Sunday, March 22, 2026
Sunday, March 22, 2026
Home Blog Page 1440

ರಾಣಿ 2ನೇ ಎಲಿಜಬೆತ್ ಅವರು ಬರೆದಿರುವ ಪತ್ರ 2085ರವರೆಗೆ ಓದುವಂತಿಲ್ಲ

0

ಅದು 1986ರಲ್ಲಿ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರು ಬರೆದಿರುವ ಪತ್ರ. ಆದರೆ, ಈವರೆಗೆ ಅದನ್ನು ಯಾರೂ ಓದಿಲ್ಲ. ಅದರೊಳಗೆ ಏನಿದೆ ಎಂಬುದೂ ಗೊತ್ತಿಲ್ಲ. ಈಗ ರಾಣಿ ಬದುಕಿಲ್ಲ. ಹಾಗಂತ ಆ ಪತ್ರವನ್ನು ಈಗಲಾದರೂ ಓದಬಹುದೇ? ಎಂದರೆ ಅದೂ ಇಲ್ಲ.

2085ರವರೆಗೂ ಆ ಪತ್ರದಲ್ಲಿರುವ ಅಂಶಗಳು ರಹಸ್ಯವಾಗಿಯೇ ಇರಬೇಕು ಎಂಬುದು ಸ್ವತಃ ರಾಣಿಯ ಆಜ್ಞೆಯಾಗಿದೆ. ಈ ಸೀಕ್ರೆಟ್‌ ಪತ್ರ ಈಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ವಿಕ್ಟೋರಿಯಾ ಕಟ್ಟಡದ ಕೋಣೆಯೊಂದರೊಳಗೆ ಭದ್ರವಾಗಿದೆ. ಅದನ್ನು ನಿರ್ಬಂಧಿ ಪ್ರದೇಶದಲ್ಲಿ ಗಾಜಿನ ಪೆಟ್ಟಿಗೆಯೊಂದರಲ್ಲಿ ರಕ್ಷಿಸಿಡಲಾಗಿದೆ.

ಪತ್ರದಲ್ಲಿ ಏನನ್ನು ಬರೆಯಲಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ರಾಣಿಯು ಸಿಡ್ನಿಯ ಜನರಿಗೆ ಈ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದೆ. ಪತ್ರದ ಹೊರಗೆ ನೀಡಿರುವ ಟಿಪ್ಪಣಿಯಲ್ಲಿ ಸಿಡ್ನಿ ಮೇಯರ್‌ ಅನ್ನು ಉದ್ದೇಶಿಸಿ, “ನೀವೇ ಆಯ್ಕೆ ಮಾಡಿರುವ ದಿನಾಂಕದಂತೆ 2085ರಲ್ಲಿ ನೀವು ಈ ಪತ್ರವನ್ನು ತೆರೆಯಬೇಕು ಮತ್ತು ಸಿಡ್ನಿ ಜನರಿಗೆ ನಾನು ನೀಡಿರುವ ಸಂದೇಶವನ್ನು ರವಾನಿಸಬೇಕು’ ಎಂದು ಬರೆಯಲಾಗಿದೆ.

ಈ ನಡುವೆ, ಬ್ರಿಟನ್‌ ರಾಜನಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅಲ್ಲಿನ ಸಂಸತ್‌ ಉದ್ದೇಶಿಸಿ ರಾಜ ಮೂರನೇ ಚಾರ್ಲ್ಸ್‌ ಮಾತನಾಡಿದ್ದಾರೆ.

“ಸಾಂವಿಧಾನಿಕ ಆಡಳಿತದ ಅಮೂಲ್ಯ ತತ್ವಗಳನ್ನು ಎತ್ತಿಹಿಡಿಯುವಲ್ಲಿ ದಿ. ರಾಣಿ ಎರಡನೇ ಎಲಿಜಬತ್‌ ಅವರ ನಿಸ್ವಾರ್ಥ ಕರ್ತವ್ಯದ ಹಾದಿಯನ್ನು ಅನುಸರಿಸಲಾಗುವುದು,” ಎಂದು ವಾಗ್ಧಾನ ಮಾಡಿದ್ದಾರೆ.

ಸೆ.19ರಂದು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಅಬ್ಬೇಯಲ್ಲಿ ನಡೆಯಲಿರುವ ರಾಣಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವ ವಿಶ್ವನಾಯಕರಿಗೆ ಹಲವು ಷರತ್ತುಗಳು ಹಾಗೂ ನಿಬಂಧನೆಗಳನ್ನು ವಿಧಿಸಲಾಗಿದೆ. “ಖಾಸಗಿ ವಿಮಾನಗಳಲ್ಲಿ ಬರುವಂತಿಲ್ಲ, ಬದಲಿಗೆ ವಾಣಿಜ್ಯ ವಿಮಾನಗಳ ಮೂಲಕ ಆಗಮಿಸಿ. ಯು.ಕೆ.ಗೆ ಪ್ರವೇಶಿಸಿದ ಬಳಿಕವೂ ಹೆಲಿಕಾಪ್ಟರ್‌ ಬಳಸುವಂತಿಲ್ಲ. ಅಂತ್ಯಕ್ರಿಯೆ ನಡೆಯುವಲ್ಲಿಗೆ ನಿಮ್ಮ ಸ್ವಂತ ಸರ್ಕಾರಿ ಕಾರುಗಳಲ್ಲಿ ಬರುವಂತಿಲ್ಲ. ಬದಲಿಗೆ ನಾವೇ ಕಳುಹಿಸಿಕೊಡುವ ಬಸ್‌ ಮೂಲಕವೇ ಆಗಮಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಎಂ.ರಘು ಅವರಿಗೆ ಸನ್ಮಾನ

0

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಎಂ.ರಘು ಅವರನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ಸುರೇಖಾ ಮುರಳೀಧರ್, ಬಿಇಓ ಪಿ.ನಾಗರಾಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹಾಯಕ ಕುಲಸಚಿವರಾದ ಪ್ರೊ. ಎನ್.ಕೆ.ಹರಿಯಪ್ಪ, ಉಪಪ್ರಾಂಶುಪಾಲರಾದ ಚಿಕ್ಕಪೆಂಚಾಲಯ್ಯ, ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ

0

ರಾಜಕಾಲುವೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ತನ್ನ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ರಾಜ ಕಾಲುವೆಗಳಿಗೆ ತ್ಯಾಜ್ಯ ಮತ್ತು ಮಾಲಿನ್ಯಕಾರಕಗಳನ್ನು ಸುರಿಯುವುದನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅಕ್ಟೋಬರ್ 12 ರಂದು ನಡೆಯಲಿರುವ ಮುಂದಿನ ವಿಚಾರಣೆಯ ದಿನಾಂಕದಂದು ಅಥವಾ ಮೊದಲು ಈ ಸಂಬಂಧ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ನಾಗರಿಕ ಸಂಸ್ಥೆಗೆ ನಿರ್ದೇಶನ ನೀಡಿದೆ.

ನಗರದ ಪ್ರವಾಹ ಪರಿಸ್ಥಿತಿಯನ್ನು ತೋರಿಸುವ ಛಾಯಾಚಿತ್ರಗಳನ್ನು ನೀಡಿ ನ್ಯಾಯಾಲಯದ ಗಮನ ಸೆಳೆದ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಅವರು ಸಲ್ಲಿಸಿದ್ದ ಮನವಿಯ ಮೇರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ವಿಭಾಗೀಯ ಪೀಠ ಜೂನ್ 18, 2019 ರ ಆದೇಶದಲ್ಲಿ ನೀಡಿದ ನಿರ್ದೇಶನವನ್ನು 18 ತಿಂಗಳುಗಳು ಕಳೆದರೂ ಪಾಲನೆ ಮಾಡಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದು, ರಾಜ ಕಾಲುವೆಗಳ ಸಮೀಕ್ಷೆ ಮಾಡುವಂತೆ ಹಾಗೂ ಒತ್ತುವರಿ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.

ಹಾಗೆ ಮಾಡುವಾಗ, ಈ ನಿರ್ದೇಶನಗಳ ಅನುಷ್ಠಾನಕ್ಕೆ ತೆಗೆದುಕೊಂಡ ಕ್ರಮಗಳನ್ನು ದಾಖಲೆಯಲ್ಲಿ ಇರಿಸಲು ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಎರಡಕ್ಕೂ ಆರು ವಾರಗಳ ಕಾಲಾವಕಾಶವನ್ನು ನೀಡಿತು.

ಆದರೆ ಅದನ್ನು ಪಾಲಿಸಲಾಗಿಲ್ಲ ಎಂದು ಅರ್ಜಿದಾರರು ತಮ್ಮ ವಕೀಲ ಜಿ ಆರ್ ಮೋಹನ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯಲ್ಲಿ ಉದ್ಯೋಗವಕಾಶ

0

ಉದ್ಯೋಗಾಕಾಂಕ್ಷಿಗಳಿಗೆ ಗೃಹ ಸಚಿವ ಅರಗಜ್ಞಾನೇಂದ್ರ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.

ರಾಜ್ಯದಲ್ಲಿ ಈ ವರ್ಷ ಅಗ್ನಿ ಶಾಮಕ ಹಾಗೂ ತುರ್ತು ಸೇವೆ ಇಲಾಖೆಗೆ 1,600 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ ಅಗ್ನಿ ಶಾಮಕ ಹಾಗೂ ತುರ್ತು ಸೇವೆ ಇಲಾಖೆಗೆ 1,600 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಒಂದು ವರ್ಷದ ತರಬೇತಿ ನಂತರ ಸೇವೆಗೆ ಲಭ್ಯವಾಗಲಿದ್ದಾರೆ. ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಅಗ್ನಿ, ಅವಘಡದಂತಹ ಪರಿಸ್ಥಿತಿ ಎದುರಿಸಲು ಆರು ತಿಂಗಳ ಕಾಲ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಮಳೆ ನೀರಿನಿಂದ ಅವೃತಗೊಂಡ ವಸತಿ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಹಾಗೂ ಅಗ್ನಿ ಶಾಮಕ ಹಾಗೂ ತುರ್ತು ಸೇವೆ ಇಲಾಖೆ ಸಿಬ್ಬಂದಿ ಕಾರ್ಯವನ್ನು ವೀಕ್ಷಿಸಿ ಶ್ಲಾಘೀಸಿದರು.

ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವ

0

ವಿದ್ಯಾರ್ಥಿಗಳಿಗೆ ಕೇವಲ ಜ್ಞಾನವಷ್ಟೇ ಇದ್ದರೆ ಸಾಲದು, ಬದಲಾಗಿ ಆ ಜ್ಞಾನವನ್ನು ಕಾರ್ಯರೂಪಕ್ಕೆ ತರುವುದರಿಂದ ಬದುಕಿನಲ್ಲಿ ಯಶಸ್ಸನ್ನು ಕಾಣಬಹುದು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್ ಗೋಪಿನಾಥ್ ಅವರು ತಿಳಿಸಿದರು.

ಸೈಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಾಂಸ್ಕೃತಿಕ ಮತ್ತು ನಿರ್ವಹಣಾ ಉತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಇಚ್ಛಾ ಶಕ್ತಿ ಬಹು ಮುಖ್ಯ. ಈ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಿರ್ವಹಣಾ ಉತ್ಸವವು ಜೀವನವನ್ನು ರೂಪಿಸಲು ಸಹಾಯಕವಾಗಲಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಕಾರ್ಯಕ್ಕೆ ಮುಂದಾಗಿರುವುದು ಸಂತಸ ವಿಚಾರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯರಾದ ಪ್ರೋ.ಎಂ.ಕೆ. ವೀಣಾ ಅವರು ಮಾತನಾಡಿ, ವಿದ್ಯಾರ್ಥಿಗಳು ಈಗಾಗಲೇ ವಿವಿಧ ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ, ಕ್ರೀಡೆಗಳಲ್ಲಿ ಜಯಗಳಿಸಿ ಕಾಲಿನ ಕೀರ್ತಿಪತಾಕೆಯನ್ನು ಎಲ್ಲೆಡೆ ಹಾರಿಸಿದ್ದಾರೆ. ಇಂದು ನಿಮ್ಮ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿಯೂ ಭಾಗವಹಿಸಿ ನಿಮ್ಮ ಪ್ರತಿಭೆಯನ್ನ ಅನಾವರಣಗೊಳಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮವನ್ನು ಸುಶ್ಮಿತಾ ಹಾಗೂ ಪ್ರಶಾಂತ್ ನಿರೂಪಿಸಿದರು. ಸುಚಿತ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಪ್ರಿಯಾಂಕ ಸ್ವಾಗತವನ್ನು ಕೋರಿದರು. ಪ್ರಜ್ವಲ್ ಹೆಚ್. ಇವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಐ. ಕ್ಯೂ.ಎ.ಸಿ ಸಂಚಾಲಕರಾದ ಪ್ರೊ. ಕೆ.ಎಸ್.ಸರಳಾ, ಸಾಂಸ್ಕೃತಿಕ ಸಂಚಾಲಕರಾದ ಡಾ. ಗಿರಿಧರ್ ಕೆ.ವಿ., ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಶಿವಮೂರ್ತಿ ಎ, ಹಾಗೂ ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವರ್ಗ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗ್ಯಾನ ವಾಪಿ ಮಸಿದಿ ಒಳಗಿನ ವಿಗ್ರಹಗಳನ್ನಪೂಜಿಸಲು ಮಹಿಳೆಯರಿಗೆ ಅವಕಾಶ

0

ಇಂದು ವಾರಾಣಸಿ ಜಿಲ್ಲಾ ಕೋರ್ಟ್ ತೀರ್ಪು ಹೊರಬಿದ್ದಿದೆ.
ಕಾಶಿ ಗ್ಯಾನವಾಪಿ ಮಸೀದಿ ವಿವಾದ ಸಂಬಂಧ ಹೊಸ ಹಿಂದೂಪರ ವಾದಕ್ಕೆ ಭರವಸೆ ಸಿಕ್ಕಿದೆ.
ಪ್ರಸ್ತುತ ವಿವಾದದಲ್ಲಿ
ವಾರಾಣಸಿ ವಕ್ಫ್ ಸಮಿತಿ ಮತ್ತು ಹಿಂದೂಪರ ಸಂಘಟನೆಗಳ ವಕಾಲತ್ತನ್ನ ನ್ಯಾಯಾಲಯ ದೀರ್ಘ ಪರಾಮರ್ಶಿಸಿದೆ.
ಗ್ಯಾನವಾಪಿ ಮಸಿದಿಯೊಳಗಿನ ಹಿಂದೂ ವಿಗ್ರಹಳಿಗೆ ಪೂಜೆ ಸಲ್ಲಿಸಲು ಐವರು ಮಹಿಳೆಯರು
ಅನುಮತಿ ಬೇಡಿದ್ದರು.
ಮಹಿಳೆಯರ ಪರ ವಾದವನ್ನ ಗೌರವಾನ್ವಿತ ನ್ಯಾಯಾಧೀಶರಾದ ಅಜಯ ಕೃಷ್ಣ ವಿಶ್ವೇಶ್ ಆಲಿಸಿದ್ದಾರೆ.
ವಕ್ಫ್ ಸಮಿತಿಯವರ ವಾದವನ್ನೂ ಮನಗಂಡಿದ್ದಾರೆ.
ಸದ್ಯ ಮಹಿಳೆಯರಿಗೆ ಪೂಜೆ ಸಲ್ಲಿಸಲು ಯಾವುದೇ ಅಡೆತಡೆಗಳಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಮುಂದಿನ ವಿಚಾರಣೆಯನ್ನ ಸೆ.22 ಕ್ಕೆ ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ವರದಿ ಮಾಡಿವೆ.

ಲಾಂಚ್ ಕರ್ತವ್ಯ ಸಿಬ್ಬಂದಿಗೆ ಬಾಕಿ ವೇತನ ಪಾವತಿಗೆ ಸೂಚನೆ

0

ಹೊಳೆಬಾಗಿಲು ಲಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲಾಂಚ್ ಚಾಲಕರಿಗೆ ಕಳೆದ ಒಂದು ವರ್ಷದಿಂದ ವೇತನ ಪಾವತಿಯಾಗದಿರುವುದು ಗಮನಕ್ಕೆ ಬಂದ ತಕ್ಷಣ. ಶಾಸಕರಾದ ಹೆಚ್.ಹಾಲಪ್ಪ ನವರು,ಬೆಂಗಳೂರಿನಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರ ರವರನ್ನು ಬೇಟಿಯಾಗಿ ಚರ್ಚಿಸಿದರು.

ಸೂಕ್ತವಾಗಿ ಸ್ಪಂದಿಸಿದ ಸಚಿವರು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತನಾಡಿ ಶೀಘ್ರವಾಗಿ ವೇತನ ಪಾವತಿ ಮಾಡುವಂತೆ ನಿರ್ದೇಶಿಸಿದರು.

ಇಂಡೋನೇಷಿಯಾದಲ್ಲಿ ಭೂಕಂಪ ಸುನಾಮಿಯೇಳುವ ಆತಂಕ

0

ಇಂಡೋನೇಷ್ಯಾದ ಈಸ್ಟ್​ ಪಪುವಾ ಮತ್ತು ಆಸ್ಟ್ರೇಲಿಯಾದ ನ್ಯೂ ಗಿನಿಯಾ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.6 ರಷ್ಟು ದಾಖಲಾಗಿದ್ದು, ಭೂಕಂಪದ ನಂತರ ಅಮೆರಿಕದ ಜಿಯೊಲಾಜಿಕಲ್ ಸರ್ವೇ ಸಂಸ್ಥೆಯು ಸುನಾಮಿ ಎಚ್ಚರಿಕೆ ನೀಡಿದೆ.

ಕೈನಂಟು ಪಟ್ಟಣಕ್ಕೆ 67 ಕಿಲೋಮೀಟರ್ ದೂರದಲ್ಲಿ ಭೂಮಿಯ 61 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಸುತ್ತಲ 1,000 ಕಿಮೀ ವ್ಯಾಪ್ತಿಯಲ್ಲಿ ಸುನಾಮಿ ಅಪ್ಪಳಿಸಬಹುದು ಎಂದು ಜಿಯಾಲಾಜಿಕಲ್ ಸರ್ವೇ ಎಚ್ಚರಿಕೆ ನೀಡಿದೆ.

ಹಳ್ಳಿಯ ಬದುಕನ್ನೇ ಬದಲಿಸಿದ ಶಿಕ್ಷಕ ಉಮೇಶ್ ಅವರ ಯಶೋಗಾಥೆ

0

ಉಮೇಶ್ ಟಿ ಪಿ ಅವರಿಗೆ ಶಿಕ್ಷಣವೇ ಗುರಿ, ಧ್ಯೇಯ. ಬುಡಕಟ್ಟು ಜನಾಂಗದ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಹಿಡಿದು ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುವರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಮೃತಪುರ ಗ್ರಾಮವನ್ನು ಅವರು ಬದಲಾಯಿಸಿದ್ದಾರೆ.

ಅಮೃತಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ 42 ವರ್ಷದ ಉಮೇಶ್ ಅವರಿಗೆ 2022ನೇ ಸಾಲಿನ ಅತ್ಯುತ್ತಮ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. 2004ರಲ್ಲಿ ಬಳ್ಳಾರಿ ಜಿಲ್ಲೆಯ ಚಿಕ್ಕಬೆಳ್ಳಾರಿಯಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಯಾದ ಉಮೇಶ್ ಅವರು ನಂತರ ಹೊಳಲ್ಕೆರೆ ತಾಲ್ಲೂಕಿನ ಕೇಶವಪುರ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದರು.

ಅಮೃತಪುರ ಸರ್ಕಾರಿ ಶಾಲೆಗೆ ಸೇರ್ಪಡೆಯಾದರು. ಅಲ್ಲಿ ಕಳೆದ 12 ವರ್ಷಗಳಿಂದ ಬೋಧನೆ ಮಾಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಮೃತಪುರ ಒಂದು ಕುಗ್ರಾಮವಾಗಿದ್ದು ಇಲ್ಲಿ ಬುಡಕಟ್ಟು ಜನಾಂಗದವರು ನೆಲೆಸಿದ್ದಾರೆ. ಇಲ್ಲಿಗೆ ಇನ್ನೂ ಬಸ್ಸು ಸೌಲಭ್ಯವಿಲ್ಲ. ಬಸ್ಸಿನಲ್ಲಿ ಹೋಗಬೇಕೆಂದರೆ ಚಿತ್ರಹಳ್ಳಿ ಗೇಟ್ ಬಸ್ ನಿಲ್ದಾಣಕ್ಕೆ 5 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು.

ಅರೆ ಅಲೆಮಾರಿ ಬುಡಕಟ್ಟುಗಳು ಜನಾಂಗವಾದ ಕಾಡು ಗೊಲ್ಲರು ವಾಸಿಸುತ್ತಿರುವ ಈ ಪ್ರದೇಶದ ಜನರು ಶಿಕ್ಷಣದಿಂದ ಬಹುಪಾಲು ವಂಚಿತರಾಗಿದ್ದಾರೆ. ಉಮೇಶ್ ಅವರು ಈ ಶಾಲೆಗೆ ಶಿಕ್ಷಕ ವೃತ್ತಿಗೆ ಸೇರಿದಾಗ ಇಲ್ಲಿನ ಮಕ್ಕಳು ಮತ್ತು ಅವರ ಮನೆಯವರಲ್ಲಿ ಶಿಸ್ತು ಮತ್ತು ಸ್ವಚ್ಛತೆ ತರುವ ಪ್ರಯತ್ನ ಮಾಡಿದರು, ಅದರಲ್ಲಿ ಯಶಸ್ಸು ಕೂಡ ಕಂಡರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಜೊತೆ ಸೇರಿ ಹಣ ಸಂಗ್ರಹಿಸಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಶಾಲೆಗೆ ಕಟ್ಟಡ, ಅಡುಗೆ ಮನೆ, ಹಾಲ್, ಶೌಚಾಲಯ, ಗ್ರಂಥಾಲಯ ಮತ್ತು ಸ್ಮಾರ್ಟ್ ತರಗತಿಗಳನ್ನು ತರುವಲ್ಲಿ ಕೂಡ ಉಮೇಶ್ ಯಶಸ್ವಿಯಾದರು.

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಮೂಡಿಸಲು ಶಾಲೆಯಲ್ಲಿ ಮಿನಿ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಿದರು. ಇದಕ್ಕಾಗಿ ಅವರು ಚಿತ್ರದುರ್ಗದ ಕಾಲೇಜುಗಳಿಂದ ಬಳಸಿದ ಮತ್ತು ಹಳೆಯದಾದ ವೈಜ್ಞಾನಿಕ ಉಪಕರಣಗಳು ಮತ್ತು ರಾಸಾಯನಿಕಗಳನ್ನು ಸಂಗ್ರಹಿಸಿ ಮಕ್ಕಳಿಗೆ ಪ್ರಯೋಗಗಳನ್ನು ಪ್ರದರ್ಶಿಸಿದರು.

2016 ರಲ್ಲಿ, OSAAT (ಒನ್ ಸ್ಕೂಲ್ ಅಟ್ ಎ ಟೈಮ್) ಎಂಬ ಖಾಸಗಿ ಎನ್‌ಜಿಒ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲ್ಕು ಸುಸಜ್ಜಿತ ಕೊಠಡಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶೌಚಾಲಯಗಳು, 20 ಡೆಸ್ಕ್‌ಗಳು ಮತ್ತು 60 ಓದುವ ಅಧ್ಯಯನ ಟೇಬಲ್‌ಗಳನ್ನು ಶಾಲೆಗೆ ನೀಡಿತು. OSAAT, ಗ್ರಾಮೀಣ ಶಾಲೆಗಳ ಮೂಲಸೌಕರ್ಯವನ್ನು ಪುನರ್ನಿರ್ಮಾಣ ಮಾಡಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾಗಿದೆ. ಇದನ್ನು ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಭಾರತೀಯ ಮೂಲದ ಎಂಟು ಐಟಿ ವೃತ್ತಿಪರರ ಗುಂಪು ಸ್ಥಾಪಿಸಿದೆ.

ಉಮೇಶ್ ಅವರು ಕಲಿಸಿದ ಮೊದಲ ತಂಡದ ವಿದ್ಯಾರ್ಥಿಗಳು ಈಗ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ, ಕೆಲವರು ಸರ್ಕಾರಿ ಸೇವೆಗೆ ಸೇರಿದ್ದಾರೆ. 2012ರಲ್ಲಿ ಶಾಲೆಯು ಕೇವಲ 32 ಮಕ್ಕಳನ್ನು ಹೊಂದಿತ್ತು,ಈಗ ನಿಯಮಿತವಾಗಿ ಬರುವ 85 ಮಕ್ಕಳಿಗೆ ಸಂಖ್ಯೆ ಹೆಚ್ಚಾಯಿತು. ನಮ್ಮ ಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು 2,500 ಕ್ಕೂ ಹೆಚ್ಚು ಪುಸ್ತಕಗಳಿವೆ. ಭವಿಷ್ಯದ ನಾಯಕರನ್ನು ರೂಪಿಸುವ ಉದ್ದೇಶದಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಇ-ಲರ್ನಿಂಗ್ ಪ್ಲಾಟ್‌ಫಾರ್ಮ್‌ನ ಬಳಕೆಯು ಹಲವು ವಿಷಯಗಳ ಬಗ್ಗೆ ಜ್ಞಾನವನ್ನು ಒದಗಿಸಲು ನಮಗೆ ಮತ್ತು ನಮ್ಮ ಮಕ್ಕಳಿಗೆ ಸಹಾಯ ಮಾಡಿದೆ ಎಂದು ಉಮೇಶ್ ಅವರು ತಿಳಿಸಿದರು.

ನಾನು ಕಳೆದ 19 ವರ್ಷಗಳಿಂದ ಸಮಾಜಕ್ಕಾಗಿ ಉತ್ತಮ ಮಕ್ಕಳ ಅಮೂಲ್ಯ ಆಸ್ತಿಯನ್ನು ನೀಡಿದ್ದೇನೆ. ನನ್ನ ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ಪ್ರತಿಯೊಬ್ಬ ಶಿಕ್ಷಕರು ತಮ್ಮ ವಾರ್ಡ್ ಮತ್ತು ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ತಲುಪುವಂತೆ ಮತ್ತು ಸರ್ಕಾರಿ ಶಾಲೆಗಳು ಉಳಿಯುವಂತೆ ನೋಡಿಕೊಂಡರೆ ಸರ್ಕಾರಿ ಶಾಲೆಗಳು ಉಳಿಯಬಹುದು ಎಂದು ಉಮೇಶ್ ಹೇಳಿದರು. ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನದ ಅಧ್ಯಯನವನ್ನು ಹುಟ್ಟುಹಾಕಲು ಪ್ರಯೋಗಾಲಯವಿಲ್ಲದ ಕಾರಣ, ನಾನು ನೆರೆಹೊರೆಯ ಪ್ರೌಢಶಾಲೆಗಳು ಮತ್ತು ವಿಜ್ಞಾನ ಕಾಲೇಜಿಗೆ ಭೇಟಿ ನೀಡಲು ನಿರ್ಧರಿಸಿದೆ, ಅಲ್ಲಿ ನಾನು ಬೋಧನೆಗಾಗಿ ಬಳಸುವ ಬೀಕರ್‌ಗಳು ಮತ್ತು ಇತರ ಉಪಕರಣಗಳು ಮತ್ತು ರಾಸಾಯನಿಕಗಳನ್ನು ಸಂಗ್ರಹಿಸಿದೆ. ನನ್ನ ಅನೇಕ ವಿದ್ಯಾರ್ಥಿಗಳು ಈಗ ಪಿಯುನಲ್ಲಿ ವಿಜ್ಞಾನ ವಿಷಯ ಓದುತ್ತಿದ್ದಾರೆ ಎಂದರು.

ಹೊಳಲ್ಕೆರೆ ಬಿಇಒ ಶ್ರೀನಿವಾಸ್, ಕಳೆದ 10 ವರ್ಷಗಳಿಂದ ಈ ಶಾಲೆಗೆ ಭೇಟಿ ನೀಡುತ್ತಿದ್ದು, ಶೇಕಡವಾರು ಹಾಜರಾತಿ ಮತ್ತು ದಾಖಲಾತಿ ಹೊಂದಿರುವ ಈ ಶಾಲೆ ಪರಿವರ್ತನೆಯಾಗಿದೆ. ಮಕ್ಕಳು ಅಧ್ಯಯನಶೀಲರಾಗುತ್ತಿದ್ದಾರೆ ಎಂದರು.

ಐಟಿ ಸಾಧಕರು ಹಣ ಸಂಗ್ರಹ
OSAAT ನ ವಾದಿರಾಜ ಭಟ್, ನಾವು ಐಟಿ ವೃತ್ತಿಪರರು ಚಾರಿಟಿಗಾಗಿ ನಿಧಿಸಂಗ್ರಹಣೆಗಾಗಿ ಕೆಲಸ ಮಾಡಲು ತಂಡವನ್ನು ಹೊಂದಿದ್ದೇವೆ. ಗ್ರಾಮೀಣ ಹಿಂದುಳಿದ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುವುದು ನಮ್ಮ ಧ್ಯೇಯವಾಗಿದೆ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಹಳೆಯದಾಗಿದ್ದು, ಶಿಥಿಲಗೊಂಡಿದ್ದು, ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ. ಶಾಲೆಗಳ ದುಸ್ಥಿತಿ OSAAT ನ ಗಮನ ಸೆಳೆಯಿತು, ಇದು ಗ್ರಾಮೀಣ ಮಕ್ಕಳಿಗೆ ಸಹಾಯ ಮಾಡಲು ಈ ಕಲಿಕೆಯ ಕೇಂದ್ರಗಳನ್ನು ಸರಿಪಡಿಸಲು ಮತ್ತು ಪುನರುಜ್ಜೀವನಗೊಳಿಸಲು ಕೆಲಸ ಮಾಡುತ್ತಿದೆ ಎಂದರು.

ವಾಹನ ಚಾಲಕರೆ ಬೀದಿ ಪ್ರಾಣಿಗಳ ಬಗ್ಗೆ ದಯೆ ಇರಲಿ

0

ಒಮ್ಮೊಮ್ಮೆ ನನಗೆ ಅನ್ಸುತ್ತೆ…! ಮನುಷ್ಯ ಕೆಲವೊಂದು ಬಾರಿ ಎಷ್ಟೊಂದು ಕ್ರೂರಿ ಆಗಿಬಿಡುತ್ತಾನೆ ಅಂತ…

ನಾನು ಯಾಕ್ ಈ ಮಾತನ್ನ ಹೇಳ್ತಾ ಇದೀನಿ ಅಂದ್ರೆ… ಮೊನ್ನೆ ನಾನು ಊರಿಗೆ ಹೋಗಲು ಬಸ್ ನಲ್ಲಿ ಕುಳಿತ್ತಿದ್ದೆ. ಬಸ್ ಹೊರಡಲು ಇನ್ನೂ ಸ್ವಲ್ಪ ಸಮಯವಿತ್ತು. ನಾನು ಕಿಟಕಿ ಬಳಿ ಕುಳಿತು ಹೊರಗೆ ಕಣ್ಣಾಡಿಸುತ್ತಿದ್ದೆ. ಆಗ ಅಲ್ಲೊಂದು ನಾಯಿ ರಸ್ತೆಯ ಬದಿ ಬಿದ್ದ ಚೂರು ಪಾರು ತಿಂಡಿ ತಿನಿಸುಗಳನ್ನು ಹೇರಕುತ್ತಿತ್ತು.
ಅಷ್ಟರಲ್ಲಿ ಒಂದು ಕಾರು ಬರ್ರನೇ ಬಂದು ರಸ್ತೆಯ ಬದಿ ಇದ್ದ ನಾಯಿಯ ಮೇಲೆ ತನ್ನ ಚಕ್ರವನ್ನು ಹರಿಸಿತು.

ಆಗ ನಾನು ಸೇರಿದಂತೆ ಅಲ್ಲಿರುವ ಕೆಲವು ಮಂದಿಗಳು ಅಯ್ಯೋ…! ಎಂದು ಕಿರಿಚಿದೇವು… ಆದರೆ, ಕಾರು ಚಾಲಕ ತನ್ನ ಗಾಡಿಯನ್ನು ನಿಲ್ಲಿಸದೇ ಹೋಗಿ ಬಿಟ್ಟ. ಅಷ್ಟರೊಳಗೆ ಪಾಪ ಆ ನಾಯಿಯ ಕಿವಿ,ಮೂಗು ಗಳಿಂದ ರಕ್ತ ಬರಲಾರಂಭಿಸಿತ್ತು. ಜೊತೆಗೆ ಹೊಟ್ಟೆಯ ಭಾಗದಲ್ಲಿ ಜಜ್ಜಿ ಅಪ್ಪಚ್ಚಿಯಾಗಿ ಹೋಗಿತ್ತು. ಪಾಪ ನಾಯಿ ನರಳಿ ನರಳಿ ತನ್ನ ಪ್ರಾಣವನ್ನು ಬಿಟ್ಟಿತ್ತು…

ನನಗೆ ಅನ್ಸುತ್ತೆ, ಆ ಕಾರುಚಾಲಕನಿಗೆ ಕರುಣೆಯೇ ಇಲ್ಲವೇನು ಅಂತ. ಆತನಿಗೆ ತನ್ನಿಂದ ಒಂದು ಜೀವ ಹೋಗುತ್ತಿದೆ ಎಂಬ ಪಶ್ಚತಾಪ ಇಲ್ಲವೇನು…?

ಮನುಷ್ಯ ಕ್ರೂರ ಪ್ರಾಣಿ ನಿಜ. ಆದರೆ, ತನ್ನಂತೆಯೇ ಪ್ರಾಣಿಗಳಿಗೂ ಮನಸ್ಸು ಇರುತ್ತದೆ ಎಂಬ ಸತ್ಯ ತಿಳಿದುಕೊಳ್ಳದೇ ಇರುವಷ್ಟು ದಡ್ಡನಲ್ಲ.

ಪ್ರಾಣಿಗಳು ನಮ್ಮಂತೆಯೇ ಕುಟುಂಬಗಳನ್ನ ಒಳಗೊಂಡಿರುತ್ತದೆ. ನಿಮ್ಮ ಮನೆಯಲ್ಲಿನ ಮಕ್ಕಳು ಪೇಟೆಯಿಂದ ಹೇಗೆ ನೀವು ತರುವ ತಿಂಡಿ ತಿನಿಸುಗಳನ್ನು ತಿನ್ನಲು ಕಾದು ಕುಳಿತಿರುತ್ತಾರೋ, ಹಾಗೆಯೇ ಪ್ರಾಣಿಗಳ ಮರಿಗಳು ಕೂಡ ಕಾದು ಕುಳಿತಿರುತ್ತವೆ.

ಸ್ನೇಹಿತರೇ,ಒಮ್ಮೆ ಯೋಚಿಸಿ ನಾವು ಚಿಕ್ಕ ಇಂಜೆಕ್ಷನ್ ಸೂಜಿಗೆ ನೋವು ಅಂತ ಹೆದುರುತ್ತೇವೆ. ಆದ್ರೇ, ಈ ರೀತಿ ಗಾಯಗೊಂಡು ತಮ್ಮ ಪ್ರಾಣ ಹೋಗುತ್ತಿರುವಾಗ ಆ ಮೂಖ ಪ್ರಾಣಿಗಳು ಎಷ್ಟೊಂದು ನೋವು ಅನುಭವಿಸುತ್ತವೆ ಎಂದು ಯೋಚಿಸಿ…

ಇನ್ನು ಮುಂದೆ ವಾಹನ ಚಾಲನೆ ಮಾಡ್ತಾ ನೀವು ಎಚ್ಚರವಾಗಿರಿ… ಜೊತೆಗೆ ಆ ಬಡ ಪ್ರಾಣಿಗಳನ್ನು ಬದುಕಲು ಬಿಡಿ…

  • ರಚನಾ.ಕೆ.ಆರ್