Tuesday, March 31, 2026
Tuesday, March 31, 2026
Home Blog Page 1345

ಪಾಕ್ ಮೇಲೆ ಕೆಂಡಗಣ್ಣು ಬೀರಿ ದಾಳಿಗೆ ನಿಂತ ತಾಲಿಬಾನ್ ಸೇನೆ

0

ಪಾಕ್ ಸೇನಾ ನಿರ್ಮಾಣಗಳ ಮೇಲೆ ಟಿಟಿಪಿ 148 ಬಾರಿ ದಾಳಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ತನ್ನ ಬೆಂಬಲಿಗರೊಂದಿಗೆ ಒಂದು ವರ್ಷದಲ್ಲಿ ಪಾಕಿಸ್ತಾನದ ರಕ್ಷಣಾ ಪಡೆಗಳ ಮೇಲೆ 148 ಬಾರಿ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಯಶಸ್ಸು ಕಂಡು ಸರ್ಕಾರ ರಚಿಸಿದ ಬಳಿಕ ಪಾಕಿಸ್ತಾನದ ಕಡೆ ಕಣ್ಣಿಟ್ಟಿದೆ. 2021ರಲ್ಲಿ ಟಿಟಿಪಿ ಪೊಲೀಸರ ಮೇಲೆ ಸಾಕಷ್ಟು ಬಾರಿ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. ಬಲೂಚಿಸ್ತಾನ್ ಪ್ರದೇಶದ ಖೈಬರ್ ಪಖ್ತುಂಖ್ವಾ ಮತ್ತು ಕ್ವೆಟ್ಟಾದಲ್ಲಿನ ಸೇನಾ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಿ ಶಕ್ತಿ ಪ್ರದರ್ಶಿಸಿದೆ.

ಪಾಕಿಸ್ತಾನ ಸರ್ಕಾರ ತಾಲಿಬಾನ್ ಹೊಸ ಸವಾಲೆಸೆದಿದ್ದು, ಶೀಘ್ರದಲ್ಲೇ ಪಾಕ್ ನಲ್ಲಿ ಹೊಸ ಕ್ಯಾಬಿನೆಟ್ನೊಂದಿಗೆ ಸರ್ಕಾರ ರಚಿಸುವುದಾಗಿ ತೆಹ್ರೀಕ್-ಎ-ತಾಲಿಬಾನ್ ಸಂಘಟನೆ ಘೋಷಣೆ ಮಾಡಿದೆ. ಪಾಕಿಸ್ತಾನ ಸರ್ಕಾರ ತನ್ನ ರಾಷ್ಟ್ರದ ಮುಸ್ಲಿಮರಿಗೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿರುವ ಟಿಟಿಪಿ ಸರ್ಕಾರ ಸಾರ್ವಭೌಮತ್ವವನ್ನು ಪ್ರಶ್ನಿಸುವಂತೆ ಮಾಡುತ್ತಿದೆ.

ಟಿಪಿ ರಕ್ಷಣೆಯಿಂದ ಹಿಡಿದು ಶಿಕ್ಷಣದವರೆಗೆ ತನ್ನದೇ ಆದ ಸಚಿವ ಸಂಪುಟವನ್ನು ಘೋಷಿಸಿ ಸರ್ಕಾರ ರಚಿಸಿ ಆಡಳಿತ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಹೊಸನಗರದಲ್ಲಿ ಪ್ರಸನ್ನ ಭಟ್ ಅಂತಿಮ ಯಾತ್ರೆ, ಸಂಜೆ 5ಕ್ಕೆ

0

ಸಂಸದ ಶ್ರೀ ಬಿ. ವೈ. ರಾಘವೇಂದ್ರ ಅವರ ಸಾಮಾಜಿಕ ಜಾಲತಾಣದ ನಿರ್ವಾಹಕ ಪ್ರಸನ್ನ ಭಟ್ (25) ಅವರು ನಿನ್ನೆ ಆಕಸ್ಮಿಕವಾಗಿ ನಿಧನರಾಗಿದ್ದಾರೆ. ಇಂದು ಸಂಜೆ ಅವರ ಪಾರ್ಥಿವ ಶರೀರವನ್ನು ರಾಮನಗರದಿಂದ ನೇರವಾಗಿ ಹೊಸನಗರಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ.

ಮಾವಿನಕೊಪ್ಪದಿಂದ ಹೊಸನಗರದ ನೆಹರು ಮೈದಾನದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ನೆಹರು ಮೈದಾನದಲ್ಲಿ ಪ್ರಸನ್ನ ಭಟ್ ಅವರ ಪಾರ್ಥಿವ ಶರೀರವನ್ನು ಸಂಜೆ 5 ಗಂಟೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು.

ಸಂಜೆ 6: ಗಂಟೆಯ ನಂತರ ಅಂತಿಮ ವಿಧಿ ವಿಧಾನಗಳ ಮೂಲಕ ಪ್ರಸನ್ನ ಭಟ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.

ಮಿಸ್ ಫೈರ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಯುವಕ ಸಾವು

0

ಶಿವಮೊಗ್ಗ ವಿದ್ಯಾನಗರದ ಮಿಸ್ ಫೈಯರ್ ಕೆಸ್ ನಡೆದಿದೆ.
ಕಳೆದ ರಾತ್ರಿ ಮಂಜುನಾಥ್ ಓಲೇಕರ್ ಎಂಬಾತನ ಡಬಲ್ ಬ್ಯಾರಲ್ ಗನ್ ನಿಂದ ಮಿಸ್ ಫೈಯರ್ ಆಗಿತ್ತು.

ವಿನಯ್ (34) ಅವರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿನಯ್ ಮೂಲತಃ ಹೊಸನಗರದವರಾಗಿದ್ದಾರೆ. ವಾಲಿಬಾಲ್ ಆಟಗಾರನಾಗಿದ್ದರು.
ಜಿಮ್ಮಿ ಚಾರ್ಜ್ ವಾಲಿಬಾಲ್ ಕ್ಲಬ್ ನಲ್ಲಿ ಅನೇಕ ವರ್ಷಗಳ ಕಾಲ ಆಟ ವಾಡಿದ್ದರು.

ನಿನ್ನೆ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ಗನ್ ಲೋಡ್ ಮಾಡುವಾಗ ಈ ಘಟನೆ ಸಂಭವಿಸಿದೆ. ಮಂಜುನಾಥ್ ಓಲೇಕರ್ ಅವರು ಏರ್ ಫೈಯರ್ ಮಾಡುವಾಗ ಈ ಘಟನೆ ಸಂಭವಿಸಿದೆ.

ಈ ಘಟನೆಯ ನಂತರ ಆತಂಕಕ್ಕಿಡಾಗಿ ಮಂಜುನಾಥ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಂಜುನಾಥ್ ಅವರ ಮಗ ಸಂದೀಪ್ ಮತ್ತು ಮೃತ ವಿನಯ್ ಈರ್ವರೂ ಗೆಳೆಯರಾಗಿದ್ದರು ಎಂದು ತಿಳಿದುಬಂದಿದೆ.

ಶಿವಮೊಗ್ಗದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜನ್ಮ ದಿನಾಚರಣೆ

0

ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ (ರಿ) ಶಿವಮೊಗ್ಗ ವತಿಯಿಂದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ದಿನಾಂಕ 01-01-2023 ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಯಿತು.

ಸನ್ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಡಾ.ನಾಗೇಂದ್ರ ಎಫ್.‌ ಹೊನ್ನಳ್ಳಿ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಸಮುದಾಯದ ಬಾಂಧವರಿಗೆ ಶುಭ ಕೋರಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯ ಗೌರವಾನ್ವಿತ ಸದಸ್ಯರಾದ ಶ್ರೀಮತಿ ಕಲ್ಪನಾ ರಮೇಶ್‌ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಜಿ.ಬಿ. ವಿನಯರಾಜ್‌ ಇಟಗಿ, ಕನ್ನಡ ಉಪನ್ಯಾಸಕರು, ಶ್ರೀ ವಿದ್ಯಾನಿಕೇತನ ಕಾಲೇಜು, ಹಗರಿಬೊಮ್ಮನಹಳ್ಳಿ ಜಕಣಾಚಾರಿ ರವರ ಕುರಿತಾಗಿ ಉಪನ್ಯಾಸ ನೀಡಿದರು.

ಜಿಲ್ಲಾ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಗರದಹಳ್ಳಿ ನಿರಂಜನ ಮೂರ್ತಿ, ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದ ಅಧ್ಯಕ್ಷರಾದ ಶ್ರೀ ಎನ್.‌ ಸೋಮಾಚಾರಿ, ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಎನ್.ರಮೇಶ್‌, ಹರಕೆರೆ ಕಾಳಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ.ಶ್ರೀನಿವಾಸ ಮೂರ್ತಿ, ವಿವಿಧ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿಗಳು ಮತ್ತು ಸಮಾಜ ಬಾಂಧವರು ಹಾಗೂ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.

ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್. ಸ್ವಾಗತಿಸಿ ಸಮಾಜದ ಶ್ರೀ ಮಾಲತೇಶ್ ವಂದಿಸಿದರು.

ಹೊಸ ವರ್ಷಾಚರಣೆ ಉಲ್ಲಾಸದಲ್ಲಿ ಸನಿಹದ ಮರಗಳಿಗೆ ಅಗ್ನಿ ಸ್ಪರ್ಶ

0

ಶಿವಮೊಗ್ಗ :
ಎಲ್ಲೆಡೆ ಹೊಸ ವರ್ಷದ ಸಡಗರ ಜೋರಾಗಿದೆ. ಅದೇ ರೀತಿ ಶಿವಮೊಗ್ಗದ ಕಂಟ್ರಿ ಕ್ಲಬ್ ನಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗದ ಕಂಟ್ರಿ ಕ್ಲಬ್ ನ ಬಳಿ ಬೆಂಕಿ ಅವಘಡ ಸಂಭವಿಸಿದೆ.

ಶಿವಮೊಗ್ಗದ ಕಂಟ್ರಿ ಕ್ಲಬ್ ನಲ್ಲಿ ಸುತ್ತ ಮುತ್ತಲಿನ ಯುವಕ ಯುವತಿಯರು ಸೇರಿದಂತೆ ಹಲವು ಜನರು ಹೊಸ ವರ್ಷದ ಸಡಗರವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು.

ಈ ಸಂದರ್ಭದಲ್ಲಿ ಯಾವುದೋ ಕಿಡಿಗೆಡಿಗಳು ಕ್ಲಬ್ ಬಳಿ ಇರುವ
ಈಚಲ ಮರಗಳಿಗೆ ಬೆಂಕಿ ಹಚ್ಚಿದ್ದಾರೆ.

ಚಿತ್ರದುರ್ಗದ ಬಳಿ ಎಟಿಆರ್ ವಾಹನದ ಉಡಾವಣಾ ರನ್ ವೇ ಲ್ಯಾಂಡಿಂಗ್ ಪ್ರಯೋಗ

0

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ನೂತನ ವರ್ಷದಲ್ಲಿ ಆದಿತ್ಯ ಮತ್ತು ಚಂದ್ರಯಾನ-3ಕ್ಕೆ ಮೀಸಲಾದ ಮಿಷನ್​ಗಳ ಮೇಲೆ ಗಮನ ಹರಿಸಲಿದೆ. ನೂತನ ವರ್ಷದಲ್ಲಿ ಭಾರತದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಮೇಲಿನ ಪ್ರಯೋಗಗಳ ಸರಣಿ ನಡೆಯಲಿದೆ.

2023ರ ಕೊನೆಯ ತ್ರೖೆಮಾಸಿಕ ದಲ್ಲಿ ಹ್ಯೂಮನ್ ರೇಟೆಡ್ ಲಾಂಚ್ ವೆಹಿಕಲ್ ಆರ್ಬಿಟಲ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ ಹಾಗೂ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವ ಗುರಿ ಹೊಂದಿರುವ ಗಗನಯಾನ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.

ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್​ನಲ್ಲಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಮೊದಲ ರನ್​ವೇ ಲ್ಯಾಂಡಿಂಗ್ ಪ್ರಯೋಗವನ್ನು ವರ್ಷದ ಆರಂಭದಲ್ಲಿ ನಡೆಸಲು ಇಸ್ರೋ ಯೋಜಿಸಿದೆ.

ಯಡಿಯೂರಪ್ಪ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ- ಬಿ.ವೈ.ವಿಜಯೀಂದ್ರ

0

ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. BSY ಬಿಜೆಪಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಬಿಜೆಪಿ ಪಕ್ಷವನ್ನು ಇನ್ನೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ತಿಳಿಸಿದ್ದಾರೆ.

ಗದಗನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ, ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಬಿಎಸ್‌ವೈ ಮುನಿಸಿಕೊಂಡಿದ್ದಾರೆ ಎಂಬುದು ವಿರೋಧ ಪಕ್ಷದವರು ಹರಡಿಸಿರುವ ಸುಳ್ಳು ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತಾಡಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿ ಅವರು ಒಳ್ಳೆಯ ಮಾತನಾಡಿದ್ದಾರೆ. ಇದರ ಅರ್ಥ ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರ ಬೆಂಬಲ ಇದೆ ಅಂತಲ್ಲ. ಯಡಿಯೂರಪ್ಪ ಅವರು ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ. ನೇರವಾಗಿ ರಾಜಕಾರಣ ಮಾಡುವ ಎದೆಗಾರಿಗೆ ಯಡಿಯೂರಪ್ಪ ಅವರಿಗೆ ಇದೆ ಎಂದು ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ಮದ್ಯ ಮಾರಾಟದಿಂದ ರಾಜ್ಯ ಬೊಕ್ಕಸಕ್ಕೆ ಕೋಟಿ ಕೋಟಿ ಆದಾಯ

0

ಹೊಸ ವರ್ಷದ ಹಿನ್ನೆಲೆ ಸಾವಿರಾರು ಲೀಟರ್ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಬಂದಿದೆ.

ಕಳೆದ 5 ದಿನದಲ್ಲಿ ಬಹಳ ಜೋರಾಗಿ ಮದ್ಯ ಮಾರಾಟವಾಗಿದೆ.

ಡಿ.27 ರಂದು 3.57 ಲಕ್ಷ ಲೀ. ಐಎಂಎಲ್ , 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ

ಡಿ.28ರಂದು 2.31 ಲಕ್ಷ ಲೀಟರ್‌ ಐಎಂಎಲ್, 1.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.

ಡಿ‌.29ರಂದು 2.31 ಲಕ್ಷ ಲೀಟರ್‌ ಐಎಂಎಲ್, 1.93 ಲಕ್ಷ ಲೀಟರ್ ಬಿಯರ್ ಮಾರಾಟ
ಡಿ.30ರಂದು 2.93 ಲಕ್ಷ ಲೀಟರ್‌ ಐಎಂಎಲ್, 2.59 ಲಕ್ಷ ಲೀಟರ್ ಬಿಯರ್ ಮಾರಾಟ
ಡಿ.31ರಂದು 3 ಲಕ್ಷ ಲೀಟರ್‌ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.

ಡಿಸೆಂಬರ್ 31ರಂದು ಒಂದೇ ದಿನ ಮೂರು ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಸೇಲ್ ಆಗಿದೆ.

ಡಿ.23ರಿಂದ ಡಿ.31ರವರೆಗಿನ ಸೇಲ್ ವ್ಯಾಲ್ಯೂ 1,262 ಕೋಟಿ ರೂಪಾಯಿ. ಈ ಒಂದು ವಾರದಲ್ಲಿ ಒಟ್ಟು 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಹಾಗೂ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.

ಜಿಲ್ಲಾ ನ್ಯಾಯಾಲಯಗಳು ನ್ಯಾಯ ವ್ಯವಸ್ಥೆಯ ಬೆನ್ನೆಲುಬು- ನ್ಯಾ. ಚಂದ್ರಚೂಡ್

0

ನ್ಯಾಯವಾದಿಗಳ ಕೊರತೆಯಿಂದಾಗಿ ದೇಶದಲ್ಲಿ 63 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಅವರು ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶ ಕಾನೂನು ಅಕಾಡೆಮಿಯ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ನ್ಯಾಯಾಲಯಗಳು ನ್ಯಾಯವ್ಯವಸ್ಥೆಯ ಬೆನ್ನೆಲುಬಾಗಿದೆ. ಅದು ಕನಿಷ್ಠ ಸ್ತರದಲ್ಲಿರುವುದರಿಂದ ಅದನ್ನು ನಗಣ್ಯ ಎಣಿಸುವ ಮಾನಸಿಕತೆಯನ್ನು ನಾಗರಿಕರು ಬದಲಾಯಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಹೈ ರಿಸ್ಕ್ ದೇಶಗಳ ಪ್ರಯಾಣಿಕರಿಗೆ ಕೋವಿಡ್ ಕಟ್ಟುನಿಟ್ಟಿನ ಮಾರ್ಗಸೂಚಿ

0

ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ಮಾರ್ಗಸೂಚಿ ಹೊರಡಿಸಿ ಒಂದಷ್ಟು ನಿಯಮಗಳನ್ನು ವಿಧಿಸಿರುವ ಸರ್ಕಾರ ಇದೀಗ ಹೊಸ ಆದೇಶವನ್ನು ಹೊರಡಿಸಿದೆ. ಹೊಸ ವರ್ಷದ ಮುನ್ನಾ ದಿನವೇ ಈ ಆದೇಶ ಹೊರಬಿದ್ದಿದೆ.

ಕೊರೋನಾಗೆ ಸಂಬಂಧಿಸಿದಂತೆ ಹೈ-ರಿಸ್ಕ್‌ ಎನಿಸಿಕೊಂಡಿರುವ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯಿಸುವಂತೆ ಈ ಆದೇಶ ಹೊರಡಿಸಲಾಗಿದೆ.

ಅಂದರೆ, ಹೈ-ರಿಸ್ಕ್ ದೇಶಗಳಿಂದ ಬರುವ ವಿಮಾನ ಪ್ರಯಾಣಿಕರು ಕಡ್ಡಾಯವಾಗಿ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಆದೇಶಿಸಲಾಗಿದೆ.

ಚೀನಾ, ಹಾಂಗ್‌ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಥಾಯ್ಲೆಂಡ್‌ನಿಂದ ಬರುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ.

ವಿಮಾನನಿಲ್ದಾಣದಲ್ಲೇ ಕೊರೋನಾ ಪರೀಕ್ಷೆಗೆ ಒಳಪಡಿಸಲಿದೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.