Thursday, April 2, 2026
Thursday, April 2, 2026
Home Blog Page 1322

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಅದ್ಧೂರಿ ಗಣರಾಜ್ಯೋತ್ಸವ

0

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಜಿಲ್ಲಾ ಸ್ಕೌಟ್ ಭವನ ಶಿವಮೊಗ್ಗದಲ್ಲಿ ಆಚರಿಸಲಾಯಿತು. ವಿವಿಧ ಶಾಲೆ, ಕಾಲೇಜಿನ ಕಬ್, ಬುಲ್‌ಬುಲ್, ಸ್ಕೌಟ್ಸ್, ಗೈಡ್ಸ್, ರೋರ‍್ಸ್ ಮತ್ತು ರೇಂರ‍್ಸ್ಗಳು ಭಾಗವಹಿಸಿದ್ದರು. ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ ರಮೇಶ ಶಾಸ್ತ್ರಿ ರವರು ಧ್ವಜಾರೋಹಣ ನೆರೆವೇರಿಸಿದರು.ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ನಂತರದಲ್ಲಿ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಗಣರಾಜ್ಯೋತ್ಸವದ ಮಹತ್ವವನ್ನು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿçರವರು ತಿಳಿಸಿ, ಮಾತನಾಡುತ್ತಾ ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಭಾರತದ ಪ್ರತಿಯೊಬ್ಬ ಪ್ರಜೆಯು ಸಂವಿಧಾನಕ್ಕೆ ಗೌರವಿಸಬೇಕು. ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ಆದರ್ಶವನ್ನು ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರು ಶ್ರೀ ಹೆಚ್.ಡಿ ರಮೇಶ ಶಾಸ್ತ್ರಿ ಜಿಲ್ಲಾ ಆಯುಕ್ತರು (ಸ್ಕೌ) ಶ್ರೀ ಕೆ.ಪಿ.ಬಿಂದುಕುಮಾರ್, ಜಿಲ್ಲಾ ಆಯುಕ್ತರು (ಗೈ) ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ್, ಜಿಲ್ಲಾ ಕಾರ್ಯದರ್ಶಿ ಶ್ರೀ ಹೆಚ್.ಪರಮೇಶ್ವರ್, ಸಹ ಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ, ಶ್ರೀ ರಾಜೇಶ್ ಅವಲಕ್ಕಿ, ಕೇಂದ್ರ ಸ್ಥಾನಿಕ ಆಯುಕ್ತ (ಸಾರ್ವಜನಿಕ ಸಂಪರ್ಕ) ಶ್ರೀ ಜಿ.ವಿಜಯಕುಮಾರ್, ಶಿವಶಂಕರ್.ಹೆಚ್. , ಕಾತ್ಯಯಿನಿ.ಸಿ.ಎಸ್, ಎಮ್.ಹೇಮಲತ, ಹಾಗೂ ನಗರದ ವಿವಿಧ ಶಾಲೆ, ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್  ಉಪಸ್ಥಿತರಿದ್ದರು.

ಗಡಿ ಭದ್ರತಾ ಪಡೆಯಲ್ಲಿ ಹುದ್ದೆ ಭರ್ತಿ ನೇಮಕಾತಿ ಪ್ರಕ್ರಿಯೆ

0

ಗಡಿ ಭದ್ರತಾ ಪಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 64 ಎಕ್ಸ್​- ರೇ ಅಸಿಸ್ಟೆಂಟ್​, ಸ್ಟಾಫ್ ನರ್ಸ್​​ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಫೆಬ್ರವರಿ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು.

ಹುದ್ದೆಯ ಮಾಹಿತಿ
ಸ್ಟಾಫ್​ ನರ್ಸ್​/ ಎಸ್​ಐ- 10
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- 1
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- 7
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)-40
ಕಾನ್ಸ್​ಟೇಬಲ್- 1
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 5

ವಿದ್ಯಾರ್ಹತೆ:
ಸ್ಟಾಫ್​ ನರ್ಸ್​/ ಎಸ್​ಐ- ಪಿಯುಸಿ, ಜಿಎನ್​ಎಂನಲ್ಲಿ ಡಿಪ್ಲೋಮಾ, ಪದವಿ
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- ಪಿಯುಸಿ, ಡೆಂಟಲ್ ಟೆಕ್ನಿಷಿಯನ್​ನಲ್ಲಿ ಡಿಪ್ಲೋಮಾ
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- ಪಿಯುಸಿ, ಎಂಎಲ್​ಟಿಯಲ್ಲಿ ಡಿಪ್ಲೋಮಾ
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)- 10ನೇ ತರಗತಿ, ಡಿಪ್ಲೋಮಾ
ಕಾನ್ಸ್​ಟೇಬಲ್- 10 ನೇ ತರಗತಿ, ಡಿಪ್ಲೋಮಾ
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 10ನೇ ತರಗತಿ, ಡಿಪ್ಲೋಮಾ

ವಯೋಮಿತಿ:
ಸ್ಟಾಫ್​ ನರ್ಸ್​/ ಎಸ್​ಐ- 21 ರಿಂದ 30 ವರ್ಷ
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- 18 ರಿಂದ 25 ವರ್ಷ
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- 18 ರಿಂದ 25 ವರ್ಷ
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)- 18 ರಿಂದ 25 ವರ್ಷ
ಕಾನ್ಸ್​ಟೇಬಲ್- 18 ರಿಂದ 23 ವರ್ಷ
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- 18 ರಿಂದ 23 ವರ್ಷ

ವೇತನ:
ಸ್ಟಾಫ್​ ನರ್ಸ್​/ ಎಸ್​ಐ- ಮಾಸಿಕ ₹35,400-1,12,400
ಡೆಂಟಲ್ ಟೆಕ್ನಿಷಿಯನ್/ ಎಎಸ್​​ಐ- ಮಾಸಿಕ ₹ 29,200-92,300
ಲ್ಯಾಬ್​ ಟೆಕ್ನಿಷಿಯನ್/ ಎಎಸ್​​ಐ- ಮಾಸಿಕ ₹ 29,200-92,300
ಜೂನಿಯರ್ ಎಕ್ಸ್​​-ರೇ ಅಸಿಸ್ಟೆಂಟ್ (ಹೆಡ್​​ ಕಾನ್ಸ್​ಟೇಬಲ್​)-ಮಾಸಿಕ ₹ 25,500-81,100
ಕಾನ್ಸ್​ಟೇಬಲ್- ಮಾಸಿಕ ₹ 21,700-69,100
ಸಿಟಿ (ವಾರ್ಡ್​ ಬಾಯ್/ ವಾರ್ಡ್​ ಗರ್ಲ್​/ ಆಯಾ)- ಮಾಸಿಕ ₹ 21,700-69,100

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ
ಫಿಜಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 22, 2023

1500 ಪದವೀಧರ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಸಜ್ಜು

0

ರಾಜ್ಯದಲ್ಲಿ ಈಗಾಗಲೇ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶಿಕ್ಷಣ ಇಲಾಖೆಯು ಸಜ್ಜಾಗಿದೆ.

ಸದ್ಯದಲ್ಲಿಯೇ 2000 ಪ್ರೌಢಶಾಲಾ ಶಿಕ್ಷಕರು ಹಾಗೂ 750 ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮವಹಿಸಲಾಗುತ್ತದೆ ಎಂದು ಸಾಕ್ಷರತಾ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು,
ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸಿದ್ಧತೆ ಮತ್ತು ನಿಯಮಾವಳಿ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಜನವರಿ ಮೊದಲ ವಾರದಲ್ಲಿ ಶಿವಮೊಗ್ಗದಲ್ಲಿ ಮಾತನಾಡಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರ ಇರುವಾಗ ಸುಮಾರು 3 ಸಾವಿರಕ್ಕೂ ಅಧಿಕವಾಗಿ ಶಿಕ್ಷಕರ ನೇಮಕಾತಿ ಮಾಡಲಾಗಿತ್ತು.

ನಂತರ ಸುಮಾರು 13,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಇನ್ನು ಫೆಬ್ರವರಿಯಲ್ಲಿ ಸುಮಾರು 2,500 ಪ್ರೌಢ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉದ್ಯೋಗ ವಾರ್ತೆ ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯೋಲಜಿ ಸಂಸ್ಥೆ

0

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 12 ಸೀನಿಯರ್ ರಿಸರ್ಚ್​ ಫೆಲೋ, ಪ್ರಾಜೆಕ್ಟ್​ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಹಾಕಬೇಕು. ಫೆಬ್ರವರಿ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫರ್ಮ್ಯಾಟಿಕ್ಸ್

ಹುದ್ದೆ : ಸೀನಿಯರ್ ರಿಸರ್ಚ್​ ಫೆಲೋ, ಪ್ರಾಜೆಕ್ಟ್​ ಅಸೋಸಿಯೇಟ್

ಒಟ್ಟು ಹುದ್ದೆ 12

ವಿದ್ಯಾರ್ಹತೆ: ಬಿ.ಟೆಕ್, ಎಂ.ಟೆಕ್

ವೇತನ: ಮಾಸಿಕ ₹ 20,000-35,000

ಉದ್ಯೋಗದ ಸ್ಥಳ : ಬೆಂಗಳೂರು

ಅರ್ಜಿ ಸಲ್ಲಿಸಲು ಕೊನೆಯ ದಿನ ಫೆಬ್ರವರಿ 13, 2023

ಹುದ್ದೆಯ ಮಾಹಿತಿ:
ಸೀನಿಯರ್ ರಿಸರ್ಚ್​ ಫೆಲೋ- 3

ಪ್ರಾಜೆಕ್ಟ್​ ಅಸೋಸಿಯೇಟ್-1
ಫೀಲ್ಡ್​ ಅಸಿಸ್ಟೆಂಟ್-1
ಯಂಗ್​ ಪ್ರೊಫೆಶನಲ್-3
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್-1

ಆಫೀಸ್ ಅಸಿಸ್ಟೆಂಟ್-1
ಅಸಿಸ್ಟೆಂಟ್ ಮ್ಯಾನೇಜರ್-1
ಬ್ಯುಸಿನೆಸ್ ಎಕ್ಸಿಕ್ಯೂಟಿವ್-1

ವಿದ್ಯಾರ್ಹತೆ:
ಸೀನಿಯರ್ ರಿಸರ್ಚ್​ ಫೆಲೋ- ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಬಯೋಇನ್ಫರ್ಮ್ಯಾಟಿಕ್ಸ್, ಬಯೋಟೆಕ್ನಾಲಜಿ,

ಅಂಕಿಅಂಶಗಳಲ್ಲಿ ಎಂ.ಟೆಕ್
ಪ್ರಾಜೆಕ್ಟ್​ ಅಸೋಸಿಯೇಟ್- ಎಂಜಿನಿಯರಿಂಗ್‌ನಲ್ಲಿ ಪದವಿ, ನ್ಯಾಚುರಲ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ, ಬಯೋಇನ್ಫರ್ಮ್ಯಾಟಿಕ್ಸ್,

ಬಯೋಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್
ಫೀಲ್ಡ್​ ಅಸಿಸ್ಟೆಂಟ್- ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ, ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಬಯೋ-ಇನ್‌ಫರ್ಮ್ಯಾಟಿಕ್ಸ್‌ನಲ್ಲಿ ಪದವಿ
ಯಂಗ್​ ಪ್ರೊಫೆಶನಲ್- ಪದವಿ, ಲೈಫ್ ಸೈನ್ಸ್,

ಬಯೋಟೆಕ್ನಾಲಜಿ, ಮೈಕ್ರೋಬಯಾಲಜಿ, ಮಾಲಿಕ್ಯುಲರ್ ಬಯಾಲಜಿ, ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್, ಆಫೀಸ್ ಅಸಿಸ್ಟೆಂಟ್- ಪಿಯುಸಿ

ಪಿಯುಸಿ
ಅಸಿಸ್ಟೆಂಟ್ ಮ್ಯಾನೇಜರ್- ಸ್ನಾತಕೋತ್ತರ ಪದವಿ, M.Tech, MBA
ಬ್ಯುಸಿನೆಸ್ ಎಕ್ಸಿಕ್ಯೂಟಿವ್- B.Tech, ಸ್ನಾತಕೋತ್ತರ ಪದವಿ, MBA, MCA, M.Sc, M.A

ವಯೋಮಿತಿ:
ಸೀನಿಯರ್ ರಿಸರ್ಚ್​ ಫೆಲೋ- 35 ವರ್ಷ
ಪ್ರಾಜೆಕ್ಟ್​ ಅಸೋಸಿಯೇಟ್-35 ವರ್ಷ

ಫೀಲ್ಡ್​ ಅಸಿಸ್ಟೆಂಟ್- 50 ವರ್ಷ
ಯಂಗ್​ ಪ್ರೊಫೆಶನಲ್- 21-45 ವರ್ಷ

ಲ್ಯಾಬ್ ಸಪೋರ್ಟಿಂಗ್ ಸ್ಟಾಫ್- 18-28 ವರ್ಷ
ಆಫೀಸ್ ಅಸಿಸ್ಟೆಂಟ್- 18-28 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- 25-45 ವರ್ಷ
ಬ್ಯುಸಿನೆಸ್ ಎಕ್ಸಿಕ್ಯೂಟಿವ್- 25-30 ವರ್ಷ

ಸೀನಿಯರ್ ರಿಸರ್ಚ್​ ಫೆಲೋ ಹುದ್ದೆಗೆ ಅರ್ಜಿ ಹಾಕುವ ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಸೀನಿಯರ್ ರಿಸರ್ಚ್​ ಫೆಲೋ- ಮಾಸಿಕ ₹ 20,000-35,000
ಪ್ರಾಜೆಕ್ಟ್​ ಅಸೋಸಿಯೇಟ್- ಮಾಸಿಕ ₹ 20,000-35,000
ಫೀಲ್ಡ್​ ಅಸಿಸ್ಟೆಂಟ್- ಮಾಸಿಕ ₹ 20,000

ಯಂಗ್​ ಪ್ರೊಫೆಶನಲ್- ಮಾಸಿಕ ₹ 20,000
ಲ್ಯಾಬ್ ಸಪೋರ್ಟಿಂಗ್ ಸ್ಟಾಫ್- ಮಾಸಿಕ ₹ 35,000
ಆಫೀಸ್ ಅಸಿಸ್ಟೆಂಟ್- ಮಾಸಿಕ ₹ 15,000
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 70,000
ಬ್ಯುಸಿನೆಸ್ ಎಕ್ಸಿಕ್ಯೂಟಿವ್- ಮಾಸಿಕ ₹ 30,000

ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್
ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ICAR-NIVEDI
ರಾಮಗೊಂಡನಹಳ್ಳಿ
ಯಲಹಂಕ
ಬೆಂಗಳೂರು-560064

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/01/2023
ಅರ್ಜಿ ಸಲ್ಲಿಸಲು ಕೊನೆ ದಿನ: ಫೆಬ್ರವರಿ 13, 2023

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ನಾವು ಸಮಾನವಾಗಿ ಬಾಳಲು ಸಂವಿಧಾನವೇ ಅವಕಾಶ ನೀಡಿದೆ-ಡಾ ಅರುಣ್

0

74ನೇ ಗಣರಾಜ್ಯೋತ್ಸವವನ್ನು ಭಾರತೀಯ ವೈದ್ಯಕೀಯ ಸಂಘದಿಂದ ಇಂದು ಧ್ವಜಾರೋಹಣ ಮತ್ತು ಐಎಂಎ ಸದಸ್ಯರ ಪುಟ್ಟ ಮಕ್ಕಳ ಛದ್ಮ ವೇಷದೊಂದಿಗೆ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು .

ಸಮಾರಂಭದ ಅಧ್ಯಕ್ಷತೆಯನ್ನು ಡಾ . ಅರುಣ್ ಎಂ ಎಸ್ ವಹಿಸಿ , ನಾವು ಸಮಾನತೆಯಿಂದ, ಎಲ್ಲ ವರ್ಗದ ಜನರು ಸಮಾನವಾಗಿ ಬದುಕುತ್ತಿರುವುದೇ ಸಂವಿಧಾನ ಜಾರಿಗೆ ಬಂದಿದ್ದರಿಂದ. ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು ಎಂದು ನೆನೆದರು.

ವೈದ್ಯರಾಗಿ ನಾವೆಲ್ಲರೂ ದೇಶದ , ಸಮಾಜದ ಆರೋಗ್ಯ ಸೇವೆಯಲ್ಲಿ ಇನ್ನು ಹೆಚ್ಚು ಮನಃಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಎಂದು ನೆರೆದಿರುವ ಎಲ್ಲ ಸದಸ್ಯರಿಗೂ ಕರೆಕೊಟ್ಟರು.

ಗಣರಾಜ್ಯೋತ್ಸವದ ದೆಹಲಿಯ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ‘ನಾರಿ ಶಕ್ತಿʼ ಸ್ತಬ್ಧಚಿತ್ರವನ್ನು ನೆನೆಯುತ್ತ , ಐಎಂಎ ಮಹಿಳಾ ವೈದ್ಯರ ಸಮಿತಿ ಹಾಗು ಆಸ್ಪತ್ರೆ ಮಂಡಳಿ ಸಮಿತಿಯ ಉದ್ಘಾಟನೆ ಈ ಸಂದರ್ಭದಲ್ಲಿ ನಡೆಸಲಾಯಿತು.

ಕಾರ್ಯದರ್ಶಿ ಡಾ . ರಕ್ಷಾ ರಾವ್ ಹಾಗು ಖಜಾಂಚಿ ಡಾ .ಶಶಿಧರ್ ಹಾಗು ಎಲ್ಲಾ ಐಎಂಎ ಸದಸ್ಯರು ಉಪಸ್ಥಿತರಿದ್ದರು .

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯ ಮುಕ್ತ ವಿವಿ ಪದವಿ ಪ್ರವೇಶಾತಿ ಪ್ರಕಟಣೆ

0

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು., ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ 2022-23ನೇ ಶೈಕ್ಷಣಿಕ ಜನವರಿ ಸಾಲಿನಲ್ಲಿ ಯುಜಿಸಿಯ ಮಾನ್ಯತೆಯೊಂದಿಗೆ ದಿನಾಂಕ: 12.01.2022 ರಿಂದ ದಿನಾಂಕ: 31.02.2023 ರ ವರೆಗೆ ಪ್ರಥಮ ವರ್ಷದ ಬಿ.ಎ/ಬಿ.ಕಾಂ/ ಬಿ.ಬಿ.ಎ/ ಬಿ.ಸಿ.ಎ/ ಬಿ.ಎಸ್ಸಿ/ ಬಿ.ಎಲ್,ಐಎಸ್ಸಿ, ಪದವಿ ಹಾಗೂ ಎಂ.ಎ/ಎಂ.ಕಾಂ,/ಎಂ‌ಎಲ್,ಐಎಸ್ಸಿ ಮತ್ತು ಎಂ,ಎಸ್‌ಸ್ಸಿ, ಎಂ.ಬಿ.ಎ ಸ್ನಾತಕೋತ್ತರ ಪದವಿ ಹಾಗೂ ಪಿ.ಜಿ ಡಿಪ್ಲೋಮ, ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸಗಳ ಪ್ರವೇಶಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಗಳನ್ನು ನೇರವಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಭರ್ತಿಮಾಡಿ ಆಲ್ಕೊಳ ಸರ್ಕಲ್ ಹತ್ತಿರ ಇರುವ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಗೆ ಭೇಟಿ ನೀಡಬಹುದು ಹಾಗೂ ದೂರವಾಣಿ ಸಂಖ್ಯೆ 0818208-250367 ಮೊ: ೯೧೬೪೪೬೭೧೩೧,916446713295, 9480765905ಗೆ ಸಂರ್ಪಕಿಸುವುದು.
ಮಹಿಳಾ ಬಿ.ಪಿ.ಎಲ್ ವಿದ್ಯಾರ್ಥಿನಿಯರಿಗೆ 15% ಶುಲ್ಕ ವಿನಾಯಿತಿ ಹಾಗೂ ಆಟೋ ಹಾಗೂ ಕ್ಯಾಬ್ ಚಾಲಕರು ಹಾಗೂ ಅವರ ಮಕ್ಕಳಿಗೆ ೩೦% ಶುಲ್ಕ ವಿನಾಯಿತಿ ಇರುತ್ತದೆ.

ಡಿಫೆನ್ಸ್ / ಎಕ್ಸ್-ಸರ್ವಿಸ್‌ಮನ್‌ಗಳಿಗೆ ಪ್ರವೇಶಾತಿ ಶುಲ್ಕ ವಿನಾಯಿತಿ ಇರುತ್ತದೆ. ಕೋವಿಡ್‌ನಿಂದ ಮೃತರಾದ ಪೋಷಕರ ಮಕ್ಕಳಿಗೆ ಹಾಗು ದೃಷ್ಠಿಹೀನ ಅಂದ ಮಕ್ಕಳಿಗೆ ಮತ್ತು ತೃತೀಯ ಲಿಂಗಿಗಳಿಗೆ ಪ್ರವೇಶಾತಿಯ ಪೂರ್ಣ ಶುಲ್ಕ ವಿನಾಯಿತಿ ಇದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಶೇಕಡ ೨೫% ಶುಲ್ಕ ವಿನಾಯಿತಿ ಇರುತ್ತದೆ. ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಿಯ ಕಲಿಕಾರ್ಥಿ ಸಹಾಯ ಕೇಂದ್ರಗಳಾದ ಡಿವಿಎಸ್ ಕಾಲೇಜು ಶಿವಮೊಗ್ಗ ಮತ್ತು ಹೊಯ್ಸಳ ಕಾಲೇಜು ಹಾಗೂ ತುಂಗ ಕಾಲೇಜು ತಿರ್ಥಹಳ್ಳಿ, ಸಾಗರದ ಎಲ್.ಬಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಧಾರ್ಮಿಕ ಸ್ಥಳಗಳ ಸಮೀಪ ಮದ್ಯದಂಗಡಿ ಸ್ಥಾಪನೆ ಆರೋಗ್ಯಕರ ಸಮಾಜದ ಲಕ್ಷಣವಲ್ಲ- ಆರಗ ಜ್ಞಾನೇಂದ್ರ

0

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸ್ಥಳಗಳ ಸಮೀಪದಲ್ಲಿ ಮದ್ಯದಂಗಡಿಗಳು ತಲೆ ಎತ್ತುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜಿಲ್ಲಾ ಅಬಕಾರಿ ಅಧೀಕ್ಷಕರಿಗೆ ಸೂಚಿಸಿದರು.

ಅವರು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ರಾಜ್ಯ ರೇಷ್ಮೇ, ಯುಸ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ||ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ 2022ರ ಮಾಸಾಂತ್ಯದವರೆಗಿನ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ಸೊರಬದ ಮುಖ್ಯರಸ್ತೆಯಲ್ಲಿರುವ ಶ್ರೀ ರಂಗನಾಥ ದೇವಾಲಯದ ಸಮೀಪದಲ್ಲಿಯೂ ಮದ್ಯದಂಗಡಿ ಆರಂಭಕ್ಕೆ ಅನುಮತಿ ನೀಡಲಾಗಿದೆ.
ಇದನ್ನೂ ಸಹ ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದರು.

ಮದ್ಯದಂಗಡಿಗಳಿಗೆ ಈಗಾಗಲೇ ನೀಡಿರುವ ಇಂತಹ ಘಟಕಗಳ ಅನುಮತಿಯನ್ನು ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಆದರೆ, ಸದರಿ ಅಂಗಡಿಗಳ ಮಾಲೀಕರು ನ್ಯಾಯಾಲಯದಲ್ಲಿ ಪ್ರಶ್ನಿಸಿರುವುದರಿಂದ ನ್ಯಾಯಾಲಯದ ತೀರ್ಪಿನ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಸಚಿವರಿಗೆ ತಿಳಿಸಿದರು.

ಗ್ರಾಮೀಣ ರೈತರು ಬೆಳೆವಿಮೆ ಮಾಡಿಸುವಲ್ಲಿ ಹಿಂದೆ ಸರಿಯುತ್ತಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಕೃಷಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ ವಿಮೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಅವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಈ ಹಿಂದೆ ಬೆಳೆ ವಿಮೆ ಮಾಡಿಸುವುದು ಕಡ್ಡಾಯವಾಗಿತ್ತು. ಆದರೆ, ಕಳೆದ ಸಾಲಿನಿಂದ ಬೆಳೆ ರೈತರ ವಿವೇಚನೆಗೆ ಬಿಟ್ಟ ಕಾರಣ ಬೆಳೆ ವಿಮೆ ಮಾಡಿಸುವಲ್ಲಿ ರೈತರು ಹಿಂದೆ ಸರಿಯುವಂತಾಗಿದೆ ಎಂದವರು ಸಭೆಗೆ ತಿಳಿಸಿದರು.

ಜಿಲ್ಲೆಯ ತೀರ್ಥಹಳ್ಳಿ ಸೇರಿದಂತೆ ವಿವಿಧ ಕ್ವಾರಿಗಳಿಂದ ಮರಳನ್ನು ಅಕ್ರಮ ಸಾಗಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಮಾತ್ರವಲ್ಲ ಸಾರ್ವಜನಿಕರ ಅನುಕೂಲಕ್ಕೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಅಗತ್ಯವಿರುವೆಡೆಗಳಲ್ಲಿ ಚೆಕ್‌ಪೋಸ್ಟ್ಗಳನ್ನು ನಿರ್ಮಿಸಿ ಅಕ್ರಮವನ್ನು ತಡೆಗಟ್ಟುವಂತೆ ಹಾಗೂ ಸದರಿ ಕ್ವಾರಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಅದರ ಚಿತ್ರಿತ ಭಾಗಗಳನ್ನು ಮಾಹೆಯಾನ ಸಂಬಂಧಿಸಿದ ವ್ಯಾಪ್ತಿಯ ಪೊಲೀಸ್ ಠಾಣೆಗೆ ತಲುಪಿಸಬೇಕು ಎಂದು ಗೃಹ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳನ್ನು ನಿಯೋಜಿಸಿ, ಅಕ್ರಮ ಮರಳು ಸಾಕಾಣಿಕೆಯನ್ನು ನಿಯಂತ್ರಿಸಲು ಕ್ರಮ ವಹಿಸಲಾಗುವುದು ಎಂದರು.

ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನ್ನಟ್ಟಿ ಗೌರಿಕೆರೆಗೆ ಹೋಗುವ ರಸ್ತೆಗೆ ನಡೆಸಲಾಗಿರುವ ರಸ್ತೆ ಕಾಮಗಾರಿ ಅತ್ಯಲ್ಪ ಅವಧಿಯಲ್ಲಿ ನಾಶವಾಗಿರುವುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಪ್ರಶ್ನಿಸಿ, ಸಂಬAಧಿಸಿದ ಅಧಿಕಾರಿಗಳು ಉತ್ತರಿಸುವಂತೆ ಒತ್ತಾಯಿಸಿದರು.

ಈ ಬಗ್ಗೆ ಕಾರ್ಪೋರೇಶನ್‌ನ ಇಂಜಿನಿಯರ್ ಅವರಿಂದ ಸಮಗ್ರ ತನಿಖೆ ನಡೆಸಿ, ೧೫ದಿನಗಳಲ್ಲಿ ವರದಿ ಪಡೆದು, ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಶಾಸಕರಿಗೆ ತಿಳಿಸಿದರು.

ಸಭೆಯಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಕುಮಾರ್ ಬಂಗಾರಪ್ಪ, ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ರುದ್ರೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್‌ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

0

ತ್ರಿವಿಧ ದಾಸೋಹದ ಮೂಲಕ ದೇಶದಲ್ಲಿ ಬಸವತತ್ವ ಬಿತ್ತಿ ಇತಿಹಾಸ ದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸುವಂತಹ ಸಾಧನೆ ಮಾಡಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮನುಕುಲಕ್ಕೆ ಮಾದರಿ ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಹೇಳಿದರು.
ಪಟ್ಟಣದಲ್ಲಿ ಗೋಣಿಬೀಡು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ರವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ದಾಸೋಹ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು..

ಶಿವಕುಮಾರ ಸ್ವಾಮೀಜಿಯವರು ಇಡೀ ಜೀವಿತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು. ಶ್ರೀ ಗಳು ಜಾತಿ, ಧರ್ಮ, ಭೇದ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದ ಮಹಾನೀಯರು. ಅನ್ನ, ವಸತಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಉಮಾ ಮೋಹನ್ ಸ್ವಾಮೀಜಿಯು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮೂಡಿಸಿದವರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಬಿವೃದ್ದಿಗೂ ಕೊಡುಗೆ ನೀಡಿರುವ ಜೊತೆಗೆ ಜ್ಯಾತ್ಯತೀತ ತತ್ವ ಮೈಗೂಡಿಸಿಕೊಂಡ ಶ್ರೀಗಳು ನಿಜಕ್ಕೂ ಪವಾಡ ಪುರುಷರು ಎಂದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನ ಟ್ರಸ್ಟಿಗಳಾದ ಸಿ.ಸಿ.ರಾಜಣ್ಣ, ಅಶ್ವಿನಿ, ಹೇಮ, ಪ್ರಸನ್ನ, ಪುನೀತ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮೂಡಿಗೆರೆ ಕ್ಷೇತ್ರ ಮೋಟಮ್ಮ ಅವರಿಗೆ ಟಿಕೆಟ್ ನೀಡಲು ಒತ್ತಾಯ

0

ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸಂಘಟನೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ನಯನ ಮೋಟಮ್ಮ ಅವರಿಗೆ ಟಿಕೇಟ್ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯಾತಾ ಚಾಲನಾ ಸಮಿತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ಸಂಬಂಧ ಜಿಲ್ಲೆಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಮೂಡಿಗೆರೆ ಕ್ಷೇತ್ರದಲ್ಲಿ ನಿರಂತರವಾಗಿ ಹಳ್ಳಿಗಳಿಗೆ ತೆರಳಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆನ್ನುಲುಬಾಗಿ ನಿಂತು ಪಕ್ಷ ಸಂಘಟಿಸುತ್ತಿರುವ ನಯನ ಅವರಿಗೆ ಟಿಕೇಟ್ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೂಡಿಗೆರೆಯ ದಲಿತ ಕೇರಿಗಳಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆಯ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿ ಜನತೆಯ ವಿಶ್ವಾಸವನ್ನು ಪಡೆದುಕೊಂಡು ಸ್ಪಂದಿಸುವ ಕಾರ್ಯ ದಲ್ಲಿ ತೊಡಗಿರುವ ನಯನ ಮೋಟಮ್ಮ ಅವರಿಗೆ ಈ ಬಾರಿ ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮತದಾರರಲ್ಲಿ ಸಕ್ರೀಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು-ನ್ಯಾ.ಮಲ್ಲಿಕಾರ್ಜುನ ಗೌಡ

0

ಮತದಾನದ ಹಕ್ಕು ಅತ್ಯಂತ ಮಹತ್ವದ ಹಕ್ಕಾಗಿದ್ದು, ಸೂಕ್ತವಾದ ವ್ಯಕ್ತಿಗೆ ಮತವನ್ನು ದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಗುಲಾಮರಂತೆ ಇದ್ದ ನಮಗೆ ಸ್ವಾತಂತ್ರ್ಯಾನಂತರ ನಮ್ಮದೇ ಆದ ಸಂವಿಧಾನ ರಚಿಸಿ, ನಮ್ಮ ನಾಯಕರನ್ನು ಆರಿಸಲು ಮತದಾನದ ಹಕ್ಕನ್ನು ನೀಡಲಾಯಿತು.

ಈ ಮತದಾನದ ಹಕ್ಕು ಅತ್ಯಂತ ಮಹತ್ವವಾದ ಹಕ್ಕು. ದಾನ ಎಂದರೆ ಯಾವುದೇ ಅಪೇಕ್ಷೆ ಇಲ್ಲದೆ ಪಾತ್ರರಿಗೆ ನೀಡುವುದು. ದಾನ ಅಪಾತ್ರರಿಗೆ ನೀಡಬಾರದು. ಹೀಗೆ ನೀಡಿದರೆ ಪಾಪ ಬರುತ್ತದೆ. ಪಾತ್ರರಿಗೆ ದಾನ ನೀಡಿದಲ್ಲಿ ಮಾತ್ರ ಪುಣ್ಯ ಬರುತ್ತದೆ. ಆದರೆ ಮತವನ್ನು ಮಾರಾಟ ಮಾಡುವ ಸ್ಥಿತಿ ಬಂದಿರುವುದು ದುರಂತ ಎಂದು ಖೇದ ವ್ಯಕ್ತಪಡಿಸಿದರು.

ನಾವು ಎಂತಹ ವ್ಯಕ್ತಿಗೆ ನಮ್ಮ ಅಮೂಲ್ಯವಾದ ಮತವನ್ನು ನೀಡುತ್ತಿದ್ದೇವೆ ಎಂದು ಎಲ್ಲರೂ ಯೋಚಿಸಬೇಕು. ನಮ್ಮನ್ನೆಲ್ಲ ಶಾಂತಿ-ಸುವ್ಯವಸ್ಥೆಯಿಂದ ಒಗ್ಗೂಡಿಸಿಕೊಂಡು ಹೋಗುವ, ದಕ್ಷ ಆಡಳಿತಗಾರನಾಗುವ ಗುಣವುಳ್ಳ ಅಭ್ಯರ್ಥಿಗೆ ನಮ್ಮ ಮತವನ್ನು ನೀಡಬೇಕು. ಯುವಜನತೆ ಈ ಬಗ್ಗೆ ವಿವೇಚನೆಯಿಂದ ಮತ ಚಲಾಯಿಸಬೇಕು. ನಾವು ಉತ್ತಿದ್ದನ್ನೇ ಬೆಳೆಯುತ್ತೇವೆ ಹಾಗೂ ಕೊಟ್ಟ ಮತವನ್ನು ವಾಪಸ್ ಪಡೆಯಲು ಅವಕಾಶವಿಲ್ಲ ಹಾಗಾಗಿ ಉತ್ತಮ ವ್ಯಕ್ತಿಗೆ ಮತ ನೀಡಬೇಕು. ಹಾಗೂ ಎಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಮಾತನಾಡಿ, ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಮೈಲಿಗಲ್ಲಾಗಿದ್ದು, ಎಲ್ಲ ಅರ್ಹ ಮತದಾರರು ಸ್ಥಳೀಯ, ವಿಧಾನಸಭಾ, ಲೋಕಸಭೆ, ಪರಿಷತ್ ಹೀಗೆ ಎಲ್ಲ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ನಾವು ದಕ್ಷ ಆಡಳಿತಗಾರರನ್ನು ಆರಿಸಲು ಸಾಧ್ಯ.

ಸಾಕ್ಷರರೇ ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ನಾನು ಎಲ್ಲ ಯುವ ಮತದಾರರಲ್ಲಿ ಕೋರುತ್ತೇನೆ ಏನೆಂದರೆ, 18 ವರ್ಷ ತುಂಬಿದ ಎಲ್ಲ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈಗ ಸುಲಭವಾಗಿ ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಬಹುದು. ಕೇವಲ ಜನ್ಮದಿನಾಂಕ, ವಿಳಾಸದ ದೃಢೀಕರಣ ಮತ್ತು ಫೋಟೊ ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಲು ನಮೂನೆ-6, ಮರಣ, ಸ್ಥಳಾಂತ, ಪುನರಾವರ್ತನೆಯ ಕಾರಣಕ್ಕೆ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ವಿಳಾಸ, ವರ್ಗಾವಣೆ, ಬದಲಿ ಎಪಿಕ್ ಇತರೆ ತಿದ್ದುಪಡಿಗಾಗಿ ನಮೂನೆ-8 ರಲ್ಲಿ ಅರ್ಜಿ ನೀಡಿ ಆ್ಯಪ್‍ನಲ್ಲೇ ಸರಿಪಡಿಸುವ ಅವಕಾಶ ಇದೆ. ಯುವಜನತೆ ಇದರ ಉಪಯೋಗ ಮಾಡಿಕೊಂಡು ಇತರರಿಗೂ ತಿಳಿಸಿಕೊಡಬೇಕು ಎಂದು ತಿಳಿಸಿದ ಅವರು ಪ್ರತಿ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವ ಹಾಗೂ ಚುನಾವಣೆ ಕುರಿತು ಜಾಗೃತಿ ಮೂಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಟಗೊಳಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ರಾಷ್ಟ್ರೀಯ ಮತದಾನ ದಿನಾಚರಣೆ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ಸ್ವಾತಂತ್ರ್ಯ ಲಭಿಸಿದಾಗ ನಮ್ಮ ರಾಷ್ಟ್ರದಲ್ಲಿ ಕೇವಲ ಶೇ.15 ರಿಂದ 20 ಸಾಕ್ಷರತೆ ಇತ್ತು, ಇದೀಗೆ ಶೇ.74 ರಷ್ಟು ಸಾಕ್ಷರತೆ ಇದೆ. ಸಾಕ್ಷರತೆ ಇನ್ನೂ ಹೆಚ್ಚುತ್ತಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಮತದಾನ ಆಗುತ್ತಿಲ್ಲ. ಶೇ.60 ರಿಂದ 70 ಮಾತ್ರ ಮತದಾನ ಆಗುತ್ತಿದ್ದು, ನಾವೆಲ್ಲ ನಮ್ಮ ಸಾಂವಿಧಾನಿಕ ಹಕ್ಕಾದ ಮತದಾನದ ಹಕ್ಕನ್ನು ಚಲಾಯಿಸಿ ಸಕ್ರಿಯವಾಗಿ ಚುನಾವಣೆಗಳಲ್ಲಿ ಭಾಗವಹಿಸಬೇಕೆಂದರು.

ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಕೆ, ಶಿವಮೊಗ್ಗ ಉಪವಿಭಾಗಾಧಿಕಾರಿ ಹೆಚ್.ಬಿ.ಚನ್ನಪ್ಪ, ತಹಶೀಲ್ದಾರ್ ಗ್ರೇಡ್-2 ಗಣೇಶ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.