ಭದ್ರಾವತಿಯ ಸಂಸ್ಕೃತಿ ಸೌರಭ ಸಂಸ್ಥೆ ಯ ಆಶ್ರಯದಲ್ಲಿ
ಅವಧೂತರು. ಒಂದು ಅವಲೋಕನ
ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಭದ್ರಾವತಿಯ
ಶ್ರೀದತ್ತ ಮಂದಿರದಲ್ಲಿ ಏರ್ಪಡಿಸಲಾಗಿತ್ತು.
ಚಿಂತನ ಶೀಲ ಸಾಹಿತಿ
ಶ್ರೀ ಕಣಜನಹಳ್ಳಿ ನಾಗರಾಜ್ ಅವರು
ಉಪನ್ಯಾಸಕಾರರಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ನಾಗರಾಜ್ ಅವರು ಕೆಲವು ಅವಧೂತರಗಳೊಂದಿಗಿನ ತಮ್ಮ ಸಖ್ಯದ ಅನುಭವ ನೆನಪಿಸಿಕೊಂಡರು.
ಅವಧೂತರು ಸಾಮಾನ್ಯರಂತೆ ಬಾಳಿದವರು. ಆಧ್ಯಾತ್ಮದ ಅನುಭವಗಳನ್ನ ಸಾಮಾನ್ಯ ಮತ್ತು ಸರಳವಾಗಿ ಸಮಾಜಕ್ಕೆ ತಿಳಿಸಿದರು ಎಂದು ಹೇಳಿದರು.
ಸೌರಭ ಸಂಸ್ಥೆಯ ಅಧ್ಯಕ್ಷ ಎಚ್ ಎನ್ ಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶೇಷ ಗಿರಿ ಸ್ವಾಗತ ಬಯಸಿದರು.
ಎಂ.ಎನ್.ರವಿ
ಉಪನ್ಯಾಸಕಾರರ ಪರಿಚಯಮಾಡಿ ಕೊಟ್ಟರು.
ಪುಷ್ಪಾ ಸುಬ್ರಹ್ಮಣ್ಯ ಮತ್ತು ಸಂಗಡಿಗರು ಗುರುಗೀತೆ ಹಾಡಿದರು.
ಆನಂದ ಕೂದುವಳ್ಳಿ ನಿರೂಪಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಶಿವಮೊಗ್ಗ: ನಟಿ ಪ್ರೇಮಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ಪೂರೈಸಿ ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವ ಪ್ರಯುಕ್ತ ಸಮನ್ವಯ ಟ್ರಸ್ಟ್ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಫೆಬ್ರವರಿ 19ರ ಸಂಜೆ 6ಕ್ಕೆ “ಶ್ರೀಗಂಧದ ಗೊಂಬೆಗೆ ಬಿರುದು ಸನ್ಮಾನ” ಕಾರ್ಯಕ್ರಮ ಆಯೋಜಿಸಲಾಗಿದೆ.
ನಾಯಕ ನಟರು 25 ವರ್ಷ ಪೂರೈಸಿ ಚಲನಚಿತ್ರರಂಗದಲ್ಲಿ ಯಶಸ್ವಿಯಾಗುವುದು ಸಾಮಾನ್ಯ. ಆದರೆ ನಾಯಕ ನಟಿಯರು 25 ವರ್ಷ ಪೂರ್ಣಗೊಳಿಸುವುದು ಕಷ್ಟದ ಮಾತು. ನಟಿ ಪ್ರೇಮಾ ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿ ಪ್ರಸ್ತುತ ಕೂಡ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದೆ. ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸವ್ಯಸಾಚಿ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರೇಮಾ, ಓಂ ಚಿತ್ರದ ಮೂಲಕ ಪ್ರಖ್ಯಾತರಾದರು.
ಶಿವರಾಜ್‌ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರವಿಚಂದ್ರನ್, ಸಾಯಿಕುಮಾರ್, ರಮೇಶ್ ಜತೆಯಲ್ಲಿ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.
ಅತ್ಯಂತ ಅಪರೂಪ ಮತ್ತು ವಿಶೇಷವಾದ ಕಾರ್ಯಕ್ರಮ ಶಿವಮೊಗ್ಗದಲ್ಲಿ ಆಯೋಜನೆ ಆಗುತ್ತಿದೆ. 25 ವರ್ಷ ಪೂರೈಸಿ ಸಕ್ರಿಯರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಪ್ರೇಮಾ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಿದೆ. ಸಿನಿಮಾ ರಂಗದ ಹಿರಿಯ ನಿರ್ದೇಶಕರು, ನಟರು, ಕಲಾವಿದರು, ಗಣ್ಯರು ಪಾಲ್ಗೊಳ್ಳುವರು. ಕುವೆಂಪು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ಉಚಿತ ಪಾಸ್‌ಗಳನ್ನು ಪಡೆದುಕೊಳ್ಳುವಂತೆ ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ಪಾಸ್ ಗಳಿಗೆ ಸಂಪರ್ಕಿಸಿ
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಫೆಬ್ರವರಿ 19ರ ಸಂಜೆ 6ಕ್ಕೆ ಆಯೋಜಿಸಿರುವ “ಶ್ರೀಗಂಧದ ಗೊಂಬೆಗೆ ಬಿರುದು ಸನ್ಮಾನ” ಕಾರ್ಯಕ್ರಮಕ್ಕೆ ಪಾಸ್ ಕಡ್ಡಾಯವಾಗಿದೆ. ಉಚಿತ ಪಾಸ್‌ಗಳನ್ನು ಪಡೆಯಲು ಇಚ್ಚಿಸುವ ಆಸಕ್ತರು ಮೊಬೈಲ್ ಸಂಖ್ಯೆ 9380233123 ಸಂಪರ್ಕಿಸಬಹುದಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಪ್ರತಿ ನಿತ್ಯವೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ.
ಭಾನುವಾರವೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ದೇವರ ದರ್ಶನ ಪಡೆದರು.
ಬಿಸಿಲಿನ ದಗೆ ಹೆಚ್ಚಿದ್ದರೂ ಉದ್ದದ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಭಾನುವಾರ ದಿನ ಸಾರ್ವಜನಿಕರು ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದರು.
ದೇವಿಗೆ ಕುಂಕುಮಾರ್ಚನೆ, ತುಲಾಭಾರ ಸೇರಿದಂತೆ ಅನೇಕ ಪೂಜೆ ಸಲ್ಲಿಸಿದರು. ಭಾನುವಾರ ರಜಾದಿನ ಆಗಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಎಲ್ಲೆಡೆ ವ್ಯಾಪಾರ ಅಧಿಕವಾಗಿತ್ತು. ಜಾತ್ರೆಯಲ್ಲಿ ಮಳಿಗೆಗಳು ಹಾಕಿದ್ದ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ಸಾಗಿತ್ತು. ಮಕ್ಕಳ ಆಟಿಕೆ, ವೈವಿಧ್ಯಮಯ ಡ್ರೆಸ್, ಬಳೆ, ಅಲಂಕಾರಿಕಾ ವಸ್ತುಗಳ ಖರೀದಿಯಲ್ಲಿ ಜನರುನಿರತರಾಗಿದ್ದರು.
ಜಾತ್ರೆ ಹಿನ್ನೆಲೆಯಲ್ಲಿ ಜಾತ್ರೆ ರಸ್ತೆ, ನಗರಸಭೆ ಸುತ್ತಮುತ್ತಲಿನ ಭಾಗ, ಕೋರ್ಟ್ ರಸ್ತೆ, ಅಮ್ಯೂಸ್‌ಮೆಂಟ್ ಪಾರ್ಕ್ ಭಾಗದಲ್ಲಿ ಸಾಕಷ್ಟು ಆಹಾರ ಮಳಿಗೆಗಳನ್ನು ಹಾಕಲಾಗಿದೆ. ಆಹಾರ ಪ್ರಿಯರು ತಮಗಿಷ್ಟದ ಸ್ಟಾಲ್‌ಗಳಲ್ಲಿ ಗೋಬಿ, ಮಸಾಲೆಪುರಿ, ಆಲೂ ಟ್ವಿಸ್ಟರ್, ಸ್ವೀಟ್ ಕಾರ್ನ್ ಸೇರಿಂದತೆ ವಿವಿಧ ಆಹಾರದ ರುಚಿ ಸವಿದರು.
ಸಾಂಸ್ಕೃತಿಕ ಸಂಭ್ರಮ: ಶ್ರೀ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಫೆ. 8 ರಿಂದಲೂ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಜಾತ್ರೆಯ ಸಾಂಸ್ಕೃತಿಕ ಸಮಿತಿಯು ನಾಡಿನ ಹೆಸರಾಂತ ಕಲಾವಿದರು ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ. ಸಾವಿರಾರು ಕಲಾಸಕ್ತರು ದಿನನಿತ್ಯ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ.
ಸುಗಮ ಸಂಗೀತ, ಭಾವಸಂಗೀತ, ರಸಮಂಜರಿ, ಭರತನಾಟ್ಯ, ಸ್ಯಾಕ್ಸೋಫೋನ್ ವಾದನ, ಯೋಗ ಪ್ರದರ್ಶನ, ಡೊಳ್ಳು ಪ್ರದರ್ಶನ, ಮಲ್ಲಗಂಬ ಪ್ರದರ್ಶನ, ಸೀತಾರ್ ವಾದನ, ವಿವಿಧ ವಾದ್ಯಗಳ ಫ್ಯೂಸನ್ ಕಾರ್ಯಕ್ರಮ, ಕೋಲಾಟ, ನೃತ್ಯ ಕಾರ್ಯಕ್ರಮ ಹೀಗೆ ಹತ್ತು ಅನೇಕ ಕಾರ್ಯಕ್ರಮಗಳನ್ನು ಜಾತ್ರಾ ಸಮಿತಿ ಆಯೋಜಿಸಿದೆ.
ಸಾಗರದ ನಗರಸಭೆಯ ಆವರಣದಲ್ಲಿ ನಿರ್ಮಿಸಿರುವ ಮಾರಿಕಾಂಬಾ ಕಲಾವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಸಾಂಸ್ಕೃತಿಕ ಪ್ರದರ್ಶನಗಳು ಕಲಾವಿದರಿಂದ ಪ್ರದರ್ಶನ ಆಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಂಸ್ಕೃತಿಕ ಪ್ರದರ್ಶನ ನೇರವಾಗಿ ಪ್ರಸಾರಗೊಳ್ಳುತ್ತಿದೆ.
ಅನ್ನದಾನಕ್ಕೆ ಕಾರ್ಮಿಕರ ದೇಣಿಗೆ
ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ದಿನ ನಿತ್ಯ ಅನ್ನದಾಸೋಹ ನಡೆಯುತ್ತಿದೆ. ದಾನಿಗಳ ಆರ್ಥಿಕ ಸಹಕಾರ ಹಾಗೂ ಜಾತ್ರಾ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ಕಾರ್ಯ ನಡೆಯುತ್ತಿದೆ.
ಭಾನುವಾರ ಕೂಡ ಸಾವಿರಾರು ಜನರು ದೇವರ ದರ್ಶನ ಪಡೆದರು. ವೀರಶೈವ ಕಲ್ಯಾಣ ಮಂದಿರದಲ್ಲಿ ಸಾವಿರಾರು ಜನರು ಪ್ರಸಾದ ಸೇವಿಸಿದರು.
ಭಾನುವಾರದ ಅನ್ನ ದಾಸೋಹಕ್ಕೆ ಖಾಸಗಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ 1.5ಲಕ್ಷ ರೂ.ಗೂ ಅಧಿಕ ದೇಣಿಗೆ ನೀಡಲಾಯಿತು. ಪ್ರಮುಖರಾದ ಆರ್.ಶ್ರೀನಿವಾಸ್, ರಾಬರ್ಟ್ ಗೂಮ್ಸ್, ರಾಜು ಎಸ್.ಎನ್. ನಗರ, ವಿ.ವೆಂಕಟೇಶ್, ಗಣೇಶ್.ಟಿ.ಎಂ., ಮುರುಗನ್ ಎಪಿಎಂ ಮತ್ತಿತರರು ದೇಣಿಗೆ ಸಹಕಾರ ನೀಡಿದ್ದಾರೆ.
ಕಲಾಸಿರಿ ಕಾರ್ಯಕ್ರಮ ಫೆ. 13
ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರಸಭೆ ಆವರಣದ ಮಾರಿಕಾಂಬಾ ಕಲಾವೇದಿಕೆಯಲ್ಲಿ ಫೆ. 13ರ ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಫೆ. 13ರ ಸಂಜೆ 5.30ರಿಂದ 6 ರವರೆಗೆ ಸಾಗರ ಕಲಾಸಿಂಚನ ಸಾಂಸ್ಕೃತಿಕ ವೇದಿಕೆಯಿಂದ ಜಾನಪದ ಸಮೂಹ ಗಾಯನ, ಸಂಜೆ 6ರಿಂದ 6.30 ರವರೆಗೆಸಾಗರ ಕರಾಟೆ ಇನ್‌ಸ್ಟಿಟ್ಯೂಟ್ ವತಿಯಿಂದ ಕರಾಟೆ ಪ್ರದರ್ಶನ, 6.30ರಿಂದ 7.15 ರವರೆಗೆ ಬೆಂಗಳೂರಿನ ಸ್ನೇಹ ನಾರಾಯಣ ಸಾಗರ ಅವರಿಂದ ಭರತನಾಟ್ಯ ಪ್ರದರ್ಶನ, ರಾತ್ರಿ 7.15 ರಿಂದ 8.15 ರವರೆಗೆ ಕಾರ್ಕಳ ಕೀರ್ತನಾ ಸುಧೀಂದ್ರ ಅವರಿಂದ ಸ್ಯಾಕ್ಸೋಫೋನ್ ವಾದನ, 8.15 ರಿಂದ 8.45 ರವರೆಗೆ ಬೆಂಗಳೂರು ಪ್ರಸಿದ್ಧ ಜನಪದ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು ಅವರಿಂದ ಜನಪದ ಗೀತೆಗಳು, ನಂತರ ಸುಮಂತ ವಸಿಷ್ಠ ಮೈಸೂರು, ಸಂದೇಶ್, ದಿವ್ಯ ರಾಮಚಂದ್ರ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಚಿಕ್ಕಮಗಳೂರು : ಜಿಲ್ಲಾ ಕಟ್ಟಡ ಕಾರ್ಮಿಕ ಇಲಾಖೆ ಹಾಗೂ ಮಲ್ನಾಡ್ ಫೈರ್ಸ್ ಸಂಘ ಸಹಯೋಗದೊಂದಿಗೆ ವಿಜಯಪುರದ ಹೋಲಿ ಫ್ಯಾಮಿಲಿ ಚರ್ಚ್ ನಲ್ಲಿ ಭಾನುವಾರ ಕಾರ್ಮಿಕ ಕುಟುಂಬ ದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಚರ್ಚ್ ಧರ್ಮಗುರು ಫ್ರಾನ್ಸಿಸ್ ರಸ್ಕಿನ ಪ್ರತಿಯೊಬ್ಬರ ಬದುಕಿಗೆ ಆರೋಗ್ಯ ಅತಿಮುಖ್ಯವಾಗಿದೆ. ಮನುಷ್ಯ ಎಷ್ಟೇ ಹಣ ಕೂಡಿಟ್ಟರೂ ಆರೋಗ್ಯದ ಮುಂದೆ ಉಪಯೋಗ ವಾಗುವುದಿಲ್ಲ. ಹಾಗಾಗಿ ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ನಡೆಸಿ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.
ಜೀವನದಲ್ಲಿ ಏನೇ ವ್ಯವಹಾರ ಮಾಡಿ ಕೊಟ್ಟು ತೆಗೆದುಕೊಳ್ಳಬಹುದು. ಆದರೆ ಆರೋಗ್ಯ ವಿಷಯದಲ್ಲಿ ಕೊಡಲು ಸಾಧ್ಯವಾಗದಿದ್ದರೂ ಆರೋಗ್ಯ ಕಾಪಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕಾರ್ಮಿಕರು ಹೆಚ್ಚು ಗಮನ ಹರಿಸಬೇಕು. ಉತ್ತಮ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ಸದೃಢರಾಗಬೇಕು ಎಂದರು.
ನಗರಸಭಾ ನಾಮಿನಿ ಸದಸ್ಯ ರಾಬರ್ಟ್ ಮಾತನಾಡಿ ವಾರ್ಡಿನಲ್ಲಿ ನೂರಾರು ಮಂದಿ ಕಾರ್ಮಿಕ ಕುಟುಂಬ ದವರು ವಾಸಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಮೊಬೈಲ್ ಕ್ಲೀನಿಕ್‌ನ್ನು ಪ್ರಾರಂಭಿಸಿ ಕಾರ್ಮಿಕರಿರುವ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಮಲ್ನಾಡ್ ಪೈಂಟರ್ ಸಂಘದ ಖಜಾಂಚಿ ಹ್ಯಾರಿ ಜೋಸೆಫ್ ಮಾತನಾಡಿ ಶಿಬಿರದಲ್ಲಿ ರಕ್ತ ಪರೀಕ್ಷೆ, ಕಿವಿ ಹಾಗೂ ಕಣ್ಣು ತಪಾಸಣೆಯನ್ನು ಕಾರ್ಮಿಕರಿಗೆ ನಡೆಸಲಾಗುತ್ತಿದ್ದು ಅತಿಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ಹಾಗೂ ಕುಟುಂಬದವರು ಭಾಗಿಯಾಗಿ ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಕಾರ್ಯಕಾರಿ ಸದಸ್ಯ ಸಗಯ್‌ದಾಸ್, ಡಾ. ಮಿಥುನ್, ಟೀಂ ಲೀಡರ್ ಅರ್ಜುನ್, ಸಿಬ್ಬಂದಿಗಳಾದ ಜ್ಯೋತಿ, ಯಶವಂತ್, ಸ್ಥಳೀಯರಾದ ಆನಂದ್, ಸಿರಿಲ್, ಅನಿಲ್, ಯೇಸುದಾಸ್, ನಯಾಜ್, ರಘು, ಡೆನ್ನಿ ಮತ್ತಿತರರು ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
99ನೇ ವರ್ಷದ ಸವಿ ನೆನಪಿಗಾಗಿ ಶಿವಮೊಗ್ಗ ನಗರದ ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿ, ಜಯನಗರದಲ್ಲಿ ಕಚೇರಿಯ ಮೊದಲ ಅಂತಸ್ತಿನಲ್ಲಿ ನೂತನ ಸಭಾಂಗಣದ ಉದ್ಘಾಟನಾ ಸಮಾರಂಭ ನಡೆಯಿತು.
ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀ ವಾಸುದೇವ್ ಜಿ ರವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಎಸ್ ಕೆ ಮರಿಯಪ್ಪನವರು ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಂ ಆರ್ ಪ್ರಕಾಶ್ ಕೋಶಾಧ್ಯಕ್ಷರಾದ ಬಿ ಮಲ್ಲಿಕಾರ್ಜುನ್ ನಿರ್ದೇಶಕರಾದ ಕೆ ರಂಗನಾಥ್, ಎಂ ಉಮಾಶಂಕರ ಉಪಾಧ್ಯ, ಸಿ ಹೊನ್ನಪ್ಪ, ಎಸ್ ಪಿ ಶೇಷಾದ್ರಿ, ಎನ್ ಉಮಾಪತಿ, ಟಿ ವಿ ರಂಜಿತ್, ಕೆ ಜಿ ರಾಘವೇಂದ್ರ ಹಾಗೂ ಶ್ರೀಮತಿ ಎಂ ನಿರ್ಮಲಾ ಕಾಶಿ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಖಜಾಂಚಿಗಳಾದ ಶ್ರೀಮತಿ ರುಕ್ಮಿಣಿ ವೇದವ್ಯಾಸ ಶಿವಮೊಗ್ಗ ಹೌಸಿಂಗ್ ಕೋಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಆರ್ ಪ್ರಭಾಕರ್ ಸೊಸೈಟಿಯ ಸಿಬ್ಬಂದಿಗಳು ಸಿಟಿಕೋ ಆಪರೇಟಿವ್ ಬ್ಯಾಂಕಿನ ಕಾರ್ಯನಿರ್ವಾಹಣಾಧಿಕಾರಿ ಮನೋಜ್ ಕುಮಾರ್ ರವರು ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಹಿತೈಷಿಗಳು ಆಗಮಿಸಿದ್ದರು.
ಸೋಮನಾಥ ದೇವಾಲಯವು ಗುಜರಾತಿನ ಪಶ್ಚಿಮ ಕರಾವಳಿಯ ಸೌರಾಷ್ಟ್ರದ ಸಮೀಪ ವೆರಾವಲ್ ನಲ್ಲಿದೆ .
ಪೌರಾಣಿಕ ಹಿನ್ನೆಲೆಯಲ್ಲಿ ಸೋಮನಾಥಕ್ಕೆ ಸೂಕ್ತ ಮಾಹಿತಿ ಇದೆ. ದಕ್ಷ ಪ್ರಜಾಪತಿಯು 27 ಕನ್ಯೆಯರನ್ನ ಚಂದ್ರನಿಗೆ ಮದುವೆ ಮಾಡಿಕೊಟ್ಟಿರುತ್ತಾನೆ. ಕ್ರಮೇಣ ಚಂದ್ರ ಕೇವಲ ಕರ‍್ತಿಕೆ ಮತ್ತು ರೋಹಿಣಿಯರೊಂದಿಗೆ ತನ್ನ ಸಮಯವನ್ನ ಕಳೆಯಲು ಆರಂಭಿಸುತ್ತಾನೆ.
ಇದು ಮಿಕ್ಕವರಿಗೆ ಸಹಿಸಲಾಗುವುದಿಲ್ಲ. ತಂದೆಯ ಬಳಿ ದೂರುತ್ತಾರೆ.ಮಾವ ದಕ್ಷ ಅಳಿಯ ಚಂದ್ರನಿಗೆ ತನ್ನ ಎಲ್ಲ ಮಕ್ಕಳನ್ನೂ ಸಮನಾಗಿ ಕಾಣು ಎಂದು ತಿಳುವಳಿಕೆ ಹೇಳುತ್ತಾನೆ. ಆದರೆ, ಚಂದ್ರ ಮಾವನ ಮಾತಿನಂತೆ ನಡೆಯುವುದಿಲ್ಲ. ಮತ್ತೆ ಮಕ್ಕಳೆಲ್ಲ ತಂದೆಯ ಬಳಿ ಚಂದ್ರನ ನಡವಳಿಕೆ ಬಗ್ಗೆ ಆಕ್ಷೇಪಿಸುತ್ತಾರೆ.ಕುಪಿತಗೊಂಡ ದಕ್ಷ ಚಂದ್ರನಿಗೆ ಕ್ಷಯಿಸು ಎಂದು ಶಾಪ ನೀಡುತ್ತಾನೆ. ಭಯಗೊಂಡ ಚಂದ್ರ ಬ್ರಹ್ಮದೇವನನ್ನ ಪ್ರರ‍್ಥಿಸುತ್ತಾನೆ.
ಚಂದ್ರ ದಿನೇದಿನೆ ಕಂದಿಹೋಗುವುದನ್ನ ದೇವತೆಗಳು ನೋಡುತ್ತಾರೆ. ಅವನಿಲ್ಲದೇ ಜಗತ್ತು ಇರದು ಎಂದು ಬ್ರಹ್ಮನಲ್ಲಿ ಪರಿಪರಿ ಬಿನ್ನವಿಸುತ್ತಾರೆ. ಆಗ ಬ್ರಹ್ಮನು ಪರಿಹಾರವನ್ನ ಸೂಚಿಸುವನು. ಸರಸ್ವತಿ ನದಿತು ಸಮುದ್ರವನ್ನ ಸೇರುವ ಸಂಗಮಸ್ಥಾನದಲ್ಲಿ ಮೃತ್ಯುಂಜಯ
ಮಂತ್ರದಿಂದ ಶಿವನನ್ನು ಧ್ಯಾನಿಸಿದರೆ ಶಾಪ ವಿಮೋಚನೆ ಎಂದು ಹೇಳುತ್ತಾನೆ.
ಅದರಂತೆ, ಚಂದ್ರನು ಅಲ್ಲಿಗೆ ಹೋಗಿ ಭಕ್ತಿ ಶ್ರದ್ಧೆಗಳಿಂದ ಹಠಕೇಶ್ವರ ಎಂಬ ಲಿಂಗವನ್ನು ಸ್ಥಾಪಸುತ್ತಾನೆ.ಅಷ್ಟೇ, ಅಲ್ಲದೆ ಒಂಟಿಕಾಲಿನಲ್ಲಿ ಮೃತ್ಯುಂಜಯ ಜಪಮಾಡುತ್ತಾನೆ.
ಹೀಗೆ ಕಠಿಣವಾಗಿ ನಿಂತು ಹತ್ತುಕೋಟಿಯಷ್ಟು ಜಪ ಮಾಡುತ್ತಾನೆ.ತಕ್ಷಣ ಶಿವನು ಪ್ರತ್ಯಕ್ಷವಾಗುತ್ತಾನೆ.
ಆಗ ಅವನಿಗೆ ಹದಿನೈದು ದಿನ ಕ್ಷಯ ಮತ್ತೆ ಹದಿನೈದು ದಿನ ವೃದ್ಧಿಯನ್ನ ದಯಪಾಲಿಸುವನು. ಪತ್ನಿಯರ ಸಂಗಡ ಸಮಾನ ಪ್ರೀತಿಯನ್ನ ತೋರಿಸೆಂದು ಬುದ್ಧಿವಾದ ಹೇಳುವನು. ಹೀಗಾಗಿ ಸೋಮನಿಗೆ ಮರುಜೀವ ನೀಡಿದ ಶಿವನ
ಲಿಂಗಕ್ಕೆ ಮತ್ತು ಸ್ಥಳಕ್ಕೆ ಸೋಮನಾಥ ಎಂಬ ಹೆಸರು ಬಂದಿದೆ.
ಕ್ರಿ.ಶ. 800 ರಲ್ಲಿ ಇಲ್ಲಿನ ಆಲಯವನ್ನು ಚಾಲುಕ್ಯರು ಮೂರನೇ ಬಾರಿಗೆ ಕಟ್ಟಿದರಂತೆ. ಆಲಯದ ಸುತ್ತ ಚಿನ್ನದ ಸರಪಳಿ,ದೀಪಗಳು,ಚಿನ್ನ ಬೆಳ್ಳಿಯಿಂದ ನರ‍್ಮಿಸಿದ ಶಿಲಾಬಾಲಿಕೆ ಇತ್ತಂತೆ. ಗರ್ಭಗುಡಿಯ ಮುಂದೆ ಚಿನ್ನದ ಸರಪಳಿಯ ಗಂಟೆ ,ನವರತ್ನದ ಆಭರಣಗಳಿಂದ ಪ್ರಜ್ವಲಿಸುತ್ತಿತ್ತಂತೆ. ಘಜ್ನ ಮಹ್ಮದನ
ದಾಳಿಯಿಂದ ಆಲಯ ಧ್ವಂಸವಾಯಿತು.
ಚಿನ್ನಬೆಳ್ಳಿಯನ್ನೆಲ್ಲ ದೋಚಿಕೊಂಡು ಹೋದ. ನಂತರ 50 ವರ್ಷಗಳ ನಂತರ ಕುಮಾರ ಬಾಲ ಎಂಬ ರಾಜ
ಮತ್ತದೇ ಚಿನ್ನಬೆಳ್ಳಿ ವೈಭದಿಂದ ಅಭಿವೃದ್ಧಿಗೊಳಿಸಿದ.ಅವನ ಕಾಲದಲ್ಲಿ ವಿದ್ಯಾಕೇಂದ್ರವಾಗಿ ಶೋಭಿಸಿತು.
ಪುನಃ ಅಲ್ಲಾವುದ್ದೀನ್ ಖಿಲ್ಜಿಯ ದಾಳಿಗೆ ತುತ್ತಾಯಿತು.ಅಲ್ಲಿಂದ ಮುನ್ನೂರು ರ‍್ಷಗಳು ಪೂಜೆಯೇ ಇರಲಿಲ್ಲ.
ಇಂದೂರಿನ ರಾಣಿ ಅಹಲ್ಯಾಬಾಯಿ ಹೊಸದಾಗಿ ಆಲಯ ನಿರ್ಮಿಸಿದರು.
ಶಿವಲಿಂಗವನ್ನ ಪ್ರತಿಷ್ಠಾಪಿಸಿದರು.
ಅತ್ಯಂತ ಭವ್ಯವಾದ ದೇಗುಲವೀಗ ನರ‍್ಮಾಣವಾಗಿದೆ. ಅದರಲ್ಲಿ ಪ್ರಾಂಗಣ,ಸಭಾಮಂಟಪ,ರ‍್ಭಗುಡಿಪ್ರಾಕಾರಗಳಿವೆ. ಸ್ರಂಭಗಳಲ್ಲಿ ಭಗವದ್ಗೀತೆ ಶ್ಲೋಕಗಳನ್ನ ಕೆತ್ತಲಾಗಿದೆ.
ಸೋಮನಾಥದಲ್ಲಿ ಐದು ಗಣೇಶ ದೇವಾಲಯ,ನೂರಮೂವತೈದು ಸರ‍್ಯದೇವಾಲಯ,ಇಪ್ಪತೈದು ದೇವಿ ಆಲಯ,ಐದು ವಿಷ್ಣು,ಹದಿನಾರು ಸರ‍್ಯ,ಒಂದು ಚಂದ್ರನ ದೇವಾಲಯಗಳಿವೆ.ಸನಿಹ ತ್ರಿವೇಣಿ ಸಂಗಮದಲ್ಲಿ ಹತ್ತೊಂಭತ್ತು ಸ್ನಾನಘಟ್ಟಗಳಿವೆ.
ಆಧುನಿಕವಾಗಿ ಸರ್ದಾರ್ ವಲ್ಲಭ ಭಾಯಿ ಪಟೇಲರಿಂದ ಹಿಡಿದು ಇಂದಿನ ಗಣ್ಯಾತಿಗಣ್ಯರ ವರೆಗೆ ತಮ್ಮದೇ ಕೊಡುಗೆಯಿಂದ ಸೋಮನಾಥದ ಪ್ರವಾಸಿ ಆಕರ್ಷಣೆಯನ್ನ ಇಮ್ಮಡಿಸಿದ್ದಾರೆ.
ಜೀವನದಲ್ಲಿ ಒಮ್ಮೆ ದರ್ಶಿಸಬೇಕಾದ ದೇವಾಲಯವಿದಾಗಿದೆ .
ಶ್ರೀಶಂಕರಾಚರ‍್ಯರು ರಚಿಸಿದ ಶ್ಲೋಕ
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಚಿಕ್ಕಮಗಳೂರು: ಕಾಂಗ್ರೆಸ್‌ನ ಎಲ್ಲಾ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದು ವುದರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಕ್ಷೇತ್ರದಲ್ಲಿ ಭ್ರಷ್ಟರಹಿತ ಆಡಳಿತ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಸಂಚಾಲಕ ಸಿ.ಎನ್.ಅಕ್ಮಲ್ ಹೇಳಿದರು.
ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಿಸಾನ್ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿ ಸಲಾಗಿದ್ದ ಬ್ಲಾಕ್ ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕಾತಿ ಹಾಗೂ ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್‌ನಲ್ಲಿ ನಿಷ್ಟಾವಂತ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ವರನ್ನು ಜಿಲ್ಲಾ ಹಾಗೂ ರಾಜ್ಯ ಸಮಿತಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಲ್ಲಿ ಸಿ.ಟಿ.ರವಿಯವಂತಹ ಎಷ್ಟು ಮಂದಿ ಶಾಸಕರನ್ನು ಪರಾಭವಗೊಳಿಸಿ ಜಿಲ್ಲೆ ಹಾಗೂ ರಾಜಾದ್ಯಂತ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಬಹುದು ಎಂದು ಹೇಳಿದರು.
ಪಕ್ಷದಲ್ಲಿ 2 ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿಕೊಂಡು ಬಂದಿದ್ದು ಕೆಲವು ಸಣ್ಣಪುಟ್ಟ ವಿಚಾರ ಗಳಲ್ಲಿ ಸಮಸ್ಯೆಯಾಗಿದೆ. ಎಂತಹ ಸಮಸ್ಯೆಗಳಿದ್ದರೂ ಹಿರಿಯ ಮುಖಂಡರುಗಳು ಪರಸ್ಪರ ಚರ್ಚಿಸಿದರೆ ಸಮಸ್ಯೆ ಬಗೆಹರಿಸಬಹುದು. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಕೈಜೋಡಿಸಿ ಪಕ್ಷ ಚಟುವಟಿಕೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ರಸೂಲ್‌ಖಾನ್ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಹಗಲು-ರಾತ್ರಿ ಎನ್ನದೇ ವೈಯಕ್ತಿಕ ಖರ್ಚಿನಿಂದ ಆಹಾರ ಕಿಟ್, ಅಂಬುಲೆನ್ಸ್ ಸೇವೆ ನೀಡಿ ಸಹಾಯ ಮಾಡಿವರು ಅಕ್ಮಲ್ ಎಂದ ಅವರು ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕಾಂಗ್ರೆಸ್‌ನ್ನು ಬಿಡದೇ ಕಾರ್ಯಚಟುವಟಿಕೆಯಲ್ಲಿ ತೊಡಗಿರುವುದೇ ಇಂದಿನ ಅಭಿನಂದನಾ ಸಮಾರಂಭ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಮಹಮ್ಮದ್ ಮಾತನಾಡಿ ನಗರಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಯಲ್ಲಿ ಕೆಲವೇ ಅಂತರದಲ್ಲಿ ಸೋಲುಭವಿಸಿದೆವು. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆ ರೀತಿಯ ತಪ್ಪುಗಳಾಗದಂತೆ ಸೂಕ್ತ ಹಾಗೂ ಜನಪರ ಕಾಳಜಿ ಹೊಂದಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಗೆಲುವಿಗೆ ಪಕ್ಷವು ಪೂರಕವಾಗಬೇಕು ಎಂದರು.
ಇದೇ ವೇಳೆ ಸಿ.ಎನ್.ಅಕ್ಮಲ್ ಅವರಿಗೆ ಕಿಸಾನ್ ಕಾಂಗ್ರೆಸ್ ಹಾಗೂ ಪಕ್ಷದ ಮುಖಂಡರುಗಳು ಅಭಿನಂದ ನೆ ಸಲ್ಲಿಸಿ ಗೌರವಿಸಿದರು. ನಂತರ 12 ಮಂದಿ ಬ್ಲಾಕ್ ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್, ಜಿಲ್ಲಾ ವಕ್ತಾರ ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಅತೀಕ್ ಖೈಸರ್, ಪ್ರಚಾರ ಸಮಿತಿ ಸಂಚಾಲಕ ಬಿ.ಹೆಚ್.ಹರೀಶ್, ಮುಖಂಡರುಗಳಾದ ತನೋಜ್, ನೂರ್‌ಅಹ್ಮದ್, ನಜೀರ್ ಅಹ್ಮದ್, ಮಂಜು ನಾಥ್, ದೇವರಹಳ್ಳಿ ಉಮೇಶ್, ಧನಂಜಯ್, ದೇವನೂರು ಅಶೋಕ್ ಮತ್ತಿತರರು ಹಾಜರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ರಾಜ್ಯ ವಿಧಾನಸಭಾ ಚುನಾವಣೆ ಸದ್ಯದಲ್ಲಿಯೇ ಘೋಷಣೆಯಾಗಲಿದೆ. ಚುನಾವಣೆಯ ಮೊದಲೇ ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ ಯೋಜನೆಗಳನ್ನ ಕೇಂದ್ರ ಭೂಸಾರಿಗೆ ಇಲಾಖೆ ಅನುಮೋದನೆ ನೀಡಿದೆ.
ಕರ್ನಾಟಕದಲ್ಲಿ ಆರು ಕಡೆ ಹೆದ್ದಾರಿ ಅಭಿವೃದ್ಧಿಗಾಗಿ 3,579 ಕೋಟಿ ರೂಪಾಯಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗತಿ ಯೋಜನೆಯ ಅಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಯ ಮೂಲಕ ಹಾಯ್ದು ಹೋಗುವ ಭಾನಾಪುರ ಗದ್ದನಕೇರಿ ರಾಷ್ಟ್ರೀಯ ಹೆದ್ದಾರಿ 367 ರಲ್ಲಿ ಅನೇಕ ಯೋಜನೆಗಳಿಗೆ ಮಂಜುರಾತಿ ನೀಡಲಾಗಿದೆ. ಈ ಹೆದ್ದಾರಿಯಲ್ಲಿನ ಕುಕನೂರು, ಯಲಬುರ್ಗಾ ಮತ್ತು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣಕ್ಕೆ ಬೈಪಾಸ್ ನಿರ್ಮಿಸಲು 333,96 ಕೋಟಿ ರೂಪಾಯಿ ಯೋಜನೆ ಸಿದ್ಧವಾಗಿದೆ ಎಂದು ಗಡ್ಕರಿ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 357ರಲ್ಲಿ ಎರಡು ಲೇನ್ ರಸ್ತೆಗೆ 172 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ನೀಡಿದೆ. ಇದು ಒಳ್ಳೆಯದು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ 909 ಕೋಟಿ ರೂಪಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275 ಕುಶಾಲನಗರ ಮೈಸೂರು ಹೆದ್ದಾರಿಗೆ ರಸ್ತೆ ಪಕ್ಕದ ಹೆದ್ದಾರಿ ಅಭಿವೃದ್ಧಿ ಮತ್ತು ಮೂಲಭೂತ ಸೌಲಭ್ಯ ಹಾಗೂ ಮೈಸೂರು ಜಿಲ್ಲೆಯ ಗುಡ್ಡೆ ಹೊಸೂರು ಬಳಿ ಬೈಪಾಸ್ ರಸ್ತೆ ನಿರ್ಮಾಣ, ಯಲೇಚನಳ್ಳಿ ರೋಡ್ ಜಂಕ್ಷನ್ ಶ್ರೀರಂಗಪಟ್ಟಣಕ್ಕೆ ಬೈಪಾಸ್ ನಿರ್ಮಾಣಕ್ಕೆ 739. 39 ಕೋಟಿ ರೂಪಾಯಿ ಯೋಜನೆಗೆ ಮಂಜುರಾತಿ ನೀಡಲಾಗಿದೆ.
ರಾಜ್ಯದಲ್ಲಿ ಅನೇಕ ಹೆದ್ದಾರಿಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಚುನಾವಣೆಯ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ರೋಪ್ ವೇಗಗಳ ನಿರ್ಮಾಣದ ಘೋಷಣೆಗಳು ಚುನಾವಣೆ ಎದುರಿಸುವ ತಂತ್ರಗಾರಿಕೆ ಇರಬಹುದು ಎಂದು ಹೇಳಲಾಗುತ್ತಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಶಿವಮೊಗ್ಗ: ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇಉತ್ತಮ ಸಂಸ್ಕಾರ ಹಾಗೂ ಗುಣಗಳನ್ನು ಕಲಿಸಿಕೊಡುವ ಕೆಲಸ ಆಗಬೇಕು. ಸಂಸ್ಕೃತಿ ಪರಂಪರೆಯಅರಿವು ಮೂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯಡಿ ಎಸ್.ಅರುಣ್ ಅವರು ಹೇಳಿದರು.
ಶಿವಮೊಗ್ಗ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಲಿಟಲ್ ಎಲಿ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಮನಯೇ ಮೊದಲ ಪಾಠ ಶಾಲೆ ಆಗಿರುವುದರಿಂದ ಪೋಷಕರು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ಶಿಕ್ಷಣದ ಜತೆಯಲ್ಲಿ ಮನೆಗಳಲ್ಲಿ ಮಕ್ಕಳಿಗೆ ಮೌಲ್ಯಯುತ ಜೀವನ ನಡೆಸುವ ಬಗ್ಗೆ ತಿಳವಳಿಕೆ ಮೂಡಿಸಬೇಕು. ಬಾಲ್ಯದಿಂದಲೇ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಆಗುತ್ತಿದೆ.ಮಕ್ಕಳಿಗೆ ಯುವ ಪೀಳಿಗೆಗೆ ಅವಶ್ಯವಿರುವ ಕೆಲಸಗಳು ಆಗುತ್ತಿದೆ.ಶಿಕ್ಷಣ ಕ್ಷೇತ್ರದಲ್ಲಿ ಶಿವಮೊಗ್ಗ ಪ್ರಮುಖವಾಗಿ ಗುರುತಿಸಿಕೊಳ್ಳಲಿದೆ.ಎಲ್ಲರೂಉತ್ತಮ ಸಾಧನೆ ಮಾಡಬೇಕು ಎಂದರು.
ವಿದೇಶಿ ಸಂಸ್ಕೃತಿ, ಪಾಶ್ಚಾತ್ಯ ಶೈಲಿಯಅನುಕರಣೆ ಮಾಡುವುದು ಬೇಡ. ಶಾಲಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಂಪರೆಯಅರಿವು ಮೂಡಿಸುವರೀತಿಯಲ್ಲಿ ಚಟುವಟಿಕೆಗಳನ್ನು ಆಯೋಜಿಸಬೇಕು.ಇದರಿಂದ ಮಕ್ಕಳಿಗೆ ಸಂಸ್ಕೃತಿ ಪರಂಪರೆಯ ಪರಿಚಯವಾಗುತ್ತದೆ ಎಂದು ತಿಳಿಸಿದರು.
ವಿಠ್ಠಲ್ ಭಂಡಾರಿ ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣ ಪಡೆದುಜೀವನದಲ್ಲಿ ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು. ಎಲ್ಲ ಮಕ್ಕಳಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು.
ಪ್ರತಿಭಾ ಅರುಣ್ ಮಾತನಾಡಿ, ಮಕ್ಕಳ ಕಲಿಕಾ ಸಾಮಾರ್ಥ್ಯ ಹೆಚ್ಚಿಸುವರೀತಿ ಶಿಕ್ಷಕರು ಉತ್ತಮವಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇಉತ್ತಮ ಕೌಶಲ್ಯಗಳು ಬೆಳೆದರೆ ಜೀವನದಲ್ಲಿಉನ್ನತ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಪ್ರಮುಖರಾದ ಅನಿಲ್ ಶೆಟ್ಟಿ, ಬಿಂದು ಅನಿಲ್, ಜಿಲ್ಲಾ ವಾಣಿಜ್ಯ ಮತ್ತುಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
ಸಾಗರ: ಅತ್ಯಂತ ವೈಭವಯುತವಾಗಿ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆ ನಡೆಯುತ್ತಿದೆ. ಪ್ರತಿ ದಿನವು ಸಾವಿರಾರು ಜನರು ಆಗಮಿಸಿ ಶ್ರೀ ಮಾರಿಕಾಂಬಾ ದೇವರ ದರ್ಶನ ಪಡೆಯುತ್ತಿದ್ದಾರೆ. ಶುಕ್ರವಾರ, ಶನಿವಾರ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಪ್ರತಿ ದಿನ ದೇವರ ದರ್ಶನ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯಿಂದ ನಿರಂತರ ಅನ್ನ ಸಂತರ್ಪಣೆ ನಡೆಯುತ್ತಿದೆ. ಜಾತ್ರಾ ಸಮಿತಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡ ಜನರು ಅಚ್ಚುಕಟ್ಟಾದ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸಾಗರ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ ಆರಂಭದ ಮೊದಲ ದಿನದಿಂದಲೂ ಜನರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ದಿನ ನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸೇರಿದಂತೆ ಒಟ್ಟಾರೆ 8 ರಿಂದ 10 ಸಾವಿರಕ್ಕೂ ಅಧಿಕ ಜನರು ಅನ್ನ ಸಂತರ್ಪಣೆಯಲ್ಲಿ ತಿಂಡಿ, ಊಟ ಮಾಡುತ್ತಿದ್ದಾರೆ.
ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯಿಂದ ದಾಸೋಹ ಸಮಿತಿ ರಚಿಸಿದೆ.
ಸಂಚಾಲಕ ವಿನಾಯಕ್ ಗುಡಿಗಾರ್, ಸಹ ಸಂಚಾಲಕ ನಿತ್ಯಾನಂದ ಶೆಟ್ಟಿ, ಭಾಸ್ಕರ್ ಆಚಾರ್ ಸೇರಿದಂತೆ 15-20 ಜನರ ತಂಡ ಅನ್ನ ಸಂತರ್ಪಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಅಡುಗೆ ಭಟ್ಟರು ಹಾಗೂ ಸೇವಾ ಕಾರ್ಯಕರ್ತರು ಶ್ರೀ ಮಾರಿಕಾಂಬಾ ಜಾತ್ರೆಯ ದಾಸೋಹ ಕಾರ್ಯದಲ್ಲಿ ಸೇವೆ ಮಾಡುತ್ತಿದ್ದಾರೆ.
ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವ ದಾಸೋಹ ಕಾರ್ಯವು ಪ್ರತಿ ದಿನವು ವೈವಿಧ್ಯ ತಿಂಡಿ, ಸಿಹಿ ತಿನಿಸುಗಳನ್ನು ವಿತರಿಸಲಾಗುತ್ತಿದೆ. ಬೆಳಗ್ಗೆ ತಿಂಡಿಯಲ್ಲಿ ಕೇಸರಿಬಾತ್, ಉಪ್ಪಿಟ್ಟು, ಪಲಾವ್, ಚಿತ್ರಾನ್ನ, ಪುಳಿಯೋಗರೆ, ಅವಲಕ್ಕಿ ಪುಳಿಯೋಗರೆ, ಟೀ, ಕಾಫಿ ವಿತರಿಸಲಾಗುತ್ತಿದೆ.
ಮಧ್ಯಾಹ್ನ ಹಾಗೂ ರಾತ್ರಿ ನಡೆಯುವ ಊಟದ ವ್ಯವಸ್ಥೆಯಲ್ಲಿ ಪ್ರತಿ ದಿನ ಅಡುಗೆಯಲ್ಲಿ ಸಿಹಿ ತಿನಿಸು, ಪಲ್ಯ, ಅನ್ನ ಸಾಂಬರ್, ಮಜ್ಜಿಗೆ, ಉಪ್ಪಿನಕಾಯಿ ನೀಡಲಾಗುತ್ತಿದೆ. ಊಟದ ಸಿಹಿತಿನಿಸುವಿನಲ್ಲಿ ಕೇಸರಿಬಾತ್, ಪಾಯಸ, ಗೋದಿ ಪಾಯಸ, ಮೈಸೂರು ಪಾಕ್ ಹೋಳಿಗೆ ಸೇರಿದಂತೆ ದಿನಕ್ಕೊಂದು ಸಿಹಿ ನೀಡಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಜಾತ್ರೆಯಲ್ಲಿ ದಿನಪೂರ್ತಿ ನಿಂತು ಕೆಲಸ ಮಾಡುವ ಪೊಲೀಸ್, ಹೋಂಗಾರ್ಡ್ ಸಿಬ್ಬಂದಿಗೆ ಕುಳಿತು ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಫೋಟೋ
ಸಾಗರದ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುತ ನಡೆಸುತ್ತಿರುವ ಅನ್ನಸಂತರ್ಪಣೆ.
ಬಾಕ್ಸ್
ಸ್ನೇಹಿತರು ಸಾಗರದಿಂದ ಅನ್ನದಾನ
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಸಾಗರ ಹೊಟೇಲ್ ವೃತ್ತದ ನಗರಸಭೆ ಸಂಕೀರ್ಣದಲ್ಲಿ “ಸ್ನೇಹಿತರು ಸಾಗರ” ಸಂಸ್ಥೆ ವತಿಯಿಂದಲೂ ಪ್ರತಿ ದಿನ ಮಧ್ಯಾಹ್ನ ಊಟ ಉಚಿತವಾಗಿ ವಿತರಿಸಲಾಗುತ್ತಿದೆ. ಜಾತ್ರೆಯ ಒಂಬತ್ತು ದಿನಗಳ ಕಾಲವು ಮಧ್ಯಾಹ್ನ ಊಟ ನೀಡಲಾಗುತ್ತಿದೆ. 12-13 ಜಾತ್ರೆಗಳಿಂದಲೂ ಸ್ನೇಹಿತರು ಸಾಗರ ಸಂಸ್ಥೆಯು ಸಾರ್ವಜನಿಕರಿಗೆ ಊಟ ವಿತರಿಸುವ ಕಾರ್ಯ ನಡೆಸುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಕಲ್ಪಿಸಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಜನರು ನಿತ್ಯ ದಾಸೋಹದಲ್ಲಿ ಭಾಗಿಯಾಗುತ್ತಿದ್ದಾರೆ.
ಕಲಾಸಿರಿ ಕಾರ್ಯಕ್ರಮ ಫೆ. 12
ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಿರ್ಮಿಸಿರುವ ನಗರಸಭೆ ಆವರಣದ ಮಾರಿಕಾಂಬಾ ಕಲಾವೇದಿಕೆಯಲ್ಲಿ ಫೆ. 12ರ ಸಂಜೆ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ. ಫೆ. 12ರ ಸಂಜೆ 5.30ರಿಂದ 6ರವರೆಗೆ ಕಲ್ಲುಕೊಪ್ಪ ಹೆಗ್ಗೋಡು ಹಾಲ್ದೀಪ ಚಂಡೆ ಬಳಗದಿಂದ ಚಂಡೆ ವಾದನ, ಸಂಜೆ 6ರಿಂದ 6.15 ರವರೆಗೆ ಸ್ನೇಹ ಸಾಗರ ಬಳಗದಿಂದ ಲಂಬಾಣಿ ನೃತ್ಯ, 6.15ರಿಂದ 7 ರವರೆಗೆ ತೀರ್ಥಹಳ್ಳಿ ವಿಭಾ ಪ್ರಕಾಶ ಅವರಿಂದ ಸುಗಮ ಸಂಗೀತ, ರಾತ್ರಿ 7 ರಿಂದ 7.45 ರವರೆಗೆ ಮೈಸೂರು ಡಾ. ಕುಮಾರ್ ಅವರಿಂದ ಭರತನಾಟ್ಯ, 7.45 ರಿಂದ 9 ರವರೆಗೆ ಬೆಂಗಳೂರು ಶಶಿಧರ್ ಕೋಟೆ ಅವರಿಂದ ಸಂಗೀತ ಸಂಭ್ರಮ, ನಂತರ ಡಾ. ಪದ್ಮಿನಿ, ಶ್ರೀನಿವಾಸ, ರಜನಿ, ಉದಯ ಅಂಕೋಲ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.