Saturday, April 4, 2026
Saturday, April 4, 2026
Home Blog Page 1320

ಶಿವಮೊಗ್ಗ ಜಿಲ್ಲಾ ಕೆಡಬ್ಲ್ಯುಜೆ ಗೆರಾಜ್ಯಮಟ್ಟದ ಪ್ರಶಸ್ತಿಯ ಗರಿ

0

ರಾಜ್ಯದ ಏಳು ಸಾವಿರಕ್ಕೂ ಹೆಚ್ಚಿನ ಕಾರ್ಯನಿರತ ಪತ್ರಕರ್ತರ
ಸದಸ್ಯತ್ವ ಹೊಂದಿರುವ ರಾಜ್ಯಸರ್ಕಾರದ ಮಾನ್ಯತೆ ಪಡೆದ ಏಕೈಕ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ)
ಕೊಡಮಾಡುವ ರಾಜ್ಯಮಟ್ಟದ 2020-21ನೇ ಸಾಲಿನ ಚೊಚ್ಚಲ
ಅತ್ಯುತ್ತಮ ಜಿಲ್ಲಾ ಸಂಘ ಪ್ರಶಸ್ತಿ ಗೆ ಕರ್ನಾಟಕ ಕಾರ್ಯನಿರತ
ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಘಟಕವು ಆಯ್ಕೆಯಾಗಿದೆ.

ಕಾರ್ಯನಿರತ ಪತ್ರಕರ್ತರ ಸಂಘಗಳನ್ನು ಸಂಘಟನಾತ್ಮಕವಾಗಿ
ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ
ಸಂಘವು ಅತ್ಯುತ್ತಮ ಜಿಲ್ಲಾ ಸಂಘ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಇದರ
ಮೊದಲ ಪ್ರಶಸ್ತಿಯು ಅಧ್ಯಕ್ಷರಾದ ಕೆ. ವಿ. ಶಿವಕುಮಾರ್ ನೇತೃತ್ವದ
ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಗೆ
ಸಂದಿರುವುದು ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಹೆಗ್ಗಳಿಕೆಯಾಗಿದೆ.

ಕಳೆದ ಎಂಟು ವರ್ಷಗಳ ಕಾರ್ಯಸಾಧನೆಯನ್ನು ಗುರುತಿಸಿ, ಈ
ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಫೆ. 4 ಮತ್ತು 5 ರಂದು
ವಿಜಯಪುರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ
ಸಂಘದ 37 ನೇ ರಾಜ್ಯ ಸಮ್ಮೇಳನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ
ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಈ ತನಕ ಸಂಘವು ನಡೆಸಿರುವ ಕ್ರಿಯಾಶೀಲ
ಕಾರ್ಯಚಟುವಟಿಕೆಗಳು, ಪತ್ರಿಕಾ ಸಂವಾದಗಳು, ಅರ್ಥಪೂರ್ಣ ಪತ್ರಿಕಾ
ದಿನಾಚರಣೆಗಳು, ಹಿರಿಯ ಪತ್ರಕರ್ತರನ್ನು ಗುರುತಿಸಿ,
ಗೌರವಿಸಿರುವುದು, ಪತ್ರಕರ್ತರ ಹಿತ ಕಾಯುವ ನಿಟ್ಟಿನಲ್ಲಿ ನಡೆಸಲಾದ
ಹೋರಾಟಗಳು, ಪತ್ರಕರ್ತರಿಗಾಗಿ ನಡೆಸಲಾದ ಆರೋಗ್ಯ ತಪಾಸಣಾ
ಶಿಬಿರಗಳು, ಸಂದರ್ಭಾನುಸಾರದ ಕ್ರೀಡಾ ಕೂಟಗಳು, ಪತ್ರಕರ್ತರ
ಕುಟುಂಬ ವರ್ಗ, ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗಾಗಿ
ನಡೆಸಲಾಗಿರುವ ವಿಭಿನ್ನ ಕಾರ್ಯಕ್ರಮಗಳು, ಪತ್ರಕರ್ತರ ಜ್ಞಾನದ
ಉನ್ನತೀಕರಣಕ್ಕಾಗಿ ನಡೆಸಲಾದ ಕಾರ್ಯಾಗಾರಗಳು, ವಿಶೇಷವಾಗಿ ಸಾಧಕ
ಪತ್ರಕರ್ತರನ್ನು ಗುರುತಿಸಿ, ಜಿಲ್ಲಾ ಮಟ್ಟದಲ್ಲಿ ಹಿರಿಯ ಪತ್ರಕರ್ತರ
ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗಳನ್ನು ಸರಿ ಸುಮಾರು 50ಕ್ಕೂ ಹೆಚ್ಚು
ಪತ್ರಕರ್ತರಿಗೆ ಪ್ರದಾನ ಮಾಡಿರುವುದು, ಜೊತೆಗೆ ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘವು ಕೊಡಮಾಡುವ ದತ್ತಿ ಪ್ರಶಸ್ತಿ
ಪ್ರದಾನ ಕಾರ್ಯಕ್ರಮವನ್ನು ಮೊದಲಬಾರಿಗೆ ಅರ್ಥಪೂರ್ಣವಾಗಿ
ಸಂಘಟಿಸಿರುವುದು.. ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು
ಗುರುತಿಸಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಜೊತೆಗೆ ಬಹಳ ಮುಖ್ಯವಾಗಿ ಜಿಲ್ಲೆಯ ಎಲ್ಲ ತಾಲೂಕುಗಳ
ಶಾಖೆಗಳೂ ಸಹ ಈ ಅವಽಯಲ್ಲಿ ನಡೆಸಿರುವ ರಚನಾತ್ಮಕ
ಕಾರ್ಯಕ್ರಮಗಳು, ಜಿಲ್ಲಾ ಶಾಖೆಯೊಂದಿಗಿನ ನಿರಂತರ ಸಂಪರ್ಕ,
ತಾಲೂಕು ಮಟ್ಟದಲ್ಲಿ ನಡೆಸಲಾದ ಕ್ರೀಡಾಕೂಟಗಳು, ಕಾರ್ಯಾಗಾರಗಳು,
ಸಂವಾದಗಳು, ಪತ್ರಕರ್ತರ ಹಿತ ರಕ್ಷಣೆಯ
ಕಾರ್ಯಚಟುವಟಿಕೆಗಳನ್ನು ಸಹ ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ ಎಂದು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ
ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ತಿಳಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿಷ್ಟಿತ
ಪ್ರಶಸ್ತಿಗೆ ಕಾರಣರಾದ ಹಿಂದಿನ ಸಾಲಿನ ಅಧ್ಯಕ್ಷರಾದ ಎನ್. ರವಿಕುಮಾರ್,
ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ಅಂದಿನ ಕಾರ್ಯಕಾರೀ ಮಂಡಳಿ,
ಪ್ರಸ್ತುತ ಪ್ರಧಾನ ಕಾರ್ಯದರ್ಶಿ ವಿ.ಟಿ. ಹಾಗೂ ಕಾರ್ಯಕಾರೀ ಮಂಡಳಿ, ಎಲ್ಲ
ತಾಲೂಕುಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ
ಮಂಡಳಿಯ ಸದಸ್ಯರುಗಳಿಗೆ ಜಿಲ್ಲಾ ಸಂಘದ ಅಧ್ಯಕ್ಷರಾದ ಕೆ. ವಿ.
ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಾರತ್ ಜೋಡೋ ಯಾತ್ರೆ ಪಕ್ಷದ ಚೌಕಟ್ಟನ್ನೂ ಮೀರಿದೆ-ಸುಧೀರ್ ಮುರಳಿ

0

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪಕ್ಷದ ಚೌಕಟ್ಟನ್ನು ಮೀರಿ ಸಾಮಾಜಿಕ ಹೊಣೆಗಾರಿಕೆಯ ಯಾತ್ರೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಮುರಳಿ ತಿಳಿಸಿದರು.

ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಶಿವಮೊಗ್ಗ ನಗರ ಎನ್.ಎಸ್.ಯು.ಐ. ವತಿಯಿಂದ ಆಯೋಜಿಸಿದ್ದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ಹಾಗೂ ರಾಷ್ಟ್ರಪತಿ ಮಹಾತ್ಮಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿಜೆಪಿ 8 ರ್ಷಗಳ ಹಿಂದೆ ‘ಬಿಜೆಪಿಯೇ ಭರವಸೆ’ ಎಂಬ ಘೋಷವಾಕ್ಯದಡಿ ಅಧಿಕಾರಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೂ ಎಲ್ಲವನ್ನೂ ಭರವಸೆಗಳಲ್ಲೆ ಉಳಿಸಿದೆ. 2014 ರಲ್ಲಿ 5ರೂ.ಗೆ ಒಂದು ಕೆಜಿ ಉಪ್ಪು ಸಿಗುತ್ತಿತ್ತು. ಇಂದು 15 ರೂ.ಗೆ ಏರಿಕೆಯಾಗಿದೆ. 60 ರೂ.ಗೆ ಸಿಗುತ್ತಿದ್ದ ಪೆಟ್ರೋಲ್ 100 ರೂ.ನ ಗಡಿ ದಾಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಸರ್ಕಾರ ಅಂಬಾನಿಯವರ ರಕ್ಷಣೆಗಿರುವ ಸರ್ಕಾರ. ಅವರ ಅನುಕೂಲಕ್ಕಾಗಿ ಸರ್ಕಾರ ನಡೆಯುತ್ತಿದೆ. ಅವರ ಕಂಪನಿಗಳಿಗಾಗಿರುವ 18 ಸಾವಿರ ಕೋಟಿ ನಷ್ಟವನ್ನು ಭರಿಸಲು ಸಾರ್ವಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ.
ಗಾಂಧಿಯವರನ್ನು ಕೊಂದಿದ್ದು ಗೋಡ್ಸೆ ಎಂಬ ಒಬ್ಬ ವ್ಯಕ್ತಿಯಲ್ಲ. ಅಂದು ದೇಶವಿಭಜನಗೆ ಕಾರಣವಾಗಿದ್ದ ಹಿಂದೂ ಮಹಾಸಭಾ 1937ರ ಸಭೆಯಲ್ಲಿ ದೇಶವಿಭಜನೆಯ ನಿರ್ಧಾರ ಕೈಗೊಂಡಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ಅವರನ್ನು ಸಂವಿಧಾನ ರಚನಾ ಸಮಿತಿ ಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಗೋಡ್ಸೆಯ ರೂಪದಲ್ಲಿ ಒಂದು ಸಿದ್ಧಾಂತವೇ ಗಾಂಧಿಯವರನ್ನು ಕೊಂದಿತ್ತು ಎಂದರು.

ಕಾಂಗ್ರೆಸ್ ಈ ಹಿಂದೆ ಎರಡು ಬಾರಿ ಶಿಕ್ಷಣ ನೀತಿಗಳನ್ನು ರೂಪಿಸಿದೆ. ಮೊದಲು ರೂಪಿಸಿದ ಶಿಕ್ಷಣ ನೀತಿಯಲ್ಲಿ ಸರ್ವರಿಗೂ ಶಿಕ್ಷಣದ ಗುರಿ ಹೊಂದಲಾಗಿತ್ತು. 1983ರಲ್ಲಿ ರೂಪಿಸಿದ ಎರಡನೇ ಶಿಕ್ಷಣ ನೀತಿ ಜಾಗತಿಕ ಮಾರುಕಟ್ಟೆಗೆ ಅನುಕೂಲವಾಗುವಂತಹ ಶಿಕ್ಷಣ ಒದಗಿಸಿದರೆ, ಕೊರೋನಾ ಸಂದರ್ಭದಲ್ಲಿ ಯಾವುದೇ ಚರ್ಚೆ ಇಲ್ಲದೇ ಜಾರಿಗೆ ತಂದ ಎನ್‌ಇಪಿ, ಬಡವರ, ದಲಿತರ, ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದ ನೆಲದಲ್ಲಿ ಸ್ವಾತಂತ್ರ್ಯ ವೀರರು ಹುಟ್ಟಿದ್ದಾರೆ. ಜಾತ್ಯತೀತ ನಿಲುವುಗಳ ನೆಲ. ಸಮಾಜವಾದಿಗಳ ತವರು. ಇಂತಹ ನೆಲದ ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂದು ಗೋಡ್ಸೆ ವೈರಸ್ ಹರಡಲಾಗುತ್ತಿದೆ. ಇದನ್ನು ತಡೆಯಬೇಕು. ಗಾಂಧಿ ಚಿಂತನೆಗಳು ಮೊಳಗಬೇಕು. ಆ ನಿಟ್ಟಿನಲ್ಲೇ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮೂಲಕ ಸಂದೇಶ ನೀಡಿದ್ದಾರೆ. ಯುವಕರು ಅದನ್ನು ಅನುಸರಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ರಾಹುಲ್ ಗಾಂಧಿಯವರು 138 ದಿನಗಳ ಕಾಲ ದೇಶದ ಉದ್ದಗಲಕ್ಕೂ 4084 ಕಿ.ಮೀ. ಭಾರತ್ ಜೋಡೋ ಯಾತ್ರೆ ನಡೆಸಿದ್ದಾರೆ. ಇದು ಪಕ್ಷದ ಕಾರ್ಯಕ್ರಮವಲ್ಲ, ದೇಶದ ಮನಸ್ಸುಗಳನ್ನು ಒಂದುಗೂಡಿಸುವ ಯಾತ್ರೆ. ಅದನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಬಣ್ಣಿಸಿದರು.

ರಾಜ್ಯ ಕಾಂಗ್ರೆಸ್ ವಕ್ತಾರ ಬಿ.ಎ. ರಮೇಶ್ ಹೆಗ್ಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಅಡ್ಡು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಲೀಮ್ ಪಾಷಾ ಹಾಗೂ ದೀಪಕ್ ಸಿಂಗ್, ಅಲ್ಪಸಂಖ್ಯಾತರ ನಾಯಕರಾದ ಮೊಹಮ್ಮದ್ ನಿಹಾಲ್ , ಆರಿಫ್ ,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯಕುಮಾರ್, ರವಿ ಕಾಟಿಕೆರೆ, ಚರಣ್, ಹರ್ಷಿತ್, ಕೆ. ಚೇತನ್, ಸಿ.ಜಿ. ಮಧುಸೂದನ್, ಶಿವು ಮಲಗುಪ್ಪ, ಗಿರೀಶ್ , ವಿಕ್ರಂ, ರವಿ, ಸೇರಿದಂತೆ ಹಲವರಿದ್ದರು.

ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಮನೋಧರ್ಮ ವಿದ್ಯಾರ್ಥಿಗಳಲ್ಲಿರಬೇಕು- ಕೆ.ಎಸ್.ಈಶ್ವರಪ್ಪ

0

ಸಮಾಜದ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಸೇವಾ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು ಎಂದು ಶಿವಮೊಗ್ಗ ಶಾಸಕರಾದ ಕೆ.ಎಸ್.ಈಶ್ವರಪ್ಪನವರು ತಿಳಿಸಿದರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ, ಎನ್. ಸಿ ಸಿ.ಕ್ರೀಡೆ, ಎನ್ ಎಸ್ ಎಸ್., ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ 2022-23 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾನ್ಯ ಶಾಸಕರಾದ ಶ್ರೀ ಕೆ. ಎಸ್ ಈಶ್ವರಪ್ಪನವರು ಮಾತನಾಡಿದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ” ಸಹ್ಯಾದ್ರಿ ಕಾಲೇಜಿಗೆ ಉನ್ನತ ಶೈಕ್ಷಣಿಕ ಮಾನ್ಯತೆ ಇದೆ. ಇಲ್ಲಿ ಅಭಿವೃದ್ಧಿಪರವಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಸಂಗತಿ. ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಂತರು. ಓದಿನ ಜೊತೆಗೆ ಎನ್. ಎಸ್.ಎಸ್., ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅತ್ಯಂತ ಅಗತ್ಯ. ಬದುಕು ರೂಪಿಸಿಕೊಳ್ಳಲು ಇಂತಹ ಆಸಕ್ತಿಗಳು ನಮಗೆ ನೆರವು ನೀಡುತ್ತವೆ.ಸಮಾಜದ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಸೇವಾ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು. ಆಗ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ. ” ಎಂದರು.

ಕಾಲೇಜಿಗೆ ಹೆಚ್ಚುವರಿಯಾಗಿ ಎಂಟು ಕೊಠಡಿಗಳನ್ನು ಮಂಜೂರು ಮಾಡಿಸುವ ಭರವಸೆ ನೀಡಿದರು.

ಹಾಸ್ಯ – ಹಾಡಿನ ಮೂಲಕ ರಂಜಿಸಿದ ಹಾಸ್ಯ ಕಲಾವಿದೆ ಶ್ರೀಮತಿ ಇಂದುಮತಿ ಸಾಲಿಮಠ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ” ಕನ್ನಡ ನಮ್ಮ ಅಂತರಂಗದ ಭಾಷೆಯಾಗಬೇಕು. ಸಾಧ್ಯವಾದಷ್ಟು ಸಂಬಂಧವಾಚಕಗಳನ್ನು ಕನ್ನಡದಲ್ಲಿ ಬಳಸಬೇಕು.ಅಮ್ಮನಿಗೆ ಮಮ್ಮಿ ಅಪ್ಪನಿಗೆ ಡ್ಯಾಡಿ ಅನ್ನೋರು ಚಿಕ್ಕಮ್ಮನಿಗೆ ಮಿನಿಮಮ್, ದೊಡ್ಡಮ್ಮನಿಗೆ ಮ್ಯಾಕ್ಸಿಮಮ್ ಅನ್ನೋದರಲ್ಲಿ ವಿಶೇಷವೆನಿಲ್ಲ. ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕೃತಿ ಸಂಸ್ಕಾರ ಮುಖ್ಯ. ಅದನ್ನು ನಮ್ಮ ಪರಿಸರದಿಂದ, ಶಿಕ್ಷಣದಿಂದ ಕಲಿಯಬೇಕು” ಎಂದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ ಕೆ. ವೀಣಾ ಅವರು ಅಧ್ಯಕ್ಷತೆ ವಹಿಸಿ, ” ವಿದ್ಯಾರ್ಥಿ ಜೀವನಕ್ಕೆ ಕನಸುಗಳಿರಬೇಕು. ಆ ಕನಸುಗಳು ನನಸಾಗಲು ನಿರಂತರ ಪರಿಶ್ರಮ ಬೇಕು. ಸಾಹಿತ್ಯ ಕಲೆ ಸಂಸ್ಕೃತಿಗಳ ಅರಿವು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ವಿ. ವಿ ಕುಲಸಚಿವರಾದ ಪ್ರೊ. ನವೀನ್ ಕುಮಾರ್ ಎಚ್. ಕೆ., ಕಾಲೇಜಿನ ಹಿರಿಯ ವಿದ್ಯಾರ್ಥಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಂಜುನಾಥ್ ಎಚ್., ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ ಧನಂಜಯ ಕೆ. ಬಿ., ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ರಾಜೇಶ್ವರಿ ಎನ್., ಪ್ರಾಧ್ಯಾಪಕರಾದ ಡಾ. ಶಿವಮೂರ್ತಿ ಎ., ಡಾ. ಕುಂದನ್ ಬಸವರಾಜ್, ಡಾ. ಕೆ. ವಿ. ಗಿರಿಧರ್., ಡಾ. ಸರಳಾ ಕೆ ಎಸ್., ವಿದ್ಯಾರ್ಥಿ ಪ್ರತಿನಿಧಿಗಳಾದ ತಾರಾದೇವಿ ಎಚ್, ಉದಯ್ ಶಂಕರ್, ಚಿನ್ಮಯಿ, ಕಾವ್ಯ ಜಿ. ಉಪಸ್ಥಿತರಿದ್ದರು. ಮಹೇಂದ್ರ ಶೆಟ್ಟಿ, ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿಪ್ರ ಮಹಿಳಾ ಸ್ವಸಹಾಯ ಸಂಘಕ್ಕೆ ಸರ್ಕಾರದಿಂದ ಉಚಿತ ಸಹಾಯಧನ ವಿತರಣೆ

0

ಕರ್ನಾಟಕ ರಾಜ್ಯ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯೋಜನೆಯಲ್ಲಿ ಶ್ರೀ ಗಾಯತ್ರಿ ಬ್ರಾಹ್ಮಣ ಮಹಿಳಾ ಸ್ವಸಹಾಯ ಸಂಘಗಳಿಗೆ(ಉಚಿತವಾಗಿ) ನೀಡುವಂತ ಒಂದು ಲಕ್ಷ ಧನಸಹಾಯವನ್ನು ನೀಡಲಾಯಿತು.

ಚೆನ್ನಗಿರಿ ಕ್ಷೇತ್ರದ ಜನಪ್ರಿಯ ಶಾಸಕರು KSDL( ಕರ್ನಾಟಕ ರಾಜ್ಯ ಮೈಸೂರು ಸೋಪು ಮತ್ತು ಡಿಟರ್ಜೆಂಟ್ ನಿಗಮ)
ಅಧ್ಯಕ್ಷ ರಾದ
ಶ್ರೀ ಮಾಡಾಳು ವಿರೂಪಾಕ್ಷಪ್ಪ ಅವರು 1ಲಕ್ಷದ ಚೆಕ್ಕನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀ ಚಿದಂಬರ ದೀಕ್ಷಿತ್,
, ಶ್ರೀ ಅನಿಲ್ ಬಾರೆಂಗಳ್ ಮಹಿಳಾ ಸ್ವಸಹಾಯ ಸಹಾಯ ಸಂಘದ ಅಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು.

ಬಿಜೆಪಿ ಜಯಭೇರಿ ಬಗ್ಗೆ ನಿಕಟಪೂರ್ವ ಸಿಎಂ ಹೇಳಿದ್ದೇನು?

0

ಮಾನ್ಯ ಪ್ರಧಾನಿ ಮೋದಿಜಿ, ಅಮಿತ್ ಶಾ, ನಡ್ಡಾ ಅವರು ಕರ್ನಾಟಕದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.
ಈ ಬಾರಿ 140 ಕ್ಕೂ ಅಧಿಕ ಕ್ಷೇತ್ರ ಗೆದ್ದು ಸ್ಪಷ್ಟ ಬಹುಮತ ಬರುತ್ತೆ
ನಮ್ಮ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ತೀರ್ಮಾನದಂತೆ ಮುಂದೆ ಹೋಗುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು.

ರಾಜ್ಯದ ಎಲ್ಲ ಕಡೆ ದೇವ ದುರ್ಲಭದಂತಹ ಸ್ವಾಗತ ಸಿಗುತ್ತಿದೆ. ಯಾರು ನಾನು ಮುಖ್ಯ ಮಂತ್ರಿ ಎಂದು ತಿರುಕನ ಕನಸು ಕಾಣ್ತಿದ್ದಾರೆ. ಅದು ಸಾಧ್ಯವಿಲ್ಲ. ಮೋದಿಯಂತಹ ನಾಯಕ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ.
ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಂತಹ ಸಂಕಲ್ಪ ಮತದಾರರು ಮಾಡಬೇಕು ಎಂದು ತಿಳಿಸಿದರು.

ರಮೇಶ ಜಾರಕಿಹೊಳಿ ಆಡಿಯೊ ಬಹಿರಂಗ ವಿಚಾರ
ಅವರಿಗೆ ಸಂಬಂಧಪಟ್ಟ ವಿಷಯ. ನಾನು ಕಮೆಂಟ್ ಮಾಡಲ್ಲ.
ನನಗೇನೂ ಎ ಟು ಝಡ್ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪಾತರಗಿತ್ತಿಯ ಪಕ್ಕ ತೋರಿಸಿದ ಬೇಂದ್ರೆಯಜ್ಜನ ಜನ್ಮದಿನ

0

ಇಂದು ದ.ರಾ. ಬೇಂದ್ರೆ ಅವರ 127ನೇ ಜನ್ಮದಿನ. ಬೇಂದ್ರೆಯವರು ಆಧುನಿಕ ಕನ್ನಡ ಕಾವ್ಯ ಕ್ಷೇತ್ರದ ಆರಂಭಿಕ ಕವಿಗಳಲ್ಲಿ ಒಬ್ಬರಾಗಿದ್ದರು. ಅವರ ಕಾವ್ಯವು ಜಾನಪದ ಕಥೆಗಳನ್ನು ಹೇಳುತ್ತಿದ್ದವು.

ಬೇಂದ್ರೆ ಅವರು ಜನವರಿ 31,1896ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ಕುಟುಂಬವು ವಿಶೇಷವಾಗಿ ಸಂಸ್ಕೃತ ಭಾಷೆಯ ಅನೇಕ ವಿದ್ವಾಂಸರನ್ನು ಹೊಂದಿತ್ತು. ಬೇಂದ್ರೆ ಅವರು ತಮ್ಮ ಸ್ನಾತಕ ಪದವಿಯನ್ನು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಪಡೆದರು. ನಂತರ ಅವರು ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಅವರು ಕವಿತೆಗಳನ್ನು ಬರೆಯುವಾಗ ಅನೇಕ ದೃಷ್ಟಿಕೋನಗಳು ಹಾಗೂ ಚಿಂತನೆಯ ಸಾಲುಗಳನ್ನು ಬಳಸುತ್ತಿದ್ದರು. ಅವರ ಪ್ರಸಿದ್ಧ ಕಾವ್ಯ ಕೃತಿಗಳಲ್ಲಿ ಒಂದಾದ ನಾಡಲೀಲಾ. ಈ ಕವನ ಸಂಕಲನದಲ್ಲಿ ಅವರು ದೇಶಭಕ್ತಿ, ಸಂಪ್ರದಾಯಗಳು, ಭಾರತೀಯ ಸಂಸ್ಕೃತಿಗಳು ಹೀಗೆ ಅನೇಕ ಅಂಶಗಳನ್ನು ಒಳಗೊಂಡಿದೆ.

1968ರಲ್ಲಿ ಪದ್ಮಶ್ರೀ ಕೇಳ್ಕರ್ ಪ್ರಶಸ್ತಿ ಲಭಿಸಿತು. 1974ರಲ್ಲಿ ಬೇಂದ್ರೆ ಅವರ ನಾಕು ತಂತಿ ಎಂಬ ಕಾವ್ಯ ಸಂಗ್ರಹಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದರು. ಬೇಂದ್ರೆ ಅವರು ಏಳು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಲೇಖಕರಲ್ಲಿ ಎರಡನೆಯವರು.

ನವೋದಯ ಕಾಲದ ಪ್ರತಿಭಾನ್ವಿತ ಕವಿ ಎಂಬ ಬಿರುದನ್ನು ಬೇಂದ್ರೆ ಅವರಿಗೆ ನೀಡಲಾಯಿತು. ಬೇಂದ್ರೆ ಅವರು ನರಬಲಿ ಪುಸ್ತಕವನ್ನು ಬರೆದ ನಂತರ ಅವರಿಗೆ ಜೈಲು ಶಿಕ್ಷೆ ವಿಧಿಸಲಾಯಿತು.

ಈ ಪುಸ್ತಕ ಬರೆದ ನಂತರ ಅವರನ್ನು ದೇಶದ್ರೋಹದ ಗಂಭೀರ ಆರೋಪದ ಮೇಲೆ ಬಂಧಿಸಲಾಗಿತ್ತು.

ಅಕ್ಟೋಬರ್ 21, 1981ರಲ್ಲಿ ದೈವಾಧೀನರಾದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬೇಂದ್ರೆಯವರ ಕವಿತೆಗಳಲ್ಲಿ ಬಳಸಿದ ವಸ್ತುವಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಅವರ ಕವಿತೆಗಳಲ್ಲಿ ಛಲ, ಬದುಕು, ಸಾವು ನೋವು ಈ ವಿಷಯಗಳ ಕುರಿತ ಹೆಚ್ಚು ಕವಿತೆಗಳು ರಚಿಸಿದ್ದಾರೆ. ಇವರು ಬರೆದ ಪಾತ್ತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ ಕವನ ಸಂಕಲನ ಇಂದಿಗೂ ಕೂಡ ಚಿನ್ನರ ಅಚ್ಚುಮೆಚ್ಚಿನ ಕವನವಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕುಮಾರಣ್ಣ ಅವರಿಂದ ಜೆಡಿಎಸ್ ಭರವಸೆಗಳ ಸುರಿಮಳೆ

0

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರನ್ನು ಸಾಲಮುಕ್ತಗೊಳಿಸುವುದು, ಹಳ್ಳಿಗಳ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಾಲ ಮನ್ನಾ ಸೇರಿ ಪಂಚರತ್ನ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾವರಗೇರಾ ಗ್ರಾಮದಲ್ಲಿ ಮಾತನಾಡಿ ಅವರು, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರಿಗೆ ಪ್ರತಿ ಎಕರೆ ಜಮೀನಿಗೆ ಪ್ರತಿವರ್ಷ 10 ಸಾವಿರ ಆರ್ಥಿಕ ನೆರವು, ವೃದ್ಧಾಪ್ಯ ವೇತನ 5 ಸಾವಿರಕ್ಕೆ ಹೆಚ್ಚಳ ಮತ್ತು ವಿಧವಾ ವೇತನ 2,500ಗೆ ಏರಿಕೆ ಮಾಡುವುದಾಗಿ ತಿಳಿಸಿದರು.

ಯುವಕರು, ಯುವತಿಯರಿಗೆ ಸ್ವಯಂ ಉದ್ಯೋಗ, ಮಹಿಳಾ ಸ್ವಸಹಾಯ ಸಂಘಗಳ ಸಂಪೂರ್ಣ ಸಾಲಮನ್ನಾ ಯೋಜನೆಗಳನ್ನು ಜಾರಿ ಮಾಡಿಯೇ ತೀರುತ್ತೇನೆ. ಇದಕ್ಕೆ ಸುಮಾರು .2.5 ಲಕ್ಷ ಕೋಟಿ ಬಜೆಟ್‌ ಅಗತ್ಯವಿದೆ. ಅದನ್ನು ಕ್ರೋಢೀಕರಿಸುವುದೂ ಗೊತ್ತಿದೆ ಎಂದರು.

ಈ ಎಲ್ಲ ಯೋಜನೆಗಳನ್ನು ಜಾರಿ ಮಾಡಲು ಜೆಡಿಎಸ್‌ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಾಗುತ್ತದೆ. ಆದರೆ ಇದೆಲ್ಲವನ್ನೂ ಬಿಜೆಪಿ, ಕಾಂಗ್ರೆಸ್‌ ಸರ್ಕಾರದ ಜತೆ ಮಾಡುವುದು ಅಸಾಧ್ಯ. ಅದಕ್ಕಾಗಿ ಇದೊಂದು ಬಾರಿ ನನಗೆ ಸಂಪೂರ್ಣ ಅಧಿಕಾರ ನೀಡಿ ಎಂದು ಮನವಿ ಮಾಡಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸೂಪರ್ ಸ್ಟಾರ್ ರಜನಿ ಅವರ ಐಡೆಂಟಿಟಿಯನ್ನ ಅನುಮತಿಯಿಲ್ಲದೇ ಬಳಸುವಂತಿಲ್ಲ

0

ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ತಮ್ಮ ಬ್ರ್ಯಾಂಡ್’ಗೆ ಅಂಬಾಸಿಡರ್ ಮಾಡಿಕೊಳ್ಳಲು ಹಲವು ಪ್ರಾಡೆಕ್ಟ್ ಗಳು ಅವರ ಹಿಂದೆ ಬಿದ್ದಿವೆ.

ಕೆಲವರು ಸೂಪರ್ ಸ್ಟಾರ್ ಅನುಮತಿ ಪಡೆಯದೇ ಅವರಿಗೆ ಗೊತ್ತಾಗದ ಹಾಗೆ ಹಲವು ಉತ್ಪನ್ನಗಳಲ್ಲಿ ರಜನಿಕಾಂತ್ ಸ್ಟೈಲ್, ಹೆಸರು, ವ್ಯಂಗ್ಯಚಿತ್ರ, ಭಾವಚಿತ್ರ, ಧ್ವನಿಯನ್ನ ಗ್ರಾಫಿಕ್ಸ್ ಮೂಲಕ ಬಳಸಿಕೊಳ್ಳುತ್ತಿದ್ದಾರೆ.

ಆದರೆ ಇನ್ನು ಮುಂದೆ ರಜನಿಕಾಂತ್ ಅವರ ಹೆಸರು, ಧ್ವನಿ, ಫೋಟೋಗಳನ್ನು ಕಮರ್ಷಿಯಲಿ ಬಳಸಿಕೊಳ್ಳುವ ಅಧಿಕಾರ ರಜನಿಕಾಂತ್ ಅವರಿಗೆ ಮಾತ್ರ ಇದೆ. ಹೀಗಾಗಿ ನನ್ನ ಅನುಮತಿ ಇಲ್ಲದೇ ನನ್ನ ಯಾವುದೇ ಐಡೆಂಟಿಟಿಯನ್ನು ಬಳಸಿಕೊಳ್ಳಬೇಡಿ. ಬಳಸಿಕೊಂಡರೆ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ವಕೀಲ ಎಸ್. ಇಳಂಭಾರತಿ ಅವರ ಮೂಲಕ ಸಾರ್ವಜನಿಕ ನೋಟೀಸ್ ಹೊರಡಿಸಿದ್ದಾರೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗಣರಾಜ್ಯೋತ್ಸವ ಸ್ಥಬ್ಧಚಿತ್ರಗಳಿಗೆ ಪುರಸ್ಕಾರ ‌ಪ್ರಕಟ

0

ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿ ಕರ್ತವ್ಯಪಥದಲ್ಲಿ ನಡೆದ ಪರೇಡ್‌ ವೇಳೆ ಪ್ರದರ್ಶನಗೊಂಡ ಸ್ತಬ್ಧಚಿತ್ರಗಳ ಪೈಕಿ ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.

ಉತ್ತರಾಖಂಡ ರಾಜ್ಯವು, ಕಾರ್ಬೆಟ್‌ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರಾಣಿಗಳು ವಿಹರಿಸುವ ದೃಶ್ಯ ಒಳಗೊಂಡ ಸ್ತಬ್ಧಚಿತ್ರ ಪ್ರದರ್ಶಿಸಿತ್ತು.
ಗುಜರಾತ್‌ನ ಸ್ತಬ್ಧಚಿತ್ರ ಜನಪ್ರಿಯ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಅತ್ಯುತ್ತಮ ಪಥಸಂಚಲನಕ್ಕಾಗಿ ನೀಡುವ ಪ್ರಶಸ್ತಿಯು ಸೇನೆಯ ಪಂಜಾಬ್‌ ರೆಜಿಮೆಂಟ್‌ಗೆ ಒಲಿದಿದೆ. ಕರ್ನಾಟಕವು ಈ ಬಾರಿ ಸಾಲು ಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಸಿಗೌಡ ಹಾಲಕ್ಕಿ ಅವರನ್ನು ಒಳಗೊಂಡ ನಾರಿಶಕ್ತಿ ಥೀಮ್‌ನ ಸ್ತಬ್ಧಚಿತ್ರ ಕಳುಹಿಸಿಕೊಟ್ಟಿತ್ತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ ಮೆಟ್ರೊ ಜೆಸಿಐ ನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

0

ಇತ್ತೀಚೆಗೆ ಜೆಸಿಐ ಶಿವಮೊಗ್ಗ ಮೆಟ್ರೋನ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಖಾಸಗಿ ಹೋಟೆಲ್ ನ ರೈಸ್ ಬೌಲ್ ನಲ್ಲಿ ಜರುಗಿತು.

ವಲಯ ಅಧ್ಯಕ್ಷರಾದ ಜೆಸಿಐ ಅನುಶ್ ಗೌಡರವರು ನೂತನ ಅಧ್ಯಕ್ಷ ಜೆಸಿ ಸತೀಶ್ ಪಾವಸ್ಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನಂತರ 2022 ನೇ ಸಾಲಿನ ಅಧ್ಯಕ್ಷರಾದ ಜೆಸಿ ಪ್ರಮೋದ್ ಶಾಸ್ತ್ರಿ ರವರು ಅಧಿಕಾರ ಹಸ್ತಾಂತರ ಮಾಡಿದರು. ಕಾರ್ಯದರ್ಶಿಯಾಗಿ
ಜೆಸಿ ಮುರಳಿ ಹೆಚ್ ಸಣ್ಣಕ್ಕಿರವರು ಹಾಗೂ ಎಲ್ಲಾ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಲಾಯಿತು.

ಎಲ್ಲಾ ಜೆಸಿಐ ಘಟಕದ ಸದಸ್ಯರುಗಳು ಆಗಮಿಸಿ ಶುಭ ಕೋರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.