Blood Donation Camp In Shimoga ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಯುವ ರೆಡ್ ಕ್ರಾಸ್ ಎನ್ಎಸ್ಎಸ್ ಎನ್ ಸಿ ಸಿ, ರೋವರ್ಸ್ ಮತ್ತು ರೆಂಜರ್ಸ್ ಘಟಕ ಹಾಗೂ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಒಂದು ದಿನದ ರಕ್ತದಾನ ಶಿಬಿರವು ಯಶಸ್ವಿಯಾಗಿ ನಡೆಯಿತು.
ಮೆಗಾನ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ವಿರೂಪಾಕ್ಷಪ್ಪ ವಿ ಯವರು ಮಾತನಾಡಿ, ” ರಕ್ತದಾನವು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಒಂದು ಜೀವದ ಉಳಿವಿಗೆ ರಕ್ತದಾನವು ಕಾರಣವಾಗಿದೆ. ಮನುಷ್ಯ ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಒಂದು ಹನಿ ರಕ್ತವನ್ನು ಅವನು ಉತ್ಪಾದಿಸಲಾರ. ರಕ್ತದಾನ ಮಾಡಿದಷ್ಟು ನಾವು ಆರೋಗ್ಯವಂತರಾಗಿರುತ್ತೇವೆ. ಅನಿಮಿಯದಿಂದ ಬಳಲುವ ಎಷ್ಟೋ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಈ ರಕ್ತವು ಒಂದು ವರದಾನವಾಗಿದೆ.” ಎಂದರು.
Blood Donation Camp In Shimoga ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ. ಕೆ.ವೀಣಾ ಅವರು ಮಾತನಾಡಿ, ” ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರತಿವರ್ಷವೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಯುವ ಜನರು ರಕ್ತದಾನದ ಮಹತ್ವವನ್ನು ತಿಳಿಯುವುದು ಅವಶ್ಯ. ಮನುಷ್ಯನಿಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಹುದು. ಅದರಲ್ಲೂ ರಕ್ತದಾನದ ಮೂಲಕ ಮಾಡುವ ಉಪಕಾರವು ಶ್ರೇಷ್ಠವಾದ ಮಾನವ ಧರ್ಮವಾಗಿದೆ. ಸಾವು ಮತ್ತು ಬದುಕಿನ ನಡುವೆ ಹೋರಾಡುವ ಎಷ್ಟೋ ವ್ಯಕ್ತಿಗಳಿಗೆ ರಕ್ತದಾನವು ಜೀವದಾನವನ್ನು ಮಾಡುತ್ತದೆ. ಇಂತಹ ಉತ್ತಮ ಕೆಲಸಗಳಲ್ಲಿ ನಮ್ಮ ಯುವ ಜನರು ತೊಡಗಿಕೊಳ್ಳಬೇಕಾದ ಅಗತ್ಯವಿದೆ” ಎಂದರು.
ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಬಾಲ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ವೈದ್ಯರಾದ ಡಾ.ವೀಣಾ ಎಸ್., ಪ್ರಾಧ್ಯಾಪಕರಾದ ಡಾ. ಸರಳ ಕೆ ಎಸ್,ಡಾ. ಶಿವಮೂರ್ತಿ ಎ., ಡಾ ಶುಭಾ ಮರವಂತೆ, ಶ್ರೀ ಪರಶುರಾಮ ಎಂ., ಲೆಪ್ಟಿನೆಂಟ್ ಶಶಿರಾಜ್ ಯು, ಶ್ರೀ ಆದರ್ಶ ಎಂ ಪಿ ಎಂ, ಶ್ರೀಮತಿ ಮಮತಾ ಆರ್ ಉಪಸ್ಥಿತರಿದ್ದರು.
ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನದಲ್ಲಿ ಭಾಗವಹಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.