Sunday, March 22, 2026
Sunday, March 22, 2026
Home Blog Page 1443

ಕರ್ನಾಟಕ ವಿವಿ ಸಿಬ್ಬಂದಿ ಪಿಂಚಣಿಗಾಗಿ ₹18.12 ಕೋಟಿ ಹೆಚ್ಚುವರಿ ಬಿಡುಗಡೆ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ 2022-23ನೇ ಸಾಲಿನ ಪಿಂಚಣಿಗಾಗಿ 18.12 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದಲೇ ಸಾಕಷ್ಟು ಹಣವನ್ನು ಕ್ರೋಡೀಕರಿಸಿದೆ. ಎದುರಾಗಿದ್ದ ಅಲ್ಪ ಪ್ರಮಾಣದ ಕೊರತೆಯನ್ನು ಹೆಚ್ಚುವರಿ ಅನುದಾನದ ಮೂಲಕ ಬಗೆಹರಿಸಲಾಗಿದೆ ಎಂದಿದ್ದಾರೆ.

ಈ ಹಣವನ್ನು ಪಿಂಚಣಿಗೆ ಅಲ್ಲದೆ ಬೇರೆ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಜತೆಗೆ, ಖರ್ಚುವೆಚ್ಚಗಳ ವಿವರಗಳನ್ನು ವಿ.ವಿ.ಯ ಜಾಲತಾಣದಲ್ಲಿ ನಮೂದಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜಪಥವು ಈಗ ಕರ್ತವ್ಯ ಪಥ – ಮೋದಿ

0

ರಾಜ್ ಪಥ್ ಗುಲಾಮಿತನದ ಸಂಕೇತವಾಗಿತ್ತು. ಕಿಂಗ್ಸ್ ವೇ ಇತಿಹಾಸ ಪುಟ ಸೇರಿದೆ. ಈಗ ಕರ್ತವ್ಯ ಪಥದ ರೂಪದಲ್ಲಿ ಹೊಸ ಯುಗ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಬಳಿಕ ನವೀಕೃತಗೊಂಡ ಕರ್ತವ್ಯ ಪಥ್(ಹಿಂದೆ ರಾಜ್ ಪಥ್ ಎಂದು ಕರೆಯಲಾಗುತ್ತಿತ್ತು) ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ ಪಥ್ ದಬ್ಬಾಳಿಕೆ ಮತ್ತು ಗುಲಾಮಗಿರಿಯ ಸಂಕೇತವಾಗಿದೆ. ಇಂದು ವಾಸ್ತುಶೈಲಿ ಬದಲಾಗಿದೆ. ಈಗ ಸಂಸದರು, ಸಚಿವರು ಕರ್ತವ್ಯದ ಹಾದಿಯಲ್ಲಿ ನಡೆದಾಗ ಅವರಿಗೆ ತಮ್ಮ ಕರ್ತವ್ಯದ ಪ್ರಜ್ಞೆ ಮೂಡುತ್ತದೆ ಎಂದು ಹೇಳಿದರು.

ರಾಬಕೊವಿ ಹಾಲು ಒಕ್ಕೂಟದಿಂದ ಹಾಲು ಖರೀದಿ ಲೀ ಗೆ ₹1 ಹೆಚ್ಚಿಗೆ

0

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಒಕ್ಕೂಟದಿಂದ ಸೆ.11ರಿಂದ ಹಾಲಿನ ಖರೀದಿ ದರವನ್ನು ಲೀಟರ್ ಗೆ ರೂ.1 ಹೆಚ್ಚಿಸಲಾಗಿದೆ ಎಂದು ರಾಬಕೊವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ರಾಬಕೊವಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದ ಆಡಳಿತ ಮಂಡಳಿ ಸಭೆಯ ತೀರ್ಮಾನದಂತೆ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ.

ರೈತರು ಸದರಿ ದರ ಹೆಚ್ಚಳವನ್ನು ಸದುಪಯೋಗಪಡಿಸಿಕೊಂಡು, ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಿಸಿ ಒಕ್ಕೂಟಕ್ಕೆ ಸರಬರಾಜು ಮಾಡಿ ಎಂದಿನಂತೆ ಒಕ್ಕೂಟದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಇಳಿಮುಖ

0

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಆಗಿದೆ. ಕಳೆದ 24 ಗಂಟೆಗಳಲ್ಲಿ 5,554 ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

2020 ರ ಆರಂಭದಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 48,850 ಕ್ಕೆ ಇಳಿದಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 1.47 ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರವು ಶೇ. 1.80 ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ ಒಟ್ಟು 3,76,855 ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೆ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 88.90 ಕೋಟಿ.24 ಗಂಟೆಗಳ ಅವಧಿಯಲ್ಲಿ 6,322 ಚೇತರಿಕೆಗಳು ದಾಖಲಾಗಿದೆ. ಸಂಚಿತ ಚೇತರಿಕೆಯ ಸಂಖ್ಯೆ 4,39,13,294 ಕ್ಕೆ ತಲುಪಿದೆ. ಪ್ರಸ್ತುತ ಚೇತರಿಕೆ ದರವು ಶೇ. 98.7 ರಷ್ಟಿದೆ.

ರಾಣಿ ಎಲಿಜಬೆತ್2 ನಿಧನ ಪ್ರಯುಕ್ತ ದೇಶದಾದ್ಯಂತ ಸೆ,11 ಶೋಕಾಚರಣೆ

0

ಬ್ರಿಟನ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ 2ನೇ ಎಲಿಜಬೆತ್ (96) ನಿಧನ ಹಿನ್ನೆಲೆಯಲ್ಲಿ ದೇಶದಲ್ಲಿ ಶೋಕಾಚರಣೆ ಘೋಷಿಸಲಾಗಿದ್ದು, ಎಲಿಜಬೆತ್‌ ಅವರ ಅಂತ್ಯಸಂಸ್ಕಾರದ ನಂತರವೂ ಏಳು ದಿನಗಳವರೆಗೆ ರಾಜಮನೆತನದಲ್ಲಿ ಶೋಕಾಚರಣೆ ಇರಲಿದೆ ಎಂದು ಬಕ್ಕಿಂಗ್‌ ಹ್ಯಾಮ್ ಅರಮನೆಯು ಪ್ರಕಟಿಸಿದೆ.

ಗುರುವಾರ ರಾತ್ರಿ ನಿಧನರಾದ ರಾಣಿ 2ನೇ ಎಲಿಜಬೆತ್‌ ಅವರ ಅಂತ್ಯಸಂಸ್ಕಾರ ಇದೇ 19ರಂದು ಕೇಂದ್ರ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೆನಲ್ಲಿ ನಡೆಯುವ ನಿರೀಕ್ಷೆ ಇದೆ.
ಅಂತ್ಯಕ್ರಿಯೆ ದಿನ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಲಿದೆ.

2ನೇ ಎಲಿಜಬೆತ್‌ ಅವರ ಸ್ಮರಣಾರ್ಥ ಶುಕ್ರವಾರ ಬ್ರಿಟನ್‌ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಯಿತು. ಸಂಸದರು ರಾಣಿಗೆ ಗೌರವ ನಮನ ಸಲ್ಲಿಸಿದರು. ಎರಡು ದಿನಗಳ ಕಾಲ ಈ ವಿಶೇಷ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ.

ರಾಣಿಯ ಗೌರವಾರ್ಥ ಅವರ ಜೀವಮಾನದ ಪ್ರತಿ ವರ್ಷಕ್ಕೆ ಒಂದು ಸುತ್ತು ಗುಂಡಿನಂತೆ, 96 ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ ಕೇಂದ್ರ ಲಂಡನ್‌ನಲ್ಲಿ ‘ಗನ್ ಸೆಲ್ಯೂಟ್’ ಸಲ್ಲಿಸಲಾಯಿತು.

ಚರ್ಚ್‌ಗಳಲ್ಲೂ ಗಂಟೆಗಳನ್ನು ಬಾರಿಸುವ ಮೂಲಕ ರಾಣಿಗೆ ನಮನ ಸಲ್ಲಿಸಲಾಗುತ್ತಿದೆ. ಈ ಸಂಬಂಧ ದಿ ಚರ್ಚ್‌ ಆಫ್‌ ಇಂಗ್ಲೆಂಡ್ ಪಾದ್ರಿಗಳಿಗೆ ಮಾರ್ಗಸೂಚಿ ನೀಡಿದೆ.

ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥ ಸೆ.11ರಂದು ಭಾರತದಾದ್ಯಂತ ಶೋಕಾಚರಣೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

‘ಈ ಅವಧಿಯಲ್ಲಿ ದೇಶದಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಇಳಿಸಲಾಗುವುದು. ಯಾವುದೇ ಮನರಂಜನಾ ಕಾರ್ಯಕ್ರಮ ನಡೆಯುವುದಿಲ್ಲ’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಚಾರ್ಲ್ಸ್‌ ಮುಂದಿನ ರಾಜ
3ನೇ ಚಾರ್ಲ್ಸ್‌ ಅವರನ್ನು ಬ್ರಿಟನ್‌ ರಾಜನಾಗಿ ಶನಿವಾರ ಬೆಳಿಗ್ಗೆ ಅಕ್ಸೆಶನ್ ಕೌನ್ಸಿಲ್‌ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಬಕ್ಕಿಂಗ್‌ಹ್ಯಾಮ್ ಅರಮನೆ ತಿಳಿಸಿದೆ.

ರಾಣಿ 2ನೇ ಎಲಿಜಬೆತ್‌ ಅವರ ಉತ್ತರಾಧಿಕಾರ ಮೇಲ್ವಿಚಾರಣೆಯ ಔಪಚಾರಿಕ ಸಂಸ್ಥೆಯು ಬೆಳಿಗ್ಗೆ 10ರಿಂದ ಸಭೆ ಸೇರಲಿದೆ. ನಂತರ ಲಂಡನ್‌ನ ಸೇಂಟ್ ಜೇಮ್ಸ್ ಅರಮನೆಯ ಬಾಲ್ಕನಿಯಿಂದ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಘೋಷಣೆ ಹೊರಬೀಳಲಿದೆ ಎಂದು ತಿಳಿಸಿದೆ.

ಚಾರ್ಲ್ಸ್‌ ಭಾರತ ಮತ್ತು ಇಲ್ಲಿನ ಪುರಾತನ ಯೋಗ, ಆಯುರ್ವೇದದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.

ರಾಜಕುಮಾರರಾಗಿದ್ದ ಅವಧಿಯಲ್ಲಿ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿ, ದೇಶದ ಬಗ್ಗೆ ಪ್ರೀತಿಯ ಮಾತನಾಡಿದ್ದಾರೆ. 2007ರಲ್ಲಿ ಅವರು ಸ್ಥಾಪಿಸಿದ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ಭಾರತಕ್ಕೆ ಸಹಾಯಹಸ್ತ ಚಾಚಿದ್ದಾರೆ. ಕೋವಿಡ್‌ ಸಮಯದಲ್ಲೂ ಭಾರತಕ್ಕೆ ನೆರವಾಗಿದ್ದರು.

ಹುಲಿಯಂತೆ ಹೋರಾಡಿದ ದೋಂಢಿಯಾ ವಾಘ್

0

ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಹೋರಾಟದ ದಾಖಲೆಯಾಗಿರುವುದು 1857.
ನಿಜ. ಚರಿತ್ರಕಾರರು ಅನೇಕ ಮಾಹಿತಿಗಳನ್ನ ಹೆಕ್ಕದೇ ನಮ್ಮ ಮುಂದೆ ಬ್ರಿಟಿಷರ ಕಾಲದಲ್ಲಿ ಕಂಡ, ಬರೆದ ಕೆಲವು ಮಾಹಿತಿಗಳೇ ಆಕರವಾಗಿವೆ.

ಆದರೆ ದಾಖಲೆಗೆ ಸಿಗದೆ ಅಸಂಖ್ಯ ಪುರುಷರು,ವನಿತೆಯರು ತಮ್ಮ ಜೀವವನ್ನೇ ಬಲಿಗೊಟ್ಟಿರುವುದನ್ನ
ಅವು ದಾಖಲೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ನಗಣ್ಯಮಾಡುವಂತಿಲ್ಲ.
ಅಂತಹ ಅಸಂಖ್ಯ ವೀರರ ಪಟ್ಟಿಯಲ್ಲಿ ನಾವೀಗ ಓರ್ವ ಚಳವಳಿಗಾರ, ವೀರ,ಧೀರನ ಹೆಸರನ್ನ ಬರೆಯಲೇಬೇಕಿದೆ.
ಆತನೇ ವೀರ ಧೋಂಡಿಯಾ ವಾಘ್.

ಈಗಿನ ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ಜನಿಸಿದ ಶೂರ ದೋಂಢಿಯಾ.
ಯುದ್ಧೋತ್ಸಾಹಿ ಮರಾಠೀ ಕುಟುಂಬದಲ್ಲೇ ಜನಿಸಿದವ.
ಬಾಲ್ಯ ಸಹಜ ತುಂಟಾಟಗಳಲ್ಲೇ ಚನ್ನಗಿರಿಯಲ್ಲಿ ಕಳೆದವ.

ಮೀಸೆ ಹೊತ್ತ ತರುಣ ಕೆಳದಿ ಸೈನ್ಯ ಸೇರುವ ಆಸೆಯಲ್ಲಿದ್ದ.
ಕೊನೆಗೆ ಹೈದರಾಲಿಯ ಸೇರಿದ.
ಹೋರಾಡಿ ಹೈದರ್ ಪ್ರೀತಿ ,ಮೆಚ್ಚುಗೆಗೆ ಪಾತ್ರನಾದ. ಸಾವಿರ ಕುದುರೆಗಳ ಜಮೇದಾರನಾದ.
ಹೈದರ್ ಅವಸಾನದ ನಂತರ ಟಿಪ್ಪು ಆಡಳಿತಕ್ಕೆ ಬಂದ.
ಆದರೆ ವಾಘ್ ಅಲ್ಲಿಂದ ಹೊರಬಂದ.

ಗೆಳೆಯರ ಒಟ್ಟಿಗೆ ಸೇರಿ ಧೀರಪಡೆ ರಚಿಸಿಕೊಂಡ.
ಬ್ರಿಟಿಷ್ ವಿರುದ್ದ ದಂಗೆ ಎದ್ದ.
ಅವನನ್ನ ದರೋಡೆ ಕೋರ ಎಂದು ಬಿಳಿಯರು ಹಣೆಪಟ್ಟಿ ಕಟ್ಟಿದರು.

ರಾಜ್ಯದಾದ್ಯಂತ ಅಲ್ಲದೆ ಪಕ್ಜದ ಮರಾಠಿ, ಕೇರಳ ಮುಂತಾದೆಡೆಯ ಪಾಳೆಗಾರರು,ಅರಸರು ಇವನ ಪರಾಕ್ರಮಕ್ಕೆ ಸೋತು ಮಿತ್ರರಾಗಿದ್ದರು.

ಟಿಪ್ಪು ಬಿಳಿಯರ ವಿರುದ್ಧ ಸೋತಾಗ ನಿನ್ನ ಮಕ್ಕಳನ್ನ ಗೆದ್ದು ಕೊಡುತ್ತೇನೆ.ತನಗೆ ನೆರವು ನೀಡಿ ಸಾಕು ಎಂಬ ಧೈರ್ಯದ ಸಾಂತ್ವನ ಹೇಳಿದ್ದ.
ಇಂತಹ ಶೂರ ವೆಲ್ಲೆಸ್ಲಿಯ ಪಡೆಯ ಮೋಸಕ್ಕೆ ಸಿಕ್ಕ.ಗುಂಡಿನ ಸುರಿಮಳೆಗೆ 1800 ಸೆ. 10 ರಂದು ಎದೆ ನೀಡಿದ.

ಅವನು ಬದುಕಿದ್ದಿದ್ದರೆ
ಮುಂದಿನ ಬ್ರಿಟಿಷರ ಚರಿತ್ರೆಯೇ ಬದಲಾಗುತ್ತಿತ್ತು.
ಅಮರ ಚೇತನ ನಿನಗೆ
ನೆನಪಿನ ವಂದನೆ.

ಲೇ: ಡಾ.ಸುಧೀಂದ್ರ

ನೂಪುರ್ ಶರ್ಮಾಅವರಿಗೆ ಬಿಗ್ ರಿಲೀಫ್

0

ಹಿಂದೂ ದೇವರ ಅವಹೇಳನ ಮಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಕುರಿತಂತೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರಿಗೆ ಸುಪ್ರೀಂಕೋರ್ಟ್​ನಿಂದ ಬಿಗ್​ ರಿಲೀಫ್​ ಸಿಕ್ಕಿದೆ. ನೂಪುರ್ ಅವರನ್ನು ಬಂಧಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಕೋರ್ಟ್​ ತಿರಸ್ಕರಿಸಿದೆ.

ಹಿಂದೂ ದೇವರ ಅವಹೇಳನವನ್ನು ಸಹಿಸದೇ ನೂಪುರ್​ ಅವರು ಪ್ರವಾದಿ ಮೊಹಮ್ಮದ್​ ಕುರಿತು ನೀಡಿದ್ದ ಹೇಳಿಕೆ ಭಾರತದ ಒಂದು ವರ್ಗ ಹಾಗೂ ಹಲ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹೇಳಿಕೆ ಹಿಂಸಾಚಾರ ಸ್ವರೂಪವನ್ನೂ ಪಡೆದುಕೊಂಡಿದ್ದು, ಹಲವು ಕಡೆಗಳಲ್ಲಿ ಭಾರಿ ಪ್ರತಿಭಟನೆಗಳೂ ನಡೆದಿವೆ. ಈ ನಡುವೆಯೇ ಇವರನ್ನು ಬಂಧಿಸಲು ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ಆದರೆ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ನಿರಾಕರಿಸಿದೆ. ‘ನ್ಯಾಯಾಲಯವು ಯಾವುದೇ ಒಂದು ತೀರ್ಪನ್ನು ನೀಡುವಾಗ ದೂರಗಾಮಿ ಪರಿಣಾಮಗಳನ್ನೂ ಅವಲೋಕಿಸಬೇಕಾಗುತ್ತದೆ. ಅವರನ್ನು ಬಂಧಿಸಿ ಎಂದು ನೀವು ಸರಳವಾಗಿ ಹೇಳಿಬಿಟ್ಟರೆ ಆಗುವುದಿಲ್ಲ.

ಇಂಥಹ ಆದೇಶಗಳನ್ನು ಹೊರಡಿಸಿದರೆ ಅದರಿಂದ ಆಗುವ ಪರಿಣಾಮಗಳ ಬಗ್ಗೆಯೂ ಕೋರ್ಟ್​ ಯೋಚನೆ ಮಾಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಆದ್ದರಿಂದ ಈ ಅರ್ಜಿಯನ್ನು ಸುಮ್ಮನೇ ಹಿಂದಕ್ಕೆ ಪಡೆದುಕೊಳ್ಳುವುದು ಉತ್ತಮ ಎಂದರು. ಇದಕ್ಕೆ ಅನುಮತಿ ನೀಡಿದ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಅರ್ಜಿಗೆ ಮಾನ್ಯತೆ ಇಲ್ಲ ಎಂದ ಕೋರ್ಟ್​ ಅದನ್ನು ವಜಾಗೊಳಿಸಿತು.

ಜಗ್ಗೇಶ್ ಸಾಮಾನ್ಯ ಕಲಾವಿದ ಈಗ ಜನ ಪ್ರೀತಿಗಳಿಸಿ ಸೆಲೆಬ್ರಿಟಿ

ನವರಸನಾಯಕ ಎಂದೇ ಖ್ಯಾತಿ ಪಡೆದಿರುವ ನಟ ಜಗ್ಗೇಶ್ ಅವರ ನಟನೆಯ ವಿಜಯ್ ಪ್ರಸಾದ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನರ್ ಸಿನಿಮಾ ತೋತಾಪುರಿ ಚಿತ್ರದ ಬಾಗ್ಲು ತಗಿ ಮೇರಿ ಜಾನ್ ಎಂಬ ಹಾಡು ಈಗಾಗಲೇ ಎಲ್ಲೆಡೆ ಸದ್ದು ಮಾಡುತ್ತಿದೆ.

ಈಗ ತೋತಾಪುರಿ ಚಿತ್ರದ ಬಿಡುಗಡೆ ದಿನಾಂಕವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ಈ ಸಿನಿಮಾವನ್ನು ವೀಕ್ಷಿಸಲು ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ತೋತಾಪುರಿ ಚಿತ್ರವು ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಈ ಸಿನಿಮಾ ತೆರೆ ಕಾಣಲಿದೆ.

ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ಕೆ. ಎ. ಸುರೇಶ್ ನಿರ್ಮಾಣ ಮಾಡಿದ್ದಾರೆ. ಸುಮನ್ ರಂಗನಾಥ್, ಡಾಲಿ ಧನಂಜಯ್, ದತ್ತಾತ್ರೆಯ, ವೀಣಾ ಸುಂದರ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ತೆರೆ ಮೇಲೆ ಬಣ್ಣ ಹಚ್ಚಿದ್ದಾರೆ.

ಕೇವಲ 13ತಿಂಗಳಲ್ಲಿ ದಾಖಲೆ ಮಾಡಿದ ನೀರಜ್ ಚೋಪ್ರಾ

0

ಟೋಕಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಕ್ರೀಡೆಯ ದಿಗ್ಗಜ ನೀರಜ್ ಚೋಪ್ರಾ ಮತ್ತೊಂದು ಸಾಧನೆ ಮೂಲಕ ಇತಿಹಾಸಿಕ ಸೃಷ್ಟಿಸಿದ್ದಾರೆ.

ಟೋಕಿಯೋದಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ನೀರಜ್ ಚೋಪ್ರಾ ಅವರು ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ್ದರು. ಆದರೆ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ದೂರ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೆ ಜಿಗಿದರು. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದಾಗಿದೆ.

ತಮ್ಮ ಮುಂದಿನ ನಾಲ್ಕು ಎಸೆತಗಳಲ್ಲಿ 88.00ಮೀ, 86.11ಮೀ, 87.00ಮೀ ಮತ್ತು 83.60ಮೀ ಎಸೆದು ಚಾಂಪಿಯನ್​ ಆಗಿ ಹೊರ ಹೊಮ್ಮಿದರು.

ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 86.94 ಮೀ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರು.

ಜರ್ಮನಿಯ ಜೂಲಿಯನ್ ವೆಬರ್ ಅತ್ಯುತ್ತಮ 83.73 ಮೀಟರ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ನೀರಜ್ ಚೋಪ್ರಾ ಅವರೀಗ ಒಲಿಂಪಿಕ್ ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ಮತ್ತು ಇದೀಗ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಶ್ರೇಷ್ಠ ಸಾಧಕನಾಗಿದ್ದಾರೆ. ಇವೆಲ್ಲವನ್ನೂ ಅವರು ಕೇವಲ 13 ತಿಂಗಳಲ್ಲಿ ಸಾಧಿಸಿದ್ದಾರೆ ಎನ್ನುವುದು ಗಮನಾರ್ಹ.

ಮೂರುಲಕ್ಷ ಹೊಸ ಕೃಷಿಕರಿಗೆ ಸಾಲ ಸೌಲಭ್ಯ-ಸೋಮಶೇಖರ್

0

3 ಲಕ್ಷ ಹೊಸ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ರಾಜ್ಯ ಸಹಕಾರ ಸಚಿವರ ಸಮ್ಮೇಳನದಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿ 2022 -23ನೇ ಸಾಲಿನಲ್ಲಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿಯಿದೆ. ಇದರಲ್ಲಿ 3 ಲಕ್ಷ ಹೊಸ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು.

ಸಹಕಾರ ಸಂಘಗಳ ಸದಸ್ಯರು ಮತ್ತು ಕುಟುಂಬದವರಿಗೆ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಯಶಸ್ವಿನಿ ಆರೋಗ್ಯ ಯೋಜನೆಯನ್ನು ಮತ್ತೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ 300 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.