Tuesday, March 31, 2026
Tuesday, March 31, 2026
Home Blog Page 1347

ಹುಣಸವಳ್ಳಿಯಲ್ಲಿ ಸೊರಬ ತಾ.ಮಕ್ಕಳ ಸಾಹಿತ್ಯ ಸಮ್ಮೇಳನ

0

ಸೊರಬ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ತಾ. ಕಸಾಪ, ತಾ. ಕಜಾಪ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಹುಣಸವಳ್ಳಿ ಇವರ ಸಹಕಾರದಲ್ಲಿ ಸೊರಬ ತಾಲ್ಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹುಣಸವಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ ಸಂಭ್ರಮದಿಂದ ನಡೆಯಿತು

ಬೆಳಿಗ್ಗೆ ಊರಿನ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ಕು. ಮಾನ್ಯ, ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿರುವ ಐಶ್ವರ್ಯ ಸಿ. ವೈ.‌ ಉದ್ಘಾಟಕರಾದ ಕು. ಸಾನಿಕಾ ಬಿ. ಗೌಡ ಅವರ ಮೆರವಣಿಗೆ ನಡೆಯಿತು.

ತಾ.ಕಸಾಸಾಂ ವೇದಿಕೆ ಅಧ್ಯಕ್ಷರಾದ ಡಿ. ಎಸ್. ಶಂಕರ್ ಆಶಯ ಮಾತುಗಳನ್ನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ, ತಾ.ಕಸಾಪ ಅಧ್ಯಕ್ಷರಾದ ಶಿವಾನಂದ ಪಾಣಿ, ಪ್ರಿನ್ಸಿಪಾಲ್ ಸಂತೋಷ ಕುಮಾರ್, ತಾ. ಕಜಾಪ ಅಧ್ಯಕ್ಷರಾದ ವಿಶ್ವನಾಥ ಹೆಚ್ಚೆ, ಆನವಟ್ಟಿ ಕಸಾಪ ಅಧ್ಯಕ್ಷರಾದ ಬಸವನಗೌಡ್ರು ಮಲ್ಲಾಪುರ, ಕಸಾಸಾಂ ವೇದಿಕೆ ಅಧ್ಯಕ್ಷರಾದ ಕಾರ್ತಿಕ್ ಸಾಹುಕಾರ್, ಕಜಾಪ ಅಧ್ಯಕ್ಷರಾದ ಖಲಂದರ್ ಸಾಬ್ ಭಾಗವಹಿಸಿದ್ದರು.

ವೇದಿಕೆಯಲ್ಲಿ ಹಾಲೇಶ್ ನವುಲೆ, ರೇಣಕಮ್ಮ ಗೌಳಿ, ಎಸ್. ಕೃಷ್ಣಾನಂದ, ಡಾ. ಉಮೇಶ್ ಸೊರಬ, ಶಿರಾಳಕೊಪ್ಪ ಮಂಜಣ್ಣ, ಸಂಜಯ್ ಡೋಂಗ್ರೆ, ಎಂ. ನವೀನ್ ಕುಮಾರ್, ಸಂಪತ್ ಕುಮಾರ್ ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು.

ಸಿರಿಗೌರಿ ಎಸ್. ಡಿ. ತಂಡದವರು ಪ್ರಾರ್ಥಿಸಿದರು. ಕವಿತಾ ಬಾಯಿ ಸ್ವಾಗತಿಸಿದರು. ತನ್ಮಯ ವಂದಿಸಿದರು. ಸಂಜನಾ, ವಿನೋದ ನಿರೂಪಿಸಿದರು.

ವಿಚಾರ ಗೋಷ್ಠಿ ಯು ಮಂಯ ಗಾವಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕು. ವಿನುತ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಾನಿಕಾ ಅಧ್ಯಕ್ಷತೆಯಲ್ಲಿ ಕಥಾ ಗೋಷ್ಠಿ ನಡೆಯಿತು. ಸುತ್ತಲಿನ ಶಾಲೆಗಳ ಸಾವಿರಾರು ಮಕ್ಕಳು ಭಾಗವಹಿಸಿದ್ದರು.

ಕುಪ್ಪಳಿಯಲ್ಲಿ ಕುವೆಂಪು ಜನ್ಮದಿನಾಚರಣೆ

0

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ವತಿಯಿಂದ ರಾಷ್ಟ್ರಕವಿ ಕುವೆಂಪುರವರ 118 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಕುಪ್ಪಳಿಯ ಹೇಮಾಂಗಣದಲ್ಲಿ ಏರ್ಪಡಿಸಲಾಯಿತು.

ಉದ್ಘಾಟನೆಯನ್ನು ಸನ್ಮಾನ್ಯ ಜಿಲ್ಲಾಧಿಕಾರಿಗಳಾದ ಮಾನ್ಯಶ್ರೀ ಡಾ. ಆರ್.ಸೆಲ್ವಮಣಿರವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.‌

ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಹಂಗಾಮಿ ಅಧ್ಯಕ್ಷರಾದ ಮಾನ್ಯಶ್ರೀ ಬಿ.‌‍ಎಲ್‌.ಶಂಕರ್ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ‌ ತೊದಲಬಾಗಿ, ತಹಶೀಲ್ದಾರ್ ಸನ್ಮಾನ್ಯ ಅಮೃತ್‌ ಅತ್ರೇಶ್, ನಾಡೋಜ ಸನ್ಮಾನ್ಯ ಶ್ರೀ ಹಂಪಾ‌ ನಾಗರಾಜಯ್ಯ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಸನ್ಮಾನ್ಯ ಫ್ರೊ ಬಿ.ಪಿ.ವೀರಭದ್ರಪ್ಪ, ದೇವಂಗಿ ಗ್ರಾಪಂ‌ ಅಧ್ಯಕ್ಷರಾದ ಸನ್ಮಾನ್ಯ ಶ್ರೀಮತಿ‌ ಅಮೂಲ್ಯ, 2022 ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಸನ್ಮಾನ್ಯ ಶ್ರೀ ಇಮಯಮ್, ಗಾಂಧಿ‌ ಚಿಂತಕರಾದ‌ ಸನ್ಮಾನ್ಯ ಫ್ರೊ ಶಿವರಾಜ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಸರೋಜ, ಶ್ರೀ ನಾಗರಾಜ್ ಹಾಜರಿದ್ದರು.

ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್‌ ಹೆಚ್.‌ ಸ್ವಾಗತಿಸಿ‌ ,‌ ಪ್ರತಿಷ್ಠಾನದ ದೇವಂಗಿ ಮನುದೇವ್ ವಂದಿಸಿದರು.

ಶ್ರೀ‌ ರಾಜೇಂದ್ರ ಬುರುಡಿಕಟ್ಟಿ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮೊದಲು‌ ಕವಿಶೈಲದಲ್ಲಿ ಕವಿನಮನವನ್ನು ಸಲ್ಲಿಸಲಾಯಿತು.

ಬೆಳಗಾವಿ ಅಧಿವೇಶನ‌: ಯಶಸ್ವಿ ಸಹಕಾರಕ್ಕೆ ಸ್ಪೀಕರ್ ಕೃತಜ್ಞತೆ

0

ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನ ಸಭೆಯ ಸಭಾಂಗಣದಲ್ಲಿ 15ನೇ ವಿಧಾನ ಸಭೆಯ 14ನೇ ಅಧಿವೇಶನವು ಡಿಸೆಂಬರ್ 19 ರಿಂದ 29 ರವರೆಗೆ 09 ದಿನಗಳ ಕಾಲ ನಡೆದಿದ್ದು, ಸುಮಾರು 41 ಗಂಟೆ 20 ನಿಮಿಷಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ ಒಂಭತ್ತು ದಿನಗಳ ಕಾಲ ಜರುಗಿದ ಚಳಿಗಾಲ ಅಧಿವೇಶನ ಕಾರ್ಯಕಲಾಪಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಅವರು ಮಾಹಿತಿ ನೀಡಿದರು.

ವಿಧಾನ ಪರಿಷತ್, ವಿಧಾನದ ಸಭೆಯ ಕಲಾಪದಲ್ಲಿ ಉತ್ತಮ ಸದನ ಚರ್ಚೆಗಳು ನಡೆದವು. ಇದಕ್ಕೆ ಸಹಕರಿಸಿದ ಜಿಲ್ಲಾಡಳಿತ, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಗೂ ಮಧ್ಯಮ ಪ್ರತಿನಿಧಿಗಳಿಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ತಿಳಿಸಿದರು.

ಇತ್ತೀಚೆಗೆ ನಿಧನ ಹೊಂದಿದ ಗಣ್ಯರುಗಳಿಗೆ ಸಂತಾಪ ಸೂಚನಾ ನಿರ್ಣಯವನ್ನ ಮಂಡಿಸಿ,ಆಂಗೀಕರಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ ಮಹಾನಗರ ಪಾಲಿಕೆಗಳಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ (ಹಂತ-III)ರ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿ ಮತ್ತು 2021-22ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳ (ಸಂಪುಟ I ಮತ್ತು II)ನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿದರು.

2021-22ನೇ ಸಾಲಿನ ವಿಧಾನಮಂಡಲದ ವಿವಿಧ ಜಂಟಿ ಸಮಿತಿಗಳು ಮತ್ತು ವಿಧಾನಸಭೆಯ ವಿವಿಧ ಸಮಿತಿಗಳನ್ನು ಪುನರ್‌ರಚನೆ ಮಾಡಲು ಸದನವು ಮಾನ್ಯ ಸಭಾಧ್ಯಕ್ಷರವರಿಗೆ ಡಿಸೆಂಬರ್ 27, 2022 ರಂದು ಅಧಿಕಾರ ನೀಡಲಾಗಿರುತ್ತದೆ.

ಒಂದು ಹಕ್ಕುಚ್ಯುತಿ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದ್ದು, ಈ ಬಗ್ಗೆ ಚರ್ಚಿಸಿ ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.

ಸದನದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2022-23ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತು ಹಾಗೂ 2022-23ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಡಿಸೆಂಬರ್ 26,2022 ರಂದು ಮಂಡಿಸಿದ್ದು, ಡಿಸೆಂಬರ್ 29,2022 ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ.

2021ನೇ ಸಾಲಿನ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಹಿಂಪಡೆಯಲಾಗಿದೆ.
ಈ ಅಧಿವೇಶನದಲ್ಲಿ 12 ವಿಧೇಯಕಗಳನ್ನು ಮಂಡಿಸಲಾಗಿದ್ದು, ಕಳೆದ ಅಧಿವೇಶನದಲ್ಲಿ ಬಾಕಿ ಇದ್ದ 0) ವಿಧೇಯಕ, ವಿಧಾನ ಪರಿಷತ್ತಿನಿಂದ. ಅ೦ಗೀಕಾರವಾದ ರೂಪದಲ್ಲಿರುವ 02 ವಿಧೇಯಕಗಳು ಹಾಗೂ ಧನಯೋಗ ವಿಧೇಯಕವೂ ಸೇರಿದಂತೆ ಒಟ್ಟು 09 ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ಹೇಳಿದರು.

ನಿಯಮ 60 ರಡಿಯಲ್ಲಿ ನೀಡಿದ ನಿಲುವಳಿ ಸೂಚನೆಗಳನ್ನು, ನಿಯಮ 69 ಕ್ಕೆ. ಪರಿವರ್ತಿಸಿರುವುದನ್ನು ಸೇರಿಸಿ ಒಟ್ಟು 17 ಸೂಚನೆಗಳನ್ನು ನಿಯಮ 69 ರಡಿಯಲ್ಲಿ ಸ್ವೀಕರಿಸಿದ್ದು, 05 ಸೂಚನೆಗಳನ್ನು ನಿಯಮ 69 ರಡಿಯಲ್ಲಿ ಚರ್ಚಿಸಲಾಗಿರುತ್ತದೆ.

ಮಹಾರಾಷ್ಟ್ರವು ಅನಾವಶ್ಯಕವಾಗಿ ಸೃಷ್ಟಿಸುವ ಗಡಿ ವಿವಾದವನ್ನು ಖಂಡಿಸಿ ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ಸದನವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ನಡೆಸಲಾಗಿದೆ. ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಸೇರಿದಂತೆ ವಿವಿಧ ಸಮಿತಿಗಳ 08 ವರದಿಗಳನ್ನು ಸದನದಲ್ಲಿ ಮಂಡಿಸಲಾಗಿರುತ್ತದೆ. ಸಭೆಯ ಮುಂದಿಡಲಾದ ಕಾಗದ ಪತ್ರಗಳ 1, 2 ಮತ್ತು 3ನೇ ಪಟ್ಟಿಯಿಂದ 24 ಅಧಿಸೂಚನೆಗಳು, 01 ಅಧ್ಯಾದೇಶ. 106 ವಾರ್ಷಿಕ ವರದಿಗಳು ಹಾಗೂ 122 ಲೆಕ್ಕಪರಿಶೋಧನಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗಿರುತ್ತದೆ ಎಂದು ಹೇಳಿದರು.

ಒಟ್ಟು 2125 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 146 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 1923 ಪ್ರಶ್ನೆಗಳ ಪೈಕಿ 1614 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ.

ನಿಯಮ 351 ರಡಿಯಲ್ಲಿ 160 ಸೂಚನೆಗಳನ್ನು ಅಂಗೀಕರಿಸಿದ್ದು, 101 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸಳೆಯುವ 289 ಸೂಚನೆಗಳ ಪೈಕಿ 85 ಸೂಚನೆಗಳನ್ನು ಚರ್ಚಿಸಲಾಗಿದೆ ಮಂಡಿಸಲಾಗಿದೆ. ಒಟ್ಟಾರೆಯಾಗಿ 190 ಸೂಚನೆಗಳಿಗೆ ಉತ್ತರವನ್ನು ಸ್ವೀಕರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಒಟ್ಟು 40 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.

ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣ, ಮಹಾತ್ಮಾ ಗಾಂಧೀಜಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಾಯಿ ಪಟೇಲ್, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ವೀರ್ ಸಾವರ್ಕರ್ ಇವರುಗಳ ಭಾವಚಿತ್ರಗಳನ್ನು 19.12.2022 ರಂದು ಅನಾವರಣಗೊಳಿಸಲಾಗಿದೆ ಹಾಗೂ 29.12.2022 ರಂದು ಸುವರ್ಣ ವಿಧಾನಸೌಧದ ಆವರಣದಲ್ಲಿ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿ ಇವರುಗಳ ಪ್ರತಿಮೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಮಾಡಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಸದನ ನಡೆಸಲು ಸಹಕರಿಸಿದ ಸಭಾ ನಾಯಕರಾದ ಮುಖ್ಯಮಂತ್ರಿಯವರಿಗೆ, ವಿರೋಧ ಪಕ್ಷದ ನಾಯಕರಿಗೆ ಸಚಿವ ಸಂಪುಟದ ಸದಸ್ಯರಿಗೆ, ಸರ್ಕಾರಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಎಲ್ಲಾ ಸದಸ್ಯರುಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಇಲಾಖಾ ಮುಖ್ಯಸ್ಥರು, ಅಧಿಕಾರಿ ಸಿಬ್ಬಂದಿಯವರಿಗೆ ಬೆಳಗಾವಿಯಲ್ಲಿ ವಸತಿ ಮತ್ತು ಸಾರಿಗೆ ವ್ಯವಸ್ಥೆ ಮಾಡಿಕೊಟ್ಟು ಶಾಸಕರ ಸೌಕರ್ಯಕ್ಕೆ ನಿರಂತರವಾಗಿ ಪ್ರಯತ್ನಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಎಲ್ಲರಿಗೂ ಹಾಗೂವಿಶೇಷವಾಗಿ ಬೆಳಗಾವಿ ಜಿಲ್ಲಾಡಳಿತದವರಿಗೆ ಹಾಗೂ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿದ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ವಿಧಾನಸಭೆ ಸಚಿವಾಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತರಾದ ಎಂ. ಬಿ. ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ದರ್ಶನ್ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜಾಂಬೂರಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ರಮೇಶ್ ಶಾಸ್ತ್ರಿಅವರಿಗೆ ಸನ್ಮಾನ

0

ಮೂಡುಬಿದಿರೆ ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಪ್ರಧಾನ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಶಿವಮೊಗ್ಗ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಚೇರಿ ವತಿಯಿಂದ 10 ಲಕ್ಷ ರೂ. ದೇಣಿಗೆ ನೀಡಲಾಗಿತ್ತು. 1500ಕ್ಕೂ ಮಕ್ಕಳು ಶಿವಮೊಗ್ಗ ಜಿಲ್ಲೆಯಿಂದ ಜಾಂಬೂರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಾಂಬೂರಿ ಯಶಸ್ವಿಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಧಾನ ಆಯುಕ್ತ ಎಚ್.ಡಿ.ರಮೇಶ ಶಾಸ್ತ್ರಿ ಹಾಗೂ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣೆ ಮತ್ತು ಜಾಂಬೂರಿ ಯಶಸ್ವಿಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಎಚ್.ಡಿ.ರಮೇಶ ಶಾಸ್ತ್ರಿ ಅವರನ್ನು ಅಂತರಾಷ್ಟ್ರೀಯ ಜಾಂಬೂರಿ ಸಮಿತಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಶಾಖೆಯಿಂದ ರಾಜ್ಯ ಪ್ರಧಾನ ಆಯುಕ್ತ, ಮಾಜಿ ಗೃಹಮಂತ್ರಿ ಪಿಜಿಆರ್ ಸಿಂಧ್ಯಾ ಹಾಗೂ ಎಂಎಲ್‌ಸಿ ಮೋಹನ್ ಕೊಂಡಜ್ಜಿ ಅವರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

ಶಿವಮೊಗ್ಗ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರ ಎಲ್ಲ ಸಂದರ್ಭಗಳಲ್ಲಿ ನಿರಂತರವಾಗಿರಬೇಕು ಎಂದು ಸಿಂಧ್ಯಾ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಾಂಬೂರಿಯಲ್ಲಿ ಭಾಗವಹಿಸಿ ಬ್ಯಾಂಡ್ ಪ್ರದರ್ಶನವನ್ನು ಉತ್ತಮವಾಗಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದರು.

ಶಿವಮೊಗ್ಗದ ವಿದ್ಯಾರ್ಥಿಗಳು ಜಾಂಬೂರಿಯ ವಿವಿಧ ವೇದಿಕೆಗಳಲ್ಲಿ ಸ್ವಯಂ ಸೇವಕರಾಗಿ ಅತ್ತ್ಯುತ್ತಮ ಸೇವೆ ಸಲ್ಲಿಸಿದರು.
ಆಯುಕ್ತರಾದ ಜಿ.ವಿಜಯ್‌ಕುಮಾರ್, ರಾಜೇಶ್ ಅವಲಕ್ಕಿ, ಭಾರತಿ ಡಯಾಸ್, ವೈ.ಆರ್.ವೀರೇಶಪ್ಪ, ಶಿವಶಂಕರ್, ಕಾತ್ಯಾಯಿನಿ, ಜ್ಯೋತಿ, ಚೂಡಾಮಣಿ ಪವಾರ್, ಶಕುಂತಲ ಚಂದ್ರಶೇಖರ್, ಪರಮೇಶ್ವರ್, ಕೆ.ಪಿ.ಬಿಂದುಕುಮಾರ್, ದೀಪು, ಮಲ್ಲಿಕಾರ್ಜುನ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ನಗರ ಹೇಗಿದೆ? ವರದಿ ಸಿದ್ಧವಾಗುತ್ತಿದೆ- ಎನ್.ಗೋಪೀನಾಥ್

0

2050ರಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಗೆ ಅವಶ್ಯವಿರುವ ಯೋಜನೆ ಹಾಗೂ ಕಲ್ಪನೆಯ ಶಿವಮೊಗ್ಗಕ್ಕೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಮರ್ಪಕ ಯೋಜನೆಗಳನ್ನು ಸರ್ಕಾರದ ಹಂತದಲ್ಲಿ ಅನುಷ್ಠಾನಗೊಳಿಸಲು ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರದ ಪ್ರಮುಖರೊಂದಿಗೆ ಸಂವಾದ ಹಾಗೂ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿ, ಉದ್ಯಮ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸಾಂಸ್ಕೃತಿಕ, ಕೈಗಾರಿಕಾ ಕ್ಷೇತ್ರಗಳಲ್ಲಿ 2050ರಲ್ಲಿ ಶಿವಮೊಗ್ಗದಲ್ಲಿ ಅವಶ್ಯವಿರುವ ಸೌಕರ್ಯಗಳನ್ನು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಶಿವಮೊಗ್ಗ ಸದೃಢವಾಗಿ ಬೆಳೆಯಲು ಸೂಕ್ತ ಪರಿಕಲ್ಪನೆ ಅಗತ್ಯ. ಎಲ್ಲರ ಅಭಿಪ್ರಾಯದಿಂದ ಸ್ಪಷ್ಟ ಚಿತ್ರಣ ದೊರೆಯಬಹುದಾಗಿದೆ ಎಂದು ತಿಳಿಸಿದರು.

ಕಲೆ, ಸಂಸ್ಕೃತಿ, ಇತಿಹಾಸ ಪರಂಪರೆ ಹೊಂದಿದ ಸ್ಥಳಗಳನ್ನು ಸಂರಕ್ಷಿಸಬೇಕು. ಸಾಹಿತ್ಯ, ಸಾಂಸ್ಕೃತಿಕ, ನೃತ್ಯ, ಸಂಗೀತ ಕ್ಷೇತ್ರಗಳಿಗೆ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಬೇಕು. ಸ್ವಚ್ಛ, ಉತ್ತಮ ಹಾಗೂ ಹಸಿರು ವಾತಾವರಣ ಕಾಪಾಡಿಕೊಳ್ಳಬೇಕು. ಸೌರಶಕ್ತಿಯ ಸದ್ವಿನಿಯೋಗವಾಗುವ ಯೋಜನೆಗಳು ಬೇಕು ಎಂದು ಪ್ರಮುಖರು ಅಭಿಪ್ರಾಯಪಟ್ಟರು.

ಎಜುಕೇಷನ್, ಕೈಗಾರಿಕಾ, ಪ್ರವಾಸಿ ಹಬ್ ಆಗಿ ಶಿವಮೊಗ್ಗ ರೂಪುಗೊಳ್ಳಬೇಕು. ಜನಸಂಖ್ಯೆಗೆ ಅನುಗುಣವಾಗಿ ರಸ್ತೆ ಹಾಗೂ ಮೂಲಸೌಕರ್ಯ ನಿರ್ಮಾಣವಾಗಬೇಕು. ಕ್ರೀಡಾಸೌಕರ್ಯ ಮಕ್ಕಳಿಗೆ ಒಂದೇ ವೇದಿಕೆಯಲ್ಲಿ ಸಿಗುವಂತೆ ಆಗಬೇಕು. ಸ್ಥಳಿಯ ಉದ್ಯಮಗಳಿಗೆ ಸೂಕ್ತ ಪ್ರೋತ್ಸಾಹ ಹಾಗೂ ಮಾರುಕಟ್ಟೆ ವ್ಯವಸ್ಥೆ ಸಿಗಬೇಕು ಸೇರಿದಂತೆ ವೈವಿಧ್ಯಮಯ ಅಭಿಪ್ರಾಯಗಳು ವ್ಯಕ್ತವಾದವು.
ಶಿವಮೊಗ್ಗ ವಿಷನ್ 2050 ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಜನರು, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣತರು ತಮ್ಮ ಕ್ಷೇತ್ರಗಳಲ್ಲಿ ಆಗಬೇಕಿರುವ ಪರಿಕಲ್ಪನೆಯನ್ನು shivamoggavision2050@gmail.com ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಒಂದು ನಿಮಿಷದ ವಿಡಿಯೋ ಮುಖಾಂತರ ಕೂಡ ಅಭಿಪ್ರಾಯ ನೀಡಬಹುದು ಎಂದು ಎನ್.ಗೋಪಿನಾಥ್ ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಸಂವಾದ ನಡೆಸಿಕೊಟ್ಟರು. ಎಲ್ಲ ಕ್ಷೇತ್ರದ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದರು. ವಸಂತ್‌ ಹೋಬ್ಳಿದಾರ್‌, ಡಾ. ಶೇಖರ್ ಗೌಳೇರ್, ಎನ್.ವಿ.ಭಟ್, ಸಹನಾ ಚೇತನ್, ಡಾ. ಅಭಿಲಾಷ್‌, ಡಾ. ಭರತ್, ಡಾ. ರೂಪಾ, ಅರ್ಚನಾ, ಎಂ.ಎನ್.ಸುಂದರ್‌ರಾಜ್, ನಿರ್ಮಲ ಕಾಶಿ, ಪ್ರದೀಪ್ ಎಲಿ, ಶ್ರೀಪಾಲ್, ಪಲ್ಲವಿ, ಅ.ನಾ.ವಿಜಯೇಂದ್ರ, ಡಾ. ಪ್ರೇರಣಾ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳ ಕಲಿಕಾ ನ್ಯೂನತೆಗಳನ್ನ ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡಿ- ಡಾ.ಶುಭ್ರತಾ

0

ಮಕ್ಕಳಲ್ಲಿರುವ ಕಲಿಕಾ ನೂನ್ಯತೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸರಿಪಡಿಸುವ ಕೆಲಸ ಆಗಬೇಕು. ಇದರಿಂದ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅತ್ಯಂತ ಸಹಕಾರಿ ಆಗುತ್ತದೆ ಎಂದು ಮನೋವೈದ್ಯೆ ಡಾ. ಕೆ.ಎಸ್.ಶುಭ್ರತಾ ಹೇಳಿದರು.

ರಾಜೇಂದ್ರ ನಗರದಲ್ಲಿರುವ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ರೋಟರಿ ಪೂರ್ವ ಆಂಗ್ಲ ಪ್ರೌಢಶಾಲೆ, ಇಂಟರ‍್ಯಾಕ್ಟ್ ಕ್ಲಬ್, ಭಾರತೀಯ ಸೈಕಿಯಾಟ್ರಿಕ್ ಸೊಸೈಟಿ, ಕ್ಷೇಮ ಟ್ರಸ್ಟ್ ವತಿಯಿಂದ ಶಿಕ್ಷಕರಿಗೆ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳು ಕಲಿಕಾ ಸಾಮಾರ್ಥ್ಯವನ್ನು ನಿರಂತರವಾಗಿ ಗಮನಿಸುತ್ತಿರಬೇಕು. ನೂನ್ಯತೆ ಅನುಭವಿಸುತ್ತಿರುವುದು ಕಂಡುಬಂದಲ್ಲಿ ಗುರುತಿಸಿ ಸರಿಪಡಿಸಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಹೆಚ್ಚಿಸುವ ಜತೆಯಲ್ಲಿ ಜ್ಞಾನ ಸಾಮಾರ್ಥ್ಯ ವೃದ್ಧಿಸಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.

ಕಲಿಕಾ ಸಮಸ್ಯೆಯು ಮೆದುಳಿನಲ್ಲಿನ ಬೆಳವಣಿಗೆಯ ತೊಂದರೆಯಿಂದ ಉಂಟಾಗುತ್ತದೆ. ಇಂತಹ ಸಮಸ್ಯೆ ಇರುವ ಮಕ್ಕಳ ಕಲಿಕೆಯಲ್ಲಿನ ಸಾಮಾರ್ಥ್ಯವು ಇತರ ಮಕ್ಕಳಿಗಿಂತ ಎರಡು ಮೂರು ವರ್ಷದಷ್ಟು ಹಿಂದಿರುತ್ತದೆ. ಓದುವಾಗ, ಬರೆಯುವಾಗ, ಲೆಕ್ಕ ಮಾಡುವಾಗ ನಿಧಾನಿಸುತ್ತಾರೆ. ಸರಳವಾದ ಗಣಿತ ಲೆಕ್ಕ ಮಾಡಲು ಸಹ ವಿಫಲರಾಗುತ್ತಾರೆ. ಭಾಷೆ ಬರವಣಿಗೆಯಲ್ಲಿ ಒತ್ತಕ್ಷರ ಬರೆಯುವುದಿಲ್ಲ. ಹೀಗೆ ವಿವಿಧ ರೀತಿಯಲ್ಲಿ ಸಮಸ್ಯೆ ಎದುರಾಗುತ್ತದೆ.
ಶಿಕ್ಷಕರು ಕೂಡಲೇ ಗಮನಹರಿಸಿ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ವಿಶೇಷ ರೀತಿಯ ಕಲಿಕಾ ಕ್ರಮದಿಂದ ಮಕ್ಕಳಲ್ಲಿನ ಕಲಿಕಾ ನೂನ್ಯತೆ ಸಮಸ್ಯೆ ಸರಿಪಡಿಸಬಹುದು. ವೈದ್ಯರ ಮಾರ್ಗದರ್ಶನವು ಅತ್ಯಂತ ಅವಶ್ಯಕ. ಮಕ್ಕಳಿಗೆ ಶಿಕ್ಷಕರು ಹಾಗೂ ವೈದ್ಯರ ಸರಿಯಾದ ಮಾರ್ಗದರ್ಶನ ದಿಂದ ಮಕ್ಕಳ ಸಮಸ್ಯೆ ಸರಿಪಡಿಸಬಹುದು ಎಂದು ಅಭಿಪ್ರಾಯಪಟ್ಟರು.
ರೋಟರಿ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಚಂದ್ರಶೇಖರಯ್ಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾಂ, ಸೂರ್ಯನಾರಾಯಣ್, ಜಯಶೀಲಬಾಯಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮನಸ್ಸಿನಿಂದ ಮನಸ್ಸಿಗೆ -09

0

ಕನ್ನಡ ಸಾಹಿತ್ಯ ಸಮ್ಮೇಳನ – ಹಾವೇರಿ,
ಜನ ಸಾಹಿತ್ಯ ಸಮ್ಮೇಳನ – ಬೆಂಗಳೂರು………..

ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ……..

ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು – ಗೊಂದಲ…..

ಒಂದಷ್ಟು ಪ್ರೀತಿ ವಿಶ್ವಾಸ ವಿಶಾಲ ಮನೋಭಾವ ಕರುಣೆ ಕ್ಷಮಾಗುಣ ಎಲ್ಲವನ್ನೂ ಒಳಗೊಂಡ ಬುದ್ದತ್ವದಲ್ಲಿ ಎಲ್ಲವೂ ಸಹನೀಯ. ಯಾವುದೂ ವಿವಾದವೇ ಅಲ್ಲ. ಎಲ್ಲವೂ ಸಹಜ ಸ್ವಾಭಾವಿಕ……

ಆದರೆ, ಅಧಿಕಾರವೆಂಬುದು, ಹಣವೆಂಬುದು, ಪ್ರಶಸ್ತಿಯೆಂಬುದು, ಪ್ರಚಾರವೆಂಬುದು, ಜನಪ್ರಿಯತೆ ಎಂಬುದು ನೆತ್ತಿಗೇರಿ ಅಹಂಕಾರ ಮೀರಿ ದುರಹಂಕಾರವಾಗಿ ಪರಿವರ್ತನೆ ಹೊಂದಿದಾಗ ದ್ವೇಷ ಅಸೂಯೆಗಳು ಸುಲಭವಾಗಿ ನಮ್ಮನ್ನು ಆಕ್ರಮಿಸುತ್ತದೆ. ಆಗ ದೇವರೂ ಒಂದು ವಿವಾದ, ಧರ್ಮವೂ ಒಂದು ವಿವಾದ, ಭಾಷೆಯು ಒಂದು ವಿವಾದ, ಸಮ್ಮೇಳನವೂ ವಿವಾದವೇ…….

ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6/7/8 ನಡೆಯುತ್ತಲಿದೆ. ಅದಕ್ಕೆ ಶುಭ ಹಾರೈಸುತ್ತಾ…..

ಈ ರೀತಿಯ ಬೃಹತ್ ಪ್ರಮಾಣದ ಸಮ್ಮೇಳನದಲ್ಲಿ ಎಲ್ಲರನ್ನೂ ತೃಪ್ತಿ ಪಡಿಸುವುದು ಸಾಧ್ಯವಿಲ್ಲ. ಅಸಮಾಧಾನಗಳು ಸದಾ ಇರುತ್ತವೆ. ಆದರೆ ಉದ್ದೇಶ ಪೂರ್ವಕ ಪಕ್ಷಪಾತದ ನಿಲುವುಗಳನ್ನು ಪ್ರಶ್ನಿಸುವುದು ಮತ್ತು ವಿರೋಧಿಸುವುದು ಸಹ ಸ್ವೀಕಾರಾರ್ಹ…..

ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತದೆಯಂತೆ. ಕಾರಣ ತಾನು ಯಾರಿಗೂ ಕಾಣಬಾರದೆಂದು. ಆದರೆ ಈಗಿನ ಮನುಷ್ಯ ಸ್ವಭಾವಗಳು ಹೆಚ್ಚು ಸೂಕ್ಷ್ಮವಾಗಿದೆ. ಎಲ್ಲವನ್ನೂ ಅತಿಯಾಗಿಯೇ ಗಮನಿಸುತ್ತಾರೆ…..

ಈ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಮತ್ತು ಇಲ್ಲ 13 ಮುಸ್ಲಿಂ ಲೇಖಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಪ್ರತ್ಯುತ್ತರ……..

ಸರಿ ತಪ್ಪುಗಳ ಹುಡುಕಾಟ ಸರಿಯೇ ಅಥವಾ ಎಲ್ಲವನ್ನೂ ಮೌನವಾಗಿ ಸಹಿಸಬೇಕೇ ಅಥವಾ ಎಲ್ಲರ ಸ್ವಾತಂತ್ರ್ಯ ಗೌರವಿಸುತ್ತಾ ಸಮನ್ವಯ ‌ಸಾಧಿಸಬೇಕೇ ಅಥವಾ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಬೇಕೇ……

ಈಗಾಗಲೇ ಒಂದಷ್ಟು ಜನ ಪರ್ಯಾಯವಾಗಿ ಇದೇ ಜನವರಿ 8 ರಂದು ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ ನಡೆಸುವ ತಯಾರಿಯಲ್ಲಿದ್ದಾರೆ…..

ಒಂದು ಕಡೆ ಅತ್ಯಂತ ಮಹತ್ವದ ಐತಿಹಾಸಿಕ ಕನ್ನಡದ ನುಡಿ ಹಬ್ಬ ಇನ್ನೊಂದು ಕಡೆ ಅಷ್ಟೇ ಮಹತ್ವದ ಸಾಂಸ್ಕೃತಿಕ ಪ್ರತಿರೋಧ ಈ ಸಂಘರ್ಷ ಕನ್ನಡಿಗರ ಹಿತ ದೃಷ್ಟಿಯಿಂದ ಸಾಮಾಜಿಕವಾಗಿ ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ….

ಆದರೆ ಈಗ ಕಾಲ ಮಿಂಚಿದೆ. ಸಮನ್ವಯ ಸಾಧ್ಯವಾಗುತ್ತಿಲ್ಲ. ಕುಳಿತು ಮಾತನಾಡಿ ಒಂದಷ್ಟು ಸರಿಪಡಿಸಿಕೊಳ್ಳುವ ವ್ಯವಧಾನ, ಆಸಕ್ತಿ ಮತ್ತು ಒಳ್ಳೆಯತನ ಕಾಣುತ್ತಿಲ್ಲ. ಈಗ ಮಾಡುವುದಾದರೂ ಏನು…….

ಪ್ರಗತಿಪರರು – ಬದಲಾವಣೆ ಬಯಸುವವರು – ಸಾಮರಸ್ಯ ಸೌಹಾರ್ದ ಇಷ್ಟ ಪಡುವವರು – ಪ್ರವಾಹದ ವಿರುದ್ಧ ಈಜುವ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಆದ ಕಾರಣ ಸಾಂಪ್ರದಾಯಿಕ ಶಕ್ತಿಗಳಿಗಿಂತ ಎರಡು ಮೂರು ಪಟ್ಟು ಹೆಚ್ಚು ತಾಳ್ಮೆ ವಿವೇಚನೆ ಪ್ರಬುದ್ದತೆ ಮತ್ತು ಪ್ರೀತಿ ಇರಬೇಕಾಗುತ್ತದೆ. ಪರ್ಯಾಯ ಹುಡುಕುವಾಗ ಸಂಘರ್ಷಕ್ಕಿಂತ ಹೆಚ್ಚು ಅಪ್ಪಿಕೊಳ್ಳುವ ಮತ್ತು ಪರಿವರ್ತಿಸುವ ಗುಣ ಇರಬೇಕಾಗುತ್ತದೆ..

ಯಾರದೋ ಒಬ್ಬ ವ್ಯಕ್ತಿಯ ಸೈದ್ಧಾಂತಿಕ ವಿರೋಧಕ್ಕಾಗಿ ಅಥವಾ ಅಸಮರ್ಪಕ ನಿರ್ವಹಣೆಗಾಗಿ ಆತನನ್ನು ಟೀಕಿಸುವುದು ಸರಿ ಇದೆ. ಆದರೆ ಕನ್ನಡದ ನುಡಿ ತೇರನ್ನು ಬಹಿಷ್ಕರಿಸಿದರೆ ಅದು ಉತ್ತಮ ನಡೆಯಾಗುವುದಿಲ್ಲ. ಬದಲಾವಣೆ ಮೂಲದಲ್ಲೇ ಆಗಬೇಕೆ ಹೊರತು ಸಮ್ಮೇಳನದ ಸಂದರ್ಭದಲ್ಲಿಯಲ್ಲ…..

ಪರ್ಯಾಯ ಜನ ಸಾಹಿತ್ಯ ಸಮ್ಮೇಳನ ಮಾಡುವುದು ಸಹ ಭಾಷಾ ಸಾಹಿತ್ಯದ ದೃಷ್ಟಿಯಿಂದ ಉತ್ತಮ ನಡೆ. ಆದರೆ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ನಂತರ ಮಾಡಬೇಕು. ಅದು ನಡೆಯುವಾಗಲೇ ಇಲ್ಲಿ ಮತ್ತೊಂದು ನೆಡದರೆ ಸಂಘರ್ಷ ಹೆಚ್ಚಾಗುತ್ತದೆ. ಭಾಗವಹಿಸುವವರಿಗೂ ತೊಂದರೆಯಾಗುತ್ತದೆ.

ಪರ್ಯಾಯ ಮಾರ್ಗಗಳು ಸೇಡಿನ ರೂಪದಲ್ಲಿರದೆ ಸಹಬಾಳ್ವೆಯ ರೂಪ ಪಡೆದರೆ ಹೆಚ್ಚು ಆದರ್ಶ ಮತ್ತು ಅನುಕರಣೀಯವಾಗಿರುತ್ತದೆ. ತಪ್ಪು ಮಾಡಿದವರು ತಿದ್ದಿಕೊಳ್ಳಲು ಯೋಚಿಸುವಂತಿರಬೇಕು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಆರೋಪಗಳನ್ನು ಸಹಿಸಿಕೊಳ್ಳಬೇಕು. ಪ್ರತ್ಯಾರೋಪಗಳು ವೈಯಕ್ತಿಕ ಸಂಬಂಧಗಳನ್ನು ಘಾಸಿಗೊಳಿಸುವಂತಿರಬಾರದು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಚಿಂತನಾ ಸಾಮರ್ಥ್ಯವನ್ನು ಮೇಲ್ದರ್ಜೆಗೆ ಏರಿಸಬೇಕೆ ಹೊರತು ರಾಜಕೀಯ ಪ್ರೇರಿತ ಸಂಕುಚಿತ ಮನೋಭಾವ ಬೆಳೆಸಬಾರದು……..

ಆದ್ದರಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದ ಹಾವೇರಿ ಸಮ್ಮೇಳನವೂ ಯಶಸ್ವಿಯಾಗಲಿ ಮತ್ತು ಅದರ ಕಾರ್ಯಕ್ರಮದ ರೂಪರೇಷೆಗಳ ಪಕ್ಷಪಾತದ ವಿರುದ್ಧ ಪ್ರತಿರೋಧದ ಜನ ಸಾಹಿತ್ಯ ಸಮ್ಮೇಳನವೂ ಯಶಸ್ವಿಯಾಗಲಿ. ಸಾಧ್ಯವಾದರೆ ಆಸಕ್ತಿ ಇರುವವರು, ಅವಕಾಶ ಸಿಕ್ಕರೆ ಎರಡೂ ಕಡೆ ಭಾಗವಹಿಸಿ…..

ತಪ್ಪುಗಳು ನಡೆಯುತ್ತಲೇ ಇರುತ್ತದೆ. ಕಸ ಬೀಳುತ್ತಲೇ ಇರುತ್ತದೆ. ಕೆಲವರಾದರೂ ಪೊರಕೆ ಹಿಡಿದು ಗುಡಿಸುತ್ತಾ ಸಾಗೋಣ ಮತ್ತೆ ಮತ್ತೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

ವಸ್ತು ಖರೀದಿಸಿದಾಗ ಅಧೀಕೃತ ರಸೀದಿ ಪಡೆಯಿರಿ- ಡಾ.ಸೆಲ್ವಮಣಿ

0

ಯಾವುದೇ ವ್ಯಕ್ತಿ ತಾವು ಖರೀದಿಸುವ ವಸ್ತು, ವಸ್ತುವಿನ ಗುಣಮಟ್ಟ ಮತ್ತು ಅದರ ವಿಶೇಷತೆಗಳ ಬಗ್ಗೆ ಅರಿತು, ಅಧೀಕೃತ ಸ್ವೀಕೃತಿಯೊಂದಿಗೆ ಖರೀದಿಸುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತç ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಬಳಕೆದಾರರ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯದ ಚಂದನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ರಾಹಕರು ಖರೀದಿಸುವ ವಸ್ತುವಿನ ಮೇಲೆ ಸಂಬಂಧಿತ ಇಲಾಖೆಯ ಅಂಗೀಕೃತ ಆಗ್‌ಮಾರ್ಕ್ನ್ನು ಗಮನಿಸಬೇಕು. ಗ್ರಾಹಕರು ಖರೀದಿಸುವ ಸರಕು ಅಥವಾ ಸೇವೆಗಳಲ್ಲಿ ಯಾವುದೇ ರೀತಿಯ ಲೋಪಯುಕ್ತ ಸರಕುಗಳು, ಸಮಾಧಾನಕರವಲ್ಲದ ಸೇವೆಗಳು, ಗ್ರಾಹಕರಿಗೆ ಗ್ರಾಹಕ ಹಕ್ಕುಗಳ ಮತ್ತು ನ್ಯಾಯಸಮ್ಮತವಲ್ಲದ ವ್ಯಾಪಾರ ಪದ್ದತಿಯನ್ನು ಕಂಡುಕೊಂಡರೆ ಅದರ ವಿರುದ್ಧ ಸುರಕ್ಷೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಆಹಾರ ಇಲಾಖೆಯ ಮೂಲಕ ಜನರಲ್ಲಿ ಈ ಕುರಿತು ಜನಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿರುತ್ತದೆ. ಗ್ರಾಹಕರಿಗೆ ನೀಡುವ ಸೇವೆ, ಸರಕುಗಳಲ್ಲಿ ಲೋಪ ಉಂಟಾದಲ್ಲಿ ಗ್ರಾಹಕರು ತಮ್ಮ ಸಮೀಪದ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ತೆರಳಿ ದೂರು ಸಲ್ಲಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಗ್ರಾಹಕರ ಸೇವೆಗಳ ಅರಿವು ಹೊಂದಿರಬೇಕು. ವಸ್ತು ಅಥವಾ ಉತ್ಪನ್ನಗಳ ಮೇಲೆ ನಮೂದಿಸಿರು ಕಿರು ಮಾಹಿತಿಯನ್ನು ಕುತೂಹಲಕ್ಕಾಗಿಯಾದರೂ ಗಮನಿಸಬೇಕೆಂದವರು ನುಡಿದರು.

ಗ್ರಾಹಕರ ನ್ಯಾಯಾಲಯಗಳಲ್ಲಿ ದಾಖಲಾಗುವ ವ್ಯಾಜ್ಯಗಳು ತ್ವರಿತ ವಿಚಾರಣೆ ಮತ್ತು ವ್ಯಾಜ್ಯಗಳ ತ್ವರಿತ ಹಾಗೂ ಮಿತವೆಚ್ಚದಲ್ಲಿ ಅವುಗಳ ಇತ್ಯರ್ಥಕ್ಕೆ ಅವಕಾಶ ಒದಗಿಸಲಿದೆ. ಜೊತೆಗೆ ಗ್ರಾಹಕರಿಗೆ ನಿರ್ದಿಷ್ಟ ಪರಿಹಾರಗಳು ದೊರೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಆವಿನ್ ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಾರುಕಟ್ಟೆಯಲ್ಲಿ ಗ್ರಾಹಕನೇ ಸಾರ್ವಭೌಮ. ನ್ಯಾಯಾಲಯಕ್ಕೆ ದಾಖಲಾಗುವ ದೂರುಗಳ ಸ್ವರೂಪವೇ ಬೇರೆಯದೇ ಅಗಿದೆ. ವಿವಿಧ ಕಂಪನಿ, ಬ್ಯಾಂಕ್ ಮತ್ತು ಇತರ ಸಡೇವೆಗಳ ಹೆಸರಿನಲ್ಲಿ ಮೊಬೈಲ್ ಕರೆ, ಎಸ್.ಎಂ.ಎಸ್., ಸಂದೇಶ, ವಾಯ್ಸ್ ಮೆಸೇಜ್‌ಗಳ ಮೂಲಕ ಗ್ರಾಹಕರನ್ನು ಸೆಳೆದು ಸುಲಭವಾಗಿ ಮೋಸಗೊಳಿಸುತ್ತಿವೆ. ಆದ್ದರಿಂದ ಡಿಜಿಟಲ್ ಹಣಕಾಸು ವ್ಯವಹಾರದ ಬಗ್ಗೆ ಪ್ರತಿಗಾಹಕನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನುa ಆಯೋಜಿಸಲಾಗುತ್ತಿದೆ.

ಆನ್‌ಲೈನ್, ಡಿಜಿಟಲ್ ಮತ್ತು ವಿವಿಧ ರೀತಿಯ ಆಫರ್‌ಗಳಲ್ಲಿ ಗ್ರಾಹಕರಿಗೆ ಜಾಗೃತಿ ಅಗತ್ಯವಾಗಿದೆ ಎಂದ ಅವರು, ಅನೇಕ ಕಂಪನಿಗಳು ತಪ್ಪು ಮಾಹಿತಿ ನೀಡಿ ನ್ಯೂನ್ಯತೆ ಇರುವ ಸರಕು ಸಾಮಾಗ್ರಿಗಳನ್ನು ಮಾರಾಟ ಮಾಡಿ, ಗ್ರಾಹಕರಿಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಸರಕು ಮಾರಾಟ ಮಾಡುವುದು ಅಪರಾಧ. ಈ ಕುರಿತು ಅಧಿಕಾರಿಗಳು, ಗ್ರಾಹಕರು ಎಚ್ಚರಿಕೆ ವಹಿಸಬೇಕೆಂದವರು ನುಡಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಯೋಗಾನಂದ ಭಾಂಡ್ಯ ಡಿ. ಅವರು ಗ್ರಾಹಕರ ಆಯೋಗದಲ್ಲಿ ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ಪರಿಹಾರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಶಿವಣ್ಣ ಟಿ. ಅವರು ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್, ಶ್ರೀಮತಿ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಎಸ್.ನಾಗರಾಜ್, ಪ್ರೊ.ಹೆಚ್.ಎಂ.ಸುರೇಶ್, ಸಿ.ಎಲ್.ರಮೇಶ್, ಶ್ರೀಮತಿ ಶೀಲಾ ಸುರೇಶ್, ಸಾರಿಗೆ ಅಧಿಕಾರಿ ಗಂಗಾಧರ್, ಎಂ.ಎಂ.ಜಯಸ್ವಾಮಿ, ಮಂಜುನಾಥ ಎಸ್ ಮುಂತಾದವರು ಉಪಸ್ಥಿತರಿದ್ದರು.

ಡಯಾನಾ ಪುಸ್ತಕ ಮಳಿಗೆಯಲ್ಲಿ ಕುವೆಂಪು ಜನ್ಮದಿನಾಚರಣೆ

0

ರಾಷ್ಟ್ರ ಕವಿ ಕುವೆಂಪುರವರ 118ನೇ ಜನುಮ ದಿನದ ಅಂಗವಾಗಿ, ನಗರದ ಪ್ರತಿಷ್ಟಿತ ಡಯಾನಾ ಬುಕ್ ಗ್ಯಾಲರಿಯಲ್ಲಿ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕವಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ, ಕರ್ನಾಟಕ ಸಂಘದ ಅಧ್ಯಕ್ಷರು, ಅಂಕಣಕಾರರೂ ಆದ ಎಂ. ಎನ್. ಸುಂದರ ರಾಜ್‌ರವರು, ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ರಾಮಾಯಣ ದರ್ಶನಂ ಕುರಿತು ಸಾಂದರ್ಭಿಕ ಕ್ಷಣಗಳನ್ನು ಮೆಲಕು ಹಾಕಿದರು.

ಪುಸ್ತಕ ಮಳಿಗೆಯಲ್ಲಿ ಈ ನಾಡು ಕಂಡ ಶ್ರೇಷ್ಟ ಸಾಹಿತಿ ಕುವೆಂಪುರವರ ಜನುಮ ದಿನವನ್ನು ಆಪ್ತರು, ಪುಸ್ತಕ ಪ್ರೇಮಿಗಳ ನಡುವೆ ಆಚರಿಸುತ್ತಿರುವುದು ಅನುಕರಣೀಯ ಎಂದು ಮುಕ್ತಕಂಠದಿಂದ ಪ್ರಶಂಸಿಸಿ ಮುಂದಿನ ದಿನಗಳಲ್ಲಿ ಶ್ರೇಷ್ಟ ಸಾಹಿತಿಗಳು, ಚಿಂತಕರು, ದಾರ್ಶನಿಕರು, ಸಾಧಕರ ಜನುಮ ದಿನಗಳನ್ನು ಆಚರಿಸಿ, ಅವರೆಲ್ಲರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ದಾಟಿಸುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಶ್ರೀಮದ್ ರಂಭಾಪುರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಧರ್ಮೇಗೌಡ, ಕಮಲಾ ನೆಹರೂ ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಎಸ್. ನಾಗಭೂಷಣ, ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಕಾವೇರಿ, ಹಿರಿಯ ಪತ್ರಕರ್ತ ವೈದ್ಯ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಓದುಗರು, ಪುಸ್ತಕ ಪ್ರಿಯರು, ಗ್ರಾಹಕರು, ಬುಕ್ ಗ್ಯಾಲರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಯಾನಾ ಬುಕ್ ಗ್ಯಾಲರಿಯ ಕೆ. ಎಲ್ ಈಶ್ವರ್ (ಡಯಾನಾ) ಸ್ವಾಗತಿಸಿದರು.

ಯು ಟ್ಯೂಬ್ ಸ್ಟಾರ್ ಗಗನ್

0

ಕಷ್ಟ ಪಟ್ಟರೆ, ಏನನ್ನಾದರೂ ಸಾಧಿಸಬೇಕು ಅನ್ನೋ ಇಚ್ಛಾಶಕ್ತಿ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು ಅನ್ನೋದಿಕ್ಕೆ ನೈಜ ಉದಾಹರಣೆ ಡಾ. ಬ್ರೋ

ನಮಸ್ಕಾರ​ ದೇವ್ರು ಒಂದು ತಕ್ಷಣ ನೆನೆಪಿಗೆ ಬರುವುದು ಡಾ. ಬ್ರೋ ಅವರ ಮುಖ, ಅವರ ವಿಡಿಯೋಗಳು, ಬೇರೆ ಬೇರೆ ದೇಶಗಳಲ್ಲೂ ಕನ್ನಡದ ಕಂಪು ಸಾರುತ್ತಿರುವ ನಮ್ಮ ಡಾ.ಬ್ರೋ (Dr Bro).

ಹೌದು, ಯುಟ್ಯೂಬ್ ನಲ್ಲಿ ಡಾ .ಬ್ರೋ ಅಂತಾನೆ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಈ ಯುವಕ ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ ತೋರಿಸುತ್ತಾರೆ.

ಹಾಗಾದರೆ , ಈ ಬ್ರೋ ಯಾರು? ಅನ್ನೋದಾದ್ರೆ, ಸೋಶಿಯಲ್ ಮೀಡಿಯಾ, ಯು ಟ್ಯೂಬ್ ನೋಡೋರಿಗೆ ಬ್ರೋ ಗೊತ್ತೇ ಇರ್ತಾರೆ. ದೇಶ ವಿದೇಶಗಳನ್ನು ಸುತ್ತುತ್ತಾ ವಿವಿಧ ದೇಶಗಳಲ್ಲಿ ಕನ್ನಡದ ಕಂಪನ್ನ ಹರಿಸುತ್ತಿದ್ದಾರೆ.

ದೇಶ ವಿದೇಶಗಳನ್ನು ಸುತ್ತಲೂ ಅವರು ಅಷ್ಟೋಂದು ಹಣ ಎಲ್ಲಿಂದ ಬರುತ್ತೆ? ಬ್ರೋ ಅವರ ಮೂಲ ಹೆಸರೇನು? ಅವರ ಇತಿಹಾಸವೇನು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಎಲ್ಲಿದೆ ನೋಡಿ …

ಡಾಕ್ಟರ್​​ ಬ್ರೋ ಅವರ ಅಸಲಿ ನೇಮ್ ಗಗನ್. ಮೂಲತಃ ಬೆಂಗಳೂರಿನವರು. ಇವರ ತಂದೆಯ ಹೆಸರು ಶ್ರೀನಿವಾಸ್​. ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ. ಅವರು ಹೌಸ್ ವೈಫ್. ಡಾ ಬ್ರೋಗೆ ಓದಿಕ್ಕಿಂತ ಹಾಡು, ಡ್ಯಾನ್ಸ್​​ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ.

ಡಾ. ಬ್ರೋ ಅವರು ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ‌ಕಾರು ಓಡಿಸಲು ಶುರು ಮಾಡ್ತಾರೆ. ಭರತನಾಟ್ಯ ಕ್ಲಾಸ್ ಕೂಡ ನಡೆಸುತ್ತಾರೆ. ಫೋಟೋಗ್ರಫಿ, ವಿಡಿಯೂ ಗ್ರಫಿಯೂ ಇವರಿಗೆ ಗೊತ್ತು.

ಜೀವನದಲ್ಲಿ ಹೊಸದಾಗಿ ಏನನ್ನಾದರೂ ಮಾಡಬೇಕು ಎಂಬ ಆಸೆಯಿಂದ 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್‌ ಚಾನೆಲ್ ಶುರು ಮಾಡ್ತಾರೆ. ಅದೇ ಡಿ ಆರ್ ಬ್ರೋ ಅಂದರೆ ಡಾ.ಬ್ರೋ.

ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ, ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದರು. ‌ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ‌ ವಿವರ ಕೊಡಲು ಶುರುಮಾಡಿದ್ದರು. ರಾಜ್ಯ ಹೋಗಿ ಅಂತರಾಜ್ಯ, ನಂತರ ದೇಶ, ವಿದೇಶ ಸುತ್ತಿದ್ದರು.

ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ‌ ಖ್ಯಾತಿ ಗಗನ್​ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್‌ ಒಂದೇ ಒಂದು ರೂಪಾಯಿ ತನ್ನ‌ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ ಅಂದ್ರೇ ನಂಬುತ್ತಿರಾ?

ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ಬರೋಬ್ಬರಿ ತಿಂಗಳಿಗೆ 800 ಡಾಲರ್​ ಅಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ.