Monday, March 23, 2026
Monday, March 23, 2026
Home Blog Page 1423

ವಿವಾಹಿತೆ ಮತ್ತು ಅವಿವಾಹಿತೆ ಕಾನೂನು ಬದ್ಧ ಗರ್ಭಪಾತಕ್ಕೆಅರ್ಹರು-ಸುಪ್ರೀಂ ಕೋರ್ಟ್

0

ವಿವಾಹಿತ ಅಥವಾ ಅವಿವಾಹಿತ ಸೇರಿದಂತೆ ಎಲ್ಲಾ ಮಹಿಳೆಯರು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ವಿವಾಹಿತೆ ಎಂಬ ಕಾರಣದ ಹಿನ್ನೆಲೆಯಲ್ಲಿ ಬಲವಂತವಾಗಿ ಗರ್ಭಪಾತ ಮಾಡಿಸುವಂತಿಲ್ಲ. ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ ಪ್ರಕಾರ ವಿವಾಹಿತ ಅಥವಾ ಅವಿವಾಹಿತ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ನಿಯಮದ ಪ್ರಕಾರ 24 ವಾರಗಳ ಗರ್ಭಧಾರಣೆಯನ್ನು ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ವಿವಾಹಿತ ಮಹಿಳೆಗೆ ಬಲವಂತವಾಗಿ ಗರ್ಭಪಾತ ಮಾಡಿಸಿದಲ್ಲಿ ಇದನ್ನು ಅತ್ಯಾಚಾರ ಎಂದು ಪರಿಗಣಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. 20ರಿಂದ 24 ವಾರಗಳ ಕಾಲಾವಧಿಯ ಗರ್ಭಾವಸ್ಥೆ ಹೊಂದಿರುವ ವಿವಾಹಿತ ಅಥವಾ ಅವಿವಾಹಿತ ಮಹಿಳೆಯ ಗರ್ಭಪಾತಕ್ಕೆ ಅವಕಾಶ ನೀಡದಿರುವುದು ಕಲಂ 14ರ ಅನ್ವಯ ಕಾನೂನು ಬಾಹಿರವಾಗಲಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಆಧುನಿಕ ಕಾಲಘಟ್ಟದಲ್ಲಿ ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ಕಾಯ್ದೆಯನ್ನು ನಾವು ಇಂದು ವಾಸ್ತವ ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ. ಅಷ್ಟೇ ಅಲ್ಲ ಇಂದು ನಾವು ಹಳೆಯ ನಿಯಮಗಳೊಂದಿಗೆ ಅದನ್ನು ನಿರ್ಬಂಧಿಸುವುದು ಸೂಕ್ತವಲ್ಲ. ಕಾನೂನು ಯಾವತ್ತೂ ಸ್ಥಿರವಾಗಿರಬಾರದು ಮತ್ತು ಸಾಮಾಜಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಅರ್ಥೈಸಬೇಕಾಗಿದೆ ಎಂದು ಸುಪ್ರೀಂ ತಿಳಿಸಿದೆ.

RSS ನಿಷೇಧಿಸಬೇಕು ಎಂಬ ಸಿದ್ಧರಾಮಯ್ಯ ಹೇಳಿಕೆ ದುರ್ದೈವ- ಬೊಮ್ಮಾಯಿ

0

ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆ ದೊಡ್ಡ ದುರ್ದೈವ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ,ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ದೇಶಪ್ರೇಮಿಗಳು ಹಾಗೂ ಬಡವರಿಗೆ ನೆರವಾಗುತ್ತಿರುವ ಸಂಘಟನೆ ಆರ್​ಎಸ್​ಎಸ್​ , ದೇಶ ಸಮಸ್ಯೆಗಳಿಗೆ ಸಿಲುಕಿದಾಗ ಆರ್​ಎಸ್​ಎಸ್​ ಹಲವು ರೀತಿಯಲ್ಲಿ ನೆರವಿಗೆ ಬಂದಿದೆ. ದೇಶದಲ್ಲಿ ದೇಶಪ್ರೇಮ ಜಾಗೃತಿ ಮಾಡುತ್ತಿರುವ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವುದು ದುರ್ದೈವ ಎಂದರು.

ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿದ್ದಾರೆ. ನಂತರ ಸಿಎಂ ಬೊಮ್ಮಾಯಿ ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಲಿದ್ದಾರೆ.

ಶೀಘ್ರದಲ್ಲೇ 1500 ಸಿವಿಲ್ ಪಿಸಿಗಳ ನೇಮಕಾತಿ.ಅಧಿಕೃತ ವೆಬ್ ಸೈಟ್ ವೀಕ್ಷಿಸಿ

0

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1500 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ಇಲಾಖೆಯು ಪ್ರಕಟಣೆ ಹೊರಡಿಸಿದ ಬಳಿಕ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಂಡು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಹತೆಗಳ ವಿವರ :
ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳಿಗೆ ಪಿಯುಸಿ/10+2/ಇಂಟರ್‌ಮೀಡಿಯೇಟ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಕನಿಷ್ಟ 19 ರಿಂದ ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು, ಪ.ಜಾ, ಪ.ಪಂ, ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಮತ್ತು ಬುಡಕಟ್ಟು ಜನಾಂಗ/ಟ್ರೈಬ್ಸ್ ನ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನ ವಿವರ :
ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,500/- ರಿಂದ 47,650/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿಯ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:
ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 400/-ರೂ ಮತ್ತು ಪ.ಜಾ, ಪ.ಪಂ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು 200/-ರೂ ಅರ್ಜಿ ಶುಲ್ಕವನ್ನು ನಗದು/ಆನ್‌ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಕೆ:
ಆಸಕ್ತರು ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ https://recruitment.ksp.gov.in/index ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ನಿಗದಿತ ದಿನಾಂಕಗಳೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕೆಲವೇ ದಿನಗಳಲ್ಲಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಿದ್ದು, ಅಭ್ಯರ್ಥಿಗಳು ಆಗಾಗ್ಗೆ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುತ್ತಿರತಕ್ಕದ್ದು.

ಜ.ಅನಿಲ್ ಚೌಹಾಣ್ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ

0

ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ಹುತಾತ್ಮರಾದ 9 ತಿಂಗಳ ಬಳಿಕ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡಿದೆ.

ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ 2021ರ ಮೇ ತಿಂಗಳಲ್ಲಿ ಪೂರ್ವ ಕಮಾಂಡ್ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.

ತಮಿಳುನಾಡಿನ ಕುನೂರು ಬಳಿ ವಾಯುಸೇನೆಯ ಒI17ಗಿ5 ಹೆಲಿಕಾಪ್ಟರ್ ಪತನವಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹುತಾತ್ಮರಾದರು.

ಇದರೊಂದಿಗೆ ದುರಂತದಲ್ಲಿ 13 ಜನರೂ ಹುತಾತ್ಮರಾದರು. ಇದರಲ್ಲಿ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಕೊನೆಯುಸಿರೆಳೆದರು.

ರೇಬಿಸ್ ವಿರುದ್ಧ ಜಾಗೃತರಾಗಿ-ಎನ್.ಎಂ.ನಾಗರಾಜ್

0

ರೇಬಿಸ್‌ ರೋಗವು ವೈರಾಣುವಿನಿಂದ ಹರಡುವ ಸೊಂಕು ರೋಗವಾಗಿದೆ. ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಮಾರಣಾಂತಿಕ ಪ್ರಾಣಿಜನ್ಯ ರೋಗವಾಗಿದೆ. ಗ್ರಾಮೀಣ ಬಾಗದಲ್ಲಿ ನಾಯಿಗಳಿಂದ ರೋಗ ಹರಡುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಎನ್‌.ಎಮ್‌ ನಾಗರಾಜ್‌ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ರೇಬಿಸ್‌ ಕುರಿತ ಜಿಲ್ಲಾ ಮಟ್ಟದ ಅಂತರ್‌ ಇಲಾಖಾ ಸಮನ್ವಯ ಸಭೆಯಲ್ಲಿ ಮಾತನಾಡಿದರು. ರೇಬಿಸ್‌ ರೋಗವು ರೇಬಿಸ್‌ ಸೋಂಕಿತ ಪ್ರಾಣಿಗಳ ಕಡಿತದಿಂದ ಉಂಟಾಗುತ್ತದೆ. ಪ್ರಾಣಿಗಳ ಲಾಲಾರಸದ ಮೂಲಕ ವೈರಸ್‌ ಹರಡುತ್ತದೆ. ನಾಯಿಕಡಿತಕ್ಕೆ ಒಳಪಟ್ಟ ಭಾಗವನ್ನು ತಕ್ಷಣವೇ ಸಾಬೂನು ಅಥವಾ ಶುದ್ಧ ನೀರಿನಿಂದ ತೊಳೆಯುವ ಮೂಲಕ ಪ್ರಾಥಮಿಕವಾಗಿ ಸುರಕ್ಷತಾ ಕ್ರಮವನ್ನು ಪಾಲಿಸಬೇಕು. ನಂತರ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಆರೋಗ್ಯ ಚಿಕಿತ್ಸೆಯನ್ನು ಪಡೆಯಬೇಕು. ಸಾಕುಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್‌ ವಿರುದ್ಧ ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಪ್ರಾಣಿ ಪ್ರಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 2016 ರಿಂದ 2022 ರವರೆಗೆ ರೇಬಿಸ್‌ ರೋಗದಿಂದಾಗಿ 8 ಸಾವಿನ ಪ್ರಕರಣಗಳು ಸಂಭವಿಸಿವೆ. 2015 ರಿಂದ 2019 ರವರೆಗೆ ಜಿಲ್ಲೆಯಲ್ಲಿ ನಾಯಿಕಡಿತದ ಪ್ರಕರಣಗಳು ಏರುಗತಿಯಲ್ಲಿದೆ. 2019ರ ನಂತರ ಕ್ರಮೇಣ ಇಳಿಮುಖವಾಗಿವೆ. 2019 ನೇ ಸಾಲಿನಲ್ಲಿ ಕೊರೋನಾ ಸಂದರ್ಭದಲ್ಲಿ 10,437 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಎ.ವಿ.ಆರ್‌ 3,696 ಮತ್ತು ಇಮ್ಯುನೊಗ್ಲಾಬ್ಯುಲಿನ್‌ 104 ಸ್ಟಾಕ್‌ ಲಸಿಕೆಗಳು ಲಭ್ಯವಿದ್ದು ಎಲ್ಲಾ ನಾಯಿಗಳಿಗೆ ಲಸಿಕಾ ಚುಚ್ಚು ಮದ್ದುಗಳನ್ನು ನೀಡಬೇಕು ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ರಾಷ್ಟ್ರೀಯ ರೇಬಿಸ್‌ ನಿಯಂತ್ರಣಾ ಕಾರ್ಯಕ್ರಮದ ಅಂಗವಾಗಿ ರೇಬಿಸ್‌ ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರಗಳು ಹಾಗೂ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.

ಗಮ‌ನಿಸಿ,ಇನ್ನುಮುಂದೆ ಗೃಹ ಬಳಕೆ ಸಿಲಿಂಡರ್ ವರ್ಷಕ್ಕೆ15 ಮಾತ್ರ ಬುಕಿಂಗ್ ಮಾಡಬಹುದು

0

ಸರ್ಕಾರ ಈಗ ಗೃಹಬಳಕೆಯ ಅನಿಲ ಸಿಲಿಂಡರ್ ಗಳಿಗೆ ಕೋಟಾವನ್ನು ನಿಗದಿಪಡಿಸಿದೆ. ಹೊಸ ಆದೇಶದ ಪ್ರಕಾರ, ಗೃಹಬಳಕೆಯ ಅನಿಲ ಗ್ರಾಹಕರು ಈಗ ವರ್ಷಕ್ಕೆ 15 ಬಾರಿ ಮಾತ್ರ ಗ್ಯಾಸ್ ಸಿಲಿಂಡರ್ಗಳನ್ನು ರೀಫಿಲ್ ಮಾಡಲು ಸಾಧ್ಯವಾಗುತ್ತದೆ. ನೀವು ಒಂದು ತಿಂಗಳಲ್ಲಿ ಎರಡಕ್ಕಿಂತ ಹೆಚ್ಚು ಸಿಲಿಂಡರ್ ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಹೊಸ ಆದೇಶದ ನಂತರ, ಒಂದು ವರ್ಷದಲ್ಲಿ 15 ಕ್ಕೂ ಹೆಚ್ಚು ಸಿಲಿಂಡರ್ಗಳನ್ನು ಬಳಕೆ ಅಥವಾ ಬುಕ್‌ ಮಾಡಲು ಆಗೋಲ್ಲ.

ಅಖಿಲ ಭಾರತ ಭಾರತೀಯ ವಿತರಕರ ಸಂಘದ ಆಗ್ರಾ ವಿಭಾಗದ ಅಧ್ಯಕ್ಷ ವಿಪುಲ್ ಪುರೋಹಿತ್ ಅವರ ಪ್ರಕಾರ, ಈಗ ಗೃಹಬಳಕೆಯ ಅನಿಲ ಗ್ರಾಹಕರು ಒಂದು ವರ್ಷದಲ್ಲಿ ಕೇವಲ 15 ಸಿಲಿಂಡರ್ಗಳನ್ನು ಮಾತ್ರ ಮರುಪೂರಣ ಮಾಡಲು ಸಾಧ್ಯವಾಗುತ್ತದೆ. ದೇಶೀಯ ಅನಿಲ ಗ್ರಾಹಕರು ಒಂದು ವರ್ಷದಲ್ಲಿ 15 ಕ್ಕಿಂತ ಹೆಚ್ಚು ಸಿಲಿಂಡರ್ಗಳನ್ನು ತೆಗೆದುಕೊಳ್ಳಬೇಕಾದರೆ, ತೈಲ ಕಂಪನಿಯ ಅಧಿಕಾರಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಅಂತ ಹೇಳಿದ್ದಾರೆ.

ಮಿತಿ ಕೋಟಾವನ್ನು ನಿಗದಿಪಡಿಸುವುದರಿಂದ, ಗೃಹಬಳಕೆಯ ಅನಿಲ ಸಿಲಿಂಡರ್ ಗಳ ಕಾಳಸಂತೆ ಮಾರಾಟವೂ ನಿಲ್ಲುತ್ತದೆ ಎಂದು ನಾವು ನಿಮಗೆ ಹೇಳುತ್ತೇವೆ. ಇಲ್ಲಿಯವರೆಗೆ ಕೆಲವು ಗ್ರಾಹಕರು ಹೆಚ್ಚು ಸಿಲಿಂಡರ್ ಗಳನ್ನು ತೆಗೆದುಕೊಂಡು ಇತರರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಬದಲಾವಣೆಗಳು ಎಲ್ಲಾ ಮೂರು ತೈಲ ಕಂಪನಿಗಳ ಗ್ರಾಹಕರಿಗೆ ಅನ್ವಯವಾಗುತ್ತವೆ. ಸಬ್ಸಿಡಿಯುಕ್ತ ಗೃಹಬಳಕೆಯ ಅನಿಲಕ್ಕಾಗಿ ನೋಂದಾಯಿಸಿದವರಿಗೆ ಈ ದರದಲ್ಲಿ ವರ್ಷಕ್ಕೆ ಕೇವಲ 12 ಸಿಲಿಂಡರ್ ಗಳು ಮಾತ್ರ ಸಿಗುತ್ತವೆ. ಅಲ್ಲದೆ, ಹೆಚ್ಚಿನ ಅಗತ್ಯವಿದ್ದರೆ, ಸಬ್ಸಿಡಿರಹಿತ ಸಿಲಿಂಡರ್ಗಳನ್ನು ಮಾತ್ರ ತೆಗೆದುಕೊಳ್ಳಬೇಕಾಗುತ್ತದೆ.

ಯಾವುದೇ ಪರಿಸ್ಥಿತಿಯಲ್ಲಿ ಈ ಸಂಖ್ಯೆಯು ಒಂದು ವರ್ಷದಲ್ಲಿ 15 ಕ್ಕಿಂತ ಹೆಚ್ಚಾಗಲು ಸಾಧ್ಯವಿಲ್ಲ. ಒಬ್ಬ ಗ್ರಾಹಕನು ಅನಿಲದ ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾದರೆ, ಅವನು ಅದರ ಪುರಾವೆಗಳನ್ನು ನೀಡುವಾಗ ತೈಲ ಕಂಪನಿಯ ಅಧಿಕಾರಿಯ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ನೀವು ಹೆಚ್ಚುವರಿ ರೀಫಿಲ್ ಗಳನ್ನು ಪಡೆಯುತ್ತೀರಿ.

ಶ್ರೀ ಆರ್.ವೆಂಕಟರಮಣಿ ದೇಶದ ನೂತನ ಅಟಾರ್ನಿ ಜನರಲ್

0

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಆರ್‌. ವೆಂಕಟರಮಣಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಅವರ ಅಧಿಕಾರ ಅವಧಿ 3 ವರ್ಷ ಇರಲಿದೆ.

ಸದ್ಯ ಎ.ಜಿ ಆಗಿರುವ ಕೆ.ಕೆ.ವೇಣುಗೋಪಾಲ್‌ ಅವರ ಅಧಿಕಾರಾವಧಿ ಇದೇ 30ರಂದು ಮುಕ್ತಾಯವಾಗಲಿದೆ. ಆದ್ದರಿಂದ, ಆರ್‌. ವೆಂಕಟರಮಣಿ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

1950ರ ಏಪ್ರಿಲ್‌ 13ರಂದು ಪುದುಚೇರಿಯಲ್ಲಿ ಜನಿಸಿದ ಇವರು, 1977ರಲ್ಲಿ ತಮಿಳುನಾಡಿನಿಂದ ವಕೀಲ ವೃತ್ತಿ ಆರಂಭಿಸಿದರು. 2014ರಿಂದ 2017ರವರೆಗೆ ಎ.ಜಿ ಆಗಿದ್ದ ಮುಕುಲ್‌ ರೋಹಟಗಿ ಅವರನ್ನು ಮತ್ತೊಂದು ಅವಧಿಗೆ ನೇಮಿಸಲಾಗುತ್ತದೆ ಎನ್ನಲಾಗಿತ್ತು.

ಆದರೆ, ಕೇಂದ್ರದ ಈ ಪ್ರಸ್ತಾವವನ್ನು ರೋಹಟಗಿ ತಿರಸ್ಕರಿಸಿದ್ದರು.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4.272 ಹೊಸ ಕೋವಿಡ್ ಪ್ರಕರಣ ಪತ್ತೆ

0

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 4,272 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 11 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,45,83,360ಕ್ಕೆ ಏರಿಕೆಯಾಗಿದೆ.

ಆ ಪೈಕಿ 5,28,611 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.

ಇದುವರೆಗೆ 4,40,13,999 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 40,750 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ 12,195, ತಮಿಳುನಾಡಿನಲ್ಲಿ 5,498, ಮಹಾರಾಷ್ಟ್ರದಲ್ಲಿ 3,429, ಪಶ್ಚಿಮ ಬಂಗಾಳದಲ್ಲಿ 3,170, ಕರ್ನಾಟಕದಲ್ಲಿ 2,744 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ದರ ಶೇ 1.35 ರಷ್ಟಿದೆ.

ದೇಶದಲ್ಲಿ ಇದುವರೆಗೆ 218.17 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ.

ಶ್ರೀಕೂಷ್ಮಾಂಡದೇವಿ

0

” ಸುರಾ ಸಂಪೂರ್ಣ ಕಲಶಂ
ರುಧಿರಾಪ್ಲುತಮೇವಚ/
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ
ಶುಭದಾಸ್ತುಮೆ//

ನವರಾತ್ರಿಯ ನಾಲ್ಕನೆಯ ದಿನ
ದೇವಿಯ ರೂಪವಾದ ಕೂಷ್ಮಾಂಡದೇವಿಯ
ಆರಾಧನೆಯ ದಿನ.
ಜಗತ್ತಿನ ಅಣುಅಣುವಿನಲ್ಲಿ ಚೈತನ್ಯ ತುಂಬಿದ
ದೇವಿ ಈಕೆ.ದುರ್ಗಾಮಾತೆಯಂತೆ ಹಲವು ಭುಜ
ಗಳನ್ನು ಹೊಂದಿದ ಈಕೆಯೂ ಕೂಡ ತನ್ನ
ಕೈಗಳಲ್ಲಿ ಆಯುಧ ಹಾಗೂ ಪುಷ್ಪ ಎರಡನ್ನು
ಹಿಡಿದು ಅಪಾರ ತೇಜಸ್ಸಿನೊಂದಿಗೆ,ಕಾಂತಿಯೊಂದಿಗೆ ಬೆಳಗುತ್ತಿರುತ್ತಾಳೆ. ಈಕೆಯನ್ನು ಸೃಷ್ಟಿಕರ್ತೆ ಎಂದೂ ಕರೆಯುತ್ತಾರೆ. ನವದುರ್ಗೆಯರೂ ಪವಾದ ಕೂಷ್ಮಾಂಡ ದೇವಿ ಜಗತ್ತನ್ನು ಪೊರೆಯುತ್ತಿದ್ದಾಳೆ ಎಂದು ಭಾವಿಸಲಾಗಿದೆ.

ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ.
ಇಂತಹ ಶಕ್ತಿ ಸ್ವರೂಪಳಾದ ಕೂಷ್ಮಾಂಡದೇವಿಯನ್ನು ಭಕ್ತಿಯಿಂದ ಪೂಜಿಸಿ ಅನುಗ್ರಹ ಪಡೆಯೋಣ.

ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

ಶಿವಮೊಗ್ಗ RTO ಅವರಿಂದ ಮಹತ್ವದ ಸೂಚನೆ

0

ಶಿವಮೊಗ್ಗ ಜಿಲ್ಲೆಯ ವಾಹನ ಮಾಲೀಕರು, ಚಾಲಕರು, ಬಾಡಿಗೆ ವಾಹನ ಚಾಲಕರು, ಸರಕು ಸಾಗಣೆ ವಾಹನದ ಮಾಲೀಕರು, ವಿಐಪಿ, ಸರ್ಕಾರಿ ಆಂಬುಲೆನ್ಸ್ ವಾಹನ ಚಾಲಕರು ಸೇರಿದಂತೆ ಎಲ್ಲ ರೀತಿಯ ವಾಹನ ಚಾಲಕರು ತಮ್ಮ ವಾಹನಗಳ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ದಾಖಲಾತಿಗಳಾದ ಆರ್‍ಸಿ, ಎಫ್‍ಸಿ, ವಿಮೆ, ಟ್ಯಾಕ್ಸ್ ಕಾರ್ಡ್, ವಾಯು ಮಾಲಿನ್ಯ ತಪಾಸಣಾ ಪತ್ರ, ಪರವಾನಿಗೆ ಹಾಗೂ ತತ್ಸಮಾನದ ವಾಹನ ಚಾಲನಾ ಅನುಜ್ಞಾ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಿಕೊಂಡು ನಂತರ ವಾಹನದಲ್ಲಿ ಪ್ರಯಾಣಿಸಬೇಕು.

ವಾಹನದಲ್ಲಿ ಯಾವುದೊಂದು ದಾಖಲೆ ಅಸಿಂಧುವಾಗಿದ್ದರೆ ಅಥವಾ ಚಾಲನೆಯಲ್ಲಿ ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಲ್ಲ ರೀತಿಯ ದಾಖಲಾತಿಗಳನ್ನು ಹೊಂದಿದ ವಾಹನಗಳಲ್ಲಿ ಮಾತ್ರ ಪ್ರಯಾಣಿಸಬೇಕು.

ಬಸ್ ನಿಲ್ದಾಣಗಳಲ್ಲಿ ಕೋರಿಕೆಯ ನಿಲುಗಡೆ ಹಾಗೂ ವಾಹನ ನಿಲ್ದಾಣದ ಸ್ಥಳಗಳಲ್ಲಿ ಕಡ್ಡಾಯವಾಗಿ ನಿಲ್ಲಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ತಿಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಗಂಗಾಧರ್ ತಿಳಿಸಿದ್ದಾರೆ.

ಈ ಸಂಬಂಧ ದೂರುಗಳೇನಾದರೂ ಬಂದಲ್ಲಿ ವಾಹನ ಮಾಲೀಕರ ಮೇಲೂ, ಪರವಾನಗಿದಾರರ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕ ವಾಹನವಾಗಿದ್ದಲ್ಲಿ ಪ್ರಯಾಣಿಕರು, ಸರಕು ಸಾಗಣೆ ವಾಹನವಾಗಿದ್ದಲ್ಲಿ ಸರಕನ್ನು ಮಾತ್ರ, ಬಾಡಿಗೆ ವಾಹನವಾಗಿದ್ದಲ್ಲಿ ಪ್ರಯಾಣಿಕರು ಹೀಗೆ ವಾಹನಗಳ ಉದ್ದೇಶಗಳಿಗೆ ತಕ್ಕಂತೆ ಕ್ಷೇಮದ ಪ್ರಯಾಣವನ್ನು ಕೈಗೊಳ್ಳಬೇಕು ಹಾಗೂ ಎಲ್ಲರೂ ವಾಹನ ನಿಯಮಗಳನ್ನು ಪಾಲನೆ ಮಾಡಬೇಕು. ಅಪಘಾತರಹಿತ ಚಾಲನಾ ನಿಯಮ ಪಾಲಿಸುವ ಚಾಲಕರೇ ರಾಜ್ಯದ ಹೆಮ್ಮೆಯ ಚಾಲಕರು ಎಂದು ತಿಳಿಸಿದರು.