Sunday, March 22, 2026
Sunday, March 22, 2026
Home Blog Page 1442

ನಾರಾಯಣ ಗುರುಗಳಿಂದ ಜಾತೀಯ ವಿಷ ಬೀಜ ಕಿತ್ತುಹಾಕಲು ಪ್ರಯತ್ನ

0

ನಾರಾಯಣಗುರು ಅವರ ಆಶಯದಂತೆ ನಮ್ಮೆಲ್ಲರ ನಡುವಿನ ಜಾತಿಯ ವಿಷ ಬೀಜ ಕಿತ್ತು ಹಾಕಿ ನಾವೆಲ್ಲರೂ ಒಂದೇ ಎಂಬ ಭಾವನೆ ಸಮಾಜಕ್ಕೆ ಇಂದೆಲ್ಲ, ನಾಳೆ ಬರಲಿದೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಆಶಿಸಿದರು.

ಶಿವಮೊಗ್ಗದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರ್ಯ ಈಡಿಗರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಹ್ಮಶ್ರೀ ನಾರಾಯಣಗುರುಗಳು ದೇವರಿಗೆ ದೇವರಾಗಿದ್ದವರು. ಅಂತಹ ಗುರುಗಳ ಆದರ್ಶಗಳನ್ನು ನಾವು ಬೆಳೆಸಿಕೊಳ್ಳಬೇಕು. ಸಮ ಸಮಾಜದ ಕನಸು ಕಂಡ ಗುರುಗಳ ಸಿದ್ಧಾಂತಗಳ ಅಳವಡಿಸಿಕೊಂಡಾಗ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.

ಈಗಾಗಲೇ ಮಹಾನ್ ಪುರುಷರು ಜಾತಿ ಸೂಚಕ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಬಸವಣ್ಣ, ನಾರಾಯಣಗುರು, ಕನಕದಾಸ ಮುಂತಾದ ಆದರ್ಶ ಪುರುಷರನ್ನು ಜಾತಿಗೆ ಮೀಸಲಾಗಿಸುವುದು ದುರದೃಷ್ಟಕರ ಎಂದರು.

ನಾರಾಯಣಗುರುಗಳು ಯುಗ ಪುರುಷರು. ಕೇರಳದಲ್ಲಿ ಹುಟ್ಟಿದ ಅವರು ಅಂದು ಅಲ್ಲಿ ಸವರ್ಣೀಯರು ಮತ್ತು ಅವರ್ಣೀಯರ ಮಧ್ಯೆ ಇರುವ ತಾರತಮ್ಯ ಹೋಗಲಾಡಿಸಿದವರು. ಅಲ್ಲಿ ಸವರ್ಣೀಯರು ಯಾವುದೇ ತೆರಿಗೆ ಕಟ್ಟುವ ಹಾಗಿರಲಿಲ್ಲ. ಮನೆಯನ್ನೂ ಎತ್ತರಕ್ಕೆ ಕಟ್ಟಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಕೆಳವರ್ಗದವರು ಮನೆಯನ್ನು ಎತ್ತರಕ್ಕೆ ಕಟ್ಟುವಂತಿರಲಿಲ್ಲ. ಜೊತೆಗೆ ತೆರಿಗೆ ಕಟ್ಟಬೇಕಿತ್ತು. ಅಸಮಾನತೆ ಮಿತಿ ಮೀರಿತ್ತು. ಮನುಸ್ಮೃತಿ ಮತ್ತು ವರ್ಣಾಶ್ರಮ ಪದ್ಧತಿಗಳು ಅವರ ಬದುಕು ಅರಳಲು ಬಿಡುತ್ತಿರಲಿಲ್ಲ ಎಂದು ಉಪನ್ಯಾಸ ನೀಡಿದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಎಸ್.ಎಂ. ಹರೀಶ್ ಹೇಳಿದರು.

ನಾರಾಯಣಗುರುಗಳು ಸಾಮಾಜಿಕ ಅಸಮಾನತೆ ಹೋಗಲಾಡಿಸಿದರು. ಸ್ವಾವಲಂಬಿ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು. ಇಂತಹವರ ಆದರ್ಶಗಳು ಇಂದಿನ ಅಗತ್ಯ ಎಂದರು.

ಈಡಿಗ ಸಮಾಜ ಇಂದು ಅತ್ಯಂತ ಹಿಂದುಳಿದಿದೆ. ಇಲ್ಲಿ 26 ಪಂಗಡಗಳಿವೆ. ಎಲ್ಲರೂ ಬಡವರಾಗಿದ್ದಾರೆ. ಇವರಿಗೆ ಶೇ 5ರಷ್ಟು ಒಳ ಮೀಸಲಾತಿ ಬೇಕು. ಹಾಗೆಯೇ ನಾರಾಯಣಗುರು ಹೆಸರಲ್ಲಿ ಈಡಿಗ ಅಭಿವೃದ್ಧಿ ನಿಗಮ, ಆಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ
ಒತ್ತಾಯಿಸಿದರು.

ಮುರುಘಾ ಮಠದ ಬಗ್ಗೆ ಕೋಡಿಶ್ರೀಗಳವಾಣಿ

0

ಮುರುಘಾ ಮಠದ ಆಂತರಿಕ ಸಮಸ್ಯೆಗಳು ಆ ಸಂಸ್ಥೆಯನ್ನು ಬಲಿತೆಗೆದುಕೊಂಡಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಡ್ಯದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕುಟುಂಬದ ಅಪೂರ್ವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೋಡಿಮಠದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

ಆಚಾರ, ವಿಚಾರ ಮತ್ತು ಪ್ರಚಾರ ಸಮಾಜದಲ್ಲಿ ಬಹುಮುಖ್ಯ. ಯಾರಾದರೂ ಪರಸ್ಪರ ಭೇಟಿಯಾದರೆ ಮೊದಲು ಕೇಳುವುದೇ ಏನ್ ಸಮಾಚಾರ ಎಂದು. ಇಂದು ನಮ್ಮ ಪರಂಪರಾಗತ ಆಚಾರ. ಉಭಯ ಕುಶಲೋಪರಿಯ ಅನಂತರ ವಿಚಾರ ವಿನಿಮಯ. ತನ್ನೊಳಗಿನ ವಿಚಾರವನ್ನು ಸಾರ್ವತ್ರೀಕರಣಗೊಳಿಸಲು ಒಂದಷ್ಟು ಪ್ರಚಾರ. ಆದರೆ ಇಂದು ಇವೆಲ್ಲವನ್ನೂ ಹಿಂದೆ ತಳ್ಳಿ ಅಪಪ್ರಚಾರ ಮುಂಚೂಣಿಗೆ ಬಂದಿದೆ ಎಂದರು.

ಅಪಪ್ರಚಾರದ ಅಲೆ ಧರ್ಮ, ರಾಜಕಾರಣ ಸೇರಿದಂತೆ ಎಲ್ಲಕಡೆ ಆವರಿಸಿದೆ. ಇದರಿಂದ ಮೌಲ್ಯಗಳು ಹಾಳಾಗುತ್ತಿವೆ. ಉತ್ತಮ ಕೆಲಸ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಪಪ್ರಚಾರ ಒಂದು ಸಾಮಾಜಿಕ ಪೀಡೆಯಾಗಿ ಬೆಳೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸ್ವಾಮೀಜಿ ಸತ್ಯಕ್ಕೆ ಅಂತಿಮ ಗೆಲುವು ಎನ್ನುವುದಾದರೂ ಇಂದು ಸತ್ಯ ಹೊರಬರುವಷ್ಟರಲ್ಲಿ ವ್ಯಕ್ತಿ ಸಾವಿನ ಮನೆ ಸೇರಿರುತ್ತಾನೆಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು.

778 ಉಪನ್ಯಾಸಕ ಹುದ್ದೆಗಳಿಗೆ ಶೀಘ್ರ ಭರ್ತಿ- ಸಚಿವ ನಾಗೇಶ್

ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲೇ ಖಾಲಿ ಇರುವ 778 ಉಪನ್ಯಾಸಕರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಈ ಕುರಿತು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಮಾಹಿತಿ ನೀಡಿದ್ದು, ‘ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದಿದ್ದಾರೆ.

ಬೀದಿನಾಯಿಗಳಿಗೆ ಪ್ರೀತಿಸಿದರೆ ಸಾಲದು ಅದರ ಹೊಣೆಯಿರಬೇಕು-ಸುಪ್ರೀಂ ಎಚ್ಚರಿಕೆ

0

ಬೀದಿ ನಾಯಿಗಳು ಕಚ್ಚಿದರೆ ಆಹಾರ ಹಾಕಿದವರೇ ಹೊಣೆಗಾರರು. ಅವರಿಂದಲೇ ನಾಯಿಗೆ ಲಸಿಕೆ ಹಾಕಿಸಬಹುದು ಎಂದು ಬೀದಿ ನಾಯಿಗಳ ಹಾವಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ನಾಯಿಗಳು ಕಚ್ಚಿದರೆ ಅದಕ್ಕೆ ಆಹಾರ ಹಾಕುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾದೀತು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ನಾಯಿ ಕಡಿತಕ್ಕೆ ಒಳಗಾದ ವ್ಯಕ್ತಿಗಳ ವೈದ್ಯಕೀಯ ವೆಚ್ಚವನ್ನು ಆಹಾರ ಹಾಕುವವರು ಭರಿಸಬೇಕು. ಜೊತೆಗೆ ಅವುಗಳಿಗೆ ಲಸಿಕೆ ಹಾಕುವ ಜವಾಬ್ದಾರಿಯನ್ನು ಹೊರಬೇಕು. ನಾಯಿಗಳನ್ನು ಪ್ರೀತಿಸಿದರೆ ಸಾಲದು, ಅವುಗಳ ಬಗ್ಗೆ ಕಾಳಜಿ ತೋರಬೇಕು. ಬೀದಿ ನಾಯಿಗಳು ಅಮಾಯಕರಿಗೆ ಹಾನಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠ ಹೇಳಿದೆ.

ಇನ್ನುಮುಂದೆ ಶಿವಮೊಗ್ಗ ಎಲ್ಲಾ ವಿಚಾರದಲ್ಲೂ ಶಾಂತಿಯಿಂದಿರುತ್ತದೆ- ಈಶ್ವರಪ್ಪ

0

ಇನ್ನು ಮುಂದೆ ಶಿವಮೊಗ್ಗ ನಗರವು ಎಲ್ಲಾ ವಿಚಾರದಲ್ಲಿ ಶಾಂತಿಯುತವಾಗಿಯೇ ಇರುತ್ತದೆ ಎಂದು ನಿನ್ನೆ ಹಿಂದೂ ಮಹಾಸಭಾ ಗಣಪತಿಯ ಶಾಂತಿಯುತ ವಿಸರ್ಜನೆ ಮೆರವಣಿಗೆ ನಡೆದಿರುವ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ನಡೆಸಿದ್ದರು. ಸರಿಯಾದ ಬುದ್ದಿಯನ್ನ ರಾಜ್ಯ ಸರ್ಕಾರದಿಂದ ಕಲಿಸಿಯಾಗಿದೆ.‌ ಅವರು ಸರಿಯಾದ ಬುದ್ದಿ ಕಲಿತಿದ್ದಾರೆ ಎಂದು ಭಾವಿಸುತ್ತೇನೆ. ಹಿರಿಯರು ಸಾಕಷ್ಟು ಬುದ್ದಿ ಹೇಳಿದ ಪರಿಣಾಮ ಶಿವಮೊಗ್ಗದಲ್ಲಿ ಶಾಂತಿ ಕಾಪಾಡಿದ್ದಾರೆ ಎಂದು ಹೇಳಿದರು.

ನಗರದ ಇತಿಹಾಸದಲ್ಲಿ ನಿನ್ನೆ ನಡೆದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಭಾರಿ ವೈಭವದಿಂದ ನಡೆದಿದೆ. ಎಲ್ಲಾ ವೃತ್ತದಲ್ಲಿ ಮತ್ತು ಗಣಪತಿ ವಿಸರ್ಜನೆ ಆಗುವ ವರೆಗೂ ನನ್ನ ಜೀವನದಲ್ಲಿ ಯುವಕರು, ಯುವತಿಯರು, ಮಹಿಳೆಯರು ಸೇರಿದ್ದು ನೋಡೇ ಇಲ್ಲ. ಇನ್ನು ಮುಂದೆ ಶಿವಮೊಗ್ಗ ಶಾಂತಿಯುತವಾಗಿರುತ್ತದೆ. ಮುಂದೆ ನಗರದಲ್ಲಿ ಏನೇ ನಡೆದರೂ ಶಾಂತಿಯುತವಾಗಿರುತ್ತದೆ ಎಂದು ತಿಳಿಸಿದರು

ತಮಿಳುನಾಡಿಗೆ ರಾಜ್ಯದಿಂದ ಕಾವೇರಿ ಹೆಚ್ಚುವರಿ ನೀರಿನ ಹರಿವು

0

ರಾಜ್ಯದಲ್ಲಿ 51 ವರ್ಷಗಳಲ್ಲೇ ಅತೀ ಹೆಚ್ಚು ಮಳೆಯಾಗಿದ್ದು ಪರಿಣಾಮ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿ ಹರಿಯುತ್ತಿವೆ. ಹೀಗಾಗಿ ರಾಜ್ಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗುತ್ತಿದೆ.

ಜೂನ್ 1 ರಿಂದ ಆಗಸ್ಟ್ 31 ರವರೆಗೆ ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆ ಶೇ.22 ರಷ್ಟು ಅಧಿಕವಾಗಿದ್ದು, ಇದು 51 ವರ್ಷಗಳಲ್ಲೇ ಅತ್ಯಧಿಕವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಮನೋಜ್ ರಾಜನ್, ‘ಅಂತಿಮ ಆದೇಶದಂತೆ ರಾಜ್ಯವು ಇಡೀ ಜಲ ವರ್ಷಕ್ಕೆ 177.25 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕಿತ್ತು. ಕಾವೇರಿ ಜಲ ವಿವಾದ ನ್ಯಾಯಮಂಡಳಿ, ಆದರೆ ತಮಿಳುನಾಡಿಗೆ 47 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ, ರಾಜ್ಯದಲ್ಲಿ 2021 ರಲ್ಲಿ 8% ಕೊರತೆ ಮತ್ತು 2020 ರಲ್ಲಿ 6% ಅಧಿಕ ಮಳೆಯಾಗಿದೆ. ಜುಲೈ 1 ರಿಂದ ಆಗಸ್ಟ್ 31 ರವರೆಗೆ ರಾಜ್ಯದಲ್ಲಿ 40% ಅಧಿಕ ಮಳೆಯಾಗಿದೆ, ಇದು 50 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ 2 ತಿಂಗಳಲ್ಲಿ ದಕ್ಷಿಣ ಮತ್ತು ಉತ್ತರ ಒಳನಾಡಿನ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಕ್ರಮವಾಗಿ ಶೇ.151, ಶೇ.50 ಹಾಗೂ ಶೇ. 32 ಅಧಿಕ ಮಳೆಯಾಗಿದೆ.

ಆತ್ಮಹತ್ಯೆಯೊಂದೇ ಕೊನೆಯಲ್ಲ ಬಾಳಲು ದಾರಿ ನೂರಾರು

0

ಆತ್ಮಹತ್ಯೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನಾವು ಮಾಧ್ಯಮಗಳಲ್ಲಿ ಕೇಳಿರುತ್ತೇವೆ, ನೋಡಿರುತ್ತೇವೆ. ಆತ್ಮಹತ್ಯೆಗೆ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿರುವುದು ವಿಷಾದ ಸಂಗತಿ.

ಸಂಸಾರದ ತಾಪತ್ರಯ, ಪ್ರೀತಿ ವೈಫಲ್ಯ, ಸಾಲಭಾದೆ ಹೀಗೆ ನಾನ ಕಾರಣಗಳಿಂದ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಂದಲೂ ಕೂಡ ತಮ್ಮ ಅಮೂಲ್ಯ ಜೀವವನ್ನ ಕಳೆದುಕೊಂಡಿರುವ ಘಟನೆಗಳೇ ಹೆಚ್ಚು.

ವಿಶ್ವದಲ್ಲಿ ಪ್ರತಿವರ್ಷ ಎಂಟರಿಂದ ಒಂಬತ್ತು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ. ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಆತ್ಮಹತ್ಯೆಯನ್ನು ತಡೆಯಲು ಮತ್ತು ಜನರಲ್ಲಿ ಬದುಕುವ ಭರವಸೆಯನ್ನ ತುಂಬುವ ಉದ್ದೇಶದಿಂದ 2003ರ ಸೆಪ್ಟೆಂಬರ್ 10ರಂದು ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಯಿತು. ಪ್ರತಿ ವರ್ಷ ಸೆಪ್ಟೆಂಬರ್ 10ರಂದು ಆತ್ಮಹತ್ಯೆ ತಡೆ ದಿನ ಎಂದು ಆಚರಿಸಲಾಗುತ್ತಿದೆ.

ಮನುಷ್ಯ ಎಂದ ಮೇಲೆ ಸಮಸ್ಯೆಗಳು ಬರುವುದು ಸಹಜ… ಸಮಸ್ಯೆಗಳು ಬಂತೆಂದು, ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಸಮಸ್ಯೆಗಳು ಇದ್ದ ಮೇಲೆ ಪರಿಹಾರವೂ ಕೂಡ ಇದ್ದೇ ಇರುತ್ತದೆ. ಅದನ್ನು ಅರಿತು ಪರಿಹಾರವನ್ನು ಕಂಡುಕೊಳ್ಳುವುದು ಒಳಿತು…

– ರಚನಾ.ಕೆ.ಆರ್

ಗರೀಬ್ ಕಲ್ಯಾಣ್ ಯೋಜನೆಗೆ ಆಧಾರ್ ಬಯೋದೃಢಿಕರಣ ಅವಶ್ಯಕ

0

ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಸೆಪ್ಟೆಂಬರ್ 2022 ರ ಮಾಹೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ನ ಭಾಗ್ಯ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಗಳ ಪಡಿತರ ಆಹಾರಧಾನ್ಯಗಳನ್ನು ವಿತರಿಸುವ ವೇಳೆಯಲ್ಲಿ 2 ಯೋಜನೆಗಳಿಗೆ ಯೋಜನೆವಾರು ಪ್ರತ್ಯೇಕವಾಗಿ ಆಧಾರ್ ಬಯೋ ದೃಢೀಕರಣ ಪಡೆಯುವಂತೆ ಆಹಾರ ಇಲಾಖೆಯ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿರುತ್ತದೆ.

ಈ ಸಂಬಂಧ ಜಿಲ್ಲೆಯ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರಧಾನ್ಯಗಳನ್ನು ಪಡೆಯುವ ಸಂದರ್ಭದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ನ ಭಾಗ್ಯ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಗಳಿಗೆ ಯೋಜನೆವಾರು ಪ್ರತ್ಯೇಕವಾಗಿ ಆಧಾರ್ ಬಯೋ ದೃಢೀಕರಣ ನೀಡಿ ಪಡಿತರ ಆಹಾರಧಾನ್ಯಗಳನ್ನು ಪಡೆಯುವಂತೆ ಪಡಿತರ ಚೀಟಿದಾರರಲ್ಲಿ ಮನವಿ ಮಾಡಲಾಗಿದೆಯೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಕ್ತದಾನಕ್ಕೆ ಉತ್ತೇಜಿಸಿದ ಸೋನುಸೂದ್ ಅಭಿಮಾನಿ

0

ನಟ ಸೋನು ಸೂದ್ ಅವರು ಬಾಲಿವುಡ್ ಖ್ಯಾತ ನಟ. ಇವರಿಗೆ ದೊಡ್ಡ ಪ್ರಮಾಣದ ಅಭಿಮಾನಿಗಳ ಬಳಗ ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಕೊರೋನಾ ಸಂದರ್ಭದಲ್ಲಿ ಸೋನು ಸೂದ್ ಅವರು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ.

ಕೇವಲ ಕೊರೋನಾ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವುದಲ್ಲದೇ, ಈಗಲೂ ಬಡ ಜನರ ಸಂಕಷ್ಟಕ್ಕೆ ನೇರವಾಗಿ ಎಲ್ಲರ ಮನ ಗೆದ್ದಿದ್ದಾರೆ.

ಅಭಿಮಾನಿಗಳು ತಮ್ಮ ಅಭಿಮಾನವನ್ನು ನಾನಾ ಬಗೆಯಲ್ಲಿ ವ್ಯಕ್ತ ಪಡಿಸುವುದನ್ನು ನಾವು ನೋಡಿರುತ್ತೇವೆ… ಆದರೆ ಇಲ್ಲೊಬ್ಬ ಅಭಿಮಾನಿ ರಕ್ತದಲ್ಲಿ ಸೋನು ಸೂದ್ ಅವರ ಚಿತ್ರ ವನ್ನು ಚಿತ್ರಿಸಿ ಗಿಫ್ಟ್ ಮಾಡಿದ್ದಾನೆ. ಈ ಗಿಫ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಸೋನು ಸೂದ್ ಅವರು ರಕ್ತವನ್ನು ಇಂತಹ ಕಾರ್ಯಗಳಿಗೆ ಬಳಸುವ ಬದಲು ರಕ್ತ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ ಎಂದು ಹೇಳಿದ್ದಾರೆ.