನ್ನುಡಿ ಕೈಮಗ್ಗ ಉದ್ಯಮ

0

ಕೈಮಗ್ಗ ಉದ್ಯಮವು ಭಾರತದ ಅತಿದೊಡ್ಡ ಅಸಂಘಟಿತ ಆರ್ಥಿಕ ಚಟುವಟಿಕೆಗಳಲ್ಲಿ ಒಂದಾಗಿದ್ದು, ತನ್ನ ವಿಶಿಷ್ಟವಾದ ನೇಯ್ಗೆ ಮತ್ತು ಮುದ್ರಣ ಶೈಲಿಗೆ ಜಾಗತಿಕವಾಗಿ ಪ್ರಸಿದ್ಧಿ ಗಳಿಸಿ ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಅತ್ಯುತ್ತಮ ಸಂಕೇತವಾಗಿದೆ.

ಭಾರತದ ಗ್ರಾಮೀಣ ಮತ್ತು ಅರೆ ಗ್ರಾಮೀಣ ಭಾಗಗಳಲ್ಲಿ ಜೀವನೋಪಾಯಕ್ಕೆ ಪ್ರಮುಖ ಮೂಲವಾಗಿರುವ ಕೈಮಗ್ಗ ಕ್ಷೇತ್ರದ ನೇಕಾರರಲ್ಲಿ ಶೇ. 72ಕ್ಕಿಂತ ಹೆಚ್ಚು ಮಹಿಳೆಯರನ್ನ ಒಳಗೊಂಡಿದೆ.

1905 ರ ಆಗಸ್ಟ್ 7 ರಂದು ಪ್ರಾರಂಭವಾದ ಸ್ವದೇಶಿ ಆಂದೋಲನವು ಸ್ಥಳೀಯ ಕೈಗಾರಿಕೆಗಳು ಮತ್ತು ಪ್ರಮುಖವಾಗಿ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸುವುದಾಗಿತ್ತು. ಸ್ವದೇಶಿ ಚಳುವಳಿಯು ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಾಮಾಜಿಕ ಹಾಗು ದೇಶೀಯ ಜೀವನದ ಸಂಪೂರ್ಣ ವಿನ್ಯಾಸವನ್ನು ಬದಲಿಸಿದ ಆಂದೋಲನವಾಗಿದೆ.

ಸ್ವದೇಶಿ ಚಳುವಳಿಯ ಪ್ರಮುಖ ಅಂಶಗಳೆಂದರೆ ಸ್ವಾವಲಂಬನೆ ಅಥವಾ ಆತ್ಮಶಕ್ತಿಗೆ ಒತ್ತು ನೀಡುವುದು. ರಾಷ್ಟ್ರೀಯ ಘನತೆ, ಗೌರವ ಮತ್ತು ಆತ್ಮವಿಶ್ವಾಸ ಪ್ರತಿಪಾದನೆಯೊಂದಿಗೆ ಆರ್ಥಿಕ ಕ್ಷೇತ್ರದಲ್ಲಿ ಸ್ಥಳೀಯ ಕೈಗಾರಿಕೆ ಮತ್ತು ಇತರೆ ಉದ್ಯಮಗಳನ್ನು ಬೆಂಬಲಿಸಿ ಪೋಷಿಸುವುದಾಗಿತ್ತು.

ಸ್ಥಳೀಯ ಕೈಗಾರಿಕೆಗಳನ್ನು ಮತ್ತು ನಿರ್ಧಿಷ್ಟವಾಗಿ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸುವ ಮೂಲ ಉದ್ದೇಶದಿಂದ ಪ್ರಾರಂಭಗೊಂಡ ಸ್ವದೇಶಿ ಚಳುವಳಿಯ ದಿನದ ವಿಷೇಶತೆಗಾಗಿ ಭಾರತ ಸರ್ಕಾರವು 2015 ರಂದು ಪ್ರತಿ ವರ್ಷ ಆಗಸ್ಟ್ 7 ನ್ನು “ರಾಷ್ಟ್ರೀಯ ಕೈಮಗ್ಗ ದಿನ”ವನ್ನಾಗಿ ಆಚರಿಸಲು ನಿರ್ಧರಿಸಿದೆ. ಕೈಮಗ್ಗ ದಿನದ ವಿಶೇಷತೆಯೆಂದರೆ, ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ದಿಗೆ ಕೈಮಗ್ಗದ ಕೊಡುಗೆ ಮತ್ತು ಪರಂಪರೆಯನ್ನು ಸಂರಕ್ಷಿಸಿ ಈ ಉದ್ಯಮದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಬ್ರಿಟಿಷರು ಭಾರತಲ್ಲಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತಮ್ಮ ದೇಶದಲ್ಲಿನ ಗಿರಣಿಗಳಲ್ಲಿ ಬಟ್ಟೆಗಳನ್ನು ತಯಾರಿಸಿ ಪುನಃ ಅವುಗಳನ್ನು ಭಾರತದಲ್ಲಿ ಮಾರಾಟ ಮಾಡುವುದು, ಭಾರತೀಯ ಸ್ಥಳೀಯ ಆರ್ಥಿಕತೆಗೆ ವಿನಾಶಕಾರಿಯಾಗಿತ್ತು. ಈ ವಸಾಹತುಶಾಹಿ ಪದ್ದತಿಯ ವಿರುದ್ದ ರೂಪುಗೊಂಡ ಸ್ವದೇಶಿ ಚಳುವಳಿಯು ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸಿ ದೇಶೀಯ ಬಟ್ಟೆಗಳ ಉತ್ಪಾದನೆಗೆ ಪ್ರೋತ್ಸಾಹಿಸಿತು. ಇದರಿಂದಾಗಿ ಕೈಮಗ್ಗ ಉದ್ಯಮವು ಸ್ವದೇಶಿ ಚಳುವಳಿಯಲ್ಲಿ ಒಂದು ಮಹತ್ವದ ಘಟನೆಯಾಗಿದೆ.

ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಕೌಶಲ್ಯವನ್ನು ರವಾನಿಸಲ್ಪಡುತ್ತ, ಶತಮಾನಗಳು ಕಳೆದರು ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿರುವ ಭಾರತೀಯ ಕೈಮಗ್ಗ ಉದ್ಯಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದಕ್ಕೆ ಸ್ಪಷ್ಟತೆಯೆಂಬಂತೆ ಮೊಹೆಂಜೋದಾರೊ ನ ಉತ್ಖನನ ಸಮಯದಲ್ಲಿ ದೊರೆತ ನೇಯ್ದ ಮತ್ತು ಬಣ್ಣ ಬಣ್ಣದ ಹತ್ತಿ ಬಟ್ಟೆಗಳು, ಈಜಿಪ್ಟ್ ನಾಗರಿಕತೆಯಲ್ಲಿ ಪತ್ತೆಯಾದ ಭಾರತೀಯ ಕೈಮಗ್ಗ ತುಣುಕುಗಳು.

ಕಡಿಮೆ ಬಂಡವಾಳದೊಂದಿಗೆ ಕನಿಷ್ಟ ಶಕ್ತಿಯನ್ನು ಬಳಸಿಕೊಂಡು ಪರಿಸರ ಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುವ ಕೈಮಗ್ಗ ಕ್ಷೇತ್ರವು ಇಂದು ದೇಶದ ಅತಿ ದೊಡ್ಡ ಗುಡಿ ಕೈಗಾರಿಕೆಯಾಗಿದ್ದು, 2019-20 ರ ಕೈಮಗ್ಗ ಗಣತಿಯ ಪ್ರಕಾರ, ಸುಮಾರು 23.77 ಲಕ್ಷ ಮಗ್ಗಗಳನ್ನು ಹೊಂದಿದ್ದು ನೇರವಾಗಿ ಮತ್ತು ಪರೋಕ್ಷವಾಗಿ 3 ಮಿಲಿಯನ್‍ಗಿಂತಲು ಹೆಚ್ಚು ಜನರನ್ನೊಳಗೊಂಡಿದೆ ಮತ್ತು ಇವರಲ್ಲಿ ಶೇ.72 ಕ್ಕಿಂತಲೂ ಹೆಚ್ಚು ಮಹಿಳೆಯರೆ ಇದ್ದಾರೆ ಹಾಗು ಗ್ರಾಮೀಣ ಪ್ರದೇಶದಲ್ಲಿ ಕೃಷಿ ನಂತರದ ಎರಡನೇ ಅತಿ ದೊಡ್ಡ ಉದ್ಯೋಗ ಒದಗಿಸುವ ಸಂಸ್ಥೆಯಾಯಾಗಿದೆ.

ಭಾರತದ ಕೈಮಗ್ಗದಿಂದ ಉತ್ಪಾದನೆಯಾಗುವ ಸೀರಗಳು, ಕುರ್ತಾ, ಶಾಲು, ಫ್ಯಾಷನ್ ಪರಿಕರಗಳು, ಇತ್ಯಾದಿಗಳಂತಹ ಸಾಂಪ್ರದಾಯಿಕ ಉತ್ಪನ್ನಗಳು ಇಂದಿಗು ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ದೇಶದಲ್ಲಿ ತಯಾರಾಗುವ ಸಾವಿರಾರು ಕೈಮಗ್ಗ ಉತ್ಪನ್ನಗಳಲ್ಲಿ ಇಲ್ಲಿಯವರೆಗೆ 65 ಕೈಮಗ್ಗ ಉತ್ಪನ್ನಗಳು ಜಾಗತಿಕ ಸೂಚಕ( ಜಿ. ಐ ಟ್ಯಾಗ್) ಮತ್ತು 6 ಜಿ. ಐ. ಲೋಗೊ ಗಳನ್ನು ಪಡೆದುಕೊಂಡಿವೆ. ಇದರಲ್ಲಿ ಕರ್ನಾಟಕದ ಕೈಮಗ್ಗ ಉತ್ಪನ್ನಗಳಾದ ”ನವಲಗುಂದ ದುರ್ರೀಸ್, ಬಾಗಲಕೊಟೆಯ ಇಳಕಲ್ ಸೀರೆಗಳು, ಚಿತ್ರದುರ್ಗದ ಮೊಳಕಾಲ್ಮೂರು ಸೀರೆಗಳು, ಉಡುಪಿ ಸೀರೆಗಳು, ಗುಳೇದಗುಡ್ಡ ಖಾನ, ಮತ್ತು ಮೈಸೂರು ಸಿಲ್ಕ್” ಜಿ. ಐ. ಟ್ಯಾಗ್ ಪಡೆದುಕೊಂಡಿದ್ದು “ಮೈಸೂರು ಸಿಲ್ಕ್ ಮತ್ತು ನವಲಗುಂದ ದುರ್ರೀಸ್” ಜಿ. ಐ. ನೊಂದಾಯಿತ ಕೈಮಗ್ಗ ಉತ್ಪನ್ನಗಳ ಲೋಗೊ ಪಡೆದುಕೋಡಿದೆ.

ಭಾರತವು ಇಂದು ಪ್ರಪಂಚದ 20ಕ್ಕೂ ಹೆಚ್ಚಿನ ದೇಶಗಳಿಗೆ ಕೈಮಗ್ಗ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು ಇವುಗಳಲ್ಲಿ ಅಮೇರಿಕ, ಯು.ಕೆ., ಸ್ಪೇನ್, ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ದಕ್ಷಿಣ ಆಫ್ರಿಕ, ನೆದಲ್ರ್ಯಾಂಡ್ ಮತ್ತು ಯು.ಎ.ಇ. ದೇಶಗಳು ಭಾರತೀಯ ಕೈಮಗ್ಗ ಉತ್ಪನ್ನಗಳ ಅತಿದೊಡ್ಡ ಆಮದುದಾರ ದೇಶಗಳಾಗಿವೆ. ಈ ದೇಶಗಳಿಗೆ ರಫ್ತಾಗುವ ಪ್ರಮುಖ ಕೈಮಗ್ಗ ಉತ್ಪನ್ನಗಳೆಂದರೆ ಮ್ಯಾಟ್ಸ್, ರಗ್ಗುಗಳು, ಬೆಡ್‍ಶೀಟ್‍ಗಳು, ಕುಶನ್ ಕವರ್‍ಗಳು ಮತು ಇತರ ಕೈಮಗ್ಗ ಉತ್ಪನ್ನಗಳು.

ಇಂದು ಭಾರತ ಸರ್ಕಾರವು ಕೈಮಗ್ಗ ಮತ್ತು ಕರಕುಶಲ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿ, ನೇಕಾರರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ದಿಪಡಿಸಲು ಜವಳಿ ಸಚಿವಾಲಯದಡಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದಾಗಿ ನೇಕಾರರಿಗೆ ವಿಮಾ ಸೌಲಭ್ಯ, ಅವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆಯ ವೇದಿಕೆ ಒದಗುಸುವಿಕೆ ಮುಂತಾದ ಅನೂಕೂಲಗಳಾಗಿವೆ. ಆಗಸ್ಟ್ 7, 2015 ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು, ಉನ್ನತ ಮಟ್ಟದ ಕೈಮಗ್ಗ ಉತ್ಪನ್ನಗಳ ಬ್ರಾಂಡಿಂಗ್‍ಗಾಗಿ “ಇಂಡಿಯಾ ಹ್ಯಾಂಡ್ಲ್ಯೂಂ” ಬ್ರಾಂಡ್ ಅನ್ನು ಪ್ರಾರಂಭಿಸಲಾಗಿದೆ. ಕೈಮಗ್ಗ ನೇಕಾರರ ಅತ್ಯುತ್ತಮ ಕುಶಲಕರ್ಮಿ ಕೊಡುಗೆ ಮತ್ತು ಕೈಮಗ್ಗ ನೇಯ್ಗೆಯ ಅಭಿವೃದ್ದಿಯನ್ನು ಗುರುತಿಸಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಆದಾಗ್ಯೂ, ಇಂದು ಜವಳಿ ಉದ್ಯಮದಲ್ಲಿ ಬೆಳೆಯುತ್ತಿರುವ ನಾವಿನ್ಯ ತಂತ್ರಜ್ಞಾನದ ಪ್ರಗತಿಯೊಂದಿಗೆ ಕೈಮಗ್ಗದ ಜನಪ್ರಿಯತೆಯು ಗಣನೀಯವಾಗಿ ಕುಸಿಯುತ್ತಿದೆ. ಇದಕ್ಕೆ ಉದಾಹರಣೆಯೆಂದರೆ, ಸುಮಾರು ಎರಡು ದಶಕಗಳ ಹಿಂದೆ ಒಂದು ಮನೆಯಲ್ಲಿ ಐದು ಕೈಮಗ್ಗಗಳಿದ್ದರೆ ಇಂದು ಐದು ಮನೆಗಳಲ್ಲಿ ಒಂದು ಕೈಮಗ್ಗವನ್ನು ಕಾಣುವುದು ಅದೃಷ್ಟವಾಗಿದೆ. ಇದಕ್ಕೆ ಕಾರಣಗಳೆಂದರೆ ಮೂಲ ಸೌಕರ್ಯಗಳ ಕೊರತೆ, ಹಳೆಯ ಮಗ್ಗಗಳು, ಪ್ರಮುಖ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗದಿರುವುದು ಮತ್ತು ಪ್ರಚಾರದ ಕೊರತೆ.ಸ್ವಾತಂತ್ರ್ಯ ನಂತರದ ಶತಮಾನದ ಇತಿಹಾಸದೊಂದಿಗೆ ಸಾವಿರಾರು ವರ್ಷಗಳ ಪ್ರಾಚೀನ ವೈಭವೋಪೂರಿತ ಸಾಂಸ್ಕøತಿಕ ಪರಂಪರೆಯ ಚರಿತ್ರೆಯನ್ನು ಹೊಂದಿರುವ ಕೈಮಗ್ಗ ಉದ್ಯಮದ ವಿಶಿಷ್ಟ ಕರಕುಶಲತೆಯನ್ನು ಉಳಿಸಿಕೊಳ್ಳುವುದು ಇಂದು ಪ್ರತಿಯೊಬ್ಬರ ಕತ್ರ್ಯವ್ಯ ಮತ್ತು ಜವಾಬ್ದಾರಿಯಾಗಿದೆ.
ಸ್ವಾತಂತ್ರ್ಯ ನಂತರದ ಶತಮಾನದ ಇತಿಹಾಸದೊಂದಿಗೆ ಸಾವಿರಾರು ವರ್ಷಗಳ ಪ್ರಾಚೀನ ವೈಭವೋಪೂರಿತ ಸಾಂಸ್ಕøತಿಕ ಪರಂಪರೆಯ ಚರಿತ್ರೆಯನ್ನು ಹೊಂದಿರುವ ಕೈಮಗ್ಗ ಉದ್ಯಮದ ವಿಶಿಷ್ಟ ಕರಕುಶಲತೆಯನ್ನು ಉಳಿಸಿಕೊಳ್ಳುವುದು ಇಂದು ಪ್ರತಿಯೊಬ್ಬರ ಕತ್ರ್ಯವ್ಯ ಮತ್ತು ಜವಾಬ್ದಾರಿಯಾಗಿದೆ.

ರಿತೇಶ್ ನಾಯ್ಕ
ಅಪ್ರೆಂಟಿಸ್, ವಾರ್ತಾ ಇಲಾಖೆ, ಶಿವಮೊಗ್ಗ

ದ್ವಿತೀಯ ಪಿಯು ಪೂರಕ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

0

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ 12-08-2022 ರಿಂದ 25-08-2022ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದೆ. ಆಗಸ್ಟ್ 2022ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿನ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾ ದಿನದಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಸೆಕ್ಷನ್ 144 ರಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಇನ್ನೂ ಪರೀಕ್ಷಾ ಕೇಂದ್ರದ ಸುತ್ತ-ಮುತ್ತಲು ಪರೀಕ್ಷಾ ಅವಧಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿಗಳನ್ನು ಹೊರತುಪಡಿಸಿ, ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಬಳಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾ

ಭಾರತದಿಂದ ಕ್ರೀಡಾ ಪ್ರೀತಿ ಪ್ರೋತ್ಸಾಹ ಸಿಕ್ಕಿದೆ ಎಂದ ಪಾಕ್ ಚಿನ್ನದ ಹುಡುಗ

0

ಪ್ರಸಕ್ತ ಸಾಲಿನ ಕಾಮನ್‌ವೆಲ್ತ್‌ ಗೇಮ್ಸ್‌ (ಸಿಡಬ್ಲ್ಯುಜಿ)ನಲ್ಲಿ ಪಾಕಿಸ್ತಾನಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟ ಮುಹಮ್ಮದ್‌ ನೂಹ್‌ ಭಟ್‌ ಅವರು ಭಾರತದಿಂದ ಸಿಕ್ಕಿರುವ ಪ್ರೀತಿ ಮತ್ತು ಬೆಂಬಲದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದರೊಂದಿಗೆ ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದಿತ್ತ ಮೀರಾಬಾಯಿ ಚಾನು ಅವರು ಭಾರತಕ್ಕಷ್ಟೇ ಅಲ್ಲ ನೆರೆಯ ರಾಷ್ಟ್ರಕ್ಕೂ ನೆಚ್ಚಿನ ಕ್ರೀಡಾಪಟು ಎಂಬುದು ಸಾಬೀತಾಗಿದೆ. ನೂಹ್‌ ಭಟ್‌ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಅಭಿನಂದಿಸಿದ ಮೊದಲಿಗರ ಪೈಕಿ ಚಾನು ಇದ್ದಿದ್ದು ಉಭಯ ರಾಷ್ಟ್ರದ ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಭಾರತದ ಸೂಪರ್‌ಸ್ಟಾರ್‌ ಮೀರಾಬಾಯಿ ಚಾನು ಅವರ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮೀರಾಬಾಯಿ ಚಾನು ಅವರು ಅಭಿನಂದಿಸಿದ್ದನ್ನು ಮತ್ತು ತಮ್ಮ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದನ್ನು ‘ಇದೊಂದು ಅತ್ಯದ್ಭುತ ಕ್ಷಣ’ ಎಂದು ನೂಹ್‌ ಭಟ್‌ ಬಣ್ಣಿಸಿದ್ದಾರೆ.

ಪುರುಷರ 109+ ಕೆ.ಜಿ ವಿಭಾಗದಲ್ಲಿ ದಾಖಲೆಯ 405 ಕೆ.ಜಿ ಎತ್ತುವ ಮೂಲಕ 24 ವರ್ಷದ ನೂಹ್‌ ಭಟ್‌ ಚಿನ್ನದ ಪದಕದ ಸಾಧನೆ ಮಾಡಿದರು.

‘ಮೀರಾಬಾಯಿ ನಮಗೆ ಸ್ಫೂರ್ತಿ. ದಕ್ಷಿಣ ಏಷ್ಯಾದ ರಾಷ್ಟ್ರಗಳಿಂದ ಬಂದಿರುವ ನಾವು ಒಲಿಂಪಿಕ್ಸ್‌ ಪದಕಗಳನ್ನು ಗೆಲ್ಲಬಲ್ಲೆವು ಎಂಬುದನ್ನು ತೋರಿಸಿಕೊಟ್ಟವರು. ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಅವರು ಬೆಳ್ಳಿ ಗೆದ್ದಿದ್ದು ನಮಗೆ ಅಪಾರ ಹೆಮ್ಮೆಯನ್ನುಂಟು ಮಾಡಿದೆ ಎಂದು ನೂಹ್‌ ಭಟ್‌ ಹೇಳಿದ್ದಾರೆ.

ಜಿಲ್ಲಾಮಟ್ಟದ ಕ್ವಿಜ್ ಸ್ಪರ್ಧೆ:ಕಾರ್ಕಳ ಕ್ರಿಯೇಟಿವ್ ಕಾಲೇಜ್ ಪ್ರಥಮ ಸ್ಥಾನ

0

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕ್ರಿಯೇಟಿವ್‌ ಕಾಲೇಜ್‌ ಗೆ ಪ್ರಥಮ ಸ್ಥಾನ
75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಮಂತ್‌ ಶೆಟ್ಟಿ ಮತ್ತು ನಿಹಾರ್‌ ಭಟ್‌ ಪ್ರಥಮ ಸ್ಥಾನ ಗಳಿಸಿದ್ದಾರೆ. ʼಆಜಾದಿ ಕಾ ಅಮೃತ್‌ ಮಹೋತ್ಸವ್‌ʼ ನ ಸುಸಂದರ್ಭದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು, ಮಲ್ಪೆಯಲ್ಲಿ ದಿನಾಂಕ : 03-08-2022 ರಂದು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿಗಳಾದ ಸುಮಂತ್‌ ಶೆಟ್ಟಿ ಮತ್ತು ನಿಹಾರ್‌ ಭಟ್‌ ಇವರನ್ನು ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆ ವರ್ಷಾಧಾರೆ: ಅಣಶಿ ಘಾಟ್ ಸಂಚಾರ ಅಸ್ತವ್ಯಸ್ತ

0

ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಣಶಿ ಘಾಟ್‌ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ಆದೇಶ ಹೊರಡಿಸಿದ್ದಾರೆ.

ಮಳೆ ಆರ್ಭಟಕ್ಕೆ ಗುಡ್ಡ ಕುಸಿತದ ಆತಂಕ ಸೃಷ್ಠಿಯಾಗಿದ್ದು, ಕಾರವಾರ-ಜೋಯಿಡಾ ಸಂಚಾರ ಮಾರ್ಗದಲ್ಲಿ ಎರಡು ವಾರ ಭಾರೀ ವಾಹನಗಳಿಗೆ ಸಂಚಾರಕ್ಕೆ ನಿಷೇಧಿಸಲಾಗಿದೆ.
ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.