Saturday, April 4, 2026
Saturday, April 4, 2026
Home Blog Page 1319

ಎಪಿಎಂಸಿ ವರ್ತಕರಿಗೆ ಪರವಾನಗಿ ನವೀಕರಣಕ್ಕೆ ಫೆ.28 ಕೊನೇ ದಿನಾಂಕ

0

2013 ರಿಂದ 2023 ನೇ ಸಾಲಿಗೆ ಲೈಸನ್ಸ್ ಪಡೆದ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಪರವಾನಿಗೆ ಅವಧಿಯು 2023 ರ ಮಾರ್ಚ್ 31 ರಂದು ಮುಕ್ತಾಯಗೊಳ್ಳಲ್ಲಿದ್ದು, ಲೈಸನ್ಸ್ ನವೀಕರಿಸಲು ಇಚ್ಛಿಸುವ ಪೇಟೆ ಕಾರ್ಯಕರ್ತರು ಫೆ.28 ರ ಒಳಗಾಗಿ ನಿಗದಿತ ಲೈಸನ್ಸ್ ಫಾರಂನ್ನು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಕಾರ್ಯದರ್ಶಿ, ಎಪಿಎಂಸಿ, ಶಿವಮೊಗ್ಗ ಮತ್ತು ಉಪನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸತಕ್ಕದ್ದು.

ಫೆ.28 ರ ನಂತರ ಲೈಸೆನ್ಸ್‍ಗಳನ್ನು ನವೀಕರಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದಕಾರಣ ಲೈಸನ್ಸ್ ನವೀಕರಣಗೊಳಿಸಿಕೊಳ್ಳುವುದರಿಂದ ಹೊರಗುಳಿದರೆ ಮುಂದಿನ ಕಾನೂನಾತ್ಮಕ ಪರಿಣಾಮಗಳಿಗೆ ತಾವೇ ನೇರ ಹೊಣೆಗಾರರಾಗಿರುತ್ತೀರಿ ಎಂದು ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ ಪಶುವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ

0

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾದ್ಯಾಪಕರುಗಳ ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕ ಸಂಬಂಧ ಫೆಬ್ರವರಿ 08 ರಂದು ಸಂದರ್ಶನ ನಡೆಯಲಿದೆ.

ಪಶುವೈದ್ಯಕೀಯ ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ, ಪಶುವೈದ್ಯಕೀಯ ರೋಗಶಾಸ್ತ್ರ,, ಪಶುವೈದ್ಯಕೀಯ ಔಷಧ ಹಾಗೂ ವಿಷ ಶಾಸ್ತ್ರ, ವಿಭಾಗ, ಜಾನುವಾರು ಉತ್ಪನ್ನಗಳ ತಾಂತ್ರಿಕತೆ ವಿಭಾಗ, ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ರೋಗ ಅಧ್ಯಯನ ಶಾಸ್ತ್ರ, ವಿಭಾಗ, ಪಶುವೈದ್ಯಕೀಯ ಶರೀರಕ್ರಿಯಾ ಮತ್ತು ಜೀವ ರಸಾಯನ ಶಾಸ್ತ್ರ ವಿಭಾಗ, ಪ್ರಾಣಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ, ಪಶು ವೈದ್ಯಕೀಯ ಚಿಕಿತ್ಸಾ ಶಾಸ್ತ್ರ, ಪಶುವೈದ್ಯಕೀಯ ಸೂಕ್ಷ್ಮ ಜೀವಾಣು ಶಾಸ್ತ್ರ, ವಿಭಾಗ, ದೈಹಿಕ ಶಿಕ್ಷಣ ಮತ್ತು ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣದ ಪಶುವೈದ್ಯಕೀಯ ಚಿಕಿತ್ಸಾ ಶಾಸ್ತ್ರ, ಪಶುವೈದ್ಯಕೀಯ ಶಸ್ತ್ರ ಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ, ಚಿಕಿತ್ಸಾ ರೋಗಶಾಸ್ತ್ರ /ಸೂಕ್ಷ್ಮಜೀವಾಣು ಶಾಸ್ತ್ರ /ಪರೋಪಜೀವಿ ಶಾಸ್ತ್ರ, / ಜೀವರಸಾಯನ ಶಾಸ್ತ್ರ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‍ಇಟಿ) ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ. 57,600/- ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000/- ವೇತನವಾಗಿ ಪಾವತಿಸಲಾಗುವುದು.

ಫೆಬ್ರವರಿ 08 ರ ಬೆಳಗ್ಗೆ 11 ಗಂಟೆಯಿಂದ ಡೀನ್ ಕಚೇರಿ, ಪಶು ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇಲ್ಲಿ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಜಾಲತಾಣ www.kvafsu.edu.in ಹಾಗೂ 08182-200872 ಸಂಪರ್ಕಿಸಬಹುದಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಳ್ಳಿಯ ಹಿರಿಯ ಚೇತನಕ್ಕೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ

0

ಇಂದು ಶಿವಮೊಗ್ಗದಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗೋಪಿ ಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಲಕ್ಷ್ಮಣ ಕೊಡಸೆ ಅವರು ಅಲಂಕರಿಸಿದ್ದಾರೆ.

ಸಮ್ಮೇಳನದಲ್ಲಿ ಹಾಲು ಹಳ್ಳ ಹರಿಯಲಿ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಜಾನಪದ ಮರು ಓದು, ಎಂಬ ಗೋಷ್ಠಿ ಗಳು. ನಡೆಯಲಿವೆ.

ಲಕ್ಷ್ಮಣ ಕೊಡಸೆಯ ಅವರು ಹೊಸನಗರ ತಾಲೂಕಿನ ಹುಂಚ ಹೋಬಳಿಯ ಕೊಡಸೆಯವರು. ಇವರ ತಂದೆ ಕರಿಯ ನಾಯ್ಕ, ತಾಯಿ ಭರ್ಮಮ್ಮ. ತುಂಬಾ ಕುಟುಂಬದಲ್ಲಿ ಜನಿಸಿದ ಲಕ್ಷ್ಮಣ ಕೊಡಸೆಯವರಿಗೆ ಊರಿನ ಬಗ್ಗೆ ಅಪಾರ ಪ್ರೀತಿ. ಕನ್ನಡ ಸಾಹಿತ್ಯ ಲೋಕಕ್ಕೆ ಕೊಡಸೆ ಅವರ ಕೊಡುಗೆ ಅಪಾರ. ಕರ್ನಾಟಕದ ಮೂಲೆ ಮೂಲೆಗಳನ್ನು ಸುತ್ತಿ ಅಪಾರ ಅನುಭವಗಳನ್ನ ಗಳಿಸಿದವರು.
ಲಕ್ಷ್ಮಣ ಕೊಡಸೆ ಅವರ ಬರಹಗಳಲ್ಲಿ ಹಕ್ಕಿಗಳ ಕಲರವ, ತಾಯಿ ಮಣ್ಣಿನ ಘಮ, ದನಕರುಗಳ ಗೆಜ್ಜೆ ಸದ್ದುಗಳಿಗೆ ವಿಶೇಷ ಸ್ಥಾನವಿದೆ.

ಲಕ್ಷ್ಮಣ ಕೊಡಸೆಯವರು ಒಂಬತ್ತು ಕಾದಂಬರಿ, ವ್ಯಕ್ತಿ ಚಿತ್ರಗಳು, ಐದು ಕಥಾ ಸಂಕಲನ , ಅಂಕಣ ಬರಹಗಳು ಸೇರಿದಂತೆ 51ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಲಕ್ಷ್ಮಣ ಕೊಡಸೆಯವರ ಸಾಹಿತ್ಯ ಕುರಿತಂತೆ ಇಬ್ಬರು ವಿದ್ಯಾರ್ಥಿಗಳು ಪಿ ಎಚ್ ಡಿ ಮಾಡಿದ್ದಾರೆ ಎನ್ನುವುದು ವಿಶೇಷ.

ಹೊಸನಗರದ ಕಣಬಂದೂರು ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು.
ಅಲ್ಲಿಂದ ಅವರ ಸಾಹಿತ್ಯ ಲೋಕದ ಪಯಣ ಶುರುವಾಯಿತು.
ಮೊದಲಿಗೆ ಬದುಕನ್ನು ಸಾಧಿಸಲು ಅನಿವಾರ್ಯವಾಗಿ ಪತ್ರಿಕಾ ಲೋಕದ ಅಚ್ಚು ಮೊಳೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಸಮಯದಲ್ಲೇ ಹಲವು ಹಿರಿಯರನ್ನ ಸಂದರ್ಶಿಸಿದರು.
ಮಡೆಸ್ನಾನ , ಅಜಲು ಪದ್ದತಿ ಮುಂತಾದವುಗಳನ್ನು ಪತ್ರಿಕೆಯಲ್ಲಿ ಬರೆದ ಕೀರ್ತಿ ಲಕ್ಷ್ಮಣ ಕೊಡಸೆ ಅವರಿಗೆ ಸಲ್ಲುತ್ತದೆ.

ಲಕ್ಷ್ಮಣ ಕೊಡಸೆ ಅವರು ಪತ್ರಿಕೆ ಕೆಲಸದ ಜೊತೆ ಜೊತೆಗೆ ಸಾಹಿತ್ಯ ಲೋಕದೊಂದಿಗೆ ನಂಟನ್ನು ಬೆಳೆಸಿಕೊಂಡರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಮಸಮಾಜ ನಿರ್ಮಿಸಲು ಜೀವಮುಡಿಪಾಗಿಟ್ಟವರು ಶರಣ ಮಾಚಿದೇವರು

0

ಶಿವ ಶರಣದ ಬಟ್ಟೆ ಮಡಿ ಮಾಡಲು ಹಾಗೂ ವಚನಗಳ ಮೂಲಕ ಸಮ ಸಮಾಜ ನಿರ್ಮಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಶ್ರೀ ಮಡಿವಾಳ ಮಾಚಿದೇವರು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಸಾಹಿತ್ಯ ಅಂತಿದ್ದರೆ ಅದು ವಚನ ಸಾಹಿತ್ಯ. ಇಂತಹ ವಚನ ಸಾಹಿತ್ಯದ ಮೂಲಕ ಸಮ ಸಮಾಜದ ತತ್ವಗಳನ್ನು ಪ್ರತಿಪಾದಿಸಿದವರು ಮಾಚಿದೇವರು.

ತನ್ನ ಇಡೀ ಜೀವನವನ್ನು ಶಿವಶರಣರ ಬಟ್ಟೆಗಳನ್ನು ಮಡಿ ಮಾಡುತ್ತಾ, ತಮ್ಮ ಕ್ರಾಂತಿಕಾರಕ ಮನೋಭಾವ ಮತ್ತು ವಚನಗಳ ಮೂಲಕ ಸಮಾಜ ಸುಧಾರಣೆಗೆ ಮುಡಿಪಾಗಿಟ್ಟ ಮಾಚಿದೇವರು ಕ್ರಿ.ಶ.1111 ರಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ದೇವರ ಹಿಪ್ಪರಗಿಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನವ್ವ ದಂಪತಿಗೆ ಜನಿಸಿದರು. ಪವಾಡ ಪುರುಷ ಎಂದೇ ಪ್ರಸಿದ್ದರಾದ ಇವರು ಬಸವಣ್ಣನವರ ಅನುಭವ ಮಂಟಪದಲ್ಲಿ ಅಗ್ರಸ್ಥಾನ ಪಡೆದ ಮಹಾನ್ ವ್ಯಕ್ತಿಯಾಗಿದ್ದರು.

ಇಂತಹ ಮಹಾನ್ ವ್ಯಕ್ತಿಗ ಪರಂಪರೆಯಲ್ಲಿ ನಾವು ಕೂಡ ಸಾಗಿ ಅವರ ವಿಚಾರಗಳನ್ನು ಅಳವಡಿಸಿಕೊಳ್ಳೋಣ ಎಂದರು.

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ನಾಮ ನಿರ್ದೇಶಕ ಕೆ.ಎಸ್.ಅರುಣ್‍ಕುಮಾರ್ ಮಾತನಾಡಿ, ಮಾಚಿದೇವರು ಶ್ರೇಷ್ಟ ಶಿವಶರಣರು. ಬಸವಣ್ಣನವರ ಅನುಭವ ಮಂಟಪದಲ್ಲಿ ಅಗ್ರಸ್ಥಾನ ಪಡೆದಿದ್ದು, ಕಲ್ಯಾಣಕ್ಕೆ ಹೊರಗಿನಿಂದ ಬಂದವರನ್ನು ಪರೀಕ್ಷಿಸಿ ಪ್ರವೇಶ ನೀಡುವ ಕಾಯಕವನ್ನು ಮಾಡುತ್ತಿದ್ದರು ಹಾಗೂ ಶರಣರ ಬಟ್ಟೆಗಳನ್ನು ನಿಷ್ಟಯಿಂದ ಮಡಿ ಮಾಡುತ್ತಿದ್ದ ಇವರು ಅನೇಕ ವಚನಗಳನ್ನು ರಚಿಸಿದ್ದಾರೆ.

354 ವಚನಗಳ ದಾಖಲೆಗಳಿದ್ದರೂ 600 ಕ್ಕೂ ಹೆಚ್ಚು ವಚನ ರಚಿಸಿದ್ದಾರೆಂಬ ಉಲ್ಲೇಖವಿದೆ ಎಂದರು.

ಶ್ರೀ ವಿದ್ಯಾಲಯ ಶಿಕ್ಷಣ ಟ್ರಸ್ಟ್‍ನ ಕಾರ್ಯದರ್ಶಿ ಡಾ.ಹೆಚ್.ಬಿ.ಮಡಿವಾಳರ್ ವಿಶೇಷ ಉಪನ್ಯಾಸ ನೀಡಿ, ಮಡಿವಾಳ ಮಾಚಿದೇವರು 12 ಶತಮಾನದ ಕ್ರಾಂತಿಕಾರಿ ಶರಣರಲ್ಲಿ ಒಬ್ಬರಾಗಿದ್ದರು.
ಅಂದಿನ ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆ, ದುರ್ಬಲರ ಶೋಷಣೆಯನ್ನು ವಿರೋಧಿಸಿ, ಸರ್ವರಿಗೂ ಸಮಬಾಳು ಹಾಗೂ ಸಮಪಾಲು ಎಂಬ ಸರಿ ಸಮಾನ ವ್ಯಕ್ತಿತ್ವದ ಪ್ರತಿಪಾದನೆ ಮೂಲಕ ಶೋಷಿತರನ್ನು ಮುಖ್ಯವಾಹಿನಿಗೆ ತರುವ ಅಂದಿನ ಶರಣ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದರು.

ಶೂದ್ರರಿಗೆ ವಿದ್ಯಾಭ್ಯಾಸ ಮತ್ತಿತರೆ ಸೌಲಭ್ಯಗಳು ಕಷ್ಟವಾಗಿದ್ದ ಆಗಿನ ಕಾಲದಲ್ಲಿ ಕ್ರಾಂತಿಕಾರಕ ಮನೋಭಾವದಿಂದ ಕೂಡಿದ ಇವರಿಗೆ ಕ್ರಾಂತಿಕಾರಕ ಗುರುಗಳೇ ದೊರೆತಿದ್ದು, ಅವರ ಗುರುಗಳಾದ ಮಲ್ಲಿಕಾರ್ಜುನಯ್ಯ ಅವರು ಮಾಚಿದೇವಯ್ಯರನ್ನು ಶ್ರೇಷ್ಟ ವ್ಯಕ್ತಿಯನ್ನಾಗಿ ಮಾಡುತ್ತಾರೆ.

ವೀರಭದ್ರನ ಅವತಾರ ಪುರುಷನಾದ ಮಾಚಿದೇವರು ಉಲ್ಲೇಖವೊಂದರ ಪ್ರಕಾರ ಶಿವನ ಶಾಪದಿಂದ ವಿಮೋಚನೆಗಾಗಿ ಭೂಲೋಕದಲ್ಲಿ ಹುಟ್ಟಿ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿ ತೊಡಗುತ್ತಾರೆ. ಅವರು ಕೇವಲ ಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡಿ, ಅತ್ಯಂತ ಮಡಿಯಿಂದ ಅವನ್ನು ಶರಣರಿಗೆ ತಲುಪಿಸುತ್ತಿದ್ದರು. ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ತಮ್ಮ ಮಡಿ ಮಾಡುವ ಕಾಯಕವನ್ನೇ ಕೈಲಾಸವೆಂದು ತಿಳಿದು ಅತ್ಯಂತ ನಿಷ್ಟೆಯಿಂದ, ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕಾಯಕ ಮಾಡುತ್ತಾ ಕಾಯಕಯೋಗಿ ಎನಿಸಿದ್ದರು ಎಂದರು.

ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾದ ಹೆಚ್.ಎಸ್.ಸದಾಶಿವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಇತರೆ ಪದಾಧಿಕಾರಿಗಳು, ಸಮಾಜದ ಬಾಂಧವರು ಹಾಜರಿದ್ದರು.

ಇತಿಹಾಸ ಪ್ರಸಿದ್ಧ ಸಾಗರ ಮಾರಿಕಾಂಬ ಜಾತ್ರೆಗೆ ಅಂಕೆಹಾಕುವ ಸಂಪ್ರದಾಯಕ್ಕೆ ಚಾಲನೆ

0

ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರೆಗೆ ಅಂಕೆ ಹಾಕುವ ಸಂಪ್ರದಾಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಮಂಗಳವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಿದರು.

ಅಂಕೆ ಹಾಕುವ ಶಾಸ್ತ್ರ ನಡೆಸುವ ಮೂಲಕ ಸಾಗರದ ಶ್ರೀ ಮಾರಿಕಾಂಬ ಜಾತ್ರೆಯ ಧಾರ್ಮಿಕ ಪ್ರಕ್ರಿಯೆ ಆರಂಭಗೊಂಡಿದ್ದು, ಜಾತ್ರೆಗೆ ಎಂಟು ದಿನ ಇರುವ ಮುನ್ನ ಅಂಕೆ ಹಾಕಲಾಗುತ್ತದೆ. ಜಾತ್ರೆ ಆರಂಭದ ಹಿನ್ನೆಲೆಯಲ್ಲಿ ಅಂಕೆ ಹಾಕಿದ್ದು, ನಂತರದಲ್ಲಿ ಸ್ಥಳೀಯರು ಬೇರೆ ಊರಿಗೆ ಹೋಗಬಾರದು ಎಂಬ ಪ್ರತೀತಿ ಇದೆ. ಬಹುತೇಕ ಜನರು ಸಹ ಇಂತಹ ಸಂದರ್ಭದಲ್ಲಿ ಬೇರೆಡೆ ಹೋಗುವುದಿಲ್ಲ.

ಫೆಬ್ರವರಿ 7ರಿಂದ ಜಾತ್ರೆಯು ಅದ್ಧೂರಿಯಾಗಿ ಆರಂಭಗೊಳ್ಳಲಿದ್ದು, ಫೆ. 7ರಂದು ರಾತ್ರಿ ರಾಜಬೀದಿ ಉತ್ಸವದ ಮೂಲಕ ಶ್ರೀ ಮಾರಿಕಾಂಬೆಯನ್ನು ಗಂಡನ ಮನೆಗೆ ಕಳುಹಿಸಲಾಗುತ್ತದೆ. ಫೆಬ್ರವರಿ 15ರ ವರೆಗೂ ಒಂಬತ್ತು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳು ನಡೆಯಲಿವೆ.

ಜಾತ್ರೆಯ ಆರಂಭ ದಿನದಿಂದ ಫೆ. 15ರವರೆಗೂ ಸಾಗರ ನಗರದಲ್ಲಿ ವೈವಿಧ್ಯಮಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ರಾಜ್ಯದ ವಿವಿಧ ಭಾಗಳಿಂದ ಕಲಾವಿದರು ಆಗಮಿಸಿ ಸಂಗೀತ, ನೃತ್ಯ, ಗಾಯನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಗೆ ಸಾಗರ ತಾಲೂಕು ಸೇರಿದಂತೆ ಶಿವಮೊಗ್ಗದ ವಿವಿಧ ತಾಲೂಕಿನ ಜನರು, ಜಿಲ್ಲೆಯ ಹಾಗೂ ರಾಜ್ಯದ ಜನರು ಜಾತ್ರೆಗೆ ಆಗಮಿಸುತ್ತಾರೆ. ಲಕ್ಷಾಂತರ ಜನರು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಮಾರಿಕಾಂಬಾ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಮಾತನಾಡಿ, ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯ ಅಂಕೆ ಹಾಕುವ ಶಾಸ್ತ್ರ ನಡೆಸಿದ್ದು, ಜಾತ್ರೆಯ ಧಾರ್ಮಿಕ ಕಾರ್ಯ ಆರಂಭಗೊಂಡಿದೆ. ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ಶ್ರೀ ಮಾರಿಕಾಂಬಾ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರರಾವ್ ಮಾತನಾಡಿ, ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರದ ಶ್ರೀ ಮಾರಿಕಾಂಬ ಜಾತ್ರೆಗೆ ಸಮಿತಿ ವತಿಯಿಂದ ಎಲ್ಲ ರೀತಿ ಸಿದ್ಧತೆ ನಡೆಸಿದ್ದು, ಸಾಂಸ್ಕೃತಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಜಾತ್ರೆಯ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಖಜಾಂಚಿ ನಾಗೇಂದ್ರ ಕುಮಟ ಮಾತನಾಡಿ, ಜಾತ್ರೆಯ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿ ಸಮಿತಿ ವತಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ಜಾತ್ರೆಯ ಯಶಸ್ಸಿಗೆ ಎಲ್ಲ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯ ಉಪಾಧ್ಯಕ್ಷರು, ಸಹ ಕಾರ್ಯದರ್ಶಿ, ವಿವಿಧ ಸಮಿತಿಯ ಸಂಚಾಲಕರು, ಸಹ ಸಂಚಾಲಕರು ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಐಎಂಎ ಪಲ್ಸ್ ನ್ಯೂಸ್ ಬುಲೆಟಿನ್ ಬಿಡುಗಡೆ

0

ಶಿವಮೊಗ್ಗ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನಿಂದ ಈ ವರುಷದ ಮೊದಲನೇಯ ಐ ಎಮ್ ಎ ಪಲ್ಸ್ ನ್ಯೂಸ್ ಬುಲಿಟನ್ , ವೈದ್ಯರಿಂದಲೇ ವೈದ್ಯರಿಗಾಗಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಐ ಎಮ್ ಎ ಪ್ರೆಸಿಡೆಂಟ್ ಡಾ. ಅರುಣ್ ಎಮ್ ಎಸ್ ಅಧ್ಯಕ್ಷ್ಯತೆ ವಹಿಸಿದ್ದರು.

ಬೆಂಗಳೂರು ಎಚ್ ಸಿ ಜಿ ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ತಜ್ಞ ಡಾ. ಜಗನಾಥ್ ದೀಕ್ಷಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಂಪಾದಕಿ ಡಾ. ಶುಭ್ರತಾ ಕೆ.ಎಸ್. ಐಎಮ್ ಎ ಕಾರ್ಯದರ್ಶಿ ಡಾ. ರಕ್ಷಾರಾವ್, ಹಾಗು ಖಜಾಂಜಿ ಡಾ. ಶಶಿಧರ್ ಉಪಸ್ಥಿತರಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಶ್ರೀತುಳಜಾಭವಾನಿ ಅಮ್ಮನವರಿಗೆ ಶ್ರೀಗೋಂಧಳ್ ಮಹಾಪೂಜೆ

0

ಶಿವಮೊಗ್ಗದ ಗಾಂಧಿ ಬಜಾರ್‌ನ ತುಳಜಾ ಭವಾನಿ ರಸ್ತೆಯಲ್ಲಿರುವ ಬಾಹುಸಾರ ಕ್ಷತ್ರೀಯ ಮಹಾಜನ ಸಮಾಜದಿಂದ ಶ್ರೀ ತುಳಜಾಭವಾನಿ ಅಮ್ಮನವರಿಗೆ 47ನೇ ವರ್ಷದ ಶ್ರೀ ಗೋಂದಳ್ ಮಹಾಪೂಜೆಯನ್ನು ಫೆ 7ಮತ್ತು 8ರಂದು ದೇವಳದಲ್ಲಿ ಆಯೋಜಿಸಲಾಗಿದೆ.

ಫೆ. 7ರ ಸಂಜೆ ಗಂಗಾಪೂಜೆ, ಉತ್ಸವ ಹಾಗೂ ಇಡೀ ರಾತ್ರಿ ನಡೆಯುವ ಗೋಂಧಾಳ್ ಮಹಾ ಪೂಜೆಯು ಫೆ. 8ರ ಬೆಳಿಗ್ಗೆ 8 ಗಂಟೆಯವರಿಗೆ ನಡೆಸಲಾಗುವುದು. ನಂತರ ಮಹಾ ಪ್ರಸಾದವಿರುತ್ತದೆ.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಜದ ಅಧ್ಯಕ್ಷ ಟಿ.ವಿ. ಗಜೇಂದ್ರನಾಥ್ ಮಾಳೋದೆ, ಪ್ರಧಾನ ಕಾರ್ಯದರ್ಶಿ ಎಸ್. ಗೋಪಾಲ್ ನವಲೆ ಕೋರಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದ ಗೆಲಾಕ್ಸಿ ಅಬಾಕಸ್ ಸೆಂಟರ್ ನ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ಪುರಸ್ಕಾರ

0

ಗೆಲಾಕ್ಸಿ ಇಂಟರ್ ನ್ಯಾಷನಲ್ ಅಬಾಕಸ್ ಸಂಸ್ಥೆಯಿಂದ ಜ. 27ರಂದು ಗೋವಾದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ಶಿವಮೊಗ್ಗ ಗೋಪಾಳದ ಗೆಲಾಕ್ಸಿ ಅಬಾಕಸ್ ಸೆಂಟರ್‌ನಿಂದ ಐದು ಜನ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಆಹಿಷ ಸಿದ್ಧಿಕ್ ಮತ್ತು ಶರಿನ್ ಡಯಾಸ್ ರನ್ರ‍್ಸ್ ಅಪ್ ಆಗಿ ಮೊದಲ ಬಹುಮಾನ, ಶಾರ್ವಿ ಡಿ., ಆದೇಶ್ ಭವಿನ್ ಮತ್ತು ಸ್ವೆರಾನ್ ರನ್ನರ್ ಅಪ್ ಆಗಿ ೩ನೇ ಬಹುಮಾನ ಪಡೆದು ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿಜೇತ ಮಕ್ಕಳಿಗೆ ಸಂಸ್ಥೆಯ ಕುಶ ರಾಜುಸ್ವಾಮಿ ಅಭಿನಂದಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಹೃದಯರ ಮನಗೆದ್ದ ಗೋಕುಲ ನಿರ್ಗಮನ

0

ಗೋಕುಲ ನಿರ್ಗಮನ…

ಶ್ರೀವಿಜಯದಿಂದ ಆಯೋಜಿಸಿದ “ಗೋಕುಲ ನಿರ್ಗಮನ” ನೃತ್ಯವು ಪ್ರೇಕ್ಷಕರ ಕಣ್ಮನ ಸೆಳೆದು ನೋಡುಗರಿಗೆ ಆಹ್ಲಾದವನ್ನು ನೀಡಿತೆಂದರೆ ಅತಿಶಯೋಕ್ತಿಯಾಗಲಾರದು. ಪು.ತಿ.ನ. ಅವರ ’ಗೋಕುಲ ನಿರ್ಗಮನ’ವು ಗೀತನಾಟಕಗಳಲ್ಲಿ ವಿಶಿಷ್ಟವಾದು.ಕವಿ ತಾವೇ ಹೇಳುವಂತೆ – ಕೃತಿ ರಚಿಸಲು ಪ್ರೇರಣೆಯಾದ ಅಂಶವೆಂದರೆ ಒಮ್ಮೆ ಅವರೆಲ್ಲೋ ಕೇಳಿದ ಗೊಲ್ಲ ಹುಡುಗರ ವೇಣುಗಾನ. ಆ ಗಾನ ಅವರನ್ನು ಕರೆದೊಯ್ಯುವುದು ನಂದಗೋಕುಲಕ್ಕೇ.
ಅಲ್ಲಿ ಅವರು ಬಹುಮುಖ್ಯವಾಗಿ ಗೋಪಿಕಾ ಸ್ತ್ರೀಯರಷ್ಟೇ ಅಲ್ಲ ವೃದ್ಧರು, ಋಷಿಗಳು ಎಲ್ಲರೂ ಕೃಷ್ಣನ ಮುರಳಿಯನಾದಕ್ಕೆ ಮರುಳಾಗಿರುವುದನ್ನು ನೋಡುತ್ತಾರೆ. ಕೃಷ್ಣ ಬರಿ ಗೋಕುಲಕ್ಕಷ್ಟೇ ಅಲ್ಲ ಜಗತ್ತಿಗೇ ಎಂಬುದಾಗಿ ಆತನನ್ನು ಕರೆದೊಯ್ಯಲು ಅಕ್ರೂರನ ಆಗಮನವಾಗುತ್ತದೆ. ರಾತ್ರಿಯಲ್ಲಿ ಬರುವ ಆತ ಬಲರಾಮ ಕೃಷ್ಣರನ್ನು ಬಿಲ್ಲ ಹಬ್ಬಕ್ಕೆ ಆಹ್ವಾನಿಸುತ್ತಾನೆ. ಕೃಷ್ಣ ಕೊಳಲನ್ನು ತ್ಯಜಿಸಿ ಮಧುರೆಗೆ ಹೊರಡುತ್ತಾನೆ. ವಿರಹದುರಿಯಿಂದ ಪರಿತಪಿಸುವ ರಾಧೆ ಮತ್ತವಳ ಗೆಳತಿಯರು ಆ ಕೃಷ್ಣನ ಕೊಳಲನ್ನು ಬೃಂದಾವನ ದೇವಿಯ ಮರದ ಬುಡದಲ್ಲಿ ಅಡಗಿಸಿಡುತ್ತಾರೆ. ಕೃಷ್ಣನ ಕೊಳಲಿನ ನಾದವಿಲ್ಲದೇ ಜಗತ್ತಿಗೆ ಶೂನ್ಯ ಆವರಿಸಿ ಸಾವಿರಾರು ವರ್ಷಗಳು ಸಂದ ಮೇಲೆ ಕವಿಯ ಭಾವದೆರೆ ತೆರೆದು ತನ್ನ ನಾದದ ನೆನಪನ್ನು ಕೊಳಲು ಗಿಡ-ಮರ-ಬಳ್ಳಿಗಳ ಉಲಿಯಲ್ಲಿ ಸಾರುತ್ತ ಮತ್ತೆ ಕೆಣಕದೆ ತಣಿಯುವ ಹೊತ್ತಿಗೆ ಗೋಕುಲ ನಿರ್ಗಮನ ಕೊನೆಗೂಳ್ಳುವುದು ಇದರ ಕಥಾವಸ್ತುವಾಗಿದೆ.
ಈ ಕತೆಯನ್ನು ಇಟ್ಟುಕೊಂಡು ರಂಗಕ್ಕೆ ಒಪ್ಪುವಂತೆ ಸುಧೀರ್ಘದ ನಾಟ್ಯವನ್ನು ಡಾ. ಕೆ.ಎಸ್.ಪವಿತ್ರಾ ಅವರು ’ಸಕಲೇಂದ್ರಿಯಗಳಲ್ಲಿ ನೇತ್ರವೇ ಮಿಗಿಲು…’ ಎಂಬ ಗೋಕುಲ ನಿರ್ಗಮನದ್ದೇ ಸಾಲಿನಂತೆ ಕಣ್ಣಿಗೆ ಹಬ್ಬವನ್ನು ನೀಡುವಂತೆ ನಿರ್ದೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರಂಭದಲ್ಲಿ ಗೋಪಬಾಲರಾಗಿ ನುಡಿಸಿದ ಮುರಳಿಯ ನಾದಕ್ಕೆ ಪ್ರೇಕ್ಷಕರೆಲ್ಲರೂ ತಲೆಯಾಡಿಸುವಂತೆ ಮಾಡಿ ನೋಡುಗರ ಮನೆಗೆದ್ದಿದ್ದು ಪುಟ್ಟ ಮಕ್ಕಳಾದ ಭರತವರ್ಷ ಮತ್ತು ಸುಮೇದ್. ಅದು ಕವಿಗಷ್ಟೇ ಅಲ್ಲ ನಮ್ಮೆಲ್ಲರನ್ನೂ ಗೋಕುಲದತ್ತ ಸೆಳೆಯುವವಂತಾಯ್ತು.

ಅದ್ಭುತವಾದ ರಂಗಸಜ್ಜಿಕೆ, ಶ್ರೀಮಂತ ಪ್ರಸಾದನ, ಉತ್ತಮ ಬೆಳಕಿನ ನಿರ್ವಹಣೆ ಎಂತಹವರನ್ನೂ ಸೆಳೆದು ನಿಜವಾದ ನಂದಗೋಕುಲವೇ ಕಣ್ಣ ಮುಂದಿದೆ ಎನ್ನುವಂತಾಗಿತ್ತು. ’ಎನ್ನೀ ಕೊಳಲಿದು ಕಾಡಿನ ಬಿದಿರು, ಈ ಹುಲು ಕಡ್ಡಿಗೆ ಎನಿತೋ ಚದುರು… ಈ ಬೃಂದಾವನ ನಾದಮಯ, ಪ್ರಾಣತರಂಗಿತ ನಾದ ತರಂಗ… ನಾದ ತರಂಗಿತ ಪ್ರಾಣ ತರಂಗ…  ಎನ್ನುವ ಹಾಡುಗಳ ಸಂಗೀತ ಸಂಯೋಜನೆಯು ಮನಸ್ಸಿಗೆ ಮುದನೀಡುವಂತಿತ್ತು. ವಿ. ಮಹೇಶ ಸ್ವಾಮಿಯವರಿಗೆ ಕೃತಜ್ಞತೆ ಸಲ್ಲಲೇಬೇಕು. ವಿ. ಡಿ. ವಿ. ಪ್ರಸನ್ನಕುಮಾರ್ ಅವರ ಕಂಠದಲ್ಲಿ ಮೂಡಿಬಂದ ನಟುವಾಂಗವಂತೂ ಅದ್ಭುತಕ್ಕಿಂತಲೂ ಮಿಗಿಲು. ಇನ್ನು ವಿ. ಗಣೇಶ್ ದೇಸಾಯಿ ಮತ್ತು ವಿ. ಚಾಂದಿನಿ ಗರ್ತಿಕೆರೆ ಇವರೀರ್ವರ ಸಿರಿಕಂಠದಲ್ಲಿ ಹಾಡಿದ ಹಾಡೆಲ್ಲವೂ ಕೃಷ್ಣನ ಕೊಳಲಿನ ನಾದದಂತೆ ಇಂಪಾಗಿತ್ತು.
ಕಾಳಿಂಗ ಮರ್ದನ ನೃತ್ಯದ ಸನ್ನಿವೇಶ, ಬಿಲ್ಲಹಬ್ಬದ ವರ್ಣನೆ, ಗೋಪಿಕೆಯರ ಪ್ರೀತಿ, ಕೊನೆಯ ದೃಶ್ಯ ’ಕೊಳಲನೂದು ಗೋವಿಂದ ಮುಪ್ಪಿಗಾಗಲಾನಂದ…’
ಬಾಳೆ ಸನಿಹ ಸಾವು ದೂರ… ಎಂಬ ತೆರದ ನಂಬಿಕೆ ಬರೆ… ಎಂಬ ಹಾಡಿಗೆ ಮಾಡಿದ ನೃತ್ಯ, ಕೃಷ್ಣ, ಅಕ್ರೂರ ರಾಧೆಯರಾದ ಡಾ. ಕೆ. ಎಸ್. ಪವಿತ್ರಾ, ಡಾ. ಕೆ. ಎಸ್.ಚೈತ್ರಾ, ಡಾ. ಕೆ. ಎಸ್. ಶುಭ್ರತಾ ಹಾಗೂ ಗೋಪಿಕೆಯರು, ಗೋಪರು, ಪುಟ್ಟಗೋವಳ ಹೀಗೆ ಎಲ್ಲರ ಪಾತ್ರವೂ ಹೃನ್ಮನಕ್ಕೆ ಸಂತಸ ನೀಡಿ “ಅಂತು ಬಲು ಹಿರಿದಾಯ್ತು ಸಂಮೋದವು…” ಎಂಬುದು ಸಾರ್ಥಕವಾಯ್ತು. ಸಹೃದಯರ ಹೃದಯ ಗೆದ್ದ ಆಯೋಜಕರಿಗಂತೂ ಹಾಟ್ಸ್ ಆಫ್ ಹೇಳಲೇ ಬೇಕು.

ಬರಹ: ಡಾ. ಮೈತ್ರೇಯಿ ಆದಿತ್ಯ ಪ್ರಸಾದ್

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹನ್ನೊಂದನೇ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಶಿವಮೊಗ್ಗ ಕರಾಟೆ ಸಂಸ್ಥೆಗೆ ಸಮಗ್ರ ಚಾಂಪಿಯನ್ ಶಿಪ್

0

ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದ ತರೀಕೆರೆ ಓಪನ್ 11ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಯಲ್ಲಿ ಶಿವಮೊಗ್ಗ ಸಿಟಿ ಕಲಾಟೆ ಅಸೋಸಿಯೇಷನ್ ಕ್ರೀಡಾಪಟುಗಳು ಭಾಗವಹಿಸಿ ಕಟ ಮತ್ತು ಕುಮಟಿ ವಿಭಾಗದಲ್ಲಿ ವಿವಿಧ ಬಹುಮಾನಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಸಿಟಿ ಕರಾಟೆ ಅಸೋಸಿಯೇಷನ್ ತರಬೇತಿದಾರರಾದ ವೆಂಕಟೇಶ್ ಶ್ರೇಯಸ್ ಹರ್ಷಿತ್ ಸಾಗರ್ ಉಪಸ್ಥಿತರಿದ್ದು ವಿಜೇತ ತಂಡಕ್ಕೆ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.