Thursday, June 19, 2025
Thursday, June 19, 2025

ಮೇರುವ್ಯಕ್ತಿಗಳನ್ನ ಕೇವಲ ಪೂಜೆಗೇ ಸೀಮಿತಗೊಳಿಸಬೇಡಿ- ಡಾ.ನಾಗೇಂದ್ರ ನಾಯ್ಕ್

Date:

ಸಂತ ಶ್ರೀ ಸೇವಾಲಾಲರು ಓರ್ವ ವೀರರು, ಸಮಾಜ ಸುಧಾರಕು ಹಾಗೂ ಮೇರು ವ್ಯಕ್ತಿಗಳಾಗಿದ್ದು ಇವರನ್ನು ಕೇವಲ ಪೂಜೆಗೆ ಸೀಮಿತಗೊಳಿಸದೆ ಇಂತಹ ಮಹಾನ್ ಪುರುಷರ ಹಾದಿಯಲ್ಲಿ ನಾವು ನಡೆಯುವಂತಾಗಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗೇಂದ್ರ ನಾಯ್ಕ್ .ಕೆ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ ಸಂಘ ಶಿವಮೊಗ್ಗ ಇವರ ಸಂಯಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಬಂಜಾರ ಸಮಾಜದ ಸದ್ಗುರು ಎಂದೇ ಕರೆಸಿಕೊಳ್ಳುವ ಸಂತ ಸೇವಾಲಾಲರು 1739 ರ ಫೆಬ್ರವರಿ 15 ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯ್ಕ ಮತ್ತು ಧರ್ಮಿಣಿ ಯಾಡಿ ದಂಪತಿಗೆ ಜನಿಸಿದರು.

ಸಂತ ಸೇವಾಲಾಲರು ಶ್ರೀಮಂತ ವ್ಯಾಪಾರಿಗಳ ಕುಟುಂಬಕ್ಕೆ ಸೇರಿದವರಾಗಿದ್ದು, ಹಿಂದೆ ಇವರು ಲಗಾಣಿಗಳೆಂಬ ಸಾಮಾನು ಸರಂಜಾಮುಗಳನ್ನು ಹೊತ್ತು ತಿರುಗುವ ಬಂಡಿಗಳ ಮೂಲಕ ದೇಶದ ಮುಖ್ಯ ವ್ಯಾಪಾರ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿ ವ್ಯಾಪಾರ ಮಾಡುತ್ತಿದ್ದರು.

ಸೂರಗೊಂಡನಕೊಪ್ಪವನ್ನು ವ್ಯಾಪಾರದ ಲಗಾಣಿಯ ಮಾರ್ಗವೆಂದು ಗುರುತಿಸಲಾಗಿದೆ.
ಬಂಜಾರರನ್ನು ಗೋರ್ ಮಾಟಿಗಳೆಂದು ಸಹ ಕರೆಯಲಾಗುತ್ತದೆ. ಗೋ ಅಂದರೆ ಗೋವು ರ್ ಅಂದರೆ ರಕ್ಷಕ, ಗೋವುಗಳನ್ನು ರಕ್ಷಿಸುವ ಸಮಾಜ ಎಂದು ಗುರುತಿಸಲಾಗುತ್ತದೆ. ಹೀಗೆ ಬಂಜಾರರನ್ನು ಸುಮಾರು 30 ಕ್ಕೂ ಹೆಚ್ಚು ಪದಗಳಿಂದ ಕರೆಯಲಾಗುತ್ತದೆ. ದೇಶದಾದ್ಯಂತ ಸಂತ ಸೇವಾಲಾಲರ ಪವಿತ್ರ ಸ್ಥಳಗಳು ಇದ್ದು, ಬಂಜಾರ ಸಮಾಜ ಹಾಗೂ ಸಂತ ಸೇವಾಲಾಲರ ಇತಿಹಾಸವನ್ನು ಪ್ರಚುರಪಡಿಸಬೇಕಿದೆ.

ಧರ್ಮದ ಕಲ್ಪನೆ ಇಲ್ಲದ ಸಂದರ್ಭದಲ್ಲಿ ಬಂಜಾರ ಧರ್ಮ ಸ್ಥಾಪನೆ ಮಾಡಿದವರು ದೇಮಾ ಗುರು. ಇವರು ಸೇವಾಲಾಲರ ಗುರುಗಳು. ನಂತರ ಸೇವಾಲಾಲರು ಈ ಗುರು ಪರಂಪರೆಯನ್ನು ಮುಂದುವರೆಸಿಕೊಂಡು, ಸಮಾಜ ಸುಧಾರಕರಾಗಿ, ವೀರರಾಗಿ ಮುಂದುವರೆಯುತ್ತಾರೆ. ಸೇವಾಲಾಲರನ್ನು ಓರ್ವ ಪವಾಡ ಪುರುಷನೆಂದು ಉಲ್ಲೇಖಿಸಲಾಗಿದೆ. ಆದರೆ ಅವರೊಬ್ಬ ಮೇರು ವ್ಯಕ್ತಿ ಹಾಗೂ ಆದರ್ಶ ಪುರುಷ. ಇಂತಹ ಮಹಾನ್‍ಪುರುಷನನ್ನು ಪೂಜಿಸಿ ದೈವತ್ವಕ್ಕೆ ಏರಿಸುವುದಕ್ಕಿಂತ ಅವರ ತತ್ವಗಳನ್ನು, ಇತಿಹಾಸವನ್ನು ಪ್ರಚುರಪಡಿಸಬೇಕು ಹಾಗೂ ನಾವು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಡಾ.ನಾಗರಾಜ್ ಮಾತನಾಡಿ, ನನಗೂ ಸಂತ ಶ್ರೀ ಸೇವಾಲಾಲ್ ಜಯಂತಿಗೂ ಅವಿನಾಭಾವ ಸಂಬಂಧ ಇದೆ. ಹೊನ್ನಾಳಿ ತಾಲ್ಲೂಕು ತಹಶೀಲ್ದಾರರಾಗಿದ್ದಾಗ ಸೂರಗೊಂಡನಕೊಪ್ಪದ ಭಾಯಾಗಡ್‍ನಲ್ಲಿ ಅತ್ಯಂತ ಉತ್ಸುಕತೆಯಿಂದ ವಿಜೃಂಭಣೆಯ ಸೇವಾಲಾಲ್ ಜಯಂತಿ ಸಿದ್ದತೆ ಮತ್ತು ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೆ ಎಂದು ಸ್ಮರಿಸಿದ ಅವರು ಶಿವಮೊಗ್ಗ ನಗರದ ಮಧ್ಯ ಭಾಗದಲ್ಲಿರುವ ಬಂಜಾರ ಸೇವಾಲಾಲ್ ಸಮುದಾಯ ಭವನ ಇಡೀ ರಾಜ್ಯಕ್ಕೆ ಮಾದರಿಯಂತಿದೆ ಎಂದರು.

ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷ ಆಯನೂರು ಶಿವನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಆರ್.ಜಗದೀಶ್, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಕನ್ನಡ ಮತ್ತು ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Legal Services Authority ಯೋಗಾಭ್ಯಾಸದ ಮಹತ್ವ ಕುರಿತು ಹಿರಿಯ ನಾಗರೀಕರಿಗೆ ಮಾಹಿತಿ ಕಾರ್ಯಕ್ರಮ

District Legal Services Authority ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

MESCOM ಜೂ.20 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ ಆರ್.ಎಸ್. ವಿವಿ ಕೇಂದ್ರ ಮುಖ್ಯ ಸ್ವೀಕರಣಾ...