Sunday, March 22, 2026
Sunday, March 22, 2026
Home Blog Page 1441

ಮೊದಲ ಸಿನಿಮಾ ಬಿಡುಗಡೆ ಹರ್ಷದಲ್ಲಿ ಮೇಘಾ ಶೆಟ್ಟಿ

0

ಜೊತೆ ಜೊತೆಯಲಿ ಧಾರವಾಹಿ ಮೂಲಕ ಪರಿಚಯವಾದ ನಾಯಕಿ ನಟಿ ಮೇಘಾ ಶೆಟ್ಟಿ ಅವರು ಈಗ ಸ್ಯಾಂಡಲ್ ವುಡ್ ನಲ್ಲೂ ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ತ್ರಿಬಲ್ ರೈಡಿಂಗ್, ಧನ್ವೀರ್ ಗೌಡ ಜೊತೆಗೆ ಕೈವಾ, ಡಾರ್ಲಿಂಗ್ ಕೃಷ್ಣ ಜೊತೆಗೆ ದಿಲ್ ಪಸಂದ್ ಸಿನಿಮಾದಲ್ಲಿ ಮೇಘಾ ಅಭಿನಯಿಸಿದ್ದಾರೆ. ಈ ಪೈಕಿ ತ್ರಿಬಲ್ ರೈಡಿಂಗ್ ಅವರು ಒಪ್ಪಿಕೊಂಡಿರುವ ಮೊದಲ ಸಿನಿಮಾವಾಗಿದೆ. ಆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ.

ಮೇಘಾ ಶೆಟ್ಟಿ ಮೊದಲ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೋ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ದೊರೆತಿದೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿರುವ ನಿಶ್ವಿಕಾ ನಾಯ್ಡು, ಮೇಘಾ ಪ್ರಮುಖ ಪಾತ್ರದಲ್ಲಿರುವ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ದಿಲ್ ಪಸಂದ್ ನವಂಬರ್ 11 ರಂದು ರಿಲೀಸ್ ದಿನಾಂಕ ಘೋಷಣೆ ಮಾಡಿಕೊಂಡಿದೆ.

ಈ ಮುಖಾಂತರ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಸಂತೋಷದಲ್ಲಿ ಮೇಘಾ ಶೆಟ್ಟಿ ಅವರು ಇದ್ದಾರೆ.

ಕರಾವಳಿ ಪ್ರದೇಶದಲ್ಲಿ ಇಲಿ ಜ್ವರ ಹಾವಳಿ

0

ಕರಾವಳಿ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಮಳೆ ಕಡಿಮೆಯಾಗುತ್ತಿದ್ದಂತೇಯೇ ಅನೇಕ ಭಾಗಗಳಲ್ಲಿ ಅನೇಕ ರೀತಿಯ ಜ್ವರ ಕಾಣಿಸಿಕೊಳ್ಳಲು ಆರಂಭಿಸಿದೆ.

ಡೆಂಗ್ಯೂ, ಮಲೇರಿಯಾ ಇನ್ನಿತರ ಜ್ವರ ಪ್ರಕರಣಗಳು ವರದಿಯಾಗುತ್ತಿವೆ.

ಇದರ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ
ಇಲಿ ಜ್ವರದ ಪ್ರಕರಣಗಳು ಪತ್ತೆಯಾಗುತ್ತಿದೆ. ಇದುವರೆಗೆ 309 ಕೇಸ್​ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಈ ಜ್ವರವು ಇಲಿಯ ಮಲ,ಮೂತ್ರ ,ಎಂಜಲು, ಇಲಿಯ ದೇಹದ ಯಾವುದೇ ದ್ರವದ ಸಂಪರ್ಕ ದಿಂದ ಈ ರೋಗ ಹರಡುತ್ತದೆ.

ಕಳೆದ 2 ತಿಂಗಳಲ್ಲಿ ಜಿಲ್ಲೆಯ ಮಂಗಳೂರಿನಲ್ಲಿ 194, ಬಂಟ್ವಾಳ ದಲ್ಲಿ 37, ಬೆಳ್ತಂಗಡಿ ಯಲ್ಲಿ 52 , ಪುತ್ತೂರಿನಲ್ಲಿ 19, ಸುಳ್ಯ ದಲ್ಲಿ 7 ಇಲಿ ಜ್ವರದ ಪ್ರಕರಣಗಳು ದಾಖಲಾಗಿದೆ. ಈ ರೋಗದ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯಿಸದೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗುವಂತೆ ಜನರಿಗೆ ಆರೋಗ್ಯ ಇಲಾಖೆ ತಿಳಿಸಿದೆ.

ಇದೊಂದು ಬ್ಯಾಕ್ಟೀರಿಯಾ ಸೋಂಕಾಗಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.
ಬಹುತೇಕ ಡೆಂಗ್ಯೂ ಜ್ವರದ ಲಕ್ಷಣಗಳನ್ನು ಸೋಂಕಿತ ಹೊಂದಿರುತ್ತಾನೆ.
ತಲೆನೋವು, ವಾಕರಿಕೆ ಅಥವಾ ವಾಂತಿ ಸಂಭವ, ಮೈಕೈ ನೋವು.
ಸೋಂಕು ಉಂಟಾದ 2 ದಿನಗಳಲ್ಲಿ ಮೈಮೇಲೆ ಗುಳ್ಳೆಗಳು.
ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತದೆ. ಕೀಲುನೋವುಗಳು ಕಾಣಿಸುವುದು.
ಇಲಿ ಕಚ್ಚಿದ ಜಾಗದಲ್ಲಿ ಗುಳ್ಳೆಗಳು ಕಾಣಿಸುತ್ತದೆ.

ಮುರುಘಾಶ್ರೀಗಳ ವಿಚಾರಣೆ ಆಕ್ಷೇಪಣೆಗೆ ಅವಕಾಶ

0

ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ನಾಳೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ. ಈ ವೇಳೆ ಸಂತ್ರಸ್ತೆಯರು ಕೋರ್ಟಿಗೆ ಹಾಜರಾಗಲಿದ್ದಾರೆ. ಅವರ ಸಮ್ಮುಖದಲ್ಲೇ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಮುರುಘಾ ಶ್ರೀ ಜಾಮೀನಿಗೆ ನಾಳೆ ಸಂತ್ರಸ್ತೆಯರು ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇವರ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ.

ಬಂಗಾಳಕೊಲ್ಲಿ ವಾಯುಭಾರ ಕುಸಿತ ರಾಜ್ಯದಲ್ಲೂ ಮಳೆ ಸೂಚನೆ

0

ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಹಲವು ರಾಜ್ಯಗಳಲ್ಲಿ ಮತ್ತೆ ಪ್ರವಾಹ ಭೀತಿಯನ್ನು ಉಂಟುಮಾಡಿದೆ.

ಶನಿವಾರ ದಿಂದಲೇ ಒಡಿಶಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಇನ್ನೂ 5 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಇದು ಈಗಾಗಲೇ ಒಂದು ಹಂತದ ಮಳೆ, ಪ್ರವಾಹ, ಭೂಕುಸಿತದಂತಹ ದುರಂತಗಳಿಂದ ಕಂಗಾಲಾಗಿದ್ದ ಜನರನ್ನು ಮತ್ತೆ ಆತಂಕಕ್ಕೆ ನೂಕಿದೆ.

ಒಡಿಶಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭುವನೇಶ್ವರ ಮತ್ತು ಕಟಕ್‌ನಲ್ಲಿ ವಿಪರೀತ ಮಳೆಯಾಗಲಿದೆ. ಮನೆಗಳಿಂದ ಹೊರಗೆ ಬರದಂತೆ ನಾಗರಿಕರಿಗೆ ಸೂಚಿಸಲಾಗಿದೆ. ಹಲವು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಸೋಮವಾರ ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿ ಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಆಂಧ್ರಪ್ರದೇಶ, ಪಶ್ಚಿಮ ಬಂಗಾಲ, ತೆಲಂಗಾಣ ಮತ್ತು ಗುಜರಾತ್‌ನಲ್ಲೂ ಇದೇ ಸ್ಥಿತಿಯಿದೆ. ಸೆ.14 ರವರೆಗೂ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡು, ಪುದು ಚೇರಿ ಮತ್ತು ಕರೈಕಲ್‌ನಲ್ಲಿ ರವಿ ವಾರ ವರುಣ ಅಬ್ಬರಿಸಿದ್ದು, ಕರ್ನಾಟಕ ಮತ್ತು ಕೇರಳದಲ್ಲಿ ಸೆ. 12ರಂದು ಭಾರೀ ಮಳೆ ಯಾಗಲಿದೆ ಎಂದು ಹವಾ ಮಾನ ಇಲಾಖೆ ಹೇಳಿದೆ. ದೆಹಲಿಯಲ್ಲಿ ಶನಿವಾರ ದಿಂದೀಚೆಗೆ ಅಲ್ಪ ಪ್ರಮಾಣ ದಲ್ಲಿ ಮಳೆಯಾಗಿದೆ. ಸೆ.17- 18ರಂದು ಬಂಗಾಲ ಕೊಲ್ಲಿಯಲ್ಲಿ ಚಂಡಮಾರುತ ವೊಂದು ಸಕ್ರಿಯ ಗೊಳ್ಳುವ ಸಾಧ್ಯತೆ ಯಿದೆ ಎಂದೂ ಇಲಾಖೆ ತಿಳಿಸಿದೆ.

ಗ್ರಾಹಕರಿಗೆ ಬರೆ ನಂದಿನಿ ಹಾಲಿನ ದರ ಹೆಚ್ಚಳ

0

ನಂದಿನಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ, ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕಳೆದ 8 ತಿಂಗಳಿನಿಂದ ಮನವಿ ಮಾಡುತ್ತಿದ್ದರೂ, ಕ್ರಮ ಕೈಗೊಂಡಿಲ್ಲ.

ಪ್ರತಿ ಬಾರಿ ಸರ್ಕಾರದ‌ ಅನುಮತಿ ಪಡೆದು ದರ ಏರಿಕೆ ಮಾಡುತ್ತಿದ್ದ ಕೆಎಂಎಫ್ ಈಗ ತನಗಿರುವ ಅಧಿಕಾರ ಬಳಸಿಕೊಂಡು ದರ ಏರಿಕೆಗೆ ತೀರ್ಮಾನಿಸಿದೆ.

ಇದಕ್ಕೆ ಎಲ್ಲಾ 14 ಒಕ್ಕೂಟಗಳು ಇದಕ್ಕೆ ಬೆಂಬಲ ನೀಡಿವೆ. ನಂದಿನಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲಿದ್ದು, ಇದನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸಲಾಗುವುದು ಎಂದು ಹೇಳಲಾಗಿದೆ.

ಬೆಂಗಳೂರು ಜಲಾವೃತಕ್ಕೆ ಕಾರಣಗಳಿವೆ.

0

ಬೆಂಗಳೂರು ನಗರದ ಪೂರ್ವ ಭಾಗ ಜಲಾವೃತವಾಗಲು ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿಯಲ್ಲಿ ಬಿಡಿಎ, ಬಿಬಿಎಂಪಿ, ಬಿಎಂಟಿಸಿಗಳ ಪಾತ್ರ ಹೆಚ್ಚಿದೆ.

ಅಲ್ಲದೆ, ಕೋರಮಂಗಲ- ಚಲ್ಲಘಟ್ಟ ವ್ಯಾಲಿಯ ಬೃಹತ್‌ ಚಲ್ಲಘಟ್ಟ ಕೆರೆಯನ್ನು ಸುಳಿವಿಲ್ಲದಂತೆಯೇ ಮಾಡಿ ಅದರ ಮೇಲೆ ಗಾಲ್ಫ್‌ ಕೋರ್ಸ್‌ ಕಟ್ಟಿರುವುದು ಕೂಡ ಮಳೆನೀರು ಐಟಿ ಕಾರಿಡಾರ್‌ ಹಾಗೂ ಬಡಾವಣೆಗಳಿಗೆ ನುಗ್ಗಲು ಪ್ರಮುಖ ಕಾರಣವಾಗಿದೆ.

ಧರ್ಮಾಂಬುಧಿ ಕೆರೆ ಒತ್ತುವರಿ ಮಾಡಿಕೊಂಡು ನಿಲ್ದಾಣ ಕಟ್ಟಿಕೊಂಡು ನಗರದ ಕೆರೆಗಳ ಒತ್ತುವರಿಗೆ ಮುನ್ನುಡಿ ಬರೆದ ಅಂದಿನ ಬಿಟಿಎಸ್‌, ಸಿ.ವಿ. ರಾಮನ್‌ನಗರದ ಬಿನ್ನಮಂಗಲದಲ್ಲಿ 15 ಗುಂಟೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬಿಎಂಟಿಎಸ್ ಬಸ್‌ ಡಿಪೊ ನಿರ್ಮಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ, ಕಟ್ಟಡ ಎಂದು ರಾಜಕಾಲುವೆ ಹಾಗೂ ಕೆರೆ ಪ್ರದೇಶವನ್ನು ಬೆಂಗಳೂರು ಪೂರ್ವ ವಲಯದಲ್ಲಿ ಅತಿಹೆಚ್ಚು ಒತ್ತುವರಿ ಮಾಡಿಕೊಂಡಿದೆ. ಇದೆಲ್ಲ ಒತ್ತುವರಿ ಎಂದು ಅಧಿಕೃತವಾಗಿ ಬಿಬಿಎಂಪಿ ದಾಖಲೆಗಳೇ ಹೇಳುತ್ತಿದ್ದರೂ ತೆರವು ಮಾಡಲು ಯಾವ ಅಧಿಕಾರಿಗಳೂ ಮುಂದಾಗುತ್ತಿಲ್ಲ. 20-25 ವರ್ಷದಿಂದ ಇಷ್ಟೆಲ್ಲ ಒತ್ತುವರಿಯಾಗಿದ್ದರೂ, ಹಿಂದೆ ಅಧಿಕಾರ ನಡೆಸಿದ ಪಕ್ಷವಾಗಲಿ, ಈಗ ಅಧಿಕಾರ ನಡೆಸುವವರು ಸರ್ಕಾರದ ಇಲಾಖೆಗಳಿಂದಲೇ ನಡೆದಿರುವ ಒತ್ತುವರಿ ತೆರವಿನ ಬಗ್ಗೆ ಮಾತನಾಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ

ಮಾಗಿದ ಹಿರಿಯ ಅಜ್ಜ ಅಜ್ಜಿಯರ ದಿನಾಚರಣೆ

0

ಜಗತ್ತಿನಲ್ಲಿ ಇರುವ ಪ್ರತಿಯೊಂದು ಸಂಬಂಧಕ್ಕೂ ಒಂದೊಂದು ವಿಶೇಷ ದಿನವಿದೆ.. ಅಪ್ಪಂದಿರ ದಿನ, ಅಮ್ಮಂದಿರ ದಿನ, ಪೋಷಕರ ದಿನ, ಸಹೋದರರ ದಿನ ಇರುವಂತೆ ಅಜ್ಜ ಅಜ್ಜಿಯರ ದಿನವೂ ಇದೆ..

ಜಗತ್ತಿನಾದ್ಯಂತ ಸೆಪ್ಟೆಂಬರ್ 11ರಂದು ವಿಶ್ವ ಗ್ರ್ಯಾಂಡ್ ಪೇರೆಟ್ಸ್ ಡೇ ಆಚರಿಸಲಾಗುತ್ತದೆ. ವಿವಿಧ
ಕಡೆ ಸೆ. 12ರಂದು ಈ ದಿನವನ್ನು ಆಚರಿಸಲಾಗುತ್ತದೆ.

ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ಈ ದಿನವನ್ನು ಸೆಲಬ್ರೇಟ್ ಮಾಡಲಾಗುತ್ತದೆ. ಅಮೆರಿಕದಲ್ಲಿ ಕಾರ್ಮಿಕರ ದಿನದ ನಂತರ ಸಿಗುವ ಮೊದಲ ಭಾನುವಾರದಂದು ಅಜ್ಜ ಅಜ್ಜಂದಿರ ದಿನವನ್ನು ಆಚರಿಸಲಾಗುತ್ತದಂತೆ..

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರೂ ಸೇರಿದಂತೆ ಅಜ್ಜ ಅಜ್ಜಿಯ ಪಾತ್ರವೂ ಬಹುಮುಖ್ಯ.. ಈಗ ಕಾಲ ಬದಲಾಗಿದೆ, ಒಂದು ಕುಟುಂಬವೆಂದರೆ ಅಪ್ಪ ಅಮ್ಮ ಮಕ್ಕಳು ಅಷ್ಟೇ ಎನ್ನುವಂತಾಗಿದೆ. ಅವಿಭಕ್ತ ಕುಟುಂಬಗಳು ಈಗ ತೀರಾ ವಿರಳ ಎಂದರೆ ತಪ್ಪಾಗಲಾರದು..
ಅಜ್ಜ ಅಜ್ಜಿ ಇರುವ ಕುಟುಂಬದಲ್ಲಿ ಬೆಳೆದ ಮಕ್ಕಳ ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಅಜ್ಜ ಅಜ್ಜಿಯರು ತಮ್ಮ ಮೊಮ್ಮಕ್ಕಳಿಗೆ ನೀಡುವ ಪ್ರೀತಿ ಸ್ಪಟಿಕದಷ್ಟು ಸ್ವಚ್ಛ ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ.

ಈಗ ಭಾರತದಲ್ಲಿ ಕೂಡು ಕುಟುಂಬಗಳು ಅಪರೂಪವಾಗುತ್ತಿರುವಂತೆಯೇ ಮಕ್ಕಳಿಗೆ ಅಜ್ಜ ಅಜ್ಜಂದಿರ ಪ್ರೀತಿ ಸಿಗುವುದು ದುಸ್ತರವಾಗುತ್ತದೆ. ವೃದ್ಧರನ್ನು ಸ್ವಗ್ರಾಮದಲ್ಲಿ ಒಂಟಿಯಾಗಿ ಬಿಟ್ಟು ದೂರದೂರಿನಲ್ಲಿ ಸಂಸಾರ ಮಾಡಿಕೊಳ್ಳುವ ಜನರೇ ಹೆಚ್ಚು. ಹಬ್ಬ ಹರಿದಿನಗಳಿಗಷ್ಟೇ ವೃದ್ಧರಿಗೆ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಭೇಟಿ ಮಾಡುವ ಅವಕಾಶ. ಹಾಗೆ ಇದೆ ಇಂದಿನ ಪರಿಸ್ಥಿತಿ ಕೂಡ.

ಮಕ್ಕಳಿಗೆ ಅಜ್ಜಿ-ಅಜ್ಜ ಅಂದ್ರೆ ಅದೆಷ್ಟು ಪ್ರೀತಿ. ಕೆಲವು ಮಕ್ಕಳು ಅಪ್ಪ-ಅಮ್ಮನಿಗಿಂತ ಹೆಚ್ಚು ಅಜ್ಜಿ-ತಾತಾನನ್ನು ಇಷ್ಟ ಪಡುತ್ತಾರೆ. ಅವರ ಖುಷಿಯಲ್ಲಿ ಅಜ್ಜಿ ಇರಲೇಬೇಕು. ಅವರ ಕಷ್ಟಕ್ಕೆ ಅಜ್ಜ ಬೇಕೇ ಬೇಕು. ಇತ್ತೀಚೆಗೆ ಕೂಡು ಕುಟುಂಬ ಇಲ್ಲದೇ ಮಕ್ಕಳು ಎಲ್ಲರನ್ನೂ ಅಂಕಲ್, ಆಂಟಿ ಎಂದು ಕರೆಯುವ ಪರಿಸ್ಥಿತಿ ಬಂದಿದೆ.

ಅಜ್ಜ ಅಜ್ಜಿಯ ಜೊತೆ ಕಾಲ ಕಳೆದು ಅವರೊಂದಿಗೆ ಇರುವವರೇ ಅದೃಷ್ಟವಂತರು. ಕೆಲವೊಮ್ಮೆ ನಾವು ನಮ್ಮ ಅವಸರದ ಬದುಕಿನಲ್ಲಿ ಅಜ್ಜ-ಅಜ್ಜಿಯರು ಎಷ್ಟು ಮುಖ್ಯ ಎನ್ನುವುದನ್ನೇ ಮರೆತುಬಿಡುತ್ತೇವೆ. ಅವರು ಮೊಮ್ಮಕ್ಕಳಿಗಾಗಿ ತೋರುವ ಪ್ರೀತಿಯನ್ನು ಯಾರಿಂದಲೂ ತೋರಿಸಲು ಸಾಧ್ಯವಿಲ್ಲ.
ನಾವು ಏನಾದರು ತಪ್ಪು ಮಾಡಿದಾಗ ಬೈಯುವುದು ಅಮ್ಮನಾದರೆ ಅಮ್ಮನ ಹೊಡೆತದಿಂದ ಉಳಿಸುವುದು ಅಜ್ಜಿಯೇ.. ಅವರೊಂದಿಗೆ ಕಳೆಯುವ ಸಮಯ ಅತ್ಯದ್ಭುತ.. ಸದಾ ನಮ್ಮ ಒಳಿತನ್ನೇ ಬಯಸುತ್ತಾ, ನಾವು ಯಶಸ್ಸನ್ನು ಕಂಡಾಗ ನಮಗಿಂತಲೂ ಹೆಚ್ಚು ಸಂತೋಷ ಪಡುತ್ತಾ ,ದೇವರಲ್ಲಿ ತಮ್ಮ ಮೊಮ್ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬೇಡುವ ಅಜ್ಜ ಅಜ್ಜಿಗೆ ಒಂದು ಮೆಚ್ಚುಗೆಯ ಅಪ್ಪುಗೆ ನೀಡುವುದು ಬೇಡವೇ?

ಒತ್ತಡದ ಕೆಲಸದ ನಡುವೆಯೂ ಅವರನ್ನು ಆಗಾಗ ಭೇಟಿ ಮಾಡಿ, ಸಮಯ ಕಳಿಯಿರಿ. ಇಂದಿನ ಆಧುನಿಕ ಬದುಕಿಗೂ , ಅವರ ಕಾಲದ ಜೀವನಕ್ಕೂ ಇರುವ ವ್ಯತ್ಯಾಸಗಳನ್ನ ಅವರಿಗಿಂತ ಚೆನ್ನಾಗಿ ಬೇರೆ ಯಾರೂ ಹೇಳಲಾರರು.. ಮೊಬೈಲ್ , ವಿಡಿಯೋ ಗೇಮ್ ಗಳಿಂದ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು
ನಿಮ್ಮ ರಜಾದಿನಗಳಲ್ಲಿ ಅಥವಾ ವಾರಾಂತ್ಯಗಳಲ್ಲಿ ಅವರ ಸ್ಥಳದಲ್ಲಿ ಕಳೆಯಿರಿ.
ನೀವು ಭೇಟಿ ನೀಡಿದಾಗಲೆಲ್ಲಾ ಅವರು ನಿಮ್ಮ ನೆಚ್ಚಿನ ಅಡುಗೆಯನ್ನು ಮಾಡುತ್ತಾರೆ. ಅದನ್ನ ಸವಿದು, ಅವರೊಂದಿಗೆ ಸಮಯ ಕಳೆಯಿರಿ. ಅವರು ಅವರು ಹೇಳುವ ಕಥೆಗಳನ್ನು ಕೇಳಿ.. ಅದಕ್ಕಿಂತ ಹೆಚ್ಚು ಏನನ್ನೂ ಬಯಸೊದಿಲ್ಲ.

ಅವರ ಆರೋಗ್ಯದ ಮೇಲೆ ನಿಗಾ ಇರಿಸಿ. ಸಮಯಕ್ಕೆ ಸರಿಯಾಗಿ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಿರಿ.
ಅವರ ನೋವನ್ನು ನಿವಾರಿಸಲು ಅವರಿಗೆ ಬಿಸಿ ಎಣ್ಣೆ ಹಚ್ಚಿ, ಅವರ ಕಾಲುಗಳು ಅಥವಾ ಪಾದಗಳನ್ನು ಮಸಾಜ್ ಮಾಡಿ. ಅವರ ಅಗತ್ಯಗಳಿಗೆ ಒಲವು ತೋರಿ.

ಕೆಲವೊಮ್ಮೆ, ಅವರು ತಮ್ಮ ನೋವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬಹುದು.
ವೃದ್ಧಾಪ್ಯದಲ್ಲಿ, ಅವರು ಒಂಟಿಯಾಗಬಹುದು, ಆದ್ದರಿಂದ ನಿಯಮಿತವಾಗಿ ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆಯಿರಿ.

ಅಂದಹಾಗೆ, ಈ ಅಜ್ಜ -ಅಜ್ಜಿಯರ ದಿನದ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು ಹಿರಿಯ ನಾಗರಿಕರ ಪರ ವಕೀಲರಾದ ಮರಿಯನ್ ಮೆಕ್‍ಕ್ವಾಡ್ ಅವರು. ಅವರಿಗೊಂದು ಸಲಾಮ್..

ಕೋಹಿನೂರ್ ಭಾರತಕ್ಕೆ ಮರಳಿ ತರಲು ಸಾಧ್ಯವೆ

0

ಬ್ರಿಟನ್‌ನ ದೀರ್ಘಾವಧಿ ಆಡಳಿತ ನಡೆಸದ ​​ರಾಣಿ ಎಲಿಜಬೆತ್ 2ರ ಮರಣವು ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸುವ ಬೇಡಿಕೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

105.6 ಕ್ಯಾರೆಟ್‌ನ ಅದ್ಭುತವಾದ ನೀಲಿ ಬೆಳಕಿನ ವಜ್ರವು ಈಗ ಕಿರೀಟದಲ್ಲಿರುವ ವಜ್ರಗಳಲ್ಲಿ ಒಂದಾಗಿದೆ. ನೀಲಮಣಿಗಳು ಮತ್ತು ಇತರ ಬೆಲೆಬಾಳುವ ಕಲ್ಲುಗಳು 1937ರಲ್ಲಿ ವಿನ್ಯಾಸಗೊಳಿಸಲಾದ ಬ್ರಿಟಿಷ್ ರಾಣಿಯ ಕಿರೀಟದಲ್ಲಿ ಸೇರಿದೆ.

ಸಾಂಪ್ರದಾಯಿಕ ಕಿರೀಟವು ಈಗ ರಾಣಿ ಕ್ಯಾಮಿಲ್ಲಾ ಅವರಿಗೆ ಸೇರುತ್ತದೆ ಎಂದು ವರದಿಯಾಗಿದೆ. ಮೂರನೇ ಕಿಂಗ್ ಚಾರ್ಲ್ಸ್ ಅವರ ಪಟ್ಟಾಭಿಷೇಕದ ಸಮಯದಲ್ಲಿ ಕಿರೀಟವನ್ನು ರಾಣಿ ಕ್ಯಾಮಿಲ್ಲಾ ಅವರಿಗೆ ಅಭಿಷೇಕಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಆದರೆ ಕೆಲವು ಟ್ವಿಟ್ಟರ್ ಬಳಕೆದಾರರು ಕೊಹಿನೂರ್ ವಜ್ರದ ವಾಪಸಾತಿಗೆ ಸಂಬಂಧಿಸಿದಂತೆ ಕೆಲವು ಗಂಭೀರವಾದ ಮನವಿಗಳನ್ನು ಈಗ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಕೆಲವರು ವ್ಯಂಗ್ಯವನ್ನು ಮಾಡಿದ್ದಾರೆ. ಹೃತಿಕ್ ರೋಷನ್ ಪಾತ್ರವು ಚಲಿಸುವ ರೈಲಿನಿಂದ ವಜ್ರವನ್ನು ಹಿಡಿಯುವ ಬಾಲಿವುಡ್ ಚಿತ್ರ ‘ಧೂಮ್ 2’ ನ ದೃಶ್ಯವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.

ನಮ್ಮ ಹೀರಾ, ಮೋತಿ, ಕೊಹಿನೂರ್ ವಜ್ರವನ್ನು ಬ್ರಿಟಿಷ್ ಮ್ಯೂಸಿಯಂನಿಂದ ಭಾರತಕ್ಕೆ ಮರುಪಡೆಯಲು ಹೃತಿಕ್ ರೋಷನ್ ಹಿಂತಿರುಗಿದ್ದಾರೆ ಎಂದು ಬಳಕೆದಾರರು ಪೋಸ್ಟ್‌ನ ಭಾಗವಾಗಿ ಬರೆದುಕೊಂಡಿದ್ದಾರೆ.

ಇನ್ನೊರ್ವ ಟ್ವಿಟ್ಟರ್ ಬಳಕೆದಾರರು ರಾಣಿ ವಸಾಹತುಶಾಹಿಯಲ್ಲಿ ಸಕ್ರಿಯ ಪಾಲ್ಗೊಳ್ಳುವವರು. ಈಗ ನಾವು ನಮ್ಮ ಕೊಹಿನೂರ್ ಅನ್ನು ಮರಳಿ ಪಡೆಯಬಹುದೇ? ರಾಣಿ ಎಲಿಜಬೆತ್ ವಸಾಹತುಶಾಹಿ ಕಾಲದ ಭಾಗವಲ್ಲ ಎಂಬುದನ್ನು ನೆನಪಿಸಿ ಅವರು ವಜ್ರವನ್ನು ಮರಳಿ ಭಾರತಕ್ಕೆ ತರಬಹುದೇ ಎಂದು ಕೇಳಿದ್ದಾರೆ.

ವಾರಾಣಸಿ ಕೆಲವು ಟಿಪ್ಪಣಿಗಳು

0

ನಮಗೆ ಕಾಶಿ ಎಂದರೆ ಅತ್ಯಂತ ಪವಿತ್ರ ತೀರ್ಥಕ್ಷೇತ್ರ. ಗಂಗೆಯಲ್ಲಿ ಮಿಂದು ವಿಶ್ವನಾಥನ ದರ್ಶನ ಮಾಡಿದರೆ ಸಾಕು ಜನ್ಮಪಾವನ.

ನಮ್ಮ ಪ್ರಧಾನ ಮಂತ್ರಿ ಮೋದಿ ಅವರು ವಾರಾಣಸಿ ಸಂಸದರೂ ಆಗಿದ್ದಾರೆ. ಮಾಧ್ಯಮಗಳಲ್ಲಿ ಕಾಶಿಯ ಕ್ಷೇತ್ರ ಅಭಿವೃದ್ಧಿ ಬಗ್ಗೆ ತಿಳಿದಿದ್ದೇವೆ.
ಮೊದಲಿಗೆ ನನಗೆ ಭೇಟಿಯಾದ ಸಾಮಾನ್ಯ ಆಟೋ ಚಾಲಕನನ್ನ ಈ ಬಗ್ಗೆ ಸುಮ್ಮನೆ ಮಾತಿಗೆಳೆದೆ.
ಮಂದಿರಗಳ ಆವರಣ ಡಬಲ್ ಮಾಡಿದ್ರು. ಕಟ್ಟಡಗಳನ್ನ ಕೆಡವಿದ್ರು. ರಸ್ತೆಗಳು ಅಗಲವಾಗಿವೆ.
ಇದಂತೂ ನಿಜ.
ಬಹುಪಾಲು ಗಂಗಾತೀರದ ಮಣ್ಣು ಮಣ್ಣುಗಟ್ಟಿದ ಪರಿಸರ ಈಗ ಕಲ್ಲಿನ ಸೋಪಾನಗಳಿಂದ ಕೂಡಿದೆ.
ನಾನು ಇಪ್ಪತ್ತು ವರ್ಷಗಳಿಗೂ ಮುಂಚೆ ಕಂಡ ಕಾಶಿಗೂ ಇಂದಿನ ಕಾಶಿಗೂ ವ್ಯತ್ಯಾಸವಿದೆ.
ಕಾಶಿಯೆಂದರೆ ಗಲ್ಲಿಗಲ್ಲಿಗಳ ಸಂಯುಕ್ತ ಪಟ್ಟಣ.
ಗಲ್ಲಿಗಳಲ್ಲಿ ಟಾರು ಬಂದಿದೆ. ಆದರೆ ಜನರು ಮಾತ್ರ ಅಲ್ಲಲ್ಲೇ ಜರ್ದಾ ಉಗುಳುವುದು ಮುಂತಾದವುಗಳಿಂದ
ಗಲ್ಲಿಗಳು ಗಲೀಜಿವೆ.

ಯಾತ್ರಿಗಳು,ಪ್ರವಾಸಿಗಳು ಎರಡು ಥರದ ಮಂದಿ ಇಲ್ಲಿಗೆ ಬರುತ್ತಾರೆ. ಯಾತ್ರಿಗಳಿಗೆ ಸ್ವಚ್ಛತೆಗಿಂತ ದೇವರ ದರ್ಶನವೇ ಪ್ರಧಾನವಾಗಿರುತ್ತದೆ.
ಭಕ್ತಿಯಲ್ಲಿ ಮಿಕ್ಕವೆಲ್ಲ ಗೌಣ. ಪ್ರವಾಸಿಗಳಿಗೆ ಊಟ ವಸತಿ ಮತ್ತು ಸ್ವಚ್ಛತೆ ಮುಖ್ಯ.

ಹಿಂದೆ ವಿಶ್ವನಾಥನ ದರ್ಶನಕ್ಕೆ ಹೋಗುವಾಗ ಕ್ಯೂ ಇರುತ್ತಿರಲಿಲ್ಲ.ಪಾಂಡಾಗಳು ಯಾತ್ರಿಕರನ್ನು ತಮ್ಮತಮ್ಮ ತಂಎಗಳನ್ನಾಗಿಸಿ ಸೀದಾ ವಿಶ್ವನಾಥನ ಪೂಜೆ,ದರ್ಶನ ಮಾಡಿಸುತ್ತಿದ್ದರು.ಈಗ ಆದೃಶ್ಯವಿಲ್ಲ. ಸುಗಮ ದರ್ಶನ.ಒಬ್ಬರಿಗೆ ರೂ.300 ನೀಡಿ ಕೌಂಟರಿನಲ್ಲಿ ಚೀಟಿ ಪಡೆಯಬೇಕು. ಅದರಲ್ಲಿ ಪಾಂಡಾನ ಫೀಸು, ಪ್ರಸಾದ,ದೇವರ ದರ್ಶನ ಒಳಗೊಂಡಿರುತ್ತದೆ. ಬೇರೆ ಧರ್ಮದರ್ಶನವೂ ಇದೆ.ಅದರ ಸಾಲು ಹನುಮಂತನ ಬಾಲ.

ಕಾಶಿ ವಿಶ್ವನಾಥನ ದೇಗುಲ ಹಿಂದಿನದಕ್ಕಿಂತ ಶಿಲಾಮಯ. ಸುತ್ತಲೂ ಸ್ವಚ್ಛ ಆವರಣ. ಮೈಮನ ಸಂತೋಷವಾಗುತ್ತದೆ.

ಇಂದಿನ ಕಾಶಿ ಈಗ್ಯೆ ಇಪ್ಪತೈದು ವರ್ಷಗಳಿಗಿಂತ ಭಿನ್ನ.
ಕ್ಲೀನ್ ಗಂಗಾ ಎಂಬ ರಾಜೀವ್ ಗಾಂಧಿಯವರ ಆಗಿನ
ಯೋಜನೆ ಅವರೊಟ್ಟಿಗೇ ಅವಸಾನವಾಗಿತ್ತು.
ಈಗ ಓರ್ವ ವ್ಯಕ್ತಿ ಇಲ್ಲಿಯ ಸಂಸದನೇ ಆಗಿ ಆರಿಸಿ ಬಂದಿದ್ದಾರೆ. ಪ್ರಧಾನಿಯಾಗಿರುವಾಗ ಮತ್ತೇನು ಬೇಕು?

ಕನ್ನಡ ಭಾಷಾ ವಿಧೇಯಕ ಅಂಗೀಕಾರಕ್ಕೆ ಸಹಕರಿಸಲು ಮನವಿ

0

ಸೆಪ್ಟೆಂಬರ್ 9 ರಂದು
ಕರ್ನಾಟಕ ಕಾನೂನು ಆಯೋಗ ಸಿದ್ಧ ಪಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022
ವಿಧಾನ ಸಭಾ ಅಧಿವೇಶನ ದಲ್ಲಿ
ಮಂಡಿಸಲಾಗುತ್ತಿದೆ.

ಒಮ್ಮತ ದ ಅಂಗೀಕಾರಕ್ಕೆ ಪ್ರಮುಖ ಪಾತ್ರ ವಹಿಸುವಂತೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶಾಸಕರಾದ ಶ್ರೀ ಬಿ ಕೆ ಸಂಗಮೇಶ್ವರ ರವರಿಗೆ ಮನವಿ ಪತ್ರ ನೀಡಿತು. ಈ ಸಂದರ್ಭದಲ್ಲಿ ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ರಾದ ಶ್ರೀ ಕೋಗಲೂರು ತಿಪ್ಪೇಸ್ವಾಮಿ, ಕಾರ್ಯದರ್ಶಿ ತಿಮ್ಮಪ್ಪ, ಕೋಶಾಧ್ಯಕ್ಷರಾದ ಕೆ ಟಿ ಪ್ರಸನ್ನ, ಸಂ ಕಾರ್ಯದರ್ಶಿ ನಾಗೋಜಿರಾವ್, ಮತ್ತು ಸದಸ್ಯರಾದ ಪ್ರಕಾಶ್ ಉಪಸ್ಥಿತರಿದ್ದರು.