Monday, April 6, 2026
Monday, April 6, 2026
Home Blog Page 1302

Karntaka Assembly ಕಿವಿ ಮೇಲೆ ಹೂ…

0

ಈಗೀಗ ವಿಚಿತ್ರ ಘಟನೆಗಳು‌ ನಮ್ಮ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಜರುಗುತ್ತಿವೆ.

Karntaka Assembly ಹಾಸಿಗೆ ದಿಂಬು ಇರಿಸಿಕೊಂಡು ರಾತ್ರಿಯೆಲ್ಲಾ ಸಂಪು ಹೂಡುವುದು.
‌ಮೇಜಿನ ಮೇಲೆ ನಿಂತು ತಾವು ತೊಟ್ಡಿದ್ದ ಜುಬ್ಬವನ್ನ ಹರಿದುಕೊಳ್ಳುವುದು..ಅರ್ಧ ಬೆತ್ತಲೆ ನಿಲ್ಲುವುದು…ಮೊಬೈಲ್ ನಲ್ಲಿ ನೀಲಿಚಿತ್ರಗಳ ವೀಕ್ಷಣೆ..ಹೀಗೆ
ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇಂಥದೇ ಸಾಲಿನಲ್ಲಿ ಈಗ ಮತ್ತೊಂದು ಸೇರ್ಪಡೆ. ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು, ಶಾಸಕರು ಕಿವಿಗೆ ಚೆಂಡು ಹೂ ಸಿಗಿಸಿಕೊಂಡಿರುವುದು.

Karntaka Assembly ಸಾಂಕೇತಿಕವಾಗಿ ಆಡಳಿತ ಪಕ್ಷದ
ಬಜೆಟ್ ಬಗ್ಗೆ ಇದೊಂದು ವಿಡಂಬನೆ ಎನ್ನಬಹುದು.

ಆದರೆ ಈ ರೀತಿಯ ನಡವಳಿಕೆಗಳಿಂದ ಗಂಭೀರ ರಾಜಕೀಯ ನಡೆಗೆ ಹೆಸರಾದ ನಾಯಕರು ಇಷ್ಟು ಕೆಳಗಿನ ಮಟ್ಟಕ್ಕಿಳಿದರೆ? ಎಂಬ ಭಾವನೆಯೂ ಬರಲಿಕ್ಕೆ ಸಾಧ್ಯ.

ಏಕೆಂದರೆ ” ನಾವೇನೂ ಕಿವಿಗೆ ಹೂವಿಟ್ಟುಕೊಂಡಿಲ್ಲ!” ಎನ್ನುವ ಲೋಕಾರೂಢಿಯ ಮಾತಿಗೆ
ಸಾದೃಶ್ಯವಾಗಿ ತೋರಿಸಬೇಕಿಲ್ಲ.
ಆ ರೀತಿಯ ನಡವಳಿಕೆ ಇನ್ನೊಂದು ದಿನ “ನೀವೇ ಕಿವಿ ಮೇಲೆ ಹೂ ಇಟ್ಟುಕೊಂಡಿದ್ರಲ್ಲ?” ಎಂದು ಆಡಳಿತ ಪಕ್ಷ ಹೀಯಾಳಿಸಲಿಕ್ಕೂ
ಅವಕಾಶ ಕಲ್ಪಿಸಿದಂತಾಗುತ್ತದೆ.

ಈಗಿನ ರಾಜಕೀಯದಲ್ಲಿ ಯಾವ ಪಕ್ಷ
ಯಾವ ವ್ಯಕ್ತಿ ಆಡಳಿತ ಗಾದಿಗೇರುತ್ತಾರೋ ಗೊತ್ತಿಲ್ಲ.
ಇಂತಹ ನಡವಳಿಕೆಗಳು ಮುಂದೊಂದು ದಿನ ಲೇವಡಿಗೆ ವಸ್ತುವಾಗುವುದಂತೂ ನಿಜ. ಹೌದಲ್ಲವೆ!??

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಇಂದು ಶಿವರಾತ್ರಿ ಪ್ರಯುಕ್ತ ಪ್ರಾಣಿವಧೆ ನಿಷೇಧ

0

Shivamogga ಫೆ.18 ರಂದು ಮಹಾಶಿವರಾತ್ರಿ ಪ್ರಯುಕ್ತ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಬೇಕು. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivaratri ಶಿವಮೊಗ್ಗದಲ್ಲಿ ಶಿವರಾತ್ರಿ ಪ್ರಯುಕ್ತ ಸಂಚಾರ ಮಾರ್ಗ ತಾತ್ಕಾಲಿಕ ಬದಲಾವಣೆ

0

Shivaratri  ಫೆ.18 ಮತ್ತು 19 ರಂದು ಶಿವಮೊಗ್ಗ ನಗರದಲ್ಲಿ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದ್ದು, ಫೆ.18 ರ ಬೆಳಿಗಿನ ಜಾವ 4 ರಿಂದ 19 ರ ಬೆಳಗಿನ ಜಾವದವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದು ಹೋಗುವ ಕಾರಣ ಜಿಲ್ಲಾಧಿಕಾರಿಗಳು ಈ ಕೆಳಗಿನಂತೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಅಧಿಸೂಚನೆ ಹೊರಡಿಸಿದ್ದಾರೆ.

Shivaratri ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ವಾಹನಗಳು ಗಜಾನನ ಗೇಟ್ ಪಕ್ಕದ ರಸ್ತೆಯಲ್ಲಿ ಹೋಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್‍ಹೆಚ್ ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು.

ತೀರ್ಥಹಳ್ಳಿಯಿಂದ ಬರುವ ಎಲ್ಲಾ ವಾಹನಗಳು ಎನ್‍ಹೆಚ್ ರಸ್ತೆಯ ಪಕ್ಕದ ರಸ್ತೆಯ ಮೂಲಕ ರಾಮಿನಕೊಪ್ಪ ಚಾನಲ್ ಕ್ರಾಸ್‍ನಿಂದ ಗಜಾನನ ಗೇಟ್ ಮೂಲಕ ಬಂದು ಶಿವಮೊಗ್ಗ ಸೇರುವುದು.

ಮೇಲ್ಕಂಡ ಮಾರ್ಗಗಳಲ್ಲಿ ಬದಲಾವಣೆಗಳು ಪೊಲೀಸ್ ವಾಹನಗಳು ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

karnataka Budget ರಾಜ್ಯ ಬಜೆಟ್ ಪ್ರತಿಕ್ರಿಯೆಗಳು

0

ನಿರಾಶಾದಾಯಕ ಬಜೆಟ್ – ಶಿಹಾನ್ ಪಾಶಾ

ಮತದಾರರನ್ನ ಸೆಳೆಯುವ ಪ್ರಯತ್ನ- ಪ್ರೇಮ್ ಕುಮಾರ್

karnataka Budget ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಕೊನೆಯ ಬಜೆಟ್ ಜನಸಾಮಾನ್ಯರ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಶಿಹಾನ್ ಪಾಶ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು ಬಡವರು, ಕೂಲಿಕಾರ್ಮಿಕರು, ಅಲ್ಪಸಂಖ್ಯಾ ತರು, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ಹೊಸತನವನ್ನು ಆಶಾದಾಯಕ ಯೋಜನೆಗಳನ್ನು ರೂಪಿಸಿರುವುದಿಲ್ಲ ಎಂದಿದ್ದಾರೆ.

karnataka Budget ವಕ್ಫ್ ಆಸ್ತಿಗಳ ಅಭಿವೃದ್ದಿ ಹಾಗೂ ನಿರ್ವಹಣೆಗೆ ಯಾವುದೇ ಯೋಜನೆಗಳಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತೀ ಹೆಚ್ಚು ಮುಖ್ಯವಾದ ವಿಷಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರ ರೂಪಿಸಿರುವ ಅಂತಿಮ ಬಜೆಟ್ ಇದಾಗಿದೆ ಎಂದು ಜೆಡಿಎಸ್ ಯುವಜನತಾದಳ ಅಧ್ಯಕ್ಷ ಸಿ.ಹೆಚ್. ಪ್ರೇಮ್‌ಕುಮಾರ್ ಹೇಳಿದ್ದಾರೆ.

ಈ ಕುರಿತು ಹೇಳಿಕೆಯಲ್ಲಿ ತಿಳಿಸಿರುವ ಅವರು ರಾಜ್ಯದ ರೈತಾಪಿ ವರ್ಗ ಹಾಗೂ ಸಾಮಾನ್ಯ ಜನರಿಗೆ ಪೂರಕವಾಗಿರದ ಬೊಮ್ಮಾಯಿ ನೇತೃತ್ವದ ಇಂದಿನ ಬಜೆಟ್ ಎಂದ ಅವರು ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಈ ರೀತಿಯ ಬಜೆಟ್ ರೂಪಿಸಲಾಗಿದ್ದು ಇದು ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಲಿದೆ ಎಂದು ಕಾಣಬೇಕಿದೆ ಎಂದಿದ್ದಾರೆ.

ಇದೇ ರೀತಿಯ ಏಳನೇ ವೇತನ ಆಯೋಗದಲ್ಲಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು, ಅಧಿಕಾರಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ಸದುದ್ದೇಶದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೊನೆಯ ಬಜೆಟ್‌ನ್ನು ಪೂರ್ಣಗೊಳಿಸಿದ್ದು ಮುಂದಿನ ದಿನಗಳಲ್ಲಿ ಇವರ ಬಜೆಟ್ ಇವರಿಗೆ ಮಾರಕವಾಗಿ ರಾಜ್ಯದಲ್ಲಿ ತೆನೆಹೊತ್ತ ಮಹಿಳೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Jyotirlinga ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ -11 ಕಾಶಿ ವಿಶ್ವನಾಥಂ ಶರಣಂ ಪ್ರಪದ್ಯೆ

0

Jyotirlinga  ಭಾರತೀಯ ಸನಾತನರ‍್ಮದಲ್ಲಿ ಕಾಶಿ ಪರಮ ಪವಿತ್ರ ಸ್ಥಳ.ಸಾಕ್ಷಾತ್ ಈಶ್ವರನೇ ಅಲ್ಲಿ ಇರುತ್ತಾನೆ ಎಂಬ ಅಪರಿಮಿತ ವಿಶ್ವಾಸ,ನಂಬಿಕೆ.
ಗಿರಿಜೆಯನ್ನ ವಿವಾಹವಾಗಿ ಶಿವ ,ಕಾಶಿಯ ಅರಮನೆಯಲ್ಲಿದ್ದನಂತೆ.

ಆದ್ದರಿಂದ ಕಾಶಿಗೆ ಆನಂದವನ ಎಂಬ ಹೆಸರೂ ಇದೆ. ಗಂಗಾ ನದಿಯ ತೀರದಲ್ಲಿದೆ.
ವರುಣ ಮತ್ತು ಅಸಿ ಎಂಬ ಎರಡು ನದಿಗಳ ನಡುವೆ ಈ ಸ್ಥಳವಿದೆ.ಹಾಗಾಗಿ ವರುಣ ,ಅಸಿ …ವರಾಣಾಸಿ ಆಗಿ ಕೊನೆಗೆ ವಾರಾಣಸಿ ಅಗಿದೆ. ಪಾಲಿ ಆಡುಭಾಷೆಯಲ್ಲಿ ಬಾರಾಣಸಿ ಆಗಿ ಬ್ರಿಟಿಷರ ಉಚ್ಚಾರಣೆಯಿಂದ ಬನಾರಸ್ ಆಯಿತೆಂದು ಹೇಳುತ್ತಾರೆ. ಈ ಎರಡೂ ನದಿಗಳೂ ಗಂಗೆಯನ್ನ ಸೇರುತ್ತವೆ.

Jyotirlinga  ಈ ಪಟ್ಟಣಕ್ಕೆ ಮೂರುಸಾವಿರದ ಐನೂರು ರ‍್ಷಗಳ ಇತಿಹಾಸವಿದೆ.ದ್ವಾದಶ ಜ್ಯೋತರ‍್ಲಿಂಗಗಳಲ್ಲಿ ಇದೂ ಒಂದಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಭಕ್ತಿ ಮತ್ತು ಶ್ರದ್ಧೆಗಳಿಂದ ಸ್ಮರಿಸಲಾಗುವ ಕ್ಷೇತ್ರ ಕಾಶಿ.

ಅಯೋಧ್ಯಾ ಮಥುರಾ ಕಾಶಿ ಕಾಂಚಿ ಅವಂತಿಕಾ|
ಪುರಿದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ|

ಇಲ್ಲಿ ಎಲ್ಲ ಜೀವಿಗಳಿಗೆ ಮೋಕ್ಷ ಪ್ರಾಪ್ತಿ ಎನ್ನುವ ದೃಢವಾದ ನಂಬಿಕೆ ಭಾರತೀಯರಲ್ಲಿ ಹಾಸುಹೊಕ್ಕಾಗ…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Budget ರಾಜ್ಯ ಬಜೆಟ್ ಚುನಾವಣೆ ಟಾರ್ಗೆಟ್

0

Budget 2023-24ನೇ ಸಾಲಿನ ರಾಜ್ಯ ಬಜೆಟ್ ಅನ್ನ ಹಣಕಾಸು ಖಾತೆಯನ್ನು ನಿರ್ವಹಿಸುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದರು. ಬಜೆಟ್ ಮಂಡನೆಯ ಪ್ರಮುಖ ಅಂಶಗಳು ಹೀಗಿವೆ.

ಗ್ರಾಮ ಪಂಚಾಯಿತಿಗೆ 22 ಲಕ್ಷ ರೂ.ನಿಂದ 60 ಲಕ್ಷ ರೂ. ವರೆಗೆ ಅನುದಾನ ನೀಡಲು 780 ಕೋಟಿ ರೂ. ಅನುದಾನ ನೀಡಲಾಗುವುದು. ರಸ್ತೆ ಹಾಗೂ ಮೂಲಸೌಕರ್ಯ ವೃದ್ಧಿಗಾಗಿ ಈ ಅನುದಾನ ನೀಡಿಕೆ..
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ. ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತರಣೆ, ಇದಕ್ಕಾಗಿ ಹೆಚ್ಚುವರಿ 141 ಕೋಟಿ ರೂ. ಅನುದಾನ..

Budgetಸರ್ಕಾರಿ ಪ್ರಥಮ ದರ್ಜೆ ಎಂಜಿನಿಯರಿಂಗ್ ಮತ್ತು ಐಐಟಿ ಕಾಲೇಜುಗಳ ಮೂಲಕ ವಿಶೇಷ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಕ್ರಮತೆಗೆದುಕೊಳ್ಳಲಾಗಿದೆ.

ಪದವಿ ಶಿಕ್ಷಣವನ್ನು ಮುಗಿಸಿ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ‘ಯುವಸ್ನೇಹಿ’ ಯೋಜನೆಯಡಿ ತಲಾ 2,000 ರೂ. ಗಳ ಒಂದು ಬಾರಿಯ ಆರ್ಥಿಕ ನೆರವು.

ಬದುಕುವ ದಾರಿಗೆ 1500 ಕೋಟಿ ರೂಪಾಯಿ ಯೋಜನೆ.

ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ. ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತರಣೆ, ಇದಕ್ಕಾಗಿ ಹೆಚ್ಚುವರಿ 141 ಕೋಟಿ ರೂ. ಅನುದಾನ.

ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿಧ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದವರಿಗೆ ಐಐಟಿಯಲ್ಲಿ ಮೂರು ತಿಂಗಳ ವೃತ್ತಿಪರ ತರಬೇತಿ ಪಡೆಯಲು ಮೂರು ತಿಂಗಳ ಕಾಲ ಮಾಸಿಕ 1,500 ರೂ. ಶಿಷ್ಯವೇತನ ನೀಡಲಾಗುವುದು.

ತರಬೇತಿ ಪೂರ್ಣಗೊಂಡವರಿಗೆ ಅಪ್ರೈಂಟಿಸ್ಶಿಪ್ ಕಾರ್ಯಕ್ರಮದಡಿ 3 ತಿಂಗಳು 1,500 ರೂ.

ಕನ್ನಡದ ಖ್ಯಾತ ನಟ ದಿವಂಗತ ಶ್ರೀ ಶಂಕರನಾಗ್ ಅವರ ಹೆಸರಿನಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ನಿವೇಶನಗಳನ್ನು ಗುರುತಿಸಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನು ನಿರ್ಮಾಣ.

ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂ. ಒಟ್ಟಾರೆ 15,752 ಕೋಟಿ ರೂ. ಗಳನ್ನು ರೈತರ ಖಾತೆಗೆ ನೇರ ಜಮೆ.

1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ 120 ಕಿ.ಮೀ. ರಸ್ತೆಗೆ ವೈಟ್ ಟಾಪಿಂಗ್, ಬೆಂಗಳೂರಿನ 300 ಕಿ.ಮೀ. ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ. ಅನುದಾನ ನೀಡಲಾಗುವುದು.

ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಸುತ್ತಮುತ್ತ ರಸ್ತೆ ಅಭಿವೃದ್ಧಿ, ಟ್ರಾಫಿಕ್‌ ಕಂಟ್ರೋಲ್‌ಗೆ 300 ಕೋಟಿ ರೂ. ಅನುದಾನ.ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣಾ ಕಾಮಗಾರಿಗಳಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲನಿಧಿ ಎಂಬ ಯೋಜನೆಯನ್ನು ಪ್ರಾರಂಭ. ನರೇಗಾ ಯೋಜನೆಯ ಸಮನ್ವಯದೊಂದಿಗೆ ಜಲಹೊಂಡವನ್ನು ನಿರ್ಮಿಸಲು ಪ್ರೋತ್ಸಾಹ.

ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ.ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ಯೋಜನೆಯನ್ನು ವಿಸ್ತರಣೆ, ಇದಕ್ಕಾಗಿ ಹೆಚ್ಚುವರಿ 141 ಕೋಟಿ ರೂ. ಅನುದಾನ.

ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಗಳ ಸಹಾಯ ಧನವನ್ನು ಡಿ.ಬಿ.ಟಿ. ಮೂಲಕ ನೀಡಲಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Thirtahalli ತೀರ್ಥಹಳ್ಳಿಯ ಶೇಡ್ಗಾರಿನಲ್ಲಿ ಸಂಚಾರಿ ಚಿತ್ರಮಂದಿರ ಆರಂಭ

0

Thirtahalli ತೀರ್ಥಹಳ್ಳಿಯಲ್ಲಿ ಅಪರೂಪದ ಚಿತ್ರಮಂದಿರ. ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಸಂಚಾರಿ ಚಿತ್ರಮಂದಿರ ಆರಂಭಗೊಂಡಿದೆ. ಫೆ.16ರಂದು “ಕೃಷ್ಣ ಸಂಚಾರಿ ಟಾಕೀಸ್” ಅದ್ದೂರಿಯಾಗಿ ಆರಂಭಗೊಂಡಿದೆ.

Thirtahalli ಶೇಡ್ಗಾರಿನ ಚಲನಚಿತ್ರ ನಟ, ನಿರ್ದೇಶಕ ಪ್ರಶಾಂತ್ ಶೆಟ್ಟಿ ಅವರು ನೂತನ ಪ್ರಯೋಗವನ್ನ ಆರಂಭಿಸಿದ್ದಾರೆ.

ಕೃಷ್ಣ ಸಂಚಾರಿ ಟಾಕೀಸ್ ನಲ್ಲಿ ಪ್ರತಿದಿನ ಶೋ ನಡೆಯುತ್ತದೆ. ಹಾಗೆಯೇ ಪ್ರಶಾಂತ್ ಕೆ ಶೆಟ್ಟಿ ಇವರ ನಟನೆ, ನಿರ್ದೇಶನದ ನಾನ್ ರೌಡಿ ಚಲನಚಿತ್ರವು ಪ್ರದರ್ಶನಗೊಳ್ಳಲಿದೆ.

ಈ ನೂತನ ಪ್ರಯತ್ನಕ್ಕೆ ಜನ ಬೆಂಬಲ ತುಂಬಾ ಅಗತ್ಯ. ಆದ್ದರಿಂದ ದಯಮಾಡಿ ಕೃಷ್ಣ ಸಂಚಾರಿ ಟಾಕೀಸ್ ಗೆ ಹೆಚ್ಚೆಚ್ಚು ಜನರು ಆಗಮಿಸಿ ಚಲನಚಿತ್ರಗಳನ್ನ ವೀಕ್ಷಿಸಬೇಕು ಎಂದು ಪ್ರಶಾಂತ್ ಕೆ ಶೆಟ್ಟಿ ಅವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

AIR ನವುಲೆಯಲ್ಲಿ ಭದ್ರಾವತಿ ಬಾನುಲಿಯಿಂದ ರೇಡಿಯೊ ಕಿಸಾನ್ ದಿವಸ್ ಕಾರ್ಯಕ್ರಮ

0

AIR ಆಕಾಶವಾಣಿ ಭದ್ರಾವತಿಯು ದಿನಾಂಕ 20.02.2023ರ ಸೋಮವಾರದಂದು ಬೆಳಿಗ್ಗೆ 10 ಗಂಟೆಯಿಂದ ‘ರೇಡಿಯೋ ಕಿಸಾನ್ ದಿನ’ದ ಕಾರ್ಯಕ್ರಮವನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನವುಲೆ ಆವರಣ, ಶಿವಮೊಗ್ಗದ
ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

AIR ಈ ಕಾರ್ಯಕ್ರಮದ ಉದ್ಘಾಟನೆಯನ್ನ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳು ನೆರವೇರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಚಾರಮಂಡನೆಗಳು – ಸಭಿಕರೊಂದಿಗೆ ವಿಚಾರ ವಿನಿಮಯ ಸೇರಿ;
1. ಅಡಿಕೆ ಎಲೆಚುಕ್ಕೆ ರೋಗದ ಕುರಿತು ಡಾ. ನಾಗರಾಜಪ್ಪ ಅಡಿವೆಪ್ಪರ್, ವಿಜ್ಞಾನಿಗಳು, ಅಡಿಕೆ ಸಂಶೋಧನ ಕೇಂದ್ರ, ಇವರು ಮಾತನಾಡಲಿದ್ದಾರೆ.

2. ರಾಸುಗಳಲ್ಲಿ ಚರ್ಮಗಂಟು ರೋಗದ ಕುರಿತು – ಡಾ. ಶಂಭುಲಿಂಗಪ್ಪ ಬಿ ಈ, ಪ್ರಾದ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ಮಾಹಿತಿ ನೀಡಲಿದ್ದಾರೆ.

3. ಮೌಲ್ಯವರ್ಧಿತ ಕೃಷಿ ಸಂಬಂಧಿತ ವಿಷಯಗಳ ಕುರಿತು (ಸೆಕೆಂಡರಿ ಅಗ್ರಿಕಲ್ಚರ್) – ಡಾ. ಪಿ. ರಮೇಶ್ ಕುಮಾರ್, ಜಂಟಿ ಕೃಷಿ ನಿರ್ದೇಶಕರು, ಚಿತ್ರದುರ್ಗ – ಇವರು ಮಾತನಾಡಲಿದ್ದಾರೆ.

ಈ ಕಾರ್ಯಕ್ರಮವನ್ನು ಆಕಾಶವಾಣಿ ಭದ್ರಾವತಿಯು, ಕೃಷಿ ತಂತ್ರಜ್ಞರ ಸಂಸ್ಥೆ, ಶಿವಮೊಗ್ಗ ಹಾಗು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸಿದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Puc College ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ವಿಭಾಗ ತೆರೆಯಲು ಅನುಮತಿಗೆ ಅರ್ಜಿ ಆಹ್ವಾನ

0

Puc College ಪದವಿಪೂರ್ವ ಶಿಕ್ಷಣ ನಿಯಮಗಳು 2006 ರ ನಿಯಮ 11(3)&(4) ರನ್ವಯ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಖಾಸಗಿ ಅನುದಾನಿತ/ಶಾಶ್ವತ ಅನುದಾರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ/ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳನ್ನು 2023-24 ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸುವ ಇಚ್ಚಿಸುವ ಕಾಲೇಜುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Puc College ಖಾಸಗಿ ಅನುದಾನಿತ/ಶಾಶ್ವತ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಇಲಾಖೆಯ ವೆಬ್‍ಸೈಟ್ www.pue.karnataka.gov.in ಇಲ್ಲಿ 2023-24 new combination/language and additional section applicationಲಿಂಕನ್ನು ಬಳಸಿ ಅರ್ಜಿಯನ್ನ ಮಾರ್ಚ್ 31 ರೊಳಗೆ ಸಲ್ಲಿಸಬಹುದು.

ಈ ಸಂಬಂಧ ಸುತ್ತೋಲೆ ಮತ್ತು ವೇಳಾಪಟ್ಟಿಯನ್ನು ಇಲಾಖಾ ಜಾಲತಾಣದಿಂದ ಪಡೆಯಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Navika newspaper ಶಿವಮೊಗ್ಗ ನಾವಿಕ ಪತ್ರಿಕೆಗೆ ಆಂದೋಲನ ಪ್ರಶಸ್ತಿ

0

Navika newspaper ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿಯಿಂದ ಆದೋಲನ ಪ್ರಶಸ್ತಿ ಯನ್ನು ನಾವಿಕ ಕನ್ನಡ ದಿನಪತ್ರಿಗೆ ನೀಡಿರುವುದು ಪತ್ರಿಕಾ ತಂಡದ ನಿರಂತರ ಕ್ರಿಯಾಶೀಲತೆಗೆ ಸಂದ ಪ್ರತಿಫಲ ಎಂದು ಭಾವಿಸುವೆ ಎಂದು ಉಪಸಂಪಾದಕರಾದ ಎಸ್.ಆರ್ ರಂಜಿತ್ ರಂಗಸ್ವಾಮಿಯವರು ತಿಳಿಸಿದರು.

Navika newspaper ಅವರು ಜೆಸಿಐ ಶಿವಮೊಗ್ಗ ಶರಾವತಿ ಪೌಂಡೇಶನ್ ಹಾಗೂ ಘಟಕದ ವತಿಯಿಂದ ಜಂಟಿ ಆಶ್ರಯದಲ್ಲಿ ನಗರದ ಶುಭಂ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪತ್ರಿಕೆ ಎಂಬುದು ಅಸಾಧಾರಣವಾದ ಹೆಜ್ಜೆಗಳು, ಅದರ ಮೂಲ ಮೌಲ್ಯ ಉಳಿಸಿಕೊಂಡು ವೃದ್ದಿಸಿಕೊಂಡು ಹೋಗುವುದು ಸಾಹಸವೇ ಹೌದು. ಈ ಪ್ರಯತ್ನ ತಂದೆಯವರ ಕಾಲದಲ್ಲಿಯು ಇತ್ತು ಇದೀಗಲೂ ಇದೆ ಹೀಗಾಗಿ ನಾವಿಕ ಎನ್ನುವುದು ಮಲೆನಾಡಿನಲ್ಲಿ ತನ್ನದೇ ಛಾಪು ಮೂಡಿಸಿದ ಮೊಹರಾಗಿದೆ ಎಂದು ಎಸ್.ಆರ್ ರಂಜಿತ್ ರಂಗಸ್ವಾಮಿಯವರು ಹೇಳಿದರಲ್ಲದೆ ನಾಗರೀಕ ಸಂಸ್ಥೆಯಾದ ನಿಮ್ಮ ಪೌಂಡೇಶನ್ ಹಾಗೂ ಘಟಕ ಒಟ್ಟಾಗಿ ಅಭಿನಂದನೆ ಸಲ್ಲಿಸಿ ಗೌರವಿಸಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಈ ಸಂದರ್ಭದಲ್ಲಿ ನುಡಿದರು.

ಪೌಂಡೇಶನ್ ಮ್ಯಾನೇಜ್ಮಂಟ್ ಟ್ರಸ್ಟಿಯಾದ ಜ್ಯೋತಿ ಅರಳಪ್ಪನವರು ಮಾತನಾಡಿ ನಾವಿಕ ಎರೆಡೆರೆಡು ತಲೆಮಾರುಗಳ ಕಂಡ ಶಿವಮೊಗ್ಗದ ಹೆಮ್ಮೆಯ ದಿನಪತ್ರಿಕೆ, ಅಕ್ಷರದ ಮೊಳೆ ಜೋಡಿಸುವ ಕಾಲದಿಂದ ತಾಂತ್ರಿಕ ಅಭಿವೃದ್ದಿಗಳ ಬದಲಾದ ಈ ಕಾಲದ ತನಕವೂ ತನ್ನ ಮೇರು ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ.

ಉತ್ತಮ ಸುದ್ದಿ, ಸಾಮಾಜಿಕ ಕಾರ್ಯಕ್ರಮಗಳಿಗೆ ಉತ್ತೇಜನ, ನೀಡುತ್ತಿರುವ ನಾವಿಕ ದಿನಪತ್ರಿಕೆ ಅನೇಕ ಸ್ಪರ್ಧಾತ್ಮಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿಯೇ ತನ್ನ ಹೆಸರನ್ನು ಉಳಿಸಿಕೊಂಡು ಬಂದಿದೆ, ಹೀಗಾಗಿ ಅವರಿಗೆ ಆಂದೋಲನಾ ಪ್ರಶಸ್ತಿ ಲಭಿಸಿದೆ ಎಂದು ಅಭಿಪ್ರಾಯಿಸುತ್ತೇನೆ ಮುಂದಿನ ದಿನಗಳಲ್ಲಿ ನಾವಿಕ ಪತ್ರಿಕೆ ಪ್ರಾದೇಶಿಕ ಪತ್ರಿಕೆಯಾಗಿ ರೂಪುಗೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಜ್ಯೋತಿ ಅರಳಪ್ಪನವರು ತಿಳಿಸಿದರು.

ಘಟಕದ ಅಧ್ಯಕ್ಷರಾದ ಜೆಸಿ.ಶೋಭಾ ಸತೀಶ್‌ರವರು ಮಾತನಾಡಿ ನಾವಿಕ ಕನ್ನಡ ದಿನಪತ್ರಿಕೆ ಕಛೇರಿ ಗಾಂಧಿಬಜಾರಿನಲ್ಲಿದ್ದ ಸಂದರ್ಭದಲ್ಲಿ ಅತೀವ ಕುತೂಹಲದಿಂದ ನಾವು ನೋಡುವುದಕ್ಕೆ ತೆರಳುತ್ತಿದ್ವಿ ಏಕೆಂದರೆ ಕಛೇರಿ ನಮ್ಮ ಮನೆಯ ಹತ್ತಿರವೇ ಇತ್ತು, ಅಕ್ಷರದ ಮೊಳೆ ಜೋಡಿಸುವುದು, ನಂತರ ಮುದ್ರಿಸುವುದು ಹೇಗೆ ಎನ್ನುವುದು ನೋಡುವ ಕಾತುರತೆಗಳಿದ್ದವು, ಇದೀಗ ಎಲ್ಲವೂ ಬದಲಾಗಿದೆ, ಮ್ಯಾನ್ಯುಯಲ್ ನಿಂದ ಗಣಕಿಕೃತಗೊಂಡಿದೆ. ಅಂದು ಕೂಡ ಶಿವಮೊಗ್ಗ ಜನತೆಗೆ ನಾವಿಕ ದಿನಪತ್ರಿಕೆ ಓದುವ ಹವ್ಯಾಸಕ್ಕೆ ಒಳಗಾಗಿದ್ದರು ಒಂದು ಪತ್ರಿಕೆಯೊಳಗಿನ ಸಂಗತಿಗಳು ತಿಳಿದುಕೊಳ್ಳುವುದಾಗಿತ್ತು.

ಅಂತಹ ಉತ್ಸುಕತೆಯನ್ನು ನಾವಿಕ ಕನ್ನಡ ದಿನಪತ್ರಿಕೆ ಈ ತಾಂತ್ರಿಕತೆಯ ಬದಲಾಗುವ ಎಲ್ಲಾ ಸಂದರ್ಭದಲ್ಲಿಯೂ ತನ್ನ ಸಾರ್ವಜನಿಕ ಗುರಿ ಸಡಿಲಿಸಿಲ್ಲ, ಕರ್ನಾಟಕ ಮಾಧ್ಯಮ ಆಕಾಡೆಮಿಯವರು ಕೊಟ್ಟಿರುವ ಆಂದೋಲನಾ ಪ್ರಶಸ್ತಿ ಮೌಲ್ಯಾಧಾರಿತ ಪತ್ರಿಕೆಗೆ ನೀಡಿದೆ ಎಂದು ಭಾವಿಸಿ ಘಟಕ ಹಾಗೂ ಪೌಂಡೇಶನ್‌ನಿಂದ ಅಭಿನಂದಿಸುತ್ತೇನೆ ಎಂದರು.

ನಂತರ ಆಂದೋಲನಾ ಪ್ರಶಸ್ತಿ ಗೆ ಭಾಜನರಾದ ನಾವಿಕ ಕನ್ನಡ ದಿನಪತ್ರಿಕೆಯ ಉಪಸಂಪಾದಕರಾದ ಎಸ್.ಆರ್ ರಂಜೀತ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು

ಕಾರ್ಯಕ್ರಮದ ವೇದಿಕೆಯಲ್ಲಿ ಪತ್ರಕರ್ತರಾದ ಹೆಚ್.ಎನ್ ಮಂಜುನಾಥ್, ರೈತ ಸಂಘದ ಮುಖಂಡರಾದ ಸತೀಶ್ ಶಿರಾಳಕೊಪ್ಪ, ಪೌಂಡೇಶನ್ ಕಾರ್ಯದರ್ಶಿ ಟ್ರಸ್ಟಿಯಾದ ಗಾರಾ.ಶ್ರೀನಿವಾಸ್, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ.ಸಿದ್ದರಾಮರವರುಗಳು ಉಪಸ್ಥಿತರಿದ್ದರು.
ಹಾಗೂ ಸಮಾರಂಭದಲ್ಲಿ ಎಲ್ಲಾ ಜೆಸಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.