Tuesday, March 31, 2026
Tuesday, March 31, 2026
Home Blog Page 1346

ಹೊಸವರ್ಷಾಗಮನ ಸಂಗಡ ಕೋವಿಡ್ ತಡೆಯಲು ತುರ್ತು ಕ್ರಮ-ಮೋದೀಜಿ ಸಭೆ

0

ಎಲ್ಲೆಡೆ ಹೊಸ ವರ್ಷ ಸಂಭ್ರಮ ಜೋರಾಗಿದೆ. ಇದರ ಜೊತೆಗೆ ಕೊರೋನಾ ಆತಂಕವೂ ಹೆಚ್ಚಾಗಿದೆ.

ಚೀನಾ ಸೇರಿದಂತೆ ವಿದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಂಭೀರವಾಗಿದೆ. ಇದರ ಪರಿಣಾಮ ಭಾರತದಲ್ಲಿ ಈಗಾಗಲೇ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಾಣತ್ತಿರುವುದರಿಂದ ಇದೀಗ ಪ್ರಧಾನಿ ನರೇಂದ್ರ ಮೋದಿ 2ನೇ ಕೊರೋನಾ ಸ್ಥಿತಿಗತಿ ಸಭೆ ನಡೆಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಅನೇಕ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ, ಭಾರತದಲ್ಲಿ ಪ್ರಕರಣಗಳು, ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.

ತಜ್ಞರು, ವೈದ್ಯರು ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಮೋದಿ ಸಭೆ ನಡೆಸಿದ್ದಾರೆ. ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ, ಸೋಂಕಿತರ ಚಿಕಿತ್ಸೆಗೆ ತಯಾರಿ, ಆಕ್ಸಿಜನ್ ಪೂರೈಕೆ, ವೈದ್ಯರು, ನಿರ್ಸ್ ಸೇರಿ ಕೊರೋನಾ ವಾರಿಯರ್ ಲಭ್ಯತೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ ಮೋದಿ ತಜ್ಞರ ಮಹತ್ವದ ಚರ್ಚೆ ನಡೆಸಿದ್ದಾರೆ.

ಚೀನಾ, ಬ್ರೆಜಿಲ್, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೃಷ್ಟಿಯಾಗಿರುವ ಕೋವಿಡ್ ಅಲೆಯಿಂದ ಭಾರತಕ್ಕಿರುವ ಅಪಾಯ, ಭಾರತದಲ್ಲಿ ಸೃಷ್ಟಿಯಾಗಬಲ್ಲ ಕೋವಿಡ್ ಅಲೆ, ಪ್ರಕರಣ ಸಂಖ್ಯೆ, ಗಂಭೀರತೆ ಕುರಿತು ಮೋದಿ ಮಾಹಿತಿ ಪಡೆದಿದ್ದಾರೆ. ವಿದೇಶದಲ್ಲಿ ಎದ್ದಿರುವ ಅಲೆ ಭಾರತದಲ್ಲಿ ಯಾವೆಲ್ಲಾ ಪರಿಣಾಮ ಸೃಷ್ಟಿಸಲು ಸಾಧ್ಯವಿದೆ ಅನ್ನೋ ಕುರಿತು ತಜ್ಞ ವೈದ್ಯರೊಂದಿಗೆ ಮೋದಿ ಚರ್ಚೆ ಮಾಡಿದ್ದಾರೆ.

ಮಾಸ್ಕ್, ಸಾಮಾಜಿಕ ಅಂತರ, ಕೋವಿಡ್ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಇದರ ಜೊತೆಗೆ ಬೂಸ್ಟರ್ ಡೋಸ್ ಲಸಿಕೆ ಕುರಿತು ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಇಷ್ಟೇ ಅಲ್ಲ ಬೂಸ್ಟರ್ ಡೋಸ್ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸೂಚಿಸಿದ್ದಾರೆ.

ಮೊದಲ 2 ಅಲೆಗಳ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ, ಆಕ್ಸಿಜನ್‌ ಸಿಗದೆ ಜನರು ನೋವು ಅನುಭವಿಸಿದ್ದನ್ನು ನೋಡಿದ್ದ ಕೇಂದ್ರ ಸರ್ಕಾರ, ಈ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿದೆ. ಕೊರೋನಾ
3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ಲಸಿಕಾಕಾರಣ ಹೆಚ್ಚಿರುವ ಕಾರಣ, ಆಸ್ಪತ್ರೆ ದಾಖಲಾತಿ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ ದೇಶದಲ್ಲಿ ಮೂರನೇ ಅಲೆ ಯಾವುದೇ ಅಪಾಯ ಸೃಷ್ಟಿಸಿಲ್ಲ. ಈಗ 4ನೇ ಅಲೆಯನ್ನೂ ಇದೇ ರೀತಿ ಸಮರ್ಥವಾಗಿ ಎದುರಿಸಲು ಮೋದಿ ಸರ್ಕಾರ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.

ಗಡಿಸುರಕ್ಷಾದಳದವರು ಕುಟುಂಬ ಸದಸ್ಯರೊಂದಿಗೆ ಕಾಲಕಳೆಯಲು ವಸತಿ ಸೌಕರ್ಯ- ಅಮಿತ್ ಷಾ

0

ಭಯೋತ್ಪಾದನೆ,ಗಡಿ ವ್ಯಾಜ್ಯಗಳು ಸೇರಿದಂತೆ ದೇಶದ ಹಲವು ಸವಾಲುಗಳಿಗೆ ಸಮಂಜಸ ಪರಿಹಾರ ಕಂಡುಕೊಳ್ಳುವುದು. ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವುದು ಸೇರಿದಂತೆ ಎಲ್ಲ ಪೊಲೀಸ್ ವಿವಿಧ ದಳಗಳ ನಡುವೆ ಸಮನ್ವಯ ಸಾಧಿಸಿ,ಸಂವಾದ ನಡೆಸಿ ಭದ್ರತೆ ಹೆಚ್ಚಿಸಲು ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಕೇಂದ್ರ ಗುಪ್ತಚರ ಸಂಸ್ಥೆಯ ತರಬೇತಿ ಶಾಲೆಯು ಮಹತ್ವದ ವೇದಿಕೆಯಾಗಲಿದೆ.
ಗಡಿ ಸುರಕ್ಷಾ ದಳಗಳಲ್ಲಿ ಸೇವೆ ನೀಡುವ ಯೋಧರು ಕೇಂದ್ರಸ್ಥಾನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ವಸತಿ ಸೌಕರ್ಯ ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಷಾ ಹೇಳಿದರು.

ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ , ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಟಿಬೇಟ್ ಗಡಿ ರಕ್ಷಣಾ ದಳ ಬೆಂಗಳೂರು ವಿಭಾಗದ ಅನೇಕ ಕಟ್ಟಡಗಳನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

2023 ರ ಹೊಸ ವರ್ಷದ ಶುಭಾಶಯಗಳ ತಿಳಿಸುವುದರೊಂದಿಗೆ ಭಾಷಣ ಪ್ರಾರಂಭಿಸಿದ ಅವರು,
ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ರಾಜ್ಯ ಸರ್ಕಾರ ಉತ್ತಮ ಪರಿಸರದಲ್ಲಿ ನಿವೇಶನ ಒದಗಿಸಿದೆ‌.ಮುಂಬರುವ ದಿನಗಳಲ್ಲಿ ಬಹಳ ದೇಶದ ಪೊಲೀಸ್ ವ್ಯವಸ್ಥೆಗೆ ಬಹಳ ಪ್ರಯೋಜನಕಾರಿಯಾಗಲಿದೆ.ವಿವಿಧ ಪೊಲೀಸ್ ದಳಗಳನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ.ಸಮಾಜವು ಚಲನಶೀಲವಾಗಿರುತ್ತದೆ. ಅದರ ವಿಚಾರ,ಗಮನ,ಧೋರಣೆ,ಸ್ವರೂಪಗಳು ಹಾಗೂ ಪಥ ಬದಲಾಗುತ್ತಿರುತ್ತವೆ.ಅದಕ್ಕೆ ಅನುಗುಣವಾಗಿ ಪೊಲೀಸ್ ಬಲಗಳೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗುತ್ತವೆ.ಸಂಶೋಧನೆ ಆಧರಿಸಿ,ಸುರಕ್ಷತಾ ತಂತ್ರಗಳು,ರಣನೀತಿ ರೂಪಿಸಿಕೊಳ್ಳುವುದು ಮಹತ್ವಪೂರ್ಣವಾಗಿರುತ್ತದೆ.ವಿವಿಧ ಪೊಲೀಸ್ ಸಂಸ್ಥೆಗಳ ನಡುವೆ ಸಹಯೋಗ ತರುವುದು ಮಹತ್ವಪೂರ್ಣ ಕಾರ್ಯವಾಗಿದೆ.ಹೊಸ ಕಲಿಕೆ,ಸವಾಲುಗಳ ವಿನಿಮಯದೊಂದಿಗೆ ಎಲ್ಲ ಪೊಲೀಸ್ ದಳಗಳು ಪರಿಪೂರ್ಣವಾಗಲು ಸಾಧ್ಯ ಎಂದರು.

ಭಾರತದಂತಹ ದೊಡ್ಡ ದೇಶದಲ್ಲಿ ಹಲವು ಸಂಸ್ಕೃತಿ,ಆಚರಣೆಗಳಿವೆ ಅದಕ್ಕೆ ಅನುಗುಣವಾಗಿ ದೇಶದ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಯಲ್ಲಿರಿಸಲಾಗಿದೆ. ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ,ಆತಂಕವಾದ,ಗಡಿ ವಿವಾದಗಳು ಹೊಸ ಸವಾಲುಗಳನ್ನು ಒಡ್ಡಿವೆ.ಬಿಪಿಆರ್ ಆ್ಯಂಡ್ ಡಿ ಇಂತಹ ಸವಾಲುಗಳಿಗೆ ಪರಿಹಾರ ಅನ್ವೇಷಿಸುತ್ತದೆ.ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.ದೇಶದ ಮಹಾನಗರಗಳಲ್ಲಿ ಬಹು ಭಾಷಿಕರು ನೆಲೆಸುತ್ತಿದ್ದಾರೆ ಬರುವ ದಿನಗಳಲ್ಲಿ ಅಲ್ಲಿನ ಪೊಲೀಸ್ ಕಾರ್ಯವೈಖರಿಗೆ ಅದು ಸವಾಲಾಗುತ್ತದೆ.
ಮಹಾನಗರಗಳ ಸುರಕ್ಷತೆಗೂ ಸಂಶೋಧನೆ,ಅಧ್ಯಯನಗಳು ಇಲ್ಲಿ ನಡೆಯಲಿವೆ ಎಂದರು.

ಕಲ್ಕತ್ತಾ,ಹೈದರಾಬಾದ್,ಗಾಜಿಯಾಬಾದ್,ರಾಜಸ್ಥಾನ ಮತ್ತಿತರ ಕಡೆಗಳಲ್ಲಿರುವ ಸಿಡಿಐಟಿ ಸಂಸ್ಥೆಯು ಉತ್ತಮ ಕೊಡುಗೆಗಳನ್ನು ನೀಡುತ್ತಿವೆ.ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುವ ಅಧ್ಯಯನಗಳು ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಪೊಲೀಸ್ ತನಿಖೆಗಳಿಗೆ ನೆರವಾಗಲಿವೆ.ಬಿಪಿಆರ್ ಮತ್ತು ಡಿ ಸಂಸ್ಥೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಯೋಗ ,ಪ್ರೋತ್ಸಾಹ ನೀಡಲಿದೆ ಎಂದು ಭರವಸೆ ನೀಡಿದರು.

ದೇಶದ ಗಡಿರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರು ತಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಬದುಕು ನಡೆಸುವಂತಾಗಲು ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ್ದಾರೆ. ಇ-ಆವಾಸ್ ಪೋರ್ಟಲ್ ಮೂಲಕ ವಸತಿ ಸೌಕರ್ಯಗಳ ಸುಧಾರಣೆಯಾಗುತ್ತಿವೆ.ದೇಶದ ಗಡಿ ಸುರಕ್ಷಾ ದಳಗಳಲ್ಲಿಯೇ ಐಟಿಬಿಪಿಯು ಬಹಳ ದುರ್ಗಮ ಮತ್ತು ವಿಷಮ ವಾತಾವರಣದಲ್ಲಿ ಉತ್ಕೃಷ್ಟ ದೇಶಭಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.ಭಾರತದ ಒಂದಿಂಚೂ ಜಮೀನು ಅತಿಕ್ರಮಣವಾಗದಂತೆ ಎಚ್ಚರಿಕೆಯ ದೇಶಸೇವೆ ಮಾಡುತ್ತಿದ್ದಾರೆ.ಐಟಿಬಿಪಿ ಯೋಧರು ಭೀಮವೀರರಾಗಿದ್ದಾರೆ.ಆಯುಷ್ಮಾನ್ ಆರೋಗ್ಯ ಯೋಜನೆ ಮೂಲಕ ಸೈನಿಕರ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.

ಬೆಂಗಳೂರಿನ ಐಟಿಬಿಪಿ ಕಟ್ಟಡಗಳ ಸಮುಚ್ಛಯದಿಂದ ವರ್ಚುವಲ್ ಆಗಿ ಯೋಧರು ಮತ್ತು ಕುಟುಂಬದ ಸದಸ್ಯರು ಮಾತನಾಡಿ, ವಸತಿ ಸೌಕರ್ಯಗಳ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಷಿ,ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ,ಆರೋಗ್ಯ,ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್,ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ,ಭಾರತ ಟಿಬೇಟ್ ಗಡಿ ಪೊಲೀಸ್ ದಳದ ಮಹಾನಿರ್ದೇಶಕ ಅನೀಶ್ ದಯಾಳ್, ಹೆಚ್ಚುವರಿ ಮಹಾನಿರ್ದೇಶಕ ನೀರಜ್ ಸಿನ್ಹಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸರ್ಜಿ ಫೌಂಡೇಷನ್ ಮೂಲಕ ಮೆಡಿಕಲ್ ಕಿಟ್ ವಿತರಣೆ

0

ಶಿವಮೊಗ್ಗದ ಸೀಗೆಹಟ್ಟಿ ದೇವಸ್ಥಾನ ಹಾಗೂ ಗೋಪಾಲಗೌಡ ಬಡಾವಣೆಯ ಅಂಬು ಸ್ವಾಮಿ ಅವರ ಗೃಹದಲ್ಲಿ ಗುರುವಾರ ಇರುಮುಡಿ ಹೊತ್ತು ಶಬರಿ ಮಲೈ ಯಾತ್ರೆಗೆ ತೆರಳುವ 100 ಕ್ಕೂ ಹೆಚ್ಚು ಯಾತ್ರಾರ್ತಿಗಳಿಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸರ್ಜಿ ಫೌಂಡೇಶನ್‌ ವತಿಯಿಂದ ಮೆಡಿಕಲ್‌ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸರ್ಜಿ ಫೌಂಡೇಶನ್ನಿನ ಟ್ರಸ್ಟಿಗಳಾದ ಈಶ್ವರ್‌ ಸರ್ಜಿ, ಹರ್ಷ ಸರ್ಜಿ ಹಾಗೂ ಭಕ್ತರು ಭಾಗವಹಿಸಿದ್ದರು.

ಮತದಾರರ ದಿನಾಚರಣೆ: ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

0

ಶಿವಮೊಗ್ಗ: ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಚುನಾವಣಾ ಆಯೋಗದ ನಿರ್ದೇಶನದಂತೆ 2022-23ನೇ ಸಾಲಿನ ಜಿಲ್ಲಾ ಮಟ್ಟದಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿಡಿಯೋ ಕಾನ್ಫ್‍ರೆನ್ಸ್ ಮೂಲಕ ರಾಜ್ಯ ಮಟ್ಟದಲ್ಲಿ ಕನ್ನಡ ಪ್ರಬಂಧ ಸ್ಪರ್ಧೆ, ಇಂಗ್ಲೀಷ್ ಪ್ರಬಂಧ ಸ್ಪರ್ಧೆ ಹಾಗೂ ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪ್ರೌಢ ಶಾಲಾ ವಿಭಾಗದಿಂದ ತಲಾ ಮೂರು ವಿದ್ಯಾರ್ಥಿಗಳು ಪದವಿ ಪೂರ್ವ ವಿಭಾಗದಿಂದ ತಲಾ 3 ವಿದ್ಯಾರ್ಥಿಗಳು ಹಾಗೂ ಪದವಿ ವಿಭಾಗದಿಂದ ಮೂರು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆ, ಇಂಗ್ಲೀಷ್ ಪ್ರಬಂಧ ಸ್ಪರ್ಧೆ ಹಾಗೂ ಪೋಸ್ಟರ್ ಮೇಕಿಂಗ್ ಸ್ಪರ್ಧೆಗಳನ್ನು ಜಿಲ್ಲಾ ಪಂಚಾಯತಿಯ ಕಛೇರಿಯ ಕೆ-ಸ್ವಾನ್ ಕೊಠಡಿಯಲ್ಲಿ ನಡೆಸಲಾಗಿತ್ತು.

ಈ ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ. ಪ್ರಕಾಶ್‍ರವರು ಪ್ರೋತ್ಸಾಹಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ನವೀನ ಕುಮಾರ್ ಮತ್ತು ಜಿಲ್ಲಾ ಉಪ ಸ್ವಿಪ್ ನೋಡಲ್ ಅಧಿಕಾರಿ ನವೀದ್ ಅಹಮದ್ ಫರ್ವಿಜ್, ಡಯಟ್‍ನ ಉಪನ್ಯಾಸಕ ರಾಜೀವ್ ಹಾಗೂ ಪದವಿ ವಿಭಾಗದ ನೋಡಲ್ ಅಧಿಕಾರಿಯಾದ ಎಂ.ಸಿ ರಾಜಕುಮಾರ್, ಮಂಜುಳ ವಿಶೇಷ ಅಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಛೇರಿ ವಿಷಯ ಪರಿವೀಕ್ಷಕರಾದ ಶಿವನೆಗೌಡ ಹಾಗೂ ಪದವಿ ಪೂರ್ವ ವಿಭಾಗದಿಂದ ಮಾಲತೇಶ್, ಕುಂಸಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಅರವಿಂದ್ ಇತರರು ಉಪಸ್ಥಿತರಿದ್ದರು.

ಸೊರಬ ತಾಲ್ಲೂಕಿನಲ್ಲಿ ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿ ಆಹ್ವಾನ

0

ಸೊರಬ ತಾಲೂಕು ತೋಟಗಾರಿಕೆ ಇಲಾಖೆಯು 2022-23ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಲು ಸಹಾಯಧನ ನೀಡಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತ ರೈತರು ತಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಅಥವಾ ಸೊರಬ ತೋಟಗಾರಿಕೆ ಇಲಾಖೆಯಿಂದ ಜ.2 ರಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜ.25ರೊಳಗಾಗಿ ಸಲ್ಲಿಸುವಂತೆ ಸೊರಬ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಶಿವಮೊಗ್ಗ ಜಿಲ್ಲೆಯ ತುಂಗ ಮತ್ತು ಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ-ಬಿ.ಜಗದೀಶ್

0

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ತುಂಗಾ ಮತ್ತು ಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಬಿ. ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಮಾಂತರ ಕ್ಷೇತ್ರದಲ್ಲಿ ಎರಡೂ ನದಿಗಳಲ್ಲಿ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೂ ಈ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ. ಅಕ್ರಮ ಮರಳು ದಂಧೆ ಹಗಲು ರಾತ್ರಿ ಎನ್ನದೇ ನಡೆಯುತ್ತಿದೆ.

ಕಾನೂನುಬಾಹಿರವಾಗಿ ಜೆಸಿಬಿ ಮತ್ತಿತರೆ ಯಂತ್ರೋಪಕರಣಗಳನ್ನು ಬಳಸಿಕೊಂಡು ಈ ದಂಧೆ ನಡೆಸುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅದೇ ರೀತಿ ಸರ್ಕಾರಿ ಜಾಗಗಳನ್ನು ಕಬಳಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸರ್ಕಾರದ ದನಗಳ ಮುಫತ್ತು, ಖರಾಬು ಜಾಗ, ಮತ್ತಿತರೆ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟ ಜಾಗವನ್ನು ಕಬಳಿಸಲಾಗುತ್ತಿದೆ. ಭದ್ರಾವತಿ ತಾಲ್ಲೂಕಿನ ಮಜ್ಜಿಗೇನಹಳ್ಳಿ ಗ್ರಾಮದಲ್ಲಿ ದನಗಳ ಮುಫತ್ತಿಗೆ ಮೀಸಲಿಟ್ಟಿದ್ದ 10 ಎಕರೆಗೂ ಹೆಚ್ಚುಜಾಗವನ್ನು ಖಾಸಗಿ ವ್ಯಕ್ತಿಗಳು ಸದ್ದಿಲ್ಲದೇ ಒತ್ತುವರಿ ಮಾಡಿಕೊಂಡಿದ್ದಾರೆ.

ದಾಖಲೆಗಳಲ್ಲಿ ದನಗಳ ಮುಫತ್ತು ಎಂದಿದ್ದರೂ ಅಲ್ಲಿ ಜಾಗ ಇಲ್ಲ. ಇದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರವೂ ಇದೆ ಎಂದು ಆರೋಪಿಸಿದರು.

ಕೂಡಲೇ ಜಿಲ್ಲಾಧಿಕಾರಿಗಳು ಭದ್ರಾವತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮಠಾಣೆಗೆ, ದನಗಳ ಮುಫತ್ತು, ಸ್ಮಶಾನ ಮತ್ತಿತರೆ ಉದ್ದೇಶಗಳಿಗೆ ಮೀಸಲಿಟ್ಟಿರುವ ಜಾಗಗಳನ್ನು ಸಂರಕ್ಷಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿದರು.
ಕರೆಗಳಲ್ಲಿ ಹೂಳು ತುಂಬಿದ್ದು, ಮಳೆಯಾದಾಗ ಕೆರೆಯಲ್ಲಿ ನೀರು ಸಂಗ್ರಹವಾಗದೇ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ರೈತರ ಬೆಳೆ ನಾಶವಾಗುತ್ತಿದೆ. ಎಲ್ಲ ಕೆರೆಗಳಲ್ಲೂ ಕನಿಷ್ಠ 10-15 ಅಡಿಯಷ್ಟು ಹೂಳು ಸಂಗ್ರಹವಾಗಿದೆ. ಆದ್ದರಿಂದ ಎಲ್ಲ ಕೆರೆಗಳಲ್ಲೂ ಹೂಳು ತೆಗೆಯಲು ಅನುಮತಿ ನೀಡಬೇಕು ಎಂದು ಸಭೆಗೆ ತಿಳಿಸಿದರು.

ಶಿವಮೊಗ್ಗದ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಪ್ರತಿಕ್ರಿಯಿಸಿ, ಈ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಜಿ ಸೈನಿಕರಿಗೆ ಮೀಸಲಿರುವ ಶಿಕ್ಷಕ ಹುದ್ದೆ

0

ಶಿವಮೊಗ್ಗ ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮಾಜಿ ಸೈನಿಕರ ಮೀಸಲಾತಿಯಡಿಯಲ್ಲಿ ಖಾಲಿಯಿರುವ ಸಹ ಶಿಕ್ಷಕ ಹುದ್ದೆಯ ಬಿ.ಎ., ಬಿ.ಇಡಿ. ವಿದ್ಯಾರ್ಹತೆ ಪಡೆದಿರುವ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿಲಾಗಿದೆ.

ಅರ್ಹ ಅಭ್ಯರ್ಥಿಗಳು ನಿಗಧಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ:05/01/2023ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ
ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ: 08182-220925ನ್ನು ಸಂಪರ್ಕಿಸುವುದು.

ಬೆಳವಣಿಗೆ ಹಂತದ ಮಕ್ಕಳಿಗೆ ಪೋಷಕರೇ ಹೀರೋ ಮಾದರಿಗಳು- ಮಿಥುನ್ ಕುಮಾರ್

0

ಶಿವಮೊಗ್ಗ : ಬೆಳವಣಿಗೆ ಹಂತದಲ್ಲಿರುವ ಮಕ್ಕಳ ಪಾಲಿಗೆ ಪೋಷಕರೇ ಹೀರೋಗಳಿದ್ದಂತೆ. ಅವರು ಹೇಳಿದ್ದನ್ನು ಕೇಳುವುದಕ್ಕಿಂತ ಪೋಷಕರನ್ನು ಅನುಸರಿಸುತ್ತಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು.

ಶಿವಮೊಗ್ಗದ ಕುವೆಂಪು ರಂಗಮಂದಿರ ದಲ್ಲಿ ಆಯೋಜಿಸಿದ್ದ ಕೌಟಿಲ್ಯ ಶಾಲೆಯ ವಾರ್ಷಿಕೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ಮಾತುಗಳ ಬದಲಾಗಿ ಕೃತಿಯ ಮೂಲಕವೇ ಮಕ್ಕಳನ್ನು ತಿದ್ದಬೇಕು. ಮನೆಯಲ್ಲಿದ್ದಾಗ ಸಾಧ್ಯವಾದಷ್ಟು ತಮ್ಮ ನಡೆ ನುಡಿಗಳ ಮೇಲೆ ನಿಗಾ ವಹಿಸಬೇಕು ಜೊತೆಗೆ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡ ಬೇಕು ಎಂದು ಸಲಹೆ ನೀಡಿದರು.

ಸಹಾಯಕ ಡ್ರಗ್ ನಿಯಂತ್ರಕ ಡಾ. ಎಸ್.ವಿ. ವೀರೇಶ್‌ಬಾಬು ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಈ ಮೂಲಕ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯ ವಾಗಿರಲು ಸಾಧ್ಯವಾಗುತ್ತದೆ. ಮನೆಯ ಲ್ಲಿರುವಾಗ ಅವರ ನಡತೆಯನ್ನು ಗಮನಿಸಲೇಬೇಕು. ಒಂದು ವೇಳೆ ಸಣ್ಣಪುಟ್ಟ ಬದಲಾವಣೆಗಳಾದರೂ ಅದನ್ನು ಪ್ರಯತ್ನಿಸಬೇಕು. ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಪೋಷಕರು ಜಗಳವಾಡಬಾರದು. ಅದು ಮಕ್ಕಳ ಸೂಕ್ಷ್ಮಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಕಾರ‍್ಯಕ್ರಮದಲ್ಲಿ ಉದ್ಯಮಿ ಕೆ.ಎಸ್. ಸಂತೋಷ್ ಉಪಸ್ಥಿತರಿದ್ದರು.

ತುಂಗಾನದಿಗೆ ಕೊಳಚೆ ಸೇರ್ಪಡೆ ತಪ್ಪಿಸಲು ಒಳಚರಂಡಿ ವ್ಯವಸ್ಥೆ ಉತ್ತಮಗೊಳಿಸಲಾಗುವುದು- ಈಶ್ವರಪ್ಪ

0

ಶಿವಮೊಗ್ಗ ನಗರದ ಮಲಿನ ನೀರು ಶುದ್ದೀಕರಣಗೊಳ್ಳದೆ ತುಂಗೆಯ ಒಡಲು ಸೇರುವುದನ್ನು ನಿರ್ಬಂಧಿಸಿ, ಅದಕ್ಕೆ ಪರ್ಯಾಯವಾಗಿ ನೀರನ್ನು ಬೇರೆಡೆಗೆ ಪರಿವರ್ತಿಸಿ, ಶುದ್ಧೀಕರಣಗೊಳಿಸಿ ತುಂಗಾನದಿಗೆ ಬಿಡುವ ೧೫೧೫.೦೦ಲಕ್ಷ ರೂ.ಗಳ ಯೋಜನೆಗೆ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಇಂದು ಕೆ.ಆರ್.ವಾಟರ್‌ವರ್ಕ್ಸ್ ಸಮೀಪದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ಇಮಾಂಬಾಡ, ಮಂಡಕ್ಕಿ ಭಟ್ಟಿ, ಅಯ್ಯಪ್ಪಸ್ವಾಮಿ ದೇವಸ್ಥಾನ, ಕೊಲ್ಲೂರಯ್ಯನ ಬೀದಿ, ಭೀಮೇಶ್ವರ ದೇವಸ್ಥಾನ, ಬಿ.ಸಿ.ಎಂ.ಹಾಸ್ಟೆಲ್ ಹಾಗೂ ಬೆಕ್ಕಿನಕಲ್ಮಠದ ಸಮೀಪ ಸೇರಿದಂತೆ ನದಿ ತೀರದ ೭ಸ್ಥಗಳನ್ನು ಗುರುತಿಸಿ, ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆದು, ಸಂಸ್ಕರಿಸಿ ನದಿಗೆ ಬಿಡುವ ರೂ.೧.೨೮ಕೋ. ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು.
ಪ್ರಸ್ತುತ ಸಂದರ್ಭದಲ್ಲಿ ಕರ್ನಾಟನ ನಗರ ನೀರು ಸರಬರಾಜು ಮತ್ತು ಒಳಚರಂಡ ಮಂಡಳಿಯ ವತಿಯಿಂದ ತ್ಯಾವರಚಟ್ನಳ್ಳಿ, ಗುಂಡಪ್ಪಶೆಡ್, ಗುರುಪುರ, ಕಂಟ್ರಿಕ್ಲಬ್, ವಿದ್ಯಾನಗರ, ಕೆ.ಆರ್.ವಾಟರ್‌ವರ್ಕ್ಸ್, ಮಂಡ್ಲಿ ಹಾಗೂ ವಾದಿ-ಎ-ಹುದಾ ಸ್ಥಳಗಳಲ್ಲಿ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ನಿಯಂತ್ರಿಸಿ ಬಿಡಲು ೦೯ಸ್ಥಳಗಳನ್ನು ಗುರುತಿಸಲಾಗಿದ್ದು, ೧೫೧೫.೦೦ಲಕ್ಷ ವೆಚ್ಚದ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಈ ಕಾಮಗಾರಿಯನ್ನು ಮುಂದಿನ ಒಂದು ವರ್ಷದ ಅವಧಿಯೊಳಗಾಗಿ ಪೂರ್ಣಗೊಳಿಸಿ ಸೇವೆಗೆ ಮುಕ್ತಗೊಳಿಸಲಾಗುವುದು ಎಂದರು.
ನಗರ ಬೆಳೆದಂತೆಲ್ಲಾ ನಗರದ ನಿವಾಸಿಗಳ ಬೇಡಿಕೆಯು ಹೆಚ್ಚುತ್ತಲೇ ಇದೆ. ಅವರ ಆಶಯಗಳಿಗೆ ಪೂರಕವಾಗಿ ಕಾಲಕಾಲಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ, ನಗರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ. ಆದಾಗ್ಯೂ ದಿನದ ೨೪ಗಂಟೆಯೂ ನೀರನ್ನು ಕೊಡುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಯು.ಜಿ.ಡಿ. ಸಂಪರ್ಕ ವ್ಯವಸ್ಥೆ ಪೂರ್ಣಗೊಂಡಿದ್ದು, ಮನೆಮನೆಗೆ ಸಂಪರ್ಕ ಕಲ್ಪಿಸುವ ಯತ್ನ ಮುಂದುವರೆದಿದೆ ಎಂದರು.
ರಾಷ್ಟಿçÃಯ ಹಸಿರು ನ್ಯಾಯ ಮಂಡಳಿಯ ನಿರ್ದೇಶನದ ಮೇರೆಗೆ ನದಿಗಳ ಪುನರುಜ್ಜೀವನ ಸಲಹಾ ಸಮಿತಿಯ ೩೫ನಗರ ಪಟ್ಟಣಗಳಿಂದ ಉತ್ಪತ್ತಿಯಾಗುವ ಒಳಚರಂಡಿ ತ್ಯಾಜ್ಯದಿಂದಾಗಿ ಕಲುಶಿತಗೊಳ್ಳುತ್ತಿರುವ ರಾಜ್ಯದ 18 ನದಿ ಪ್ರದೇಶಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಆದ್ದರಿಂದ ಶಿವಮೊಗ್ಗ ನಗರದ ಹಲವೆಡೆ ಮಲಿನ ನೀರು ನದಿಪಾತ್ರಕ್ಕೆ ಶುದ್ಧೀಕರಣಗೊಳ್ಳದೇ ಸೇರುವುದನ್ನು ತಡೆಯಲು ಪ್ರಸ್ತುತ ಇರುವ ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಈ ಯೋಜನೆಯ ಸಮರ್ಪಕ ಅನುಷ್ಠಾನದಿಂದಾಗಿ ತುಂಗೆಗೆ ಮಲಿನ ನೀರುವುದನ್ನು ನಿಯಂತ್ರಿಸಬಹುದಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಸಾರ್ವಜನಿಕರೂ ಸಹಕರಿಸುವಂತೆ ಹಾಗೂ ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಚನ್ನಬಸಪ್ಪ ಅವರು ಮಾತನಾಡಿ, ನಗರದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿ, ಸರ್ಕಾರದಿಂದ ಅನುಷ್ಠಾನಗೊಳಿಸುತ್ತಿರುವ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಅಭಿನಂದನಾರ್ಹರು ಎಂದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಮಹಾಪೌರ ಶಿವಕುಮಾರ್, ಉಪಮೇಯರ್ ಶ್ರೀಮತಿ ಲಕ್ಷ್ಮೀಶಂಕರ್, ಜ್ಞಾನೇಶ್ವರ್, ಸೂಡಾ ಅಧ್ಯಕ್ಷ ನಾಗರಾಜ್, ಕೆ.ಇ.ಕಾಂತೇಶ್, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್‌ಕುಮಾರ್, ಸ್ಮಾರ್ಟ್ಸಿಟಿ ಇಂಜಿನಿಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೃಷಿ ಮತ್ತು ಸಹಕಾರ ಪ್ರತ್ಯೇಕ ಇಲಾಖೆ ರೂಪಿಸಲು ಚಿಂತನೆ-ಅಮಿತ್ ಶಾ

0

ಕೃಷಿ ಮಂತ್ರಾಲಯದಿಂದ ಸಹಕಾರ ಮಂತ್ರಾಲಯವನ್ನು ಪ್ರತ್ಯೇಕಿಸಿ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮಾನ್ಯ ಪ್ರಧಾನಮಂತ್ರಿಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಭಾರತ ಸರ್ಕಾರದ ಸಹಕಾರ ಹಾಗೂ ಗೃಹ ಇಲಾಖೆ ಸಚಿವರಾದ ಅಮಿತ್ ಶಾ ಅವರು ತಿಳಿಸಿದರು.

ಅವರು ಮಂಡ್ಯ ಜಿಲ್ಲೆಯ ಗೆಜ್ಹಲಗೆರೆಯಲ್ಲಿ 260.90 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿ ಉದ್ಘಟಿಸಿ ಮಾತನಾಡಿದರು. ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಸಹಕಾರ ಇಲಾಖೆ ಸದಸ್ಯರಿಗೆ ಹಾಗೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಮೆಗಾ ಡೈರಿಯಲ್ಲಿ 73 ಕೋಟಿ ಕಟ್ಟಡ ನಿರ್ಮಾಣ,183 ಕೋಟಿ ಯಂತ್ರೋಪಕರಣಗಳಿಗೆ ವೆಚ್ಚ ಮಾಡಲಾಗಿದೆ. ಇಲ್ಲಿ 10 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ರೀತಿ ಉನ್ನತೀಕರಿಸಲಾಗುವುದು. ಹಾಲನ್ನು ಸಂಸ್ಕರಿಸುವುದರಿಂದ ಬಹಳಷ್ಟು ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.

ಕರ್ನಾಟಕ ರಾಜ್ಯದಲ್ಲಿ ಹಾಲು ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.15210 ಗ್ರಾಮ ಮಟ್ಟದ ಹಾಲು ಸಹಕಾರ ಸಂಘಗಳಿವೆ 22 ಲಕ್ಷದ 22 ಸಾವಿರ ರೈತರು ಇದರಲ್ಲಿ ಭಾಗವಹಿಸುತ್ತಿದ್ದಾರೆ. 1975 ರಿಂದ 2022 ರವರೆಗೆ ಕರ್ನಾಟಕ ರಾಜ್ಯ ಡೈರಿ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದೆ. 1975 ರಲ್ಲಿ
66 ಸಾವಿರ ಕಿಲೋ ಲೀಟರ್ ಹಾಲು ಸಂಸ್ಕರಿಸಲಾಗುತ್ತಿತ್ತು ಇಂದು 82 ಲಕ್ಷ ಕಿಲೋ ಲೀಟರ್ ಹಾಲು ಪ್ರತಿ ದಿನ ಸಂಸ್ಕರಿಸಲಾಗುತ್ತಿದೆ. ಮಿಲ್ಕ್ ಫೆಡರೇಷನ್ ನ ಟನ್೯ ಓವರ್ 4 ಕೋಟಿ ಇದ್ದದ್ದು, ಇಂದು 25 ಸಾವಿರ ಕೋಟಿ ತಲುಪಿದೆ ಎಂದರು.

ಹಾಲು ಉತ್ಪಾದಕರ ಸಂಘದ ಗಳಿಕೆಯ ಶೇ 80% ರಷ್ಟು ರೈತರಿಗೆ ನೀಡಲಾಗುತ್ತಿದೆ .ಗುಜರಾತ್ ಕ್ಷೀರ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ. ಅಮೂಲ್ ಹಾಗೂ ನಂದಿನಿ ಎರೆಡೂ ಒಗ್ಗೂಡಿ ಕೆಲಸ ಮಾಡಿದರೆ ಕೆಲವೇ ವರ್ಷಗಳ ಪ್ರತಿ ಹಳ್ಳಿಯಲ್ಲಿ ಪ್ರಾಥಮಿಕ ಡೈರಿ ಸ್ಥಾಪನೆ ಸಾಧ್ಯ ಎಂದರು..

ಮೈ ಶುಗರ್ ನಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡಿ ರೈತರಿಗೆ ವರದಾನವಾಗುವ ರೀತಿಯಲ್ಲಿ ಪರಿವರ್ತಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ಹಾಲು ಉತ್ಪಾದನೆ ಡೈರಿ ಅಭಿವೃದ್ಧಿ ಮೂಲಕ ಹಸಿರು ಕ್ರಾಂತಿಯ ನಂತರ ಕ್ಷೀರ ಕ್ರಾಂತಿಯಾಗುತ್ತಿದೆ. ಕರ್ನಾಟಕ ಕ್ಷೀರ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ನೀಡಿದೆ. ಹಗಲಿರುಳು ರೈತ ಬಂಧುಗಳು ಶ್ರಮಿಸುತ್ತಿದ್ದಾರೆ. ಹಾಲು ಉತ್ಪಾದನೆ ಮಾಡುವ ರೈತ ಮಹಿಳೆಯರಿಗೆ ವಿಶೇಷವಾಗಿ ಮುಖ್ಯ ಮಂತ್ರಿಗಳು ಅಭಿನಂದನೆಗಳನ್ನು ಸಲ್ಲಿಸಿದರು.

ಸಮಗ್ರ ಕೃಷಿ ಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕರ್ನಾಟಕದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ಪ್ರೋತ್ಸಾಹ ಧನ ನೀಡುವುದು ಪ್ರಾರಂಭವಾಗಿ ಇಂದು 5.00 ರೂ.ಗಳನ್ನು ಪ್ರತಿ ಹಾಲು ಉತ್ಪಾದಕನಿಗೆ ನೀಡಲಾಗುತ್ತಿದೆ.