ಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಮಲೆನಾಡಿನ ಕೇಂದ್ರವಾದ ಸಿಹಿಮೊಗೆ ಕೊಡುಗೆ ಅಪಾರ, ಪ್ರಕೃತಿದತ್ತವಾದ ಈ ಸುಂದರ ನಗರಿಯಲ್ಲಿ 1912ರಲ್ಲಿ ಸಮಾನ ಮನಸ್ಸಿನ ಸಹಕಾರಿ ದಿಗ್ಗಜರಲ್ಲಿ ಮೇಳೆಯಿಸಿ ಎಸ್.ಆರ್. ಬಾಲಕೃಷ್ಣರಾವ್, ಇವರ ಅಧ್ಯಕ್ಷತೆಯಲ್ಲಿ ಹುಟ್ಟುಹಾಕಿದ ಸಹಕಾರಿ ಸಂಸ್ಥೆ ಈ ನಮ್ಮ ಹೆಮ್ಮೆಯ “ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿ.,
ಈ ಸಹಕಾರಿ ಸೌಧಕ್ಕೆ ಕಳಸಪ್ರಾಯವಾಗಿ 1974ರಲ್ಲಿ ನಗರದ ಹೃದಯಭಾಗವಾದ ನೆಹರು ರಸ್ತೆಯ ಶಿವಪ್ಪನಾಯಕ ಮಾರುಕಟ್ಟೆಯಲ್ಲಿ ಈ ಬ್ಯಾಂಕಿನ ಶಾಖೆಯನ್ನು ತೆರೆಯಲಾಯಿತು. ಈ ಶಾಖೆಯು ಇಂದು ಬೃಹದಾಕಾರವಾಗಿ ಬೆಳೆದು ಸರ್ವಜನಾಂಗದವರ ಆರ್ಥಿಕ ತೊಂದರೆಗಳನ್ನು ನೀಗಿಸುವಲ್ಲಿ ಗಣನೀಯ ಪಾತ್ರ ವಹಿಸಿದೆ.
ಈ ಬ್ಯಾಂಕು 25 ವರ್ಗಕ್ಕೆ ಬೆಳ್ಳಿ ಹಬ್ಬ, 50 ವರ್ಷಕ್ಕೆ ಗಟ್ಟಿ ಹಾಲಿ, 60 ವರ್ಷಕ್ಕೆ ಮೈಮುಟ್
ಜ್ಯುಬಿಲಿ, 75 ವರ್ಷಕ್ಕೆ ಪ್ಲಾಟಿನಂ ಜ್ಯುಬಿಲಿ ಆಚರಿಸಿಕೊಂಡು ದಿನಾಂಕ 05-03-2012 ಕ್ಕೆ ತನ್ನ 100
ವರ್ಷ ಪೂರೈಸಿ ಶತಮಾನೋತ್ಸವದ ಕಾರ್ಯಕ್ರಮವನ್ನು ದಿನಾಂಕ:01-09-2014 ರಲ್ಲಿ ಸಹಕಾರಿ
ಧುರೀಣರಾಗಿದ್ದ ಎಸ್.ಕೆ. ಮರಿಯಪ್ಪನವರ ಅಧ್ಯಕ್ಷತೆಯಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.
ಯಡಿಯೂರಪ್ಪನವರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಬ್ಯಾಂಕಿನ ಶಾಖಾ ಕಛೇರಿಯು ಶಿವಮೊಗ್ಗ ನಗರದ ಅಮೀರ್ ಅಹ್ಮದ್ ಸರ್ಕಲ್‌ನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿದ್ದು, ಶಾಖಾ ಕಛೇರಿಗೆಂದು ಸ್ವಂತ ಕಟ್ಟಡ ಹೊಂದುವ ಸಲುವಾಗಿ ಶಿವಮೊಗ್ಗ ನಗರದ ಎಲ್.ಎಲ್.ಆರ್ ರಸ್ತೆಯಲ್ಲಿ ನಿವೇಶನವನ್ನು ಖರೀದಿಸಲಾಗಿರುತ್ತದೆ. ನಿವೇಶನದಲ್ಲಿ ಶಾಖಾ ಕಛೇರಿಗೆಂದು ಕಟ್ಟಡ ಕಟ್ಟಲು ಮಹಾನಗರ ಪಾಲಿಕೆ ವತಿಯಿಂದ ಪರವಾನಿಗೆ ಬಂದಿರುತ್ತದೆ.
ಪ್ರಸ್ತುತ ಶ್ರೀಯುತ ಎಂ.ಉಮಾಶಂಕರ ಉಪಾಧ್ಯರವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಎನ್.ಪಿ.ಎ ಶೇ.6% ಗೆ ತರಲಾಗಿರುತ್ತದೆ. ಈ ಬಾರಿಯೂ ಬ್ಯಾಂಕ್ ರೂ.85 ಲಕ್ಷ ಲಾಭ ಗಳಿಸಿದ್ದು, 2010 ರಿಂದ ಡಿವಿಡೆಂಟ್ ಶೇ.10% ಘೋಷಿಸಲಾಗುತ್ತಿದೆ.