Saturday, May 16, 2026
Saturday, May 16, 2026

ಜನಮೆಚ್ಚುಗೆ ಪಡೆದ ಸಾಗರ ಜಾತ್ರೆ ಕುಸ್ತಿ ಪಂದ್ಯಾವಳಿ

Date:

ಸಾಗರ: 3 ದಿನಗಳ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯು ಸಾವಿರಾರು ಜನರ ಮೆಚ್ಚುಗೆ ಗಳಿಸಿತು.

ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಜಾತ್ರಾ ಸಮಿತಿ ವತಿಯಿಂದ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಭಾನುವಾರ ಮುಕ್ತಾಯವಾಯಿತು.


ಭಾನುವಾರ ಕುಸ್ತಿ ಪಂದ್ಯಾವಳಿಯ ಕೊನೆಯ ದಿನದ ಹಿನ್ನೆಲೆಯಲ್ಲಿ ಹಾಗೂ ರಜಾ ದಿನ ಆಗಿದ್ದರಿಂದ ಸಾವಿರಾರು ಪ್ರೇಕ್ಷಕರು ಆಗಮಿಸಿ ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು.

ರೋಚಕ ಹಣಾಹಣಿಯಿಂದ ಕೂಡಿರುತ್ತಿದ್ದ ಪಂದ್ಯದ ವೇಳೆ ಜನರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.


ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ ಹಾಗೂ ಬೇರೆ ರಾಜ್ಯಗಳ ಕುಸ್ತಿಪಟುಗಳು ಅತ್ತ್ಯುತ್ತಮ ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡರು. ದಾವಣಗೆರೆ, ಶಿಕಾರಿಪುರ, ಭದ್ರಾವತಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಯ ತಾಲೂಕುಗಳಿಂದ ಕುಸ್ತಿಪಟುಗಳು ಆಗಮಿಸಿ ಸ್ಪರ್ಧಿಸಿದ್ದರು.


ಕುಸ್ತಿ ಪಂದ್ಯಾವಳಿ 3ನೇ ದಿನದ ಪಂದ್ಯಗಳಲ್ಲಿ ಘಟಾನುಘಟಿ ಕುಸ್ತಿಪಟುಗಳ ಪಂದ್ಯಗಳು ನಡೆದವು. ರಾಜ್ಯ ಹಾಗೂ ಬೇರೆ ರಾಜ್ಯಗಳ ಕುಸ್ತಿಪಟುಗಳ ನಡುವಿನ ಪಂದ್ಯದಲ್ಲಿ ಸ್ಥಳೀಯ ಕುಸ್ತಿಪಟುಗಳು ವಿಜೇತರಾದ ಸಂದರ್ಭದಲ್ಲಿ ಪ್ರೇಕ್ಷಕರು ಸಂಭ್ರಮಿಸಿದರು.


ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಗಳಲ್ಲಿ ಗಮನ ಸೆಳೆದಿದ್ದ ಕುಸ್ತಿಪಟುಗಳು ಆಗಮಿಸಿದ್ದರು.


ಮಹಾರಾಷ್ಟ್ರದ ರಾಮ್, ಹರಿಯಾಣದ ಬಂಟಿ, ತೇಜು ಮತ್ತಿತರರು ಆಗಮಿಸಿದ್ದರು.
ಕುಸ್ತಿ ಪಂದ್ಯಾವಳಿಯಲ್ಲಿ ನುರಿತ ತೀರ್ಪುಗಾರರು ಭಾಗವಹಿಸಿದ್ದರು.

ಕುಸ್ತಿಪಟುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಸಮಿತಿ ವತಿಯಿಂದ ಮಾಡಲಾಗಿತ್ತು. ಜಾತ್ರೆಯ ಕುಸ್ತಿ ಸಮಿತಿಯು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿತ್ತು. 3 ದಿನಗಳ ಕಾಲ ನಡೆದು ಕುಸ್ತಿ ಪಂದ್ಯಗಳನ್ನು ಪ್ರತಿ ದಿನವು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ವೀಕ್ಷಿಸಿದರು.


ಕುಸ್ತಿ ಪಂದ್ಯಗಳಲ್ಲಿ ಗೆದ್ದ ಕುಸ್ತಿಪಟುಗಳಿಗೆ ಬೆಳ್ಳಿ ಪದಕ, ಬೆಳ್ಳಿ ಬಳೆ, ಬೆಳ್ಳಿಯ ಗದೆ ಸೇರಿ ವಿಶೇಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ಶ್ರೀ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ನೇತೃತ್ವದಲ್ಲಿ ಕುಸ್ತಿ ಸಂಚಾಲಕರಾಗಿ ಎಸ್.ಅಶೋಕ್, ಸಹಸಂಚಾಲಕರಾಗಿ ಎಂ.ಎಸ್. ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ ಕಾರ್ಯ ನಿರ್ವಹಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga Postal Department ಅಂಚೆ ಇಲಾಖೆ ಜೀವವಿಮಾ ಏಜೆಂಟ್ ಆಗ ಬಯಸುವಿರ? ಈ ಮಾಹಿತಿ ನಿಮಗಾಗಿ

Shimoga Postal Department ಶಿವಮೊಗ್ಗ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ...

Karnataka Forest Department ವಾಹನ ಸಂಚಾರದ ಹೆಚ್ಚಳ: ವನ್ಯಜೀವಿಗಳ ಮುಕ್ತ ಓಡಾಟಕ್ಕೆ ಅಡ್ಡಿಯಾಗಿ ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿದೆ- ಕುಮಾರ್ ಪುಷ್ಕರ್

Karnataka Forest Department ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾನವ–ವನ್ಯಜೀವಿ...