Monday, April 6, 2026
Monday, April 6, 2026
Home Blog Page 1303

NSUI ಶಿವಮೊಗ್ಗ ಜಿಲ್ಲಾ ಎನ್ಎಸ್ ಯು ಐ ಅಧ್ಯಕ್ಷ ವಿಜಯ್ ಗೆ ಪ್ರಶಸ್ತಿ

0

ಬೆಂಗಳೂರಿನಲ್ಲಿ ರಾಜ್ಯ NSUI ವತಿಯಿಂದ ಕಾರ್ಯಕಾರಣಿ ಸಭೆ ಹಾಗೂ ತರಬೇತಿಯನ್ನು ರಾಜ್ಯದ್ಯಕ್ಷರಾದ ಕೀರ್ತಿ ಗಣೇಶ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

 NSUI ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಶಾಸಕರಾದ ದಿನೇಶ್ ಗುಂಡುರಾವ್ N S U I ನ ಮಾಜಿ ರಾಷ್ಟೀಯ ಅಧ್ಯಕ್ಷರಾದ ಸಲೀಂ ಅಹಮ್ಮದ್ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ಬಿವಿ ಶ್ರೀನಿವಾಸ್ ರವರು KPCC ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಶಿವಮೊಗ್ಗ ಜಿಲ್ಲಾ NSUI ಕಾರ್ಯವನ್ನು ಮೆಚ್ಚಿ ಜಿಲ್ಲಾ ಅಧ್ಯಕ್ಷರಾದ ವಿಜಯ ರವರಿಗೆ ಅತ್ಯುತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ನೀಡುವ ಮೂಲಕ ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

B Y Raghavendra ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಮಹತ್ತರ-ಸಂಸದ ರಾಘವೇಂದ್ರ

0

B Y Raghavendra ದೇಶದ ಸರ್ವಾಂಗೀಣ ಅಭಿವೃದ್ದಿಯಲ್ಲಿ ನಮ್ಮ ಯುವಜನತೆ ಪಾತ್ರ ಮಹತ್ತರವಾಗಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ನೆರೆಹೊರೆ ಯುವ ಸಂಸತ್ತು ಕಾಯಕ್ರಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಯುವ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

B Y Raghavendra ನಮ್ಮ ದೇಶ ಯುವಶಕ್ತಿಯಿಂದ ಸಂಪತ್ಭರಿತವಾಗಿದೆ. ಜನಸಂಖ್ಯೆಯಲ್ಲಿಯೂ ಸಹ ಪ್ರಪಂಚದಲ್ಲಿ ಮೊದಲ ಸ್ಥಾನ ಪಡೆದ ದೇಶವೆಂದು  ಘೋಷಣೆಯಾಗಲಿದೆ. ಅತ್ಯಂತ ಹೆಚ್ಚು ಯುವಜನತೆಯನ್ನು ಹೊಂದಿರುವ ನಮ್ಮ ರಾಷ್ಟ್ರ ಪ್ರಪಂಚಕ್ಕೆ ಉತ್ತಮ ಮಾನವ ಸಂಪನ್ಮೂಲವನ್ನು ನೀಡುವ ಜವಾಬ್ದಾರಿ ಹೆಚ್ಚಿದೆ.

21 ನೇ ಶತಮಾನದಲ್ಲಿ ತಂತ್ರಜ್ಞಾನ ಬಳಕೆ, ಇ-ಗವರ್ನೆನ್ಸ್, ಕ್ಷಿಪ್ರತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಸುಸ್ಥಿರ ಮತ್ತು ಉತ್ತಮ ಆರ್ಥಿಕತೆ ಎಡೆ ನಮ್ಮ ದೇಶ ಹೆಜ್ಜೆ ಹಾಕುತ್ತಿದ್ದು, ಈ ಬಾರಿಯ ಜಿ-20 ರಾಷ್ಟ್ರಗಳ ಶೃಂಗ ಸಭೆ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಹೆಮ್ಮೆ ತರುವ ವಿಚಾರ. ಒಂದು ವರ್ಷ ಕಾಲ ಅನೇಕ ರಾಷ್ಟ್ರಗಳನ್ನು ಆಹ್ವಾನಿಸಿ, ಜನರ ಪಾಲ್ಗೊಳ್ಳುವಿಕೆಯಿಂದ ಉತ್ತಮ ಚರ್ಚೆ, ಕಾರ್ಯಕ್ರಮಗಳು ನಡೆಯಲಿವೆ. ಭೂಮಿ, ಪರಿಸರ ಮಾಲಿನ್ಯ ನಿಯಂತ್ರಣ, ಆರ್ಥಿಕತೆ ಇತರೆ ಆದ್ಯತೆಯ ವಿಚಾರಗಳು ಚರ್ಚೆಯಾಗಲಿದೆ. ಜೊತೆಗೆ ಜಗತ್ತಿಗೆ ನಮ್ಮ ದೇಶ, ಸಂಪನ್ಮೂಲ ಪರಿಚಯ ಆಗಲಿದೆ.

ಯುವಶಕ್ತಿ ಒಂದು ಹಬ್ಬದ ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಯುವಜನತೆ ನೀಡುವ ಸಲಹೆಗಳಿಗೆ ಸರ್ಕಾರ ಗಮನ ನೀಡಲಿದೆ. ನಮ್ಮ ಪ್ರಧಾನಿಯವರು ನೀಡುವ ಸಲಹೆಗಳನ್ನು ಇಂದು ಜಗತ್ತು ಒಪ್ಪುತ್ತಿದೆ. ಟಾಪ್ 5 ದೇಶಗಳಲ್ಲಿ ನಮ್ಮ ರಾಷ್ಟ್ರ ಇದ್ದು, ನಮ್ಮ ಯುವಜನತೆ ಇನ್ನೂ ಹೆಚ್ಚಿನ ರೀತಿಯಲ್ಲಿ ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕೆಂದು ಆಶಿಸಿದರು.

10 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು ಜಿ20 ಅಧ್ಯಕ್ಷತೆ ವೈ 20 ಯುವ ಸಭೆ ಹಾಗೂ ಮಿಷನ್ ಲೈಫ್ ಮತ್ತು ಇಂಟರ್‍ನ್ಯಾಷನಲ್ ಇಯರ್ ಆಫ್ ಮಿಲೆಟ್ಸ್ ಕುರಿತು ಪಿಪಿಟಿ ಪ್ರದರ್ಶನದೊಂದಿಗೆ ವಿಷಯ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ನವದೆಹಲಿಯ ಸಂಸತ್ತಿನಲ್ಲಿ ಭಾಷಣ ಮಾಡಿದ ಸುಪ್ರದ, ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಶಾಲಿನಿ, ಹಸ್ಮಿತಾ ತಸ್ಮಿ, ಮೇಘನಾ ಹಾಗೂ ನೆಹರು ಯುವ ಕೇಂದ್ರದಿಂದ ಯುವ ಸಂಘಗಳಿಗೆ ಸ್ಪೋಟ್ರ್ಸ್ ಕಿಟ್ ಮತ್ತು ಡೊಳ್ಳುಕುಣಿತ ತಂಡಕ್ಕೆ ಪ್ರಶಸ್ತಿಯನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್‍ಕುಮಾರ್ ಎಸ್.ಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಯುವ ಅಧಿಕಾರಿ ಉಲ್ಲಾಸ್ ಕೆಟಿಕೆ, ರಂಗಾಯಣದ ಆಡಳಿತಾಧಿಕಾರಿ ಶೈಲಜ ಎಸಿ, ಕುವೆಂಪು ವಿವಿ ಎನ್‍ಎಸ್‍ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ, ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಕುಮಾರಸ್ವಾಮಿ ಬಿ.ಎಂ, ಸಹಾಯಕ ಪ್ರಾಧ್ಯಾಪಕಿ(ಆಯುರ್ವೇದ)ಡಾ.ಹರ್ಷಿತ್ ಕೆ.ಜೆ, ಹೊಯ್ಸಳ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಪ್ರಾಂಶುಪಾಲ ವಿಲಿಯಂ ಡಿಸೋಜ ಪಾಲ್ಗೊಂಡಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Ashwath Narayan ಪ್ರಚೋದನಕಾರಿ ಹೇಳಿಕೆ: ಸಚಿವ ಅಶ್ವತ್ಥನಾರಾಯಣ್ ವಿರುದ್ಧ ಪ್ರತಿಭಟನೆ

0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಾಡು ಕಂಡ ಅಪ್ರತಿಮ ಹಿಂದುಳಿದ ವರ್ಗಗಳ ನಾಯಕರಾಗಿದ್ದು, ಇಂತಹ ವ್ಯಕ್ತಿಯನ್ನು ಟಿಪ್ಪುವನ್ನು ಹೊಡೆದಂತೆ ಹೊಡೆದು ಹಾಕಬೇಕು ಎಂದು ಮಾನಸಿಕ ಅಸ್ವಸ್ಥನಂತೆ ಸಚಿವ ಅಶ್ವತ್ಥ್ ನಾರಾಯಣ್ ಬಹಿರಂಗ ಹೇಳಿಕೆ ನೀಡಿರುವುದು ಖಂಡನೀಯ ಎಂದು ತಿಳಿಸಿದರು.

Ashwath Narayan ಇತ್ತೀಚೆಗೆ ಅಶ್ವತ್ಥ್ ನಾರಾಯಣ್ ಮಾನಸಿಕ ದಿವಾಳಿತನ ಹಾಗೂ ಹತಾಶೆಯಿಂದ ಬಳಲುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಪ್ರಜ್ಞಾಹೀನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ಇವರ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿದಾರರು ಆಗ್ರಹಿಸಿದರು.

ಸಿದ್ದರಾಮಯ್ಯ ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯ ದಮನಕಾರಿ ರಾಜಕಾರಣವನ್ನು ಪ್ರಬಲವಾಗಿ ವಿರೋಧಿಸುತ್ತಾ ಧ್ವನಿಯಿಲ್ಲದ ಸಮುದಾಯಗಳ ಅಗ್ರಮಾನ್ಯ ನಾಯಕರಾಗಿ ಕರ್ನಾಟಕ ರಾಜಕಾರಣದಲ್ಲಿ ವಿಜೃಂಭಿಸುತ್ತಿದ್ದಾರೆ. ಇಂತಹ ವ್ಯಕ್ತಿಯ ಹತ್ಯೆಗೆ ಮೊದಲಿನಿಂದಲೂ ಸಂಚು ರೂಪಿಸಲಾಗುತ್ತಿದೆ. ಇದೀಗ ಒಬ್ಬ ಜವಬ್ದಾರಿಯುತ ಸಚಿವ ಬಹಿರಂಗವಾಗಿಯೇ ಕೊಲೆಗೆ ಪ್ರಚೋದನೆ ನೀಡಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಆರೋಪಿಸಿದರು.

ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿರುವ ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕು. ಸರ್ಕಾರ ಶೀಘ್ರವೇ ಇಂತಹ ನಾಲಾಯಕ್ ಸಚಿವನ ವಿರುದ್ಧ ಕಠಿಣ ಕ್ರಮಕೈಗೊಂಡು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು. ಇಲ್ಲವಾದರೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ರಮೇಶ್ ಇಕ್ಕೇರಿ, ನಗರ ಅಧ್ಯಕ್ಷರಾದ ಮೋಹನ್, ಕೆಪಿಸಿಸಿ ಕಾರ್ಯದರ್ಶಿಯಾದ ದೇವೇಂದ್ರಪ್ಪ, ಯುವ ಕಾಂಗ್ರೆಸ್ ನಗರದ ಅಧ್ಯಕ್ಷರಾದ ವಿನಯ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಧು ಕುಮಾರ್, ಯುವ ಮುಖಂಡರುಗಳಾದ ಶರತ್, ವಿನಯ್ ಪ್ರದೀಪ್, ಅರುಣ, ಪ್ರಮೋದ್ರ, ರಾಜೇಶ್, ಗಿರೀಶ , ಸಂದೀಪ್, ಭರತ್, ಧನಂಜಯ್, ದರ್ಶನ್, ಸಚಿನ್, ಇನ್ನೂ ಹಲವರು ಮುಖಂಡರುಗಳು ಇದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Pancharatna ಜೆಡಿಎಸ್ ಪಂಚರತ್ನ ಯೋಜನೆಗಳು ಸಾಮಾನ್ಯ ಜನತೆಗೆ ಸ್ಪಂದಿಸುವಂತಿವೆ

0

ಪಂಚರತ್ನ ಯೋಜನೆಗಳು ಕೆಳಮಟ್ಟದ ಜನಸಾಮಾನ್ಯರಿಗೂ ಸ್ಪಂದಿಸುವ ಸಲುವಾಗಿ ಜೆಡಿಎಸ್ ವರಿಷ್ಟರು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಲಾಗಿದ್ದಾರೆ ಎಂದು ಚಿಕ್ಕಮಗಳೂರು ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು.

ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇತು ಮಾರನಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಪಂಚರತ್ನ ಯೋಜನೆ ಹಾಗೂ ಜೆಡಿಎಸ್ ಬೆಂಬಲಿಸಿದರೆ ಮುಂದಿನ ಯಾವ ರೀತಿಯಲ್ಲಿ ಜನಪರ ಕೆಲಸ ಕೈಗೊಳ್ಳಲಾಗುವುದು ಎಂದು ಚರ್ಚಿಸಿ ಅವರು ಮಾತನಾಡುತ್ತಿದ್ದರು.

Pancharatna ನಾಡಿನ ಶ್ರೇಯೋಭಿವೃದ್ದಿಗಾಗಿ ವರಿಷ್ಟರು ವಸತಿ ಆಸರೆ, ಆರೋಗ್ಯವೇ ಸಂಪತ್ತು, ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೈತನ್ಯ ಹಾಗೂ ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಕುರಿತು ಯೋಜನೆಗಳನ್ನು ಬಿಡುಗಡೆ ಗೊಳಿಸಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದು ಮತದಾರರು ಈ ಬಾರಿ ಪೂರ್ಣ ಸಹಕಾರ ನೀಡಿದರೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ರೈತಾಪಿ ವರ್ಗಕ್ಕೆ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಲಿಚ್ಚಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆ ಹಾಗೂ ರಾಜ್ಯದ ಜನತೆ ಕೈಜೋಡಿಸಬೇಕು. ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗೆ ಸಾರ್ವಜನಿಕರು ಆಶೀರ್ವಾದ ಮಾಡಿದ್ದಲ್ಲಿ ಹೆಚ್.ಡಿ.ಕೆ. ಅವರು ಮುಖ್ಯಮಂತ್ರಿಯಾಗಿ ಜನತೆಗೆ ಸ್ಪಂದಿಸುವ ಕಾರ್ಯದಲ್ಲಿ ಮುಂದಾಗಲಿದ್ದಾರೆ ಎಂದರು.

ಚಿಕ್ಕಮಗಳೂರು ಭಾಗದಲ್ಲಿ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶವನ್ನು ಒಳಗೊಂಡಿದ್ದು ಅಭಿವೃದ್ದಿ ವಿಚಾರದಲ್ಲಿ ಸಾಕಷ್ಟು ಕೆಲಸಗಳಾಗಿರಬೇಕಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜೆಡಿಎಸ್‌ನ್ನು ಬೆಂಬಲಿಸಬೇಕು. ರಾಜ್ಯದ ಭ್ರಷ್ಟರಹಿತ ಆಡಳಿತ ನಡೆಸಲು ಮತದಾರರು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಪಕ್ಷದ ಮುಖಂಡರುಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dwadasha Jyotirlinga ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ -10 ವೈದ್ಯನಾಥೇಶ್ವರ

0

ವೈದ್ಯನಾಥೇಶ್ವರ ಜಾರ್ಖಂಡ್ ರಾಜ್ಯದ ದಿಯೋಘರ್ ನಲ್ಲಿದೆ. ಶಿವ ,ಸ್ಮಶಾನ ವಾಸಿ.
ಆದ್ದರಿಂದ ಇಲ್ಲಿ ಶಿವನಿರುವ ಸ್ಥಳ ರುದ್ರಭೂಮಿಯಾಗಿದೆ. ಅಲ್ಲದೇ ಈ ಜಾಗದಲ್ಲಿ ವಿಷ್ಣು ದೇವತೆಗಳಿಗೆ ಅಮೃತ ನೀಡಿದ ತೀರ್ಥಸ್ಥಳವೆಂದು ಕರೆಯುತ್ತಾರೆ. ಗೋಕರ್ಣದ ಪ್ರಸಂಗದಂತೆಯೇ ರಾವಣನು ತಂದ ಶಿವನ ಆತ್ಮಲಿಂಗವನ್ನ ಭೂಸ್ಪರ್ಶಮಾಡಿದಾಗ ಅದು ಪಾತಾಳಕ್ಕೆ ಹೋಗಿಬಿಡುತ್ತದೆ.
ಹೀಗಾಗಿ ಭೂಮಿಯ ಒಳಗಡೆ ಈ ಜ್ಯೋತಿರ್ಲಿಂಗವಿದೆ ಎಂದು ಪ್ರತೀತಿ.

Dwadasha Jyotirlinga ಇಲ್ಲಿನ ಶಿವನನ್ನು ಮಹೇಶ್ವರ, ಅಮೃತೇಶ್ವರ,ಧನ್ವಂತರಿ, ವೈದ್ಯನಾಥ ಎಂದು ಪೂಜಿಸಲಾಗುತ್ತದೆ.
ಇದು ರುದ್ರಭೂಮಿ ಎಂಬ ಬಗ್ಗೆ ಸ್ಥಳಪುರಾಣದ ಉಲ್ಲೇಖವಿದೆ.
ದಾಕ್ಷಾಯಣಿಯ ದೇಹದ ಐವತ್ತೊಂದು ಭಾಗಗಳಲ್ಲಿ ಹೃದಯದ ಭಾಗ ಇಲ್ಲ ಬಿತ್ತಂತೆ. ಇಲ್ಲಿಯೇ ಶಿವನು ಆ ಹೃದಯದ ಭಾಗವನ್ನ ಚಿತೆಯಲ್ಲಿರಿಸಿ ದಹನಮಾಡಿ ಅಲ್ಲಿಯೆ ತನ್ನ ಗಣಗಳೊಂದಿಗೆ ನಿರಂತರವಿದ್ದ ಎಂದು ಹೇಳಲಾಗಿದೆ.
ಹೃದಯಭಾಗ ಬಿದ್ದ ಜಾಗದಲ್ಲಿ ಜಯದುರ್ಗಾ ಎಂಬ ಹೆಸರಿನ ಪೀಠವಿದೆ.
ಪಾತಾಳಕ್ಕೆ ಹೋದ ಲಿಂಗವನ್ನ ನೋಡಲು ರಾವಣ ಬಂದಾಗ ಅಲ್ಲಿ ವನ್ಯಪ್ರದೇಶ.

ಪ್ರಯಾಸದಿಂದ ಆತ್ಮಲಿಂಗದ ಸ್ಥಳ ಗುರುತಿಸುತ್ತಾನೆ. ಅದನ್ನ ಕಾಡಿನಲ್ಲಿನ ಬೇಡರು ಅರ್ಚನೆ ಮಾಡುತ್ತಿದ್ದರು.
ಇಲ್ಲಿ ಶಿವನ ಅಭಿಷೇಕಕ್ಕೆಂದು ರಾವಣ ದೊಡ್ಡ ಬಾವಿಯನ್ನ ಕಟ್ಟಿಸಿದ್ದಾನೆ.
ಅದಕ್ಕೆ ಚಂದ್ರಕೂಪ್ ಎಂದು ಕರೆಯುವರು. ಈ ಜ್ಯೋತಿರ್ಲಿಂಗಕ್ಕೆ
ಆಲಯ ನಿರ್ಮಿಸಿ ಬೈಜೂನಾಥ್ಎಂದು ಹೆಸರಿಟ್ಟಿದ್ದಾರೆ.

ನಂತರ ವೈದ್ಯನಾಥ ಆಗಿದೆ.
ಇಲ್ಲಿ ಇಪ್ಪತ್ತೊಂದು ದೇವರ ಸನ್ನಿಧಿಗಳಿವೆ. ವೈದ್ಯನಾಥ ಲಿಂಗವು ಹನ್ನೊಂದು ಅಂಗುಲ ಎತ್ತರವಿದೆ. ಆಲಯಕ್ಕೆ ಮೂರು ಪ್ರದಕ್ಷಿಣೆ ಬಂದು ಭೂಸ್ಪರ್ಶಮಾಡಿ ನಮಸ್ಕರಿಸಿದರೆ ಮನಃಕ್ಲೇಶಗಳು ಮರೆಯಾಗುತ್ತವಂತೆ.

ಆದಿ ಶಂಕರರ ವೈದ್ಯನಾಥ ಸ್ತುತಿ.

ಪೂರ್ವೋತ್ತರೇ ಪಾರಲಿಕಾಭಿದಾನೇ
ಸದಾಶಿವಂ ತಂ ಗಿರಿಜಾಸಮೇತಂ|
ಸುರಾಸುರಾರಾಧಾತಿತ ಪಾದಪದ್ಮಂ
ಶ್ರೀ ವೈದ್ಯನಾಥಂ ಸತತಂ ನಮಾಮಿ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikkamagalu ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಒತ್ತಾಯ

0

ಚಿಕ್ಕಮಗಳೂರು ಸಮೀಪದ ಮಲ್ಲಂದೂರು ರಸ್ತೆಯಲ್ಲಿ ಮಹಿಳೆಯರು ಸೇರಿದಂತೆ ದಿನನಿತ್ಯ ಸಾವಿರಾರು ಮಂದಿ ಸಂಚರಿಸುತ್ತಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆ ರಸ್ತೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಜಿಲ್ಲಾ ಆಮ್‌ಆದ್ಮಿ ಪಕ್ಷವು ಒತ್ತಾಯಿಸಿದೆ.

Chikkamagalu ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಮನವಿ ಸಲ್ಲಿಸಿದ ಎಎಪಿ ಮುಖಂಡರುಗಳು ಪ್ರತಿನಿತ್ಯ ಮಹಿಳೆಯರು, ಮಕ್ಕಳು, ವೃದ್ದರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಲಂದೂರು ರಸ್ತೆಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ ಉಪ್ಪಳ್ಳಿಯಿಂದ ಮಲ್ಲಂದೂರು ರಸ್ತೆಯವರೆಗೆ ಬೆಳಿಗಿನಿಂದ ಸಂಜೆಯವರೆಗೆ ಸಾವಿರಾರು ಮಂದಿ ಸಂಚರಿಸುತ್ತಿದ್ದಾರೆ. ಅವರಿಗೆ ಶೌಚಾಲಯ ಅವಶ್ಯವಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.

ನಗರಸಭಾ ವತಿಯಿಂದ ಹಿಂದೆ ಮಲ್ಲಂದೂರು ರಸ್ತೆಯ ಭಾರತ್ ಮಟನ್ ಸ್ಟಾಲ್ ಪಕ್ಕದಲ್ಲಿ ಒಂದು ಶೌಚಾಲಯವಿತ್ತು. ಇದೀಗ ನಗರಸಭೆಯ ಕೆಲವು ಖಾಸಗೀಯವರಿಗೆ ಅದನ್ನು ಮಾರಾಟ ಮಾಡಿರುವುದನ್ನು ಎಎಪಿ ತೀವ್ರವಾಗಿ ಖಂಡಿಸಿದ್ದು ಕೂಡಲೇ ಆ ಜಾಗವನ್ನು ಖುಲ್ಲಾಪಡಿಸಿ ಶೌಚಾಲಯ ನಿರ್ಮಾಣಕ್ಕೆ ಮುಂದಾ ಯಗಬೇಕು ಎಂದರು.

ನಗರದ ಸಹರಾ ಶಾದಿಮಹಲ್‌ನ ಸಮೀಪದ ೬೦ ಅಡಿ ರಸ್ತೆಯಲ್ಲಿ ಸರ್ಕಾರಿ ಜಾಗ ಮತ್ತು ರಾಜಕಾಲುವೆ ಗೆ ಅಡ್ಡಲಾಗಿ ಖಾಸಗೀಯವರು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಇದನ್ನು ನಗರಸಭೆ ಅಥವಾ ಪ್ರಾಧಿಕಾರದವರಾಗಲೀ ತಡೆಯದೇ ಇರುವುದು ಗಮನಿಸಿದರೆ ಅವರು ಕೂಡಾ ಶಾಮೀಲಾಗಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.

ಮಲ್ಲಂದೂರು ರಸ್ತೆಯ ಬದ್ರಿಯ ವೃತ್ತದಿಂದ ಚಿತಾಗಾರದವರೆಗೆ ನೂರಾರು ಮನೆಗಳಿದ್ದು ಇವರಿಗೆ ಇದು ವರೆಗೂ ಒಳಚರಂಡಿ ಕೆಲಸವಾಗಿರುವುದಿಲ್ಲ ಹಾಗೂ ಒಳಚರಂಡಿ ನೀರು ಹಳ್ಳಗಳ ಮೂಲಕ ಯಗಚಿ ನದಿಗೆ ಸೇರಿ ನಂತರ ಅದೇ ನೀರನ್ನು ಸಾರ್ವಜನಿಕರು ಕುಡಿಯುವ ಪರಿಸ್ಥಿತಿ ಬಂದೋದಗಿದೆ. ಈ ಬಗ್ಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಕೂಡಲೇ ಶೌಚಾಲಯದ ಜಾಗವನ್ನು ಖಾಸಗೀಯವರಿಂದ ಖುಲ್ಲಾಪಡಿಸಬೇಕು. ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕು, ಮನೆಗಳಿಗೆ ಯುಜಿಡಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಒಳಚರಂಡಿ ನೀರನ್ನು ನದಿಗೆ ಹರಿಸ ದಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಎಎಪಿ ವತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾ ಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್,ಮುಖಂಡ ಎಂ.ಪಿ.ಈರೇಗೌಡ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Chikkamagalu ಚಿಕ್ಕಮಗಳೂರಿನಲ್ಲಿ ಹಳ್ಳಿಕಾರ್ ಸಮುದಾಯ ಭವನ ನಿರ್ಮಿಸಲು ಮನವಿ

0

Chikkamagalu ಚಿಕ್ಕಮಗಳೂರಿನಲ್ಲಿ ಹಳ್ಳಿಕಾರ ಜನಾಂಗದವರಿಗೆ ಸಮುದಾಯ ಭವನ ಹಾಗೂ ಶ್ರೀಕೃಷ್ಣ ದೇವಾಲಯ ನಿರ್ಮಾಣಕ್ಕೆ ನಗರ ಸಮೀಪದ ಎರಡು ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿ ಕೊಡಬೇಕು ಎಂದು ಜಿಲ್ಲಾ ಹಳ್ಳಿಕಾರ ಯುವಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಸಮುದಾಯದ ಪದಾಧಿಕಾರಿಗಳು ಭೂಮಿ ಮಂಜೂರು ಮಾಡಿ ಜನಾಂಗ ಬೆಳವಣ ಗೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೋಟೆ ಸೋಮಣ್ಣ ತಾಲ್ಲೂಕಿನಲ್ಲಿ ನೂರಾರು ವರ್ಷಗಳಿಂದ ಸಾವಿರಾರು ಹಳ್ಳಿಕಾರ ಜನಾಂಗದವರು ವಾಸಿಸುತ್ತಿದ್ದಾರೆ. ಹೆಚ್ಚಾಗಿ ನಗರ ಸಮೀಪದ ಕೋಟೆ, ಹೊಸಮನೆ, ಹಿರೇ ಮಗಳೂರು, ದೋಣ ಖಣದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ನಿವಾಸಿಗಳಾಗಿದ್ದಾರೆ ಎಂದರು.

Chikkamagalu ಹಳ್ಳಿಕಾರ ಸಮುದಾಯಕ್ಕೆ ಯಾವುದೇ ಒಂದೇ ಸರ್ಕಾರದ ಜಾಗ ಅಥವಾ ಸಮುದಾಯ ಭವನವಿರುವು ದಿಲ್ಲ. ಜನಾಂಗದ ಮದುವೆ ಹಾಗೂ ಶುಭ ಸಮಾರಂಭಗಳಿಗೆ ಇತರರ ಸಮುದಾಯ ಭವನಕ್ಕೆ ತೆರಳಿ ಸಾವಿರಾರು ವ್ಯಯಿಸಿ ಕಾರ್ಯಕ್ರಮವನ್ನು ಮಾಡಬೇಕಾಗಿರುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಜನಾಂಗದವರಿಗೆ ಸ್ವಂತ ಸಮುದಾಯ ಭವನ ವ್ಯವಸ್ಥೆ ಇದ್ದರೆ ತುಂಬಾ ಅನುಕೂಲವಾಗು ವ ಹಿನ್ನೆಲೆಯಲ್ಲಿ ನಗರ ಸಮೀಪವಿರುವ ಎರಡು ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿಕೊಟ್ಟಲ್ಲಿ ಸಮುದಾಯ ಹಾಗೂ ಶ್ರೀಕೃಷ್ಣ ದೇವಾಲಯ ನಿರ್ಮಾಣ ಮಾಡಲು ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಬೆಟ್ಟೇಗೌಡ, ರಾಜ್ಯ ಹಳ್ಳಿಕಾರ ಸಂಘದ ನಿರ್ದೇಶಕ ಸಿ.ಹೆಚ್. ಶ್ರೀನಿವಾಸ್, ಕರ್ತಿಕೆರೆ ಗ್ರಾ.ಪಂ. ಅಧ್ಯಕ್ಷ ಯತೀಶ್, ಸಗನೀಪುರ ಗ್ರಾಮ ಘಟಕದ ಅಧ್ಯಕ್ಷ ಚಂದ್ರಶೇಖರ್, ಹಳ್ಳಿಕಾರ ಮಠದ ಟ್ರಸ್ಟಿಗಳಾದ ಬಿ.ಎನ್. ವೆಂಕಟೇಶ್, ಸಿ.ಎನ್.ಕುಮಾರ್, ಬೆನಕ ಮಂಜುನಾಥ್, ಜನಾಂಗ ದವರ ಕೋಟೆ ಕುಮಾರ್, ಮಹೇಶ್, ಗುರುಮೂರ್ತಿ, ರಾಜಣ್ಣ, ಪಾಂಡಣ್ಣ, ಪಾಂಡುರಂಗ, ಉದಯ ಕುಮಾರ್, ನಾಗೇಶ್, ರಂಗಸ್ವಾಮಿ, ಲೋಕೇಶ್, ಸತೀಶ್ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Madhavanele ಶಿವಮೊಗ್ಗ ಮಾಧವ ನೆಲೆಯ ಅಂತರ್ಜಾಲದ ಲೋಕಾರ್ಪಣೆ

0

ವಿಕಾಸ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಿರಾಶ್ರಿತ ಮಕ್ಕಳ ಆಶ್ರಯ ತಾಣವಾದ ಮಾಧವ ನೆಲೆಯ ಅಂತರ್ಜಾಲ https://madhavanele.org ಈ ದಿನ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧವ ನೆಲೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಭವರ್ ಲಾಲ್ ನಾಹರ್ ವಹಿಸಿದ್ದರು.

Shivamogga madhavanele ವಿಕಾಸ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಸಚ್ಚಿದಾನಂದ ಅಂತರ್ಜಾಲವನ್ನು ಲೋಕಾರ್ಪಣೆ ಗೊಳಿಸಿದರು

ಕಾರ್ಯಕ್ರಮದಲ್ಲಿ ವಿಕಾಸ ಟ್ರಸ್ಟಿನ ಟ್ರಸ್ಟಿಗಳು, ಮಾಧವ ನೆಲೆ ಆಡಳಿತ ಮಂಡಳಿ ಹಾಗು ಮಾತೃ ಮಂಡಳಿಯ ಸದಸ್ಯರು ಹಾಗು ನೆಲೆಯ ಮಕ್ಕಳು ಭಾಗವಹಿಸಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

National Student Union of india ಎನ್ಎಸ್ ಯು ಐ ಶಿವಮೊಗ್ಗ ನಗರ ಪ್ರಧಾನ ಕಾರ್ಯದರ್ಶಿಯಾಗಿ ವರುಣ್ ವಿ ಪಂಡಿತ್

0

National Student Union of india ಎನ್ ಎಸ್ ಯು ಐ ನ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ರವರ ಆದೇಶದ ಮೇರೆಗೆ ನಗರಾಧ್ಯಕ್ಷರಾದ ಚರಣ ರವರ ಸೂಚನೆಯಂತೆ ವರುಣ್ ವಿ ಪಂಡಿತ್ ರವರನ್ನು ಹಾಗು ಉಲ್ಲಾಸ್ ಎಮ್ ಶೆಟ್ಟಿ ರವರನ್ನು ಶಿವಮೊಗ್ಗ ನಗರ ಎನ್.ಎಸ್ ಯು ಐ ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

National Student Union of india ನೂತನವಾಗಿ ಶಿವಮೊಗ್ಗ ನಗರ ಎನ್ ಎಸ್ ಯು ಐ ಆಯ್ಕೆ ಯಾದ ಇವರು ಗಳನ್ನು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಪದಾದಿಕಾರಿಗಳು ಸ್ನೇಹಿತರು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dwadasha Jyotirlinga ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ-09 ಮಹಾಕಾಲೇಶ್ವರ ಲಿಂಗ

0

Dwadasha jyotirlinga  ಮಹಾಕಾಲೇಶ್ವರ ಲಿಂಗ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿದೆ. ದೇವಾಲಯವು ಕ್ಷಿಪ್ರಾ ನದಿಯ ದಂಡೆಯ ಮೇಲಿದೆ. ಉಜ್ಜಯಿನಿ ಅಂದಾಕ್ಷಣ ನಮಗೆ
ಬೇತಾಳ ಕತೆಯ ವಿಕ್ರಮಾದಿತ್ಯ.ಮಹಾಕವಿ ಕಾಳಿದಾಸ ನೆನಪಿಗೆ ಬರುತ್ತಾರೆ.
ಆರನೇ ಶತಮಾನದಲ್ಲಿ ನಿರ್ಮಿಸಿದ ದೇವಾಲಯವಿದೆ. ವೈಶಿಷ್ಟ್ಯ ವೆಂದರೆ ಲಿಂಗವು ದಕ್ಷಿಣಾಭಿಮುಖವಾಗಿದೆ.
ಹಿಂದೆ ಅವಂತಿಪುರವೆಂಬ ನಗರದಲ್ಲಿ ವೇದಪ್ರಿಯನೆಂವ ವಿಪ್ರನಿದ್ದ.ಆತನಿಗೆ ದೇವಪ್ರಿಯ,ಮೇಧನ್,ಸುವಿರತನ್,ಧರ್ಮವಾದಿ
ಎಂಬ ಸುಪುತ್ರರಿದ್ದರು.

ಮಹಾಶಿವಭಕ್ತ ಕುಟುಂಬ. ಅವರನ್ನಾಳುತ್ತಿದ್ದ ದೂಷಣನೆಂಬ ರಾಜನಿದ್ದ. ಅವನದು ರಾಕ್ಷಸೀ ಪ್ರವೃತ್ತಿ. ಶಿವದ್ವೇಷಿಯಾಗಿದ್ದ. ಅಲ್ಲಿ
ಸುತ್ತಮುತ್ತಲಿದ್ದ ಋಷಿ ಸಮೂಹ ಕೂಡ ಯಜ್ಞಯಾಗಾದಿ ಮಾಡಿ ಶಿವನನ್ನೊಲಿಸಿಕೊಳ್ಳುವ ಪಯತ್ನ ನೋಡಿದ.ಕೋಪದಿಂದ ಬಂದು
ಶಿವಪೂಜೆಯಿಂದ ವಿಮುಖರಾಗಿರಿ. ಇಲ್ಲಿ ಯಾವುದೇ ಪೂಜಾದಿ ಕಾರ್ಯಗಳು ನೆರವೇರಕೂಡದು ಎಂದು
ಆಜ್ಞಾಪಿಸಿದ.

Dwadasha Jyotirlinga  ಪೀಡಿಸಲು ಆರಂಭಿಸಿದ.
ಋಷಿ ಸಮೂಹ ತಕ್ಷಣ ಹತ್ತಿರದಲ್ಲಿದ್ದ ವೇದಪ್ರಿಯನ ಮಕ್ಕಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರು.ಈ ಸಮಸ್ಯೆಗೆ ಪ್ರತಿಯಾಗಿ
ಪ್ರತಿಭಟಿಸುವುದಕ್ಕಿಂತ
ಶಿವಪೂಜೆಯಲ್ಲಿ ನಿರತರಾಗೋಣ.ಶಿವನೇ ಪರಿಹಾರಿಸುತ್ತಾನೆ ಎಂದು ಮಕ್ಕಳೆಲ್ಲ ಅಭಿಪ್ರಾಯಪಟ್ಟರು.

ಎಲ್ಲರೂ ರುದ್ರಾಕ್ಷಿ
ಧರಿಸಿದರು. ಇಪ್ಪತ್ತೊಂದು ವ್ರತಗಳು, ಹದಿನೆಂಟು ಪುರಾಣಗಳ ಪಠಣ,ಶ್ರವಣದಲ್ಲಿ ತೊಡಗಿಕೊಂಡರು.
ಅಲ್ಲಿನ ಮಣ್ಣಿನಲ್ಲಿ ಶಿವಲಿಂಗ ನಿರ್ಮಿಸಿ ಫೂಜಿಸತೊಡಗಿದರು.ಈ ಸಂಗತಿ ತಿಳಿದ ದೂಷಣ ಅಲ್ಲಿಗೆ ಅವರ ವ್ರತ,ಪೂಜೆಯನ್ನ ಧ್ವಂಸ
ಮಾಡಲು ಸೇವಕರಿಗೆ ಆಜ್ಞಾಪಿಸಿದ. ಅವರೆಲ್ಲರೂ ಗುಂಪಾಗಿ ಬರುತ್ತಿದ್ದಂತೆಯೇ ಚಮತ್ಕಾರವೇ ನಡೆದುಹೋಯಿತು. ಮಣ್ಣನ
ಕುಳಿಯಿಂದ ಬೃಹತ್ ಜ್ವಾಲೆ ಹೊಮ್ಮಿತು . ಲಿಂಗವೊಂದು ಮೇಲೆ ಬಂದು ಎರಡು ಭಾಗವಾಯಿತು.ನಡುವಿನಿಂದ
ಹುಲಿಚರ್ಮಧರಿಸಿದ ಶಿವನು ಶೂಲಾಯುಧಪಾಣಿಯಾಗಿ ಬಂದ.ಕಣ್ಣುಗಳಲ್ಲಿ ಕ್ರೋಧಾಗ್ನಿ.!.ಒಂದು ಹ್ಞುಂಕಾರ ಹಾಕಿದ.ಕ್ಷಣಾರ್ಧದಲ್ಲೇ
ದೂಷಣ ಮತ್ತು ಸೇವಕರು ಬೂದಿಯಾದರು.

ಹೀಗೆ ಅವರನ್ನ ಸುಟ್ಟ ಬೆಂಕಿಗೆ ನಾಶಾಗ್ನಿ ಆಯಿತು. ನಾಶಮಾಡುವ ಬೆಂಕಿಗೆ
ಮಹಾಕಾಲನೆಂದೂ ಕೆರಯುತ್ತಾರೆ.,
ಮಹಾಕಾಲನೆಂದು ಅಲ್ಲಿನ ಶಿವಲಿಂಗ ಪ್ರಖ್ಯಾತವಾಗಿದೆ. ಇಪ್ಪತ್ತನಾಲ್ಕು ಗಂಟೆಗ ಇಲ್ಲಿ ಎರಡು ತುಪ್ಪದದೀಪಗಳು
ಉರಿಯುತ್ತಿವೆ.ಬೆಳಗಿನ ವೇಳೆಯಲ್ಲಿ ಸ್ಮಶಾನದ ಬೂದಿಯಿಂದ ಅಭಿಷೇಕವಾಗುತ್ತದೆ.
ಅಷ್ಟಭೈರವರಲ್ಲೊಬ್ಬನಾದ ಕಾಲಭೈರವನ ಗುಡಿಯಿದೆ.ಇಲ್ಲಿರುವ ಕಾಲಭೈರವನಿಗೆ ಮದ್ಯದ ಅಭಿಷೇಕಮಾಡುತ್ತಾರೆ.ಮತ್ತು
ಮದ್ಯವನ್ನು ಪ್ರಸಾದ ರೂಪವಾಗಿಯೂ ನೀಡುತ್ತಾರೆ.

ಇಲ್ಲಿನ ಪ್ರದೇಶದಲ್ಲಿ ತಂತ್ರ ವಿದ್ಯೆ ಪಡೆದಂತಹವರು ವಾಮಾಚಾರಗಳನ್ನೂ ನಡೆಸುವುದೂ ಇದೆ..ಯೋಗಿನಿ ದೇವತೆಗಳ
ಆಲಯವೂ ಇದೆ.‌.
ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ವಿಜೃಂಭಣೆಯಿಂದ ನಡೆಯುತ್ತದೆ.ಮಹಾಶಿವರಾತ್ರಿಯ ಆಚರಣೆ ಇಲ್ಲಿ ವಿಶೇಷ.
ಮಹಾಕಾಲನ ಕೃಪೆಹೊಂದಿದವರಿಗೆ ಅಕಾಲಮರಣವಾಗದೆಂಬ ನಂಬಿಕೆಯಿದೆ
ಶ್ರೀ ಶಂಕರಾಚಾರ್ಯರ ಸ್ತುತಿ
ಆವಂತೀಕಾಯಂ ವಿಹಿತಾವತಾರಂ
ಮುಕ್ತಿಪ್ರದಾನಾಯ ಚ ಸಜ್ಜನಾನಾಮ್ |
ಅಕಾಲಮೃತ್ಯೋಃ ಪರಿರಕ್ಷಣಾರ್ಥಂ
ವಂದೇ ಮಹಾಕಾಲಮಹಂ ಸುರೇಶಂ||

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.