ಮನೆಗಳ್ಳತನ ವರದಿಯಾದ 24ಗಂಟೆಗಳೊಳಗೆ ಆರೋಪಿಗಳನ್ನು ಪತ್ತೆಮಾಡಲಾಗಿದೆ. ಕಳುವು ಮಾಲನ್ನು ವಶಪಡಿಸಿಕೊಂಡ ಶಿವಮೊಗ್ಗ(ಗ್ರಾ)ಠಾಣೆಯ ಪಿಎಸ್ಐ ರಮೇಶ್ ನೇತೃತ್ವದ ಡಬ್ಲ್ಯೂ ಎಚ್ ಸಿ ಗೀತಾ ಸಿಪಿಸಿಚಿನ್ನನಾಯ್ಕ, ಶಿವರಾಜನಾಯ್ಕ & ಆಂಜನೇಯ ರವರುಗಳನ್ನೊಳಗೊಂಡ ತಂಡದ ಉತ್ತಮ ಕಾರ್ಯಕ್ಕೆ
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು
ಪ್ರಶಂಸನಾ ಪತ್ರವನ್ನು
ನೀಡಿ ಗೌರವಿಸಿ ಅಭಿನಂದಿಸಿದರು.
ಪೋಲೀಸ್ ಫೈಲ್ ನಿಂದ – 01
ಶಿವಮೊಗ್ಗದ ಹೊಳೆಹೊನ್ನೂರು ರಸ್ತೆ ಮೇಲ್ಸೇತುವೆ ಶೀಘ್ರದಲ್ಲೇ ಮುಗಿಯಲಿದೆ- ಬಿ.ವೈ.ರಾಘವೇಂದ್ರ
ಶಿವಮೊಗ್ಗ ನಗರದ ಹೊಳೆಹೊನ್ನೂರು ರಸ್ತೆಯ ಫ್ಲೈ ಓವರ್ ಕಾಮಗಾರಿಯ ಸುಂದರ ನೋಟ.
ಈ ಕಾಮಗಾರಿಯ ಕೆಲಸವು ಪೂರ್ಣಗೊಳ್ಳಲು ಅಂತಿಮ ಹಂತದ ಕೆಲಸ ಬಾಕಿ ಇದ್ದು ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಈ ಹೆಮ್ಮೆಯ ಸಂಗತಿಯನ್ನು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಟ್ಟಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ಸೊಗಸಾಗಿ ಕಾಣುವ ದೃಶ್ಯಗಳನ್ನ ಡ್ರೋನ್ ಕ್ಯಾಮರಾ ಚಿತ್ರೀಕರಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಜಪ್ತಿಯಾಗಿರುವ ವಾಹನ ಮಾಲೀಕರು ಸಾಗರ ಕಚೇರಿಗೆ ಹಾಜರಾಗಲು ಗಡುವು ನೀಡಿಕೆ
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾಗರ ಕಚೇರಿಯ ಮೋಟಾರು ವಾಹನ ನಿರೀಕ್ಷಕರು ತಪಾಸಣೆ ಮಾಡಿ ಸರ್ಕಾರದ ತೆರಿಗೆ ಹಾಗೂ ಇನ್ನಿತರ ಪ್ರಕರಣ ಸಂಬಂಧ ವಾಹನವನ್ನು ಮುಟ್ಟುಗೋಲು ಹಾಕಿರುವ ವಾಹನ ಮಾಲೀಕರು ಕಚೇರಿಗೆ ಆಗಮಿಸಿ 07 ದಿನದೊಳಗೆ ಷರತ್ತುಗಳಿಗೆ ಒಳಪಟ್ಟಂತೆ ವಾಹನವನ್ನು ಬಿಡಿಸಿಕೊಳ್ಳತಕ್ಕದ್ದು.
ಜಪ್ತಿಯಾದ ವಾಹನಗಳಾದ ಆನವಟ್ಟಿ ಪೋಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ/ಛಾಸಿಸ್ ಸಂಖ್ಯೆ ಎಂಎ1ಝಡ್‍ಪಿಟಿಬಿಜೆ2465213, ಹೊಸನಗರ ಪೋಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ ಎಂಇ4ಜೆಸಿಎಸ್89ಬಿಇಟಿ088968 ಹಾಗೂ ರಿಪ್ಪನ್‍ಪೇಟೆ ಪೋಲೀಸ್ ಠಾಣೆಯಲ್ಲಿನ ವಾಹನ ಸಂಖ್ಯೆ ಎಂಇ4ಜೆಸಿ589ಎಎಫ್‍ಟಿ451264 ಆಗಿರುತ್ತದೆ. ವಾಹನ ಮಾಲೀಕರು 07 ದಿನದೊಳಗಾಗಿ ಹಾಜರಾಗದೇ ಇದ್ದಲ್ಲಿ ವಾಹನಗಳ ಹರಾಜು ಕ್ರಮ ಕೈಗೊಳ್ಳಲಾಗುವುದು.
ವಾಹನ ಸಂಖ್ಯೆ ಎಂಹೆಚ್04/ಜಿಪಿ-3737 ವಾಹನವು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಸಾಗರ ಕಚೇರಿ ಆವರಣದಲ್ಲಿದ್ದು ಮಜಲು ವಾಹನದ ತೆರಿಗೆ ಪಾವತಿಸಿಕೊಂಡು ವಾಹನ ಬಿಡುಗಡೆಗೊಳಿಸಿಕೊಳ್ಳಬಹುದು ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2022-23 ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕವಿನಾಯಿತಿ ಮತ್ತು ವಿದ್ಯಾಸಿರಿ, ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ ನೀಡಲು ಆಹ್ವಾನಿಸಲಾಗಿದ್ದ ಆನ್‍ಲೈನ್ ಅರ್ಜಿ ಅವಧಿಯನ್ನು ಫೆ.28 ರವರೆಗೆ ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿದೆ. ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1, ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಪಡೆಯಲು ವೆಬ್‍ಸೈಟ್ www.//ssp.postmatric.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ https://bcwd.karnataka.gov.in ಮತ್ತು ಕಚೇರಿಯ ಸಹಾಯವಾಣಿ 8050770005/08182-222129 ನ್ನು ಸಂಪರ್ಕಿಸಬಹುದಾಗಿದೆ ಎಂದು ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕರ ಕಾರ್ಡ್ ದುರ್ಬಳಕೆ ಕಾರಣ ಬೊಗಸ್ ಕಾರ್ಡ್ ರದ್ದತಿ ಅಭಿಯಾನ
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ರವರ ಆದೇಶದಂತೆ ನಕಲಿ ದಾಖಲೆಗಳನ್ನು ನೀಡಿ ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡ್‍ಗಳನ್ನು ರದ್ದು ಪಡಿಸಲು ಜಿಲ್ಲೆಯಲ್ಲಿ ಫೆ.25 ರವರೆಗೆ ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಕಾರ್ಮಿಕರಲ್ಲದವರು ತಮ್ಮ ಸ್ವ-ಇಚ್ಛೆಯಿಂದ ಎಲ್ಲಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹೋಗಿ ಮೂಲ ಗುರುತಿನ ಚೀಟಿಯನ್ನು ಸಲ್ಲಿಸತಕ್ಕದ್ದು. ಇಲ್ಲವಾದಲ್ಲಿ ಕಾರ್ಮಿಕ ನಿರೀಕ್ಷಕರು ಖುದ್ದು ಸ್ಥಳ ಪರಿಶೀಲನೆ ನಡೆಸಿ ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದ ಮತ್ತು ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅನರ್ಹ ಕಾರ್ಮಿಕರಿಗೆ ಉದ್ಯೋಗ ಪ್ರಮಾಣ ಪತ್ರ ನೀಡುವ ವ್ಯಕ್ತಿ, ಸಂಸ್ಥೆ, ಪ್ರಾಧಿಕಾರ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೀಬಿರಂಗಯ್ಯ ತಿಳಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಸಾಹಿತಿಗೆ ಅನುಭವದ ತೀವ್ರತೆ ಇಲ್ಲದಿದ್ದರೆ ಓದುಗರ ಹೃದಯ ಸ್ಪಂದನೆ ಅಸಾಧ್ಯ-ಲಕ್ಷ್ಮಣ ಕೊಡಸೆ
ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಕ್ಕಿದೆ. ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಇದಕ್ಕೂ ಮೊದಲು ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರ ಮೆರವಣಿಗೆ ನಡೆಸಲಾಯಿತು. ಎರಡು ದಿನಗಳ ಕಾಲ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಅಧ್ಯಕ್ಷ ನಾ.ಡಿಸೋಜಾ ಅವರು ಉದ್ಘಾಟನೆ ಮಾಡಿದರು. ನಂತರ ಭಾಷಣ ಮಾಡಿದ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದರು.
ಕಲ್ಯಾಣ ಮಂದಿರಗಳ ನಿರ್ಮಾಣ
ಭೂತ, ಯಕ್ಷಿಣಿ, ಪಂಜೂರ್ಲಿ, ಚೌಡಿಗಳೆಲ್ಲವುಗಳ ಪೂಜೆಗೆ ಅರ್ಚಕರ ಮಧ್ಯಸ್ಥಿಕೆ ಬಂದಿದೆ. ಊರಿಗೊಂದು ನಾಗದೇವತೆ ದೇವಸ್ಥಾನ ಸ್ಥಾಪನೆಯಾಗುತ್ತಿವೆ. ತಳ ಸಮುದಾಯಗಳು ಪೂಜಿಸುತ್ತಿದ್ದ ದೇವರುಗಳಿಗೆ ಶಕ್ತಿ ತುಂಬುವ ನೆಪದಲ್ಲಿ ಪುರೋಹಿತರು ಕೈ ಹಾಕಿದ್ದಾರೆ. ಈಗ ಅವೆಲ್ಲವು ಪುರೋಹಿತ ಸಂಪ್ರದಾಯದ ದೇವರುಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ಲಕ್ಷ್ಮಣ ಕೊಡಸೆ ಅವರು ತಿಳಿಸಿದರು.
ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಗೌರವಯುತ ಬಾಳ್ವೆಯನ್ನು ಒದಗಿಸಿದ ಭೂ ಸುಧಾರಣೆ ಹೋರಾಟಕ್ಕೆ ಅಡಿಪಾಯ ಹಾಕಿದ್ದು ವಡ್ನಾಳ ಗಣಪತಿಯಪ್ಪ ಮತ್ತು ಗೋಪಾಲಗೌಡರಾಗಿದ್ದಾರೆ. ಮಾರ್ಚ್ 14ರಂದು ಶಾಂತವೇರಿ ಗೋಪಾಲಗೌಡ ಅವರ ನೂರನೇ ವರ್ಷದ ಹುಟ್ಟುಹಬ್ಬವಿದ್ದು, ರೈತರು, ಭೂ ಸುಧಾರಣೆ ಫಾಲನುಭವಿಗಳು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಿ ಕೃತಜ್ಞತೆ ಸಲ್ಲಿಸಬೇಕು ಎಂದರು.
ಇನ್ನು ಮದುವೆಗಳಲ್ಲಿ ದುಂದುವೆಚ್ಚ ತಪ್ಪಿಸಿ ಅರ್ಥಪೂರ್ಣವಾಗಿ ವೈವಾಹಿಕ ಬಾಂಧವ್ಯಕ್ಕೆ ಒಳಗಾಗಲು ಕುವೆಂಪು ಅವರು ಮಂತ್ರ ಮಾಂಗಲ್ಯ ಎಂಬ ವಿವಾಹ ಸಂಹಿತೆ ರೂಪಿಸಿದರು. ಅದನ್ನು ತಮ್ಮ ಮನೆಯಿಂದಲೇ ಅನುಷ್ಠಾನಕ್ಕೆ ತಂದು ಮಾದರಿಯಾದರು. ಮಲೆನಾಡಿನಲ್ಲಿ ಈ ಸುಧಾರಣೆ ಜನಪ್ರಿಯವಾಗಬೇಕಿತ್ತು. ಆದರೆ ಗ್ರಾಮೀಣ ಭಾಗದಲ್ಲಿಯೂ ಕಲ್ಯಾಣ ಮಂದಿರಗಳು ನಿರ್ಮಾಣಗೊಂಡು, ಅರ್ಚಕರ ಮಧ್ಯಸ್ಥಿಕೆಯಲ್ಲಿ ಅದ್ಧೂರಿಯಿಂದ ಮದುವೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಸಾಹಿತ್ಯ ಜನಪರ ಮತ್ತು ಸಮಾಜಮುಖಿ ಆಗಿರಬೇಕು. ಮಾನವೀಯ ಕಾಳಜಿ ಹೊಂದಿರಬೇಕು. ಜನರ ಬದುಕಿನ ಬಗ್ಗೆ ಆಸಕ್ತಿ, ಅನುಕಂಪ ತಾಳಿದ ಸಾಹಿತಿ ಉತ್ತಮ ಸಾಹಿತ್ಯ ಸೃಷ್ಟಿಸಬಲ್ಲ. ಅಲಂಕಾರಿಕವಾಗಿ, ಆಕರ್ಷಕವಾಗಿ ಬರೆದರೂ ಅದರಲ್ಲಿ ಅನುಭವದ ತೀವ್ರತೆ ಇಲ್ಲದೆ ಇದ್ದರೆ ಅದು ಓದುಗನ ಹೃದಯ ತಟ್ಟುವ ಸಾಹಿತ್ಯವಾಗುವುದಿಲ್ಲ ಎಂದರು.
ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಪೈಕಿ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ, ಇರುವಕ್ಕಿ ಕೆಳದಿ ಶಿವಪ್ಪ ನಾಯಕ ತೋಟಗಾರಿಕಾ ವಿಜ್ಞಾನ ವಿವಿಯಲ್ಲಿ ಎಸ್. ಬಂಗಾರಪ್ಪ ದಾವಣಗೆರೆ ವಿವಿಯಲ್ಲಿ, ಜೆ.ಎಚ್. ಪಟೇಲ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಅವರು ಪ್ರತಿಪಾದಿಸಿದ್ದ ಮೌಲ್ಯಗಳ ವಿಷಯದ ಕುರಿತು ಅಧ್ಯಯನ ಸಂಶೋಧನೆ ನಡೆಸಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷ ಡಾ. ಗುಂಡಾ ಜೋಯಿಸ್ ಧ್ವಜ ಹಸ್ತಾಂತರ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಾಹಿತಿ ನಾ.ಡಿಸೋಜ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ರಾಘವೇಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಚಿನ್ನದಾಸೆಗೆ ಚಿತಾಭಸ್ಮ ಬಾಚಿ ಕದ್ದೊಯ್ದ ಕಳ್ಳರು
ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ದರೋಡೆ ಪ್ರಕರಣಗಳನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತವೆ..
ಆದರೆ, ತೀರ್ಥಹಳ್ಳಿಯ ಹೊರಬೈಲಿನಲ್ಲಿ ನಡೆದಿರುವ ಘಟನೆ ಬಗ್ಗೆ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗ್ತೀರಾ…
ಚಿನ್ನಕ್ಕೋಸ್ಕರ ಮನೆ ದರೋಡೆ ನಡೆಸಿರುವುದನ್ನು ಕೇಳಿರುತ್ತೇವೆ… ಆದರೆ, ಈ ಸ್ಟೋರಿಲಿ ಸ್ವಲ್ಪ ಡಿಫ್ರೆಂಟ್ ಆಗಿ ಚಿನ್ನಕ್ಕೋಸ್ಕರ ತೀರ್ಥಹಳ್ಳಿಯ ಹೊರಬೈಲಿನ ಸ್ಮಶಾನದ ಚಿತಾ ಭಸ್ಮ ವನ್ನು ಕಳ್ಳರು ಹೊತ್ತೊಯ್ದ ಘಟನೆ ನಡೆದಿದೆ…
ಕಳೆದ ಮೂರು ದಿನದ ಹಿಂದೆ ಹೊರಬೈಲಿನ ಗಂಗಾಧರೇಶ್ವರ ಸ್ಮಶಾನದಲ್ಲಿ ಮಹಿಳೆಯೊಬ್ಬರ ಶವ ಸಂಸ್ಕಾರ ಮಾಡಲಾಗಿತ್ತು… ಇದಾದ ನಂತರ ಮೂರನೇ ದಿನ ಚಿತಾ ಭಸ್ಮ ಸಂಗ್ರಹಿಸಲು ಬಂದ ಕುಟುಂಬಸ್ಥರಿಗೆ ದೊಡ್ಡ ಶಾಕ್ ಎದುರಾಗಿತ್ತು.. ಅದೇನು ಅಂದ್ರೆ ಅಲ್ಲಿದ್ದ ಚಿತಾ ಭಸ್ಮವೇ ಮಂಗ ಮಾಯವಾಗಿತ್ತು…
ಆಶ್ಚರ್ಯ ಅಂದ್ರೆ ಚಿತಾಭಸ್ಮವನ್ನು ಕದ್ದ ಕಳ್ಳರು ಕೆಲವು ಮೂಳೆಗಳನ್ನು ಅಲ್ಲೇ ಇಟ್ಟು ಹೋಗಿದ್ದಾರೆ. ಶವದ ಮೇಲಿದ್ದ ಬಂಗಾರ, ಬೆಳ್ಳಿ ಗೋಸ್ಕರ ಚಿತಾಭಸ್ಮವನ್ನು ಕದ್ದುಯ್ದಿದ್ದಾರೆ ಇಂದು ಶಾಂತಿಸಲಾಗಿದೆ…
ಭೂಮಿಯ ಮೇಲೆ ಅನೇಕ ವಿಸ್ಮಯಗಳು ನಡೆಯುತ್ತಲೇ ಇರುತ್ತದೆ… ಅದೇ ರೀತಿ ಮನುಷ್ಯನ ಕೆಲವೊಂದು ಪ್ರಸಂಗವನ್ನು ನೋಡಿದಾಗ ನಾವು ವಿಚಿತ್ರ ನಗೆಬಿರಬೇಕಾಗುತ್ತದೆ…
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
2050 ಶಿವಮೊಗ್ಗ ಹೇಗಿರಬೇಕು? ನಿಮ್ಮ ಅಭಿಪ್ರಾಯ ಇಮೈಲ್ ಮಾಡಿ- ಎನ್.ಗೋಪಿನಾಥ್
ಶಿವಮೊಗ್ಗದವರಾಗಿರಲಿ… ಶಿವಮೊಗ್ಗದಿಂದ ಹೊರಗೆ ಇರಲಿ….
2050ರಲ್ಲಿ ಶಿವಮೊಗ್ಗ ಹೇಗಿರಬೇಕು? ಏನೇನು ಸೌಲಭ್ಯಗಳು ಬೇಕು? ಏನು ಬದಲಾವಣೆ ಆಗಬೇಕು?
ಈ ಬಗ್ಗೆ ನಿಮ್ಮ ಕನಸು- ಕಲ್ಪನೆ- ಯೋಜನೆ- ಯೋಚನೆ ನಮ್ಮೊಂದಿಗೆ ಹಂಚಿಕೊಳ್ಳಿ..
ಅದನ್ನು ನನಸು ಮಾಡಲು ಶಿವಮೊಗ್ಗ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಸ್ಟಿಸ್ ಪ್ರಯತ್ನಿಸುತ್ತದೆ.
ಈ ಈ ಮೇಲ್ ಗೆ ನಿಮ್ಮ ಅನಿಸಿಕೆ- ಅಭಿಪ್ರಾಯ ಬರೆದು ಕಳಿಸಿ… shimogadcci@gmail.com
ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ನೀಡಿಕೆ ಖುಷಿಯಾಗಿರುವ ರಾಜ್ಯ ಕೃಷಿ ಸಚಿವ ಪಾಟೀಲ್
ಕೇಂದ್ರ ಸರ್ಕಾರ ಉತ್ತಮ ಬಜೆಟ್ ಮಂಡಿಸಿದ್ದು ಹಸಿರೀಕರಣಕ್ಕೆ ಒತ್ತು ನೀಡಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಸರ್ಕಾರ ಮಹತ್ವ ನೀಡಿದೆ.
ರೈತರಿಗೆ ಅದರಲ್ಲಿಯೂ ಸಿರಿಧಾನ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಬಜೆಟ್ ರೈತಾಪಿ ಸರ್ಕಾರ ಎಂದು ತೋರಿಸಿದೆ. ಒಟ್ಟಾರೆ ಈ ಬಜೆಟ್ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಬಿ.ಸಿ.ಪಾಟೀಲ್, ಕೃಷಿ ಸಚಿವರು ತಿಳಿಸಿದರು.
ಜೆಸಿಐ ಶಿವಮೊಗ್ಗ ಭಾವನಾ ದಿಂದ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಸನ್ಮಾನ
ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಸಾಧಕರ ಗೌರವಿಸುವ ಕೆಲಸದಿಂದ ಇತರರಿಗೂ ಸ್ಫೂರ್ತಿ ಸಿಗುತ್ತದೆ ಎಂದು ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಹೇಳಿದರು.
ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಸಲ್ಯೂಟ್ ದಿ ಸೈಲೆಂಟ್ ವರ್ಕರ್ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟ್ರಾಫಿಕ್ ಪೊಲೀಸರಿಗೆ ಸನ್ಮಾನಿಸಿ ಮಾತನಾಡಿದರು.
ಬಿಸಿಲು, ಮಳೆ, ಚಳಿ ಎನ್ನದೇ ಪೊಲೀಸರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸದ್ದಿಲ್ಲದೇ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಜೆಸಿಐ ಸಂಸ್ಥೆಯು ಸೇವಾ ಸಂಸ್ಥೆಯಾಗಿದ್ದು, ಸಮಾಜಮುಖಿ ಆಲೋಚನೆಗಳೊಂದಿಗೆ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆ ವತಿಯಿಂದ ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾಜದ ಒಳಿತಿಗೆ ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗೌರವಿಸಲು ಉದ್ದೇಶಿಸಲಾಗಿದೆ. ವರ್ಷಪೂರ್ತಿ ಕಾರ್ಯಕ್ರಮ ನಡೆಯಲಿದೆ ಎಂದರು.
ಸೇವಾ ಚಟುವಟಿಕೆಗಳ ಜತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಶಾಲೆಗಳ ಅಭಿವೃದ್ಧಿಪಡಿಸಲು ನೆರವು ನೀಡುವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುವ ಯೋಜನೆಗಳ ಅನುಷ್ಠಾನಪಡಿಸಲಾಗುವುದು. ಆರೊಗ್ಯ ಜಾಗೃತಿ ಮೂಡಿಸುವ ಉಚಿತ ಶಿಬಿರಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಎಸ್‌ಐ ತಿಮ್ಮಯ್ಯ, ಎಎಸ್‌ಐ ರಾಜ್ ಕುಮಾರ್, ಪಿಎಚ್‌ಸಿ ಮೋಹನ್ ಕುಮಾರ್, ತಿಮ್ಮೇಶಪ್ಪ, ಸಿಪಿಸಿ ರಾಘವೇಂದ್ರ ಹಾಗೂ ಕಲ್ಮೇಶ್ ಅವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಜೆಸಿಐ ಶಿವಮೊಗ್ಗ ಭಾವನಾ ಕಾರ್ಯದರ್ಶಿ ಕವಿತಾ ಜೋಯಿಸ್ ಮತ್ತಿತರರು ಉಪಸ್ಥಿತರಿದ್ದರು.
