Monday, April 6, 2026
Monday, April 6, 2026
Home Blog Page 1306

ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ ಸನಿಹ ಅಪರೂಪದ ಶಿಲಾತಾಣ

0

ಕರ್ನಾಟಕ ಮಹಾ ಶಿಲೆಯ ತಾಣಗಳಲ್ಲಿ ಒಂದಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗುಡ್ಡಗಾಡಿನ ಬೆಟ್ಟದ ಮೇಲೆ ಇರುವ ಸುಮಾರು 2500 ವರ್ಷಗಳ ಹಿಂದಿನ ಪುರಾತನವಾದ ಶಿಲಾ ತಾಣ, ಹಾಗು ಗುಡ್ಡದ ದೂಡ್ಡದಾದ ಬಂಡೆಯ ಮೇಲೆ ಬಿಡಿಸಲಾದ ಬಣ್ಣದ ಚಿತ್ರಗಳನ್ನು ಮತ್ತು ಬೆಟ್ಟಪ್ರದೇಶದ ತುಟ್ಟ ತುದಿಯ ಮೇಲೆ ಇರುವ ಕೆರೆಯನ್ನು ಮತ್ತು ಹಿಂದಿನ ಕಾಲದ ಇತಿಹಾಸ, ಜನರ ಜೀವನ ಶೈಲಿ, ಇವುಗಳನ್ನು ಸಾಮಾನ್ಯವಾಗಿ ತಿಳಿಯಬೇಕಾದರೆ ಮತ್ತು ಆಗ ವಾಸವಾಗಿದ್ದ ಜನರ ಧೈರ್ಯ, ಸಾಹಸ, ಸಹಾಯ ,ಜಾಣ್ಮೆ, ಗುರಿಯನ್ನು ಕಾಣಬೇಕಾದರೆ ಈ ಪುರಾತನ ಸ್ಥಳಗಳ ವೀಕ್ಷಣೆ ಮತ್ತು ಇತಿಹಾಸದ ತಿಳುವಳಿಕೆಯಿಂದ ಮಾತ್ರ ಸಾಧ್ಯ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಪುಟ್ಟ ಗ್ರಾಮದ ಬೆಟ್ಟದ ಮೇಲೆ ಇರುವ ಶಿಲಾ ತಾಣಗಳು ಸುಮಾರು 500 ಕ್ಕೂ ಹೆಚ್ಚು.

ಸುಮಾರು 2500 ವರ್ಷಗಳ ಹಿಂದೆ, ಈ ಸ್ಥಳದಲ್ಲಿ ಕುಬ್ಚ ಜಾನಂಗದ ಜನತೆ ವಾಸವಾಗಿದ್ದರು, ಅವರು ಹೆಚ್ಚಾಗಿ ಘರ್ಷಣೆ ಮತ್ತು ಯುದ್ದದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರಂತೆ, ಸಾಮಾನ್ಯವಾಗಿ ಆ ಜನ ದನಕರುಗಳನ್ನು ಮತ್ತು ಕುರಿಗಳನ್ನು ಸಾಕುತ್ತಿದ್ದರು.

ಕಬ್ಬಿಣದ ಸಾಮಾಗ್ರಿಗಳನ್ನು ಅವರು ತಮ್ಮ ಕೈಯಿಂದ ಮಾಡುವುದನ್ನು ಅವರು ಅರೆತಿದ್ದರು. ಇಲ್ಲಿ ಒಂದು ವಿಶೇಷ ಎಂದರೆ ಈ ಜನ ಇವರ ಮರಣದ ನಂತರ ಶವಗಳನ್ನು ಹಿರೇಬೆಣಕಲ್ ಗುಡ್ಡದ ಮೇಲೆ ಟನ್ ಗಟ್ಟಲೆ ಭಾರವಾದ ಕಲ್ಲು ಚಪ್ಪಟೆಯನ್ನು ಜೋಡಿಸಿ ತಾಣಗಳಾಗಿ ಮಾಡಿ, ಆ ಸ್ಥಳದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು.

ಇತಿಹಾಸ ತಜ್ಞರು ಹೇಳುವಂತೆ ಇಲ್ಲಿನ ಎಲ್ಲಾ ಶಿಲಾ ತಾಣಗಳು ವಯಸ್ಕ ಪುರುಷ ತಾಣವಾಗಿರುತ್ತವೆ ಆದರೆ ಮಕ್ಕಳು ಅಥವಾ ಮಹಿಳೆಯರ ಶವವನ್ನು ಅವರು ಏನುಮಾಡುತ್ತಿದ್ದರು ಎಂಬುದು ತಿಳಿದಿಲ್ಲ, ಮತ್ತು ದೂಡ್ಡ ದೂಡ್ಡ ಬಂಡೆಗಳನ್ನು ಯಾವರೀತಿ ಕತ್ತರಿಸಿ ಟನ್ ಗಟ್ಟಲೆ ಭಾರವಾದ ಬಂಡೆಗಳನ್ನು ಗುಡ್ಡದ ಮೇಲೆ ಯಾವರೀತಿ ಸಾಗಿಸುತ್ತಿದ್ದರು ಮತ್ತು ತಾಣವಾಗಿ ಮಾರ್ಪಾಡು ಮಾಡುತ್ತಿದ್ದರು ಎಂಬುದು ಇಂದಿಗೂ ನಿಗೂಢವಾಗಿದೆ.

ಸುಮಾರು 2500 ವರ್ಷಗಳ ಹಿಂದಿನ ಈ ಗುಡ್ಡ ಇಂದು ಪ್ರವಾಸಿ ತಾಣವಾಗಿದೆ. ಹೊಸಪೇಟೆ, ಕೊಪ್ಪಳ ಮತ್ತು ಗಂಗಾವತಿ ಭಾಗದ ಜನರು ಈ ಪ್ರವಾಸಿ ಐತಿಹಾಸಿಕ ಪುರಾತನ ಶಿಲಾತಾಣವನ್ನು ನೋಡಲು ಹೋಗಿ ಒಂದು ದಿನ ಇಲ್ಲಿಯೇ ಉಳಿದು ವಾಪಾಸು ಬರುತ್ತಾರೆ.
ಇಲ್ಲಿ ಇನ್ನೊಂದು ಮುಖ್ಯವಾಗಿ ನೋಡಬಹುದು, ಏನೆಂದರೆ ಈ ಗುಡ್ಡದ ಮೇಲ್ಭಾಗದಲ್ಲಿ ದೂಡ್ಡದಾದ ಬಂಡೆಗಳ ಮೇಲೆ ಬಿಡಿಸಲಾದ ಚಿತ್ರಗಳಿಗೆ ಆಗಿನ ಚಿತ್ರಗಾರರು ಬಣ್ಣವನ್ನು ಹಚ್ಚಿರುವ ಬಣ್ಣದ ಚಿತ್ರಗಳನ್ನು ಸಹ ಸ್ವಲ್ಪ ಮಟ್ಟಿಗೆ ನೋಡಬಹುದು ಸುಮಾರು 2500 ವರ್ಷಗಳ ಹಿಂದಿನ ಚಿತ್ರಕಲೆಗೆ ಬಣ್ಣ ಹಚ್ಚಿದ್ದು ಅದು ಇನ್ನೂ ಕಾಣುತ್ತಿದೆ.

ಈ ಜಾಗದಲ್ಲಿ ಕೆಲವೂಂದು ಜಾಗದಲ್ಲಿ ತಿಳಿಯಾದ ನೀರು ಶೇಖರಣೆ ಯಾಗಿ ನಿಂತಿರುವುದು, ಆದರೆ ಅದು ಸೇವಿಸಲು ಯೋಗ್ಯವಾಗಿಲ್ಲ,

ಹೊಸಪೇಟೆ ಯಿಂದ ಗಂಗಾವತಿಗೆ ಹೋಗುವ ದಾರಿಯಲ್ಲಿ ಈ ಶಿಲಾತಾಣ ಬರುತ್ತದೆ. ಈ ಜಾಗಕ್ಕೆ ಹೋಗುವವರು ಕುಡಿಯುವ ನೀರು, ಕಾಲಿಗೆ ಸುರಕ್ಷತಾ ಬೂಟು ಮತ್ತು ಹಸಿವಾದರೆ ತಿನ್ನುವುದಕ್ಕೆ ಉಪಹಾರ ಕಟ್ಟಿಕೊಂಡು ತಂಪಾದ ವೇಳೆಯಲ್ಲಿ ಹೋಗಿಬನ್ನಿ ,ವೀಕ್ಷಣೆ ಮಾಡಿದ ನಂತರ ನಿಮ್ಮ ಅನುಭವವನ್ನು ಹಂಚಿಕೊಳ್ಳಿ, ಇಲ್ಲವೆ ಈಗಾಗಲೆ ಹೋಗಿಬಂದಿದ್ದರೆ ಅಲ್ಲಿಯ ಬಗ್ಗೆ ಹೆಚ್ಚಿನ ಇತಿಹಾಸ ತಮಗೆ ತಿಳಿದಿದ್ದರೆ ಹಂಚಿಕೊಂಡರು ಬೇರೆಯವರಿಗೆ ಅನುಕೂಲವಾಗುತ್ತದೆ.

ಪುರಾತನ ಕಾಲದ ಗಂಗಾವತಿ ಹತ್ತಿರ ಇರುವ ಮಹಾ ಶಿಲಾ ತಾಣಕ್ಕೆ ಹೋಗುವವರಿಗೆ ಸೂಚನೆ ಗುಡ್ಡಗಾಡುಪ್ರದೇಶದ ಒಳಭಾಗದಲ್ಲಿ ಹೋಗುವಾಗ ದಾರಿತಪ್ಪುವ ಸಂಭವ ಇರುತ್ತದೆ. ಮತ್ತು ಕರಡಿ ಹಾವಳಿ ಇರುತ್ತದೆ ಹೋಗುವವರು ಒಬ್ಬರಾಗಿ ಹೋಗಬೇಡಿ, ಕಳೆದ ಎರಡು ವರ್ಷಗಳ ಹಿಂದೆ ಅಲ್ಲಿಗೆ ನಾವು ನಮ್ಮ ಕಿರ್ಲೋಸ್ಕರ್ ಕುಟುಂಬದ ಸದಸ್ಯರು ಸಹ ಈ ಶಿಲಾ ತಾಣವನ್ನು ವೀಕ್ಷಣೆ ಮಾಡಿ ಬಂದಿದ್ದೇವೆ.

ಮತ್ತೊಮ್ಮೆ ಕಳೆದ ತಿಂಗಳು ನಮ್ಮ ಕಾರ್ಖಾನೆಯ ಛೇರ್ಮನ್ ಶ್ರೀ ಅತುಲ್ ಕಿರ್ಲೋಸ್ಕರ್, ವ್ಯವಸ್ಥಾಪಕ ನಿರ್ದೇಶಕರು ಶ್ರೀ ಆರ್ ವಿ ಗುಮಾಸ್ತೆ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ ಶ್ರೀವತ್ಸನ್ ಇವರು ಸಹ ಮತ್ತೊಮ್ಮೆ ಈ ಪುರಾತನ ಹಿರೇಬೆಣಕಲ್ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ವೀಕ್ಷಣೆ ಮಾಡಿಬಂದಿರುತ್ತಾರೆ.

ಬಹಳ ಬದಲಾವಣೆ ಆಗಬೇಕಾಗಿದೆ. ಪುರತತ್ವ ಇಲಾಖೆ ಈ ಪ್ರದೇಶಕ್ಕೆ ಹೆಚ್ಚಿನ ಗಮನ ನೀಡಿ ಅಭಿವೃದ್ಧಿ ಮಾಡಬೇಕು. ಈಜಿಪ್ಟಿನ ಪಿರಮಿಡ್ ತರಹ ಇರುವ ಈ ಪ್ರದೇಶದ ಅಭಿವೃದ್ಧಿ ಆಗಬೇಕು. ಪುರಾತನ ಕಾಲದ ಶಿಲಾಯುಗ ಉಳಿಯಬೇಕು, ಮುಂದಿನ ಪೀಳಿಗೆ ಹೆಚ್ಚಾಗ ತಿಳಿಯಬೇಕು. ಸ್ಥಳೀಯ ಸಾರ್ವಜನಿಕರ ಸಂಪರ್ಕ ಪಡೆದು ಅವರ ಸಹಕಾರದಿಂದ ಮತ್ತು ಮಾರ್ಗದರ್ಶನದಿಂದ ನೋಡಿ ಸುರಕ್ಷವಾಗಿ ವಾಪಾಸು ಬರಬೇಕು. ತಾವು ಸಹ ಹೋದರೆ ಅಲ್ಲಿಯ ಗ್ರಾಮದ ಗ್ರಾಮಸ್ಥರು ಸಹಾಯ ಮಾಡಿರಿ ಮತ್ತು ವಿಚಾರ ತಿಳಿದು ಮುಂದುವರೆದರೆ ಉತ್ತಮ.

ಮುರಳೀಧರ್ ನಾಡಿಗೇರ್
ಹೊಸಪೇಟೆ
9008017727

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಫೆ 14 ಶಿವಮೊಗ್ಗದಲ್ಲಿ ರಕ್ತದಾನ ಶಿಬಿರ

0

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್, ಎನ್ ಸಿ ಸಿ , ಎನ್ ಎಸ್ ಎಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಮೆಗ್ಗನ್ ಬೋಧನಾ ಕಾಲೇಜಿನ ವತಿಯಿಂದ ದಿನಾಂಕ 14/02/2023ರಂದು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ರಕ್ತದಾನ ಮಾಡಲು ಇಚ್ಚಿಸುವವರು ಕಾಲೇಜಿನ ಸಭಾಂಗಣಕ್ಕೆ ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಆಗಮಿಸಬೇಕೆಂದು ಕೋರಲಾಗಿದೆ.
ರಕ್ತದಾನದೊಂದಿಗೆ ರಕ್ತ ಪರೀಕ್ಷೆಯನ್ನೂ ಹಮ್ಮಿಕೊಳ್ಳಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಈಗ ಕಿಸೆಯಲ್ಲಿ ವಿಶ್ವ ರೇಡಿಯೊ

0

ಫೇಬ್ರವರಿ 13ರಂದು ಜಗತ್ತಿನಾದ್ಯಂತ ರೇಡಿಯೊದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಮಾಧ್ಯಮಗಳಲ್ಲಿ ಅರಿವು ಮೂಡಿಸಲು ಮತ್ತು ರೇಡಿಯೊ ಮೂಲಕ ಮಾಹಿತಿಗೆ ಪ್ರವೇಶವನ್ನು ಉತ್ತೇಜಿಸುವ ಸಲುವಾಗಿ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷ ವಿಶ್ವ ರೇಡಿಯೋ ದಿನದ 12 ನೇ ಆವೃತ್ತಿಯಾಗಿದ್ದು, ‘ರೇಡಿಯೋ ಮತ್ತು ಶಾಂತಿ’ ಧ್ಯೇಯವನ್ನು ಹೊಂದಿದೆ.

ಇಂದಿನ ಆಧುನಿಕ ಯುಗದಲ್ಲಿ ಜನಪ್ರಿಯ ಸಂವಹನ ಮಾಧ್ಯಮ ಎಂದಾಕ್ಷಣ ನಮಗೆಲ್ಲಾ ಸೋಶಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣ ನೆನಪಾಗತ್ತೆ. ಆದರೆ, ವಿಶ್ವಸಂಸ್ಥೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಮಾಧ್ಯಮವೆಂದರೆ ಅದು ರೇಡಿಯೋ.

ಪ್ರಾಚೀನ ಕಾಲದಲ್ಲಿ, ರೇಡಿಯೋ ಒಂದೇ ಸಂವಹನ ಸಾಧನವಾಗಿತ್ತು, ಇದನ್ನು ಜನರು ಬಹಳ ಉತ್ಸಾಹದಿಂದ ಕೇಳುತ್ತಿದ್ದರು. ಏಕೆಂದರೆ ಈ ಮೂಲಕ ದೇಶ ಮತ್ತು ಪ್ರಪಂಚದ ಸುದ್ದಿಯನ್ನು ಜನರಿಗೆ ತಲುಪಿಸಲಾಗುತ್ತಿತ್ತು.
ಇದು ಆ ಕಾಲದ ಜನರಿಗೆ ಮನರಂಜನೆಯ ಸಾಧನವೂ ಆಗಿ ರೇಡಿಯೋ ಜನಪ್ರಿಯವಾಗಿತ್ತು.

ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ರೇಡಿಯೋ, ಇಂದಿನ ಡಿಜಿಟಲ್ ಲೋಕದಲ್ಲಿ ಮರೆಯಾಗುತ್ತಿದ್ದರೂ, ಅದರ ಮಹತ್ವ ಮಾತ್ರ ಹಾಗೇ ಇದೆ. ಅಷ್ಟೇ ಅಲ್ಲ, ಇಂದಿಗೂ ವಿಶ್ವದಲ್ಲಿ ಅತೀ ಹೆಚ್ಚು ಬಳಕೆ ಮಾಡುತ್ತಿರುವ ಸಾಮೂಹಿಕ ಮಾಧ್ಯಮಗಳಲ್ಲಿ ರೇಡಿಯೋನೇ ಅಗ್ರಸ್ಥಾನದಲ್ಲಿದೆ.

2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬೇಡಿಯಕೆಯನ್ನು ಯುನೆಸ್ಕೋದ ಮುಂದಿಟ್ಟಿತು.

2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಅನುಮೋದಿಸಿತು. ಇದನ್ನು ಆಚರಿಸುವ ಸಂಪ್ರದಾಯ 2012ರ ಫೆಬ್ರವರಿ 13ರಿಂದ ಆರಂಭವಾಯಿತು. ಅಂದಿನಿಂದ ಇದು ಅಂತರರಾಷ್ಟ್ರೀಯ ದಿನದ ಸ್ಥಾನಮಾನವನ್ನು ಪಡೆದುಕೊಂಡಿದೆ.

ಆದಾಗ್ಯೂ UNESCO ಸದಸ್ಯ ರಾಷ್ಟ್ರಗಳು 2011 ರಲ್ಲಿ ವಿಶ್ವ ರೇಡಿಯೋ ದಿನವನ್ನು ಘೋಷಿಸಿದವು. ಈ ವಿಶೇಷ ದಿನವನ್ನು ಗುರುತಿಸಲು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ರೇಡಿಯೊದ ಮಹತ್ವ ಮತ್ತು ಇತಿಹಾಸದ ತಿಳಿಸಲು ವಿಚಾರಗೋಷ್ಠಿಗಳು ಮತ್ತು ಚರ್ಚೆಗಳು ನಡೆಯುತ್ತವೆ.

ಟಿವಿ ಅಥವಾ ದೂರದರ್ಶನದ ಆವಿಷ್ಕಾರದ ಮೊದಲು, ರೇಡಿಯೋ ಪ್ರಪಂಚದಾದ್ಯಂತ ಹೆಚ್ಚಿನ ಜನರ ಕೇಂದ್ರ ಆಕರ್ಷಣೆಯಾಗಿತ್ತು. ಇದು ಪಟ್ಟಣದಿಂದ ಹಳ್ಳಿಗಳವರೆಗೆ, ದೇಶದಿಂದ ಜಾಗತಿಕ ಮಟ್ಟಕ್ಕೆ ಸಂಪರ್ಕವನ್ನು ಮಾಡುವಂತಹ ಸಾಧನವಾಗಿದೆ. ಇದು ಜನರಿಗೆ ಪ್ರಸ್ತುತ ಸನ್ನಿವೇಶಗಳು, ಸುದ್ದಿಗಳು, ಕಥೆಗಳು, ಹಾಡುಗಳು ಮತ್ತು ಇತರ ಮನರಂಜನೆಯ ವಿಷಯಗಳು, ಶೈಕ್ಷಣಿಕ ಕಾರ್ಯಕ್ರಮಗಳು, ವೈದ್ಯಕೀಯ ಅರಿವು ಮತ್ತು ಎಲ್ಲವನ್ನೂ ಒದಗಿಸುತ್ತದೆ.

ಇಷ್ಟು ಪ್ರಾಮುಖ್ಯತೆ ಪಡೆದಿರುವ ರೇಡಿಯೋ ಸದ್ಯ ತೆರೆಮರೆಗೆ ಸೇರುತ್ತಿದೆ ಎನ್ನುವುದು ದುರಾದೃಷ್ಟಕರ.

ಆದರೂ ಈಗಿನ
ಎಫ್. ಎಂ . ರೇಡಿಯೋ ಜಾಲ ಮತ್ತೆ ಮೈಕೊಡವಿಕೊಂಡು
ಫೀನಿಕ್ಸ್ ನಂತೆ ಎದ್ದಿದೆ.
ಜಾಲತಾಣ ರೇಡಿಯೊ , ಮೊಬೈಲ್ ಆಪ್ ರೇಡಿಯೋ ಜನಪ್ರಿಯತೆ ಗಳಿಸುತ್ತಿದೆ.
ಸಮುದಾಯ ರೇಡಿಯೋ ನಿಲಯಗಳು ,
ಕ್ಯಾಂಪಸ್ ಎಫ್.ಎಂ. ಸಾಮಾಜಿಕ ಬದಲಾವಣೆಗೆ ಮುನ್ನುಡಿ ಹಾಡಿವೆ.
ಇದರ ಬಳಕೆ ಕಡಿಮೆಯಾಗುತ್ತಿದ್ದರೂ, ಮಹತ್ವ ಇನ್ನೂ ಹಾಗೆಯೇ ಇದೆ.

ಇತ್ತೀಚೆಗೆ ಯುನೆಸ್ಕೋ ಪ್ರಪಂಚದಾದ್ಯಂತದ ವಿವಿಧ ಪ್ರಸಾರ ಮತ್ತು ಸಮುದಾಯಗಳ ಸಹಯೋಗದೊಂದಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಿ, ರೇಡಿಯೊದ ಪ್ರಾಮುಖ್ಯತೆ ಮತ್ತು ಭವಿಷ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಮತ್ತು ಅನುಕೂಲಗಳ ಬಗ್ಗೆ ಅರಿವು ಮೂಡಿಸಲು ವ್ಯವಸ್ಥೆ ಮಾಡಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕುಸ್ಮೇಶ್ವರ ( ಘೃಷ್ಣೇಶ್ವರ):

0

ಕುಸ್ಮೇಶ್ವರ ( ಘೃಷ್ಣೇಶ್ವರ):

ಇದಕ್ಕೆ ಶಿವಮಹಾಪುರಾಣದ

ಕಥೆಯ ಹಿನ್ನೆಲಯಿದೆ. ಮಹಾರಾಷ್ಟ್ರದ ಭಾರದ್ವಾಜ ಗ್ರಾಮದಲ್ಲಿ ಸುರ‍್ಮ- ಸುದೇಕಾ ದಂಪತಿಗಳು ವಾಸವಾಗಿದ್ದರು.

ಶಿವಭಕ್ತ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಸುದೇಕಾ ತನಗೆ ಸಂತಾನ ಭಾಗ್ಯವಿಲ್ಲ ಎಂದು ಆಕೆಯ ತಂಗಿಯನ್ನ ಮದುವೆಯಾಗಲು ಗಂಡನಿಗೆ ಒತ್ತಾಯಿಸುವಳು.ಸುರ‍್ಮ ಒಪ್ಪವುದೇ ಇಲ್ಲ.ಕೊನೆಗೆ ಪತ್ನಿಯ ಒತ್ತಾಯಕ್ಕೆ ಕಟ್ಟುಬಿದ್ದು ಸುದೇಕಾಳ ತಂಗಿ ಕುಸುಮಳನ್ನ ಮದುವೆಯಾಗುತ್ತಾನೆ.

ಅವಳೂ ಪರಮ ಶಿವಭಕ್ತೆ. ನಿತ್ಯವೂ ಮಣ್ಣಿನಿಂದ 101 ಶಿವಲಿಂಗವನ್ನ ಸ್ಮರಿಸಿ
ಪೂಜಿಸಿ ಹತ್ತಿರದ ಕೊಳದಲ್ಲಿ ಬಿಡುತ್ತಿದ್ದಳು.ಹೀಗೆ ಒಂದು ಲಕ್ಷ ಶಿವಲಿಂಗಗಳು
ಆದಾಗ ಶಿವನು ಆಕೆಗೆ ಪುತ್ರ ಸಂತಾನವನ್ನ ಕರುಣಿಸುವನು.ಜನಿಸಿದ ಆ ಮಗುವಿಗೆ ಶುಭಪ್ರಿಯ ಎಂದು ನಾಮಕರಣ ಮಾಡುತ್ತಾರೆ. ಮಗುವಿನ ಆಟಪಠಗಳಲ್ಲಿ ಸುದೇಕಾಳಲ್ಲಿ ಗಂಡ ಮತ್ತು ತಂಗಿ ತನ್ನನ್ನು ದೂರ ಮಾಡುತ್ತಿದ್ದಾರೆ ಎಂಬ ಸಂದೇಹ ಹೊಕ್ಕುಬಿಡುತ್ತದೆ.ಇದಕ್ಕೆಲ್ಲ ಶುಭಪ್ರಿಯನೇ ಕಾರಣ ಎಂದು ಒಳಗೇ ವ್ಯಗ್ರಳಾಗಿರುತ್ತಾಳೆ.

ಶುಭಪ್ರಿಯ ದೊಡ್ಡವನಾದ ಮೇಲೆ ವಿವಾಹವನ್ನೂ ಮಾಡುತ್ತಾರೆ.ಇಷ್ಟೆಲ್ಲದರ ನಡುವೆ ತನ್ನನ್ನು ಅಸಡ್ಡೆ ಮಾಡುತ್ತಿದ್ದಾರೆ ಎಂಬ ಸಿಟ್ಟಿನಿಂದ ಒಂದು ರಾತ್ರಿ
ಶುಭಪ್ರಿಯ ತನ್ನ ಪತ್ನಿಯೊಂದಿಗೆ ನಿದ್ರೆಯಲ್ಲಿದ್ದಾಗ ಹರಿತವಾದ ಖಡ್ಗದಿಂದ
ಶುಭಪ್ರಿಯನ ದೇಹವನ್ನ ಹೋಳಾಗಿ ತುಂಡರಿಸಿ ಕೊಳದಲ್ಲಿ ಬಿಸುಟಿ ಏನೂ ಆಗಿಲ್ಲವೆಂಬಂತೆ ನಿದ್ರೆ ಮಾಡುತ್ತಾಳೆ. ಶುಭಪ್ರಿಯನ ಪತ್ನಿ ಬೆಳಿಗ್ಗೆ ರಕ್ತಸಿಕ್ತವಾದ ಹಾಸಿಗೆ ಮತ್ತು ಪತಿ ಶುಭಪ್ರಿಯ ಇಲ್ಲದ್ದು ನೋಡಿ ಆಕ್ರಂದನ ಗೈಯುವಳು.

ಆಕೆಯ ಜೊತೆ ಸುದೇಕಾಳೂ ದುಃಖಿಸುತ್ತಾಳೆ.

ಶಿವಪೂಜೆ ಮುಗಿಸಿ ಬಂದ ಸುರ‍್ಮ ಎಲ್ಲಾ ಶಿವನ ಲೀಲೆಯೆಂದು ಎಲ್ಲರಿಗೂ
ಸಮಾಧಾನಪಡಿಸುವನು. ಇತ್ತ ಎಂದಿನಂತೆ ಕುಸುಮ ಶಿವಲಿಂಗ ಮಾಡಿ ಫೂಜಿಸಿ ಕೊಳದಲ್ಲಿ ಬಿಟ್ಟು ಬರುತ್ತಾಳೆ.ಹಿಂದೆಯೇ ಅಚ್ಚರಿ ಕಾದಿರುತ್ತದೆ.
ಅಮ್ಮಾ..! ಎಂದು ಶುಭಪ್ರಿಯ ಕೊಳದಿಂದೆದ್ದು ನಡೆದು ಬರುತ್ತಾನೆ. ಕುಸುಮಳಿಗೆ ತನ್ನ ಕಣ್ಣನ್ನ ನಂಬಲಾಗಲೇ ಇಲ್ಲ!

ಆ ಕಡೆ ಕೊಳದಲ್ಲಿ ಜ್ಯೋತಿರ್ಲಿಂಗದ ಪ್ರಕಾಶ ಕಾಣಿಸುತ್ತದೆ. ಅದರಿಂದ ಬಂದ ತ್ರಿಶೂಲಧಾರಿಯಾದ ಪರಶಿವ ಇವರಿಗೆ ರ‍್ಶನ ಕೊಡುವನು.ನಿನ್ನ ಭಕ್ತಿಯಿಂದ ನಿನ್ನ ಮಗ ಬದುಕಿದ ಈ ಸುದೇಕಾಳು ಅವನ
ಕೊಂದಿದ್ದಳು ಎಂದು ಕೋಪದಿಂದ ತ್ರಿಶೂಲ ಎತ್ತಿದ. ಆಗ ಕುಸುಮಳು ಅವಳ
ಈ ಹೀನಕೃತ್ಯದಿಂದ ಶಿವ ನಿನ್ನ ಭಾಗ್ಯವಾಗಿದೆ.ಅಕ್ಕನನ್ನನು ಕ್ಷಮಿಸು ಎನ್ನುತ್ತಾಳೆ.
ಕೊನೆಗೆ ಶಿವನು ಸುಮ್ಮನಾಗುವನು.ಅವಳ ಅಪೇಕ್ಷೆಯಂತೆ ಅಲ್ಲಿ ಭಕ್ತರಿಗೆ ಸರ್ವ ಕಷ್ಟಗಳನ್ನು ಪರಿಹರಿಸುವ ಶಕ್ತಿ ಶಿವಲಿಂಗವಾಗಿ ನೆಲೆಸುತ್ತಾನೆ.ಅಲ್ಲದೇ ಸುಷ್ಮೇಶ್ವರನೆಂಬ ಅಭದಾನದಿಂದ ಈ ಕ್ಷೇತ್ರ ಪ್ರಸಿದ್ದಿ ಪಡೆಯುತ್ತದೆ ಎಂದು ಆಶೀರ್ವದಿಸುತ್ತಾನೆ.

ಈ ಕ್ಷೇತ್ರವು ಎಲ್ಲೋರಾದ ವೇರುಲ್ ಗ್ರಾಮದ ಸಮೀಪವಿದೆ. ಎಲಿ ಎಂಬ ನದಿಯ ತೀರದಲ್ಲಿದೆ..ಕ್ರಿ.ಪೂ 1730ರಲ್ಲಿ ಮಾಧವರಾವ್ ಹೋಳ್ಕರ್ ಅವರ ಪತ್ನಿ ಗೌತಮಿಬಾಯಿ ಅವರಿಂದ
ದೇವಾಲಯದ ಜೀರ್ಣೋದ್ಧಾರವಾಗಿದೆ.ಅಲ್ಲಿರುವ ಪುಷ್ಕರಿಣಿಗೆ ಶಿವಾಲಯ ತರ‍್ಥವೆಂಬ ಹೆಸರಿದೆ. ದೇವಾಲಯದ ಗೋಡೆಗಳಲ್ಲಿ ಚಿತ್ರಕಲೆ ಬಿಡಿಸಲಾಗಿದೆ.

ದಶಾವತಾರದ ಕೆತ್ತನೆಯೂ ಕಂಡುಬರುತ್ತದೆ.

ಶ್ರೀ ಶಂಕರಾಚಾರ್ಯರು ಕುಸ್ಮೇಶ್ವರ ಸ್ತುತಿ ಹೀಗಿದೆ
ಏಲಾಪುರಿ ರಮೈ ಶಿವಾಲಯೇಸ್ಮಿನ್
ಸಮುಲ್ಲ ಸಂತಂ ತ್ರಿಜಗದ್ವರೇಣ್ಯಂ |
ವಂದೇ ಮಹೋದರತರ ಸ್ವಭಾವಂ
ಸದಾಶಿವಂ ತಂ ಧಿಷಣೇಶ್ವರಾಖೈಮ್ ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕರ್ನಾಟಕ ಸಂಘದ ಆಶ್ರಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕಾವ್ಯ ಮತ್ತು ಕಥಾ ಕಮ್ಮಟ

0

ಕರ್ನಾಟಕ ಸಂಘದ‌ ಆಶ್ರಯದಲ್ಲಿ ಫೆ 13 ರಂದು ಕಾವ್ಯ ಮತ್ತು ಕಥಾ ಕಮ್ಮಟ ನಡೆಯಿತು. ಪದವಿ ವಿದ್ಯಾರ್ಥಿಗಳಿಗೆ ಈ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿತ್ತು.


ಕಥೆಗಾರ ಶೇಷಾದ್ರಿ ಕಿನಾರ ಮತ್ತು ಕವಯಿತ್ರಿ ಸ.ಉಷಾ
ಸಂಪನ್ಮೂಲ ವ್ಯಕ್ತಿಗಳಾಗಿ ಉದಯೋನ್ಮುಖ ಲೇಖಕರಿಗೆ ಮಾರ್ಗ‌‌ದರ್ಶನ ನೀಡಿದರು.

ಹಿರಿಯ ಕವಿ ಶ್ರೀ ಸತ್ಯನಾರಾಯಣ ರಾವ್ ಅಣತಿ ಈ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಉದಯೋನ್ಮುಖ ಬರಹಗಾರರಿಗೆ ಕರ್ನಾಟಕ ಸಂಘ ಪ್ರೋತ್ಸಾಹಿಸಿ ಈ ಕಮ್ಮಟ ಏರ್ಪಡಿಸಿದೆ.
ಇದರ ಲಾಭವನ್ನ ನಮ್ಮ ಯುವ ಪೀಳಿಗೆ ಪಡೆಯಲಿ ಎಂದು ಆಶಿಸಿದರು.


ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರ ರಾಜ್ ಅಧ್ಯಕ್ಷತೆ ವಹಿಸಿದ್ದರು.
ಡಾ. ಹಾಲಮ್ಮ ಮತ್ತು
ಡಾ.ಎಸ್. ನಾಗವೇಣಿ
ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಗೆ ಅನ್ ಲೈನ್ ಅರ್ಜಿ ಆಹ್ವಾನ

0

ಶಿವಮೊಗ್ಗ:
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ವ್ಯಾಪ್ತಿಯ ಹಿಂದುಳಿದ ವರ್ಗಗಳ ಪ್ರವರ್ಗ-2ಎ ರಲ್ಲಿನ ಸವಿತಾ ಮತ್ತು ಇದರ ಉಪಜಾತಿಗಳಿಗೆ ಸೇರಿದ ಖುಷ್ಕಿ ಜಮೀನಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ ಸೌಲಭ್ಯ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮಾಂತರ ರೂ.98.000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1.20.000/- ಗಳ ಒಳಗಿರಬೇಕು. ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರುವ ಅರ್ಹ ರೈತರು ಅರ್ಜಿ ಸಲ್ಲಿಸಬಹುದು.

ಹಿಂದುಳಿದ ವರ್ಗಗಳ ಪ್ರವರ್ಗ-2ಎ ರಲ್ಲಿನ ಸವಿತಾ ಮತ್ತು ಇದರ ಉಪಜಾತಿಗಳಿಗೆ ಸೇರಿದ ಸಿ.ಇ.ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. 18 ರಿಂದ 35 ವರ್ಷಗಳ ಒಳಗಿನ, ವಾರ್ಷಿಕ ವರಮಾನ ರೂ. 3,50,000/- ಗಳ ಒಳಗಿರುವ, ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರುವ ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಮೇಲಿನ ಯೋಜನೆಗಳಿಗೆ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಫೆ.03 ರಿಂದ ಮಾ.03 ರವರೆಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‍ಸೈಟ್ https://kssd.karnataka.gov.in ಅಥವಾ ದೂರವಾಣಿ ಸಂಖ್ಯೆ 080-22374832, 8050773004/5, 8050370006, 7090400100 ಅಥವಾ 7090400900 ಗೆ ಸಂಪರ್ಕಿಸಬಹುದಾಗಿದೆ ಎಂದು ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದಲ್ಲೊಂದು ಸಿನಿಮಾ ಸ್ಕೂಲ್ ಸ್ಥಾಪನೆಯಾಗಲಿ- ಚಿತ್ರ ನಿರ್ದೇಶಕ ಸತ್ಯಪ್ರಕಾಶ್

0

ಶಿವಮೊಗ್ಗ:
ಕರ್ನಾಟಕದಲ್ಲಿ ಸಿನಿಮಾ ಸ್ಕೂಲ್ ಆಗಬೇಕು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಪ್ರಕಾಶ್‌ಆಶಯ ವ್ಯಕ್ತಪಡಿಸಿದರು.

ಶಿವಮೊಗ್ಗ ಬೆಳ್ಳಿ ಮಂಡಲ, ಯುಗ ಧರ್ಮಜಾನಪದ ಸಮಿತಿ ಹಾಗೂ ಸಿನಿಮೊಗೆ ಚಿತ್ರಸಮಾಜಗಳ ಆಶ್ರಯದಲ್ಲಿ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಅಂಬೆಗಾಲು-5: ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೂನಾದಲ್ಲಿ ಸಿನಿಮಾ ಸ್ಕೂಲ್‌ ಇದೆ. ಅಲ್ಲಿ ಬೆರವಣಿಗೆಯನ್ನೇ ಪ್ರತ್ಯೇಕ, ನಿರ್ದೇಶನವನ್ನೇ ಪ್ರತ್ಯೇಕ. ಹೀಗೆ ಸಿನಿಮಾದ ಪ್ರತಿಯೊಂದು ವಿಭಾಗವನ್ನೂ ಪ್ರತ್ಯೇಕವಾಗಿ ಕಲಿಸುತ್ತಾರೆ.ಅಲ್ಲಿಂದ ಬಂದ ಹುಡುಗರು ಮಾಡುವ ಸಿನಿಮಾಗಳು ಅಮೆಜಾನ್, ನೆಟ್ ಫ್ಲಿಕ್ಸ್ ಹೀಗೆ ಒಟಿಟಿ ವೇದಿಕೆಯಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸುತ್ತವೆ ಎಂದರು.
ಆದರೆ ಕನ್ನಡದ ಸಿನಿಮಾಗಳು ಡಿಜಿಟಲ್ ವೇದಿಕೆಯಲ್ಲಿ ರಾರಾಜಿಸುವಲ್ಲಿ ವಿಫಲ ಆಗುತ್ತಿವೆ. ಅಲ್ಲಿ ಅವಕಾಶವನ್ನೇ ಪಡೆಯಲು ಆಗುತ್ತಿಲ್ಲ. ಇಲ್ಲಿ ಗುಣಮಟ್ಟದ ಕೊರತೆ ಇದೆ.ಅದರಲ್ಲಿ ಸುಧಾರಣೆ ತಂದುಕೊಳ್ಳಬೇಕು ಎಂದ ಅವರು, ಡಿಜಿಟಲ್ ವೇದಿಕೆಯಲ್ಲಿ ಕನ್ನಡ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಕೂಡಾ ಕಡಿಮೆ ಇದೆ. ಚಿತ್ರದಲ್ಲಿ ಗುಣಮಟ್ಟ ಇದ್ದರೆ ವೀಕ್ಷಕರು ಸಿಗುತ್ತಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿಯಾದರೂ ಒಂದು ಸಿನಿಮಾ ಸ್ಕೂಲ್ ಮಾಡಬೇಕು. ವಾರದಲ್ಲಿ ಎರಡು ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಕೊಡಿಸಬಹುದು ಎಂದರು.

ಶಿವಮೊಗ್ಗದಲ್ಲಿ ಗಿಡ ಇದೆ. ನೀರು ಹಾಕುವವರೂ ಇದ್ದಾರೆ. ಹಾಗಾಗಿ, ಒಳ್ಳೆಯ ಹೂವು, ಹಣ್ಣು ನಿರೀಕ್ಷೆ ಮಾಡಬಹುದು. ಅದಕ್ಕೆ ಸಿನಿಮಾ ಸ್ಕೂಲ್ ನೆರವಾಗುತ್ತದೆ ಎಂದ ಅವರು, ರಾಜ್ಯದಲ್ಲಿ ಎಲ್ಲೂ ಸಿಗದ ಅವಕಾಶಗಳು ಶಿವಮೊಗ್ಗೆಯಲ್ಲಿ ಲಭ್ಯವಿದೆ.ಅಂಬೆಗಾಲು ನಿಜಕ್ಕೂ ಒಂದು ಪರಿಣಾಮಕಾರಿಯಾದ ವೇದಿಕೆ. ಇದನ್ನು ಸಮರ್ಥವಾಗಿ ಬಳಸಿಕೊಂಡು, ಗಂಭೀರವಾದ ಚಲನಚಿತ್ರಗಳ ನಿರ್ಮಾಣಗಳ ಮೂಲಕ ಸಾರ್ಥಕ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಬರವಣಿಗೆಅಷ್ಟೊಂದು ಶಕ್ತಿದಾಯಕ ಆಗಿಲ್ಲ. ಬರವಣಿಗೆ ಇಲ್ಲದೇ ಹೋದರೆ ಸಿನಿಮಾ ಸೋಲುತ್ತದೆ.ಕಥೆಗಳನ್ನು ಬಾಯಲ್ಲಿ ಹೇಳುವುದು ಬೇರೆ.ಸಿನಿಮಾದಲ್ಲಿ ಚಿತ್ರದ ಮೂಲಕವೇ ಕಥೆ ಹೇಳಬೇಕು.ಆರಂಭ ಹೇಗೆ, ಕೊನೆ ಹೇಗೆ ಎಂಬುದು ಗೊತ್ತಿರಬೇಕು.ಕಥೆ ಏನು ಹೇಳುತ್ತದೆ ಎಂಬುದೂ ನಮಗೆ ಅರಿವಿರಬೇಕು ಎಂದ ಅವರು, ಸಿನಿಮಾ ಪ್ರೇಕ್ಷಕನ ಎದುರು ಎರಡರಿಂದ ಮೂರು ಗಂಟೆ ಇದ್ದರೂ, ಅದರ ಹಿಂದೆ ಅಗಾಧವಾದ ಕೆಲಸ ಇರುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಸಂಚಾಲಕ ಡಿ.ಎಸ್. ಅರುಣ್ ಪ್ರಾಸ್ತಾವಿಕ ಮಾತನಾಡಿ, ಸಿನೆಮಾಗಾಗಿ ಕಷ್ಟ ಪಡುತ್ತಿರುವ ಸಾವಿರಾರು ಯುವಕರಿದ್ದಾರೆ. ಆದರೆ ವರ್ಷದಲ್ಲಿಗೆಲ್ಲುವುದು ನಾಲ್ಕು – ಐದುಚಿತ್ರ ಮಾತ್ರ.ಯುವಕರಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡಲು ಈ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಶಿವಮೊಗ್ಗ ಬೆಳ್ಳಿ ಮಂಡಲದ ವೈದ್ಯ, ನಿರ್ಮಾಪಕ ಡಿ. ಮಂಜುನಾಥ್, ಡಾ.ರಜನಿ ಪೈ, ಡಾ.ಶುಭ್ರತಾ, ಒಗ್ಗರಣೆಡಬ್ಬಿಕೃಷ್ಣಪ್ಪ, ಡಾ.ಧನಂಜಯ ಸರ್ಜಿ, ಜಿ. ವಿಜಯಕುಮಾರ್, ಜಿ. ಅನಂತ, ಡಾ. ನಾಗರಾಜ ಪರಿಸರ, ಕಿರಣ್‌ಇನ್ನಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್, ಬೆಳ್ಳಿಮಂಡಲದ ಹಿರಿಯ ಸದಸ್ಯ ಸಿ.ಎನ್. ಶ್ರೀನಿವಾಸ್‌ರವರಿಗೆ ಪುಷ್ಟ ನಮನ ಸಲ್ಲಿಸಲಾಯಿತು.

ಅಂಬೆಗಾಲು ಕಿರುಚಿತ್ರ ಸ್ಪರ್ಧೆ-5ರಲ್ಲಿ ಎಚ್.ಜಿ.ಸಂತೋಷ್ ನಿರ್ದೇಶನದ ಮಲೆನಾಡಿನ ಕಥೆಗಳು ಪ್ರಥಮ ಸ್ಥಾನ ಪಡೆದಿದೆ.

ಡಿ.ಎಂ. ರಾಜಕುಮಾರ್‌ಅವರ ಬಿಡುಗಡೆಕಿರುಚಿತ್ರ ದ್ವಿತೀಯ, ಜನಾರ್ಧನ್ ಶೆಟ್ಟಿಅವರ ಮಾತಾಡಿಕಿರುಚಿತ್ರತೃತೀಯ ಬಹುಮಾನ ಪಡೆಯಿತು.ಸಂತೋಷ್ ಶೆಟ್ಟಿ ಅವರ ಕಜನಿ ಚಿತ್ರವು ವಿಶೇಷ ಪುರಸ್ಕಾರ ಪಡೆಯಿತು. ಪ್ರಥಮ ಬಹುಮಾನ 25ಸಾವಿರರೂ., ದ್ವಿತೀಯ-15 ಸಾವಿರರೂ. ಮತ್ತು ತೃತೀಯ-10 ಸಾವಿರರೂ.ಮತ್ತು ಸ್ಮರಣಿಕೆ ನೀಡಲಾಯಿತು.
ಈ ಬಾರಿ 8ರಿಂದ 10 ನಿಮಿಷಗಳ ಸ್ಪರ್ಧೆಯಲ್ಲಿ ಪ್ರಾಜೆಕ್ಟ್ ವಿಜನ್, ಮಾಯಾ ಬಜಾರ್, ಆಲಂ, ಆಂತರ್ಯ, ಅಂದರಿಕಿ ನಮಸ್ಕಾರಂ, ವೇದ-ದರಿಯಲ್ ವಾರಿಯರ್, ದಟೈನ್, ದಗಿಫ್ಟ್, ಬಿಡುಗಡೆ, ಕಜನಿ, ದೇವರೆಲ್ಲಿದ್ದಾನೆ, ಮಾತಾಡಿ, ವರ್ಜ್ಯಂ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಂಧ್ರಪ್ರದೇಶ ರಾಜ್ಯಪಾಲರಾಗಿ ಕನ್ನಡಿಗ ನ್ಯಾ.ಎಸ್ ಅಬ್ದುಲ್ ನಜೀರ್ ನೇಮಕ

0

ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್ ಅವರನ್ನ ಆಂಧ್ರದ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ನೇಮಿಸಿದ್ದಾರೆ.

ಎಸ್ ಅಬ್ದುಲ್ ನಜೀರ್ ಅವರು ಮೂಲತಃ ಮೂಡುಬಿದ್ರೆಯ ಸಮೀಪವಿರುವ ಬೇಳುವಾಯಿಯವರು. ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಮತ್ತು ಲಡಾಖ್ ಕೇಂದ್ರದಲಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ರಾಧಾಕೃಷ್ಣ ಮಾಥುರ್ ರಾಜೀನಾಮೆ ನೀಡಿದ್ದಾರೆ. ಇದನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗವರ್ನರುಗಳ ನೇಮಕಾತಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಿರ್ಗಮಿತ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸ್ಥಾನವನ್ನು ಮಾಜಿ ಕೇಂದ್ರ ಸಚಿವ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ತುಂಬಿದ್ದಾರೆ. ಜಾರ್ಖಂಡ್ ರಾಜ್ಯಪಾಲರಾಗಿ ಸಿ.ಪಿ. ರಾಧಾಕೃಷ್ಣನ್ ನೇಮಕವಾಗಿದ್ದಾರೆ.

ಅರುಣಾಚಲ್ ಪ್ರದೇಶಕ್ಕೆ ಹೊಸ ರಾಜ್ಯಪಾಲರಾಗಿ ಲೆಫ್ಟಿನೆಂಟ್ ಜನರ ಕೈವಲ್ಯ ತ್ರಿ ವಿಕ್ರಂ ಪರ್ನಾ ಯಕ್ ನೇಮಕವಾಗಿದ್ದಾರೆ.

ur Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬೇಲೂರಿನ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ಪದಕ ಗೆದ್ದ ಶಿವಮೊಗ್ಗ ತಂಡ

0

ಬೇಲೂರಿನಲ್ಲಿ ನಡೆದ ಬೇಲೂರು ಓಪನ್ 3ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ ಯಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ತಂಡ ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದಿದ್ದು ಈ ಸಂದರ್ಭದಲ್ಲಿ ಸಿಟಿ ಕರಾಟೆ ಅಸೋಸಿಯೇಷನ್ ತರಬೇತಿದಾರ ವೆಂಕಟೇಶ್ ಹಾಗೂ ವಿಜೇತ ಕ್ರೀಡಾಪಟುಗಳಿಗೆ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜನಮೆಚ್ಚುಗೆ ಪಡೆದ ಸಾಗರ ಜಾತ್ರೆ ಕುಸ್ತಿ ಪಂದ್ಯಾವಳಿ

0

ಸಾಗರ: 3 ದಿನಗಳ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯು ಸಾವಿರಾರು ಜನರ ಮೆಚ್ಚುಗೆ ಗಳಿಸಿತು.

ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಜಾತ್ರಾ ಸಮಿತಿ ವತಿಯಿಂದ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಭಾನುವಾರ ಮುಕ್ತಾಯವಾಯಿತು.


ಭಾನುವಾರ ಕುಸ್ತಿ ಪಂದ್ಯಾವಳಿಯ ಕೊನೆಯ ದಿನದ ಹಿನ್ನೆಲೆಯಲ್ಲಿ ಹಾಗೂ ರಜಾ ದಿನ ಆಗಿದ್ದರಿಂದ ಸಾವಿರಾರು ಪ್ರೇಕ್ಷಕರು ಆಗಮಿಸಿ ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು.

ರೋಚಕ ಹಣಾಹಣಿಯಿಂದ ಕೂಡಿರುತ್ತಿದ್ದ ಪಂದ್ಯದ ವೇಳೆ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.


ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಬೇರೆ ರಾಜ್ಯಗಳ ಕುಸ್ತಿಪಟುಗಳು ಅತ್ತ್ಯುತ್ತಮ ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡರು. ದಾವಣಗೆರೆ, ಶಿಕಾರಿಪುರ, ಭದ್ರಾವತಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಯ ತಾಲೂಕುಗಳಿಂದ ಕುಸ್ತಿಪಟುಗಳು ಆಗಮಿಸಿ ಸ್ಪರ್ಧಿಸಿದ್ದರು.


ಕುಸ್ತಿ ಪಂದ್ಯಾವಳಿ 3ನೇ ದಿನದ ಪಂದ್ಯಗಳಲ್ಲಿ ಘಟಾನುಘಟಿ ಕುಸ್ತಿಪಟುಗಳ ಪಂದ್ಯಗಳು ನಡೆದವು. ರಾಜ್ಯ ಹಾಗೂ ಬೇರೆ ರಾಜ್ಯಗಳ ಕುಸ್ತಿಪಟುಗಳ ನಡುವಿನ ಪಂದ್ಯದಲ್ಲಿ ಸ್ಥಳೀಯ ಕುಸ್ತಿಪಟುಗಳು ವಿಜೇತರಾದ ಸಂದರ್ಭದಲ್ಲಿ ಪ್ರೇಕ್ಷಕರು ಸಂಭ್ರಮಿಸಿದರು.


ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿದ್ದ ಕುಸ್ತಿಪಟುಗಳು ಆಗಮಿಸಿದ್ದರು.


ಮಹಾರಾಷ್ಟ್ರದ ರಾಮ್, ಹರಿಯಾಣದ ಬಂಟಿ, ತೇಜು ಮತ್ತಿತರರು ಆಗಮಿಸಿದ್ದರು.
ಕುಸ್ತಿ ಪಂದ್ಯಾವಳಿಯಲ್ಲಿ ನುರಿತ ತೀರ್ಪುಗಾರರು ಭಾಗವಹಿಸಿದ್ದರು.

ಕುಸ್ತಿಪಟುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಸಮಿತಿ ವತಿಯಿಂದ ಮಾಡಲಾಗಿತ್ತು. ಜಾತ್ರೆಯ ಕುಸ್ತಿ ಸಮಿತಿಯು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿತ್ತು. 3 ದಿನಗಳ ಕಾಲ ನಡೆದು ಕುಸ್ತಿ ಪಂದ್ಯಗಳನ್ನು ಪ್ರತಿ ದಿನವು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ವೀಕ್ಷಿಸಿದರು.


ಕುಸ್ತಿ ಪಂದ್ಯಗಳಲ್ಲಿ ಗೆದ್ದ ಕುಸ್ತಿಪಟುಗಳಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿ ವಿಶೇಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ನೇತೃತ್ವದಲ್ಲಿ ಕುಸ್ತಿ ಸಂಚಾಲಕರಾಗಿ ಎಸ್.ಅಶೋಕ್, ಸಹಸಂಚಾಲಕರಾಗಿ ಎಂ.ಎಸ್. ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ ಕಾರ್ಯ ನಿರ್ವಹಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.