ಶಿವಮೊಗ್ಗದ ಸೀಗೆಹಟ್ಟಿ ದೇವಸ್ಥಾನ ಹಾಗೂ ಗೋಪಾಲಗೌಡ ಬಡಾವಣೆಯ ಅಂಬು ಸ್ವಾಮಿ ಅವರ ಗೃಹದಲ್ಲಿ ಗುರುವಾರ ಇರುಮುಡಿ ಹೊತ್ತು ಶಬರಿ ಮಲೈ ಯಾತ್ರೆಗೆ ತೆರಳುವ 100 ಕ್ಕೂ ಹೆಚ್ಚು ಯಾತ್ರಾರ್ತಿಗಳಿಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸರ್ಜಿ ಫೌಂಡೇಶನ್ ವತಿಯಿಂದ ಮೆಡಿಕಲ್ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸರ್ಜಿ ಫೌಂಡೇಶನ್ನಿನ ಟ್ರಸ್ಟಿಗಳಾದ ಈಶ್ವರ್ ಸರ್ಜಿ, ಹರ್ಷ ಸರ್ಜಿ ಹಾಗೂ ಭಕ್ತರು ಭಾಗವಹಿಸಿದ್ದರು.
