Wednesday, July 8, 2026
Wednesday, July 8, 2026

Voters Awareness in Shivamogga ವಿದ್ಯಾವಂತರು ಮತದಾನದ ಬಗ್ಗೆ ನಿರಾಸಕ್ತಿ ತೋರಬಾರದು- ಶ್ರೀಕಾಂತ್

Date:

Voters Awareness in Shivamogga ಶಿವಮೊಗ್ಗ, ಪಟ್ಟಣಗಳಲ್ಲಿ ವಾಸವಿರುವ ವಿದ್ಯಾವಂತರೇ ಮತಗಟ್ಟೆಗೆ ಬಾರದೆ ನಿರಾಸಕ್ತಿ ತೋರಿಸುವುದು ಸರಿಯಲ್ಲ. ಪ್ರಜಾಪ್ರಭುತ್ವ ನಮಗೆ ಕೊಟ್ಟ ಅವಕಾಶ, ಅದನ್ನು ಬಳಸಿ ಸಮರ್ಥ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಳೆದುಕೊಳ್ಳಬಾರದು. ಉದಾಸೀನ ತೊರೆದು ಮತಗಟ್ಟೆಗೆ ಬರಲೇಬೇಕು ಎನ್ನುವ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಲವಾರು ಪ್ರಯತ್ನ ಮಾಡುತ್ತಿರುವುದನ್ನು ವಿವರಿಸಿದವರು ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿಗಳಾದ ಕೆ. ಎಸ್. ಶ್ರೀಕಾಂತ್ ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಚುನಾವಣಾ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಸಮಿತಿ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಏಪ್ರಿಲ್ 24 ರಂದು ಏರ್ಪಡಿಸಿದ್ದ ಕವಿಗಳು ಬರೆದ ಕವನ, ಜಾನಪದ ಕಲಾವಿದರು ಹಾಡುವ ಲಾವಣಿ, ಗೀಗೀ ಪದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲಾವಿದರಾದ ಆಂಜನೇಯ ಜೋಗಿ ಅವರು ಲಾವಣಿ ಹಾಡಿದರು. ಕವಿಗಳಾದ ಸಾಗರದ ಗವಿಯಪ್ಪ, ಭದ್ರಾವತಿಯ ಕಾಂತಪ್ಪ, ಪ್ರೊ. ಸತ್ಯನಾರಾಯಣ, ಡಿ. ಗಣೇಶ್ ಕವನ ವಾಚಿಸಿದರು.

Voters Awareness in Shivamogga ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಶ್ರೀಮತಿ ಅನುಪಮ ಮತದಾರ ಜಾಗೃತಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಆದಿಮೂರ್ತಿ ಪಾರ್ಟಿ, ಪಕ್ಷ ನೋಡದೆ ಯೋಗ್ಯರಿಗೆ ಮತನೀಡಿ ಎಂದರು. ಪ್ರಿನ್ಸಿಪಾಲ್ ಡಾ. ಜಿ. ಮಧು ಮಾತನಾಡಿ ಪ್ರಥಮ ಮತದಾರರು ನೀವು. ನಿಮಗೆ ಅರಿವು ಮಾಡಿಕೊಡುವ ಈ ಕಾರ್ಯಕ್ರಮ ಅರ್ಥಪೂರ್ಣ ವಾಗಿದೆ ಎಂದರು.

ಮಹಾನಗರ ಪ್ರದೇಶಗಳಲ್ಲಿ ಸುಪ್ರಿಯಾ, ಕಜಾಪ ಸೋಮಿನಕಟ್ಟಿ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...