Saturday, April 4, 2026
Saturday, April 4, 2026
Home Blog Page 1321

ಅಂಡರ್ 19 ಮಹಿಳೆಯರ ಕ್ರಿಕೆಟ್ ಚೊಚ್ಚಲ ವಿಶ್ವಕಪ್ ಭಾರತದ ತುರುಬಿಗೆ

0

ಭಾರತದ ಯುವತಿಯರ ತಂಡ ಐಸಿಸಿ 19 ರ ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿದೆ. ಮಹಿಳೆಯರ 19 ರ ವಯೋಮಿತಿಯಲ್ಲಿ ಇದು ಮೊದಲ ಟಿ20 ವಿಶ್ವಕಪ್. ಪ್ರಥಮ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹೆಗ್ಗಳಿಕೆ ಈಗ ಭಾರತದ ಕಿರಿಯರ ಕ್ರಿಕೆಟ್ ತಂಡ ಭಾಜನವಾಗಿದೆ.

ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಐಸಿಸಿ ಪ್ರಶಸ್ತಿ ಇದಾಗಿದೆ. ಭಾನುವಾರ ಪೋಚೆಫ್ ಸ್ಟ್ರೂಮ್ ನ ಸೆನ್ವೆಸ್ ಪಾರ್ಕ್ ನಲ್ಲಿ ನಡೆದ ಫೈನಲ್ ನಲ್ಲಿ ಆಟವಾಡುವ ಮೂಲಕ ಶಫಾಲಿ ವರ್ಮ ಬಳಗ ಬಲಿಷ್ಠ ಇಂಗ್ಲೆಂಡ್ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಬಗ್ಗು ಬಡಿಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಶಫಾಲಿ ಬಳಗ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ನಲ್ಲಿ ಇನ್ನೂ 17 ಎಸೆತಗಳ ಬಾಕಿ ಇರುವಾಗಲೇ 68 ರನ್ ಗಳಲ್ಲಿ ಆಲ್ ಔಟ್ ಮಾಡಿತು.

36 ಎಸೆತಕ್ಕೆಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಗುರಿ ಬೆನ್ನಟ್ಟುವ ಹಾದಿಯಲ್ಲಿ ಇಬ್ಬರು ಆರಂಭಿಕ ಆಟಗಾರ್ತಿಯರಾದ ಶಫಾಲಿವರ್ಮ ಹಾಗೂ ಶ್ವೇತಾ ಸೆಹ್ರಾವತ್ ತಂಡದ ಮೊತ್ತ 20 ರನ್ ಗಳಾಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಸ್ವಲ್ಪ ಆತಂಕ ಮನೆ ಮಾಡಿತ್ತು. ನಂತರ ಸೌಮ್ಯ ತಿವಾರಿ 24 ರನ್, 37ಎಸೆತ, ಹಾಗೂ 3 ನೇ ವಿಕೆಟ್ ಗೆ 46 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. 66ರ ಮೊತ್ತದಲ್ಲಿ ತ್ರಿಶಾ ಔಟಾದರು. ಅಷ್ಟರಲ್ಲಿ ಭಾರತದ ಗೆಲುವು ಖಚಿತವಾಗಿತ್ತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ಲೋಕಾರ್ಪಣೆ

0

ಮೈಸೂರು: ಸಾಹಸ ಸಿಂಹ ಎಂದೇ ಪ್ರಖ್ಯಾತಿ ಪಡೆದಿದ್ದ ಚಿತ್ರನಟ ಡಾ. ವಿಷ್ಣುವರ್ಧನ್ ಅವರು ನಮ್ಮನ್ನಗಲಿ ಸುಮಾರು 13 ವರ್ಷಗಳೆ ಕಳೆದಿವೆ. ವಿಷ್ಣುವರ್ಧನ್ ಅವರ ಕುಟುಂಬಸ್ಥರು ಹಾಗೂ ಅಭಿಮಾನಿ ಬಳಗದ ಕಾಯುವಿಕೆ ಹಾಗೂ ಹೋರಾಟದ ಫಲವಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಭವ್ಯ ಸ್ಮಾರಕ ಲೋಕಾರ್ಪಣೆಗೊಂಡಿದೆ.

ಜನವರಿ 29ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿಷ್ಣು ಸ್ಮಾರಕ ಲೋಕಾರ್ಪಣೆಗೊಂಡಿದೆ.

13 ವರ್ಷಗಳ ಕಾಯುವಿಕೆಯ ಬಳಿಕ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿರುವುದು ಅಭಿಮಾನಿ ಬಳಗಕ್ಕೆ ಹಾಗೂ ಕುಟುಂಬಸ್ಥರಿಗೆ ಸಂತಸದ ಸಂಭ್ರಮವಾಗಿದೆ.

ಡಾ. ವಿಷ್ಣುವರ್ಧನ್ ಅವರು ಸುಮಾರು 220 ನಟಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹೀಗೆ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರು ಮೂಲತಃ ಮೈಸೂರಿನವರು. ಡಿಸೆಂಬರ್ 30,2009 ದೈವಾಧೀನರಾದರು.

ಡಾ. ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿನ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಅವರ ಸ್ಮಾರಕ ನಿರ್ಮಾಣಗೊಂಡಿದೆ. ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಅವರ ಅಭಿಮಾನ ಬಳಗ ಹಾಗೂ ಕುಟುಂಬದ ಸದಸ್ಯರು ಬಯಸಿದಂತೆ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಸ್ಮಾರಕವು ಪ್ರವಾಸಿ ತಾಣವಾಗಬೇಕೆಂಬುದು ಎಲ್ಲರ ಆಶಯ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರ ಗೃಹಸಚಿವರು ಘನತೆಗೆ ತಕ್ಕಂತೆ ಮಾತಾಡಬೇಕು-ವೈ.ಬಿ.ಚಂದ್ರಕಾಂತ್

0

ಕಾಂಗ್ರೇಸ್ ಮತ್ತು ದಳ ಸರ್ಕಾರಗಳಿಂದ ರಾಜ್ಯ ಲೂಟಿಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ರವರು ಹೇಳಿಕೆ ನೀಡಿರುವುದು ನೋಡಿದರೆ, ಅಮಿತ್ ಷಾ ಮನೆಯಲ್ಲಿಯೇ ಸುಳ್ಳಿನ ಮಹಾರಥ ಮುರಿದುಕೊಂಡು ಬಿದ್ದಂತೆ ಕಾಣಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ. ಚಂದ್ರಕಾಂತ್ ಟೀಕಿಸಿದ್ದಾರೆ.

ಕಾಂಗ್ರೇಸ್ ಪಕ್ಷದ ನಾಯಕರು ರಾಜ್ಯವನ್ನು ಲೂಟಿ ಮಾಡಿದ್ದಾರೆಂದು ಅಮೀತ್ ಷಾ ರವರು ನೀಡಿರುವ ಹೇಳಿಕೆಯು ಭೂತದ ಬಾಯಿಯಲ್ಲಿ ಭಗವದ್ಗೀತೆ ಎನ್ನುವಂತೆ ಇದೆ. ಉತ್ತರ ಕರ್ನಾಟಕದಲ್ಲಿ ಕಳೆದ 2 ವರ್ಷಗಳಲ್ಲಿ ಅತಿವೃಷಿಯಿಂದ ಹತ್ತಾರು ಸಾವಿರ ಕುಟುಂಬಗಳು ಮನೆಮಠ ಕಳೆದುಕೊಂಡು ಅನ್ನಆಹಾರಕ್ಕಾಗಿ ಪರದಾಡಿತ್ತಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕ ನೆನಪು ಮಾಡೊಕೊಳ್ಳದ ಪ್ರದಾನಿ ನರೇಂದ್ರ ಮೋದಿ ಮತ್ತುಅಮಿತ್ ಷಾ ಜೋಡಿಗೆ ರಾಜ್ಯದಲ್ಲಿ ವಿಧಾನಸಭಾಚುನಾವಣೆ ನಡೆಯುವ ಕಾರಣಕ್ಕೆ ನೆನಪಾಗಿ ದೊಂಬರಾಟ ಮಾಡುತ್ತಿದ್ದಾರೆಂದು ವೈ. ಬಿ ಚಂದ್ರಕಾಂತ್ ಅವರು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ನಾಯಕರು ಒಂದು ಸುಳ್ಳನ್ನು ಸಾವಿರಾರು ಬಾರಿ ಹೇಳಿ ದೇಶದ ಮತ್ತು ರಾಜ್ಯದ ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ದು, ಇದೇ ಸುಳ್ಳುಗಳನ್ನು ಹೇಳಿ ಮುಂದೆಯೂ ಪುನಃ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.ಆದರೆ ಇಂತಹ ಬಿ.ಜೆ.ಪಿ ನಾಯಕರಿಗೆ ಉತ್ತರ ಕರ್ನಾಟಕದ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ.

ಬಿಜೆಪಿ ಸರ್ಕಾರದೇಶದ ಸಾವಿರಾರು ಸ್ವತ್ತುಗಳನ್ನು ಹುಡುಕಿ ಅಂಬಾನಿ ಅದಾನಿಯಂತಹ ಹಣ ಉಳ್ಳವರಿಗೆ ಮಾರಾಟ ಮಾಡಿಯಾಗಿದೆ.ಇನ್ನು ಬಾಕಿ ಉಳಿದಿರುವುದು ದೇಶ ಅಡವಿಡುವುದು ಮಾತ್ರ. ದೇಶದಜನರಿಗೆ ಬಿ.ಜೆ.ಪಿ ಸರ್ಕಾರದ ಮತ್ತುಅದರ ನಾಯಕರ ಗೋಸುಂಬೆ ಬಣ್ಣದರಾಜಕೀಯ ನಾಟಕವು ಅರಿವಿಗೆ ಬಂದಿದೆ ಎಂದು ವೈ.ಬಿ. ಚಂದ್ರಕಾಂತ್ ಅವರು ತಿಳಿಸಿದರು.

ದೇಶದ ಗೃಹಮಂತ್ರಿಯಾಗಿ ಅಮಿತ್ ಷಾ ರವರು ಘನತೆಗೆ ತಕ್ಕಂತೆ ಮಾತನಾಡಬೇಕು. ಅದನ್ನು ಬಿಟ್ಟಕಾಂಗ್ರೇಸ್ ಪಕ್ಷದೇಶವನ್ನು ಲೂಟಿ ಮಾಡಿದೆಎಂದು ಹೇಳಿರುವ ಷಾ ರವರುತಮ್ಮ ಪಕ್ಷದಇತರೆ ಭ್ರಷ್ಟ ನಾಯಕರ ಬಗ್ಗೆ ಮಾತನಾಡವುದು ಇರಲಿ ತಮ್ಮ ಮಗನ ಬಳಿ ಇರುವ ಸಾವಿರಾರುಕೋಟಿ ರೂಪಾಯಿಗಳ ಸಂಪತ್ತುಯಾವ ಮೂಲದಿಂದ ಬಂದಿದೆಎನ್ನುವ ಬಗ್ಗೆ ಮೊದಲು ಮಾತನಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ವೈ.ಬಿ. ಚಂದ್ರಕಾಂತ್ ಅವರು ಸವಾಲು ಹಾಕಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪಾಜಕದಲ್ಲಿ ಅವತರಿಸಿದ ಪವಿತ್ರ ಚೇತನ ಲೇ;ಎನ್.ಜಯಭೀಮ ಜೊಯಿಸ್

0

ಶ್ರೀ ಮಧ್ವಾಚಾರ್ಯರು:

ಒಂದು ಬಾರಿ ಸ್ಮರಣೆ ಸಾಲದೆ/ಆನಂದತೀರ್ಥರ/
ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ//
ಇದು ಶ್ರೀವಾದಿರಾಜ ಗುರುಗಳು ,ಗುರುಗಳಾದ
ಮಧ್ವಾಚಾರ್ಯರ ಬಗ್ಗೆ ಹೇಳಿರುವುದು.

ವಾಯು ಜೀವೋತ್ತಮರಾದ ಹನುಮಂತ ದೇವರ ಮೂರನೆಯ ಅವತಾರವಾದ ಮಧ್ವರಾಯರನ್ನು ಈ ಕಲಿಯುಗದಲ್ಲಿ ಒಮ್ಮೆ ಭಕ್ತಿಯಿಂದ ಸ್ಮರಣೆ ಮಾಡಿದರೆ ಭಕ್ತರನ್ನು ಅನುಗ್ರಹಿಸುತ್ತಾರೆ ಎಂದು ಹೇಳಿದ್ದಾರೆ.

ಈ ಕಲಿಯುಗದಲ್ಲಿ ಭಗವಂತನನ್ನುಒಲಿಸಿಕೊಳ್ಳುವ ಸಾಧನ ಎಂದರೆ ಅವನ ನಾಮಸಂಕೀರ್ತನೆ. ಭಕ್ತಿಯ
ಸಮರ್ಪಣೆ ಮಾಡುವುದರಿಂದ ಯತಿಗಳು,ಸಂತರು ಮತ್ತು ಹರಿದಾಸರುಗಳು ಭೂಮಿಯಲ್ಲಿ ಅವತಾರ ಮಾಡಿದ್ದೇ ಧರ್ಮ ರಕ್ಷಣೆ ಮತ್ತು ಮನುಕುಲದ ಉದ್ಧಾರಕ್ಕಾಗಿ. ಶ್ರೀಮಧ್ವರು ಕನ್ನಡ ನಾಡಿನ ಕಡಲ
ತಡಿಯ ಉಡುಪಿಯ ಹತ್ತಿರದಲ್ಲಿರುವ ಪಾಜಕಾ ಎಂಬ ಪುಟ್ಟಗ್ರಾಮದಲ್ಲಿ ಅವತರಿಸಿದವರು.

ಬಾಲ್ಯದಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ತೋರಿ
ದವರುಮಧ್ವರು. ಪ್ರತಿಭಾನ್ವಿತ ಬಾಲಕ ವಾಸು ದೇವನು ಗುರುಗಳಾದ ಅಚ್ಯುತಪ್ರಜ್ಞರ ಕಣ್ಣಿಗೆ ಬಿದ್ದರು. ವಾಸು ದೇವನಿಗೆ ಹನ್ನೊಂದನೇ ವರ್ಷದಲ್ಲಿ ಅಚ್ಯುತ ಪ್ರಜ್ಞರಿಂದ ಸನ್ಯಾ ಸದೀಕ್ಷೆ ಪಡೆದು “ಪೂರ್ಣಪ್ರಜ್ಞ” ರೆಂದು ಹೆಸರು ಪಡೆಯುತ್ತಾರೆ.

ಸನ್ಯಾಸದೀಕ್ಷೆ ಪಡೆದ ಸ್ವಲ್ಪ ಕಾಲದಲ್ಲಿಯೇ ಪಂಡಿತರುಗಳನ್ನು ವೇದಾಂತ ಚರ್ಚೆಯಲ್ಲಿ ಸೋಲಿಸಿದರು.

ಗುರುಗಳು ಇವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿ ಎಂದು ಕರೆದು “ಆನಂದತೀರ್ಥ”ರೆಂಬ
ಬಿರುದನ್ನು ಕೊಡುತ್ತಾರೆ. ವೇದದ ಬಲಿತ್ಥ ಸೂಕ್ತದಲ್ಲಿ ಇರುವ ಮಧ್ವರ ಹೆಸರನ್ನು ಆರಿಸಿಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಮಧ್ವಾಚಾರ್ಯರು ಪ್ರಚುರ ಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತಮತವೆಂದು ಪ್ರಸಿದ್ಧವಾಗಿದೆ.

ಮಧ್ವಾಚಾರ್ಯರು 13-14ನೇ ಶತಮಾನದಲ್ಲಿ ಇದ್ದವರು. ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು.ವಾಯುವಿನಅವತಾರದಲ್ಲಿ ಮೂರನೆಯ ಅವತಾರವಾಗಿ ಬಂದವರೇ ಆಚಾರ್ಯ ಮಧ್ವರು. ಮೊಟ್ಟ ಮೊದಲು ದಕ್ಷಿಣ ಭಾರತ ಪ್ರವಾಸ ಕೈಗೊಂಡರು.ಅಲ್ಲಿ ತಮ್ಮ ಸಿದ್ಧಾಂತ ತತ್ವವಾದವನ್ನು
ಪ್ರಚಾರ ಮಾಡಿದರು. ಅಲ್ಲಿಂದ ಮುಂದೆ ಉಡುಪಿಗೆ
ಬಂದು ಗೀತೆಗೆ ಭಾಷ್ಯ ಬರೆದರು. ತತ್ವವಾದದ ಸಿದ್ಧಾಂತದ ಆಧಾರದ ಮೇಲೆ 37 ಗ್ರಂಥಗಳನ್ನು
ಬರೆದರು. ಅವುಗಳನ್ನು “ಸರ್ವಮೂಲ”ಗ್ರಂಥ
ಗಳೆಂದು ಕರೆಯುತ್ತಾರೆ.

ಅವರು ಮುಂದೆ ಬದರಿಗೆ ಹೋಗಿ ವೇದವ್ಯಾಸರಿಗೆತಮ್ಮ ಗೀತಾಭಾಷ್ಯವನ್ನು ತೋರಿಸಿಅವರಮೆಚ್ಚುಗೆಗಳಿಸುತ್ತಾರೆ. ಬದರಿಯಿಂದ ಹಿಂದಿರುಗಿದ ಮೇಲೆ ಬ್ರಹ್ಮ ಸೂತ್ರ ಭಾಷ್ಯವನ್ನು ಬರೆದರು.

ಉಡುಪಿಯಲ್ಲಿ ನೆಲೆಸಿ ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು.ಮಹಾಭಾರತ ತಾತ್ಪರ್ಯ ನಿರ್ಣಯವನ್ನು ಬರೆದರು. ಋಗ್ವೇದದ 40 ಸೂಕ್ತಗಳಿಗೆ ಟೀಕೆಯನ್ನು ಬರೆದರು. ಇದೇ ಸಮಯದಲ್ಲಿ ಗೋಪಿಚಂದನ ಗೆಡ್ಡೆಯಲ್ಲಿ ಬಂದ ಕೃಷ್ಣನ ಮೂರ್ತಿ
ಯನ್ನು ಉಡುಪಿಯಲ್ಲಿ ಸ್ಥಾಪಿಸಿದರು. ಜ್ಞಾನ ಪ್ರಪಂಚಕ್ಕೆ ಶ್ರೀಮಧ್ವರ ಕೊಡುಗೆ ಅಪಾರ.

ಹರಿದಾಸರು ಶ್ರೀಮಧ್ವಾಚಾರ್ಯರನ್ನು ತಮ್ಮ ಕೃತಿ
ಗಳಲ್ಲಿ ಹಾಡಿ ಹೊಗಳಿದ್ದಾರೆ. ಶ್ರೀನಾರಾಯಣ ಪಂಡಿತಾಚಾರ್ಯರ “ಸುಮಧ್ವವಿಜಯ” ಆಚಾರ್ಯರ ಸಮಗ್ರ ಚಿತ್ರಣ ನೀಡುವ ಗ್ರಂಥ. ಶ್ರೀತ್ರಿವಿಕ್ರಮ ಪಂಡಿತಾಚಾರ್ಯರು ವಾಯುಸ್ತುತಿ ಎನ್ನುವ ಅವತಾರತ್ರಯ ಸ್ತೋತ್ರ ರಚಿಸಿದ್ದಾರೆ.

ಪರಂಪರೆಯಲ್ಲಿ ಬಂದಂತಹ ಅನೇಕ ಯತಿಗಳು ಆಚಾರ್ಯ ಮಧ್ವರನ್ನು ಹೊಗಳಿದ್ದಾರೆ.
ಹರಿದಾಸರು ವಾಯುದೇವರ ಅವತಾರಗಳಾದ
ಹನುಮ-ಭೀಮ-ಮಧ್ವರ ರೂಪಗಳಹಿರಿಮೆಗಳನ್ನು ಕೊಂಡಾಡಿದ್ದಾರೆ. ಮಧ್ವರು ಉಪದೇಶಿಸಿದ ಹರಿಸರ್ವೋತ್ತಮತ್ವ,ಪಂಚಭೇದ ತಾರತಮ್ಯದ ವಿಚಾರಗಳನ್ನುತಮ್ಮರಚನೆಗಲ್ಲಿ ವರ್ಣಿಸಿದ್ದಾರೆ.

ಗುರುಗಳಾದ ಮಧ್ವಾ ಚಾರ್ಯರನ್ನು ಕೊಂಡಾಡಿದ್ದಾರೆ.
ಸಂಗೀತ ಪಿತಾಮಹರಾದ ಪುರಂದರದಾಸರು
ಹನುಮ ಭೀಮ ಮಧ್ವರ ಬಗೆಗೆ ಹಲವು ಕೃತಿಗಳನ್ನು ರಚಿಸಿದ್ದಾರೆ.

“ಇಂಥಾತನು ಗುರುವಾದದ್ದು ನಮಗೆ ಇನ್ನೆಂಥಾ
ಪುಣ್ಯದಫಲವೋ”ಎನ್ನುವಕೃತಿಯಲ್ಲಿಭಗವಂತನನ್ನು ಸುಲಭವಾಗಿ ಕಾಣುವ ಉಪಾಯವನ್ನು ಆಚಾರ್ಯರು ತಿಳಿಸಿಕೊಟ್ಪಿದ್ದಾರೆ ಎಂದು ಪುರಂದರದಾಸರು ಹೇಳಿದ್ದಾರೆ.

ವೈಷ್ಣವ ಮತವನ್ನು ಸ್ಥಾಪಿಸಿ ಜಗತ್ತು ಸತ್ಯವೆಂದು ಸಾರಿದರು.ಪಂಚಭೇದಗಳನ್ನು ತಿಳಿಸಿಕೊಟ್ಟವರಲ್ಲಿಮಧ್ವರೇ ಆದ್ಯರು ಎಂದು ಹೇಳಿದ್ದಾರೆ.

ಭಾರತದ ವೈದಿಕ ಮತಾಚಾರ್ಯರಲ್ಲಿ ಮೊದಲು ಶ್ರೀಶಂಕರಾಚಾರ್ಯರು, ಎರಡನೆಯವರಾಗಿ ಶ್ರೀರಾಮಾನುಜಾಚಾರ್ಯರು,ನಂತರದಲ್ಲಿ ಶ್ರೀಮಧ್ವಾಚಾರ್ಯರುಕ್ರಮವಾಗಿಅದ್ವೈತ,ವಿಶಿಷ್ಟಾದ್ವೈತಮತ್ತುದ್ವೈತಮತಗಳನ್ನುಲೋಕೋದ್ಧಾರಕ್ಕಾಗಿ ಸ್ಥಾಪಿಸಿದ ಮಹಾನುಭಾವರುಗಳು.

ಶ್ರೀಮಧ್ವಾಚಾರ್ಯರ ನಂತರ 4ನೇಯ ಆಚಾರ್ಯರು ಇನ್ನೂ ಅವತರಿಸಿಲ್ಲ. ಕಾಲಕ್ರಮೇಣ
ಶ್ರೀಮಧ್ವಾಚಾರ್ಯರೇ ಕೊನೆಯವರು. ಅಂತೆಯೇ
ಅವರ ಸಿದ್ಧಾಂತವೂ ಕೊನೆಯದು. ಈ 3
ಜನ ಆಚಾರ್ಯತ್ರಯರಿಗೂ ಕನ್ನಡನಾಡೇ ಕರ್ಮ
ಭೂಮಿ.ಆದರೆ ಆಚಾರ್ಯ ಮಧ್ವರಿಗೆ ಕರ್ನಾಟಕ
ಜನ್ಮ ಭೂಮಿಯೂ ಹಾಗೂ ಕರ್ಮ ಭೂಮಿಯೂ ಆಯಿತು.ದಾರ್ಶನಿಕರು,ಸಕಲಶಾಸ್ತ್ರಗಳು,ಸಕಲ
ಭಾಷೆಗಳು,ಸಕಲಕಲೆಗಳು ಅವರಿಗೆ ಕರತಲಾ
ಮಲಕವಾಗಿದ್ದವು. ಅದಕ್ಕೆಂದೇ ಅವರನ್ನು ಪೂರ್ಣಪ್ರಜ್ಞರೆಂದು ಕರೆದಿದ್ದಾರೆ.

ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿ,ಮಠಾಧಿಪತಿಗಳನ್ನು ನೇಮಿಸಿ ಶ್ರೀಕೃಷ್ಣಪೂಜೆಯನ್ನು ಪ್ರತಿ 2 ತಿಂಗಳು ಅಷ್ಟ ಮಠದ ಯತಿಗಳು ಸರತಿಯಂತೆ ಕ್ರಮವಾಗಿ ಪೂಜೆಯನ್ನು ನೆರವೇರಿಸಿಕೊಂಡು ಹೋಗುವ ಪದ್ಧತಿಯನ್ನು ಜಾರಿಗೆ ತಂದರು.

ಶ್ರೀಮಧ್ವಾಚಾರ್ಯರು 2ನೇ ಬಾರಿ ಬದರೀ ಯಾತ್ರೆಯನ್ನು ಕೈಗೊಂಡಾಗ ಗಂಗೆಯನ್ನು ದಾಟಿ
ಹೋಗಬೇಕಾದಾಗ ಅಲ್ಲಿದ್ದ ಮುಸ್ಲಿಂ ದೊರೆ ಇವರ ಮಾತುಗಳಿಂದ ಆಕರ್ಷಿತನಾಗಿ ಇವರನ್ನು ಗೌರವಿಸುತ್ತಾನೆ.

ಮುಂದೆ ಇವರು ಬದರಿಯಲ್ಲಿ ಶ್ರೀವೇದವ್ಯಾಸರನ್ನು ಮತ್ತು ಬದರಿನಾರಾಯಣನ ದರ್ಶನ ಮಾಡಿ
ಹಿಂದಿರುಗಿ ಬರುವಾಗ ಕುರುಕ್ಷೇತ್ರದಲ್ಲಿ ದ್ವಾಪರ ಯುಗದಲ್ಲಿ ಭೀಮಸೇನ ದೇವರು ಉಪಯೋಗಿಸಿದ ಗದೆಯನ್ನು ದರ್ಶನ ಮಾಡುತ್ತಾರೆ.ಅಲ್ಲಿಂದ ಉಡುಪಿಗೆ ಬರುತ್ತಾರೆ.ಅವರು ನಂತರ ಸಂಚಾರ ಹೋದಾಗ ತ್ರಿವಿಕ್ರಮ ಪಂಡಿತಾಚಾರ್ಯರೆಂಬ ವಿದ್ವಾಂಸರು ಆಚಾರ್ಯರ ಜೊತೆ ವೇದಾಂತ ವಾದದಲ್ಲಿ ಸೋತು ಶರಣಾಗಿ ಶ್ರೀಮದಾಚಾರ್ಯರ ಶಿಷ್ಯರಾಗುತ್ತಾರೆ.

ತಮ್ಮ 79ನೇ ವಯಸ್ಸಿನಲ್ಲಿ ಪಿಂಗಲನಾಮ ಸಂವತ್ಸರ ಮಾಘ ಶುದ್ಧ ನವಮಿಯಂದು ಏಕಾಂಗಿಯಾಗಿ ಬದರಿಗೆ ತೆರಳಿದರು. ನಂತರ ಅವರನ್ನು ಯಾರೊಬ್ಬರೂ ಪ್ರತ್ಯಕ್ಷವಾಗಿ ಕಂಡವರಿಲ್ಲ ಎಂದು ತಿಳಿದುಬರುತ್ತದೆ.

ಈ ದಿನವನ್ನು ಆಚಾರ್ಯರ ಸ್ಮರಣಾರ್ಥವಾಗಿ “ಮಧ್ವನವಮಿ”ಎಂದುಆಚರಿಸಲಾಗುತ್ತದೆ. ಮಧ್ವನವಮಿಯ ಶುಭದಿನದಂದು ನಾವೂ ಆಚಾರ್ಯರಿಗೆ ಭಕ್ತಿಯ ನಮನಗಳನ್ನ ಸಲ್ಲಿಸೋಣ.

ಬರಹ: ಎನ್. ಜಯಭೀಮ್ ಜೊಯ್ಸ್

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸರ್ಜಿ ಪ್ರತಿಷ್ಠಾನದಿಂದ ನೀವು ನಮ್ಮ ಹೆಮ್ಮೆ ಸ್ಮರಣಿಕೆ ವಿತರಣೆ

0

ಶಿವಮೊಗ್ಗ:
ಶಿವಮೊಗ್ಗ ಸರ್ಜಿಫೌಂಡೇಶನ್, ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಶನ್ (ರಿ) ಹಾಗೂ ಪರೋಪಕಾರಂ, ಯೋಗಶಿಕ್ಷಣ ಸಮಿತಿ, ಆದಿಚುಂಚನಗಿರಿ ಶಾಲೆ ಸಹಕಾರದೊಂದಿಗೆ ಆದಿಚುಂಚನಗಿರಿ ಶಾಲಾ ಕ್ರೀಡಾಂಗಣದಲ್ಲಿ ನಡೆದ 8ನೇ ಆವೃತ್ತಿಯ ಬೃಹತ್ ಸೂರ್ಯಥಾನ್, ಸಾಮೂಹಿಕ 108 ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಯುವ ನೃತ್ಯ ಕಲಾವಿದರು, ಚಲನಚಿತ್ರ ನಿರ್ದೇಶಕರು, ಸಾಧಕರೆಂದು ಸರ್ಜಿ ಫೌಂಡೇಶನ್ ವತಿಯಿಂದ “ನೀವು ನಮ್ಮ ಹೆಮ್ಮೆ ಎಂಬ ಸ್ಮರಣಿಕೆ” ನೀಡಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭಧಲ್ಲಿ ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಆರುಣ್, ಮೇಯರ್ ಶಿವಕುಮಾರ್, ಯೋಗ ಗುರು ಬಾ.ಸು.ಅರವಿಂದ್, ಕರ್ನಾಟಕ ಕ್ರೀಡಾರತ್ನ ಪುರಸ್ಕೃತರು, ಯೋಗಾಚಾರ್ಯ ಅನಿಲ್‌ಕುಮಾರ್ ಹೆಚ್ ಶೆಟ್ಟರ್, ಪರೋಪಕಾರಂ ಮುಖ್ಯಸ್ಥರಾದ ಎನ್.ಎಂ.ಶ್ರೀಧರ್, ಕಣಾದ ಯೋಗ ಮತ್ತು ರಿಸರ್ಚ್ ಸೆಂಟರ್‌ನ ಅಧ್ಯಕ್ಷ ಬೆಲಗೂರು ಮಂಜುನಾಥ್, ಯೋಗ ಶಿಕ್ಷಣ ಸಮಿತಿಯ ಡಾ.ಸಂಜಯ್, ಪರೋಪಕಾರಂ ತ್ಯಾಗರಾಜ್ ಮಿತ್ಯಾಂತ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ನಮ್ಮ ಕೈಲಾದಮಟ್ಟಿಗೆ ಗಾಂಧಿ ವಿಚಾರಧಾರೆಗಳನ್ನ ಹರಡಬೇಕು- ಕಿಮ್ಮನೆ ರತ್ನಾಕರ್

0

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ರವರು ಕನ್ಯಾಕುಮಾರಿಯಿಂದ ಕಾಶ್ಮೀರವರಿಗೆ 3970 ಕಿಲೋಮೀಟರ್ ಪಾದಯಾತ್ರೆ ಮಾಡಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆ ಪೂರ್ಣವಾದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ನಗರ ಬ್ಲಾಕ್ ನಿಂದ ದಿನಾಂಕ : 30-1-2023 ಸೋಮವಾರ ಬೆಳಿಗ್ಗೆ ಹತ್ತು ಘಂಟೆಗೆ ತೀರ್ಥಹಳ್ಳಿಯ ಪಕ್ಷದ ಕಛೇರಿಯಲ್ಲಿ ಗಾಂಧಿಜಿಯವರ ಪುಣ್ಯಸ್ಮರಣೆಯ ಅಂಗವಾಗಿ ಮಹಾತ್ಮ ಗಾಂಧಿಯವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾಜಿ ಸಚಿವ ಶ್ರೀಯುತ ಕಿಮ್ಮನೆ ರತ್ನಾಕರ್ ರವರು ದೇಶದ ತ್ರಿವರ್ಣ ಧ್ವಜಾರೋಹಣ ಮಾಡಿದರು.

ಈ ಸಮಾರಂಭದಲ್ಲಿ ಭಾಗವಹಿಸಿದ ಮಾಜಿ ಸಚಿವ ಶ್ರೀಯುತ ಕಿಮ್ಮನೆ ರತ್ನಾಕರ್ ರವರು ಮಾತನಾಡಿ ಮಹಾತ್ಮ ಗಾಂಧಿ ಇಂದಿಗೂ ಎಂದಿಗೂ ಪ್ರಸ್ತುತ, ಅವರ ಬದುಕೆ ಒಂದು ಸತ್ಯದರ್ಶನ, ನಾವು ಅವರು ಬದುಕಿದ ರೀತಿ ಒಂದು ದಿನವೂ ಇರಲಾಗದು, ಆದರೆ ನಮ್ಮ ಕೈಲಾದ ಮಟ್ಟಿಗೆ ಗಾಂಧಿ ವಿಚಾರಧಾರೆಗಳನ್ನು ಹರಡಿಸಬೇಕಿದೆ‌ ಎಂದರು.

ದೇಶವನ್ನು ಬಿಜೆಪಿ ಆರ್ ಎಸ್ ಎಸ್ ಜಾತಿ ಧರ್ಮಗಳಡಿ ವಿಭಾಗಿಸುತ್ತಿರುವ ಘಳಿಗೆಯಲ್ಲಿ ರಾಜಕೀಯ ಸಂತನಂತೆ ಗೋಚರಿಸುವ ನಮ್ಮ ನಾಯಕ ಶ್ರೀಯುತ ರಾಹುಲ್ ಗಾಂಧಿ ಹಮ್ಮಿಕೊಂಡ ಐಕ್ಯತಾ ಯಾತ್ರೆ ಜನರನ್ನು ಬೆಸೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರ್ ಮಂಜುನಾಥ್ , ಪಟ್ಟಣ ಪಂಚಾಯತ್ ಸದಸ್ಯರಾದ ಗಣಪತಿ,ಮಂಜುಳಾ, ಗೀತಾ ರಮೇಶ , ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ವಿಲಿಯಮ್ ಮಾರ್ಟಿಸ್,
ಕಾಂಗ್ರೆಸ್ ಪಕ್ಷದ
ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ನ ಆಚರಣೆಯೂ ಗಾಜನೂರಿನ ಕಡೆಕಲ್ ನಲ್ಲಿ ಬ್ಲಾಕ್ ಅಧ್ಯಕ್ಷರಾದ ಮುಡುಬ ರಾಘವೇಂದ್ರರವರ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಹಾಪಕಾಮ್ಸ್ ಅಧ್ಯಕ್ಷರಾದ ಸಂತೇಕಡೂರ್ ವಿಜಯಕುಮಾರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ರಾಘವೇಂದ್ರ ಪುಟ್ಟೋಡ್ಲು ನಿಧಿಗೆ ಹೋಬಳಿ ಅಧ್ಯಕ್ಷ ಮುನಿಸ್ವಾಮಿ, ಗಾಜನೂರು ,ಮುತ್ತೂರು ಘಟಕದ ಅಧ್ಯಕ್ಷರಾದ ಪುಟ್ಟಣ್ಣ, ಮಂಜುನಾಥ್, ಗ್ರಾಮ ಪಂಚಾಯತ್ ಸದಸ್ಯರಾದ ನಾನಾ ನಾಯ್ಕ್, ಶಿವಕುಮಾರ್, ರಾಜಣ್ಣ, ತ್ಯಾಗು, ಅಲ್ಪಸಂಖ್ಯಾತ ಘಟಕದ ಪ್ರಮುಖರಾದ ಅಜೀಜ್ ಕಡೆಕಲ್, ಒಬಿಸಿ ಘಟಕದ ಪ್ರದಾನ ಕಾರ್ಯದರ್ಶಿ ಅನಿಲ್ ಉಂಬ್ಳೆಬೈಲು , ಬಿಎಲ್ಒ ರಘು
ಕಾಂಗ್ರೆಸ್ ಪಕ್ಷದ
ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪೋಷಕರು ವೈದ್ಯರ ಸಲಹೆಯಂತೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿ- ಡಾ.ಸರ್ಜಿ

0

ಶಿವಮೊಗ್ಗ : ನಗರದ ಹೊರ ವಲಯದ ತ್ಯಾವರೆ ಚಟ್ನಹಳ್ಳಿಯ ಪೇಸ್‌ ಕಾಲೇಜಿನ ಜಯ ಲಕ್ಷ್ಮಮ್ಮ ಈಶ್ವರಪ್ಪ ಸಭಾಭವನದಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್‌ ನಾಯ್ಕ್ ಅವರ ನೇತೃತ್ವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್‌ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ್‌ ನಾಯ್ಕ್ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್‌.ಅರುಣ್‌ ಸೇರಿದಂತೆ ಪೇಸ್‌ ಕಾಲೇಜಿನ ಆಡಳಿತ ಮಂಡಳಿ ಪ್ರಮುಖರು ಹಾಜರಿದ್ದರು.

ಕಿಟ್‌ ವಿತರಣಾ ಸಮಾರಂಭದ ಬಳಿಕ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ಸರ್ಜಿ ಅವರು ನವಜಾತ ಶಿಶುಗಳ ಹಾಗೂ ಅಪೌಷ್ಟಿಕ ಮಕ್ಕಳ ಆರೈಕೆ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, 5 ವರ್ಷದೊಳಗಿನ ಮಕ್ಕಳಿಗೆ ಕಬ್ಬಿಣಾಂಶ ಕಡಿಮೆ ಆಗದಂತೆ ನೋಡಿಕೊಂಡರೆ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆ. ಪೋಷಕರು ವೈದ್ಯರ ಸಲಹೆ ಸೂಚನೆಯಂತೆ ಅಗತ್ಯವಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.

ದೇಶದ 100 ಮಕ್ಕಳನ್ನು ಪರೀಕ್ಷೆಗೊಳಪಡಿಸಿದರೆ ಆ ಪೈಕಿ 60 ರಿಂದ 70 ರಷ್ಟು ಮಕ್ಕಳಲ್ಲಿ ಐರನ್‌ ಅಂಶ ಕಡಿಮೆ ಇರುತ್ತದೆ. ಐರನ್‌ ಅಂಶವನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ, ಚೆನ್ನಾಗಿ ಊಟ ಮಾಡುತ್ತಾರೆ. ಜೀರ್ಣಶಕ್ತಿಯೂ ಹೆಚ್ಚುತ್ತದೆ. ಸದೃಢವಾಗಿ ಬೆಳೆಯುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರುತ್ತಾರೆ ಎಂದರು.

ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರಕಾರದ ವಿವಿಧ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಬಹುತೇಕ ಎಲ್ಲ ಶಿಶುಗಳಿಗೂ ಜಾಂಡೀಸ್‌ ಸಾಮಾನ್ಯವಾಗಿರುತ್ತದೆ. ಇದಕ್ಕೆ ಪೋಷಕರು ಯಾವುದೇ ರೀತಿಯ ಭಯಪಡಬೇಕಿಲ್ಲ. ಅಲ್ಲದೇ ಶೀತ, ಕೆಮ್ಮು, ಜ್ವರ ಕೂಡ ಸಾಮಾನ್ಯ ಕಾಯಿಲೆ. ಈ ವಿಷಯದಲ್ಲೂ ಆತಂಕಪಡುವುದು ಬೇಡ. ಹಾಗಂತ ನಿರ್ಲಕ್ಷ್ಯ ಮಾಡುವುದೂ ಬೇಡ ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ನೂರಾರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಪ್ರಶ್ನೆಗಳಿಗೆ ಡಾ.ಧನಂಜಯ ಸರ್ಜಿ ಅವರು ಉತ್ತರಿಸಿ, ಸಲಹೆ ಸೂಚನೆ ನೀಡಿದರು.

ಕಡೆಗೂ ಕಣ್ತೆರೆದ ಸರ್ಕಾರ

0

ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ತಾಲ್ಲೂಕಿನ ಮಂಟಘಟ್ಟ ಗ್ರಾಮ ಪಂಚಾಯ್ತಿ ಕಚೇರಿ ಎದುರು ಗ್ರಾಮದ ನಿವಾಸಿ ಉಮೇಶ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ತಹಸೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಮುಖ್ಯಾಧಿಕಾರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಹಿಂಪಡೆದಿದ್ದಾರೆ.

ಉಮೇಶ್ ಅವರು ಕಳೆದ ನಾಲ್ಕು ವರ್ಷಗಳಿಂದ ರಾಜ ಕಾಲುವೆ ಒತ್ತುವರಿಯಾಗಿರುವುದರಿಂದ ತಮ್ಮ ಮನೆಗೆ ಮಳೆ ನೀರು ನುಗ್ಗುತ್ತಿದೆ. ಇದರಿಂದ ತಮಗೆ ಪ್ರತಿ ವರ್ಷ ಸಂಕಷ್ಟ ಎದುರಾಗುತ್ತಿದೆ. ಈ ಬಗ್ಗೆ 4 ವರ್ಷಗಳಿಂದಲೂ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಗ್ರಾ.ಪಂ. ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಉಮೇಶ್ ಅವರು ಉಪವಾಸ ಸತ್ಯಾಗ್ರಹಕ್ಕೆ ಕುಳಿತು 24 ಗಂಟೆಗಳಾದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಆಲಿಸದೇ ಇದ್ದುದ್ದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು.
ಜಿಲ್ಲಾ ಪಂಚಾಯ್ತಿ ಸಿಇಓ ಎನ್.ಡಿ. ಪ್ರಕಾಶ್ ಅವರ ಸೂಚನೆ ಮೇರೆಗೆ ಗ್ರಾ.ಪಂ. ಕಚೇರಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನಾಗರಾಜ್ ಹಾಗೂ ತಾಲ್ಲೂಕು ಪಂಚಾಯ್ತಿ ಇಓ ಅವಿನಾಶ್, ಪ್ರತಿಭಟನಾನಿರತ ಉಮೇಶ್‍ರವರ ಸಮಸ್ಯೆಯನ್ನು ಅಲಿಸಿದರು.

ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಚರ್ಚಿಸಿದ ಅವರು, ನಂತರ ಸ್ಥಳ ಪರಿಶೀಲನೆ ನಡೆಸಿದರು.
ರಾಜಕಾಲುವೆ ಒತ್ತುವರಿಯಾಗಿರುವುದನ್ನು ಮನವರಿಕೆ ಮಾಡಿಕೊಂಡ ತಹಸೀಲ್ದಾರ್ ಹಾಗೂ ತಾ.ಪಂ. ಇಓ, ಒತ್ತುವರಿದಾರರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಫೆಬ್ರವರಿ 6ರಂದು ಒತ್ತುವರಿ ತೆರವುಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ ಭರವಸೆ ನೀಡಿ, ಉಮೇಶ್‍ರವರಿಗೆ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಕಾಲದಲ್ಲಿ ಆರೋಗ್ಯ ತಪಾಸಣೆ ಅಗತ್ಯ-ಡಾ.ಅರುಣ್

0

ಶಿವಮೊಗ್ಗ: ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು ಎಂದು ವೈದ್ಯ ಡಾ. ವರುಣ್ ಅವರು ಹೇಳಿದರು.

ಶಿವಮೊಗ್ಗ ತಾಲೂಕಿನ ಆಯನೂರು ಹೋಬಳಿಯ ಹೊಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಸಂಗಮ್ ಹೆಲ್ತ್ ಕೇರ್ ಆಯುರ್ವೇದ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತಿಚೀನ ಜೀವನಶೈಲಿ ಹಾಗೂ ಹವಮಾನ ಬದಲಾವಣೆಯಿಂದ ಪ್ರತಿಯೊಬ್ಬರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯದ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಆರೋಗ್ಯ ಅತ್ಯಂತ ಮುಖ್ಯ. ಆರೋಗ್ಯ ಸಂಪತ್ತಿಗಿಂತ ಬೇರೆ ಸಂಪತ್ತಿಲ್ಲ. ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಗಮ್ ಹೆಲ್ತ್ ಕೇರ್ ವತಿಯಿಂದ ಪ್ರತಿ ವರ್ಷ ಶಿವಮೊಗ್ಗದ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಔಷದಿ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ರೋಟರಿ ಶಿವಮೊಗ್ಗ ಪೂರ್ವ ಹಾಗೂ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಜೊತೆ ಹೊಸೂರು ಗ್ರಾಮದಲ್ಲಿ ಶಿಬಿರ ನಡೆಸಲಾಗಿದೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯ ಕ್ಲಬ್‌ಗಳು ಉತ್ತಮ ಕೆಲಸ ಮಾಡುತ್ತಿದೆ. ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿವೆ. ಆರೋಗ್ಯದ ಶಿಬಿರದ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ ಎಂದು ಹೇಳಿದರು.

ಶಿವಮೊಗ್ಗ ತಾಲೂಕು ಆಯನೂರು ಗ್ರಾಪಂ ಹೊಸೂರು ಗ್ರಾಮದಲ್ಲಿ 300ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಹಿರೇಮಠ್, ಸಂತೋಷ್, ಮಂಜುನಾಥ್ ಕದಂ, ಅರುಣ್ ದೀಕ್ಷಿತ್, ಪ್ರಜ್ವಲ್, ಅಣ್ಣಪ್ಪ.ಆರ್, ಶರತ್ ಮೋಹನ್, ಮಾರುತಿ, ಪ್ರಕಾಶ್, ಹೊಸೂರಪ್ಪ, ಡಾ. ವರುಣ್ ಮತ್ತು ತಜ್ಞ ವೈದ್ಯರ ತಂಡ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮನಸ್ಸಿನಿಂದ ಮನಸ್ಸಿಗೆ -14

0

ಇಸ್ರೇಲ್ – ಪ್ಯಾಲಿಸ್ಟೈನ್ ಹಿಂಸಾಚಾರ ಮತ್ತೆ ಭುಗಿಲೇಳಲಿದೆ…

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ದೇಶಗಳ ಸೇಡು, ಪ್ರತೀಕಾರ ಮತ್ತು ವಿವಾದಗಳ ಇತಿಹಾಸ ಗಮನಿಸಿ ಹೇಳುವುದಾದರೆ, ಶೀಘ್ರದಲ್ಲೇ ಇಸ್ರೇಲ್ ಪ್ಯಾಲಿಸ್ಟೈನ್ ಮೇಲೆ ತೀವ್ರ ಸ್ವರೂಪದ ದಾಳಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಇಸ್ರೇಲ್ ಸರ್ಕಾರದ ತುರ್ತು ಸಂಪುಟ ಸಭೆ ನಡೆಯುತ್ತಿದೆ. ಯಾವುದೇ ಕ್ಷಣ ದಾಳಿ ಆಗಬಹುದು.

ಏಕೆಂದರೆ ಪ್ಯಾಲೆಸ್ಟೈನ್ ಪ್ರಜೆಯೊಬ್ಬನು ಇಸ್ರೇಲ್ ನೆಲದಲ್ಲಿ ಬಂದೂಕಿನಿಂದ ಮನಬಂದಂತೆ ಗುಂಡು ಹಾರಿಸಿ ಸುಮಾರು 7 ಜನರನ್ನು ಹತ್ಯೆ ಮಾಡಿದ್ದಾನೆ. ಇದಕ್ಕೆ ಒಂದು ದಿನ ಮೊದಲು ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆ 9 ಜನರನ್ನು ಹತ್ಯೆ ಮಾಡಿದೆ. ಇಸ್ರೇಲ್ ಸೇನೆ ಆ ಹಂತಕನನ್ನು ಸಹ ಹೊಡೆದುರುಳಿಸಿದೆ…..

ತನ್ನ ನೆಲದ ರಕ್ಷಣೆಗಾಗಿ ಇಸ್ರೇಲ್ ಯಾವ ಹಂತದ ಕ್ರೌರ್ಯ ಮೆರೆಯಲು ಹೇಸುವುದಿಲ್ಲ. ಅದರ ಸೇಡಿನ ಇತಿಹಾಸ ಭಯಾನಕವಾಗಿದೆ. ಒಂದು ತಲೆಗೆ ಎರಡು ತಲೆ ಎಂಬ ಸಿದ್ದಾಂತ ಅಳವಡಿಸಿಕೊಂಡಿದೆ….

ಗಾಜಾ ಪ್ರದೇಶದ ವಿವಾದ ತುಂಬಾ ಹಳೆಯದು. ಇಸ್ರೇಲ್ – ಪ್ಯಾಲಿಸ್ಟೈನ್ ನಡುವಿನ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಇನ್ನೂ ಯಾವುದೇ ರೀತಿಯ ಸಂಧಾನ ಸಾಧ್ಯವಾಗಿಲ್ಲ. ಇದೊಂದು ವಿಚಿತ್ರ ಪರಿಸ್ಥಿತಿಯಲ್ಲಿದೆ.

ಇಸ್ರೇಲ್ ಎಂಬ ಜಗತ್ತಿನ ಒಂದು ವಿಶಿಷ್ಟ ಮತ್ತು ಬಲಿಷ್ಠ ಸಕ್ರಮವಾದ ಅಕ್ರಮ ದೇಶ…..

ಭಾರತದ ಬಹಳಷ್ಟು ಜನರಿಗೆ ಇಸ್ರೇಲ್ ಎಂಬ ದೇಶದ ಬಗ್ಗೆ ತುಂಬಾ ಅಭಿಮಾನ, ಮೆಚ್ಚುಗೆ ಮತ್ತು ಪ್ರೀತಿ ಇದೆ. ಭಾರತ ಇಸ್ರೇಲ್ ಮಾದರಿಯಲ್ಲಿ ಬೆಳೆಯಬೇಕು ಎಂಬ ಆಸೆ ಇದೆ.

ಅದಕ್ಕೆ ವಿರುದ್ಧವಾಗಿ ಬಹುತೇಕ ಮುಸ್ಲಿಮರು ವಿಶ್ವದಲ್ಲಿ ಅತ್ಯಂತ ಹೆಚ್ಚು ದ್ವೇಷಿಸುವ ದೇಶ ಕೂಡ ಇಸ್ರೇಲ್ ಆಗಿದೆ. ಅದು ಸಂಪೂರ್ಣ ನಾಶವಾಗಲಿ ಎಂದು ಅವರ ಒಳ ಮನಸ್ಸು ಹೇಳುತ್ತದೆ.

ಹಾಗಾದರೆ ಏನಿದು ಇಸ್ರೇಲ್ ಎಂಬ ದೇಶದ ವಿಶೇಷತೆ.

ಇಸ್ರೇಲ್ ದೇಶದ ಮೂಲ, ಅದರ ಉಗಮ, ಧರ್ಮ, ಅಲ್ಲಿನ ಜನಜೀವನ, ವಿಶ್ವಸಂಸ್ಥೆಯ ಮಾನ್ಯತೆ, ಇಸ್ರೇಲಿಗರ ಮೇಲಿನ ಜರ್ಮನ್ ದೌರ್ಜನ್ಯ, ನಿರಾಶ್ರಿತ ಶಿಬಿರಗಳು, ಪ್ಯಾಲಿಸ್ಟೈನ್ ಆಕ್ರಮಣ ಮತ್ತು ಸಂಘರ್ಷ ಎಲ್ಲವನ್ನೂ ಗೂಗಲ್ ನಲ್ಲಿ ಓದಬಹುದು. ಆದರೆ ಇಲ್ಲಿ ಮುಖ್ಯವಾಗಿ ಇಸ್ರೇಲ್ ಮತ್ತು ಅದರ ಈಗಿನ ಪ್ರಭಾವವನ್ನು ನಾವು ಹೇಗೆ ಗ್ರಹಿಸಬಹುದು ಎಂಬುದರ ಸುತ್ತ ಒಂದು ನೋಟ…..

ಹೌದು, ಸುಮಾರು 86 ಲಕ್ಷ ಜನಸಂಖ್ಯೆ, ಸುಮಾರು 8000 ಚದರ ಮೈಲಿಯ ಚಿಕ್ಕ ದೇಶ ಇಸ್ರೇಲ್. ಆದರೆ ಅದರ ಸೈನಿಕ ಶಕ್ತಿ, ಅರ್ಥಿಕ ಶಕ್ತಿ, ತಂತ್ರಜ್ಞಾನ ವಿಶ್ವ ದರ್ಜೆಯ ಮಟ್ಟದಲ್ಲಿದೆ.

ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ, ಭಾರತದ ರಾ, ಪಾಕಿಸ್ತಾನದ ಐಏಸ್ಐ ಏಜೆನ್ಸಿಗಳಿಗಿಂತ ಇಸ್ರೇಲ್ ನ ಮೊಸಾದ್ ಎಂಬ ಬೇಹುಗಾರಿಕೆ ಸಂಸ್ಥೆ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ ಮತ್ತು ಸಾಬೀತು ಪಡಿಸಿದೆ.

ಮ್ಯೂನಿಚ್ ಒಲಂಪಿಕ್ಸ್ ನಲ್ಲಿ ಅದರ ಪುಟ್ಬಾಲ್ ಆಟಗಾರರನ್ನು ಪ್ಯಾಲಿಸ್ಟೈನ್ ಉಗ್ರರು ಮಾಡಿದ ಹತ್ಯಾಕಾಂಡ, ಮಾನವ ಇತಿಹಾಸದ ಭಯಾನಕ ಘಟನೆಗಳಲ್ಲಿ ಒಂದಾಗಿ ದಾಖಲಾಗಿದೆ.

ಅದೇ ರೀತಿ ಭಯೋತ್ಪಾದಕರಿಂದ ಇಸ್ರೇಲ್ ವಿಮಾನ ಅಪಹರಣವಾದಾಗ ಅದನ್ನು ಅದ್ಬುತ ಸಾಹಸ ಮಾಡಿ ಸಿನಿಮಾವನ್ನು ಮೀರಿಸುವ ರೀತಿಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು ಅದರ ಸಾಮರ್ಥ್ಯಕ್ಕೆ ಸಾಕ್ಷಿ.

ಇಡೀ ಇಸ್ರೇಲ್ ದೇಶವನ್ನು ಅದರ ಅಜನ್ಮ ಶತ್ರುಗಳಾದ ಮುಸ್ಲಿಂ ದೇಶಗಳು ಸುತ್ತುವರಿದಿವೆ. ಭಯೋತ್ಪಾದನೆಯ ಉತ್ತುಂಗದಲ್ಲಿರುವ ಐಸಿಸ್ ಕೂಡ ಅದರ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಅದು ಇಸ್ರೇಲ್ ದೇಶದ ಬಹುದೊಡ್ಡ ಸಾಮರ್ಥ್ಯ.

ಹಾಗಾದರೆ ಇಸ್ರೇಲ್ ಒಂದು ಶ್ರೇಷ್ಠ ದೇಶ ಎಂದು ಪರಿಗಣಿಸಬಹುದೆ ?

ಇಲ್ಲ, ಖಂಡಿತ ಇಲ್ಲ. ಇಸ್ರೇಲ್ ದೇಶದ ಅಸ್ತಿತ್ವವೇ ಒಂದು ವಿವಾದಾತ್ಮಕ ವಿಷಯ. ಅದನ್ನು ಹೊರತುಪಡಿಸಿ ಕಡಿಮೆ ಜನಸಂಖ್ಯೆಯ ಇಸ್ರೇಲ್ ಜ್ಯೂಯಿಷ್ ಜನಾಂಗವೇ ಒಂದು ಬಲಿಷ್ಠ ಅನುವಂಶೀಯ ಗುಣಗಳನ್ನು ಹೊಂದಿದೆ. ದೈಹಿಕ ಮತ್ತು ಮಾನಸಿಕ ಗಟ್ಟಿತನ ಅಪರೂಪವಾಗಿದೆ. ಅದರ ವಿದೇಶಾಂಗ ನೀತಿ ಆ ದೇಶ ಮಾತ್ರ ಅನುಸರಿಸಬಹುದಾದ ಅತ್ಯಂತ ಕಠಿಣ ನಿಯಮಗಳನ್ನು ಒಳಗೊಂಡಿದೆ. ನ್ಯಾಯ ನೀತಿ ಧರ್ಮಕ್ಕಿಂತ ಉಳಿವಿಗಾಗಿ ಎಂತಹ ಕೃತ್ಯಕ್ಕೂ ಸಿದ್ದವಾಗಿರುವುದು ಅದರ ಕಠೋರ ವಿದೇಶಾಂಗ ನೀತಿ.

ಅದನ್ನು ವಿಶ್ವದ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ, ಆಧ್ಯಾತ್ಮಿಕ ವಿಷಯದಲ್ಲಿ ಆಳವಾದ ನಂಬಿಕೆ ಇಟ್ಟಿರುವ, ಅನೇಕ ಪರಕೀಯರ ದಾಳಿಗೆ ಒಳಗಾಗಿರುವ, ವೈವಿಧ್ಯತೆ ಹೊಂದಿರುವ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ, ಬೃಹತ್ ಜನಸಂಖ್ಯೆಯ, ಅಲಿಪ್ತ ನೀತಿಯ ಭಾಗವಾಗಿರುವ ಭಾರತ ಯಾವ ಕೋನದಿಂದಲೂ ಅನುಸರಿಸಲು ಸಾಧ್ಯವಿಲ್ಲ.

ಒಬ್ಬ ಹಿಂದು ಧರ್ಮದ ವ್ಯಕ್ತಿ, ಮುಸ್ಲಿಮರನ್ನು ನಾನಾ ಕಾರಣಗಳಿಗಾಗಿ ದ್ವೇಷಿಸುವವರಾಗಿದೆ.
ಮುಸ್ಲಿಮರ ಪ್ರಬಲ ವೈರಿಯಾದ ಕಾರಣಕ್ಕೆ ಇಸ್ರೇಲ್ ಅನ್ನು ಇಷ್ಟಪಡುವುದು ಒಂದು ರೀತಿಯ ಯೋಚನೆಯಾದರೆ,
ತನ್ನ ಧರ್ಮದ ಜನರು ವಾಸಿಸುವ ಪ್ರದೇಶವನ್ನು ಅತಿಕ್ರಮಣ ಮಾಡಿರುವ ಮತ್ತು ಅವರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿರುವ ಕಾರಣಕ್ಕಾಗಿ ಮುಸ್ಲಿಮರು ಇಸ್ರೇಲನ್ನು ದ್ವೇಷಿಸುವುದು ಇನ್ನೊಂದು ರೀತಿಯದು.

ಸುಮಾರು 50 ಲಕ್ಷ ಜನಸಂಖ್ಯೆಯ ಪ್ಯಾಲಿಸ್ಟೈನ್ ಸಹ ತನ್ನ ಭೂಮಿಯ ಆಕ್ರಮಣದ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಇದೆ. ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಯಾಸರ್ ಅರಾಫತ್ ಕಾಲದಿಂದಲೂ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ. ಭಾರತದ ವಿದೇಶಾಂಗ ನೀತಿಯ ಪ್ರಕಾರ ಅದಕ್ಕೆ ಬೆಂಬಲ ಸಹ ಇದೆ. ಆದರೂ ದೀರ್ಘಕಾಲದಿಂದ ಆಗಾಗ ಹಿಂಸಾಚಾರ ಭುಗಿಲೇಳುತ್ತಲೇ ಇದೆ.

ನ್ಯಾಯ ನೀತಿ ಧರ್ಮದ ಆಧಾರದಲ್ಲಿ, ಇಸ್ರೇಲ್ ಎಂಬ ದೈತ್ಯ ಶಕ್ತಿಯ ದೇಶವನ್ನು, ಅದರ ದೌರ್ಜನ್ಯ, ಭೂಪ್ರದೇಶದ ಅತಿಕ್ರಮಣ ಮಾಡಿ ತಮ್ಮ ಅಧಿಪತ್ಯ ಸ್ಥಾಪಿಸಿರುವ ಈಗಲೂ ಎರಡೂ ಕಡೆಯ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿರುವ ವಿವಾದಾತ್ಮಕ ದೇಶವನ್ನು ಭಾರತ ಯಾವ ಕಾರಣಕ್ಕೂ ಅನುಕರಿಸಬಾರದು ಮತ್ತು ಅದು ಸಾಧ್ಯವೂ ಇಲ್ಲ. ಆದರೆ ಅದರ ಶಕ್ತಿ ಸಾಮರ್ಥ್ಯಗಳನ್ನು, ತಂತ್ರಜ್ಞಾನದ ಬಳಕೆಯನ್ನು, ಶ್ರಮಜೀವನವನ್ನು ಒಳ್ಳೆಯ ಉದ್ದೇಶಗಳಿಗಾಗಿ ನಾವು ಕಲಿಯಬಹುದು.

ಕೆಲವು ವಿಷಯಗಳಲ್ಲಿ ಇಸ್ರೇಲ್ ಅತ್ಯಂತ ಸ್ಪೂರ್ತಿದಾಯಕ ಮತ್ತು ಕೆಲವು ವಿಷಯಗಳಲ್ಲಿ ಅತ್ಯಂತ ಕಠೋರ ನೀತಿ ನಿಯಮಗಳನ್ನು ಹೊಂದಿದೆ.

ಕೆಲವು ಪ್ರತಿಭೆಗಳು ಸಾಮರ್ಥ್ಯಗಳು ಸ್ವಾಭಾವಿಕವಾಗಿ ಕೆಲವರಿಗೆ ಒಲಿದಿರುತ್ತವೆ. ಅದು ಕ್ರೀಡೆ, ಸಂಗೀತ, ರಾಜಕೀಯ, ವಿಜ್ಞಾನ, ಕಲೆ, ನಟನೆ ಏನೇ ಇರಲಿ ಅದನ್ನು ಅನುಕರಣೆ ಮಾಡುವುದಕ್ಕೆ ಬದಲಾಗಿ ಒಂದಷ್ಟು ಅಂಶಗಳನ್ನು ಅಳವಡಿಸಿಕೊಳ್ಳಬಹುದು.
ನಮ್ಮದೇ ದಾರಿಯಲ್ಲಿ ಸಾಗುವುದು ಯಾವಾಗಲೂ ಉತ್ತಮ.

ಅದೇರೀತಿ ಇಸ್ರೇಲ್ ನಮಗೆ ಆದರ್ಶ ಮತ್ತು ಎಚ್ಚರಿಕೆ ಎರಡನ್ನೂ ಹೇಳುತ್ತದೆ.

ಇಸ್ರೇಲ್ ಮತ್ತು ಪ್ಯಾಲಿಸ್ಟೈನ್ ಎರಡೂ ದೇಶಗಳು ಒಂದು ರೀತಿಯ ದೌರ್ಜನ್ಯಕ್ಕೆ ಬೇರೆ ಬೇರೆ ಕಾರಣಗಳಿಗಾಗಿ ಒಳಗಾಗಿವೆ.
ಏನೇ ಆಗಲಿ ಪ್ಯಾಲಿಸ್ಟೈನ್ ಮತ್ತು ಇಸ್ರೇಲ್ ವಿವಾದವನ್ನು ಆಧುನಿಕ ಕಾಲದ ಹೊಸ ದೃಷ್ಟಿಕೋನದಿಂದ ಮತ್ತೊಮ್ಮೆ ವಿಮರ್ಶಿಸಿ ಹೊಸ ಪರಿಹಾರ ಕಂಡುಕೊಳ್ಳಬೇಕಿದೆ. ಇತಿಹಾಸದ ನೆನಪುಗಳು ಮತ್ತು ವಾಸ್ತವಗಳು ಏನೇ ಇರಲಿ ಕನಿಷ್ಠ ಮುಂದಿನ ಪೀಳಿಗೆಗಾಗಿ ಎರಡೂ ದೇಶಗಳು ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ಅನಿವಾರ್ಯ.
ಇಲ್ಲದಿದ್ದರೆ ಹಿಂಸಾಚಾರ ಎರಡೂ ದೇಶಗಳ ನಾಶಕ್ಕೆ ಕಾರಣವಾಗುತ್ತದೆ ಮತ್ತು ಅನ್ಯಾಯವಾಗಿ ಅನೇಕ ಜೀವಗಳು ಜಾಗದ ಕಾರಣಕ್ಕೆ ಉಸಿರು ನಿಲ್ಲಿಸಬೇಕಾಗುತ್ತದೆ.

ವಿಶ್ವದ ಬಲಿಷ್ಠ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ಈ ವಿವಾದ ಬಗೆಹರಿಸಲು ಆದ್ಯತೆ ನೀಡಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

ಬರಹ:
ವಿವೇಕಾನಂದ ಎಚ್. ಕೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.