Monday, April 6, 2026
Monday, April 6, 2026
Home Blog Page 1304

Sagara Marikamba Jatre : ವೈವಿಧ್ಯಮಯ ಸಾಗರ ದೇವತೆ ಮಾರಿಕಾಂಬೆಯ ಜಾತ್ರೆ ವರ್ಣಮಯವಾಗಿ ಸಂಪನ್ನ

0

Sagara Marikamba Jatre : ಸಾಗರ ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಗೆ ಬುಧವಾರ ತೆರೆಬಿದ್ದಿದೆ. ಒಂಬತ್ತು ದಿನಗಳ ನಡೆದ ವೈಭವಯುತ ಹಾಗೂ ಅದ್ಧೂರಿ ಜಾತ್ರೆಯಲ್ಲಿ ಲಕ್ಷಾಂತರ ಜನರು ಶ್ರೀದೇವಿಯ ದರ್ಶನ ಪಡೆದರು.
ಒಂಬತ್ತು ದಿನಗಳ ಕಾಲವೂ ಪ್ರತಿ ದಿನ ಸಾವಿರಾರು ಜನರು ಸರತಿ ಸಾಲಿನಲ್ಲಿ ಶ್ರೀ ಮಾರಿಕಾಂಬೆಗೆ ಉಡಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ದೇವರಿಗೆ ಕುಂಕುಮಾರ್ಚನೆ, ತುಲಾಭಾರ ಸೇರಿದಂತೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವಿವಿಧ ಜಿಲ್ಲೆ, ರಾಜ್ಯಗಳಲ್ಲಿ ನೆಲೆಸಿರುವ ಸಾಗರದ ಜನತೆ ಶ್ರೀ ಮಾರಿಕಾಂಬಾ ಜಾತ್ರೆಗಾಗಿ ದೂರದ ಊರುಗಳಿಂದ ಆಗಮಿಸಿದ್ದರು.

ಜಾತ್ರಾ ಸಂದರ್ಭದಲ್ಲಿ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯಲು ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಮೊದಲ ದಿನದಿಂದಲೂ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿತ್ತು. ಜಾತ್ರೆಯ ಎಲ್ಲ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಜರುಗಿತು.

ಒಂಬತ್ತು ದಿನಗಳ ಕಾಲ ಜಾತ್ರೆಯಲ್ಲಿ ಪ್ರತಿಯೊಂದು ವ್ಯವಸ್ಥೆ ನಿರ್ವಹಣೆಗಾಗಿ ಸಮಿತಿ ರಚಿಸಲಾಗಿತ್ತು. ಗೋಪುರ ಸಮಿತಿ, ಸಾಂಸ್ಕೃತಿಕ, ರಥೋತ್ಸವ, ಅಮ್ಮನ ಬಳಗ, ದಾಸೋಹ, ಪೆಂಡಾಲ್, ಹರಾಜು, ಕುಸ್ತಿ, ಪೂಜಾ ಸಮಿತಿ, ವಸ್ತು ಪ್ರದರ್ಶನ, ಸ್ಟೇಷನರಿ, ಕಾಣ ಕೆ, ಪ್ರಚಾರ, ಪ್ರಸಾದ, ಉಗ್ರಾಣ ಸಮಿತಿ ಹೀಗೆ ಹತ್ತು ಹಲವು ಸಮಿತಿಗಳನ್ನು ರಚಿಸಿ ವ್ಯವಸ್ಥಿತವಾಗಿ ನಿರ್ವಹಣೆ ನಡೆಸಲಾಯಿತು.

ವೈಶಿಷ್ಟ್ಯತೆಯಿಂದ ಕೂಡಿದ್ದ ಸಾಗರದ ಶ್ರೀ ಮಾರಿಕಾಂಬಾ ಮೂರ್ತಿಯ ದರ್ಶನಕ್ಕಾಗಿ ಜಾತ್ರೆಯ ಮೊದಲ ದಿನದಿಂದಲೇ ಸಾವಿರಾರು ಜನರು ಆಗಮಿಸುತ್ತಿದ್ದರು. ತವರು ಮನೆಯಲ್ಲಿ ಮೊದಲ ದಿನ ಪಡೆಯಲು ಕೀಮಿ ಉದ್ದದ ಸರತಿ ಸಾಲು ಬೆಳೆದಿತ್ತು. ರಾಜಬೀದಿ ಉತ್ಸವದ ಮೂಲಕ ಶ್ರೀ ಮಾರಿಕಾಂಬೆಯನ್ನು ಗಂಡನ ಮನೆಗೆ ಕರೆದೊಯ್ಯಲಾಯಿತು.

ಎರಡನೇ ದಿನದಿಂದ ಒಂಬತ್ತನೇ ದಿನದವರೆಗೂ ದೇವಿಯನ್ನು ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಪ್ರತಿ ದಿನವೂ ಸಾವಿರಾರು ಜನರು ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು.
ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಗೆ ಪ್ರತಿ ದಿನವೂ ಆಗಮಿಸುವ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದ ವೀರಶೈವ ಕಲ್ಯಾಣ ಮಂದಿರದಲ್ಲಿ ಒಂಬತ್ತು ದಿನಗಳ ಕಾಲ ಜನರಿಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ದಾಸೋಹ ವ್ಯವಸ್ಥೆಯು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಪ್ರಸ್ತಕ ಸಾಲಿನ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಪ್ರತಿ ದಿನವೂ 8-10 ಸಾವಿರ ಜನರು ಅನ್ನ ದಾಸೋಹದಲ್ಲಿ ಊಟ ಮಾಡಿದ್ದು, ಒಟ್ಟಾರೆ ಒಂದು ಲಕ್ಷಕ್ಕೂ ಅಧಿಕ ಜನರು ಪ್ರಸಾದ ಸೇವಿಸಿದ್ದಾರೆ. ಇದರ ಜತೆಯಲ್ಲಿ ತವರುಮನೆ ಶ್ರೀ ಮಾರಿಕಾಂಬಾ ದೇವಸ್ಥಾನದ ಪಕ್ಕದ ವೃತ್ತದಲ್ಲಿ ಸ್ನೇಹಿತರು ಸಾಗರ ತಂಡದಿಂದಲೂ ಪ್ರತಿ ದಿನ ಮಧ್ಯಾಹ್ನ ಅನ್ನದಾಸೋಹ ವ್ಯವಸ್ಥೆ ಇತ್ತು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅನ್ನ ಸಂತರ್ಪಣೆ ನಡೆಸಿದರು. ಪಾನೀಯ, ಕಲ್ಲಂಗಡಿ ಹಣ್ಣನ್ನು ಜನರಿಗೆ ನೀಡಿದರು.

Sagara Marikamba Jatre ಜಾತ್ರೆಯ ಎರಡನೇ ದಿನದಿಂದ ಪ್ರತಿ ದಿನವೂ ನಗರಸಭೆ ಆವರಣದಲ್ಲಿ ನಿರ್ಮಿಸಿದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಮತ್ತು ರಾಜ್ಯದ ವಿವಿಧ ಜಿಲ್ಲೆಯ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಅವಕಾಶ ನೀಡಲಾಗಿತ್ತು. ಸಮೂಹ ನೃತ್ಯ, ಸುಗಮ ಸಂಗೀತ, ಗಾಯನ, ಭರತನಾಟ್ಯ, ರಸಮಂಜರಿ, ಮಲ್ಲಗಂಬ ಪ್ರದರ್ಶನ, ತಬಲ ವಾದನ, ಸ್ಯಾಕ್ಸೋಫೋನ್, ವಿವಿಧ ವಾದ್ಯಗಳ ಫ್ಯೂಜನ್ ಕಾರ್ಯಕ್ರಮ ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳು ನಡೆದವು.

ಇದಲ್ಲದೇ ಸಾಗರ ಶ್ರೀ ಮಾರಿಕಾಂಬಾ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ಮೂರು ದಿನಗಳ ರಾಷ್ಟçಮಟ್ಟದ ಕುಸ್ತಿ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ರಾಜ್ಯ, ರಾಷ್ಟ್ರದ ವಿವಿಧ ಭಾಗಗಳಿಂದ ಘಟಾನುಘಟಿ ಕುಸ್ತಿಪಟುಗಳು ಆಗಮಿಸಿದ್ದರು.

ರೋಚಕ ಹಣಾಹಣಯಿಂದ ಕೂಡಿದ್ದ ಪಂದ್ಯಗಳಿಗೆ ಸಾವಿರಾರು ಜನರು ಸಾಕ್ಷಿಯಾದರು.
ಬುಧವಾರ ರಾತ್ರಿ 10:30ಕ್ಕೆ ಶ್ರೀ ಪೋತರಾಜನಿಂದ ಚಾಟಿ ಸೇವೆ, ಅಮ್ಮನವರಿಗೆ ನೈವೇದ್ಯ, ಮಹಾಪ್ರಸಾದ ವಿನಿಯೋಗ ನಂತರ ರಾತ್ರಿ 12 ಗಂಟೆಯಿಂದ ಗುರುವಾರ ಬೆಳಗಿನ ಜಾವ 5ರವರೆಗೂ ಪ್ರಸಿದ್ಧ ಜಾನಪದ ಕಲಾತಂಡದೊಂದಿಗೆ ಶ್ರೀ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡುವ ಮೂಲಕ ಜಾತ್ರೆ ಮುಕ್ತಾಯಗೊಳ್ಳುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

‌Karnataka Union Of Working Journalists (KUWJ) ದೆಹಲಿಯ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ ಬಗ್ಗೆ ಶಿವಮೊಗ್ಗ ಪತ್ರಕರ್ತರ ಸಂಘದ ಖಂಡನೆ

0

Karnataka Union Of Working Journalists : ವಿಶ್ವದ ಪ್ರತಿಷ್ಠಿತ ಮಾಧ್ಯಮ ಬಿಬಿಸಿ ಮಾಧ್ಯಮ ದೆಹಲಿ ಕಚೇರಿ ಮೇಲೆ ನಡೆದ ಐಟಿ ಸರ್ವೆ ಕಾರ್ಯಚರಣೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುತ್ತಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಶಿವಮೊಗ್ಗದ ಅಧ್ಯಕ್ಷರಾದ ಕೆ. ವಿ. ಶಿವಕುಮಾರ್‌ ಅವರು ತಿಳಿಸಿದ್ದಾರೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಭಾರತ ದೇಶವಾಗಿದ್ದು, ಇಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಸ್ವತಂತ್ರವಾಗಿ ಅಭಿಪಾಯಗಳನ್ನು ವ್ಯಕ್ತಪಡಿಸುತ್ತ ಸಮಾಜವನ್ನು ಸರಿದಾರಿಯಲ್ಲಿ ಸಹಾಯಕಾರಿಯಾಗಿದೆ.

ಇಂತಹ ಸಂದರ್ಭದಲ್ಲಿ ಪ್ರತಿಷ್ಠಿತ ಬಿಬಿಸಿ ಮಾಧ್ಯಮದ ದೆಹಲಿ ಕಚೇರಿ ಮೇಲೆ ಮಂಗಳವಾರ ಆದಾಯ ತೆರಿಗೆ ಶೋಧ ಕಾರ್ಯ ಚರಣೆ ನಡೆದಿರುವುದು, ಖಂಡನೀಯ. ಹಾಗೆಯೇ ಇದು ಆತಂಕಕಾರಿ ಬೆಳವಣಿಗೆ.

ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಮಾಧ್ಯಮಗಳನ್ನು ಹತ್ತಿಕ್ಕಲು ನಡೆಯುವಂತೆ ಇಂತಹ ಪ್ರಯತ್ನಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Karnataka Union Of Working Journalists

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಡೆಹ್ರಾಡೂನ್ ಮಿಲಿಟರಿ ಶಾಲೆ 8 ನೇ ತರಗತಿ ಪ್ರವೇಶಾತಿ ಅರ್ಹತಾ ಪರೀಕ್ಷೆ

0

ಡೆಹರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ 11 ವರ್ಷದಿಂದ 13 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ದಿ: 03/06/2023ರಂದು ನಡೆಸಲಾಗುತ್ತಿದ್ದು, ಆಸಕ್ತರು ಅರ್ಜಿಯನ್ನು ದಿ: 15/04/2023 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂ.ಸಂ.: 080-25589459ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Blood Donation Camp In Shimoga ಜೀವದ ಉಳಿವಿಗೆ ರಕ್ತದಾನ ಅಮೂಲ್ಯ ಕೊಡುಗೆ- ಡಾ.ವಿರೂಪಾಕ್ಷಪ್ಪ

0

Blood Donation Camp In Shimoga ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಯುವ ರೆಡ್ ಕ್ರಾಸ್ ಎನ್ಎಸ್ಎಸ್ ಎನ್ ಸಿ ಸಿ, ರೋವರ್ಸ್ ಮತ್ತು ರೆಂಜರ್ಸ್ ಘಟಕ ಹಾಗೂ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಒಂದು ದಿನದ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.

ಮೆಗಾನ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ವಿರೂಪಾಕ್ಷಪ್ಪ ವಿ ಯವರು ಮಾತನಾಡಿ, ” ರಕ್ತದಾನವು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಒಂದು ಜೀವದ ಉಳಿವಿಗೆ ರಕ್ತದಾನವು ಕಾರಣವಾಗಿದೆ. ಮನುಷ್ಯ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಒಂದು ಹನಿ ರಕ್ತವನ್ನು ಅವನು ಉತ್ಪಾದಿಸಲಾರ. ರಕ್ತದಾನ ಮಾಡಿದಷ್ಟು ನಾವು ಆರೋಗ್ಯವಂತರಾಗಿರುತ್ತೇವೆ. ಅನಿಮಿಯದಿಂದ ಬಳಲುವ ಎಷ್ಟೋ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಈ ರಕ್ತವು ಒಂದು ವರದಾನವಾಗಿದೆ.” ಎಂದರು.

Blood Donation Camp In Shimoga ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ. ಕೆ.ವೀಣಾ ಅವರು ಮಾತನಾಡಿ, ” ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರತಿವರ್ಷವೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಯುವ ಜನರು ರಕ್ತದಾನದ ಮಹತ್ವವನ್ನು ತಿಳಿಯುವುದು ಅವಶ್ಯ. ಮನುಷ್ಯನಿಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಹುದು. ಅದರಲ್ಲೂ ರಕ್ತದಾನದ ಮೂಲಕ ಮಾಡುವ ಉಪಕಾರವು ಶ್ರೇಷ್ಠವಾದ ಮಾನವ ಧರ್ಮವಾಗಿದೆ. ಸಾವು ಮತ್ತು ಬದುಕಿನ ನಡುವೆ ಹೋರಾಡುವ ಎಷ್ಟೋ ವ್ಯಕ್ತಿಗಳಿಗೆ ರಕ್ತದಾನವು ಜೀವದಾನವನ್ನು ಮಾಡುತ್ತದೆ. ಇಂತಹ ಉತ್ತಮ ಕೆಲಸಗಳಲ್ಲಿ ನಮ್ಮ ಯುವ ಜನರು ತೊಡಗಿಕೊಳ್ಳಬೇಕಾದ ಅಗತ್ಯವಿದೆ” ಎಂದರು.

ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಬಾಲ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ವೈದ್ಯರಾದ ಡಾ.ವೀಣಾ ಎಸ್., ಪ್ರಾಧ್ಯಾಪಕರಾದ ಡಾ. ಸರಳ ಕೆ ಎಸ್,ಡಾ. ಶಿವಮೂರ್ತಿ ಎ., ಡಾ ಶುಭಾ ಮರವಂತೆ, ಶ್ರೀ ಪರಶುರಾಮ ಎಂ., ಲೆಪ್ಟಿನೆಂಟ್ ಶಶಿರಾಜ್ ಯು, ಶ್ರೀ ಆದರ್ಶ ಎಂ ಪಿ ಎಂ, ಶ್ರೀಮತಿ ಮಮತಾ ಆರ್ ಉಪಸ್ಥಿತರಿದ್ದರು.
ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನದಲ್ಲಿ ಭಾಗವಹಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಕ್ಕಳಲ್ಲಿ ಬಾಲ್ಯದಿಂದಲೇ ರಾಷ್ಟ್ರ ಪ್ರೇಮ ಜಾಗೃತಿಗೊಳಿಸಿ- ನಾಗರಾಜ್

0

ಮಕ್ಕಳಿಗೆ ಬಾಲ್ಯದಿಂದ ಹಾಗೂ ಶೈಕ್ಷಣಿಕ ಹಂತದಿಂದಲೇ ರಾಷ್ಟ್ರ ಪ್ರೇಮದ ಜಾಗೃತಿ ಮೂಡಿಸಬೇಕು. ಮಕ್ಕಳಲ್ಲಿ ಉತ್ತಮ ನಾಗರೀಕರಾಗಿ ರೂಪುಗೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಫ್ರೆಂಡ್ ಸೆಂಟರ್ ಅಧ್ಯಕ್ಷ ನಾಗರಾಜ್ ಹೇಳಿದರು.

ವಿನೋಬನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫ್ರೆಂಡ್ಸ್ ಸೆಂಟರ್ ರಕ್ತ ಮತ್ತು ನೇತ್ರ ಬಂಡಾರ, ಶಿವಮೊಗ್ಗ ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಂಡ್ ಸೆಟ್ ಕೊಡುಗೆ ಮತ್ತು ಲೇಖನ ಸಾಮಗ್ರಿ ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಯ ಮಕ್ಕಳಲ್ಲಿ ಎಲ್ಲ ಪ್ರತಿಭೆ ಇರುತ್ತದೆ. ಶಾಲೆಯಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳು ನಮ್ಮ ದೇಶದ ಆಸ್ತಿ. ಎಲ್ಲಾ ಮಕ್ಕಳಲ್ಲಿ ದೇಶ ಭಕ್ತಿ, ರಾಷ್ಟ್ರ ಪ್ರೇಮ ಮತ್ತು ಸದ್ಭಾವನೆ ಶಿಸ್ತಿನ ಅರಿವು ಅಗತ್ಯ. ರಾಷ್ಟ್ರೀಯತೆಯ ಮಹತ್ವದ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾದ ವಲ್ಲಭಭಾಯಿ ಪಟೇಲ್ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ವಿವರಿಸಿದರು. ನೆರವು ನೀಡಲು ಬಯಸುವ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಹಾಯ ಮಾಡಬೇಕು. ಈ ಬ್ಯಾಂಡ್ ಸೆಟ್ ಮುಖಾಂತರ ಮಕ್ಕಳಲ್ಲಿ ಚಟುವಟಿಕೆ ಆತ್ಮಸ್ಥೈರ್ಯ ಹೆಚ್ಚಬೇಕು. ಸರ್ಕಾರಿ ಶಾಲೆಯಲ್ಲಿ ಓದುವುದರ ಮೂಲಕ ಉತ್ತಮ ಅಂಕಗಳಿಸುವುದರೊಂದಿಗೆ ಎಲ್ಲಾ ಕ್ಷೇತ್ರದಲ್ಲೂ ದೇಶಕ್ಕೆ ಮಾದರಿಯಾಗಲಿ ಮತ್ತು ದಾನ ನೀಡಿದ ವಸ್ತುಗಳ ಸದ್ಭಳಕೆಯಾಗಬೇಕು ಎಂದು ಆಶಿಸಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಗೋಪಾಲಕೃಷ್ಣ, ನಿರ್ದೇಶಕರಾದ ವಿಜಯಕುಮಾರ್, ರವೀಂದ್ರನಾಥ ಐತಾಳ್, ಮಹಿಳಾ ಅಧ್ಯಕ್ಷೆ ಲತಾ ರಮೇಶ್, ರಂಜಿನಿ ದತ್ತಾತ್ರಿ, ಡಿ.ಪಿ.ಮೋಹನ್, ಸುನಿತಾ ಮೋಹನ್, ಆಡಿಟರ್ ಲೋಕೇಶ್, ಮಂಜುಳಾ, ಗುರುನಾಥ, ವೀಣಾ ಗುರುನಾಥ, ಸತ್ಯನಾರಾಯಣ, ನೇತ್ರ ಭಂಡಾರದ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮುಖ್ಯಶಿಕ್ಷಕಿ ಪಾರ್ವತಮ್ಮ, ವಿ.ನಾಗರಾಜ್ ಮತ್ತು ಇತರ ಸದಸ್ಯರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗ್ರಾಮ ಪರಸ್ಕಾರ ಪಡೆದ ಚಿಕ್ಕಮಗಳೂರು ಜಿಲ್ಲೆ ಹರಿಹರದಹಳ್ಳಿ ಗ್ರಾಮ ಪಂಚಾಯತ್

0

ಚಿಕ್ಕಮಗಳೂರು ತಾಲ್ಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿಯು 2021-22ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಐದು ಲಕ್ಷ ರೂ. ನಗದು ಬಿಡುಗಡೆಗೊಳಿಸಿ ಪ್ರೋತ್ಸಾಹಿಸಿದೆ ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪಿ.ಲಕ್ಷ್ಮಣ್ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಜಿ.ಪಂ. ನೇತೃತ್ವದಲ್ಲಿ ಆಯ್ಕೆ ಸಮಿತಿ ಯ ಮೂಲಕ ಶಿಫಾರಸ್ಸು ಮಾಡಲಾದ ತಾಲ್ಲೂಕಿಗೆ ಒಂದರಂತೆ ಗ್ರಾ.ಪಂ. ಅನ್ನು ರಾಜ್ಯಮಟ್ಟದ ವಿಮರ್ಶೆ ಸಮಿತಿ ಸಭೆಯಲ್ಲಿ ಹರಿಹರದಹಳ್ಳಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ರಾಜ್ಯಪಾಲರ ಆದೇಶಾನುಸಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ ಘೋಷಿಸಿದೆ ಎಂದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ 9 ತಾಲ್ಲೂಕುಗಳಿಗೆ ಗಾಂಧಿಗ್ರಾಮ ಪುರಸ್ಕಾರ ಲಭಿಸಿದ್ದು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹರಿಹರದಹಳ್ಳಿ ಗ್ರಾಮ ಪಂಚಾಯಿತಿಯು ಉತ್ತಮ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸರ್ಕಾರವು ಗಾಂಧಿ ಪುರಸ್ಕಾರ ಹಾಗೂ ನಗದನ್ನು ನೀಡಿ ಪ್ರೋತ್ಸಾಹಿಸಲಾಗಿದೆ ಎಂದು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮೇರುವ್ಯಕ್ತಿಗಳನ್ನ ಕೇವಲ ಪೂಜೆಗೇ ಸೀಮಿತಗೊಳಿಸಬೇಡಿ- ಡಾ.ನಾಗೇಂದ್ರ ನಾಯ್ಕ್

0

ಸಂತ ಶ್ರೀ ಸೇವಾಲಾಲರು ಓರ್ವ ವೀರರು, ಸಮಾಜ ಸುಧಾರಕು ಹಾಗೂ ಮೇರು ವ್ಯಕ್ತಿಗಳಾಗಿದ್ದು ಇವರನ್ನು ಕೇವಲ ಪೂಜೆಗೆ ಸೀಮಿತಗೊಳಿಸದೆ ಇಂತಹ ಮಹಾನ್ ಪುರುಷರ ಹಾದಿಯಲ್ಲಿ ನಾವು ನಡೆಯುವಂತಾಗಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗೇಂದ್ರ ನಾಯ್ಕ್ .ಕೆ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ ಸಂಘ ಶಿವಮೊಗ್ಗ ಇವರ ಸಂಯಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಬಂಜಾರ ಸಮಾಜದ ಸದ್ಗುರು ಎಂದೇ ಕರೆಸಿಕೊಳ್ಳುವ ಸಂತ ಸೇವಾಲಾಲರು 1739 ರ ಫೆಬ್ರವರಿ 15 ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಯಾಡಿ ದಂಪತಿಗೆ ಜನಿಸಿದರು.

ಸಂತ ಸೇವಾಲಾಲರು ಶ್ರೀಮಂತ ವ್ಯಾಪಾರಿಗಳ ಕುಟುಂಬಕ್ಕೆ ಸೇರಿದವರಾಗಿದ್ದು, ಹಿಂದೆ ಇವರು ಲಗಾಣಿಗಳೆಂಬ ಸಾಮಾನು ಸರಂಜಾಮುಗಳನ್ನು ಹೊತ್ತು ತಿರುಗುವ ಬಂಡಿಗಳ ಮೂಲಕ ದೇಶದ ಮುಖ್ಯ ವ್ಯಾಪಾರ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿ ವ್ಯಾಪಾರ ಮಾಡುತ್ತಿದ್ದರು.

ಸೂರಗೊಂಡನಕೊಪ್ಪವನ್ನು ವ್ಯಾಪಾರದ ಲಗಾಣಿಯ ಮಾರ್ಗವೆಂದು ಗುರುತಿಸಲಾಗಿದೆ.
ಬಂಜಾರರನ್ನು ಗೋರ್ ಮಾಟಿಗಳೆಂದು ಸಹ ಕರೆಯಲಾಗುತ್ತದೆ. ಗೋ ಅಂದರೆ ಗೋವು ರ್ ಅಂದರೆ ರಕ್ಷಕ, ಗೋವುಗಳನ್ನು ರಕ್ಷಿಸುವ ಸಮಾಜ ಎಂದು ಗುರುತಿಸಲಾಗುತ್ತದೆ. ಹೀಗೆ ಬಂಜಾರರನ್ನು ಸುಮಾರು 30 ಕ್ಕೂ ಹೆಚ್ಚು ಪದಗಳಿಂದ ಕರೆಯಲಾಗುತ್ತದೆ. ದೇಶದಾದ್ಯಂತ ಸಂತ ಸೇವಾಲಾಲರ ಪವಿತ್ರ ಸ್ಥಳಗಳು ಇದ್ದು, ಬಂಜಾರ ಸಮಾಜ ಹಾಗೂ ಸಂತ ಸೇವಾಲಾಲರ ಇತಿಹಾಸವನ್ನು ಪ್ರಚುರಪಡಿಸಬೇಕಿದೆ.

ಧರ್ಮದ ಕಲ್ಪನೆ ಇಲ್ಲದ ಸಂದರ್ಭದಲ್ಲಿ ಬಂಜಾರ ಧರ್ಮ ಸ್ಥಾಪನೆ ಮಾಡಿದವರು ದೇಮಾ ಗುರು. ಇವರು ಸೇವಾಲಾಲರ ಗುರುಗಳು. ನಂತರ ಸೇವಾಲಾಲರು ಈ ಗುರು ಪರಂಪರೆಯನ್ನು ಮುಂದುವರೆಸಿಕೊಂಡು, ಸಮಾಜ ಸುಧಾರಕರಾಗಿ, ವೀರರಾಗಿ ಮುಂದುವರೆಯುತ್ತಾರೆ. ಸೇವಾಲಾಲರನ್ನು ಓರ್ವ ಪವಾಡ ಪುರುಷನೆಂದು ಉಲ್ಲೇಖಿಸಲಾಗಿದೆ. ಆದರೆ ಅವರೊಬ್ಬ ಮೇರು ವ್ಯಕ್ತಿ ಹಾಗೂ ಆದರ್ಶ ಪುರುಷ. ಇಂತಹ ಮಹಾನ್‍ಪುರುಷನನ್ನು ಪೂಜಿಸಿ ದೈವತ್ವಕ್ಕೆ ಏರಿಸುವುದಕ್ಕಿಂತ ಅವರ ತತ್ವಗಳನ್ನು, ಇತಿಹಾಸವನ್ನು ಪ್ರಚುರಪಡಿಸಬೇಕು ಹಾಗೂ ನಾವು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಡಾ.ನಾಗರಾಜ್ ಮಾತನಾಡಿ, ನನಗೂ ಸಂತ ಶ್ರೀ ಸೇವಾಲಾಲ್ ಜಯಂತಿಗೂ ಅವಿನಾಭಾವ ಸಂಬಂಧ ಇದೆ. ಹೊನ್ನಾಳಿ ತಾಲ್ಲೂಕು ತಹಶೀಲ್ದಾರರಾಗಿದ್ದಾಗ ಸೂರಗೊಂಡನಕೊಪ್ಪದ ಭಾಯಾಗಡ್‍ನಲ್ಲಿ ಅತ್ಯಂತ ಉತ್ಸುಕತೆಯಿಂದ ವಿಜೃಂಭಣೆಯ ಸೇವಾಲಾಲ್ ಜಯಂತಿ ಸಿದ್ದತೆ ಮತ್ತು ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಸ್ಮರಿಸಿದ ಅವರು ಶಿವಮೊಗ್ಗ ನಗರದ ಮಧ್ಯ ಭಾಗದಲ್ಲಿರುವ ಬಂಜಾರ ಸೇವಾಲಾಲ್ ಸಮುದಾಯ ಭವನ ಇಡೀ ರಾಜ್ಯಕ್ಕೆ ಮಾದರಿಯಂತಿದೆ ಎಂದರು.

ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷ ಆಯನೂರು ಶಿವನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಜಗದೀಶ್, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಕನ್ನಡ ಮತ್ತು ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮರೆಯಲಾಗದ ಆಪ್ತರು ಪ್ರೊ.ಜಿ.ಆರ್.ಜಗದೀಶ್

0

ವ್ಯಕ್ತಿಯ ಪ್ರತಿಭೆ ಅರಿತುಕೊಳ್ಳಲು ಬಹಳ ಕ್ಷಣಗಳು ಬೇಕಿಲ್ಲ. ಸಂಪರ್ಕಕ್ಕೆ ಬಂದ ತಕ್ಷಣ ಅವರ ನಡೆ ನುಡಿಗಳೇ ಸ್ವಯಂ ಪ್ರಕಾಶಿಸಿಬಿಡುತ್ತವೆ.
ಅವರು ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳುವುದಿಲ್ಲ.
ವ್ಯಕ್ತಿತ್ವವನ್ನ ಅಂಥವರ ಸ್ನೇಹಿತರಿಂದ ತಿಳಿಯಬಹುದು.
ಇಂತಹ ವಾಕ್ಯಗಳನ್ನ ಜಗದೀಶ್ ಅವರ ಸಾವಿನ ಸುದ್ದಿ ಕೇಳಿ ಬರೆಯಲೇ ಬೇಕಾಯಿತು.

ಜಿ.ಆರ್. ಜಗದೀಶ್ ಅವರು ನಿನ್ನೆಯಷ್ಟೇ ನಮ್ಮನ್ನಗಲಿದರು.
ಶಿವಮೊಗ್ಗ ನ್ಯಾಷನಲ್ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿದ್ದರು.

ನಮ್ಮ ಕೆ ಲೈವ್ ಮಾಧ್ಯಮಕ್ಕೆ ಅವರನ್ನ ಕಳೆದ ನವೆಂಬರ್ ತಿಂಗಳಲ್ಲಿ ಕಿರು ಭಾಷಣಕ್ಕೆ ಆಹ್ವಾನಿಸಲಾಗಿತ್ತು.
ನಮ್ಮ ಸಂವಿಧಾನ – ನಮ್ಮ ಹೆಮ್ಮೆ ವಿಷಯ ಕುರಿತು ಸರಳವಾದ ನುಡಿಗಳಲ್ಲಿ ನಮ್ಮ ಸಂವಿಧಾನದ ಬಗ್ಗೆ ಮಾತನಾಡಿದ್ದರು.
ಕಾನೂನು ಸಂಗತಿಗಳ ಬಗ್ಗೆ ಮಾಧ್ಯಮದಲ್ಲಿ ನಿಮ್ಮ ಮಾತುಗಳು ಬೇಕು ಎಂದು ಕೇಳಿದ್ದೆ.

ಫೆಬ್ರವರಿಯಲ್ಲಿ ರಿಟೈರ್ ಆಗುತ್ತೇನೆ .ನಂತರ ನಿಮ್ಮಲ್ಲಿಗೆ ಬರುತ್ತೇನೆ
ಕಾರ್ಯಕ್ರಮ ಮಾಡೋಣ ಎಂದು ಭರವಸೆ ನೀಡಿದ್ದರು.
ನನಗೆ ಅವರು ನಮ್ಮ ಮೇಷ್ಟ್ರಮಗ. ಅವರ ತಂದೆ ಜಿ.ಬಿ.ರುದ್ರಪ್ಪನವರು
ಕೆಮಿಸ್ಟ್ರಿ ಮೇಷ್ಟ್ರಾಗಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ
ವಿಜ್ಞಾನ ಮೇಳ ಏರ್ಪಡಿಸುತ್ತಿದ್ದರು.

ವಿಜ್ಞಾನ ವಿಷಯ ಎಂದರೆ ಅವರಿಗೆ ಪಂಚಪ್ರಾಣ.
ಅವರಿಗೆ ಮಗ ಜಗದೀಶ್ ಎಂದರೆ ಬಹಳ ಅಚ್ವುಮೆಚ್ಚು.
ಜಗದಿಶ್ ಅವರ ಹಿರಿಯರು
ಚನ್ನಗಿರಿ ಬಳಿಯ ಹಿರೇಉಡದವರು.
ಕೊಡುಗೈ ದಾನಿಗಳು.
ಅವರ ಅಜ್ಜಂದಿರು ದಾನ ನೀಡಿ ಕಟ್ಟಿಸಿದ ಪಶುವೈದ್ಯಕೀಯ ಆಸ್ಪತ್ರೆ ಚನ್ನಗಿರಿಯಲ್ಲಿದೆ.

ದಾನಿಗಳ ಕುಟುಂಬದಲ್ಲಿ ಬಂದ ಜಗದೀಶ್ ,ವಿದ್ಯಾ ದಾನದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು.
ವಿದ್ಯಾರ್ಥಿಗಳ ನಡುವ ಅತ್ಯಂತ ಆತ್ಮೀಯರಾಗಿ ಹೆಸರು ಮಾಡಿದವರು.

ಜಗದಿಶ್ ನಮ್ಮ ಜೊತೆ ಈಗ ಇಲ್ಲ ಎಂದು ನಂಬುವುದೇ ಅಸಾಧ್ಯ.
ಜಗದೀಶ್ ಅ‌ವರ ಆತ್ಮಕ್ಕೆ ಚಿರಶಾಂತಿಯನ್ನ ಭಗವಂತ ನೀಡಲಿ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶ್ರೀಮತಿ ಸುಧಾ ಮೂರ್ತಿ ಅವರಿಗೆ 2023 ನೇ ಸಾಲಿನ ವಿಜ್ಞಾತಂ ಪುರಸ್ಕಾರ

0

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ಪಟ್ಟಾಭಿಷೇಕದ ಅಂಗವಾಗಿ ಬರುವ ಫೆ. 19 ಹಾಗೂ 20ರಂದು ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಜ್ಞಾನ,ವಿಜ್ಞಾನ ಮತ್ತು ತಂತ್ರಜ್ಞಾನ ಮೇಳವನ್ನು ಆಯೋಜಿಸಲಾಗಿದೆ.

ಮಹಾಸಂಸ್ಥಾನದ ಪೀಠಾಧ್ಯಕ್ಷರ ಪಟ್ಟಾಭಿಷೇಕದ 10ನೇ ವರ್ಷದ ಅಂಗವಾಗಿ ಮೇಳವನ್ನು ಆಯೋಜಿಸಲಾಗಿದ್ದು, ಶ್ರೀಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಪಿ.ಜಿ. ಸೀತಾರಾಮ ಅವರು ಉದ್ಘಾಟಿಸಲಿದ್ದು, ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಂದಾಯ ಸಚಿವ ಅಶೋಕ್ ಹಾಗೂ ಇತರರು ಭಾಗವಹಿಸಲಿದ್ದಾರೆ.

ವಿಶೇಷವಾಗಿ ಮೇಳದಲ್ಲಿ ರಾಜ್ಯದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಕಾಲೇಜುಗಳು ಭಾಗವಹಿಸಲಿವೆ.
ಬರುವ ಫೆ 20ರಂದು ಶ್ರೀಗಳಿಗೆ ವಾರ್ಷಿಕ ಪಟ್ಟಾಭಿಷೇಕ ನಡೆಯಲಿದ್ದು, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಇತರ ಗಣ್ಯರು ಆಗಮಿಸಲಿದ್ದು, ಈ ಸಂದರ್ಭದಲ್ಲಿ 2023 ನೇ ಸಾಲಿನ ವಿಜ್ಞಾತಂ ಪ್ರಶಸ್ತಿಯನ್ನು ಇನ್ಪೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ ಡಾ. ಸುಧಾ ಮೂರ್ತಿ ಅವರಿಗೆ ಪ್ರಧಾನ ಮಾಡಲಾಗುವುದು.

ಈ ಎರಡು ದಿನದ ಕಾರ್ಯಕ್ರಮದಲ್ಲಿ ಪ್ರತಿದಿನ ರಾಜ್ಯದ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಸರ್ವರನ್ನು ಹಾಗೂ ಭಕ್ತರನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಸ್ವಾಗತಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಾನುವಾರುಗಳಿಗೆ ಕಂದು ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಆರಂಭ- ಡಾ.ಶಿವಯೋಗಿ ಬಿ.ಯಲಿ

0

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಕಂದು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಲಸಿಕಾ ಕಾರ್ಯಕ್ರಮದಡಿ 4 ರಿಂದ 8 ತಿಂಗಳ ಅರ್ಹ ಆಕಳು /ಎಮ್ಮೆಗಳ ಹೆಣ್ಣು ಕರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ.
ಫೆಬ್ರವರಿ 13 ರಿಂದ ಆರಂಭಗೊಂಡಿರುವ ಈ ಲಸಿಕಾ ಅಭಿಯಾನ ಫೆಬ್ರವರಿ 28 ರವರೆಗೆ ನಡೆಯುತ್ತದೆ.

ಕಂದು ರೋಗವು ಪ್ರಾಣಿಜನ್ಯ ರೋಗವಾಗಿದ್ದು, ರಾಸುಗಳಲ್ಲಿ ಈ ರೋಗದಿಂದ ಗರ್ಭಧರಿಸಿದ ಹಸುಗಳು 6 ತಿಂಗಳ ನಂತರ ಕಂದು ಹಾಕಬಹುದು. ಅವುಗಳ ಗರ್ಭಸ್ರಾವದಿಂದ ಮತ್ತು ಹಸಿ ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ ರೋಗವು ಮನುಷ್ಯರಿಗೂ ಹರಡಬಹುದು. ಈ ರೋಗವು ಮನುಷ್ಯರಿಗೆ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅರ್ಹ ಕರುಗಳಿಗೆ ಲಸಿಕೆ ಹಾಕಿಸಿ, ಸಂಭವಿಸಬಹುದಾದ ಆರ್ಥಿಕ ನಷ್ಟ ತಪ್ಪಿಸಿ ನಿಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಕೋರಿದೆ.

ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲ್ಲೂಕುವಾರು ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಬೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ಚಿಕಿತ್ಸಾ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ.ಯಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.