Friday, June 13, 2025
Friday, June 13, 2025

ಶ್ರೀನಾಗನಾಥಂ ಶರಣಂ ಪ್ರಪದ್ಯೆ

Date:

ನಾಗೇಶ್ವರಂ

ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿನ ನಾಗನಾಥದಲ್ಲಿದೆ ಈ ಜ್ಯೋತಿರ್ಲಿಂಗ ದೇವಾಲಯವಿದೆ.

ಪೌರಾಣಿಕ ಹಿನ್ನೆಲೆ ಬಹಳ ಆಸಕ್ತಿಯುಳ್ಳದ್ದಾಗಿದೆ. ಅಲ್ಲಿನ ದಾರುಕವನ( ದೇವದಾರು ವೃಕ್ಷಗಳಿಂದ ಕೂಡಿದ) ದಲ್ಲಿ ಮುನಿಗಳು ತಮ್ಮ ಆಶ್ರಮವಾಸಿಗಳೊಂದಿಗೆ ವಾಸವಾಗಿದ್ದರು.ಅಲ್ಲಿನ ಮುನಿಗಣ ತಮ್ಮಲ್ಲಿನ
ತಪಶ್ಶಕ್ಕಿಯ ಮೇಲೆ ಅಪರಿಮಿತ ಮೋಹವುಳ್ಳವರಾದರು.ಪರಶಿವನನ್ನೂ ಮರೆತುಬಿಟ್ಟರು. ಅವರಂತೆ ಮುನಿಪತ್ನಿಯರೂ ಹಾಗೇ ತಮ್ಮಂತಹ ಪತವ್ರತಾಶಕ್ತಿ ಯಾರಿಗೂ ಇಲ್ಲ.ತಮಗೆ ಯಾವ ದೈವದ ಬಲವೂ ಅವಶ್ಯಕತೆಯಿಲ್ಲ ಎಂಬ ಅತೀವಿಶ್ವಾಸದ ಅಮಲಲ್ಲಿ ತೇಲಿಹೋದರು.
ಇವರಿಗೆ
ಇಂತಹ ಪರಿಸ್ಥಿತಿಯನ್ನ ಕಂಡ ಶಿವನು ಸ್ಫುರದ್ರೂಪಿಯಾಗಿ ಅವತರಿಸಿದ.

ಇಚ್ಛಾಶಕ್ತಿ,ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿಗಳಿಂದ ಕೂಡಿದ ತ್ರಿಶೂಲಧಾರಿಯಾದ. ದಿಗಂಬರನಾಗಿ ಭಿಕ್ಷೆಗೆಂದು ಮುನಿಪತ್ನಿಯರಿದ್ದೆಡೆ ನಡೆದ.ಅವರಲ್ಲಿನ ಅಹಂಕಾರವನ್ನ ಅಡಗಿಸುವುದಕ್ಕೆ ಈ ವೇಷ ಶಿವ ಹೂಡಿದ ಆಟವಾಗಿತ್ತು.

ಮುನಿಪತ್ನಿಯರು ತಮ್ಮ ಪತಿವ್ರತಾ ಧರ್ಮವನ್ನ ಮರೆತು ಭಿಕ್ಷುಕನ ಹಿಂದೆ ಕಾಮವಿಕಾರದಿಂದ ಅಲೆದರು. ಮತ್ತೆ ಮುನಿಗಳನ್ನ ಪರೀಕ್ಷೆಗೊಡ್ಡಲು ಶಿವ ವಿಷ್ಣುವನ್ನ ಆಹ್ವಾನಿಸಿದನು. ಮೋಹಿನಿ ವೇಷತಾಳಿ ಬಂದ ವಿಷ್ಣುವನ್ನ ಕಂಡು ಆ ಮುನಿಗಳೆಲ್ಲ ಸ್ತ್ರೀ ಲಾವಣ್ಯಕ್ಕೆ ತಮ್ಮ ತಪಃಶ್ಶಕ್ತಿಯನ್ನೂ ಮರೆತು ವಿಚಲಿತರದರು. ಹೀಗೆ ಶಿವನು ಮುನಿಗಳ ಮತ್ತು ಅವರ ಪತ್ನಿಯರ ಗರ್ವಭಂಗ ಆಗುವಂತೆ ಇಡೀ ಪ್ರಸಂಗವನ್ನ ಸೃಷ್ಟಿಸಿದನು.

ಆದರೂ ಮುನಿಗಳು ವೇಷಧಾರಿಶಿವನನ್ನು ಅರ್ಥಮಾಡಿಕೊಳ್ಳಲಿಲ್ಲ.
ಭಿಕ್ಷುಕನು ತಮ್ಮ ಪತ್ನಿಯರ ಮನಾಪಹರಣ ಮಾಡಿದ್ದಾನೆಂದು ವ್ಯಗ್ರರಾದರು.
ಶಿವನೆಂದರಿಯದೇ ಅವನ ಮೇಲೆ ಅಭಿಚಾರ ಹೋಮಗೈದು ಅವನ ಮೇಲೆ ಹೋಮವನ್ನ ಎಸೆದರು. ಮಹಾದೇವನನ್ನ ಆ ಮಾಟ ಮಂತ್ರಗಳೇನು ಮಾಡಿಯಾವು? . ಏನೂ ಆಗಲಿಲ್ಲ.ಕೊನೆಗೆ ಬ್ರಹ್ಮನಿಗೆ ಮುನಿಗಳು ಮೊರೆಯಿಟ್ಟರು. ನೀವೆಲ್ಲರೂ ಶಿವಾಪರಾಧ ಮಾಡಿದ್ದೀರಿ ಎಂದು ಬ್ರಹ್ಮ ಅವರಿಗೆಲ್ಲ ಮನವರಿಕೆಮಾಡಿದನು.

ಶಿವನ ಇರವಿನ ಬಗ್ಗೆ ಕೇಳಿದಾಗ ಶಿವನೀಗ ದಾರುಕವನದಲ್ಲಿ ಹುತ್ತದಲ್ಲಿರುವನು ಎಂದು ಬ್ರಹ್ಮ ಹೇಳುತ್ತಾನೆ.
ಆಗ ಇಡಿ ಮುನಿಗಣ ಮತ್ತು ಪತ್ನಿಯರು ಆ ಸ್ಥಳಕ್ಕೆ ಹೋಗಿ ಬಿಲ್ವಾರ್ಚನೆಗೈಯುವರು.ಶಿವನಿಗೆ ಇಷ್ಟವಾದ ಪಂಚಾಕ್ಷರಿ ಮಂತ್ರವನ್ನ ಆಗ ಏಕಮನಸ್ಸಿನಿಂದ ಧ್ಯಾನಿಸುವರು.ಆಗ ಸಂತೋಷಗೊಂಡ ಶಿವನು ಹುತ್ತದಿಂದ ಪ್ರಕಾಶವಾದ ಜ್ಯೋತಿಯಾಗಿ ಉದ್ಭವನಾಗುತ್ತಾನೆ. ಹೀಗೆ ಅದು ಒಂದು ಜ್ಯೋತಿರ್ಲಿಂಗವಾಗಿ ಮಾರ್ಪಟ್ಟಿತು.
ಶಿವ ಪುರಾಣದಲ್ಲಿ ಇನ್ನೂ ಒಂದೆರಡು ಪ್ರಸಂಗಗಳಿವೆ.

ಈಗ ಅಲ್ಲಿ ಶಿವದೇವಾಲಯವಿದೆ. ಇಲ್ಲಿನ ಶಿವನಿಗೆ ನಾಗೇಶ್ವರರ್,ನಾಗನಾಥ,ನಾಗಲಿಂಗ ಎಂಬ ಹೆಸರುಗಳಿವೆ.ಈ ಲಿಂಗಕ್ಕೆ ಸರ್ಪದ ಐದು ಹೆಡೆ ಕೊಡೆಯ ರೀತಿ ನಿಂತಿದೆ.
ಆಲಯದ ಹೊರಗೆ ಎಂಭತೈದು ಅಡಿ ಎತ್ತರದ ಶಿವನ ಮೂರ್ತಿ ನೋಡಲು ಎರಡುಕಣ್ಣೂ ಸಾಲದು.
ಶ್ರೀ ಶಂಕರಾಚಾರ್ಯರು ರಚಿಸಿದ ಶ್ಲೋಕ

ಆಮರ್ಧಸಂಜ್ಞೇ ನಗರೇಚ ರಮ್ಯೇ
ವಿಭೂಷಿತಾಂಗಂ ವಿವಿಧೈಶ್ಚ ಭೋಗೈಃ |
ಸದ್ಭುಕ್ತಿ ಮುಕ್ತಿಪ್ರದ ಮೀಶನೇಕಂ
ಶ್ರೀನಾಗನಾಥಂ ಶರಣಂ ಪ್ರಪದ್ಯೆ ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...