Thursday, April 2, 2026
Thursday, April 2, 2026
Home Blog Page 1323

ಹೆಚ್ಚುತ್ತಿರುವ ಹಿಂಸಾ ಪ್ರವೃತ್ತಿ ತಡೆಗೆ ಶಿಕ್ಷಣವೇ ಪರಿಹಾರ- ಪ್ರೊ.ವೀರಭದ್ರಪ್ಪ

0

ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಪ್ರವೃತ್ತಿಗಳನ್ನು ನಿಯಂತ್ರಿಸಲು ಎಲ್ಲರಿಗೂ ಉನ್ನತ ಶಿಕ್ಷಣ ನೀಡುವುದೇ ಪರಿಹಾರ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಪರೀಕ್ಷಾಂಗ ಭವನದ ಮುಂಭಾಗದಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ ಭಾಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶಾದ್ಯಂತ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯ, ದೈಹಿಕ ಪೀಡನೆಗಳನ್ನು ನಡೆಸುತ್ತಿರುವ ಅಹಿತಕರ ಘಟನೆಗಳ ವರದಿಗಳು ಹೆಚ್ಚಳವಾಗುತ್ತಿವೆ. ಇಂತಹ ಪ್ರವೃತ್ತಿಗಳನ್ನು ಕಡಿತಗೊಳಿಸಲು ಸಮಾಜದೊಳಗೆ ಉನ್ನತ ಶಿಕ್ಷಣವನ್ನು ಹೆಚ್ಚಿಸುವುದೇ ಪರಿಹಾರೋಪಾಯ ಎಂದರು.

ಕಸ್ತೂರಿ ರಂಗನ್ ವರದಿಯ ಪ್ರಕಾರ ದೇಶದ ಉನ್ನತ ಶಿಕ್ಷಣ ಪ್ರವೇಶಾತಿಯು ಶೇ. 26 ಇದೆ. ಇದನ್ನು ಶೇ. 50ಕ್ಕಿಂತ ಅಧಿಕಗೊಳಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಯತ್ನಿಸಲಿದೆ. ವಿದ್ಯಾರ್ಥಿಗಳು ಮತ್ತು ಯುವಜನಾಂಗವು ಹೆಚ್ಚು ಹೆಚ್ಚು ಉನ್ನತ ಶಿಕ್ಷಣ ಪಡೆದಲ್ಲಿ ಸಾಮಾಜಿಕ ಅಗತ್ಯಗಳು, ಉನ್ನತಿ, ಸಮಸ್ಯೆಗಳ ಕುರಿತು ಚಿಂತನಕ್ರಮ ರೂಢಿಸಿಕೊಂಡು ಪರಿಹಾರೋಪಾಯಗಳನ್ನು ಕಂಡುಹಿಡಿಯುವುದು ಸಾಧ್ಯವಿದೆ. ಶಿಕ್ಷಣಕ್ಕೆ ಜ್ಞಾನ, ಪ್ರೀತಿ, ಭ್ರಾತೃತ್ವ, ಮಾನವೀಯತೆ, ಸಹಬಾಳ್ವೆಗಳನ್ನು ಕಲಿಸುವ ಶಕ್ತಿಯಿದೆ. ಈ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ಅವರ ವ್ಯಾಪಕ ಓದು, ಶಿಕ್ಷಣಗಳು ಭಾರತಕ್ಕೆ ಬಲಿಷ್ಠವಾದ ಸಂವಿಧಾನ ನೀಡಿತು.

ಅಂತಯೇ ಇಂದಿನ ಯುವಸಮೂಹ ಉನ್ನತ ಶಿಕ್ಷಣದ ಜೊತೆಗೆ ಸಾಹಿತ್ಯ ಓದು, ವೃತ್ತಿಪರ ಕೌಶಲ್ಯಗಳ ಕಲಿಕೆ, ಮೂಲಭೂತ ಕರ್ತವ್ಯಗಳ ಅರಿವಿನೊಂದಿಗೆ ತಮ್ಮತಮ್ಮ ಕ್ಷೇತ್ರದಲ್ಲಿ ಸಂವೇದನಾಶೀಲವಾಗಿ ಕಾರ್ಯನಿರ್ವಹಿಸಬೇಕು. ಇದು ಅಹಿಂಸಾ ಪ್ರವೃತ್ತಿ ಹೆಚ್ಚಿಸುತ್ತದೆ ಮತ್ತು ಮಾನವ ಅಭ್ಯುದಯಕ್ಕೆ ದುಡಿದಂತೆ ಆಗುತ್ತದೆ. ಇದುವೇ ಲಕ್ಷಾಂತರ ಹೋರಾಟಗಾರರು ಅಹಿಂಸಾ ಮಾರ್ಗದ ಮೂಲಕ ಪಡೆದ ಸ್ವಾತಂತ್ರವನ್ನು ಗೌರವಿಸುವ ಪರಿಯಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್. ಕೆ., ದೈಹಿಕ ಶಿಕ್ಷಣ ವಿಭಾಗದ ಡಾ. ಎನ್. ಡಿ. ವಿರೂಪಾಕ್ಷ ಮತ್ತು ವಿಭಾಗದ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ ಗಾರ್ಡನ್ ಏರಿಯಾ ಕಚೇರಿಯೊಂದರಲ್ಲಿ ಮಹಿಳೆ ನೇಣಿಗೆ ಶರಣು

0

ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಗಾರ್ಡನ್ ಏರಿಯಾ 3ನೇ ತಿರುವಿನಲ್ಲಿರುವ ಚುಂಚಾದ್ರಿ ಮಹಿಳಾ ಸಹಕಾರ ಸಂಘದ ಕಚೇರಿಯಲ್ಲಿ ಅನಿತಾ ಎಂಬ ನೇಣಿಗೆ ಶರಣಾಗಿದ್ದಾರೆ.

ಮೃತ ಮಹಿಳೆ ಚುಂಚಾದ್ರಿ ಮಹಿಳಾ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಮಹಿಳೆಯ ಸಾವಿಗೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ.

ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೋಲಿಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಪರಿಶೀಲನೆ ನಡೆಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ ಜಿಲ್ಲಾ 17 ನೇ ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಫೆಬ್ರವರಿ 1 ಮತ್ತು 2 ರಂದು 17 ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.

ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜನವರಿ 22ರಂದು ಸಂಜೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಬಿಡುಗಡೆ ಗೊಳಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕು ಗಳಿಂದ ಸಾಹಿತ್ಯ, ಸಾಂಸ್ಕೃತಿಕ ಆಸಕ್ತಿಯಿರುವ ಸದಸ್ಯರಗಳು, ಕನ್ನಡದ ಮನಸ್ಸುಗಳು ಭಾಗವಹಿಸಲು ಅನುಕೂಲ ಆಗುವಂತೆ ಪ್ರತಿನಿಧಿಗಳನ್ನು ನೋಂದಣಿ ಮಾಡಲು ತೀರ್ಮಾನ ಮಾಡಲಾಯಿತು.

ಸಾಹಿತ್ಯ ಆಸಕ್ತಿಯಿರುವ ಎಲ್ಲರೂ ಸಮ್ಮೇಳನಕ್ಕೆ ಬರುವಂತೆ ಪ್ರಯತ್ನ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಆಮಂತ್ರಣ ವಿತರಣೆ, ಸಮ್ಮೇಳನದ ಎರಡೂ ದಿನಗಳು ತಾಲ್ಲೂಕು, ಹೋಬಳಿ ಸಮಿತಿಯ ಪದಾಧಿಕಾರಿಗಳು ಶಿವಮೊಗ್ಗದಲ್ಲಿ ಉಳಿದು ಕೊಳ್ಳಲು ಒಮ್ಮತದ ತೀರ್ಮಾನ ಮಾಡಲಾಯಿತು.

ವಿವಿಧ ಉಪ ಸಮಿತಿಗಳಲ್ಲಿ ಎಲ್ಲರೂ ತೊಡಗಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಕೋರಲಾಯಿತು.

ಹೊಳೆಹೊನ್ನೂರು ಹೋಬಳಿ ಸಮಿತಿಯು ನಡೆಸಿದ ಪ್ರಥಮ ಹೋಬಳಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಅವರನ್ನು ಹೋಬಳಿ ಸಮಿತಿಯನ್ನು ಅಭಿನಂದಿಸಲಾಯಿತು.

ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್, ಭದ್ರಾವತಿ ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಹೊಸನಗರ ಅಧ್ಯಕ್ಷರಾದ ತ. ಮ. ನರಸಿಂಹ, ಸೊರಬ ಅಧ್ಯಕ್ಷರಾದ ಶಿವಾನಂದ ಪಾಣಿ, ಕಸಾಸಾಂ ವೇದಿಕೆ ಭದ್ರಾವತಿ ಅಧ್ಯಕ್ಷೆ ಸುಧಾಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದ ನಂತರ ವೃತ್ತಿಪರತೆಯಲ್ಲಿ ಸಾಮಾನ್ಯ ಜ್ಞಾನ ‌ಮತ್ತು ಭಾಷಾಪ್ರಭುತ್ವ ಇರಬೇಕು- ಡಾ.ಫ್ರಾನ್ಸಿಸ್ ಡಿಸೋಜಾ

0

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ವ್ಯಕ್ತಿತ್ವ ವಿಕಸನದ, ಸಾಮಾಜಿಕ ಜ್ಞಾನದ ಬಗ್ಗೆಯೂ ತಿಳಿಸುವುದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಗಿಸಿ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಮೊದಲಿಗೆ ಅವರ ಸಾಮಾನ್ಯ ಜ್ಞಾನ, ಭಾಷೆಯ ಮೇಲಿನ ಹಿಡಿತ ಇವೆಲ್ಲವೂ ಮುಖ್ಯವಾಗಿ ಬೇಕಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಗಳಾದ ಡಾ. ಫ್ರಾನ್ಸಿಸ್ ಡಿಸೋಜ ಅವರು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗ ಮತ್ತು ದಿಶಾ ಸಂಸ್ಥೆಯ ಸಹಯೋಗದಲ್ಲಿ ಎರಡು ದಿನಗಳ ಕಮ್ಯೂನಿಕೇಟಿವ್ ಇಂಗ್ಲಿಷ್ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಈಗಿನ ಆಧುನಿಕ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆ ಅತ್ಯಗತ್ಯ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾಲೇಜಿನ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಅದರ ಭಾಗವಾಗಿ ಕಮ್ಯುನಿಕೇಟಿವ್ ಇಂಗ್ಲಿಷ್ ಕಾರ್ಯಗಾರ ಏರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳು ಮಾತೃಭಾಷೆಯೊಂದಿಗೆ ಇಂಗ್ಲೀಷ್ ಭಾಷೆಗೂ ಒತ್ತು ನೀಡಿ ಈಗಿನಿಂದಲೇ ತಯಾರಿ ನಡೆಸಿದರೆ , ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಯಾವುದೇ ಭಾಷೆಯನ್ನು ಕಲಿಯಬೇಕಾದಲ್ಲಿ ಕೇವಲ ಅದನ್ನ ಬರೆದು ಓದಿ ಕಲಿಯುವುದರೊಂದಿಗೆ, ಒಳ್ಳೆಯ ಕೇಳುಗರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ, ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾಲೇಜಿನಲ್ಲಿ ಹಲವಾರು ಕಾರ್ಯಗಾರಗಳನ್ನ ಏರ್ಪಡಿಸಲಾಗುತ್ತದೆ. ಶೈಕ್ಷಣಿಕ ಕಲಿಕೆಯೊಂದಿಗೆ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೂ ಹೆಚ್ಚು ಆದ್ಯತೆ ನೀಡಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ದೊರೆಯುವ ಪ್ರತಿಯೊಂದು ವಿಷಯವನ್ನು ಗಮನವಿಟ್ಟು ಆಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮುಖ್ಯಸ್ಥರಾದ ಡಾ. ರಾಜೇಂದ್ರ ಚೆನ್ನಿ, ಇಂಡಿಯನ್ ಎಕ್ಸ್‌ಪ್ರೆಸ್‌ನ ವಿಶೇಷ ವರದಿಗಾರ ರಾಮ್ ಚಂದ್ರ ಗುನಾರಿ, ಮನಶಾಸ್ತ್ರ ವಿಭಾಗದ ವಿಭಾಗದ ಮುಖ್ಯಸ್ಥರಾದ ಡಾ. ಅರ್ಚನಾ ಕೆ ಭಟ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಫ್ರಾಂಸಿಸ್, ಗ್ರಂಥಪಾಲಕರು, ದಿಶಾ ಸಂಸ್ಥೆಯ ಸಂಯೋಜಕರಾದ ಗಣೇಶ್, ಹಾಗೂ ಉಪನ್ಯಾಸಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಕಾಲೇಜಿನ ಶೈಕ್ಷಣಿಕ ಮುಖ್ಯಸ್ಥರಾದ ಡಾ. ರಾಜೇಂದ್ರ ಚೆನ್ನಿ ಅವರನ್ನು ಅಭಿನಂದಿಸಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಪೌರಾಡಳಿತ ಇಲಾಖೆಯಿಂದ ಕ್ರೀಡಾ ಪಂದ್ಯಾವಳಿ

0

ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಜ.20 ರಿಂದ ಮಾ.31 ರವರೆಗೆ ಮುನ್ಸಿಪಲ್ ಪ್ರೀಮಿಯರ್ ಲೀಗ್-2023 ಅನ್ನು ಆಯೋಜಿಸಲಾಗಿದೆ.
ಸ್ವಾವಲಂಬನೆ, ಸುಸ್ಥಿರ ಸರ್ವತೋಮುಖ ಅಭಿವೃದ್ದಿಯ ಉದ್ದೇಶದಿಂದ ಈ ಲೀಗ್‍ನ್ನು ಆಯೋಜಿಸಿದ್ದು, ಕಂದಾಯ ಶಾಖೆ ಮತ್ತು ಆರೋಗ್ಯ ಶಾಖೆ(ಸ್ವಚ್ಚ ಭಾರತ ಮಿಷನ್) ಯಡಿ ಸ್ಥಳೀಯ ಸಂಸ್ಥೆಗಳ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿ ಅತ್ಯುತ್ತಮ ಬಿಲ್ ಕಲೆಕ್ಟರ್, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿ, ಅತ್ಯುತ್ತಮ ಕಿರಿಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು, ಎಇಇ(ಪರಿಸರ), 14ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವ ಅಭಿಯಂತರರಿಗೆ ಅತ್ಯುತ್ತಮ ಜೆಇ, ಎಇ, ಎಇಇ, ಇಇ ಪ್ರಶಸ್ತಿಗಳನ್ನು ನೀಡಲಾಗುವುದು.
ಈ ಪ್ರೀಮಿಯರ್ ಲೀಗ್‍ನಲ್ಲಿ ಮೊದಲನೇ ಬಹುಮಾನವಾಗಿ ಎಕ್ಸಲೆನ್ಸ್ ಅವಾರ್ಡ್, ಎರಡನೇ ಬಹುಮಾನ ಸ್ಟ್ಯಾಂಡ್ ಔಟ್ ಪರ್ಫಾರ್ಮರ್, ಮೂರನೇ ಬಹುಮಾನ ರೈಸಿಂಗ್ ಸ್ಟಾರ್ ಅವಾರ್ಡ್, ಕಂದಾಯ ಮತ್ತು ಆರೋಗ್ಯ ಶಾಖೆಯ ಸ್ಪರ್ಧೆಯಲ್ಲಿ ಪಡೆದಿರುವ ಶ್ರೇಯಾಂಕ ಹಾಗೂ 14ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ರೋಲಿಂಗ್ ಟ್ರೋಫಿ, ಕಂದಾಯ ಹಾಗೂ ಆರೋಗ್ಯ ಶಾಖೆಯ ಎರಡು ಸ್ಪರ್ಧೆಗಳಲ್ಲಿ ವಿಜೇತರಾಗುವ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಲೀಡರ್‍ಶಿಪ್ ಅವಾರ್ಡ್ ಹಾಗೂ ಅತಿ ಹೆಚ್ಚು ಪ್ರತಿ ಶತ ಪ್ರಶಸ್ತಿ ಪಡೆದ ನಗರ ಸ್ಥಳೀಯ ಸಂಸ್ಥೆಗಳ ಜಿಲ್ಲೆಯ ಯೋಜನಾ ನಿರ್ದೇಶಕರುಗಳಿಗೆ ಅಪರ ಮುಖ್ಯ ಕಾರ್ಯದರ್ಶಿಗಲ ಮಾವೆರಿಕ್ ಅವಾರ್ಡ್ ನೀಡಲಾಗುವುದು. ಸ್ಥಳೀಯ ಸಂಸ್ಥೆವಾರು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡು ವಿವಿಧ ಕ್ರೀಡಾ ಪಂದ್ಯಾವಳಿಗಳನ್ನು ನಡೆಸಿ, ಜಿಲ್ಲಾ ಮಟ್ಟದಲ್ಲಿ ವಿಜೇತರಾಗುವ ತಂಡಗಳಿಗೆ ಜಿಲ್ಲಾ ಹಂತದಲ್ಲಿಯೇ ಪೌರಾಡಳಿತ ಸಚಿವರ ಪೌರಸ್ಟಾರ್ ಅವಾರ್ಡ್ ಹಾಗೂ ಅತೀ ಹೆಚ್ಚು ಪ್ರತಿಶತ ಪ್ರಶಸ್ತಿ ಪಡೆದ ನಗರ ಸ್ಥಳೀಯ ಸಂಸ್ಥೆಗಳ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳ ಪಿನಾಕಲ್ ಪರ್ಫಾರ್ಮರ್ ಅವಾರ್ಡ್ ನೀಡಲಾಗುವುದು.

ಪ್ರೀಮಿಯರ್ ಲೀಗ್ 2023 ಕುರಿತಾದ ಕಾರ್ಯವಿಧಾನ ಹಾಗೂ ಹೆಚ್ಚಿನ ಹೆಚ್ಚಿನ ಮಾಹಿತಿಗಾಗಿ http://www.municipaladmn.gov.in/ ವಿಳಾಸಕ್ಕೆ ಸಂಪರ್ಕಿಸಬಹುದು.

ರಾಮನಗರ ಜಿಲ್ಲಾ ಮುಖ್ಯರಸ್ತೆ ಸರಪಳಿ ಕಿ.ಮೀ.1.35 ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ದಿನಾಂಕ: 20-01-2023 ರಿಂದ 30-06-2023 ರವರೆಗೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗವಾದ ಪಕ್ಕದಲ್ಲಿರುವ ಇತ್ತೀಚೆಗೆ ಹೊಸದಾಗಿ ನಿರ್ಮಿಸಲಾಗಿರುವ ಸೇತುವೆಯ ಮೇಲೆ ಮಾತ್ರ ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988 ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221(ಎ)(2) ಮತ್ತು (5) ರನ್ವಯ ವಾಹನಗಳನ್ನು ಸಂಚರಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಬನ್ನಿ ಎಲ್ಲರೂ..!

0

ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಿವಮೊಗ್ಗ, ಇವರ ವತಿಯಿಂದ ಜ.26 ರ ಬೆಳಗ್ಗೆ 09 ಗಂಟೆಗೆ ನಗರದ ಡಿ.ಎ.ಆರ್. ಪೊಲೀಸ್ ಪೆರೇಡ್ ಮೈದಾನದಲ್ಲಿ 74 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಧ್ವಜಾರೋಹಣವನ್ನು ರೇಷ್ಮೆ
ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಇವರು ನೆರವೇರಿಸುವರು.

ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರ ಘನ ಉಪಸ್ಥಿತಿ ಇರಲಿದೆ.

ಶಾಸಕರಾದ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ ಸಿಇಓ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಂಜೆ 5 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ, ಪೊಲೀಸ್ ಬ್ಯಾಂಡ್ ಮತ್ತು ನಗರದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ನಾಗರಾಜ್

0

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳ ಮಧ್ಯೆ ಆಟೋ ಚಾಲಕರೊಬ್ಬರು ಬಿಟ್ಟು
ಹೋಗಿದ್ದ ಬ್ಯಾಗ್ ಮತ್ತು ವ್ಯಾಲೆಟ್ ನನ್ನು ಹಿಂದಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ.

ಮೋಸಿನ್ಅಹಮದ್ ರವರು ಆಟೋದಲ್ಲಿ ಪ್ರಯಾಣಿಸಿ ಬ್ಯಾಗ್&ವಾಲೆಟ್ಅನ್ನು ಆಟೋದಲ್ಲಿ ಬಿಟ್ಟು ಹೋಗಿದ್ದರು.
ಆಟೋ ಚಾಲಕ ನಾಗರಾಜ್ ಅವರು ಬ್ಯಾಗ್ & ಪರ್ಸನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು.

ಶಿವಮೊಗ್ಗ ನಗರದಲ್ಲಿ ಈ ಘಟನೆ ನಡೆದಿದೆ. ಬ್ಯಾಗ್ ನಲ್ಲಿ ಸುಮಾರು 8,500 ರೂಪಾಯಿ ನಗದು ಹಣವಿತ್ತು.ಇದನ್ನು ಗಮನಿಸಿದ ಆಟೋ ಚಾಲಕ ನಾಗರಾಜ್ ಸಂಚಾರ ಪೊಲೀಸ್ ಠಾಣೆ ಪೊಲೀಸರಿಗೆ ಬ್ಯಾಗ್ ಒಪ್ಪಿಸಿದ್ದಾರೆ.

ಆಟೋ ಚಾಲಕ ನಾಗರಾಜ್ ಅವರ ಪ್ರಾಮಾಣಿಕತೆಯನ್ನು ಜಿಲ್ಲಾ ರಕ್ಷಣಾಧಿಕಾರಿ
ಜಿ.ಕೆ. ಮಿಥುನ್ ಕುಮಾರ್ ಅವರು ಶ್ಲಾಘಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಪರೀಕ್ಷಾ ಪೆ ಚರ್ಚಾಚಿತ್ರಕಲಾ ಸ್ಪರ್ಧೆ

0

ಶಿವಮೊಗ್ಗ: ಪರೀಕ್ಷೆಗೆ ಸಂಬಂಧಿಸಿದ ಒತ್ತಡವನ್ನು ಕಡಿಮೆ ಮಾಡುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಅಂಶಗಳ ಕುರಿತು ಜ.23 ರಂದು ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದಲ್ಲಿ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು.

ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ, ಪರೀಕ್ಷಾ ಪೇ ಚರ್ಚಾ 2023 ರ ಅಂಗವಾಗಿ ಕೇಂದ್ರೀಯ ವಿದ್ಯಾಲಯ ನವದೆಹಲಿ ಮತ್ತು ಕೆವಿಎಸ್ ಬೆಂಗಳೂರು ಪ್ರಾದೇಶಿಕ ಕಚೇರಿ ಮತ್ತು ಕೇಂದ್ರೀಯ ವಿದ್ಯಾಲಯ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಶಿವಮೊಗ್ಗ ನಗರದ 07 ಸಿಬಿಎಸ್‍ಇ 80 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅತ್ಯುತ್ತಮವಾಗಿ ಚಿತ್ರ ರಚಿಸಿದ 05 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಬಹುಮಾನಗಳನ್ನು ನೀಡಲಾಯಿತು ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಮಾಣಪತ್ರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬರೆದ ಪರೀಕ್ಷಾ ಯೋಧರು ಪುಸ್ತಕವನ್ನು ನೀಡಿ ಗೌರವಿಸಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ

0

ಶಿವಮೊಗ್ಗ: ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ದಿನಾಂಕ: 27-01-2023 ರಿಂದ 06-02-2023 ರವರೆಗೆ ಪ್ರತಿ ದಿನ 500 ಕ್ಯೂಸೆಕ್ಸ್‍ನಂತೆ ಒಟ್ಟು 5500 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತದೆ.

ಈ ಅವಧಿಯಲ್ಲಿ ನದಿಯಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನ ಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸೂಕ್ತ ಕ್ರಮಗಳ ಅನುಸರಣೆ ನ್ಯಾಕ್ ಮಂಡಳಿ ಎದುರಿಸಲು ಕಷ್ಟವಾಗದು- ಪ್ರೊ.ವೀರಭದ್ರಪ್ಪ

0

ಯಾವುದೇ ವಿಶ್ವವಿದ್ಯಾಲಯ ಅಥವಾ ಕಾಲೇಜು ನ್ಯಾಕ್ ಪರಿಶೀಲನೆಯಲ್ಲಿ ಉತ್ತಮ ಶ್ರೇಯಾಂಕ ಪಡೆಯಬೇಕಾದರೆ ಸತತ ಪರಿಶ್ರಮ ಅತ್ಯಂತ ಅಗತ್ಯ. ಉಪಲಬ್ಧ ಮಾಹಿತಿಗಳನ್ನು ಸೂಕ್ತ ಕ್ರಮದಲ್ಲಿ ಮಂಡಿಸುವ ಕೆಲಸ ಮೊದಲು ಆಗಬೇಕು. ಪರಸ್ಪರ ಸಹಕಾರ ಭಾವನೆ, ಸಹ ಸಂವೇದನೆಯಿಂದ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ. ಅನಗತ್ಯ ಗೊಂದಲಗಳಿಗೆ ಅವಕಾಶವನ್ನು ಕೊಡದೆ ಸೂಕ್ತ ಕ್ರಮವನ್ನು ಅನುಸರಿಸಿದಲ್ಲಿ ಮ್ಯಾಕ್ ಮಂಡಳಿಯನ್ನು ಎದುರಿಸುವುದು ಕಷ್ಟವಾಗಲಾರದು.

ಪ್ರಬಲ ಆತ್ಮವಿಶ್ವಾಸ ವಿ ದ್ದರೆ ನ್ಯಾಕ್ ಮಂಡಳಿಯನ್ನು ಎದುರಿಸುವುದು ಸುಲಭ” ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ
ಅವರು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆಯೋಜಿಸಿದ್ದ ” ನ್ಯಾಕ್ ಪರಿಶೀಲನೆ :ಆತಂಕ ಮತ್ತು ಸವಾಲುಗಳು” ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿವಿ ಕುಲಪತಿಗಳಾದ ಪ್ರೊ ಬಿ ಪಿ ವೀರಭದ್ರಪ್ಪ ಅವರು ವಹಿಸಿದ್ದರು.

” ಭಾರತೀಯ ಶಿಕ್ಷಣ ಪರಂಪರೆಗೆ ಉನ್ನತ ಸ್ಥಾನವಿದೆ. ಶಿಕ್ಷಣ ಸಂಸ್ಥೆಗೂ ಮತ್ತು ಸಮಾಜಕ್ಕೂ ಇರುವ ನಿರಂತರ ಸಂಬಂಧವನ್ನು ಗುಣಮಟ್ಟದ ಶಿಕ್ಷಣ ನೀಡಲು ನ್ಯಾಕ್ ಮಾನ್ಯತೆಯು ಅತ್ಯಂತ ಅವಶ್ಯಕವಾಗಿದೆ. ಶಿಕ್ಷಣ ಸಂಸ್ಥೆ,ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ನಿರಂತರ ಮೌಲ್ಯಮಾಪನದಲ್ಲಿ ಭಾಗಿಯಾಗಬೇಕಾಗಿದೆ.” ಎಂದರು.

ಕಾರ್ಯಕ್ರಮದಲ್ಲಿ ವಿ.ವಿ ಕುಲಸಚಿವರಾದ ಪ್ರೊ. ನವೀನ್ ಕುಮಾರ್ ಎಸ್. ಕೆ, ವಾಣಿಜ್ಯಶಾಸ್ತ್ರವಿಭಾಗದ ಡೀನ್ ಪ್ರೊ.ವೆಂಕಟೇಶ್ ಎಸ್., ಐಕ್ಯೂ ಎಸಿ ಸಂಚಾಲಕರಾದ ಡಾ.ಸರಳಾ ಕೆ ಎಸ್ ಉಪಸ್ಥಿ ತರಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಎಂ. ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಕುಂದನ್ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.