Tuesday, March 24, 2026
Tuesday, March 24, 2026
Home Blog Page 1422

ನೆತ್ತರ ಅಕ್ಷರಗಳ ಪತ್ರ ಊರಿಗೇ ಉಪಕಾರ ಮಾಡಿತು

0

ವಿದ್ಯಾರ್ಥಿಗಳು ಏನಾದರೂ ಬೇಡಿಕೆ ಈಡೇರಬೇಕೆಂದರೆ ಈಗ ಮುಷ್ಕರ, ಪ್ರತಿಭಟನೆ, ಜಾಥಾ ಇತ್ಯಾದಿ ಮಾರ್ಗಗಳನ್ನ ಮೊರೆ ಹೋಗುತ್ತಾರೆ.

ಆದರೆ ನೀವೀಗ ಅಚ್ವರಿಪಡುವಂತಹ ಸುದ್ದಿ ಇದೆ. ಓರ್ವನೇ ವಿದ್ಯಾರ್ಥಿ ಅಂತಹ ಕೆಲಸ ಮಾಡಿದ್ದಾನೆ. ತನ್ನ ಪ್ರಯತ್ನದಿಂದ ಇಡೀ ಊರಿಗೇ ಉಪಕಾರ ಮಾಡಿದ ಮಾಹಿತಿ ಇಲ್ಲಿದೆ.

ಕುಮಾರ ಸ್ವಾಮಿ ಅವರು ಸೀಎಂ ಆದಾಗಿನಿಂದ ಈ ಹುಡುಗ ತನ್ಮ ಊರಾದ ನಾಲತವಾಡಿಗೆ  ಪಿ‌ಯು ಕಾಲೇಜು ಬೇಕೆಂದು ಅಲವತ್ತುಕೊಂಡಿದ್ದ.
ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ನಾಲತವಾಡಿಯಲ್ಲಿ ಈಗ ಪಿಯು ಕಾಲೇಜು ಮಂಜೂರಾಗಿದೆ.

ಆ ಹುಡುಗನ ಹೆಸರು.ವಿಜಯ ಜೋಶಿ.
ಆತ ಮಾಡಿದ್ದಿಷ್ಟೆ. ತನ್ನ ರಕ್ತವನ್ನೇ ಮಸಿಯಂತೆ ಮಾಡಿ ಪತ್ರ ಬರೆದ .
2019 ರಲ್ಲಿ ಮೋದೀಜಿ ಅವರಿಗೆ
ನೆತ್ತರ ಅಕ್ಷರದಲ್ಲೇ ಮನವಿ ಬರೆದಿದ್ದಾನೆ.

ರಕ್ತಕ್ಕೆ ಬೆಲೆ ಸಿಕ್ಕಿದೆ. ಮೇಲಿನ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಆತನ ಮೊರೆ ತಲುಪಿತು.
ಈಗ ನಾಲತವಾಡಕ್ಕೆ ಪಿಯು ಕಾಲೇಜು
ಬಂದಿದೆ.ಜನ ಈಗ ಡೊನೇಷನ್ ಇಲ್ಲದೇ ಮಕ್ಕಳನ್ನ ಸೇರಿಸಲು ತುದಿಗಾಲಲ್ಲಿದ್ದಾರೆ

ಓರ್ವನ ಅವಿರತ ಪಯತ್ನ. ಅದೂ ರಕ್ತದಲ್ಲಿ ಬರೆದ ಪತ್ರ ಇಡೀ ಊರಿಗೇ
ಉಪಕಾರ ಮಾಡಿದೆ. .

ಜನಪ್ರಿಯ ಮನೋರೋಗ ತಜ್ಞ ಡಾ.ಚಂದ್ರಶೇಖರ್ ಗೆ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ

0

ಸುಪ್ರಸಿದ್ಧ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರಿಗೆ 2022 ನೇ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ನಗರದ ಗಾಂಧೀ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರಿಗೆ ಐದು ಲಕ್ಷ ರೂಪಾಯಿ ನಗದು ಒಳಗೊಂಡ ರಾಜ್ಯ ಸರ್ಕಾರದ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ರಾಷ್ಟ್ರೀಯ ಮಾನಸಿಕ ಮತ್ತು ನರರೋಗಗಳ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ 45 ಕ್ಕೂ ಹೆಚ್ಚು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ಡಾ.ಸಿ.ಆರ್. ಚಂದ್ರಶೇಖರ್ ಅವರು 50,000 ಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ.

ಇದಲ್ಲದೇ, ಡಾ. ಸಿ. ಆರ್. ಚಂದ್ರಶೇಖರ್ ಅವರು 40,000 ಕ್ಕೂ ಹೆಚ್ಚು ಜನರಿಗೆ ಪತ್ರ ಮುಖೇನ ವೈದ್ಯಕೀಯ ಸಲಹೆ ಕೊಟ್ಟಿದ್ದಾರೆ.

ಅಂತೆಯೇ, 30,000 ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ ಹಾಗೂ 20,000 ಕ್ಕೂ ಹೆಚ್ಚು ಜನರಿಗೆ ಆಪ್ತ ಸಮಾಲೋಚಕರ ತರಬೇತಿ ನೀಡಿದ್ದಾರೆ.

PFI ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆCFI ಅರ್ಜಿ ಸಲ್ಲಿಕೆ

0

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ.
ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುತ್ತೇವೆ ಎಂದು ಪಿಎಫ್​ಐನ ಅಂಗಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಘೋಷಿಸಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಭಾರತದಲ್ಲಿ ತಕ್ಷಣದಿಂದ ಸಂಘಟನೆಯ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುತ್ತೇವೆ ಎಂದು ಸಿಎಫ್​ಐ ಹೇಳಿದೆ.

ಹತ್ತಾರು ವರ್ಷಗಳಿಂದ ನಾವು ವಿದ್ಯಾರ್ಥಿಗಳ ಜೊತೆಗೆ ಕೆಲಸ ಮಾಡುತ್ತಿದ್ದೆವು. ಪ್ರಜಾಸತ್ತಾತ್ಮಕ ಆಶಯ ಎತ್ತಿಹಿಡಿಯುವ, ಸಾಮಾಜಿಕ ಬದ್ಧತೆ, ಕಾಳಜಿ ಇರುವ ಯುವಜನರನ್ನು ರೂಪಿಸಲು ಯತ್ನಿಸುತ್ತಿದ್ದೆವು. ಪಿಎಫ್​ಐ ಮತ್ತು ಸಿಎಫ್​ಐ ವಿರುದ್ಧ ಕೇಂದ್ರ ಸರ್ಕಾರವು ಮಾಡಿರುವ ಎಲ್ಲ ಆರೋಪಗಳನ್ನು ನಿರಾಕರಿಸುತ್ತೇವೆ.

ನೆಲದ ಕಾನೂನಿನ ವಿರುದ್ಧ ಯಾವುದೇ ಕೆಲಸ ನಾವು ಮಾಡಿಲ್ಲ ಎಂದು ಸಿಎಫ್​ಐ ತಿಳಿಸಿದೆ. ಸಂಘಟನೆಯ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಬೇಡಿ. ಅಕಸ್ಮಾತ್ ಬೇರೆ ಯಾರಾದರೂ ಸಂಘಟನೆಯ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದರೆ ಅಂಥವರಿಂದ ನೀವು ದೂರ ಇರಿ ಎಂದು ಸಿಎಫ್​ಐ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದೆ.

ಈ ನಡುವೆ ಕೇರಳದ ಪಿಎಫ್​ಐ ಘಟಕವನ್ನು ವಿಸರ್ಸಿಸಲಾಗಿದೆ. ಪಿಎಫ್​ಐ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲ ರಾಜಕೀಯ ಮತ್ತು ಸಂಘಟನಾತ್ಮಕ ಚಟುವಟಿಕೆ ನಿಲ್ಲಿಸುವಂತೆ ಪಿಎಫ್​ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ಸತ್ತಾರ್ ಕರೆ ನೀಡಿದ್ದಾರೆ ಎನ್ನುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಆದರೆ ಪಿಎಫ್​ಐನ ಯಾವುದೇ ಪದಾಧಿಕಾರಿ ಈ ಪತ್ರವನ್ನು ನಿರಾಕರಿಸಿಲ್ಲ. ಪಿಎಫ್​ಐ ವಿಸರ್ಜನೆಯಾಗಿದೆ ಎಂದು ಪ್ರಶ್ನಾರ್ಥಕ ಚಿಹ್ನೆಯ ಶೀರ್ಷಿಕೆಯೊಂದಿಗೆ ‘ದಿ ಹಿಂದೂ’ ಜಾಲತಾಣವು ವರದಿ ಮಾಡಿದೆ.

ಉತ್ತಮ ಜೀವನ ಶೈಲಿಯಿಂದ ಹೃದ್ರೋಗ ತಡೆ- ಡಾ.ಸೆಲ್ವಮಣಿ

0

ಉತ್ತಮ ಜೀವನಶೈಲಿ ಮತ್ತು ಆರೋಗ್ಯದ ಅರಿವು ಸೇರಿದಂತೆ ಹೃದ್ರೋಗ ತಡೆಯುವ ಎಲ್ಲ ರೀತಿಯ ಕ್ರಮ ವಹಿಸುವ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಕರೆ ನೀಡಿದರು.
ಬಿ.ಎಚ್.ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ವಿಶ್ವ ಹೃದಯ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್‌ಸಿಡಿ ಘಟಕ, ಐಎಂಎ ಮತ್ತು ಜಿಲ್ಲಾ ಸೈಕಲ್ ಕ್ಲಬ್ ಸಹಯೋಗದಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಹೃದ್ರೋಗದ ಕುರಿತು ಎಲ್ಲರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ತುಂಬಾ ಅಗತ್ಯವಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ಹೃದ್ರೋಗ ಮತ್ತು ಪಾರ್ಶ್ವವಾಯು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಸೆ.29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ. ಈ ವರ್ಷ ಹೃದಯಕ್ಕಾಗಿ ಹೃದಯ ಬಳಸಿ ಘೋಷಣೆಯೊಂದಿಗೆ ಆಚರಿಸಲಾಗುತ್ತಿದ್ದು ಹೃದ್ರೋಗ ಮತ್ತು ಪಾರ್ಶ್ವವಾಯು ರೋಗಗಳಿಗೆ ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಅಭ್ಯಾಸಗಳು, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ ಪ್ರಮುಖ ಪಾತ್ರ ಕಾರಣ ಎಂದರು.
ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಅಸಾಂಕ್ರಾಮಿಕ ರೋಗಗಳಿಂದ ಶೇ.68ರಷ್ಟು ಜನ ಮರಣ ಹೊಂದುತ್ತಿದ್ದಾರೆ. ಅದರಲ್ಲೂ ಹೃದ್ರೋಗ, ಕ್ಯಾನ್ಸರ್, ಮಧುಮೇಹ ಪ್ರಮುಖ ಕಾರಣವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಪಕೇಂದ್ರ-ಪ್ರಾಥಮಿಕ ಆರೋಗ್ಯ ಕೇಂದ್ರ-ಸಮುದಾಯ ಆರೋಗ್ಯ, ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಓ.ಮಲ್ಲಪ್ಪ ಮಾತನಾಡಿ, ಶೇ.25ರಿಂದ 30ರಷ್ಟು ಜನರು ಹೃದ್ರೋಗದಿಂದ ಸಾವನ್ನಪ್ಪುತ್ತಿದ್ದು ನಂ.1 ಮಾರಣಾಂತಿಕ ಕಾಯಿಲೆಯಾಗಿದೆ. ದೈಹಿಕ ಮತ್ತು ಮಾನಸಿಕ ಒತ್ತಡ ಜೀವನಶೈಲಿ, ಚಟುವಟಿಕೆ ರಹಿತ ಜೀವನ, ಬೊಜ್ಜು, ಮಾದಕ ವ್ಯಸನ ಸೇರಿದಂತೆ ಅನೇಕ ಕಾರಣಗಳಿಂದ ಹೃದ್ರೋಗ ಸೇರಿದಂತೆ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸುವುದು ಅತಿ ಅಗತ್ಯವಾಗಿದೆ ಎಂದರು.
ಜನರು ತಂಬಾಕು ಸೇರಿದಂತೆ ಮಾದಕ ವ್ಯಸನದಿಂದ ದೂರ ಇರಬೇಕು. ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಳ್ಳಬೇಕು. ದೈಹಿಕ ಚಟುವಟಿಕೆಗಳಾದ ನಡಿಗೆ, ಯೋಗ ಇತ್ಯಾದಿ ವ್ಯಾಯಾಮಗಳನ್ನು ನಿಯಮಬದ್ಧವಾಗಿ ಮಾಡಬೇಕು. ಆರೋಗ್ಯಕರ ಆಹಾರ ಪದ್ಧತಿ, ಸೊಪ್ಪು ತರಕಾರಿ, ಋತುಮಾನಕ್ಕೆ ತಕ್ಕಂತಹ ಹಣ್ಣು-ತರಕಾರಿ ಬಳಸಬೇಕು. ಆರೋಗ್ಯವಾಗಿದ್ದರೂ ವರ್ಷಕ್ಕೆರಡು ಬಾರಿ ಆರೋಗ್ಯ ತಪಾಸಣೆ ಮಾಡಿಸಬೇಕು. ಪ್ರಾಥಮಿಕ ಹಂತದಲ್ಲೇ ರೋಗ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಪಡೆದು ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಡಿಟಿಒ ಡಾ. ದಿನೇಶ್, ಐಎಂಎ ಅಧ್ಯಕ್ಷ ಡಾ. ಅರುಣ್, ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್, ಜಿ.ವಿಜಯ್‌ಕುಮಾರ್, ಕ್ಲಬ್‌ನ ಸದಸ್ಯರು ಪಾಲ್ಗೊಂಡಿದ್ದರು

ನಿಯಮಿತ ವ್ಯಾಯಾಮದಿಂದ ಆರೋಗ್ಯವಂತ ಹೃದಯ-ಗಣಪತಿ ಭಟ್

0

ಉಡುಪಿಯ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯಕ್ಕಾಗಿ ವಿಶ್ವ ಹೃದಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಇಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಆರೋಗ್ಯವಂತ ಹೃದಯವಿರಬೇಕಾದರೆ ನಿಯಮಿತವಾದ ವ್ಯಾಯಾಮ, ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು. ಜಗತ್ತಿನ ಎಲ್ಲರೂ ವಿಶ್ವ ಹೃದಯ ದಿನವನ್ನು ಹೃದ್ರೋಗಿಗಳೇ ಇಲ್ಲವಾಗಿಸುವ ಮೂಲಕ ಆಚರಿಸುವಂತೆ ಆಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್‌ ಸೈನ್ಸ್‌ ಕ್ಲಬ್‌ನ ಮುಖ್ಯಸ್ಥ ಲೋಹಿತ್‌ ಎಸ್‌ ಕೆ ಸುಂದರ ಮತ್ತು ಸ್ವಸ್ಥಮನಸ್ಸುಗಳ ಮೂಲಕ ಎಲ್ಲರೂ ಹೃದಯವಂತರಾಗಿ, ಆರೋಗ್ಯವಂತರಾಗಲಿ ಎಂದು ಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಹೃದಯ ಸಂಬಂಧಿ ಘೋಷಣೆಗಳು ನೆರವೇರಿತು.
ಈ ಸಂದರ್ಭದಲ್ಲಿ ಕ್ರಿಯೇಟಿವ್‌ ಕಾಲೇಜಿನ ಸಹ ಸಂಸ್ಥಾಪಕರಾದ ಶ್ರೀ ಗಣಪತಿ ಭಟ್‌ ಕೆ ಎಸ್‌, ಆದರ್ಶ ಎಂ ಕೆ ಅಮೃತ್‌ ರೈ ಉಪನ್ಯಾಸಕರಾದ ಉಮೇಶ್‌, ರಾಘವೇಂದ್ರ ರಾವ್‌, ರಾಜೇಶ್‌ ಶೆಟ್ಟಿ, ಡಾ. ಆದಂ ಶೇಕ್, ಅಕ್ಷತಾ ಜೈನ್‌, ಸುನಿಲ್‌, ಹರೀಶ್‌ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನವರಾತ್ರಿ ಐದನೇ ದಿನ ದೇವಿಯ ರೂಪಶ್ರೀಸ್ಕಂದ ಮಾತಾ

0

” ಸಿಂಹಾಸನಗತಾ ನಿತ್ಯಂ
ಪದ್ಮಾಂಚಿತ ಕರಾದ್ವಯಾ/
ಶುಭದಾಸ್ತು ಸದಾ ದೇವಿ
ಸ್ಕಂದಮಾತಾ ಯಶಸ್ವಿನೀ//”

ನವರಾತ್ರಿ ಹಬ್ಬದ ಐದನೇ ದಿನವಾದ ಇಂದು
ಸ್ಕಂದಮಾತೆಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಬುಧಗ್ರಹವನ್ನು ಪ್ರತಿನಿಧಿಸುವ ದುರ್ಗಾಮಾತೆಯ ಐದನೇ ಅವತಾರವಾದ ಸ್ಕಂದಮಾತೆ,ಸದಾ ತನ್ನ ಭಕ್ತರಮೇಲೆಸಹಾನುಭೂತಿತೋರುತ್ತಾಳೆ.ಪಾತಾಳಲೋಕದಲ್ಲಿದ್ದತಾರಕಾಸುರನೆಂಬ ರಾಕ್ಷಸನನ್ನು ಸಂಹರಿಸಲುತದೇವಿ ಸ್ಕಂದನಿಗೆ(ಸುಬ್ರಹ್ಮಣ್ಯ ಸ್ವಾಮಿ) ಜನ್ಮ ಕೊಡುತ್ತಾಳೆ.

ಆದ್ದರಿಂದ ಈ ದೇವಿಯನ್ನು ಸ್ಕಂದಮಾತಾಎಂದುಕರೆಯುತ್ತಾರೆ.ಸ್ಕಂದಮಾತಾದೇವಿಯ ವಾಹನಸಿಂಹವಾಗಿರುತ್ತದೆ.ನಾಲ್ಕುಭುಜಗಳನ್ನು ಹೊಂದಿದ್ದು,ಎರಡು ಕೈಗಳಲ್ಲಿ ಕಮಲವನ್ನು
ಹಿಡಿದಿರುತ್ತಾಳೆ.

ದೇವಿಯು ಮಾತೃಸ್ವರೂಪಿಣಿಯಾಗಿ ಭಕ್ತಕೋಟಿಯನ್ನು ಹರಸುವಳು.
ಇಂತಹಮಾತೃಸ್ವರೂಪಿಣಿಯಾದಸ್ಕಂದಮಾತಾದೇವಿಯನ್ನು ಭಕ್ತಿಯಿಂದ ಆರಾಧಿಸಿ,ಪೂಜಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗೋಣ.

ಚರ್ಮಗಂಟು ರೋಗದಿಂದ ಜಾನುವಾರು ಸತ್ತರೆ ₹20.000 ಪರಿಹಾರ

0

ರಾಜ್ಯದಲ್ಲಿ ಚರ್ಮ ಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟರೆ 20 ಸಾವಿರ ರೂಪಾಯಿಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಹಾವೇರಿ ಭಾಗದಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿದೆ. ಗಂಟು ರೋಗ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕೆ ಈಗಾಗಲೇ ಸೂಚನೆ ನೀಡಿ ವಿಶೇಷ ತಂಡವನ್ನು ಕಳಿಸಲಾಗುವುದು.
ರಾಜ್ಯದಲ್ಲಿ ಈಗಾಗಲೇ ಹಾವೇರಿ, ಗದಗ, ಕರಾವಳಿ, ದೊಡ್ಡಬಳ್ಳಾಪುರ , ಹಾವೇರಿ, ಕೋಲಾರ, ಬೆಂಗಳೂರು ಗ್ರಾಮಾಂತರ,ಬೆಳಗಾವಿ, ತುಮಕೂರು, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು,ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ. 11,137 ಪೌರ ಕಾರ್ಮಿಕರ ಸೇವೆಯನ್ನು ಕರ್ನಾಟಕ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಯಂಗೊಳಿಸಲಾಗಿದೆ. ಇನ್ನೆರಡು ಹಂತಗಳಲ್ಲಿ ಖಾಯಂ ಮಾಡುವ ಕೆಲಸವನ್ನು ಮಾಡಲಾಗುವುದು. ಅಂಗನವಾಡಿ, ಆಶಾ ಕಾರ್ಯಕರ್ತರಗೆ ಕೆಲಸಕ್ಕೆ ಸುರಕ್ಷತೆ, ಭದ್ರತೆ ನೀಡುವ ಕೆಲಸಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ದುಡಿಮೆಗೆ ಗೌರವ ಬರುವ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.

ಜಾತಿ ಧರ್ಮ ನೋಡದೇ ಜನಪರ ಕಾರ್ಯಕ್ರಮಗಳನ್ನ ರೂಪಿಸಿದ್ದೆ-ಸಿದ್ಧರಾಮಯ್ಯ

0

ಎಲ್ಲರನ್ನೂ ಮನುಷ್ಯರನ್ನಾಗಿ ನೋಡಬೇಕು. ಜಾತಿ-ಧರ್ಮಕ್ಕಿಂತಲೂ ಮನುಷ್ಯತ್ವ ಮುಖ್ಯ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಿಂದ ಇಲ್ಲಿನ ವಿಜಯನಗರ 3ನೇ ಹಂತದಲ್ಲಿ ‘ಸಿದ್ದರಾಮಯ್ಯ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯ’ದ ಹೆಚ್ಚುವರಿ ಕಟ್ಟಡ ಮತ್ತು ಯುಪಿಎಸ್‌ಸಿ, ಕೆಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಟ್ಟಡದ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನಾನು ಜಾತಿ, ಧರ್ಮ ನೋಡದೆ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದೆ. ಎಲ್ಲ ವರ್ಗಗಳ ಬಡವರು, ಸಾಮಾಜಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಆದರೆ, ಈ ಸರ್ಕಾರದವರು ಉಚಿತವಾಗಿ ಐದು ಕೆ.ಜಿ. ಅಕ್ಕಿ ವಿತರಣೆಯನ್ನೂ ನಿಲ್ಲಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ದೆಹಲಿಯಲ್ಲಿ ಮಂಕಿಪಾಕ್ಸ್ ಪ್ರಕರಣ 12 ಕ್ಕೆ ಏರಿಕೆ

0

ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ಮೂರು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಸ್ತುತ ಐದು ಮಂಕಿಪಾಕ್ಸ್ ರೋಗಿಗಳನ್ನು ಎಲ್‌ಎನ್ಜೆಪಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
30 ವರ್ಷದ ನೈಜೀರಿಯಾದ ಮಹಿಳೆಗೆ ಇತ್ತೀಚೆಗೆ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದು ಇಲ್ಲಿ ವರದಿಯಾದ ಒಂಬತ್ತನೇ ಪ್ರಕರಣವಾಗಿದೆ.

‘ಇಲ್ಲಿಯವರೆಗೆ 12 ಮಂಗಿಪಾಕ್ಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಐದು ರೋಗಿಗಳನ್ನು ಎಲ್‌ಎನ್ಜೆಪಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯಕ್ಕೆ ಯಾವುದೇ ಶಂಕಿತ ರೋಗಿಯನ್ನು ಅಲ್ಲಿ ದಾಖಲಿಸಲಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.

ಮಂಕಿಪಾಕ್ಸ್ ಎಂಬುದು ಜ್ವರ, ಚರ್ಮದ ಗಾಯಗಳು, ಲಿಂಫಡೆನೋಪತಿ, ತಲೆನೋವು, ಸ್ನಾಯು ನೋವುಗಳು, ಬಳಲಿಕೆ, ಶೀತ ಅಥವಾ ಬೆವರು, ಮತ್ತು ನೋಯುತ್ತಿರುವ ಗಂಟಲು ಮತ್ತು ಕೆಮ್ಮಿನಂತಹ ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿರುವ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದೆ.

ಭೂತಾನ್ ಅಡಕೆ ಆಮದು ಆತಂಕ ಬೇಡ- ಆರಗ ಜ್ಞಾನೇಂದ್ರ

0

ರಾಜ್ಯದ ಅಡಕೆ ಬೆಳೆಗಾರರಿಗೆ ಗೃಹ ಸಚಿವ ‘ಆರಗ ಜ್ಞಾನೇಂದ್ರ’ ನೆಮ್ಮದಿ ಸುದ್ದಿ ನೀಡಿದ್ದು, ನೆರೆಯ ಭೂತಾನ್ ದೇಶದಿಂದ ಅಡಕೆ ಆಮದು ಬಗ್ಗೆ ಆತಂಕ ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನೆರೆಯ ಪುಟ್ಟ ದೇಶ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿ ಕೊಳ್ಳಲು ಅವಕಾಶ ನೀಡಿದ ಕೇಂದ್ರದ ನಿರ್ಧಾರದಿಂದ, ದೇಶಿಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ಪ್ರಸ್ತುತ ನಮ್ಮದೇಶದಿಂದ ಭೂತಾನ್ ದೇಶಕ್ಕೆ, ಸಂಸ್ಕರಿತ ಅಡಕೆ ಉತ್ಪನ್ನಗಳು, ಆಮದು ಪ್ರಮಾಣಕ್ಕಿಂತ ಹೆಚ್ಚು ರಫ್ತು ಆಗುತ್ತಿದ್ದು, ಭೂತಾನ್ ನಿಂದ ಕೇವಲ ಹಸಿ ಅಡಕೆಗೆ ಮಾತ್ರ ಅನುಮತಿ ನೀಡಲಾಗಿದೆ, ಎಂದರು.

ನೆರೆಯ ಭೂತಾನ್ ದೇಶವು, ಭಾರತದ ಪರಂಪರಾಗತ ಮಿತ್ರ ದೇಶವಾಗಿದೆ. ಉಭಯ ದೇಶಗಳ ನಡುವೆ ಉತ್ತಮ ವಾಣಿಜ್ಯ ವಹಿವಾಟು ನಡೆಸಲಾಗುತ್ತಿದೆ ಎಂಬುದನ್ನು ಸಚಿವರು, ನೆನಪಿಸಿದರು.

ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಸಚಿವರು, ಅಡಕೆ ಮಾರುಕಟ್ಟೆಯಲ್ಲಿ, ಸ್ಥಿರತೆಯನ್ನು ಕಾಯ್ದು ಕೊಳ್ಳಲು, ಕೇಂದ್ರ ಸರಕಾರದ ಜತೆಗೆ ಸತತ ಸಂಪರ್ಕ ದಲ್ಲಿದೆ. ಭೂತಾನ್ ಅಡಕೆ ಆಮದು ವಿಚಾರವಾಗಿಯೂ, ಮಾತುಕತೆ ನಡೆಸಲಾಗುವುದು, ಬೆಳೆಗಾರರಿಗೆ, ಯಾವುದೇ ಗೊಂದಲ ಆತಂಕ ಬೇಡ, ಎಂದು ಸಚಿವರು, ಅಭಯ ನೀಡಿದ್ದಾರೆ.

ಈ ವಿಚಾರ ಕುರಿತು, ಕೇಂದ್ರಕ್ಕೆ ಮನವರಿಕೆ ಮಾಡಿ ಕೊಡಲು, ಲೋಕ ಸಭಾ ಸದಸ್ಯರ ನೇತೃತ್ವದಲ್ಲಿ, ನಿಯೋಗವೊಂದನ್ನು ಕೊಂಡೊಯ್ಯಲಾಗುವುದು ಎಂದೂ ಸಚಿವರು ಹೇಳಿದರು.