Thursday, April 2, 2026
Thursday, April 2, 2026
Home Blog Page 1324

ಸಾರ್ವಜನಿಕರಿಗೆ ಶಿವಮೊಗ್ಗ ಏರ್ ಪೋರ್ಟ್ ಪ್ರವೇಶ ಸದ್ಯಕ್ಕೆ ಬಂದ್

0

ಶಿವಮೊಗ್ಗ: ನಗರದ ಹೊರ ವಲಯದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ಸುರಕ್ಷತಾ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಕೇಂದ್ರದಿಂದ ಡಿಜಿಸಿಎ ತಂಡ ಪರಿಶೀಲನೆಗೆ ಆಗಮಿಸಲಿದೆ. ಇದಲ್ಲದೆ ವಿಮಾನ ನಿಲ್ದಾಣದಲ್ಲಿರುವ ಸೂಕ್ಷ್ಮ ಉಪಕರಣಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಮತ್ತು ಕಾಮಗಾರಿಗಳಿಗೆ ತೊಡಕಾಗದಂತೆ, ಸಾರ್ವಜನಿಕರ ಪ್ರವೇಶವನ್ನು ಉದ್ಘಾಟನೆ ಆಗುವವರೆಗೆ ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದ್ದಾರೆ.
ನೂತನ ವಿಮಾನ ನಿಲ್ದಾಣ ವೀಕ್ಷಣೆಗೆ ನೂರಾರು ಜನರು ಆಗಮಿಸಿ, ರನ್‍ವೇಯಲ್ಲಿ ವಾಹನ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಈ ಆದೇಶ ಹೊರಡಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

0

ಶಿವಮೊಗ್ಗ: ಜನವರಿ 26ರಿಂದ 29 ರವರೆಗೆ ಶಿವಮೊಗ್ಗ ತಾಲ್ಲೂಕು ದೇವಕಾತಿಕೊಪ್ಪದ ಇಂಡಸ್ಟ್ರೀಯಲ್ ಏರಿಯಾ (ಕೆಐಡಿಬಿ) ದಲ್ಲಿ ಮೊಟ್ಟ ಮೊದಲಬಾರಿಗೆ ರಾಜ್ಯಮಟ್ಟದ 4 ದಿನಗಳ ದೀರ್ಘ ಹಾಗೂ ಸಂತೋಷ ಭರಿತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮಲ್ನಾಡ್ ಕಪ್ ಅನ್ನು ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ಜನಸೇನಾ ಸಂಘ, ಲಿಂಗಾಯತ ವೀರಶೈವ ಸಮಾಜದ ಶಿವಮೊಗ್ಗ ತಾಲ್ಲೂಕು ಹಾಗೂ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಪಂದ್ಯಾವಳಿಯ ವಿಜೇತ ಪ್ರಥಮ ಸ್ಥಾನದ ತಂಡಕ್ಕೆ 50,000 ನಗದು ಹಾಗೂ ಆಕರ್ಷಕ ಟ್ರೋಫಿ ದೊರೆಯಲಿದೆ.

ದ್ವಿತೀಯ ಬಹುಮಾನವಾಗಿ
25,000 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಿದ್ದು, ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಪಂದ್ಯಾವಳಿ ನಡೆಯುತ್ತದೆ.

ಪ್ರವೇಶ ಶುಲ್ಕ 5000 ರೂ ಆಗಿರುತ್ತದೆ. ಪ್ರತಿ ಪಂದ್ಯವು 5 ಓವರ್‌ಗಳಿಗೆ ಸೀಮತವಾಗಿದ್ದು, ಚೆಕ್ ಬೌಲಿಂಗ್ ಅವಕಾಶವಿದೆ.

ಎಲ್ಲ ತಂಡಗಳಿಗೂ ಸಮವಸ್ತ್ರ ಕಡ್ಡಾಯವಾಗಿದೆ. ಆಡುವ ಪ್ರತಿ ತಂಡಗಳಿಗೆ ಉತ್ತಮ ಊಟದ ವ್ಯವಸ್ಥೆ ಇರುತ್ತದೆ. ಯಾವುದೇ ತಂಡ ಅಸಭ್ಯ ವರ್ತನೆ, ಗಲಾಟೆ ಮಾಡಿದ್ದಲ್ಲಿ ಅಂತಹ ತಂಡಗಳನ್ನು ಕಮಿಟಿ ವಜಾಗೊಳಿಸುತ್ತದೆ. ಎಲ್ಲಾ ಪಂದ್ಯಾವಳಿಗಳು ಯೂಟ್ಯೂಬ್ ಹಾಗೂ ಫೇಸ್‌ಬುಕ್ ಲೈವ್‌ನಲ್ಲಿ ಕಡ್ಡಾಯವಾಗಿ ಬರುತ್ತದೆ.

ಹೆಚ್ಚಿನ ವಿವರಗಳಿಗೆ ಚಂದ್ರು 73538 93112, ನಿತಿನ್ 95382 85928 ಮೊಬೈಲ್‌ಗೆ ಸಂಪರ್ಕಿಸಬಹುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಹಾಗೂ ಡಾ. ಜಿನದತ್ತ ದೇಸಾಯಿ ಅವರಿಗೆ ಪ್ರತಿಷ್ಠಿತ ಡಾ.ದ.ರಾ.ಬೇಂದ್ರೆ ಪುರಸ್ಕಾರ

0

ವರಕವಿ ಡಾ.ದ.ರಾ.ಬೇಂದ್ರೆ ಅವರ 127ನೇ ಜನ್ಮದಿನಾಚರಣೆ ನಿಮಿತ್ತ ಡಾ.ದ.ರಾ.ಬೇಂದ್ರೆ ರಾಷ್ಟೀಯ ಸ್ಮಾರಕ ಟ್ರಸ್ಟ್ ವತಿಯಿಂದ 2023ನೇ ಸಾಲಿನ ಅಂಬಿಕಾತನಯದತ್ತ ರಾಷ್ಟೀಯ ಪ್ರಶಸ್ತಿಗೆ ಈ ಬಾರಿ ಇಬ್ಬರು ಭಾಜನರಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅವರು ತಿಳಿಸಿದ್ದಾರೆ.

ಧಾರವಾಡದ ಬೇಂದ್ರೆ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬಿಕಾತನಯದತ್ತ ರಾಷ್ಟೀಯ ಪ್ರಶಸ್ತಿಗೆ ವಿಮರ್ಶಕ, ಚಿಂತಕರಾದ ಡಾ.ರಾಜೇಂದ್ರ ಚೆನ್ನಿ ಹಾಗೂ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಡಾ.ಜಿನದತ್ತ ದೇಸಾಯಿ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಯು ಒಂದು ಲಕ್ಷ ನಗದು, ಸ್ಮರಣಿಕೆ ಫಲಕ ಒಳಗೊಂಡಿದೆ. ಈ ಪ್ರಶಸ್ತಿಯನ್ನು ಪ್ರತ್ಯೇಕ ತಲಾ 50 ಸಾವಿರದಂತೆ ಹಂಚಿಕೆ ಮಾಡಲಾಗಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಜ.31 ರಂದು ಸಂಜೆ 4:30 ಗಂಟೆಗೆ ಧಾರವಾಡದ ಸಾಧನಕೇರಿಯ ಡಾ.ದ.ರಾ.ಬೇಂದ್ರೆ ಭವನದಲ್ಲಿ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಶಾಸಕ ಅರವಿಂದ ಬೆಲ್ಲದ, ಆಗಮಿಸಲಿದ್ದಾರೆ.

ವಿಧಾನ ಪರಿಷತ ಸದಸ್ಯ ಎಚ್.ವಿಶ್ವನಾಥ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು,ಪ್ರಶಸ್ತಿ ಪುರಸ್ಕೃತರಾದ. ಡಾ.ರಾಜೇಂದ್ರ ಚೆನ್ನಿ ಅವರ ಕುರಿತು ಕುಮಟಾದ ಡಾ.ಎಂ‌‌.ಜಿ.ಹೆಗಡೆ ಹಾಗೂ ಡಾ.ಜಿನದತ್ತ ದೇಸಾಯಿ ಅವರ ಕುರಿತು ಡಾ.ಶಾಂತಾ ಇಮ್ರಾಪೂರ ಹಾಗೂ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಶಿರಸಿಯ ಪ್ರೊ.ಎಚ್.ಆರ್. ಅಮರನಾಥ ಸಂಪಾದಕತ್ವದ ಪ್ರೊ.ಬೇಂದ್ರೆ ಮಾಸ್ತರರ ಅಮರವಾಣಿ ಕೈಪಿಡಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಯುವ ಸಬಲೀಕರಣ ವಸ್ತುವುಳ್ಳ ರೈಸ್ ದಿ ಬಾರ್ ಪುಸ್ತಕ ಲೋಕಾರ್ಪಣೆ

0

ಶಿವಮೊಗ್ಗ: ಅಂತರಾಷ್ಟ್ರೀಯ ಪುಸ್ತಕ ಮೇಳ ಕ್ಕೆ ಆಯ್ಕೆಯಾಗಿರುವ ರೈಸ್ ದಿ ಬಾರ್ ಪುಸ್ತಕ ಇದೆ ತಿಂಗಳ ಜನವರಿ 26ರಂದು ಸಂಜೆ 6ಗಂಟೆಗೆ ಸುವರ್ಣ ಸಾಂಸ್ಕೃತಿಕ ಭವನ, ಅಶೋಕನಗರ, ಶಿವಮೊಗ್ಗ ಬಿಡುಗಡೆಗೊಳ್ಳುತ್ತದೆ.

ಶಿವಮೊಗ್ಗದ ವೈದ್ಯ ಡಾ. ರಾಹುಲ್ ದೇವರಾಜ್ ಅವರು ರಚಿಸಿರುವ ” ರೈಸ್ ದಿ ಬಾರ್” (Raise The Bar) ಪುಸ್ತಕ. ಹೆಸರೇ ಸೂಚಿಸುವಂತೆ ಜೀವನದ ಮೌಲ್ಯಗಳನ್ನು ಹೆಚ್ಚಿಸುವ ಸ್ಪೂರ್ತಿದಾಯಕ ಸೆಲ್ಫ್ ಹೆಲ್ಪ್ ಪುಸ್ತಕವಾಗಿದೆ. ಯುವ ಸಬಲೀಕರಣ ದೃಷ್ಟಿಯಲ್ಲಿಟ್ಟು ಈ ಪುಸ್ತಕವನ್ನು ರಚಿಸಲಾಗಿದೆ. ಈ ಪುಸ್ತಕದಲ್ಲಿ ಜೀವನ, ಟೈಮ್ ಮ್ಯಾನೇಜ್ಮೆಂಟ್, ದುಡಿಮೆ ಹಾಗೂ ಹೂಡಿಕೆ, ಸೋಲು ಹಾಗೂ ಅವಮಾನಗಳನ್ನು ಎದುರಿಸುವುದು ಹೇಗೆ ? ಅಹಂ, ಉತ್ತಮ ಹವ್ಯಾಸಗಳ ಕುರಿತು, ಮತ್ತು ಆರೋಗ್ಯದ ಕುರಿತು ಮನಮುಟ್ಟುವ ರೀತಿಯಲ್ಲಿ ಅತ್ಯಂತ ಪ್ರಸ್ತುತವಾಗಿ ವಿವರಿಸಲಾಗಿದೆ. ಎಲ್ಲಾ ವಯಸ್ಕರಿಗೂ ಪ್ರಸ್ತುತ ಎನಿಸುವ ಪುಸ್ತಕ ವಾಗಿದ್ದರೂ ಸಹ ವಿಶೇಷವಾಗಿ ಪ್ರತಿಯೊಬ್ಬ ಯುವಕ ಯುವತಿಯರು ಓದಲೇಬೇಕಾದ ಕೃತಿಯಾಗಿದೆ.

ಲೇಖಕರ ಪರಿಚಯ:
ಡಾ. ರಾಹುಲ್ ದೇವರಾಜ್ ರವರು ಶಿವಮೊಗ್ಗದ ಮಂಡೇನ ಕೊಪ್ಪ ದೇವರಾಜ್ ಹಾಗೂ ಎಸ್. ಹೇಮಾವತಿ ದಂಪತಿ ಗಳ ಪುತ್ರ. ಶಿವಮೊಗ್ಗದ ವಾಸವಿ ಶಾಲೆ ಹಾಗೂ ಫೇಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ವೈದ್ಯ ಪಡೆದಿದ್ದಾರೆ. ಪುಣೆಯ ಸಿಂಬಯೋಸಿಸ್ ವಿಶ್ವವಿದ್ಯಾಲಯದಿಂದ ಎಂ.ಡಿ, ಎಮರ್ಜೆನ್ಸಿ ಮೆಡಿಸಿನ್ ಮತ್ತು ಪಿಜಿ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಸ್ನಾತಕೋತರ ಪದವಿ ಪಡೆದಿದ್ದಾರೆ. ಶಿಕಾರಿಪುರದ ಹಿತ್ತಲ ಆಸ್ಪತ್ರೆ ಹಾಗೂ ಶಿವಮೊಗ್ಗದ ಊರುಗಡೂರು ನಗರ ಆರೋಗ್ಯ ಕೇಂದ್ರದಲ್ಲಿ ವೈದ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ

0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯ ಸಮಿತಿ ಶಿವಮೊಗ್ಗ ಇವರ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆ ಎಸ್ ಆರ್ ಟಿ ಸಿ ನಿಗಮಗಳ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಸಮಿತಿಯ ಸದಸ್ಯರಿಂದ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಕೈಗಾರಿಕಾ ಒಪ್ಪಂದ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪರಿಷ್ಕೃತ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಒಪ್ಪಂದದ ಪ್ರಕಾರ 2020 ರ ಜನವರಿ 1 ರಿಂದ ಸೌಲಭ್ಯ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಚಿವರು, ವ್ಯವಸ್ಥಾಪಕ ನಿರ್ದೇಶಕರು ಜಂಟಿಕ್ರಿಯಾ ಸಮಿತಿಯೊಂದಿಗೆ ಚರ್ಚೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ವೇತನ ಪರಿಷ್ಕರಿಸದ ಕಾರಣ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕುವೆಂಪು ವಿವಿಯಿಂದ ಬೃಹತ್ ಉದ್ಯೋಗಮೇಳ

0

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ಮತ್ತು Get – Lect: Unichub ಬೆಂಗಳೂರು ಸಂಸ್ಥೆ ವತಿಯಿಂದ ದಿನಾಂಕ 04-02-2023ರಂದು ಬೆಳಿಗ್ಗೆ 9:00ಗೆ ಸಹ್ಯಾದ್ರಿ ಕಾಲೇಜು ಆವರಣ ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ.

ಈ ಉದ್ಯೋಗ ಮೇಳದಲ್ಲಿ ರಾಜ್ಯ ಹಾಗೂ ದೇಶದ 40ಕ್ಕೂ ಅಧಿಕ ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಳ್ಳಲಿದೆ. ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತ ಸಾರ್ವಜನಿಕರು ( 30 ವರ್ಷ ವಯೋಮಿತಿಗೊಳಪಟ್ಟಿರಬೇಕು) ಪಾಲ್ಗೊಳ್ಳಬಹುದು.

ಉದ್ಯೋಗ ಮೇಳದಲ್ಲಿ ಸುಮಾರು 10 ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳು ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶ್ವವಿದ್ಯಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಪೋಕ್ಸೊ ಪ್ರಕರಣ ಕುರಿತ ಕಾರ್ಯಾಗಾರ

0

ಶಿವಮೊಗ್ಗ : ಶಿವಮೊಗ್ಗದ ಪೊಲೀಸ್ ಕಾರ್ಯಾಲಯದ ವತಿಯಿಂದ POCSO ಪ್ರಕರಣದ ತರಬೇತಿ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಲತಾ ಹಾಗೂ ಶ್ರೀ ಮೋಹನ್, ಡಾ. ವಿಕ್ರಮ್ ಪಾಲೇಮಾರ್ & ಕುಮಾರಸ್ವಾಮಿ,ಹೆಚ್ಚುವರಿ ಎಸ್ಪಿ ಚಿತ್ರದುರ್ಗ ಅವರು ಆಗಮಿಸಿದ್ದರು.

ತನಿಖಾಧಿಕಾರಿ ಮತ್ತು ಸಹಾಯಕರಿಗೆ POCSO ಪ್ರಕರಣದ ತನಿಖಾಕ್ರಮ, ಸಾಕ್ಷ್ಯಾಧಾರ ಸಂಗ್ರಹಣೆ, ವೈದ್ಯಕೀಯ ಪರೀಕ್ಷೆ, SOP ಕುರಿತು ಮಾಹಿತಿ ನೀಡಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಕ್ತದಾನದಿಂದ ದೇಹ ಸದೃಢವಾಗಿರುತ್ತದೆ- ಜಿ.ವಿಜಯ್ ಕುಮಾರ್

0

ಶಿವಮೊಗ್ಗ: ದೇಶಕ್ಕಾಗಿ ಪ್ರಾಣತೆತ್ತು ಹುತಾತ್ಮರಾದ, ಮಹನೀಯರ ಜನ್ಮ ದಿನವನ್ನು ಸಮಾಜಮುಖಿ ಸೇವೆಗಳ ಮುಖಾಂತರ ಆಚರಿಸಬೇಕು.

ರಕ್ತದಾನದಂತಹ ಸೇವಾ ಕಾರ್ಯಗಳನ್ನು ನಡೆಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಅವರು ಹೇಳಿದರು.

ಶಿವಮೊಗ್ಗದ ಜೆಪಿಎನ್‌ ರಸ್ತೆಯಲ್ಲಿರುವ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾ ಸಂಸ್ಥೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ದೇಹ ಸದೃಢವಾಗುವ ಜೊತೆಗೆ ಸದಾ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.
ವಿಶ್ವಸಂಸ್ಥೆ ವರದಿ ಪ್ರಕಾರರಕ್ತದಾನದಿಂದ ಶೇ.80ರಷ್ಟು ಹೃದಯಾಘಾತ ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಭಾವಸಾರ ವಿಜನ್‌ಇಂಡಿಯಾ ಪ್ರೇರಣ ಸಂಸ್ಥೆಯು ಕೊರೋನಾ ಸಂದರ್ಭದಲ್ಲಿಯು ಉತ್ತಮ ಸೇವಾ ಕಾರ್ಯಗಳನ್ನು ನಡೆಸಿತ್ತು.

ಕಷ್ಟದಲ್ಲಿರುವ ಜನರಿಗೆ ನೆರವು ನೀಡಿತ್ತು. ಮುಂದಿನ ದಿನಗಳಲ್ಲಿಯು ಸಂಸ್ಥೆಯು ಸಮಾಜಮುಖಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಿ ಎಂದು ಆಶಿಸಿದರು.

ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾ ಸಂಸ್ಥೆ ಅಧ್ಯಕ್ಷ ಮಿಥುನ ಉತ್ತರಕರ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಪ್ರತಿ ವರ್ಷ 2 ಬಾರಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತದೆ.

ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ.ಗ್ರಾಮಾಂತರ ಪ್ರದೇಶದಲ್ಲಿಆರೋಗ್ಯಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕಾರ್ಯದರ್ಶಿ ಯಶವಂತ್‌ ಅಂಬೋರೆ, ಚಾರ್ಟರ್ ಪ್ರೆಸಿಡೆಂಟ್ ವೆಂಕಟೇಶ, ಪ್ರದೀಪ್‌ಉತ್ತರಕರ್, ಸಾವನ್ ರಂಗದೊಳ್, ಪ್ರಶಾಂತ್ ಕೊಳೇಕರ್, ಮಂಜುನಾಥ್ ಮಾಲತ್ಕರ್ ಮತ್ತು ಸಂಸ್ಥೆಯ ನಿರ್ದೇಶಕರುಗಳು ರಕ್ತದಾನ ಮಾಡಿದರು.ಡಾ. ಪ್ರೀತಿ, 110 ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

0

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ:

ಗಣರಾಜ್ಯೋತ್ಸವದ ಪ್ರಯುಕ್ತ ಜ.26 ರಿಂದ 29 ರವರೆಗೆ 4 ದಿನಗಳ ಕಾಲ ನಗರದ ತೋಟಗಾರಿಕೆ ಇಲಾಖೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ಅವರು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ 61 ನೇ ಫಲ-ಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ, ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಈ ಫಲ-ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ವಿಶೇಷತೆಗಳೆಂದರೆ ಜಿಲ್ಲೆಯ ಸಸ್ಯ ಸಂಪತ್ತು ಮತ್ತು ವನ್ಯಜೀವಿ ಆಕೃತಿಗಳು ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್‍ರವರ ಹೂವಿನ ಕಲಾಕೃತಿ ಗಂಧದ ಗುಡಿ ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿ, ಶಿವಮೊಗ್ಗ, ಸ್ಮಾರ್ಟ್ ಸಿಟಿ’ ಮಾದರಿ, ಹೂವಿನ ಫೋಟೋ ಫ್ರೇಮ್‍ಗಳು ಹಾಗೂ ಮಕ್ಕಳನ್ನು ಆಕರ್ಷಸುವ ಹೂವಿನ ಗೊಂಬೆಗಳು.

ಫಲ-ಪುಷ್ಪ ಪ್ರದರ್ಶನದಲ್ಲಿ ರೈತರಿಗಾಗಿ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶಿಕೆಗಳ ಸ್ಪರ್ಧೆ, ಮಹಿಳೆಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ(ವಿವಿಧ ಸಸ್ಯ ಭಾಗಗಳನ್ನು, ಹೂ, ಮೊಗ್ಗು, ಎಲೆ, ಹಣ್ಣು, ಬೀಜ, ಧಾನ್ಯಗಳನ್ನು ಬಳಸಿ ರಂಗೋಲಿ ರಚನೆ), ಮನೆ/ಶಾಲೆ/ಅಂಗನವಾಡಿ ಕಚೇರಿ/ಖಾಸಗಿ ಸಂಸ್ಥೆಗಳಿಗೆ ಕೈತೋಟ, ತಾರಸಿ ತೋಟ ಮತ್ತು ಉದ್ಯಾನ ವನಗಳ ಸ್ಪರ್ಧೆ ಏರ್ಪಡಿಸಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳ ರೈತರು ಬೆಳೆದ ವಿಶೇಷ ರೀತಿಯ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕೆ ಉತ್ಪನಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಜಿಲ್ಲಾ ಪಂಚಾಯತ್ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ -ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ವೈವಿಧ್ಯಮಯ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇಲ್ಲಿ ಆಯೋಜಿಸಲಾಗಿದೆ.

ಕೃಷಿ, ಪಶುಸಂಗೋಪನೆ, ರೇಷ್ಮೆ,ಮೀನುಗಾರಿಕೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಸ್ತ್ರೀ ಶಕ್ತಿ ಸಂಘಗಳು, ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳು, ಹನಿನೀರಾವರಿ ಉಪಕರಣಗಳು, ಅಲಂಕಾರಿಕ ಹೂ ಗಿಡಗಳ ನರ್ಸರಿ ಇತ್ಯಾದಿ ಒಟ್ಟು ವಿವಿಧ ರೀತಿಯ 80 ಮಳಿಗೆಗಳು ಪ್ರದರ್ಶನದಲ್ಲಿರುತ್ತವೆ.

ಅರಣ್ಯ ಇಲಾಖೆ ಮತ್ತು ಮೃಗಾಲಯ ಪ್ರಾಧಿಕಾರದ ಹುಲಿ ಮತ್ತು ಸಿಂಹಧಾಮದ ವತಿಯಿಂದ ವಿವಿಧ ವನ್ಯಜೀವಿ ಲೋಕದ ಪರಿಚಯ ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳಾದ ಕೈತೋಟದ ಪ್ರಾತ್ಯಕ್ಷತೆ, ವಿವಿಧ ಅಲಂಕಾರಿಕೆ ಹೂಗಳು, ಕುಬ್ಜಗಿಡಗಳು, ಅಣಬೆ ಪ್ರಾತ್ಯಕ್ಷತೆ ಹಾಗೂ ಜೇನು ಕೃಷಿ ಕುರಿತಾದ ಪ್ರಾತ್ಯಕ್ಷತೆ ಹಾಗೂ ಸುಮಾರು 5 ಸಾವಿರ ವಿವಿಧ ಜಾತಿಯ ಆಕರ್ಷಕ ಹೂ ಕುಂಡಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಫಲ-ಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಶುಚಿಯಾದ ಮತ್ತು ರುಚಿಯಾದ ಆಹಾರೋತ್ಪನ್ನಗಳ ಆಹಾರ ಮೇಳವನ್ನು ಸಹ ಏರ್ಪಡಿಸಲಾಗಿದೆ.

ಪ್ರವೇಶ ಶುಲ್ಕ ವಯಸ್ಕರಿಗೆ ರೂ.10 ಮತ್ತು ಮಕ್ಕಳಿಗೆ ರೂ.5 ನಿಗದಿಗೊಳಿಸಿದ್ದು, ಶಿಕ್ಷಕರ ಜೊತೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಉಚಿತವಾಗಿರುತ್ತದೆ.

ಜ.27 ಮತ್ತು 28 ರಂದು ಸಂಜೆ 6 ರಿಂದ 8 ರವರೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತದೆ. ಆ.29 ರಂದು ಸಮಾರೋಪ ಸಮಾರಂಭವಿದ್ದು ಫಲ-ಪುಷ್ಪ ಪ್ರದರ್ಶನದ ವಿವಿಧ ಸ್ಪರ್ಧೆಗಳನ್ನು ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಭಾಗವಹಿಸಿದ ಎಲ್ಲಾ ಸರ್ಕಾರಿ/ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಅಭಿನಂದಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಹರಳೆಣ್ಣೆ ಸಿದ್ದಪ್ಪ, ಖಜಾಂಚಿ ರಘು ದುಮ್ಮಳ್ಳಿ, ನಿರ್ದೇಶಕರಾದ ಚಂದ್ರಕಾಂತ ಅಸಗೋಡು, ಚಂದ್ರಕಲಾ, ಆಶಾ ಶೇಷಾದ್ರಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ವನಮಾಲಾ ಉಪಸ್ಥಿತರಿದ್ದರು.

ಬಣ್ಣ ಬಣ್ಣದ ಬಳ್ಳಾರಿ ಉತ್ಸವಕ್ಕೆ ಸಂತಸದ ಸಮಾರೋಪ

0

Book Your Advertisement Now.

ಬಳ್ಳಾರಿ: ವಿಭಜನೆಯ ನಂತರ ಇದೇ ಪ್ರಥಮ ಬಾರಿಗೆ ಆಯೋಜಿಸಲಾದ ಬಳ್ಳಾರಿ ಉತ್ಸವಕ್ಕೆ ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಯಿತು.

2 ದಿನಗಳ ಕಾಲ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾದ ಬಳ್ಳಾರಿ ರಾಘವ ವೇದಿಕೆ ಹಾಗೂ ಐತಿಹಾಸಿಕ ಕೋಟೆ ಮಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ನಿರ್ಮಿಸಲಾದ ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಅತ್ಯುತ್ಸಾಹದಿಂದ ಭಾಗವಹಿಸಿ ಆಸ್ವಾದಿಸಿದರು.

ಸ್ಯಾಂಡಲ್‍ವುಡ್, ಟಾಲಿವುಡ್, ಬಾಲಿವುಡ್ ಹಾಗೂ ಸ್ಥಳೀಯ ಗಾಯಕರು, ರಾಜ್ಯ, ಅಂತರರಾಜ್ಯ ವಿವಿಧ ಕಲಾ ತಂಡಗಳು ನಾಡು ಹಾಗೂ ದೇಶದ ವಿವಿಧ ಸಾಂಸ್ಕತಿಕ ವೈಭವವನ್ನು ವೇದಿಕೆ ಮೇಲೆ ಅನಾವರಣಗೊಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಬಳ್ಳಾರಿ ಉತ್ಸವದ ಅಂಗವಾಗಿ ಜ.16 ರಿಂದಲೇ ವಿವಿಧ ಸಾಂಸ್ಕೃತಿಕ ಹಾಗೂ ಸ್ಪರ್ಧೆ ಕಾರ್ಯಕ್ರಮಗಳನ್ನು ಆಯೋಜಿಸಿ ಗಣಿ ನಾಡಿನ ಉತ್ಸವದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿತು.

ಉತ್ಸವದ ನಿಮಿತ್ತ ಬಳ್ಳಾರಿ ನಗರವನ್ನು ಸರ್ವ ರೀತಿಯಲ್ಲಿ ಸಿದ್ದಗೊಳಿಸಿ, ನಗರದ ಹೆಚ್.ಆರ್.ಗವಿಯಪ್ಪ ವೃತ್ತ, ಮೋತಿ ಸರ್ಕಲ್, ಎಸ್ಪಿ ಸರ್ಕಲ್, ದುರ್ಗಮ್ಮ ಗುಡಿ, ಸಂಗಮ ವೃತ್ತಗಳನ್ನು ವಿಶೇಷ ದೀಪಾಲಂಕಾರಗಳಿಂದ ಸಿಂಗರಿಸಿ ನಗರಕ್ಕೆ ಆಗಮಿಸುವ ಜನರನ್ನು ಆಕರ್ಷಿಸಲಾಯಿತು.

ಮುಖ್ಯ ರಸ್ತೆಗಳಲ್ಲಿ, ಬ್ಯಾನರ್, ದೀಪದ ತೋರಣಗಳನ್ನು ಕಟ್ಟಿ ಉತ್ಸವದ ಬಗ್ಗೆ ಸಾರಲಾಯಿತು.

ಜ.20 ರಂದು ಆಯೋಜಿಸಲಾದ ಅದ್ದೂರಿ ವಸಂತ ವೈಭವ ಅಂಬಾರಿಯಲ್ಲಿ ನಗರ ಆದಿದೇವತೆ ಕನಕದುರ್ಗಮ್ಮ ದೇವತೆ ಹೊತ್ತು ಆನೆಗಳೊಂದಿಗೆ ಸಾಗಿದ ಕಲಾ ತಂಡಗಳ ಮೆರವಣಿಗೆ ಮೈಸೂರು ದಸರಾ ವೈಭವ ಕಳೆಯನ್ನು ಉತ್ಸವಕ್ಕೆ ತಂದು ಕೊಟ್ಟಿತು.

ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಜ.21 ರಂದು ವಿದ್ಯುಕ್ತವಾಗಿ ಚೊಚ್ಚಲ ಬಳ್ಳಾರಿ ಉತ್ಸವಕ್ಕೆ ಚಾಲನೆ ನೀಡಿ, ಶಾಶ್ವತವಾಗಿ ಪ್ರತಿ ವರ್ಷವೂ ಸರ್ಕಾರದಿಂದ ಬಳ್ಳಾರಿ ಉತ್ಸವ ಆಯೋಜಿಸುವುದಾಗಿ ತಿಳಿಸಿದರು.

ಪ್ರಥಮ ಬಾರಿಗೆ ಉತ್ಸವ ಆಯೋಜಿಸಿ ಶ್ರಮ ಪಟ್ಟ ಜಿಲ್ಲಾಡಳಿತದ ಪ್ರಯತ್ನ ಫಲ ನೀಡಿದೆ. ಜಿಲ್ಲೆಯ ಜನತೆ ಹಿಂದೆಂದೂ ಕಾಣದ ರೀತಿಯಲ್ಲಿ ಅಪಾರ ಜನಸ್ತೋಮ ಉತ್ಸವದಲ್ಲಿ ಪಾಲ್ಗೊಂಡಿತು.

50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ವ್ಯವಸ್ಥಿವಾಗಿ ಆಸನ ಹಾಗೂ ಸೂಕ್ತ ಬಂದೋಬಸ್ತ್, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂದಿತು. ಸಕುಟುಂಬ ಸಹಿತವಾಗಿ ಜನರು ತಮ್ಮದೇ ಮನೆ ಹಬ್ಬದಂತೆ ಉತ್ಸವದಲ್ಲಿ ಪಾಲ್ಗೊಂಡರು.

ಎರಡು ದಿನಗಳ ಕಾಲ ಮುನಿಸಿಪಲ್ ಮೈದಾನ ಲಕ್ಷಾಂತರ ಜನರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಬಳ್ಳಾರಿ ಉತ್ಸವದೊಂದಿಗೆ ದೊಡ್ಡಮನೆಯ ನಂಟು; ಬಳ್ಳಾರಿ ಉತ್ಸವದಲ್ಲಿ ಡಾ.ರಾಜಕುಮಾರ್ ಕುಟುಂಬ ಸದಸ್ಯರು ಭಾಗವಹಿಸುವ ಮೂಲಕ ದೊಡ್ಡ ಮನೆಯ ನಂಟು ಬಳ್ಳಾರಿ ಉತ್ಸವದೊಂದಿಗೆ ಬೆಸೆದುಕೊಂಡಿತು. ನಗರದ ನಲ್ಲಚೇರುವು ಕೆರೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 23 ಅಡಿ ಎತ್ತರದ ಪುತ್ಥಳಿಯ ಅನಾವರಣವನ್ನು ಬಳ್ಳಾರಿ ಉತ್ಸವದಲ್ಲಿ ಸ್ಮರಣಿಯ ಕಾರ್ಯಕ್ರಮ ಎನಿಸಿಕೊಂಡಿತು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿ.ಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತ ಹೇಮಂತ್, ಎಡಿಸಿ ಮಂಜುನಾಥ, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಆಹಾರ ಇಲಾಖೆ ಉಪನಿರ್ದೇಶಕ ಮಹಮದ್ ಕೈಸರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಶಕೀನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಸವನಗೌಡ, ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಬಳ್ಳಾರಿ ಉತ್ಸವದ ಯಶಸ್ಸಿನ ಹಿಂದಿನ ಕ್ರಿಯಾ ಶಕ್ತಿಯಾಗಿ ಕಾರ್ಯನಿರ್ವಹಿಸಿದರು.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.