Monday, April 6, 2026
Monday, April 6, 2026
Home Blog Page 1305

ಶಿವಮೊಗ್ಗ ಮೆಸ್ಕಾಂ ಉಪವಿಭಾಗ 3 ಕಚೇರಿ ಜನಸಂಪರ್ಕ ಸಭೆ

0

ಶಿವಮೊಗ್ಗ ನಗರ ಉಪವಿಭಾಗ-3 ರ ಕಚೇರಿ ಗುಡ್‍ಲಕ್ ಸರ್ಕಲ್ ಹತ್ತಿರ, ಎಸ್.ವಿ.ಬಡಾವಣೆ, ಮೆಸ್ಕಾಂ, ಶಿವಮೊಗ್ಗ ಇಲ್ಲಿ ದಿ: 16-02-2023 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜನಸಂಪರ್ಕ ಸಭೆಯನ್ನು ನಡೆಸಲಾಗುವುದು.

ಈ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳನ್ನು ನೀಡಬಹುದೆಂದು ಮೆಸ್ಕಾಂ ಆಡಳಿತ ಮಂಡಳಿ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗದಲ್ಲಿ ಪುಲ್ವಾಮದಾಳಿ ಹುತಾತ್ಮರ ಸ್ಮರಣೆ

0

ಪುಲ್ವಾಮಾ ದಾಳಿಯ ಕರಾಳ ದಿನಾಚರಣೆಯನ್ನು ಸರ್ವೋದಯ ವ್ಯಸನ ಮುಕ್ತ ಕೇಂದ್ರದಲ್ಲಿ ಭೂಮಿ ಸಂಸ್ಥೆಯಿಂದ ಆಚರಿಸಲಾಯಿತು.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಜೊತೆಗೆ ಕೇಂದ್ರದ ಸದಸ್ಯರಿಗೆ ಸ್ವಾಮಿ ವಿವೇಕಾನಂದರ ಪುಸ್ತಕ ವಿತರಸಲಾಯಿತು.
ಭೂಮಿ ಸಂಸ್ಥೆ ವತಿಯಿಂದ ಇಂದು ಸರ್ವೋದಯ ವ್ಯಸನ ಮುಕ್ತ ಕೇಂದ್ರದಲ್ಲಿ ಮೌನಾಚರಣೆ ಮೂಲಕ , ಪುಲ್ವಾಮದಲ್ಲಿ ಹುತಾತ್ಮರಾದ ಕರ್ತವ್ಯ ನಿರತ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 40 ಜನ ಹುತಾತ್ಮ ಯೋಧರಿಗೆ ಶದ್ಧಾಂಜಲಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ಮಾತನಾಡಿ 40 ಕ್ಕೂ ಹೆಚ್ಚು ಸೈನಿಕರು ಬಾಂಬ್ ದಾಳಿಗೆ ಒಳಗಾಗಿ ಹುತಾತ್ಮರಾಗಿ ನಾಲ್ಕು ವರ್ಷ ಕಳೆದರೂ ಇಂದಿಗೂ ಪುಲ್ವಾಮಾ ದಾಳಿಯ ಅತ್ಯಂತ ಸೂಕ್ಷ್ಮವಾದ ಮತ್ತು ಸಾಕಷ್ಟು ಭದ್ರತೆ ಇರುವ ಪ್ರದೇಶದಲ್ಲಿ 350Kg RDX ಬಾಂಬ್ ಹೊತ್ತ ಕಾರು ಹೇಗೆ ಬಂತು ಎನ್ನುವ ಅನುಮಾನಕ್ಕೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ? ಸತ್ಯ ಹೊರ ಬಂದಿಲ್ಲ ಹಾಗೂ ಮಡಿದ ಸೈನಿಕರ ಕುಟುಂಬಗಳಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ ಆ ಕುಟುಂಬಗಳು ಈಗಲೂ ಕಣ್ಣೀರಿನಲ್ಲಿ ಬದುಕು ಸಾಗಿಸುತ್ತಿವೆ . ದೇಶಕ್ಕೆ ಒಳ್ಳೆಯ ಪ್ರಜೆಯಾಗಬೇಕು. ದೇಶ ಸೇವೆ ಮಾಡಬೇಕು ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಸರ್ವೋದಯ ವ್ಯಸನ ಮುಕ್ತ ಕೇಂದ್ರದ ದೇವರಾಜ್ ಮತ್ತು ಸಿಬ್ಬಂದಿಗಳು, ಭೂಮಿ ಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ಸದಸ್ಯರಾದ ಮಂಜು, ಸಂತೋಷ್, ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಾಗಿದ ಸಾಧಕನ ಮುಡಿಗೆ ಪದ್ಮ ಪ್ರಶಸ್ತಿಯ ಗರಿ

0

ಪದ್ಮ ವಿಭೂಷಣ ಪುರಸ್ಕೃತ  ಶ್ರೀ ಎಸ್ ಎಂ ಕೃಷ್ಣ .;
ಸೋಮನಹಳ್ಳಿ ಮಲ್ಲಯ್ಯ ಕೃಷ್ನ, ರಾಜಕೀಯ ಮುತ್ಸದ್ಧಿ. ಬೆಂಗಳೂರು ಅಭಿವೃದ್ಧಿಯ ಹರಿಕಾರ. ಕರ್ಣಾಟಕ ರಾಜ್ಯದ ಪುರೊಭಿವೃದ್ಧಿಗೆ ಅಸ್ತಿಭಾರ ಹಾಕಿದ ಅಪರೂಪದ ದೂರದೃಷ್ಟಿಯ ಸುಶಿಕ್ಷಿತ ನಾಯಕ.
ರಾಜ್ಯ ,ರಾಷ್ಟ್ರ ರಾಜಕಾರಣ ದಲ್ಲಿ 1962 ರಿಂದ ವಿವಿಧ ರಾಜಕೀಯ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿರುವ ಕೃಷ್ಣ , ಸೂಕ್ಷ್ಮಮನಸ್ಸಿನ ದಕ್ಷ ಆಡಳಿತಗಾರ.
ಹುಟ್ಟಿದ್ದು ಮಂಡ್ಯ ಜಿಲ್ಲೆಯ ಸೋಮನಹಳ್ಳಿ, ಓದಿದ್ದು ಮೈಸೂರು ಬೆಂಗಳೂರು, ಅಮೆರಿಕಾದ Texas ನಲ್ಲಿ Southern Methadist University & George Washington University Washington . ಪ್ರತಿಷ್ಟಿತ ಫುಲ್ ಬ್ರೈಟ್ ವಿದ್ಯಾರ್ಥಿ ವೇತನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಸಹ.
ವಿದ್ಯಾರ್ಥಿ ಜೀವನದ ನಂತರ ಸ್ವಲ್ಪ ಕಾಲ ಉಪನ್ಯಾಸಕ ವೃತ್ತಿ ಮಾಡಿದ ಕೃಷ್ಣ ನಂತರ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡರು .
1962 ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶ .
1968 ರಲ್ಲಿ ಸಂಸದರಾಗಿ ಲೋಕಸಭೆ ಪ್ರವೇಶ .
1972 ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ.
ವಾಣಿಜ್ಯ, ಉದ್ಯಮ ಮತ್ತು ಸಂಸದೀ ಯ ವ್ಯವಹಾರಗಳ ಸಚಿವರಾಗಿ ಸೇವೆ.
1983 , 1984 ರಲ್ಲಿ ಕ್ರಮವಾಗಿ ಪುನಹ ಉದ್ಯಮ ಹಾಗೂ ವಿತ್ತ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಣೆ.
1989 ರಿಂದ 1992 ರವರೆಗೆ ವಿಧಾನಸಭಾ ಸ್ಪೀಕರ್ .
1992 ರಿಂದ 1994 ರಲ್ಲಿ ಉಪ ಮುಖ್ಯಮಂತ್ರಿ.
1996 ರಲ್ಲಿ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭೆ ಪ್ರವೇಶ.
ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಪಾಂಚಜನ್ಯ ಮೊಳಗಿಸಿ ರಾಜ್ಯದ ಚುಕ್ಕಾಣಿ ಹಿಡಿದು
1999ರಿಂದ 2004 ರವರೆಗೆ – ಕರ್ಣಾಟಕ ಮುಖಮಂತ್ರಿ ಯಾಗಿ ಅಧಿಕಾರ ನಡೆಸಿದ ಕೃಷ್ಣ ಬೆಂಗಳೂರನ್ನು ಸಿಂಗಪುರ ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಿದರಲ್ಲದೆ ಅನೇಕ ಪ್ರಗತಿಪರ ಯೋಜನೆ ಗಳನ್ನು ಹಮ್ಮಿಕೊಂಡು ರಾಜ್ಯದ ಶ್ರೆಯೋಭಿವೃದ್ಧಿಗೆ ಶ್ರಮಿಸಿದರು. ಅವರ ಅವಧಿಯಲ್ಲಿ ಡಾ ರಾಜ್ ಕುಮಾರ್ ಅಪಹರಣ ಮತ್ತು ಬಿಡುಗಡೆಯ ಪ್ರಕರಣದ ಕ್ಲಿಷ್ಟ ಪರಿಸ್ಥಿತಿ ಯನ್ನು ದೃತಿಗೆಡದೆ, ತಾಳ್ಮೆ ಯಿಂದ ನಿರ್ವಹಿಸಿದ್ದು ಅವರ ಪಕ್ವ ಮತ್ತು ದಕ್ಷ ಆಡಳಿತಕ್ಕೆ ಒಂದು ನಿದರ್ಶನ.
ಮಹಾರಾಷ್ಟ್ರ ರಾಜ್ಯಪಾಲರಾಗಿ , ವಿಶ್ವಸಂಸ್ಥೆ ಮತ್ತು ಕಾಮನವೆಲ್ತ್ ಒಕ್ಕೂಟದಲ್ಲಿಯೂ ಭಾರತ ಪ್ರತಿನಿಧಿಯಾಗಿ ಭಾಗವಹಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಪರಿಪಕ್ವ ಅನುಭವ ಕೃಷ್ಣರದು.ಇಂಥಹ ಅಪೂರ್ವ ಮೆದುಭಾಷಿ,ನಿಶ್ಚಲ ಮನಸ್ಸಿನ ಸಜ್ಜನ ಸುಶಿಕ್ಷಿತ ದಕ್ಷ ರಾಜಕೀಯ ಭೀಷ್ಮ ನಿಗೆ ಪದ್ಮವಿಭೂಷಣ ಪ್ರಶಸ್ತಿ ಗೌರವ – ಅವರ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ .
ಶ್ರೀ ಎಸ್ ಎಂ ಕೃಷ್ಣ – ಮೈಸೂರಿನ ಸಂಸ್ಕಾರಯುಕ್ತ ಪ್ರತಿಷ್ಟಿತ
ಶ್ರೀ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿ.
ಪ್ರಸ್ತುತ ಸಕ್ರಿಯ ರಾಜಕಾರಣದಿಂದ ನಿವೃತ್ತರು.

.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪತ್ರಿಕಾ ವಿತರಕರ ಸಂಘಟನೆಯಿಂದ ಮುಖ್ಯಮಂತ್ರಿಗಳಿಗೆ ಕಳಕಳಿಯ ಮನವಿ

0

ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿ ರವರಿಗೆ ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟದಿಂದ ಒಂದು ಬಹಿರಂಗ ಪತ್ರ ಬರೆಯಲಾಗಿದೆ.

ನಾಡಿನ ದೊರೆ ಎಂದು ಕರೆದರೆ ತಮಗೆ ಅತೀವ ಕಸಿವಿಸಿಯಾಗುತ್ತದೆ
ತಾವುಗಳು ತಮ್ಮನ್ನು
ಸಿ. ಎಂ ( ಕಾಮನ್ ಮ್ಯಾನ್) ಎಂದು ಸಂಬೋಧಿಸುವಂತೆ ಪ್ರಜೆಗಳಲ್ಲಿ ಮನವಿ ಮಾಡಿರುವುದು ಶ್ಲಾಘನೀಯ.

ಅದೇ ರೀತಿ ತಾವುಗಳು ಸಹ ರಾಜ್ಯದ ಎಲ್ಲಾ ಕಾಮನ್ ಮ್ಯಾನ್ಗಳಿಗೆ ( ಅಂದರೆ ಬಡವರು ನಿರ್ಗತಿಕರಿಗಾಗಿ) ಹಲವಾರು ಉತ್ತಮ ಯೋಜನೆಗಳನ್ನು ನೀಡುತ್ತಾ ಬಂದಿರುತ್ತೀರಿ ರಾಜ್ಯದ ಹಲವಾರು ವರ್ಗಗಳನ್ನು ಗುರುತಿಸಿ ಅವರವರಿಗಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಸಂತಸದ ವಿಷಯ.
ಆದರೆ

ತಮ್ಮನ್ನು ಸೇರಿದಂತೆ ಯಾವ ಮುಖ್ಯಮಂತ್ರಿಗಳು ಸಹ ಒಂದು ವರ್ಗವನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ವಿಷಾದನೀಯ. ಯಾರ ಗಮನಕ್ಕೂ ಬರದೇ ಇರುವ ನಮ್ಮ ವರ್ಗ ಯಾವುದೆಂದರೆ ಮುಂಜಾನೆಯ ಸೂರ್ಯ ರಶ್ಮಿ ಭುವಿಗೆ ಅಪ್ಪಳಿಸುವುದಕ್ಕಿಂತ ಮುಂಚೆ ಕತ್ತಲ ಜೊತೆ ಗುದ್ದಾಡುವ ಸಂವಿಧಾನದ ನಾಲ್ಕನೇ ಅಂಗ ಎಂದು ಗುರುತಿಸಿಕೊಂಡಿರುವ ಪತ್ರಿಕಾರಂಗದ ಅವಿಭಾಜ್ಯ ಅಂಗವಾದ ದಿನಪತ್ರಿಕೆ
ವಿತರಕರು ನಾವು!!

ಜಗತ್ತು ಮಧ್ಯರಾತ್ರಿ ಕಳೆದು ಮುಂಜಾನೆಯ ಹದವಾದ ಚಳಿಗೆ ಬೆಚ್ಚಗೆ ಜಮಖಾನೆ ಹೊದ್ದು ಸುಖನಿದ್ರೆಗೆ ಜಾರುವ ಸಮಯದಲ್ಲಿ ನಾವುಗಳು ಅಂದ್ರೆ ದಿನಪತ್ರಿಕೆ ವಿತರಕರು ನಮ್ಮ ಕಾಯಕವನ್ನು
ಶುರು ಹಚ್ಚುತ್ತೇವೆ. ನಾಡಿನ ಜನರೆಲ್ಲ ಮುಂಜಾನೆ ಎದ್ದು ಚುಮುಚುಮು ಚಳಿಯಲ್ಲಿ ಬಿಸಿ ಕಾಫಿ ಇರುವ ಸಮಯಕ್ಕೆ ಸರಿಯಾಗಿ ಎಲ್ಲರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ಹಂಚುವುದು ನಮ್ಮ ಕಾಯಕ
ವರ್ಷದಲ್ಲಿ 361 ದಿನಗಳ ಕಾಲ ಮಳೆ ಚಳಿ ಗಾಳಿ ಎನ್ನದೆ ಯಾವುದೇ ವ್ಯಕ್ತಿರಿಕ್ತ ಪರಿಸ್ಥಿತಿಯಳು ಸಹ ನಾವು ನಮ್ಮ ಕಾಯಕದಿಂದ ವಿಮುಕ್ತರಾದವರೆಲ್ಲ. ಉದಾಹರಣೆಗೆ ನಮ್ಮ ನಾಡಿನಲ್ಲಿ ನಡೆದ
ಕಾವೇರಿ ಗಲಭೆ ಉರ್ದು ವಾರ್ತೆಗಳ , ವರನಟ ಡಾಕ್ಟರ್ ರಾಜಕುಮಾರ್ ರವರ
ಆಪಹರಣ ಮತ್ತು ಹೀಗೆ ಸಮೀಪದಲ್ಲಿ ಇಡೀ ಜಗತ್ತು ಕಂಡ ಮಹಾಮಾರಿ ಕರೋನಾ ಸಾಂಕ್ರಾಮಿಕ ರೋಗ ದಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಹ ನಾವು ನಮ್ಮ ಕಾರ್ಯವನ್ನು ಅತಿ ಹೆಚ್ಚು ಉತ್ಸಾಹದಿಂದ ಮಾಡಿ ನಾಡಿನ ಜನರಿಗೆ ಜಗತ್ತಿನ ವಿದ್ಯಾಮಾನಗಳನ್ನು ತಲುಪಿಸುವ ಸಂವಹಕರಾಗಿ ದುಡಿದಿದ್ದು ದುಡಿಯುತ್ತಿದ್ದು ಇನ್ನು ದುಡಿಯತ್ತಿದ್ದೇವೆ.

ಆದರೆ ನಮ್ಮ ರಾಜ್ಯದಲ್ಲಿ 180 ವರ್ಷಗಳ ಇತಿಹಾಸ ಇರುವ ಈ ದಿನ ಪತ್ರಿಕೆ ವಿತರಕರನ್ನು ಸರ್ಕಾರ ಮತ್ತು ಯಾವುದೇ ಸಂಘ ಸಂಸ್ಥೆಗಳ ಗುರುತಿಸದಿರುವುದು
ವಿಷಾದನೀಯ. ಆದ್ದರಿಂದ ಈ ಬಾರಿ ನಮ್ಮ ನಾಡಿನ ದೊರೆಯಾದ ( ಕ್ಷಮೆ ಇರಲಿ ತಾವು ಕಾಮನ್ ಮ್ಯಾನ್ ಎಂದು ನಿರೂಪಿಸುತ್ತಿದ್ದರು ) ನಮ್ಮ ಪಾಲಿಗೆ ನೀವು ದೊರೆಯಾಗಿ ಕಾಣಿಸುತ್ತಿರುವುದು ಯಾಕಂದರೆ ತಾವುಗಳು ಮುಖ್ಯಮಂತ್ರಿಗಳಾದ ಬಳಿಕ ಎಲ್ಲಾ ವರ್ಗಗಳಿಗೂ ನ್ಯಾಯ ದೊರಕಿಸಿ ಕೊಟ್ಟಿರುವುದು ನಮ್ಮಗಳ ವಿವೇಚನೆಯಲ್ಲಿದೆ.

ಆದ್ದರಿಂದ ಈ ಬಾರಿ ತಾವು ಮಂಡಿಸುವ ಈ ಸಾಲಿನ ಕೊನೆಯ ಬಜೆಟ್ ನಲ್ಲಿ ನಮ್ಮ ದಿನಪತ್ರಿಕೆ ವರ್ಗದವರನ್ನು ಗುರುತಿಸಿ ನಮಗಾಗಿ ಒಂದಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತೀರಿ ಎಂಬ ನಂಬಿಕೆ ನಮ್ಮದು ನಮ್ಮ ಬೇಡಿಕೆಗಳು ಬಹು ದೊಡ್ಡದೇನಿಲ್ಲ ಸ್ವಾಮಿ ರಾಜ್ಯದಲ್ಲಿ ಸುಮಾರು0
70,000 ದಷ್ಟಿರುವ ವಿತರಕರು ನಾವು ನಾವು ನಿಮ್ಮಲ್ಲಿ ಇಡುತ್ತಿರುವ ಕನಿಷ್ಠ ಬೇಡಿಕೆಗಳು ದಿನಪತ್ರಿಕೆ ಯಾವುದಾದರೂ ವಿಶೇಷ ವರ್ಗಕ್ಕೆ ತಂದು ನಮ್ಮ ಮಕ್ಕಳಿಗೆ ಉಚಿತ ವ್ಯಾಸಂಗಕ್ಕೆ ನೆರವು ನೀಡುವುದು ಮತ್ತು ವರ್ಷದ 361 ದಿನ ದುಡಿಯುವ ನಮ್ಮ ಆರೋಗ್ಯಕ್ಕಾಗಿ ಇಎಸ್‌ಐ ಸೌಲಭ್ಯವನ್ನು ಸರ್ಕಾರದಿಂದ ಕಲ್ಪಿಸಿ ಕೊಡುವುದು ಹಾಗೂ ಮಾಲಿನ್ಯ ರಹಿತ ರಾಜ್ಯಗಳು ನಮ್ಮ ದಿನಪತ್ರಿಕೆ ವಿತರಕರಿಗೆ ಉಚಿತವಾಗಿ ಎಲೆಕ್ಟ್ರಿಕ್ ಬೈಕ್ ಗಳನ್ನು ನೀಡುವುದು.

ಪ್ರತಿ ವರ್ಷ ಸೆಪ್ಟೆಂಬರ್ 04 ರಂದು ದಿನಪತ್ರಿಕೆ ವಿತರಕರ ದಿನಾಚರಣೆಯನ್ನು
ವಸತಿ ಯೋಜನೆಗಳಲ್ಲಿ ವಸತಿ ರಹಿತ ದಿನಪತ್ರಿಕೆ ವಿತರಕರಿಗೆ ಒಂದಷ್ಟು ಮೀಸಲಾತಿ ನೀಡುವುದು.

ಹಾಗೂ ಪ್ರಮುಖವಾಗಿ ಇಡೀ ಕನ್ನಡ ನಾಡು ಸಂಭ್ರಮ ಪಡುವಂತ ದಿನವಾದ ಕನ್ನಡ ರಾಜ್ಯೋತ್ಸವದಂದು ರಾಜ್ಯದ ಇಬ್ಬರು ದಿನ ಪತ್ರಿಕೆ ವಿತರಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವುದು.

ಕೊನೆಯದಾಗಿ ತಮಗೆ ತೊಂದರೆ
ಆಗಬಹುದಾದರೂ ಸಹ ದಿನಪತ್ರಿಕೆ ಉತ್ತರಕ್ಕಾಗಿ ಒಂದು ಪ್ರಾಧಿಕಾರ ರಚನೆ ಮಾಡಿ ಜಿಲ್ಲೆಗೆ ಒಂದು ಕೋಟಿಯಂತೆ 31 ಕೋಟಿಯಷ್ಟು ಅನುದಾನ ಮೀಸಲಿಡುವುದು.

ಮೂರು ಲಕ್ಷ ಕೋಟಿಯಷ್ಟು ಬಜೆಟ್ ಮಂಡನೆ ಆಗುವ ನಮ್ಮ ರಾಜ್ಯದಲ್ಲಿ 70,000 ಕುಟುಂಬಗಳಿಗೆ ನಮ್ಮ ಎಲ್ಲಾ ಯೋಜನೆಯನ್ನು ಸೇರಿಸಿದರೆ ಸುಮಾರು 50 ರಿಂದ 60 ಕೋಟಿ ಯಾಗಬಹುದು ಎಂಬ ಅಂದಾಜು. ಇದು ನಮ್ಮ ಘನ ಕರ್ನಾಟಕ ರಾಜ್ಯಕ್ಕೆ ಅಷ್ಟೇನೂ ಹೊರೆಯಾಗದು ಎಂಬ ನಂಬಿಕೆಯಿಂದ ತಾವುಗಳು ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವೆಂಬ ನಂಬಿಕೆಯೊಂದಿಗೆ
ನಮ್ಮ ಕಾಮನ್ ಮ್ಯಾನ್ ದೊರೆಯಾದ ತಮ್ಮಲ್ಲಿ ನಮ್ಮ ಹರಿಕೆಗಳನ್ನು ಮಂಡಿಸುತ್ತಿದ್ದೇವೆ ಎಂದು ಬಹಿರಂಗ ಪತ್ರದಲ್ಲಿ ವಿನಂತಿಸಿದ್ದಾರೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಡೆಹ್ರಾಡೂನ್ ಮಿಲಿಟರಿ ಕಾಲೇಜಿನ 8 ನೇ ತರಗತಿಗೆ ಪ್ರವೇಶಾತಿ ಅರ್ಹತಾ ಪರೀಕ್ಷೆ

0

ಡೆಹರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ 8ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ 11 ವರ್ಷದಿಂದ 13 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ದಿ: 03/06/2023ರಂದು ನಡೆಸಲಾಗುತ್ತಿದ್ದು, ಆಸಕ್ತರು ಅರ್ಜಿಯನ್ನು ದಿ: 15/04/2023 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂ.ಸಂ.: 080-25589459ಕ್ಕೆ ಸಂಪರ್ಕಿಸುವಂತೆ ಕೋರಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ 3 ಕಛೇರಿಯಲ್ಲಿ ಜನ ಸಂಪರ್ಕ ಸಭೆ

0

ಶಿವಮೊಗ್ಗ ನಗರ ಉಪವಿಭಾಗ-3ರ ಕಛೇರಿಯಲ್ಲಿ ದಿನಾಂಕ: ೧16.02..2023 ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ.

ಈ ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣ ಸಂಖ್ಯೆ: 9480841339ನ್ನು ಸಂಪರ್ಕಿಸುವುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶ್ರೀನಾಗನಾಥಂ ಶರಣಂ ಪ್ರಪದ್ಯೆ

0

ನಾಗೇಶ್ವರಂ

ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿನ ನಾಗನಾಥದಲ್ಲಿದೆ ಈ ಜ್ಯೋತಿರ್ಲಿಂಗ ದೇವಾಲಯವಿದೆ.

ಪೌರಾಣಿಕ ಹಿನ್ನೆಲೆ ಬಹಳ ಆಸಕ್ತಿಯುಳ್ಳದ್ದಾಗಿದೆ. ಅಲ್ಲಿನ ದಾರುಕವನ( ದೇವದಾರು ವೃಕ್ಷಗಳಿಂದ ಕೂಡಿದ) ದಲ್ಲಿ ಮುನಿಗಳು ತಮ್ಮ ಆಶ್ರಮವಾಸಿಗಳೊಂದಿಗೆ ವಾಸವಾಗಿದ್ದರು.ಅಲ್ಲಿನ ಮುನಿಗಣ ತಮ್ಮಲ್ಲಿನ
ತಪಶ್ಶಕ್ಕಿಯ ಮೇಲೆ ಅಪರಿಮಿತ ಮೋಹವುಳ್ಳವರಾದರು.ಪರಶಿವನನ್ನೂ ಮರೆತುಬಿಟ್ಟರು. ಅವರಂತೆ ಮುನಿಪತ್ನಿಯರೂ ಹಾಗೇ ತಮ್ಮಂತಹ ಪತವ್ರತಾಶಕ್ತಿ ಯಾರಿಗೂ ಇಲ್ಲ.ತಮಗೆ ಯಾವ ದೈವದ ಬಲವೂ ಅವಶ್ಯಕತೆಯಿಲ್ಲ ಎಂಬ ಅತೀವಿಶ್ವಾಸದ ಅಮಲಲ್ಲಿ ತೇಲಿಹೋದರು.
ಇವರಿಗೆ
ಇಂತಹ ಪರಿಸ್ಥಿತಿಯನ್ನ ಕಂಡ ಶಿವನು ಸ್ಫುರದ್ರೂಪಿಯಾಗಿ ಅವತರಿಸಿದ.

ಇಚ್ಛಾಶಕ್ತಿ,ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿಗಳಿಂದ ಕೂಡಿದ ತ್ರಿಶೂಲಧಾರಿಯಾದ. ದಿಗಂಬರನಾಗಿ ಭಿಕ್ಷೆಗೆಂದು ಮುನಿಪತ್ನಿಯರಿದ್ದೆಡೆ ನಡೆದ.ಅವರಲ್ಲಿನ ಅಹಂಕಾರವನ್ನ ಅಡಗಿಸುವುದಕ್ಕೆ ಈ ವೇಷ ಶಿವ ಹೂಡಿದ ಆಟವಾಗಿತ್ತು.

ಮುನಿಪತ್ನಿಯರು ತಮ್ಮ ಪತಿವ್ರತಾ ಧರ್ಮವನ್ನ ಮರೆತು ಭಿಕ್ಷುಕನ ಹಿಂದೆ ಕಾಮವಿಕಾರದಿಂದ ಅಲೆದರು. ಮತ್ತೆ ಮುನಿಗಳನ್ನ ಪರೀಕ್ಷೆಗೊಡ್ಡಲು ಶಿವ ವಿಷ್ಣುವನ್ನ ಆಹ್ವಾನಿಸಿದನು. ಮೋಹಿನಿ ವೇಷತಾಳಿ ಬಂದ ವಿಷ್ಣುವನ್ನ ಕಂಡು ಆ ಮುನಿಗಳೆಲ್ಲ ಸ್ತ್ರೀ ಲಾವಣ್ಯಕ್ಕೆ ತಮ್ಮ ತಪಃಶ್ಶಕ್ತಿಯನ್ನೂ ಮರೆತು ವಿಚಲಿತರದರು. ಹೀಗೆ ಶಿವನು ಮುನಿಗಳ ಮತ್ತು ಅವರ ಪತ್ನಿಯರ ಗರ್ವಭಂಗ ಆಗುವಂತೆ ಇಡೀ ಪ್ರಸಂಗವನ್ನ ಸೃಷ್ಟಿಸಿದನು.

ಆದರೂ ಮುನಿಗಳು ವೇಷಧಾರಿಶಿವನನ್ನು ಅರ್ಥಮಾಡಿಕೊಳ್ಳಲಿಲ್ಲ.
ಭಿಕ್ಷುಕನು ತಮ್ಮ ಪತ್ನಿಯರ ಮನಾಪಹರಣ ಮಾಡಿದ್ದಾನೆಂದು ವ್ಯಗ್ರರಾದರು.
ಶಿವನೆಂದರಿಯದೇ ಅವನ ಮೇಲೆ ಅಭಿಚಾರ ಹೋಮಗೈದು ಅವನ ಮೇಲೆ ಹೋಮವನ್ನ ಎಸೆದರು. ಮಹಾದೇವನನ್ನ ಆ ಮಾಟ ಮಂತ್ರಗಳೇನು ಮಾಡಿಯಾವು? . ಏನೂ ಆಗಲಿಲ್ಲ.ಕೊನೆಗೆ ಬ್ರಹ್ಮನಿಗೆ ಮುನಿಗಳು ಮೊರೆಯಿಟ್ಟರು. ನೀವೆಲ್ಲರೂ ಶಿವಾಪರಾಧ ಮಾಡಿದ್ದೀರಿ ಎಂದು ಬ್ರಹ್ಮ ಅವರಿಗೆಲ್ಲ ಮನವರಿಕೆಮಾಡಿದನು.

ಶಿವನ ಇರವಿನ ಬಗ್ಗೆ ಕೇಳಿದಾಗ ಶಿವನೀಗ ದಾರುಕವನದಲ್ಲಿ ಹುತ್ತದಲ್ಲಿರುವನು ಎಂದು ಬ್ರಹ್ಮ ಹೇಳುತ್ತಾನೆ.
ಆಗ ಇಡಿ ಮುನಿಗಣ ಮತ್ತು ಪತ್ನಿಯರು ಆ ಸ್ಥಳಕ್ಕೆ ಹೋಗಿ ಬಿಲ್ವಾರ್ಚನೆಗೈಯುವರು.ಶಿವನಿಗೆ ಇಷ್ಟವಾದ ಪಂಚಾಕ್ಷರಿ ಮಂತ್ರವನ್ನ ಆಗ ಏಕಮನಸ್ಸಿನಿಂದ ಧ್ಯಾನಿಸುವರು.ಆಗ ಸಂತೋಷಗೊಂಡ ಶಿವನು ಹುತ್ತದಿಂದ ಪ್ರಕಾಶವಾದ ಜ್ಯೋತಿಯಾಗಿ ಉದ್ಭವನಾಗುತ್ತಾನೆ. ಹೀಗೆ ಅದು ಒಂದು ಜ್ಯೋತಿರ್ಲಿಂಗವಾಗಿ ಮಾರ್ಪಟ್ಟಿತು.
ಶಿವ ಪುರಾಣದಲ್ಲಿ ಇನ್ನೂ ಒಂದೆರಡು ಪ್ರಸಂಗಗಳಿವೆ.

ಈಗ ಅಲ್ಲಿ ಶಿವದೇವಾಲಯವಿದೆ. ಇಲ್ಲಿನ ಶಿವನಿಗೆ ನಾಗೇಶ್ವರರ್,ನಾಗನಾಥ,ನಾಗಲಿಂಗ ಎಂಬ ಹೆಸರುಗಳಿವೆ.ಈ ಲಿಂಗಕ್ಕೆ ಸರ್ಪದ ಐದು ಹೆಡೆ ಕೊಡೆಯ ರೀತಿ ನಿಂತಿದೆ.
ಆಲಯದ ಹೊರಗೆ ಎಂಭತೈದು ಅಡಿ ಎತ್ತರದ ಶಿವನ ಮೂರ್ತಿ ನೋಡಲು ಎರಡುಕಣ್ಣೂ ಸಾಲದು.
ಶ್ರೀ ಶಂಕರಾಚಾರ್ಯರು ರಚಿಸಿದ ಶ್ಲೋಕ

ಆಮರ್ಧಸಂಜ್ಞೇ ನಗರೇಚ ರಮ್ಯೇ
ವಿಭೂಷಿತಾಂಗಂ ವಿವಿಧೈಶ್ಚ ಭೋಗೈಃ |
ಸದ್ಭುಕ್ತಿ ಮುಕ್ತಿಪ್ರದ ಮೀಶನೇಕಂ
ಶ್ರೀನಾಗನಾಥಂ ಶರಣಂ ಪ್ರಪದ್ಯೆ ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಮಾಜಸೇವೆಯಿಂದ ಆತ್ಮಸಂತೋಷ-ಡಾ.ಗುಡದಪ್ಪ ಕಸಬಿ

0

ನಾವು ನಿತ್ಯ ಮಾಡುವ ವೃತ್ತಿಯ ಜತೆಯಲ್ಲಿ ಸಮಾಜಸೇವೆಯು ಮುಖ್ಯ. ನಾವು ಮಾಡುತ್ತಿರುವ ವೃತ್ತಿಯಲ್ಲಿ ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವುದರಿಂದ ಆತ್ಮಸಂತೋಷ ಹಾಗೂ ತೃಪ್ತಿ ಸಿಗುತ್ತದೆ ಎಂದು ರೋಟರಿ ವಲಯ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಹೇಳಿದರು.

ಶಿವಮೊಗ್ಗದ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಗಣ್ಯರಿಗೆ ವೃತ್ತಿ ಸೇವಾ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉತ್ತಮ ಸೇವೆ ಮಾಡುವವರನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದಾಗ ಸಂಸ್ಥೆಯು ಗೌರವವು ಹೆಚ್ಚುತ್ತದೆ ಎಂದು ತಿಳಿಸಿದರು.

ಸನ್ಮಾನಿತರಿಗೆ ಸೇವೆ ಮಾಡಲು ಉತ್ಸಾಹ ಹೆಚ್ಚುವ ಜತೆಯಲ್ಲಿ, ಸಮಾಜದ ಇತರರಿಗೂ ಸೇವಾ ಮನೋಭಾವ ಹಾಗೂ ಸೇವೆ ಚಟುವಟಿಕೆಗಳನ್ನು ಆಯೋಜಿಸುವುದಕ್ಕೆ ಪ್ರೇರಣೆ ಸಿಗುತ್ತದೆ. ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರ ಸೇವೆಯು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ನಮ್ಮ ರೋಟರಿ ಸಂಸ್ಥೆ ವತಿಯಿಂದ ವೃತ್ತಿ ಸೇವಾ ಮಾಸಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ವೃತ್ತಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ನೌಕರ ಗೋಪಿನಾಥ್ ಅವರಿಗೆ ಆಸ್ಪತ್ರೆಯಲ್ಲಿ ಸಲ್ಲಿಸಿದ ವಿಶೇಷ ಸೇವೆಯನ್ನು ಪರಿಗಣಿಸಿ ವೃತ್ತಿ ಸೇವಾ ಪ್ರಶಸ್ತಿ ನೀಡಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ವಲಯ ಸೇನಾನಿ ರವಿ ಕೋಟೋಜಿ ಹಾಗೂ ರೋಟರಿ ಶಿವಮೊಗ್ಗ ಪೂರ್ವ, ಇನ್ನರ್‌ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪ್ರೇಮಿಗಳ ದಿನ ಬೇಕೆ? ಬೇಡವೆ?

0

ಪ್ರೇಮಿಗಳ ದಿನದಂದು ಭಾವ ಬಯಲಾಗಿ ಬೆತ್ತಲಾಗುವ ಪರಿಯ ಕಂಡು ವಿಷಾದ ನಗುವೊಂದು ನಕ್ಕು ಮರೆಯಾಯಿತು……..

ವಿಶ್ವದೆಲ್ಲೆಡೆ ಫೆಬ್ರವರಿ 14 ರಂದು ವ್ಯಾಲೆಂಟೈನ್ ಎಂಬ ಮುಗ್ದ ಪ್ರೇಮಿಯ ನೆನಪಿನಲ್ಲಿ ಪ್ರೇಮ ನಿವೇದನೆಯ ದಿನವನ್ನಾಗಿ‌ ಒಂದಷ್ಟು ಪ್ರೇಮಿಗಳು ಸಂಭ್ರಮ ಪಡುತ್ತಾರೆ……

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಇದು ಸಹಜವಾಗಿಯೂ, ಮಧ್ಯಪ್ರಾಚ್ಯದ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಬಹುತೇಕ ಇದು ನಿಷೇಧವಾಗಿಯೂ, ಬೌದ್ದ ಧರ್ಮದ ರಾಷ್ಟ್ರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯೂ ಆಚರಿಸಲಾಗುತ್ತದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಮತ್ತು ‌ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮೇಲ್ನೋಟಕ್ಕೆ ಹೆಚ್ಚು ವಿಜೃಂಭಣೆ ಇದೆ ಎನಿಸಿದರು ಮಧ್ಯಮ ಪ್ರಮಾಣದಲ್ಲಿ ಯುವಕ ಯುವತಿಯರು ಆಚರಿಸುತ್ತಾರೆ. ಮತ್ತೆ ಸಂಪ್ರದಾಯವಾದಿಗಳಿಂದ ನಿರಂತರ ಪ್ರತಿರೋಧ ಸಹ ಇದ್ದೇ ಇದೆ…..

ಪ್ರೇಮಿಗಳು ದಿನವನ್ನು ಭಾರತದಲ್ಲಿ ಆಚರಿಸಬೇಕೆ ಅಥವಾ ನಿಷೇಧಿಸಬೇಕೆ ಅಥವಾ ನಿರ್ಲಕ್ಷಿಸಬೇಕೆ ಅಥವಾ ಪರ್ಯಾಯವಾಗಿ ಬೇರೆ ರೀತಿಯಲ್ಲಿ ಆಚರಿಸಬೇಕೆ ಎಂಬ ಪ್ರಶ್ನೆ ಕೆಲವರಿಗೆ ಕಾಡಬಹುದು…

ಪ್ರೇಮವೆಂಬುದು ಗಂಡು ಹೆಣ್ಣಿನ ನಡುವಿನ ಭಾವ ಸೆಳೆತ ಅಥವಾ ಆಕರ್ಷಣೆ. ‌ಬಹುತೇಕ ಪ್ರಾಕೃತಿಕ ನಿರ್ಮಾಣ. ಸೃಷ್ಟಿಯ ನಿರಂತರ ಚಲನೆಗಾಗಿ ಅನಿವಾರ್ಯ ಕೂಡ…

ಸಾಮಾನ್ಯವಾಗಿ 18 ರಿಂದ 28 ರ ನಡುವಿನ ವಯೋಮಾನದ ಗಂಡು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಪರಿಣಾಮ ಈ ಪ್ರೇಮ ಭಾವದ ಉತ್ಕಟತೆ ಉಂಟಾಗುತ್ತದೆ. ( ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದು ನಿಜವಾದರೂ ಪ್ರೇಮದ ತೀವ್ರತೆಯ ದೃಷ್ಟಿಯಿಂದ ಈ ವಯಸ್ಸನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಳ್ಳಲಾಗಿದೆ )

ನಾಗರಿಕ ಸಮಾಜ ಸೃಷ್ಟಿಯಾಗಿ, ಅನುಭವಗಳು ಸಂಪ್ರದಾಯಗಳಾಗಿ, ಧಾರ್ಮಿಕ ನೀತಿ ನಿಯಮಗಳು ಸಮಾಜವನ್ನು ನಿಯಂತ್ರಿಸಿ ಕಾನೂನುಗಳು ಜಾರಿಯಾದ ಮೇಲೆ ಪ್ರೇಮ ಮತ್ತು ಲೈಂಗಿಕತೆ ಕೌಟುಂಬ ಚೌಕಟ್ಟಿನಲ್ಲಿ ಬಂಧಿಯಾಯಿತು. ನೈತಿಕತೆ – ಜವಾಬ್ದಾರಿ ಮತ್ತು ವಯೋಮಾನದ ಮಿತಿ ಹೇರಲಾಯಿತು.

ಪಾಶ್ಚಾತ್ಯ ನಾಗರಿಕ ಸಮಾಜ ಇದನ್ನು ಹೆಚ್ಚು ಮುಕ್ತವಾಗಿ, ಇಸ್ಲಾಮಿಕ್ ರಾಷ್ಟ್ರಗಳು ನಿಷೇಧಾತ್ಮಕವಾಗಿ ಇದನ್ನು ಸ್ವೀಕರಿಸಿದವು. ಸಾಂಸ್ಕೃತಿಕ ಮೂಲದ ಸಾಮಾಜಿಕ ವ್ಯವಸ್ಥೆಯ ಭಾರತದಲ್ಲಿ ಗೊಂದಲ ಮುಂದುವರಿಯುತ್ತಲೇ ಇದೆ.

ಭಾರತೀಯ ಸಂಪ್ರದಾಯವಾದಿಗಳ ಮುಖ್ಯ ಆಕ್ಷೇಪಣೆ ಪ್ರೇಮ ಕಾಮ ಪ್ರಣಯ ಎಲ್ಲವೂ ಕೌಟುಂಬಿಕ ಚೌಕಟ್ಟಿನಲ್ಲಿ ಇರಬೇಕಾದ ಕ್ರಿಯೆಗಳು, ಮುಖ್ಯವಾಗಿ ಮಹಿಳೆ ಪೂಜನೀಯಳು ಮತ್ತು ಭೋಗದ ಸಂಪನ್ಮೂಲ, ಮಹಿಳೆಯರು ಅಬಲೆಯರು, ಈ ವಿಷಯದಲ್ಲಿ ಹೆಚ್ಚು ಮುಕ್ತವಾದರೆ ಪುರುಷರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಮುಕ್ತ ಸ್ವಾತಂತ್ರ್ಯ ಬೇಡ ಮುಂತಾದ ಕಾರಣಗಳನ್ನು ಹೇಳುತ್ತಾರೆ. ಸಿನಿಮಾ – ಸಾಹಿತ್ಯ ಪ್ರಕಾರಗಳಲ್ಲೂ ಹೆಣ್ಣಿನ ಶೀಲ ರಕ್ಷಣೆಯೇ ಜೀವನದ ಪರಮೋದ್ದೇಶ ಎಂದು ಬಿಂಬಿಸಲಾಗುತ್ತದೆ.

ಹಾಗೆಯೇ ಪ್ರಗತಿಪರ ಚಿಂತಕರು ಪ್ರೇಮಿಗಳ ದಿನವನ್ನು ಇಷ್ಟಪಡುವವರು ಆಚರಿಕೊಳ್ಳಲಿ ಅದಕ್ಕೆ ನಿಷೇಧ ಬೇಡ. ಹೆಣ್ಣು ಕೂಡ ಈ ಪ್ರಕೃತಿಯ ಸಹಜ ಪ್ರಾಣಿ. ಗಂಡಿನಷ್ಟೇ ಸಮ ಪ್ರಮಾಣದ ಸ್ವಾತಂತ್ರ್ಯ ಸಮಾನತೆಗೆ ಹಕ್ಕುದಾರಳು. ಆಕೆಯನ್ನು ಅನಾವಶ್ಯಕವಾಗಿ ವಿಶೇಷ ದೈವಿಕ ಮಹತ್ವ ನೀಡಿ ವೈಭವೀಕರಿಸಿ ಆಕೆಯನ್ನು ನಿಯಂತ್ರಿಸುವ ಹುನ್ನಾರ ಬೇಡ. ಆಕೆ ಪೂಜನೀಯಳು ಅಲ್ಲ. ಭೋಗದ ವಸ್ತುವೂ ಅಲ್ಲ. ಒಂದು ಸಹಜ ಜೀವಿ ಮಾತ್ರ. ಜೊತೆಗೆ ಪ್ರೇಮವೆಂಬುದು ಪ್ರಕೃತಿಯ ಸಹಜ ನಿಯಮ. ಅದು ಕಾನೂನಿನ ವ್ಯಾಪ್ತಿಯಲ್ಲಿ ಸಂಭವಿಸಲಿ ಬಿಡಿ ಎನ್ನುವ ವಾದ ಮಂಡಿಸುತ್ತಾರೆ…

ಈ ವಿಷಯದಲ್ಲಿ ಸಾಮಾನ್ಯ ಜನರದು ಬಹುತೇಕ ದ್ವಂದ್ವ ನಿಲುವು ಕಂಡುಬರುತ್ತದೆ. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಸಿನಿಮಾ, ಸಾಹಿತ್ಯ, ಧಾರವಾಹಿ, ಉದ್ಯಮಿಗಳು ಮುಂತಾದ ಜನಪ್ರಿಯರ ವಿಷಯದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ಖುಷಿಯಿಂದ ಅನುಭವಿಸುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ. ವಿಚ್ಚೇದನ ವಿಷಯದಲ್ಲೂ ಅವರ ಬಗ್ಗೆ ಸಹಾನುಭೂತಿ ಹೊಂದಿರುತ್ತಾರೆ. ಆದರೆ ತಮ್ಮ ಮನೆಯಲ್ಲಿ ಅಥವಾ ತಮ್ಮ ಪರಿಚಯದವರಲ್ಲಿ ಈ ರೀತಿಯ ಮುಕ್ತತೆಯನ್ನು ಅನೈತಿಕ ಎಂಬುದಾಗಿ ಭಾವಿಸುತ್ತಾರೆ ಮತ್ತು ತಿರಸ್ಕರಿಸುತ್ತಾರೆ ಹಾಗು ಕೆಲವೊಮ್ಮೆ ದ್ವೇಷಿಸುತ್ತಾರೆ ಸಾಧ್ಯವಾದರೆ ಬಹಿಷ್ಕಾರಿಸುತ್ತಾರೆ. ಎಷ್ಟೊಂದು ಆತ್ಮವಂಚನೆಯಲ್ಲವೇ.

ಯಾರೋ ಅಪರಿಚಿತ ನಾಯಕ ನಾಯಕಿಯರ ಮುತ್ತುಗಳು ಸಹನೀಯ. ನಮ್ಮ ಹತ್ತಿರದವರ ಈ ನಡವಳಿಕೆ ಅನೈತಿಕ…..

ಈ ಎಲ್ಲದರ ಸಮೀಕರಣದ ನಂತರ ಇಂದಿನ ಆಧುನಿಕ ಸಮಾಜದಲ್ಲಿ……..

ಎಂತೆಂತಹ ದಿನಗಳನ್ನೋ ಆಚರಿಸುವಾಗ ಮನುಷ್ಯ ಜೀವನೋತ್ಸಾಹದ ಕುರುಹಾದ, ಯುವಕ ಯುವತಿಯರ ಮನದಾಳದ ಭಾವನೋತ್ಸವ ಉಕ್ಕಿಸುವ ” ಪ್ರೇಮಿಗಳ ದಿನವನ್ನು ” ಆಚರಿಸಲಿ ಬಿಡಿ. ಇಂದಿನ ತೀವ್ರ ವೇಗ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ, ಒತ್ತಡದ ಬದುಕಿನಲ್ಲಿ ಕನಿಷ್ಠ ಒಂದು ದಿನ ಎಲ್ಲೋ ಕೆಲವರು ಈ ದಿನವನ್ನು ಸಂಭ್ರಮಿಸಿದರೆ ನಾವು ನೋಡಿ ಸಂತೋಷ ಪಡೋಣ.

ಹಿಂದಿನ ಕೆಲವು ದಶಕಗಳ ಹಿಂದೆ ಇದ್ದ ಗಂಡು ಹೆಣ್ಣಿನ ಭಾವ ತೀವ್ರತೆ ಈಗ ಉಳಿದಿಲ್ಲ. ಹೆಣ್ಣು ಗಂಡನಿಷ್ಟೇ ಉದ್ಯೋಗಸ್ಥೆಯಾದ ಬಳಿಕ ಎಲ್ಲಾ ಕಡೆ ಮುಕ್ತ ಓಡಾಟ ಇರುವುದರಿಂದ ಹೆಣ್ಣಿನ ಬಗ್ಗೆ ಇದ್ದ ಕುತೂಹಲ ಸಹ ಕಡಿಮೆಯಾಗಿದೆ. ಪ್ರೇಮ ನಿವೇದನೆ ಗಂಡಿನ ಜವಾಬ್ದಾರಿ ಎನ್ನುವ ಪರಿಕಲ್ಪನೆ ಈಗ ಉಳಿದಿಲ್ಲ. ಅದರಲ್ಲೂ ನಗರೀಕರಣದ ನಂತರ ಹೆಣ್ಣಿನ ಪ್ರಭಾವವೇ ಹೆಚ್ಚಾಗಿರುವ ಅನುಭವವಾಗುತ್ತಿದೆ. ಟಿವಿ ಮಾಧ್ಯಮಗಳ ಮನರಂಜನಾ ಉದ್ಯಮದಲ್ಲಿ ಹಾಸ್ಯ ಸನ್ನಿವೇಶಗಳಲ್ಲಿ ಬಹುತೇಕ ಹೆಣ್ಣು ಗಂಡಿನ ಮೇಲೆ ನಿಯಂತ್ರಣ ಸಾಧಿಸಿರುವುದೇ ವಿಷಯವಾಗಿರುವುದನ್ನು ಗಮನಿಸಬಹುದು.

ಆದ್ದರಿಂದ ಈಗ ಅಂತಹ ಭಯ ಪಡುವ ಅವಶ್ಯಕತೆ ಇಲ್ಲ. ಈ ದಿನದ ಬಗ್ಗೆ ಗಂಭೀರವಾಗಿ ಯೋಚಿಸುವ ಅವಶ್ಯಕತೆಯೂ ಇಲ್ಲ. ಇದು ಸಹಜವಾಗಿ ನಡೆಯುತ್ತದೆ. ಇಷ್ಟ ಇರುವವರು ಆಚರಿಕೊಳ್ಳಲಿ. ಇಷ್ಟ ಇಲ್ಲದವರು ತಮ್ಮ ಪಾಡಿಗೆ ತಾವಿರಲಿ.
ಎಂದಿನಂತೆ ಸಂಪ್ರದಾಯವಾದಿ ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಬಗ್ಗೆ ತಿಳಿವಳಿಕೆ ಮೂಡಿಸಲಿ.

ಇಡೀ ಸಮಾಜ ಉತ್ತಮ ವಾತಾವರಣದಲ್ಲಿ ಒಳ್ಳೆಯ ನಂಬಿಕೆಯ ಪರಿಸ್ಥಿತಿಯಲ್ಲಿ ಇದ್ದರೆ ಯಾವ ಪ್ರೀತಿ ಪ್ರೇಮಗಳು ಸಮಸ್ಯೆಯಲ್ಲ. ಆದರೆ ವಂಚಕರು, ಮೋಸಗಾರರೇ ಹೆಚ್ಚಾದರೆ ಧಾರ್ಮಿಕ ಹಬ್ಬಗಳನ್ನು ಸಹ ಎಚ್ಚರಿಕೆಯಿಂದ ಆಚರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಮೊದಲು ಒಳ್ಳೆಯ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ. ಇಲ್ಲದಿದ್ದರೆ ಕಳ್ಳರ ಸಂತೆಯಲ್ಲಿ ಎಲ್ಲರೂ ಅನುಮಾನ ಅವಮಾನದಲ್ಲಿ ಬದುಕಬೇಕಾಗುತ್ತದೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕಾರಣಗಿರಿಯಲ್ಲಿ ತ್ಯಾಗರಾಜರ ಆರಾಧನೆ

0

ಕಾರಣಗಿರಿಯ ರಾಷ್ಟ್ರೋತ್ಥಾನ ಬಳಗ ಮತ್ತು ಗ್ರಾಮ ಭಾರತಿ ಟ್ರಸ್ಟಿನ ಆಶ್ರಯದಲ್ಲಿ ಹೊಸನಗರದಲ್ಲಿ ಪುರಂದರದಾಸರ ಹಾಗೂ ತ್ಯಾಗರಾಜರ ಆರಾಧನೆ ಪ್ರಯುಕ್ತ ಸಂಗೀತೋತ್ಸವ ನಡೆಸಲಾಯಿತು.

25 ವರ್ಷ ಪೂರೈಸಿದ ಗಾನಸುಧಾ ಸಂಗೀತ ಶಾಲೆಯ ಶಿಕ್ಷಕಿ ಶ್ರೀಮತಿ ಗಾಯತ್ರಿ ನಾಗರಾಜ್ ಇವರನ್ನು ಗೌರವಿಸಲಾಯಿತು.

ವಿದುಶಿ ಅನಿತಾ ವೆಂಕಟೇಶ್ ರ ಸಂಗೀತ ಕಛೇರಿ ಹಾಗೂ ಸ್ಥಳೀಯ ಸಂಗೀತ ಶಾಲೆಗಳವರಿಂದ ಗಾಯನ ,ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ ನಡೆಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.