Saturday, April 4, 2026
Saturday, April 4, 2026
Home Blog Page 1318

ಶಿವಮೊಗ್ಗ ಏರ್ ಪೋರ್ಟಿನ ನಾಮಕರಣಕ್ಕೆ ವಿವಿಧ ನಾಯಕರ ಹೆಸರುಗಳ ವೈವಿಧ್ಯ ಪ್ರಸ್ತಾಪಗಳು

0

ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ಇಡೀ ದೇಶಕ್ಕೇ ಮಾದರಿ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ಹೆಸರು ಇಡಬೇಕೆಂದು ಒತ್ತಾಯಿಸಿ ನವಕರ್ನಾಟಕ ನಿರ್ಮಾಣ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಹೆಸರಿಡಬೇಕೆಂದು ಕೆಲವರು, ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹೆಸರಿಡಬೇಕೆಂದು ಹಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ವಿಶ್ವಮಾನ್ಯರಾಗಿದ್ದಾರೆ.

ರಾಷ್ಟ್ರಕವಿ ಕುವೆಂಪು ಹಾಗೂ ಎಸ್.ಬಂಗಾರಪ್ಪ ಅವರ ಹೆಸರುಗಳೂ ದೇಶಾದ್ಯಂತ ಪ್ರಚಲಿತದಲ್ಲಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ರಾಜಕಾರಣಿಗಳು ಎಂದರೆ ಭ್ರಷ್ಟರು, ಸ್ವಜನ ಪಕ್ಷಪಾತಿಗಳು, ಸುಳ್ಳರು, ಸ್ವಾರ್ಥಿಗಳು ಎಂಬ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದ ಶಾಂತವೇರಿ ಗೋಪಾಲಗೌಡರು ಗೇಣಿ ಪದ್ಧತಿ ವಿರುದ್ಧ ಹೋರಾಟ ನಡೆಸಿ, ಉಳುವವನೇ ಭೂಮಿ ಒಡೆಯ ಕಾನೂನು ಜಾರಿಯಾಗಲು ಪ್ರಮುಖ ಪಾತ್ರ ವಹಿಸಿದ್ದರು. ಆ ಮೂಲಕ ದಲಿತರು, ಹಿಂದುಳಿದವರು, ನಿಜವಾದ ಶ್ರಮಜೀವಿಗಳು ಭೂಮಿಯ ಮಾಲೀಕರಾಗಲು ಕಾರಣರಾದವರು.

ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಬಾರಿ ಶಾಸಕರಾಗಿ, ಜಾತ್ಯತೀತವಾಗಿ ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿ, ಸ್ವಾರ್ಥರಹಿತ ಕೆಲಸ ಮಾಡಿ, ಇಡೀ ದೇಶಕ್ಕೇ ಮಾದರಿ ರಾಜಕಾರಣಿಯಾಗಿದ್ದಾರೆ. ಇತ್ತೀಚಿಗೆ ರಾಜಕಾರಣದಲ್ಲಿ ಇಂತಹ ಸಿದ್ಧಾಂತ ಕಣ್ಮರೆಯಾಗುತ್ತಿದೆ. ರಾಜಕಾರಣದಲ್ಲಿ ಪ್ರಾಮಾಣಿಕ, ನಿಸ್ವಾರ್ಥ ರಾಜಕಾರಣಿಗಳು ಇದ್ದರು. ಅವರು ಶಿವಮೊಗ್ಗ ಜಿಲ್ಲೆಯವರೇ ಆಗಿದ್ದರು ಎನ್ನುವುದನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆ ಇದೆ. ಹಾಗಾಗಿ ಶಾಂತವೇರಿ ಗೋಪಾಲಗೌಡರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಮನವಿದಾರರು ಒತ್ತಾಯಿಸಿದರು.

ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡ ಪ್ರತಿ ರೈತರಿಗೂ ನಿವೇಶನ ಹಾಗೂ ಉದ್ಯೋಗ ನೀಡಬೇಕು. ವಿಮಾನ ನಿಲ್ದಾಣದಲ್ಲಿ ಕೆಳ ಹಂತದ ಹುದ್ದೆಯಿಂದ ಉನ್ನತ ಹುದ್ದೆಯವರೆಗೂ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ನವಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್‍ಗೌಡ, ಜಿಲ್ಲಾಧ್ಯಕ್ಷ ಸಂತೋಷ್, ಪ್ರಮುಖರಾದ ನಯನ ರಾಜು, ಪುಷ್ಪ, ಫಯಾಜ್, ರಾಜು ಗುಜ್ಜರ್, ನಾಗರಾಜ್, ರಾಜುನಾಯ್ಕ, ವೀರೇಶ್, ಮಂಜೇಗೌಡ್ರು ಡಿ., ವಾಣಿ ಮಂಜೇಗೌಡ್ರು, ಮಂಜು ಟಿ.ಆರ್., ಶಿವಯೋಗಿ, ಪ್ರವೀಣ್ ಸೇರಿದಂತೆ ಹಲವರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಖೋಖೋ ಪಂದ್ಯಾವಳಿಯಿಂದ ಯುವಜನತೆಗೆ ಸ್ಫೂರ್ತಿ-ವಿನೋದ್ ಬೊಗಸೆ

0

ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗ್ರಾಮದ ಯುವಕರ ಸ್ಪೂರ್ತಿ ನೀಡುವ ಸಲುವಾಗಿ ಖೋ ಖೋ ಪಂದ್ಯಾವಳಿ ಆಯೋಜಿಸಿ ಪ್ರೇರೇಪಿ ಸುವ ಕಾರ್ಯ ಮಾಡಲಾಗುತ್ತಿದೆ ಎಂದು ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಹೇಳಿದರು.

ಖಾಂಡ್ಯ ಹೋಬಳಿಯ ಗೋರಿಗಂಡಿ ಗ್ರಾಮದಲ್ಲಿ ನೈನ್ ಬ್ಲಾಕ್ ಯುವಕರ ತಂಡ ಆಯೋಜಿಸಲಾಗಿದ್ದ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದ ಎರಡು ದಿನಗಳ ಕಾಲ ನಡೆದ ಖೋ ಖೋ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಆಧುನಿಕತೆ ಬೆಳೆದಂತೆ ಕ್ರೀಡೆಗಳಲ್ಲಿ ಮಕ್ಕಳಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್, ಎಲೆಕ್ಟಾçನಿಕ್ ವಸ್ತುಗಳ ವ್ಯಾಮೋಹದಿಂದಾಗಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮದ ಯುವಕರು ಒಗ್ಗಟ್ಟಾಗಿ ಹಳ್ಳಿಗಾಡಿನ ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಕಾರ್ಯಕಾರಿಣ ಸದಸ್ಯ ರಾಘು ಮಾತನಾಡಿ ಯುವಕರು ಅತ್ಯಂತ ಶ್ರಮವಹಿಸಿ ಕ್ರೀಡೆ ಆಯೋಜಿಸಿರುವುದು ಖುಷಿಯ ವಿಚಾರ. ಮುಂಬರುವ ದಿನಗಳಲ್ಲಿ ಇದೇ ರೀತಿ ಗ್ರಾಮೀಣ ಕ್ರೀಡೆಗಳನ್ನು ಬೆಳೆಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ ಖೋ ಖೋ ಪಂದ್ಯಾವಳಿಯಲ್ಲಿ ವಿಜೇತರಾದ ಸಖರಾಯಪಟ್ಟಣ, ಗೋರಿಗಂಡಿ ಹಾಗೂ ಸಂಗಮೇಶ್ವರ ತಂಡಕ್ಕೆ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಖಾಂಡ್ಯ ಹೋಬಳಿ ಎಸ್ಸಿ ಘಟಕದ ಅಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್, ಮಂಜು ಮತ್ತಿತರರು ಹಾಜರಿದ್ದರು.

ಚಿಕ್ಕಮಗಳೂರಿನ ನಗರಸಭಾ ಕ್ಯಾಲೆಂಡರ್ ಮುದ್ರಣಕ್ಕೆ ಲಕ್ಷಾಂತರ ಹಣ ಖರ್ಚು ಆರೋಪ

0

ಸಾರ್ವಜನಿಕರ ತೆರಿಗೆ ಹಣದಿಂದ ನಗರಸಭಾ ಆಡಳಿತ ಮಂಡಳಿಯು ಲಕ್ಷಾಂತರ ಹಣವನ್ನು ವ್ಯಯಿಸಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸುವ ಮೂಲಕ ಬಿಜೆಪಿ ಕರಪತ್ರದಂತೆ ಬಿಂಬಿಸಿ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಜೆಡಿಎಸ್ ನಗರ ಸಭಾ ಸದಸ್ಯ ಎ.ಸಿ.ಕುಮಾರಗೌಡ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಸುಮಾರು 30 ಸಾವಿರ ಕ್ಯಾಲೆಂಡರ್ ಮುದ್ರಣಕ್ಕೆ ಲಕ್ಷಾಂತರ ರೂ. ಖರ್ಚಾಗಿದೆ ಎಂದು ತಿಳಿದು ಬಂದಿದೆ.

ಇಷ್ಟೆಲ್ಲಾ ಹಣವನ್ನು ವ್ಯಯಿಸುತ್ತಿರುವ ಆಡಳಿತ ಮಂಡಳಿಯು ಸಾರ್ವಜನಿಕರ ಆಸ್ತಿಯಾದ ನಗರಸಭೆಯಲ್ಲಿ ಸೂಕ್ತ ಶೌಚಾಲಯವಿಲ್ಲ ಹಾಗೂ ರೆಕಾರ್ಡ್ ರೂಂಗಳು ಅವ್ಯವಸ್ಥೆಯಾಗಿದ್ದರೂ ಗಮನಹರಿಸುತ್ತಿಲ್ಲ ಎಂದಿದ್ದಾರೆ.

ನಗರಸಭೆಯಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವ ಕಟ್ಟಡದ ಮೇಲ್ಬಾಗ ದಲ್ಲಿ ಶಾಸಕರ ಭಾವಚಿತ್ರವನ್ನು ಅಳವಡಿಸಿ ಹೈಕೋರ್ಟ್ ಆದೇಶವನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ಇದೇ ರೀತಿಯ ನಗರಾದ್ಯಂತ ನೀರಿನ ಘಟಕಗಳಲ್ಲಿ ಶಾಸಕರ ಚಿತ್ರ ಹಾಕುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಅನುದಾನದಲ್ಲಿ ನಗರದ ವಿವಿಧೆಡೆ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಶಾಸಕರ ಹಾಗೂ ಅಧ್ಯಕ್ಷರ ಭಾವಚಿತ್ರವನ್ನು ತೆರವುಗೊಳಿಸಬೇಕು ಎಂದ ಅವರು ಲಕ್ಷಾಂತರ ರೂ.ಗಳ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಬೇಕಾಬಿಟ್ಟಿಯಾಗಿ ಕೆಲಸ ಮಾಡುವ ಬದಲು ವಾರ್ಡ್ಗಳಲ್ಲಿರುವ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವಲ್ಲಿ ನಗರಸಭೆ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.

ಜಿಲ್ಲಾ ಉತ್ಸವದಲ್ಲಿ ಅತ್ಯಂತ ಚುರುಕಾಗಿ 15 ದಿನಗಳ ಕಾಲ ನಗರ ಸ್ವಚ್ಚತೆಗೆ ಕಾರ್ಯನಿರ್ವಹಿಸಿರುವ ಪೌರಕಾರ್ಮಿಕರಿಗೆ ಒಂದು ತಿಂಗಳ ವೇತನ ನೀಡಬೇಕು ಎಂದು ತೀರ್ಮಾನವಾಗಿದ್ದರೂ ಇದುವರೆಗೂ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನಗರಸಭೆಯು ಕ್ಯಾಲೆಂಡ್ ಬಿಡುಗಡೆ ಮಾಡಿ ಬಿಜೆಪಿಯ ಕರಪತ್ರದಂತೆ ಹಂಚಿಕೆ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಕೂಡಲೇ ನಗರಸಭಾ ಆಡಳಿತ ಮಂಡಳಿಯು ಸರ್ಕಾರದ ಆದಾಯವನ್ನು ದುರುಪಯೋಗಪಡಿಸಿ ಕೊಂಡು ಅನಾವಶ್ಯಕವಾಗಿ ವೆಚ್ಚಮಾಡಿ ಸರ್ಕಾರಕ್ಕೆ ನಷ್ಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾನೂನು ಹೋರಾಟಕ್ಕೆ ಅವಕಾಶ ಕೊಡದೆ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಯೋ ಜನವಿಲ್ಲದ ಕಾರ್ಯಕ್ರಮಕ್ಕೆ ತೆರಿಗೆ ಹಣವನ್ನು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪ್ರಸಿದ್ಧ ಪಶುವೈದ್ಯ ವಿಜ್ಞಾನಿ ಡಾ ಎನ್.ಬಿ ಶ್ರೀಧರ್ ಅವರಿಗೆ ಶ್ರೇಷ್ಠ ಪಶುವೈದ್ಯ ಪ್ರಶಸ್ತಿ

0

ನಾಡಿನ ಖ್ಯಾತ ಪಶುವೈದ್ಯ ವಿಜ್ಞಾನಿ, ಸಾಹಿತಿ, ಚಿಂತಕ, ಬರಹಗಾರರು, ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ: ಎನ್.ಬಿ.ಶ್ರೀಧರ, ಇವರಿಗೆ ಕರ್ನಾಟಕ
ಪಶುವೈದ್ಯಕೀಯ ಸಂಘ ಇವರು ಜೀವಮಾನದಲ್ಲಿ ಪಶುವೈದ್ಯಕೀಯ ರಂಗಕ್ಕೆ ಮಾಡಿದ ಗಣನೀಯ
ಸಾಧನೆಗಾಗಿ “ ಡಾ: ಆರ್ ಡಿ ನಂಜಯ್ಯ ಸ್ಮಾರಕ ಜೀವಮಾನದ ಶ್ರೇಷ್ಟ ಪಶುವೈದ್ಯ ಪ್ರಶಸ್ತಿ” ನೀಡಿ,
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ತಾಂತ್ರಿಕ ಸಮ್ಮೇಳನದಲ್ಲಿ
ಸನ್ಮಾನಿಸಲಾಗಿದೆ.

ಇವರು ಪಶುವೈದ್ಯಕೀಯ ರಂಗದಲ್ಲಿ ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ
ಸಸ್ಯಜನ್ಯ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ
ಮಾಡಿ ಸಹಸ್ರಾರು ಜಾನುವಾರುಗಳ ಉಳಿವಿಗೆ ಕಾರಣರಾಗಿರುವುದನ್ನು ಮತ್ತು ರೈತರ ಮಾಹಿತಿಗಾಗಿ ಅನೇಕ
ತಾಂತ್ರಿಕ ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ನೀಡುತ್ತಿರುವುದನ್ನು ಹಾಗೂ ಇತ್ತೀಗಷ್ಟೆ ಇವರಿಗೆ
ಭಾರತೀಯ ಪಶುವೈದ್ಯಕೀಯ ಔಷಧಶಾತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು “ರಾಷ್ಟ್ರ‍ೀಯ ಫ಼ೆಲೊ”
ಪ್ರಶಸ್ತಿ ನೀಡಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.

ಕೇಂದ್ರ ಬಜೆಟ್ 2023-24 ಪ್ರಮುಖ ಅಂಶಗಳು

0

ಸರ್ಕಾರ 2.0ದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆಯನ್ನು ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. 2023ರ ಬಜೆಟ್ ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾದ ಅಂಶಗಳ ಪಟ್ಟಿ ಹೀಗಿವೆ.

01.ಕೇಂದ್ರದ ಪರಿಣಾಮಕಾರಿ ಬಂಡವಾಳ ವೆಚ್ಚ 13.7 ಲಕ್ಷ ಕೋಟಿ ರೂ.

02.ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಶೇ.66ರಷ್ಟು ಹೆಚ್ಚುವರಿ ಅಂದರೆ ಹೆಚ್ಚುಳವಾಗಿ 79,000 ಕೋಟಿ ರೂ ಮೀಸಲು

03.ಆದಿವಾಸಿಗಳಿಗೆ ಸುರಕ್ಷಿತ ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ವಿದ್ಯುತ್‌ಗಾಗಿ ರೂ 15,000 ಕೋಟಿ ಮಿಷನ್

04.ಬಂಡವಾಳ ಹೂಡಿಕೆ ವೆಚ್ಚವನ್ನು ಶೇ.33 ರಿಂದ 10 ಲಕ್ಷ ಕೋಟಿ ರೂಗೆ ಹೆಚ್ಚಿಸಲಾಗುವುದು, 2024 ರ ಹಣಕಾಸು ವರ್ಷದಲ್ಲಿ GDP ಯ ಶೇ.3.3% ಕ್ಕೆ ಏರಿಕೆ

05.ಕೃತಕ ಬುದ್ದಿಮತ್ತೆ ಅಥವಾ AIಗಾಗಿ 3 ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆ

06.ವ್ಯವಹಾರವನ್ನು ಸುಲಭಗೊಳಿಸಲು, 39,000 ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ.

07.ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳು, 2047 ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕುವ ಉದ್ದೇಶ

08.1ರೈಲ್ವೆಗೆ 2.4 ಲಕ್ಷ ಕೋಟಿ ರೂ, ಇದುವರೆಗಿನ ಅತಿ ಹೆಚ್ಚು

09.ಎಲ್ಲಾ ನಗರಗಳು ಮತ್ತು ಪಟ್ಟಣಗಳು 100 ಪ್ರತಿಶತದಷ್ಟು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಮ್ಯಾನ್‌ಹೋಲ್‌ನಿಂದ ಮೆಷಿನ್ ಹೋಲ್ ಮೋಡ್‌ಗೆ ಬದಲಾಯಿಸಲು ಯೋಜನೆ ರೂಪಿಸಲಾಗಿದೆ.

10.ಕೃತಕ ಬುದ್ದಿಮತ್ತೆ ಅಥವಾ AIಗಾಗಿ 3 ಶ್ರೇಷ್ಠತೆಯ ಕೇಂದ್ರಗಳ ಸ್ಥಾಪನೆ

11.ಮುಂದಿನ 3 ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರ ನೇಮಕ

12.ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳನ್ನು ಸ್ಥಾಪನೆ

13.ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳನ್ನು ಸ್ಥಾಪನೆ

14. ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ

15.ರಾಗಿ, ಜೋಳ ಸೇರಿದಂತೆ ಸಿರಿ ಧಾನ್ಯಗಳ ಕೃಷಿ ಉತ್ತೇಜನಕ್ಕೆ ಹೊಸ ಯೋಜನೆ

16.ಗೋಬರ್ದನ್ ಯೋಜನೆ ಅಡಿ ದೇಶಾದ್ಯಂತ 200 ಬಯೋ ಗ್ಯಾಸ್ ಘಟಕಗಳ ನಿರ್ಮಾಣ

17.ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ

18.2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ

19.ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಜಿಟಲ್ ಸ್ಪರ್ಶ: ಸ್ವದೇಶ ದರ್ಶನ್, ದೇಖೋ ಅಪ್ನಾ ದೇಶ್ ಯೋಜನೆ.

20.ಹಳೆಯ ಸರ್ಕಾರಿ ವಾಹನಗಳು ಗುಜರಿ ಪಾಲು, ಹೊಸ ವಾಹನಗಳ ಖರೀದಿಗೆ ಅನುದಾನ

21.ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷದಿಂದ 7 ಲಕ್ಷ ರೂ.ಗೆ ಏರಿಕೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ದಲಿತರನ್ನ ಕಡೆಗಣಿಸಲಾಗಿದೆ

0

ದಲಿತ ನೌಕರರ ಮೇಲೆ ದೌರ್ಜನ್ಯ, ಟೆಂಡರ್ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ, ಜಿಲ್ಲಾ ಉತ್ಸವದಲ್ಲಿ ದಲಿತರನ್ನು ಕಡೆಗಣ ಸಿರುವುದು ಸೇರಿದಂತೆ ವಿವಿಧ ಅಕ್ರಮದಲ್ಲಿ ತೊಡಗಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯನ್ನು ಕೂಡಲೇ ಅಮಾನತ್ತುಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಐಕ್ಯತಾ ಚಾಲನ ಸಮಿತಿ ಜಿಲ್ಲಾ ಪಂಚಾಯಿತಿ ಒತ್ತಾಯಿಸಿದೆ.

ಈ ಸಂಬಂಧ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯ ಸಹಾಯಕಿ ಲಾಸ್ಯ ಅವರಿಗೆ ಮನವಿ ಸಲ್ಲಿಸಿದ ಸಮಿತಿ ಪದಾಧಿಕಾರಿಗಳು ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರದ ಜೊತೆಗೆ ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಒದಗಿಸದೇ ಭ್ರಷ್ಟಚಾರ ವೆಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಚಾಲನಾ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಸಮಾಜ ಕಲ್ಯಾಣ ಇಲಾಖೆಯ ಭೈರಯ್ಯ ಎಂಬುವವರಿಗೆ ಜಾತಿ ನಿಂದನೆ ಹಾಗೂ ದೌರ್ಜನ್ಯ, ಆಹಾರ ಟೆಂಡರ್ ಪ್ರಕ್ರಿಯೆಯಲ್ಲಿ ಮೇಘ ಎಂಬ ಸಂಸ್ಥೆಗೆ ದಾಖಲೆಗಳು ದೃಢವಿಲ್ಲದಿದ್ದರೂ ಆಯ್ಕೆ ಮಾಡಿರುವುದು, ಎಸ್ಸಿ, ಎಸ್ಟಿ ಅಲ್ಲದ ರಸ್ತೆಗಳಿಗೆ ಕಾಮಗಾರಿ ನಡೆಸಿರುವ ಬಗ್ಗೆ ದಾಖಲೆ ಸಮೇತ ಸಾಕ್ಷಿ ನೀಡಿದರೂ ಯಾವುದೇ ಕ್ರಮಗೊಂಡಿಲ್ಲ ಎಂದು ತಿಳಿಸಿದರು.

ಮುರಾರ್ಜಿ ಶಾಲೆಯ ಪ್ರಾಂಶುಪಾಲರ ಹಾಗೂ ಸಿಬ್ಬಂದಿಗಳೇ ಮೇಲೆ ದೂರು ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿರುವುದು, ಬೀಕನಹಳ್ಳಿ ಶಾಲೆಯ ಶೃತಿ ಎಂಬುವವರಿಗೆ ನಿಲಯ ಪಾಲಕರಾಗಿ ಜಿ.ಪಂ.ನಿಂದ ಆದೇಶವಿದ್ದರೂ ಪಾಲನೆ ಮಾಡದಿರುವುದು, ವಿದ್ಯಾರ್ಥಿನಿ ನಿಲಯದ ಹಾಸ್ಟೆಲ್‌ನಲ್ಲಿ ಹೆರಿಗೆಯಾಗಿದ್ದರೂ ವಾರ್ಡನ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಹೆಣ್ಣು ಮಕ್ಕಳ ಋತು ಸಮಯದಲ್ಲಿ ಪ್ಯಾಡ್ ನೀಡದೇ ಲಕ್ಷಾಂತರ ರೂ. ವಂಚನೆವೆಸಗಿದ್ದಾರೆ ಎಂದು ಆರೋಪಿಸಿದರು.

ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ಇಬ್ಬರು ವ್ಯಕ್ತಿಗಳಿಗೆ ಸಹಾಯಕ ಹುದ್ದೆ ನೀಡಿದ್ದು ಇವರುಗಳು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಚಾರ ನಡೆಸಿರುವುದು, ದ್ವಿತೀಯ ದರ್ಜೆ ಸಹಾಯಕಿಯನ್ನು ಪ್ರಭಾರ ಆದೇಶದ ಮೇಲೆ ಜಿಲ್ಲಾ ಕಚೇರಿಯಲ್ಲಿ ಇರಿಸಿ ಭ್ರಷ್ಟಚಾರಕ್ಕೆ ಅವಕಾಶ ಮಾಡಿ ಕೊಟ್ಟಿರುವುದು ಸೇರಿದಂತೆ ಅನೇಕ ಅವ್ಯವಹಾರದಲ್ಲಿ ಸಮಾಜ ಕಲ್ಯಾಣಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ದೂರಿದರು.

ಕೂಡಲೇ ಇಷ್ಟೆಲ್ಲಾ ಅಕ್ರಮ ನೇಮಕಾತಿ, ಭ್ರಷ್ಟಾಚಾರ ಹಾಗೂ ದಲಿತರ ಮೇಲೆ ದೌರ್ಜನ್ಯವೆಸಗಿರುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚೈತ್ರ ಎಂಬುವವರಿಗೆ ಒಂದುವಾರದಲ್ಲಿ ಅಮಾನತ್ತುಗೊಳಿಸಬೇಕು. ಇಲ್ಲದಿದ್ದ ಪಕ್ಷದಲ್ಲಿ ಚಾಲನ ಸಮಿತಿ ವತಿಯಿಂದ ಜಿ.ಪಂ. ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಚಾಲನಾ ಸಮಿತಿ ಸದಸ್ಯರಾದ ದಂಟರಮಕ್ಕಿ ಶ್ರೀನಿವಾಸ್, ಬಾಲಕೃಷ್ಣ ಬಿಳೇಕಲ್ಲು, ಯಲಗುಡಿಗೆ ಹೊನ್ನಪ್ಪ, ಅಂಗಡಿ ಚಂದ್ರು, ಚಂದ್ರಶೇಖರ್ ಪುರ ಹಾಜರಿದ್ದರು.

ಮನಸ್ಸಿನಿಂದ ಮನಸ್ಸಿಗೆ-15

0

ಬಜೆಟ್ ಎಂಬ ಅಂಕಿಅಂಶಗಳ ಸರ್ಕಸ್ ಮತ್ತು ವಾಸ್ತವದ ಅಭಿವೃದ್ಧಿ……..

ಬಜೆಟ್ ವಿಶ್ಲೇಷಣೆ ಕೇವಲ ಸಂಖ್ಯೆಗಳ ಆಧಾರದ ಮೇಲೆ ಮಾಡದೆ ಫಲಿತಾಂಶಗಳ ಆಧಾರದ ಮೇಲೆ ಮಾಡಿದರೆ ಹೆಚ್ಚು ಉಪಯುಕ್ತ.

ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಸುಮಾರು ಸಾವಿರಾರು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿವೆ. ಪಂಚವಾರ್ಷಿಕ ಯೋಜನೆಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ನೀತಿ ಆಯೋಗ ಸಹ ಇದೆ. ಅಪಾರ ಪ್ರಮಾಣದ ಎಲ್ಲಾ ದರ್ಜೆಯ ಆಡಳಿತ ಯಂತ್ರ ಸಹ ಕೆಲಸ ಮಾಡುತ್ತಲೇ ಇದೆ………….

ಯಾವ ಸರ್ಕಾರಗಳು ಸಹ ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ ಅಥವಾ ಜನರನ್ನು ನಾಶ ಮಾಡುವ ಯೋಜನೆಗಳನ್ನು ರೂಪಿಸುವುದಿಲ್ಲ. ಬಹಳ ಜನರಿಗೆ ಒಳ್ಳೆಯದಾಗಲಿ ಎಂಬ ಆಶಯವನ್ನೇ ಹೊಂದಿರುತ್ತವೆ.

1950 ಮತ್ತು 2022 ನಡುವೆ ಭಾರತದ ಅಭಿವೃದ್ಧಿ ಸುಮಾರಾಗಿ ಆಗಿದೆ. ವಿಶ್ವ ಸಮುದಾಯ ಕೂಡಾ ತಂತ್ರಜ್ಞಾನದ ಸಹಾಯದಿಂದ ಪ್ರಗತಿಯ ಪಥದಲ್ಲಿದೆ.

ಭಾರತದ ಮಟ್ಟಿಗೆ‌ ಅಭಿವೃದ್ಧಿ ಸಮಾನಾಂತರವಾಗಿಲ್ಲ ಮತ್ತು ಸಮಾಧಾನಕರವಾಗಿಲ್ಲ. ದೇಶದ ಶೇಕಡಾ 50% ಕ್ಕೂ ಹೆಚ್ಚು ಜನ ತಾವು ಇಷ್ಟಪಟ್ಟ ದೈನಂದಿನ ಊಟ ಬಟ್ಟೆ ವಾಸ ಮಕ್ಕಳ ಯೋಗಕ್ಷೇಮ ಮತ್ತು ಸಾಧಾರಣ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.
ಬಹುತೇಕ ಸಂಪತ್ತು ಮತ್ತು ಸಂಪನ್ಮೂಲಗಳು ಕೆಲವೇ ಜನರಲ್ಲಿ ಕೇಂದ್ರೀಕೃತವಾಗಿದೆ. ಶಿಕ್ಷಣ ಆರೋಗ್ಯ ಸಂಪೂರ್ಣ ವ್ಯಾಪಾರೀಕರಣವಾಗಿದೆ.

ಇದನ್ನು ನಾವು ಪಕ್ಷಾತೀತವಾಗಿ ಮತ್ತು ನಿಷ್ಪಕ್ಷಪಾತವಾಗಿ ಭಾರತದ ನಿಜವಾದ ಹಿತಾಸಕ್ತಿಯಿಂದ ನೋಡಬೇಕು. ಯಾವುದೋ ಪಕ್ಷದ ವಕ್ತಾರರಂತೆ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಾ ಕೆಸರೆರಚಾಟ ಮಾಡಿದರೆ ಸತ್ಯ ಮತ್ತು ವಾಸ್ತವ ಮರೆಯಾಗಿ ಕೇವಲ ಒಣ ಚರ್ಚೆ ಮತ್ತು ಅಂಕಿಅಂಶಗಳು ಮಹತ್ವ ಪಡೆಯುತ್ತವೆ.

ಸರ್ಕಾರ ಘೋಷಿಸುವ ಯಾವುದೇ ಯೋಜನೆಗಳು ಜಾರಿಯಾಗುವುದು ನಮ್ಮ ಸರ್ಕಾರಿ ಆಡಳಿತ ಯಂತ್ರದ ಮುಖಾಂತರ. ಅದು ಈಗಾಗಲೇ ಕಿಲುಬು ಹಿಡಿದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ಸರಿ ಮಾಡದೆ ಯಾವ ಯೋಜನೆ ಘೋಷಿಸಿದರು ಸಂಪೂರ್ಣ ಉಪಯೋಗ ಆಗುವುದಿಲ್ಲ. ಅದನ್ನು ಸರಿ ದಾರಿಗೆ ತರಲು ರಾಜಕಾರಣಿಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ.

ಇಲ್ಲಿ ಇನ್ನೊಂದು ಆಶ್ಚರ್ಯಕರ ವಿಷಯವಿದೆ. ಆದಾಯ ತೆರಿಗೆ ವಿನಾಯಿತಿ, ಬೆಲೆ ಏರಿಕೆ, ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ ಇನ್ನೂ ಮುಂತಾದ ಯೋಜನೆಗಳು ಚಾಚೂ ತಪ್ಪದೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಸಂಪೂರ್ಣ ಜಾರಿಯಾಗುತ್ತದೆ. ಕಾರಣ ಈ ಯೋಜನೆಗಳು ಈಗಾಗಲೇ ವಿದ್ಯಾವಂತರಾಗಿರುವ ಮತ್ತು ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿರುವ ಜನಗಳು ಇವುಗಳನ್ನು ಸ್ವತಃ ಅಥವಾ ಮಧ್ಯವರ್ತಿಗಳ ಮುಖಾಂತರ ಜಾರಿಯಾದ ಮಧ್ಯರಾತ್ರಿಯಿಂದಲೇ ಲಾಭ ಪಡೆದುಕೊಳ್ಳುತ್ತಾರೆ.

ಆದರೆ, ಇನ್ನೂ ಕೆಲವು ‌ಯೋಜನೆಗಳು ಇವೆ‌. ಉದಾಹರಣೆಗೆ ಬಡತನ ನಿರ್ಮೂಲನೆ, ನರೇಗಾ, ಆಹಾರ ಭದ್ರತೆ, ಬೇಟಿ ಬಚಾವೋ ಬೇಟಿ ಪಡಾವೋ , ಸ್ವಚ್ಛ ಭಾರತ್, ಆಯುಷ್ಮಾನ್, ಆರ್ಟಿಇ, ಉದ್ಯೋಗ ಭದ್ರತೆ ಮುಂತಾದ ಯೋಜನೆಗಳು ಅದರ ನಿಜ ರೂಪದಲ್ಲಿ ಜನರಿಗೆ ತಲುಪುವುದು ತುಂಬಾ ಕಷ್ಟವಿದೆ.

ಜನರಲ್ಲಿ ಇರುವ ಅಜ್ಞಾನ, ಬಡತನ ದಾಖಲೆ ಮತ್ತು ಮಾಹಿತಿಯ ಕೊರತೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷತನ ಮತ್ತು ಸೋಮಾರಿತನ, ಅಸೂಯೆ ಮುಂತಾದ ಕಾರಣಗಳು ಇವುಗಳನ್ನು ಜಾರಿಯಾಗಲು ಬಿಡುವುದಿಲ್ಲ. ಜಾರಿಯಾದರು ಅದು ನೆಪ ಮಾತ್ರ.

ಪಾರ್ಲಿಮೆಂಟ್ ಅಥವಾ ವಿಧಾನಸೌದದಲ್ಲಿ ಅಂಕಿಅಂಶಗಳ ಸರ್ಕಸ್ ಮಾಡುತ್ತಾ ಬಜೆಟ್ ಮಂಡಿಸುವುದು ಮತ್ತು ಅದರ ಪರ ವಿರೋಧದ ಚರ್ಚೆಗಳಿಗಿಂತ ಅದರ ಅನುಷ್ಠಾನ ಮತ್ತು ವಾಸ್ತವ ಫಲಿತಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಜವಾದ ಮತ್ತು ಸಮಾನವಾದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಪ್ರತಿ ಸರ್ಕಾರಗಳ ಪ್ರತಿ ಬಜೆಟ್ ಕೇವಲ ಸಾಂಕೇತಿಕ ಶಾಸ್ತ್ರವಾಗುತ್ತದೆ. ಚುನಾವಣಾ ರಾಜಕೀಯದ ನಾಟಕಗಳಾಗುತ್ತವೆ.

ಇದು ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳಿಗೂ ಸಮನಾಗಿ ಅನ್ವಯ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಾದಿರಾಜರ ತೀರ್ಥಪ್ರಬಂಧ ದ ವಿಶೇಷ ಮೌಲ್ಯಗಳು

0

ವಿವಿಧ ಮತ -ಧರ್ಮಗಳ ಜನರು ವಾಸಮಾಡುವ ಭಾರತದಂತಹ ದೇಶದಲ್ಲಿ ಏಕತೆಯನ್ನು ಸಾಧಿಸುವಲ್ಲಿ ಪ್ರವಾಸ ಕಥನಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಶ್ರೇಷ್ಠ ಯತಿಗಳಾದ ಶ್ರಿವಾದಿರಾಜರು ಭಾರತೀಯ ಸಂಸ್ಕೃತ ವಾಗ್ಮಯದಲ್ಲಿಯೇ ಮೊಟ್ಟಮೋದಲನೆಯದಾದ ಪ್ರವಾಸ ಕಥನವನ್ನು ತಮ್ಮ ತೀರ್ಥಪ್ರಬಂಧದ ಮೂಲಕ ಜಗತ್ತಿಗೆ ನೀಡಿದ್ದಾರೆ. ಎಲ್ಲ ತೀರ್ಥಕ್ಷೇತ್ರಗಳು ಅವುಗಳ ಮಹತ್ವ, ದೇವತೆಗಳ ವಿಶೇಷತೆ ಮತ್ತು ಪುರಾಣ, ಧಾರ್ಮಿಕ ಮಹತ್ವವನ್ನು ನೀಡಿರುವ ಅತ್ಯುತ್ಕೃಷ್ಟ ಕೃತಿ ಇದಾಗಿದೆ. ಶ್ರೀವಾದಿರಾಜರು ದೇಶದ ಉದ್ದಗಲಕ್ಕೂ ತಮ್ಮ ಕಾಲ್ನಡಿಗೆಯಲ್ಲೇ ಸಂಚರಿಸಿ, ಎಲ್ಲ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ, ತಮ್ಮ ಗಾಢವಾದ, ಆಗಾಧವಾದ ಅನುಭವವನ್ನು ತೀರ್ಥಪ್ರಬಂಧದಲ್ಲಿ ನೀಡಿದ್ದಾರೆ.


ತೀರ್ಥಪ್ರಬಂಧವು ಕ್ರಮವಾಗಿ ಪಶ್ಚಿಮ, ಉತ್ತರ, ಪೂರ್ವ, ದಕ್ಷಿಣ ಎಂಬ ಹೆಸರನ್ನು ಹೊಂದಿದ ನಾಲ್ಕು ಭಾಗಗಳನ್ನು ಒಳಗೊಂಡಿರುವ ಒಂದು ಅಪೂರ್ವ ಕಾವ್ಯ. ಈ ಪುಟ್ಟ ಖಂಡ ಕಾವ್ಯದಲ್ಲಿ ಅನೇಕ ರಸಗಳು, ಭಾವಗಳು, ಅಲಂಕಾರಗಳು ತಾವಾಗಿಯೇ ಬಂದು ಸೇರಿಕೊಂಡಿವೆ. ಶಬ್ದಾಲಂಕಾರ, ಅರ್ಥಾಲಂಕಾರಗಳಿಂದ ಕೂಡಿರುವ ಈ ಕೃತಿ ವಾದಿರಾಜರ ವರ್ಣನಾ ವೈಖರಿಗೆ ಹಿಡಿದ ಕನ್ನಡಿ. ಅವರ ಜನ್ಮಭೂಮಿಯಾದ ತುಳುನಾಡಿನಿಂದ ಆರಂಭವಾಗುತ್ತದೆ.

ರಜತಪೀಠ ಪುರವೆಂಬ ಹೆಸರಿನ ಉಡುಪಿಯಿಂದ ಆರಂಭಿಸಿ ಪಶ್ಚಿಮದ ಪುಷ್ಕರದವರೆಗೆ, ಕೃಷ್ಣಾ ನದಿಯಿಂದ ಆರಂಭಿಸಿ ಉತ್ತರದ ತುದಿಯ ಬದರೀ ಕ್ಷೇತ್ರದವರೆಗೆ, ಪೂರ್ವದಲ್ಲಿ ಪುರಿ ಜಗನ್ನಾಥದಿಂದ ಆರಂಭಿಸಿ ಕುಂಭಕೋಣದವರೆಗೆ, ದಕ್ಷಿಣದಲ್ಲಿ ಶ್ರೀರಂಗ ಕ್ಷೇತ್ರದಿಂದ ಆರಂಭಿಸಿ ದಕ್ಷಿಣದ ಕೊನೆಯ ಅನಂತಶಯನದವರೆಗೆ ಹೀಗೆ ಪಶ್ಚಿಮ ಉತ್ತರ ಪೂರ್ವ ಹಾಗೂ ದಕ್ಷಿಣ ಪ್ರಬಂಧಗಳೆಂಬ 4 ವಿಭಾಗಗಳಿಂದ ಈ ತೀರ್ಥ ಪ್ರಬಂಧವನ್ನು ಶ್ರೀ ವಾದಿರಾಜರು ರಚಿಸಿದ್ದಾರೆ.


ಶ್ರೀ ವಾದಿರಾಜರ ಚರಿತ್ರೆಯನ್ನು ನಿರೂಪಿಸುವ ‘ವೃತ್ತರತ್ನ ಸಂಗ್ರಹ’ ಎಂಬ ಗ್ರಂಥದಲ್ಲಿ ಈ ತೀರ್ಥ ಪ್ರಬಂಧದ ಉಲ್ಲೇಖವನ್ನು – ಅಟನ್ ಸ್ವಯಂ ತೀರ್ಥ ಸಮೂಹ ಮುರವ್ಯಾಮ್ ತೀರ್ಥ ಪ್ರಬಂಧಂ ಕೃತವಾನ್ ದಯಾಲುಃl ಜನಾನ್ ತದಾವರ್ತನ ಶೀಲಿನಶ್ಚ ಚಕಾರ ತೀರ್ಥಾಟನ ಪುಣ್ಯಭಾಜಃ ll, ಸ್ವತಹ ವಾದಿರಾಜರೇ ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತಾ ಈ ಅತ್ಯುತ್ತಮವಾದ ಕೃತಿಯನ್ನು ರಚಿಸಿ ತೀರ್ಥಕ್ಷೇತ್ರಗಳನ್ನು ಸಂಚರಿಸುವ ಸಾಧಕ ಭಕ್ತ ವರ್ಗಕ್ಕೆ ದೊಡ್ಡ ಉಪಕಾರವನ್ನು ಮಾಡಿದ್ದಾರೆ. ಕೇವಲ ತೀರ್ಥಕ್ಷೇತ್ರಗಳಲ್ಲಿ ಸಂಚರಿಸಿ ಮುಂದೇಳುವುದಕ್ಕಿಂತ ಅಲ್ಲಿಯ ತೀರ್ಥ ಅಭಿಮಾನಿ ಹಾಗೂ ಕ್ಷೇತ್ರ ಅಭಿಮಾನಿ ದೇವತೆಗಳ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆಯನ್ನರಿತಾಗ ಅಧಿಕವಾದ ಪುಣ್ಯವನ್ನು ಸಂಪಾದಿಸಬಹುದಾಗಿದೆ.

ಕೇವಲ ಇಷ್ಟಕ್ಕೆ ಸೀಮಿತವಾಗದೆ ಯಾರು ಅಶಕ್ತರು ಅಂಥವರು ಈ ಕೃತಿಯ ಪಠಣ ಮಾತ್ರದಿಂದ ತೀರ್ಥಕ್ಷೇತ್ರಗಳ ಸಂಚಾರದ ಪುಣ್ಯವನ್ನು ಸಂಪಾದಿಸಬಹುದೆಂದು ಸಜ್ಜನ ಸಮೂಹದ ಮೇಲೆ ಅಪಾರವಾದ ಕರುಣೆಯನ್ನು ತೋರಿದವರು ಭಾವಿಸಮೀರ ವಾದಿರಾಜ ಗುರು ಸಾರ್ವಭೌಮರು.
ಒಬ್ಬ ಮನುಷ್ಯ ಭೌತಿಕವಾಗಿ ಒಮ್ಮೆಯಾತ್ರೆ ಹೋದರೆ ಮುಂದೆ ದಿನ ನಿತ್ಯವೂ ಮಾನಸಿಕವಾಗಿ ಕ್ಷಣಮಾತ್ರದಲ್ಲಿ ಯಾತ್ರೆ ಹೋಗಲು ಸಾಧ್ಯ. ಹಾಗಾಗಿ ಪ್ರತಿನಿತ್ಯವೂ ಈ ಮಾನಸ ಯಾತ್ರೆಯನ್ನು ಮಾಡಲು ಈ ಗ್ರಂಥ ಪೂರಕವಾಗಿದೆ. ಗುರುಗಳು ಇದನ್ನು ಕೇವಲ ಮನೋರಂಜನೆಗಾಗಿರದೆ ಆಧ್ಯಾತ್ಮಿಕವಾದ ಮಹತ್ವವನ್ನು ಹೇಳುವುದರ ಮೂಲಕ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಮನುಷ್ಯ ತನ್ನ ಜೀವನದಲ್ಲಿ ಯಾತ್ರೆಯನ್ನು ಹೇಗೆ ಸಫಲಗೊಳಿಸುವುದು ಎಂದು ತಿಳಿಸಲು ಉದಾಹರಣೆಯಾಗಿ ಇರುವಂತದ್ದು ಈ ತೀರ್ಥಪ್ರಬಂಧ. ‘ ಭರತವರ್ಷದ’ ನಿಜವಾದ ಪರಿಕಲ್ಪನೆಯನ್ನು ನೀಡುವಲ್ಲಿ ಅತಿ ಸಮಗ್ರವಾದ ಗ್ರಂಥ ಇದು ಎನ್ನಬಹುದು.


ತೀರ್ಥ ಪ್ರಬಂಧದಲ್ಲಿ ಪುರಾಣ ಪ್ರಸಿದ್ಧವಾದ ಗಂಗೆಯೇ ಮೊದಲಾದ ನದಿಗಳು ಹಾಗೂ ಶ್ರೀಮನ್ನಾರಾಯಣನ ಕೀರ್ತಿಯ ವರ್ಣನೆಯಿಂದ ಕೂಡಿದ ಮನೋಹರವಾದ ಪದ್ಯಗಳು ಇದರಲ್ಲಿ ಇವೆ. ಇವುಗಳು ಅಶ್ವಮೇಧಾದಿ ಯಜ್ಞಗಳಿಂದ ಲಭಿಸುವ ಪುಣ್ಯಕ್ಕಿಂತಲೂ ಮಿಗಿಲಾದ ಪುಣ್ಯವನ್ನು ತಂದುಕೊಡುತ್ತವೆ. ಆದ್ದರಿಂದ ಇದನ್ನು ಭಕ್ತಿಪೂರಕವಾಗಿ ಪಟಿಸುವ ಮತ್ತು ಆಲಿಸುವ ಪುರುಷನು ಸಕಾಲ ಐಹಿಕ ಮತ್ತು ಪಾರಲೌಕಿಕ ಸಂಪತ್ತುಗಳಿಗೆ ನೆಲೆಯೇ ಆಗಿಬಿಡುತ್ತಾನೆ. ಇಂತಹ ತೀರ್ಥಕ್ಷೇತ್ರಗಳಿಂದ ಮನಸ್ಸು ನಿರ್ಮಲವಾಗಿ ಇದರ ಪಠಣೆಯಿಂದ ಸಕಲ ಸಂಪತ್ತುಗಳು ಸಹ ಲಭಿಸುವುದೆಂಬ ಫಲಶ್ರುತಿಯೇ ಅದರ ಮಹತ್ವ ತಿಳಿಸುತ್ತದೆ.


ಇದರಲ್ಲಿ ಮುಖ್ಯವಾಗಿ ದೇವತೆಗಳನ್ನು ಯಾವ ಬೇದವು ಇಲ್ಲದಂತೆ ಎಲ್ಲರನ್ನೂ ಎಲ್ಲ ಕ್ಷೇತ್ರಗಳನ್ನು ಮತ್ತು ಅವುಗಳ ಕ್ಷೇತ್ರ ದೇವತೆಗಳನ್ನು ಸಹ ವರ್ಣಿಸುತ್ತಾ ಬಂದಿದ್ದಾರೆ ಶ್ರೀ ವಾದಿರಾಜರು. ಹಾಗಾಗಿ ಅವರು ಶ್ರೇಷ್ಠ ಯತಿ ಎನಿಸಿಕೊಂಡಿದ್ದಾರೆ. ಏಕೆಂದರೆ, ಇದರ ಅಧ್ಯಯನ, ಪಠಣ, ಶ್ರವಣ ಕೇವಲ ಮಾಧ್ವರಿಗೇ ಅಲ್ಲದೆ ಸಕಲರಿಗೂ ಪುಣ್ಯದ ಫಲ ನೀಡುತ್ತದೆ ಎಂಬ ಅಂಶವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು.


ಸಮಾಜದ ಸುಶಿಕ್ಷಿತ ವರ್ಗದಲ್ಲಿ ಹಾಗೂ ಅಧ್ಯಾತ್ಮ ಕ್ಷೇತ್ರದಲ್ಲಿರುವ ಓರೆ ಕೋರೆಗಳನ್ನು ತಿದ್ದಿ ಪರಿಶುದ್ಧವಾದ ವ್ಯಕ್ತಿತ್ವ ವಿಕಸನಕ್ಕೆ ವಾದಿರಾಜರು ನೀಡುವ ಮಾರ್ಗದರ್ಶನ ಬೋಧ ಪ್ರದವಾದು. ಶ್ಲೋಕ ಪಠಣೆಯಿಂದಲೇ ಮನಸ್ಸು ಪ್ರಫುಲ್ಲಗೊಂಡು ಇಷ್ಟಾರ್ಥಗಳು ಸಿಗುತ್ತವೆ ಎಂಬ ರಮಣೀಯ ಅರ್ಥವಂತಿಕೆಯ ಕಾವ್ಯವೇ ಈ ತೀರ್ಥ ಪ್ರಬಂಧ. ಇದು ಪಾಪಗಳಿಂದ ಮುಕ್ತಿ ದೊರಕಿಸಿ ಸಮನ್ವಯ ಭಾವನೆಯನ್ನು ಮೈಗೂಡಿಸಿಕೊಳ್ಳುವಂತೆ ಎಲ್ಲರನ್ನೂ ಪ್ರೇರೇಪಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.


ಪ್ರಸ್ತುತ ಭಾರತೀಯ ಪರಿಸ್ಥಿತಿಯಲ್ಲಿ ತೀರ್ಥ ಪ್ರಬಂಧವು ಶೈವ, ವೈಷ್ಣವ,ಶಾಕ್ತ, ಗಾಣಪತ್ಯವೇ ಮೊದಲಾದ ಭೇದಗಳಿಲ್ಲದೆ ಸಮನ್ವಯವನ್ನು ಸಾರುತ್ತದೆ. ಇದನ್ನು ಅರ್ಥೈಸಿಕೊಂಡು ಸಾಮರಸ್ಯ ಸಮನ್ವಯತೆಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಸಾಮಾಜಿಕ ಅವಶ್ಯಕತೆ ಎನ್ನುವುದನ್ನು ಪರೋಕ್ಷವಾಗಿ ತೀರ್ಥ ಪ್ರಬಂಧವು ನೀಡುತ್ತದೆ.

-ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು, ಪೇಸ್ ಪಿ. ಯು. ಕಾಲೇಜ್ ಶಿವಮೊಗ್ಗ

ಜಿಲ್ಲಾ ಸರ್ಕಾರಿ ನೌಕರರ ಸಮಾವೇಶದಲ್ಲಿ ಗಂಗಾವತಿ ಪ್ರಾಣೇಶ್ ನಗೆಹೊನಲು

0

ರಾಜ್ಯ ಸರ್ಕಾರಿ ನೌಕರರ ಸಂಘವು ಫೆಬ್ರವರಿ 04ರಂದು ಬೆಳಿಗ್ಗೆ 10:30ಕ್ಕೆ ನಗರದ ಕುವೆಂಪು ರಂಗಮಂದಿರದ ಹಿಂಭಾಗದ ಎನ್.ಇ.ಎಸ್.ಕಾಲೇಜು ಆವರಣದಲ್ಲಿ ಸರ್ಕಾರಿ ನೌಕರರ ಸಮ್ಮೇಳನವನ್ನು ಆಯೋಜಿಸಿದೆ.

ಈ ಸಮ್ಮೇಳನದಲ್ಲಿ ಹಾಸ್ಯ ಕಲಾವಿದ ಪ್ರಾಣೇಶ್ ಅವರು ಆಗಮಿಸಿ, ಕೆಲಸದ ಒತ್ತಡಕ್ಕೆ ನಗೆ ಮದ್ದು ಎಂಬ ವಿಷಯದ ಕುರಿತು ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಇದೇ ಸಂದರ್ಭದಲ್ಲಿ ಚಿಂತಕ, ವಾಗ್ಮಿ ಡಾ|| ಗುರುರಾಜ ಕರ್ಜಗಿ ಅವರು ಆಗಮಿಸಿ ಪ್ರಜಾಸ್ನೇಹಿ ಆಡಳಿತದ ಕುರಿತು ವಿಶೇಷ ಉಪನ್ಯಾಸ ನೀಡುವರು.

ಜಿಲ್ಲೆಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮನವಿ ಮಾಡಿದ್ದಾರೆ.

ಶಿವಮೊಗ್ಗ ಏರ್ ಪೋರ್ಟ್ ಪರಿವೀಕ್ಷಣೆಕಾಮಗಾರಿ ಪೂರೈಸಿದ್ದಕ್ಕೆ ಕೆಎಸ್ಐಡಿಸಿ ಡಾ.ಶೈಲೇಂದ್ರ ಅಭಿನಂದನೆ

0

ಕೆಎಸ್‍ಐಐಡಿಸಿ ನಿಗಮದ ಅಧ್ಯಕ್ಷರಾದ ಡಾ.ಕೆ.ಶೈಲೇಂದ್ರ ಬೆಲ್ದಾಳೆ ಅವರು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರಿಂದ ಉದ್ಘಾಟನೆಗೊಳ್ಳುವ ಸೋಗಾನೆಯ ವಿಮಾನ ನಿಲ್ದಾಣದ ಕಾಮಗಾರಿಗಳ ಪರಿವೀಕ್ಷಣೆಯನ್ನು ಮಾಡಿದರು.

3050 ಮೀ ಉದ್ದ, 45 ಮೀ ಅಗಲದ ರನ್‍ವೇ, ಆರ್‍ಇಎಸ್‍ಎ, ಬಾಹ್ಯ(ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಏರಿಯಾ, ಇತರೆ ಕಾಮಗಾರಿಗಳು ಹಾಗೂ 4340 ಚದುರ ಮೀಟರ್ ಅಳತೆಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2347 ಚದುರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 02 ಎಲೆಕ್ಟ್ರಿಕ್ ಸಬ್ ಸ್ಟೇಷನ್, 01 ಫೈರ್ ಸ್ಟೇಷನ್ ಹಾಗೂ ಇತರೆ ಕಾಮಗಾರಿಗಳನ್ನು ಅವರು ಪರಿವೀಕ್ಷಿಸಿದರು.

ಪ್ರಧಾನ ಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ವಿಮಾನ ಹಾರಾಟದ ಅನುಮತಿಗೆ ಬೇಕಾದ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಅತ್ಯಂತ ಶೀಘ್ರ ಗತಿಯಲ್ಲಿ ವಿಮಾನ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಶ್ರಮಿಸಿದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಾಗೂ ಸಂಸದರಾದ ಬಿ.ವೈ.ರಾಘವೇಂದ್ರರವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಧಿಕಾರಿ ಡಾ.ಆರ್.ಸೆಲ್ವಮಣಿ, ಕೆಎಸ್‍ಐಐಡಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಂ.ಆರ್ ರವಿ, ನಿಗಮದ ನಿರ್ದೇಶಕರುಗಳಾದ ಸಿ.ಎನ್.ಗಾಯತ್ರಿ ದೇವಿ, ಭಾರತಿ ಮಲ್ಲಿಕಾರ್ಜುನಪ್ಪ ಅಲವಂಡಿ, ಎಸ್ ಮಹಾದೇವಿಸ್ವಾಮಿ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.