Monday, March 23, 2026
Monday, March 23, 2026
Home Blog Page 1424

ಪಿಎಫ್ಐ ಸರ್ವೆ ಮುಗಿದ ನಂತರ ಅದರ ಆಸ್ತಿ ಮುಟ್ಟುಗೋಲು- ಆರಗ ಜ್ಞಾನೇಂದ್ರ

0

ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ 5 ವರ್ಷಗಳ ಕಾಲ ನಿಷೇಧ ಕೇಂದ್ರ ಸರ್ಕಾರ ನೀಷೇಧಿಸಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪಿಎಓಫ್‌ ಸರ್ವೆ ಮುಗಿದ ಕೂಡಲೇ ವಶಕ್ಕೆ ಪಡೆದುಕೊಂಡ ಮುಖಂಡರ ಆಸ್ತಿ ಮುಟ್ಟುಗೋಲು ಮಾಡಲಾಗುತ್ತದೆ ಎಂದು ಸುಳಿವು ನೀಡಿದ್ದಾರೆ.
ಪಿಎಫ್‌ಐ ನಿಷೇಧಗೊಳಿಸಿದ ಕೇಂದ್ರ ಸರ್ಕಾರ ಪಿಎಫ್‌ಐ ನ ಅಧಿಕೃತ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಖಾತೆಗಳಲ್ಲಿ ಕೋಟ್ಯಾಂತರ ರೂ ಹಣವಿದ್ದು, ಇದನ್ನು ಹೊರತುಪಡಿಸಿ ಕೋಟ್ಯಾಂತರ ರೂ ಹಣ ಸಂಘಟನೆ ಬಳಿಯಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಿಎಫ್​ಐ ನಿಷೇಧ ಆದೇಶ ಹೊರಬಿದ್ದ ನಂತರ ಮಂಗಳೂರಿನ 12 ಪಿಎಫ್​​ಐ ಕಚೇರಿಗಳಿಗೆ ಬೀಗ ಹಾಕಲಾಗಿದೆ. ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮಂಗಳೂರು, ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೋಣಾಜೆ ಸೇರಿದಂತೆ ಹಲವು ಕಡೆ ತಡರಾತ್ರಿವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಕೆಲವು ಸಾಮಾನ್ಯ ಕಾರ್ಯಕರ್ತರ ಖಾತೆಯಲ್ಲಿ ಲಕ್ಷಾಂತರ ರೂ ಹಣ ಪತ್ತೆಯಾಗಿದೆ. ಇದು ದೇಶ, ವಿದೇಶಗಳಿಂದ ಬಂದಿರುವ ದೇಣಿಗೆ ಹಣವಾಗಿದ್ದು, ಯುಪಿಐ ಕೋಡ್, ಕ್ಯು ಆರ್ ಕೋಡ್ ಮೂಲಕ ಹಣವನ್ನು ಹಲವು ಬಾರಿ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಅಂಗಸಂಸ್ಥೆಗಳ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಐದು ವರ್ಷಗಳ ನಿಷೇಧದ ನಂತರ, ಗೃಹ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮುಖ್ಯಸ್ಥರಿಗೆ ಸಂಘಟನೆಯ ಇತರ ಕಚೇರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮತ್ತು ಹಣವನ್ನು ವಶಪಡಿಸಿಕೊಳ್ಳಲು ಹೇಳಿದೆ.

ಈ ನಡುವೆ ಹಿರಿಯ ಸರ್ಕಾರಿ ಅಧಿಕಾರಿಗಳ ಪ್ರಕಾರ, ಪಿಎಫ್‌ಐ ಸದಸ್ಯರು ಸಂಘಟನೆಯಿಂದ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಬೇಕಾಗುತ್ತದೆ, ಆದರೆ, ಅವರು ಮುಂದುವರಿದರೆ, ಅವರು ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಸೆಕ್ಷನ್ 3 ರ ಪ್ರಕಾರ, ಪಿಎಫ್‌ಐ ಅನ್ನು ನಿಷೇಧಿಸಲಾಗಿದ್ದು, ಒಮ್ಮೆ ಸಂಘಟನೆಯನ್ನು ಕಾನೂನುಬಾಹಿರ ಎಂದು ಘೋಷಿಸಿದ ನಂತರ, ಸ್ವಯಂ ಬಹಿರಂಗಪಡಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಯುಎಪಿಎ ತಿಳಿಸಿದೆ. ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳ ಸದಸ್ಯರು ಸಂಬಂಧಿತ ದಾಖಲೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ಅವುಗಳನ್ನು ಅವರಿಗೆ ಹಸ್ತಾಂತರಿಸಬೇಕು. ಪಿಎಫ್‌ಐ ಅನ್ನು ನಿಷೇಧಿಸಿದ ನಂತರ, ಸಂಘಟನೆಯನ್ನು ತೊರೆಯಲು ಅದರ ಸದಸ್ಯರಿಗೆ ಸಾಕಷ್ಟು ಸಮಯ ನೀಡಲಾಗುವುದು, ಆದರೆ ಅವರಿಂದ ಯಾವುದೇ ದೋಷಾರೋಪಣೆಯ ದಾಖಲೆಗಳು ಕಂಡುಬಂದರೆ, ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಪಂ ಮತ್ತು ರಾಜ್ಯ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡಿದ ಶಾಸಕ ಡಿ.ಎಸ್.ಅರುಣ್

0

ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಗ್ರಾಮಪಂಚಾಯಿತಿ ನೌಕರರಿಗೆ ಹಾಗೂ ಕೆಎಸ್ಆರ್ಟಿಸಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ವಿಧಾನಪರಿಷತ್​ನಲ್ಲಿ ಅವರು ಕೇಳಿದ ಚುಕ್ಕಿ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದ್ದಾರೆ. ಅದರ ಅನ್ವಯ ಕೆಎಸ್​​​ಆರ್​ಟಿಸಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಒಪ್ಪಿದೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಾರಿಗೆ ಸಚಿವರು ವೇತನ ಪರಿಷ್ಕರಣೆಗೆ ಒಪ್ಪಿದ್ದಾರೆ ಎಂದು ಡಿ.ಎಸ್. ಅರುಣ್ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ಕಾರ ಗ್ರಾಮಪಂಚಾಯಿತಿ ನೌಕರರ 16 ತಿಂಗಳ ವೇತನ ಬಾಕಿಯನ್ನು ಬಿಡುಗಡೆ ಮಾಡಬೇಕು ಎಂದು ಪ್ರಶ್ನಿಸಿದ್ದೆ. ಈ ಹಿನ್ನೆಲೆಯಲ್ಲಿ ಸರ್ಕಾರ 16 ತಿಂಗಳ ವೇತನ ಬಾಕಿ 7.31 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

ಮುರುಘಾ ಶರಣರಿಗೆ ನ್ಯಾಯಾಂಗ ಬಂಧನ ವಿಸ್ತರಣೆ

0

ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವೆಸಗಿದ ಆರೋಪದಲ್ಲಿ ಪೊಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಮುರುಘಾ ಶ್ರೀಗಳಿಗೆ ಜಾಮೀನು ಕೋರಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗಿತ್ತು.
ಎರಡು ಬಾರಿ ಜೈಲು ಅವಧಿಯನ್ನು ವಿಸ್ತರಣೆ ಮಾಡಿದ್ದ ನ್ಯಾಯಾಧೀಶೆ ಬಿ.ಕೆ.ಕೋಮಲ ಅವರು, ಇಂದು (ಮಂಗಳವಾರ) ಮತ್ತೆ ಅ.10ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವೆಸಗಿದ ಆರೋಪದಲ್ಲಿ ಮೇಲೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಯ ನ್ಯಾಯಾಂಗ ಬಂಧನ ಸೆಪ್ಟೆಂಬರ್ 14ರಿಂದ ವಿಸ್ತರಣೆಯಾಗಿತ್ತು.

ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು.

ಎಲ್ಲಾ ಮುಸ್ಲೀಮರೂ ಕೆಟ್ಟವರಲ್ಲ-ಈಶ್ವರಪ್ಪ

0

ಭಾರತಾಂಬೆಗೆ ಎಲ್ಲರೂ ಗೌರವ ಸಲ್ಲಿಸಬೇಕು, ಒಂದುವೇಳೆ ಗೌರವ ಸಲ್ಲಿಸಲು ಆಗುವುದಿಲ್ಲ ಎನ್ನುವರು ಈ ದೇಶಬಿಟ್ಟು ಹೋಗಬೇಕು ಎಂದು ವಿಧಾನ ಸಭಾ ಸದಸ್ಯರು ಮತ್ತು ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪನವರು ತಿಳಿಸಿದರು.

ಅವರು ಭಯೋತ್ಪಾದಕ ಸಂಘಟನೆಗಳನ್ನು ಈ ದೇಶದಲ್ಲಿ ನೀಷೇದಿಸಿ ಹಿಂದುತ್ವದ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿ ಬರೆದ ಮೋದಿ ಸರ್ಕಾರಕ್ಕೆ ಅಭಿನಂದಿಸಿ ಇದೊಂದು ಹಿಂದುತ್ವದ ವಿಜಯವೆಂದು ಬಾವಿಸಿ ಈ ದಿನ ಆರ್ಯ ವೈಶ್ಯ ಮಹಾಜನ ಸಮಿತಿ ಶಿವಮೊಗ್ಗ ಇವರು ಗಾಂದಿ ಬಜಾರ್ ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಡುತ್ತ

ಈ ಹಿಂದಿನಿಂದಲು ಮೊಗಲರು ನಮ್ಮ ದೇಶದ ದೇವಾಲಯ ಮತ್ತು ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸಿಕೊಂಡು ಈ ದೇಶವನ್ನು ತುಂಡು ತುಂಡಾಗಿ ಕತ್ತರಿಸಿದ್ದರು, ಅನೇಕ ಮಹನೀಯರ ತ್ಯಾಗ, ಬಲಿದಾನ, ತಪಸ್ಸು
ಇದರಿಂದಾಗಿ ನಮಗೆ ಸ್ವಾತಂತ್ರ್ಯ ಲಬಿಸಿದೆ. ಇಂತಹ ಸಂದರ್ಭದಲ್ಲಿ ಕೆಲ ಮುಸ್ಲಿಮ್ ಸಂಘಟನೆಗಳು ಈ ದೇಶದ ಭದ್ರತೆಗೆ ದಕ್ಕೆ ತರುತ್ತಿರುವುದನ್ನು ಗಮನಿಸಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿಗಳಾದ ಅಮಿತ್ ಶಾ ರವರು ಇಂದು ಪಿ.ಎಫ್.ಐ. ಸಂಘಟನೆಯನ್ನು ಬ್ಯಾನ್ ಮಾಡುವುದರ ಮೂಲಕ ಈ ದೇಶದಲ್ಲಿರುವ ದೇಶವಿರೋದಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಇಂತಹ
ನಾಯಕರಿಗೆ ನಾವೆಲ್ಲ ಅಭಿನಂದಿಸಲೇ ಬೇಕು ಎಂದು ಹೇಳಿದರು. ಬಂದಿತ ಎಲ್ಲ ಪ್ರಮುಖರು ಮುಸ್ಲೀಮ್ ರವರೇ ಆಗಿದ್ದಾರೆ, ಆದರೆ ಎಲ್ಲ ಮುಸಲ್ಮಾನರು ಕೆಟ್ಟವರಲ್ಲರ‍ಲ್ಲ ಅವರಲ್ಲೂ ದೇಶ ಪ್ರೇಮಿಗಳಿದ್ದಾರೆ ಎಂದು ತಿಳಿಸಿದರು. ಈ ದೇಶ ಹಿಂದೂ ರಾಷ್ಟ್ರ ವಾಗಬೇಕು ಎಂದು ನಮ್ಮ ಎಲ್ಲಾ ಹಿರಿಯ ಚೇತನಗಳ ಕನಸು ನನಸಾಗುವ ಸಮಯ ಬಂದಿದೆ. ಹಾಗಾಗಿ ಈ ದಿನವನ್ನು ಆರ್ಯ ವೈಶ್ಯ ಸಮಾಜದವರು ವಿಜಯೋತ್ಸವದಿನವೆಂದು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಆರ್ಯ ವೈಶ್ಯ ಮಹಾಜನ ಸಮಿತಿ ಉಪಾಧ್ಯಕ್ಷ ಎಸ್.ಕೆ.ಶೇಷಾಚಲ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.

ಆರ್ಯ ವೈಶ್ಯ ಮಹಾಜನ ಸಮಿತಿ ಕಾರ್ಯದರ್ಶಿ ನಟರಾಜ್, ಮಾಜಿ ಜಿ.ಪಂ. ಸದಸ್ಯ ಕೆ.ಇ.ಕಾಂತೇಶ್, ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆರ್ಯ ವೈಶ್ಯ ಭಜನಾ ಮಂಡಳಿ ಸದಸ್ಯೆಯರು ಪ್ರಾರ್ಥನೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ವಂದನಾರ್ಪಣೆ ಮಾಡಿದರು.

ಸುಪ್ರೀಂ ಕೋರ್ಟ್ ಕಲಾಪ ವೆಬ್ ಸೈಟ್ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು

0

ಸೆಪ್ಟೆಂಬರ್ 27 ರಿಂದ ಇಂದಿನಿಂದ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಇನ್ನು ಮುಂದೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಕಲಾಪಗಳ ನೇರ ಪ್ರಸಾರ ಆರಂಭವಾಗಿವೆ. ಈ ಮೂಲಕ ಸಾಮಾನ್ಯ ಜನರು ಕೂಡ ತಮ್ಮ ಮನೆಯಲ್ಲಿ ಕುಳಿತು ಸುಪ್ರೀಂ ಕೋರ್ಟ್ ವಿಚಾರಣೆಯ ಕಲಾಪಗಳನ್ನು ವೀಕ್ಷಿಸಿಬಹುದಾಗಿದೆ.

ಸದ್ಯ ಸಾಂವಿಧಾನಿಕ ವಿಷಯಗಳ ನೇರ ಪ್ರಸಾರ ಮಾತ್ರ ನಡೆಯಲಿದೆ.
ಇಂದು ಏನೆಲ್ಲಾ ವಿಚಾರಣೆ ನಡೆಯಿತು..?
ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಮುಂದೆ ಸಂವಿಧಾನಕ್ಕೆ ವಿರುದ್ಧವೆಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗಳನ್ನ ಮಾತ್ರ ಇಂದಿನಿಂದ ತಿಳಿದುಕೊಳ್ಳಬಹುದು. ಅದರಂತೆ ಇಂದು ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳಿಗೆ ನೀಡಲಾದ 10 ಪರ್ಸೆಂಟ್ ಮೀಸಲಾತಿ, ಶಿವಸೇನೆಯ ರಾಜಕೀಯ ವಿವಾದ, ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಸಂಘರ್ಷ, NRC-CAA ಮುಂತಾದ ಪ್ರಮುಖ ವಿಷಯಗಳ ಬಗ್ಗೆ ವಿಚಾರಣೆ ನಡೆದಿದೆ.

ಕಳೆದ ವಾರವಷ್ಟೇ ಈ ಪ್ರಕರಣಗಳ ಲೈವ್ ಸ್ಟ್ರೀಮಿಂಗ್ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ಅಧ್ಯಕ್ಷತೆಯಲ್ಲಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.

ವಿಚಾರಣೆಯನ್ನ ವೀಕ್ಷಿಸಲು ಜನರು ಸುಪ್ರೀಂ ಕೋರ್ಟ್​ನ ಅಧಿಕೃತ ವೆಬ್‌ಸೈಟ್ https://webcast.gov.in/scindia/ ಗೆ ಲಾಗಿನ್ ಆಗಬೇಕು.

ದೇವಿ ಬ್ರಹ್ಮಚಾರಿಣಿ

0

ನವ ದುರ್ಗೆಯರಲ್ಲಿ ಒಬ್ಬಳಾದ ದೇವಿ ಬ್ರಹ್ಮಚಾರಿಣಿ ಯನ್ನು ನವರಾತ್ರಿಯ ದ್ವಿತೀಯ ದಿನ ಆರಾಧಿಸಿ ಪೂಜಿಸಿ ಸಂಕಲ್ಪ ಸಿದ್ದಿಗೆ ಪ್ರಾರ್ಥಿಸುತ್ತಾರೆ .
ಒಂದು ದಂತಕಥೆ ಪ್ರಚಲಿತದಲ್ಲಿರುವಂತೆ , ಕನ್ಯೆ ಪಾರ್ವತೀ ದೇವಿಯು ಪರಶಿವನನ್ನು ವರಿಸಲು ನಿರ್ಧರಿಸಿ ದಾಗ ತಂದೆತಾಯಿಯರು ಅಸಮ್ಮತಿ ಸೂಚಿಸುತ್ತಾರೆ . ಆದರೆ ದೇವಿಯ ನಿರ್ಧಾರ ಅಚಲ , ಅಲ್ಲದೆ ಶತ ಪ್ರಯತ್ನಮಾಡಿದರೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸುಮಾರು 5000 ವರ್ಷಗಳ ಕಾಲ ಘನ ಘೋರ ತಪಸ್ಸನ್ನು ಮಾಡುತ್ತಾಳೆ , ಶಿವನಿರುವೆಡೆಯಲ್ಲೆಲ್ಲ ಅವನ ಗಮನ ಸೆಳೆಯಲು ಕಾಡುಮೇಡುಗಳಲ್ಲಿ , ಬೆಟ್ಟಗುಡ್ಡಗಳಲ್ಲಿ , ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಾಳೆ , ಅವನ ಕೆಲಸ ಕಾರ್ಯಗಳಲ್ಲಿ ಸಹಕರಿಸುತ್ತಾಳೆ , ಸಂಚರಿಸುತ್ತಾಳೆ . ದೇವರುಗಳು . ಸಹ ಶಿವನಲ್ಲಿ ಪ್ರೀತಿ ಪ್ರೇಮ ಕಾಮ ಜಾಗೃತವಾಗಲು ಕಾಮದೇವನನ್ನು ಪ್ರಚೋದಿಸುತ್ತಾರೆ , ಆದರೆ ಎಲ್ಲಾ ಪ್ರಯತ್ನಗಳಲ್ಲಿ ವಿಫಲರಾಗುತ್ತಾರೆ . ಮತ್ತೊಂದೆಡೆ ಪಾರ್ವತಿಯ ತಪಸ್ಸಿಗೆ ಭಂಗ ತರಲು ಪ್ರಚಂಡಾ ಸುರ ರಾಕ್ಷಸನು ರಾಕ್ಷಸರೊಡನೆ ಸ್ವತಃ ಉಪಟಳ ನೀಡುವ ಮೂಲಕ ಪ್ರಯತ್ನಿಸಿ ದೇವಿಯ ಕೆಂಗಣ್ಣಿಗೆ ಗುರಿಯಾಗಿ ಭಸ್ಮವಾಗುತ್ತಾನೆ .
ಕೊನೆಗೂ ಶಿವನ ಅನೇಕ ಪರೀಕ್ಷೆಗಳಲ್ಲಿ ಸೂಕ್ತ ರೀತಿಯಲ್ಲಿ ಪಾರ್ವತಿ ಗೆಲ್ಲುತ್ತಾಳೆ , ಆಗ ಶಿವನು ತನ್ನ ಸಂಕಲ್ಪವನ್ನು ಸಡಿಲಿಸಿ ಪಾರ್ವತಿಯನ್ನು ಮದುವೆಯಾಗುತ್ತಾನೆ .
ಪಾರ್ವತಿ ಗೆ ತನ್ನ ತಪಸ್ಸಿನ ಅವಧಿಯಲ್ಲಿ ಕೇವಲ ಬಿಲ್ವಪತ್ರೆ ಮತ್ತು ನದಿಯ ನೀರೇ ಆಹಾರವಾಗಿತ್ತು . ಪಾರ್ವತಿಯ ನಿಶ್ಚಲತೆ , ದೃಢತೆ , ಬ್ರಹ್ಮಚರ್ಯ ಪಾಲನೆ , ಕಷ್ಟ ಸಹಿಷ್ಣುತೆ , ಯ ಗುಣಗಳು ಮಹಿಳೆಯರಿಗೆ ಮಾರ್ಗದರ್ಶಿ . ಹಾಗಾಗಿ ಅವಳನ್ನು ಭಕ್ತಿ ಯಿಂದ ನವರಾತ್ರಿಯಲ್ಲಿ ಆರಾಧಿಸುತ್ತಾರೆ .
ಲೇ: ಎಮ್. ತುಳಸಿರಾಮ್

ನವರಾತ್ರಿಯ ನವದುರ್ಗೆಯರು

ದೇವಿ ಚಂದ್ರ ಘಂಟಿ ;
ಶಿವ ಮಹಾ ಪುರಾಣದ ಅನ್ವಯ , ಚಂದ್ರ ಘಂಟಿ ಯಲ್ಲಿ ಚಂದ್ರಶೇಖರನ ರೂಪದಲ್ಲಿ ಶಿವನ ” ಶಕ್ತಿ “. ಶಿವನ (ಅರ್ಧನಾರೀಶ್ವರ) ಪ್ರತಿಯೊಂದು ಅಂಶವು ಶಕ್ತಿಯಿಂದ ಕೂಡಿದೆ.


ಚಂದ್ರಘಂಟಿದೆವಿಯನ್ನು ಚಂದ್ರ ಚೂಡ – ಚಂಡಿಕಾ – ರಣಚಂಡಿ ಎಂಬ ನಾನಾ ಹೆಸರುಗಳಿಂದ ಕರೆಯುತ್ತಾರೆ.
ಚಂದ್ರಘಂಟಿ ಹತ್ತು ಕೈಗಳನ್ನು ಹೊಂದಿದ್ದು ತ್ರಿಶೂಲ, ಗದೆ ,ಬಿಲ್ಲು ಬಾಣ , ಕತ್ತಿ , ಕಮಲ ಪುಷ್ಪ ,ಘಂಟೆ , ಕಮಂಡಲು ಗಳನ್ನು ಪಿಡಿದಿದ್ದು, ಒಂದು ಕೈ ಅಭಯಮುದ್ರೆ ಅಥವ ಆಶೀರ್ವಾದ ಕ್ಕಾಗಿ ಇದೆ .ಹಣೆಯ ಮೇಲೆ ಘಂಟೆಯನ್ನು ಚಿತ್ರಿಸುವ ಅರ್ಧjಚಂದ್ರ , ಹಣೆಯ ಮಧ್ಯದಲ್ಲಿ ಮೂರನೇ ಕಣ್ಣನ್ನು ಹೊಂದಿದ್ದಾಳೆ . ಸಿಂಹಾರೂಡಳು.


ಚಂದ್ರಘಂಟಿ ದೇವಿಯಲ್ಲಿ ರೂಪ ಸೌಂದರ್ಯ, ತೇಜಸ್ಸಿನೊಡನೆ ಧೈರ್ಯ , ಶೌರ್ಯ, ಸಾಹಸಗಳೂ ಸಮ್ಮಿಳಿತ ವಾಗಿವೆ .
ದಯಾಮಯಿ , ಮಾತೃ ಹೃದಯಿ , ಕರುಣಾಮಯಿ ತನ್ನ ಭಕ್ತರಿಗೆ ಶಾಂತಿ ಸಮೃದ್ಧಿ ನೀಡಿ ತಾಯಿ ಪ್ರೇಮ ನೀಡುವಳು .
ರಾಕ್ಷಸ ಸಂಹಾರ ಯುದ್ಧದಲ್ಲಿ ದೇವಿಯ ಘಂಟೆಯಿಂದ ಉತ್ಪತ್ತಿಯಾಗಿ ಬರುತ್ತಿದ್ದ ಗುಡುಗಿನ ಶಬ್ದಕ್ಕೆ ದಿಗ್ಬ್ರಮೆ ಗೊಂಡು ರಾಕ್ಷಸರು ಪಾರ್ಶ್ವವಾಯು ಪೀಡಿತರಾದರೆಂಬ ಮಾತು ಜನಪದರಲ್ಲಿದೆ . ದುಷ್ಟರಿಗೆ ರಾಕ್ಷಸರಿಗೆ ಸಿಂಹ ಸ್ವಪ್ನ ವಾಗಿದ್ದಾಳೆ .
ನವರಾತ್ರಿ ಯ ಮೂರನೇ ದಿನ ದೇವಿಯ ಅನುಗ್ರಹಕ್ಕಾಗಿ ಭಕ್ತಿಯಿಂದ ಆರಾಧಿಸುವ ಮೂಲಕ ಭಕ್ತರು ಶಾಂತಿ ಸಮೃದ್ಧಿ ಪಡೆಯುತ್ತಾರೆ .

ಕಾನೂನು ಬಾಹಿರ ಚಟುವಟಿಕೆಯ ಪಿಎಫ್ಐ & ಇತರ 5 ಸಂಘಟನೆಗಳಿಗೆ ನಿಷೇಧ-ಆರಗ ಜ್ಞಾನೇಂದ್ರ

0

ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ನಿಷೇಧಿಸಿ ಕೇಂದ್ರ ಹೊರಡಿಸಿರುವ ಆದೇಶವನ್ನು ನಾನು ಸ್ವಾಗತಿಸುತ್ತೇನೆ.

ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ನೆರವು ನೀಡುತ್ತಿರುವ ಕೋಮುವಾದಿ ಪಿಎಫ್‌ಐ ಮತ್ತು ಅದರ ಇತರ ಅಂಗ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 5 ವರ್ಷಗಳ ಅವಧಿಗೆ ನಿಷೇಧ ವಿಧಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳಾದ ರಿಹಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಎನ್‌ಸಿಎಚ್‌ಆರ್‌ಒ, ನ್ಯಾಷನಲ್‌ ವುಮೆನ್ಸ್‌ ಫ್ರಂಟ್‌, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಸೇರಿದಂತೆ 5 ಸಂಘಟನೆಗಳನ್ನು ನಿಷೇಧಿಸಲಾಗಿದೆ.

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು, ಪಿಎಫ್‌ಐ ಹಾಗೂ ಇತರ ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳವರೆಗೆ ಯು ಎ ಪಿಎ ಕಾಯಿದೆ ಅಡಿ ನಿಷೇಧಿಸಿರುವುದನ್ನು ಸ್ವಾಗತಿಸುತ್ತೇನೆ.

ದೇಶದಲ್ಲಿ ಕೋಮು ಸೌಹಾರ್ದವನ್ನು ಕೆಡಿಸಿ, ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಷೇಧ ಕ್ರಮ ವಹಿಸಲಾಗಿದೆ.

ಪಿಎಫ್ಐ ನಿಷೇಧವನ್ನ ಇಡೀ ದೇಶವೇ ಸ್ವಾಗತಿಸುತ್ತದೆ-ಅಶ್ವತ್ಥನಾರಾಯಣ

0

ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಪಿಎಫ್‌ಐ ಮತ್ತು ಅದರ 8 ಅಂಗಸಂಸ್ಥೆಗಳನ್ನು 5 ವರ್ಷಗಳ ಮಟ್ಟಿಗೆ ನಿಷೇಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಇಡೀ ದೇಶವೇ ಸ್ವಾಗತಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘಟನೆಯು ಬೇರೆ ಯಾವುದೇ ರೂಪದಲ್ಲಿ ತಲೆ ಎತ್ತದಂತೆ ತೀವ್ರ ನಿಗಾ ವಹಿಸಲಾಗುವುದು ಎಂದರು.

ಪಿಎಫ್‌ಐ ಸಂಘಟನೆಯು ವಿದೇಶಿ ಜಾಲಗಳ ಮೂಲಕ ಅಕ್ರಮ ನೆರವು ಪಡೆದುಕೊಳ್ಳುತ್ತಿತ್ತು. ಈ ಮೂಲಕ ದೇಶದಲ್ಲಿ ಧಾರ್ಮಿಕ ಸಂಘರ್ಷ ಉಂಟುಮಾಡಲು ಅದು ಸಂಚು ರೂಪಿಸುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ಕೇಂದ್ರ ಸರ್ಕಾರವು ಪಿಎಫ್ ಐ ಸಂಘಟನೆಯ ವಿಧ್ವಂಸಕ ಚಟುವಟಿಕೆಗಳು ಹಾಗೂ ಅನುಮಾನಾಸ್ಪದ ಹಣಕಾಸು ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಇದರ ಬೆನ್ನಲ್ಲೇ ಎರಡು ದಿವಸಗಳ ಹಿಂದೆ ದೇಶಾದ್ಯಂತ ಆ ಸಂಘಟನೆಯ ಕಚೇರಿಗಳು ಮತ್ತು ನಾಯಕರ ಮೇಲೆ ಎನ್‌ಐಎ ದಾಳಿ ನಡೆಸಲಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮಾಜ ಮತ್ತು ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುವ ಯಾವ ಸಂಘಟನೆಗಳನ್ನು ಕೂಡ ಬಿಡುವುದಿಲ್ಲ. ಕೇಂದ್ರ ಸರ್ಕಾರದ ದಾಳಿಯ ಬೆನ್ನಲ್ಲೇ ರಾಜ್ಯ ಪೊಲೀಸರು ಕೂಡ ಮಂಗಳವಾರ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದರು ಎಂದು ಅವರು ಸ್ಪಷ್ಟಪಡಿಸಿದರು.

ಭಾರತ 2047ರ ವೇಳೆಗೆ ಸಮೃದ್ಧ ಹಾಗೂ ಬಲಿಷ್ಠ ರಾಷ್ಟ್ರವಾಗಲಿದೆ- ದ್ರೌಪದಿ ಮುರ್ಮು

0

ಬೆಂಗಳೂರು ಏರೋಸ್ಪೇಸ್ ವಿಭಾಗ ಆಯೋಜಿಸಿದ್ದ ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಸೌಲಭ್ಯ (ಐಸಿಎಂಎಫ್) ಉದ್ಘಾಟಿಸಿ ಮಾತನಾಡಿದರು. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಕಾಲವನ್ನು ಪ್ರವೇಶಿಸುವುದರಿಂದ ಭವಿಷ್ಯದಲ್ಲಿ ಎಚ್​ಎಎಲ್ ಮತ್ತು ಇಸ್ರೋ ಸಂಸ್ಥೆಗಳು ಮಹತ್ವದ ಮತ್ತು ಸಕಾರಾತ್ಮಕ ಪಾತ್ರ ನಿರ್ವಹಿಸುತ್ತವೆ ಎಂದು ತಿಳಿಸಿದರು.

ಎಚ್​ಎಎಲ್ ಮತ್ತು ಇಸ್ರೋ ಜಂಟಿಯಾಗಿ ಇಡೀ ದೇಶಕ್ಕೆ ಅತ್ಯಾಧುನಿಕ ಸೌಲಭ್ಯ ಹೊಂದಲು ಕ್ರಯೋಜೆನಿಕ್ ಮತ್ತು ಸೆಮಿ-ಕ್ರಯೋಜೆನಿಕ್ ಎಂಜಿನ್​ಗಳನ್ನು ತಯಾರಿಸುತ್ತಿವೆ. ಭಾರತವು ಈ ಸಾಮರ್ಥ್ಯ ಹೊಂದಿರುವ ವಿಶ್ವದ 6ನೇ ದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಐಸಿಎಂಎಫ್ ಉದ್ಘಾಟನೆ ಎಚ್​ಎಎಲ್ ಮತ್ತು ಇಸ್ರೋಗೆ ಮಾತ್ರವಲ್ಲ ಇಡೀ ದೇಶಕ್ಕೆ ಐತಿಹಾಸಿಕ ಕ್ಷಣ. ರಕ್ಷಣಾ ಕ್ಷೇತ್ರದಲ್ಲಿ ಭಾರತ ಆರ್ತನಿರ್ಭರವಾಗಲು ಎಚ್​ಎಎಲ್ ಅಪಾರ ಕೊಡುಗೆ ನೀಡಿದೆ. ಸಂಶೋಧನೆ, ಅಭಿವೃದ್ಧಿ ಮತ್ತು ವಿವಿಧ ಏರ್​ಕ್ರಾಫ್ಟ್ ಪ್ಲಾಟ್​ಫಾಮರ್್​ಗಳ ತಯಾರಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೆ ಮತ್ತೆ ಪ್ರದರ್ಶಿಸಿದೆ ಎಂದು ಶ್ಲಾಘಿಸಿದರು. ಕಾರ್ಯತಂತ್ರದ ರಕ್ಷಣೆ ಮತ್ತು ಅಭಿವೃದ್ಧಿಗೆ ಎಚ್​ಎಎಲ್ ಮತ್ತು ಇಸ್ರೋ ಜತೆಯಾಗಿ ಕೊಡುಗೆ ನೀಡುತ್ತಿವೆ. ರಕ್ಷಣಾ ಸಂಬಂಧಿತ ಉಪಕರಣಗಳನ್ನು ತಯಾರಿಸುವ ಶ್ರೇಷ್ಠ ದರ್ಜೆಯ ಸೌಲಭ್ಯ ಹೊಂದಿರುವ ಎಚ್​ಎಎಲ್ ದೇಶಕ್ಕೆ ಅಮೂಲ್ಯ ಆಸ್ತಿ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳು ದಕ್ಷಿಣ ವಲಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿದರು.

ರಾಜ್ಯಪಾಲ ಗೆಹಲೋತ್, ಕೇಂದ್ರ ಸಚಿವೆ ಭಾರತಿ ಪ್ರವೀಣ್ ಪವಾರ್, ಎಚ್​ಎಎಲ್ ಅಧ್ಯಕ್ಷ ಸಿ.ಬಿ.ಅನಂತಕೃಷ್ಣನ್, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.