ಸಾರ್ವಜನಿಕರ ತೆರಿಗೆ ಹಣದಿಂದ ನಗರಸಭಾ ಆಡಳಿತ ಮಂಡಳಿಯು ಲಕ್ಷಾಂತರ ಹಣವನ್ನು ವ್ಯಯಿಸಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸುವ ಮೂಲಕ ಬಿಜೆಪಿ ಕರಪತ್ರದಂತೆ ಬಿಂಬಿಸಿ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಜೆಡಿಎಸ್ ನಗರ ಸಭಾ ಸದಸ್ಯ ಎ.ಸಿ.ಕುಮಾರಗೌಡ ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಸುಮಾರು 30 ಸಾವಿರ ಕ್ಯಾಲೆಂಡರ್ ಮುದ್ರಣಕ್ಕೆ ಲಕ್ಷಾಂತರ ರೂ. ಖರ್ಚಾಗಿದೆ ಎಂದು ತಿಳಿದು ಬಂದಿದೆ.
ಇಷ್ಟೆಲ್ಲಾ ಹಣವನ್ನು ವ್ಯಯಿಸುತ್ತಿರುವ ಆಡಳಿತ ಮಂಡಳಿಯು ಸಾರ್ವಜನಿಕರ ಆಸ್ತಿಯಾದ ನಗರಸಭೆಯಲ್ಲಿ ಸೂಕ್ತ ಶೌಚಾಲಯವಿಲ್ಲ ಹಾಗೂ ರೆಕಾರ್ಡ್ ರೂಂಗಳು ಅವ್ಯವಸ್ಥೆಯಾಗಿದ್ದರೂ ಗಮನಹರಿಸುತ್ತಿಲ್ಲ ಎಂದಿದ್ದಾರೆ.
ನಗರಸಭೆಯಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವ ಕಟ್ಟಡದ ಮೇಲ್ಬಾಗ ದಲ್ಲಿ ಶಾಸಕರ ಭಾವಚಿತ್ರವನ್ನು ಅಳವಡಿಸಿ ಹೈಕೋರ್ಟ್ ಆದೇಶವನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ಇದೇ ರೀತಿಯ ನಗರಾದ್ಯಂತ ನೀರಿನ ಘಟಕಗಳಲ್ಲಿ ಶಾಸಕರ ಚಿತ್ರ ಹಾಕುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಅನುದಾನದಲ್ಲಿ ನಗರದ ವಿವಿಧೆಡೆ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಶಾಸಕರ ಹಾಗೂ ಅಧ್ಯಕ್ಷರ ಭಾವಚಿತ್ರವನ್ನು ತೆರವುಗೊಳಿಸಬೇಕು ಎಂದ ಅವರು ಲಕ್ಷಾಂತರ ರೂ.ಗಳ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸಿ ಬೇಕಾಬಿಟ್ಟಿಯಾಗಿ ಕೆಲಸ ಮಾಡುವ ಬದಲು ವಾರ್ಡ್ಗಳಲ್ಲಿರುವ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವಲ್ಲಿ ನಗರಸಭೆ ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.
ಜಿಲ್ಲಾ ಉತ್ಸವದಲ್ಲಿ ಅತ್ಯಂತ ಚುರುಕಾಗಿ 15 ದಿನಗಳ ಕಾಲ ನಗರ ಸ್ವಚ್ಚತೆಗೆ ಕಾರ್ಯನಿರ್ವಹಿಸಿರುವ ಪೌರಕಾರ್ಮಿಕರಿಗೆ ಒಂದು ತಿಂಗಳ ವೇತನ ನೀಡಬೇಕು ಎಂದು ತೀರ್ಮಾನವಾಗಿದ್ದರೂ ಇದುವರೆಗೂ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನಗರಸಭೆಯು ಕ್ಯಾಲೆಂಡ್ ಬಿಡುಗಡೆ ಮಾಡಿ ಬಿಜೆಪಿಯ ಕರಪತ್ರದಂತೆ ಹಂಚಿಕೆ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಕೂಡಲೇ ನಗರಸಭಾ ಆಡಳಿತ ಮಂಡಳಿಯು ಸರ್ಕಾರದ ಆದಾಯವನ್ನು ದುರುಪಯೋಗಪಡಿಸಿ ಕೊಂಡು ಅನಾವಶ್ಯಕವಾಗಿ ವೆಚ್ಚಮಾಡಿ ಸರ್ಕಾರಕ್ಕೆ ನಷ್ಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾನೂನು ಹೋರಾಟಕ್ಕೆ ಅವಕಾಶ ಕೊಡದೆ ಸಾರ್ವಜನಿಕರಿಗೆ ಯಾವುದೇ ರೀತಿಯ ಪ್ರಯೋ ಜನವಿಲ್ಲದ ಕಾರ್ಯಕ್ರಮಕ್ಕೆ ತೆರಿಗೆ ಹಣವನ್ನು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.