Wednesday, April 30, 2025
Wednesday, April 30, 2025

ಸಾಹಿತಿಗೆ ಅನುಭವದ ತೀವ್ರತೆ ಇಲ್ಲದಿದ್ದರೆ ಓದುಗರ ಹೃದಯ ಸ್ಪಂದನೆ ಅಸಾಧ್ಯ-ಲಕ್ಷ್ಮಣ ಕೊಡಸೆ

Date:

ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಕ್ಕಿದೆ. ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಇದಕ್ಕೂ ಮೊದಲು ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರ ಮೆರವಣಿಗೆ ನಡೆಸಲಾಯಿತು. ಎರಡು ದಿನಗಳ ಕಾಲ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಅಧ್ಯಕ್ಷ ನಾ.ಡಿಸೋಜಾ ಅವರು ಉದ್ಘಾಟನೆ ಮಾಡಿದರು. ನಂತರ ಭಾಷಣ ಮಾಡಿದ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಹಲವು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದರು.

ಕಲ್ಯಾಣ ಮಂದಿರಗಳ ನಿರ್ಮಾಣ
ಭೂತ, ಯಕ್ಷಿಣಿ, ಪಂಜೂರ್ಲಿ, ಚೌಡಿಗಳೆಲ್ಲವುಗಳ ಪೂಜೆಗೆ ಅರ್ಚಕರ ಮಧ್ಯಸ್ಥಿಕೆ ಬಂದಿದೆ. ಊರಿಗೊಂದು ನಾಗದೇವತೆ ದೇವಸ್ಥಾನ ಸ್ಥಾಪನೆಯಾಗುತ್ತಿವೆ. ತಳ ಸಮುದಾಯಗಳು ಪೂಜಿಸುತ್ತಿದ್ದ ದೇವರುಗಳಿಗೆ ಶಕ್ತಿ ತುಂಬುವ ನೆಪದಲ್ಲಿ ಪುರೋಹಿತರು ಕೈ ಹಾಕಿದ್ದಾರೆ. ಈಗ ಅವೆಲ್ಲವು ಪುರೋಹಿತ ಸಂಪ್ರದಾಯದ ದೇವರುಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ಲಕ್ಷ್ಮಣ ಕೊಡಸೆ ಅವರು ತಿಳಿಸಿದರು.

ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಗೌರವಯುತ ಬಾಳ್ವೆಯನ್ನು ಒದಗಿಸಿದ ಭೂ ಸುಧಾರಣೆ ಹೋರಾಟಕ್ಕೆ ಅಡಿಪಾಯ ಹಾಕಿದ್ದು ವಡ್ನಾಳ ಗಣಪತಿಯಪ್ಪ ಮತ್ತು ಗೋಪಾಲಗೌಡರಾಗಿದ್ದಾರೆ. ಮಾರ್ಚ್ 14ರಂದು ಶಾಂತವೇರಿ ಗೋಪಾಲಗೌಡ ಅವರ ನೂರನೇ ವರ್ಷದ ಹುಟ್ಟುಹಬ್ಬವಿದ್ದು, ರೈತರು, ಭೂ ಸುಧಾರಣೆ ಫಾಲನುಭವಿಗಳು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಿ ಕೃತಜ್ಞತೆ ಸಲ್ಲಿಸಬೇಕು ಎಂದರು.

ಇನ್ನು ಮದುವೆಗಳಲ್ಲಿ ದುಂದುವೆಚ್ಚ ತಪ್ಪಿಸಿ ಅರ್ಥಪೂರ್ಣವಾಗಿ ವೈವಾಹಿಕ ಬಾಂಧವ್ಯಕ್ಕೆ ಒಳಗಾಗಲು ಕುವೆಂಪು ಅವರು ಮಂತ್ರ ಮಾಂಗಲ್ಯ ಎಂಬ ವಿವಾಹ ಸಂಹಿತೆ ರೂಪಿಸಿದರು. ಅದನ್ನು ತಮ್ಮ ಮನೆಯಿಂದಲೇ ಅನುಷ್ಠಾನಕ್ಕೆ ತಂದು ಮಾದರಿಯಾದರು. ಮಲೆನಾಡಿನಲ್ಲಿ ಈ ಸುಧಾರಣೆ ಜನಪ್ರಿಯವಾಗಬೇಕಿತ್ತು. ಆದರೆ ಗ್ರಾಮೀಣ ಭಾಗದಲ್ಲಿಯೂ ಕಲ್ಯಾಣ ಮಂದಿರಗಳು ನಿರ್ಮಾಣಗೊಂಡು, ಅರ್ಚಕರ ಮಧ್ಯಸ್ಥಿಕೆಯಲ್ಲಿ ಅದ್ಧೂರಿಯಿಂದ ಮದುವೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಸಾಹಿತ್ಯ ಜನಪರ ಮತ್ತು ಸಮಾಜಮುಖಿ ಆಗಿರಬೇಕು. ಮಾನವೀಯ ಕಾಳಜಿ ಹೊಂದಿರಬೇಕು. ಜನರ ಬದುಕಿನ ಬಗ್ಗೆ ಆಸಕ್ತಿ, ಅನುಕಂಪ ತಾಳಿದ ಸಾಹಿತಿ ಉತ್ತಮ ಸಾಹಿತ್ಯ ಸೃಷ್ಟಿಸಬಲ್ಲ. ಅಲಂಕಾರಿಕವಾಗಿ, ಆಕರ್ಷಕವಾಗಿ ಬರೆದರೂ ಅದರಲ್ಲಿ ಅನುಭವದ ತೀವ್ರತೆ ಇಲ್ಲದೆ ಇದ್ದರೆ ಅದು ಓದುಗನ ಹೃದಯ ತಟ್ಟುವ ಸಾಹಿತ್ಯವಾಗುವುದಿಲ್ಲ ಎಂದರು.

ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಪೈಕಿ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ, ಇರುವಕ್ಕಿ ಕೆಳದಿ ಶಿವಪ್ಪ ನಾಯಕ ತೋಟಗಾರಿಕಾ ವಿಜ್ಞಾನ ವಿವಿಯಲ್ಲಿ ಎಸ್. ಬಂಗಾರಪ್ಪ ದಾವಣಗೆರೆ ವಿವಿಯಲ್ಲಿ, ಜೆ.ಎಚ್. ಪಟೇಲ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಅವರು ಪ್ರತಿಪಾದಿಸಿದ್ದ ಮೌಲ್ಯಗಳ ವಿಷಯದ ಕುರಿತು ಅಧ್ಯಯನ ಸಂಶೋಧನೆ ನಡೆಸಬೇಕು ಎಂದರು.

ನಿಕಟಪೂರ್ವ ಅಧ್ಯಕ್ಷ ಡಾ. ಗುಂಡಾ ಜೋಯಿಸ್ ಧ್ವಜ ಹಸ್ತಾಂತರ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಾಹಿತಿ ನಾ.ಡಿಸೋಜ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ರಾಘವೇಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...