Monday, April 6, 2026
Monday, April 6, 2026
Home Blog Page 1301

Reporting ನೊಂದ ಮಹಿಳೆಯರ ಕುರಿತ ವರದಿಗಾರಿಕೆ ಬಗ್ಗೆ ಮಾಧ್ಯಮಗಳಿಗೆ ಜಾಗೃತಿ ಮಾಹಿತಿ

0

Reporting ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಶೇಷವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಪತ್ರಕರ್ತರು ಈ ಹಿಂದೆ ‘ಮೊದಲು ತಮ್ಮ ಪತ್ರಿಕೆಯಲ್ಲಿ, ಸುದ್ದಿ ವಾಹಿನಿಯಲ್ಲಿ ಪ್ರಕಟಿಸುವ ಸ್ಪರ್ಧಾ ಹುಮ್ಮಸ್ಸಿನಲ್ಲಿ ಎಲ್ಲಾ ವಿವರಗಳನ್ನು ಪ್ರಕಟಿಸಿದ ನಂತರ ಕಾನೂನಿನ ಕ್ರಮಕ್ಕೆ ಒಳಗಾಗಿದನ್ನು ನೋಡಿದ್ದೇವೆ.

ಇಂತಹ ಪ್ರಕರಣಗಳಲ್ಲಿ ಪತ್ರಕರ್ತರು ಅದರಲ್ಲೂ ದೃಶ್ಯ ಮಾಧ್ಯಮದವರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿಯನ್ನು ಮಾಡುವಾಗ ಕಾನೂನಿನಲ್ಲಿ ತಮಗಿರುವ ಸೀಮಿತ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ವರದಿ ಮಾಡುವುದು ಅತ್ಯಗತ್ಯ. ಒಂದು ವೇಳೆ ಮಾಧ್ಯಮದವರು ತಿಳಿದೋ ಅಥವಾ ನಿರ್ಲಕ್ಷ್ಯತನದಿಂದಲೋ ನೊಂದ ಮಹಿಳೆಯ ಗುರುತನ್ನು ಪ್ರಕಟಿಸಿದರೆ ಅದು ಭಾರತ ದಂಡ ಸಂಹಿತ ಕಲಂ 228ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.

Reporting ಮಹಿಳೆಯರ ಮೇಲಿನ ದೌರ್ಜನ್ಯ ಇತರೆ ಪ್ರಕರಣಗಳ ವರದಿ ಮಾಡುವಾಗ ಕಾನೂನು ಅಂಶಗಳನ್ನು ಪರಿಗಣಿಸಿದಾಗ, ವರದಿಗಾರರ ಮೇಲೆ ಹಾಗೂ ಮಾಧ್ಯಮಗಳಮೇಲೆ ಗುರುತರವಾದ ಜವಾಬ್ದಾರಿ ಇರುವುದು ಸ್ಪಷ್ಟವಾಗುತ್ತದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಕುರಿತಂತೆ ವರದಿಗಾರರು ಕಡ್ಡಾಯವಾಗಿ ಈ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ನೊಂದ ಮಹಿಳೆಯ ಪರಿಚಯ ಹಾಗೂ ಗುರುತನ್ನು ಯಾವುದೇ ಕಾರಣಕ್ಕೂ ಮಾಧ್ಯಮಗಳಲ್ಲಿ ಬಹಿರಂಗ ಪಡಿಸತಕ್ಕುದಲ್ಲ.

ಕೆಲವು ಚಾಣಾಕ್ಷ ವರದಿಗಾರರು ನೇರವಾಗಿ ಹೆಸರನ್ನು ವಿಳಾಸಗಳನ್ನು ಬಹಿರಂಗಪಡಿಸದೇ ಪರೋಕ್ಷವಾಗಿ ನೊಂದ ಮಹಿಳೆಯ ಗುರುತುಗಳನ್ನು ಬಹಿರಂಗಪಡಿಸುವುದನ್ನು ನಾವು ಕಾಣಬಹುದು.

ಉದಾಹರಣೆಗೆ ನೊಂದ ಮಹಿಳೆಯ ಊರಿನ ಅಥವಾ ಗ್ರಾಮದವರ ಹೇಳಿಕೆಗಳನ್ನು ಪ್ರಸಾರ ಮಾಡುವುದು. ಮಹಿಳೆಯ ಊರು, ಕೇರಿ ಹಾಗೂ ಇವುಗಳು ಕಾಣುವಂತಹ ಬಸ್ ನಿಲ್ದಾಣ, ಗ್ರಾ.ಪಂ, ದೇವಸ್ಥಾನ ಇತ್ಯಾದಿಗಳನ್ನು ವರದಿ ಮಾಡುವುದನ್ನೂ ಸಹ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿದಂತಾಗುತ್ತದೆ.

ಇಲ್ಲಿ ‘ಗುರುತು’ ಎನ್ನುವ ಶಬ್ದವನ್ನು ಕೇವಲ ಸೀಮಿತವಾಗಿ ಅರ್ಥೈಸಿಕೊಳ್ಳದೇ ನೊಂದ ಮಹಿಳೆಯು ವಾಸಿಸುವ ಊರು, ಕೇರಿ, ಸಂಬಂಧಿಕರ ವಿವರಗಳು, ಸ್ನೇಹಿತರ ವಿವರಗಳನ್ನು ಬಹಿರಂಗಪಡಿಸುವುದನ್ನೂ ಸಹ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿದಂತಾಗುತ್ತದೆ.

ನಿಪುಣ್ ಸಕ್ಸೇನಾ ಮತ್ತು ಎಎನ್‍ಆರ್ ವಿರುದ್ದ ಯೂನಿಯನ್ ಆಫ್ ಇಂಡಿಯಾ & ಓಆರ್‍ಎಸ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನಂತೆ ಅಭಿಪ್ರಾಯಪಟ್ಟಿರುತ್ತದೆ.

ಒಂದು ವೇಳೆ ವರದಿಯ ಪೂರ್ಣ ಪ್ರಮಾಣದ ಚಿತ್ರಣಕ್ಕೆ ನೊಂದ ಮಹಿಳೆಯ ಗುರುತನ್ನು ಬಹಿರಂಗ ಪಡಿಸಲೇಬೇಕಾದ ಅನಿವಾರ್ಯತೆ ಕಂಡು ಬಂದಲ್ಲಿ ಆಗ, ಈ ಕಾನೂನೇ ವರದಿಗಾರರಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನಿರ್ದಿಷ್ಟಪಡಿಸಿದೆ.

ಮೊದಲು ವರದಿಗಾರರು ಸಂಬಂಧಿಸಿದ ಠಾಣಾಧಿಕಾರಿ ಅಥವಾ ತನಿಕಾಧಿಕಾರಿಗಳನ್ನು ಕಂಡು ಅವರಿಂದ ತನಿಖೆಗೆ ಅಡ್ಡಿಯಾಗದ ರೀತಿಯಲ್ಲಿ ವರದಿ ಮಾಡುವುದಾಗಿ ಮನವರಿಕೆ ಮಾಡಿಕೊಟ್ಟ ನಂತರ ಆ ಠಾಣಾಧಿಕಾರಿ/ತನಿಖಾಧಿಕಾರಿಯಿಂದ ಲಿಖಿತವಾಗಿ ಮಾಹಿತಿ ಹಾಗೂ ಅನುಮತಿ ಕೇಳಿ ಪಡೆಯಬೇಕು.

ಒಂದು ವೇಳೆ, ಪ್ರಕರಣವನ್ನು ಬೇಧಿಸಿದ ಮೇಲೆ, ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಟಿ ನಡೆಸಿದಾಗ, ಪೂರೈಸಿದ ಸುದ್ದಿ ವರದಿಯನ್ನು ತಮ್ಮ ವರದಿಗೆ ಆಧಾರವನ್ನಾಗಿಸಬಹುದು. ಆದರೆ ಆ ವರದಿಯಲ್ಲಿ ಇಲ್ಲದ ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸಿ, ಪೊಲೀಸ್ ಅಧಿಕಾರಿಗಳೇ ಸುದ್ದಿಗೋಷ್ಟಿಯಲ್ಲಿ ಬಹಿರಂಗಪಡಿಸಿದ್ದಾರೆಂಬ ರಕ್ಷಣೆಯನ್ನು ಪಡೆಯಲು ಬರುವುದಿಲ್ಲ. ಆದ್ದರಿಂದ ವರದಿಗಾರರು ಈ ಕಾನೂನಿನ್ವಯ ತನಿಖಾಧಿಕಾರಿ/ಠಾಣಾಧಿಕಾರಿಯ ಲಿಖಿತವಾಗಿ ರುಜು ಮಾಡಿ ನೀಡಿದ ಮಾಹಿತಿಯನ್ನು ಪಡೆದು ನೊಂದ ಮಹಿಳೆಯ ಗುರುತನ್ನು ಬಹಿರಂಗಪಡಿಸುವುದು ಸೂಕ್ತ.

ಈ ಕಾನೂನಿನ ಇನ್ನೊಂದು ಅವಕಾಶದಂತೆ, ವರದಿಗಾರರು ಒಂದು ವೇಳೆ ಠಾಣಾಧಿಕಾರಿ/ತನಿಖಾಧಿಕಾರಿಯ ಲಿಖಿತ ಅನುಮತಿ ಹಾಗೂ ಮಾಹಿತಿ ದೊರೆಯದೇ ಇದ್ದಾಗ ಅಥವಾ ಪಡೆಯುವ ಬದಲು, ಸ್ವತಃ ನೊಂದ ಮಹಿಳೆಯಿಂದಲೇ ರುಜು ಮಾಡಿದ ಲಿಖಿತ ಅನುಮತಿ ಮೇರೆಗೆ ಆ ನೊಂದ ಮಹಿಳೆ ನೀಡಿದ ಅವಳ ಗುರುತಿನ ಮಾಹಿತಿಗಳನ್ನು ಮಾತ್ರ ತಮ್ಮ ವರದಿಗಳಲ್ಲಿ ಬಹಿರಂಗ ಪಡಿಸಬಹುದು.

ಒಂದು ವೇಳೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮರಣ ಹೊಂದಿದ್ದರೆ, ಅಪ್ರಾಪ್ತ ಬಾಲಕಿಯಾಗಿದ್ದರೆ ಅಥವಾ ಬುದ್ದಿ ಮಾಂದ್ಯಳಾಗಿದ್ದಲ್ಲಿ ಆಗ ಕಡ್ಡಾಯವಾಗಿ ಆ ಮಹಿಳೆಯ ಸಂಬಂಧಿಕರ ಅಥವಾ ಪೋಷಕರಿಂದ ಲಿಖಿತವಾಗಿ ಮಾಹಿತಿ ಪಡೆಯಬೇಕು. ಒಂದು ವೇಳೆ ಆ ನೊಂದ ಮಹಿಳೆ ಯಾವುದಾದರೂ ಅಧಿಕೃತ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದರೆ ಆಗ ಆ ಸಂಸ್ಥೆಯ ಕಾರ್ಯದರ್ಶಿ ಅಥವಾ ಅಧ್ಯಕ್ಷರ ಲಿಖಿತ ಅನುಮತಿ ಅತ್ಯಗತ್ಯ.

ತನಿಖಾಧಿಕಾರಿಯು ಪ್ರಕರಣ ಪೂರ್ಣ ತನಿಖೆಯ ನಂತರ, ಆರೋಪಿಯ ವಿರುದ್ದ ಸಲ್ಲಿಸುವ ಅಂತಿಮ ವರದಿ ಅಥವಾ ದೋಷಾರೋಪಣ ವರದಿಗಳಲ್ಲಿಯೂ ಸಹ ನೊಂದ ಮಹಿಳೆಯ ಗುರುತುಗಳನ್ನು ಬಹಿರಂಗಪಡಿಸಬಾರದು. ತನಿಖಾಧಿಕಾರಿಯೂ ಸಹ ನೊಂದ ಮಹಿಳೆಯ ಗುರುತನ್ನು ಸೀಲು ಮಾಡಿದ ಲಕೋಟೆಯಲ್ಲಿರಿಸಿ ವರದಿಗಳಲ್ಲಿ ಮಾರ್ಪಡಿಸಿದ ಹೆಸರನ್ನು ಮಾತ್ರ ಉಲ್ಲೇಖಿಸಬೇಕು.

ಒಂದು ಬಾರಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದ ನಂತರ ವರದಿಗಾರರು ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ನೊಂದ ಮಹಿಳೆಯ ಗುರುತನ್ನು ವರದಿ ಮಾಡತಕ್ಕುದಲ್ಲ. ಇನ್ನು ಇದೇ ವಿಷಯವನ್ನು ಪೋಕ್ಸೋ ಅಧಿನಿಯಮಕ್ಕೆ ಸಂಬಂಧಿಸಿದಂತೆ ಕಾರ್ಯವಿಧಾನ-(1) ಯಾರೇ ವ್ಯಕ್ತಿಯು, ಮಗುವಿನ ಗುಣ ಚಾರಿತ್ರ್ಯಕ್ಕೆ ಧಕ್ಕೆ ತರುವ ಅಥವಾ ಮಗುವಿನ ಏಕಾಂತತೆಗೆ ಭಂಗ ಉಂಟು ಮಾಡಬಹುದಾದಂತಹ ಪರಿಣಾಮವುಳ್ಳ ಯಾವುದೇ ವರದಿಯನ್ನು ಅಥವಾ ಅಭಿಪ್ರಾಯವನ್ನು ಅದರ ಬಗ್ಗೆ ಅಥವಾ ಅವುಗಳ ಬಗ್ಗೆ ಪರಿಪೂರ್ಣವಾದ ಹಾಗೂ ವಿಶ್ವಾಸಾರ್ಹವಾದ ಮಾಹಿತಿ ಇಲ್ಲದೆಯೇ ಯಾವುದೇ ಬಗೆಯ ಮಾಧ್ಯಮದಿಂದ ಅಥವಾ ಸ್ಟುಡಿಯೋದಿಂದ ಅಥವಾ ಛಾಯಾಚಿತ್ರ ಸೌಲಭ್ಯಗಳಿರುವ ಕಡೆಯಿಂದ ಮಗುವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಅಂತಹ ಯಾವುದೇ ವರದಿಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯಗಳನ್ನುಪ್ರಸ್ತುತಪಡಿಸತಕ್ಕದ್ದಲ್ಲ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

SHIVAMOGGA ಶಿವಮೊಗ್ಗದಲ್ಲಿ ಕಾಯಕ ಶರಣರ ಜಯಂತಿ

0

SHIVAMOGGA ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾಯಕ ಶರಣರ ಜಯಂತಿಯನ್ನು ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಯಿತು.

ಜಿಲ್ಲಾಡಳಿತದ ಪರವಾಗಿ ಭದ್ರಾವತಿ ತಹಶೀಲ್ದಾರರಾದ ಸನ್ಮಾನ್ಯ ಶ್ರೀ ಪ್ರದೀಪ್‌ ರವರು ಉದ್ಘಾಟಿಸಿ, ಸಮಾಜ ಬಾಂಧವರಿಗೆ ಶುಭ ಹಾರೈಸಿದರು.

SHIVAMOGGA ಇಲಾಖಾ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್‌ ಹೆಚ್.‌, ಮಾನ್ಯ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾದ ಶ್ರೀ ದೀಪಕ್‌, ಸಮಾಜದ ಮುಖಂಡರಾದ ಶ್ರೀ ಹಾಲೇಶಪ್ಪ, ಶ್ರೀ ಏಳುಕೋಟಿ, ಸಮಾಜ ಬಾಂಧವರು,ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.

ಕಾಯಕ ಶರಣರರ ಉಪನ್ಯಾಸವನ್ನು ಪ್ರೊಫೆಸರ್ ಮೇಟಿ ಮಲ್ಲಿಕಾರ್ಜುನ್‌,‌ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗರವರು ನೀಡಿದರು.

ಇಲಾಖೆಯ ಶ್ರೀ ಮಂಜೋಜಿರಾವ್ ಸರ್ವರನ್ನೂ ಸ್ವಾಗತಿಸಿ ವಂದಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ವಿವಿಧ ಇಲಾಖೆಗಳ ಅನುದಾನ ಹಿಂದಿರುಗಿಸದೇ ಸೂಕ್ತ ಬಳಸಿ ನಿಗದಿತ ಅವಧಿಯೊಳಗೆ ಯೋಜನೆ ಪೂರೈಸಿ- ಡಾ.ಸೆಲ್ವಕುಮಾರ್

0

Shivamogga ವಿವಿಧ ಇಲಾಖೆಗಳ ಯೋಜನೆಗಳಿಗೆ ನೀಡುವ ಅನುದಾನವನ್ನು ಸರ್ಕಾರಕ್ಕೆ ಹಿಂದಿರುಗಿಸದೆ ಸೂಕ್ತವಾಗಿ ಬಳಸಿಕೊಂಡು ನಿಗದಿತ ಸಮಯದೊಳಗೆ ನಿರೀಕ್ಷಿತ ಪ್ರಗತಿ ಸಾಧಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಸೇಲ್ವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

Shivamogga  ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ 2023ರ ಜನವರಿ ಅಂತ್ಯದೊಳಗಿನ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಿಗೆ ಅಗತ್ಯವಿರುವ ಔಷಧಗಳ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಔಷಧ ಖರೀದಿ ಪ್ರಕ್ರಿಯೆ ವಿಳಂಬವಾಗದಂತೆ ಹಾಗೂ ಸಕಾಲದಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಔಷಧ ಸರಬರಾಜು ಮಾಡುವ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ಮಿಸಬೇಕಾಗಿರುವ ಎರಡು ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಎರಡು ತಿಂಗಳ ಒಳಗೆ ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳಿಸುವಂತೆ ಡಿ ಡಿ ಪಿ ಐ ಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ , ಜಿಲ್ಲಾ ಪಂಚಾಯತ್ ಸಿಇಒ ಎನ್.ಡಿ. ಪ್ರಕಾಶ್, ಪ್ರೊಬೆಷನಲ್ ಜಿಲ್ಲಾಧಿಕಾರಿ ದಲ್ ಜಿತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಶಿವಮೊಗ್ಗದಲ್ಲಿ ಮಂತ್ರಾಲಯ ಆಡಳಿತದ ಶ್ರೀರಾಯರ ಮಠ ಸ್ಥಾಪನೆ ಬಗ್ಗೆ ಪೂರ್ವಸಿದ್ಧತಾ ಸಭೆ

0

Shivamogga  ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ಇರುವ ಛಾಯಾದೇವಿ ಸಭಾಂಗಣದಲ್ಲಿ ನಗರದ ಬೊಮ್ಮನಕಟ್ಟೆ ದೇವಂಗಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಉದ್ಘಾಟನಾ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯನ್ನು ನಡೆಸಲಾಯಿತು.

ಈ ಸಭೆಯು ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರು, ಮಾಜಿ ಉಪಮುಖ್ಯಮಂತ್ರಿಗಳು,ಕ್ಷೇತ್ರದ ಶಾಸಕರಾದ ಶ್ರೀ ಕೆ ಎಸ್ ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಮಠದ ಪರವಾಗಿ ಕನಕವೀಡು ಗಿರೀಶ್ ರವರು ಮಠದ ನಿರ್ಮಾಣದ ಬಗ್ಗೆ ಮಾನ್ಯ ಈಶ್ವರಪ್ಪನವರ ಹಾಗೂ ಪೂಜ್ಯ ಸ್ವಾಮೀಜಿಗಳ ಒಟ್ಟಾರೆ ಅಪೇಕ್ಷೆ ಮತ್ತು ಆಸಕ್ತಿ ಬಗ್ಗೆ ಮಾಹಿತಿ ನೀಡಿದರು.

Shivamogga  ಸಂಸ್ಥೆಯ ಸಂಚಾಲಕರಾದ ಮಧುಸೂದನರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಠದ ಉದ್ಘಾಟನಾ ಕಾರ್ಯಕ್ರಮದ ಸಂಪೂರ್ಣ ವಿವರಣೆ ಮತ್ತು ನಿರ್ವಹಿಸಬೇಕಾದ ಜವಾಬ್ದಾರಿ ಹಾಗೂ ಅದಕ್ಕೆ ಸರ್ವರ ಸಹಕಾರ ಕೋರಿದರು.

ಖಜಾಂಚಿಯಾದ ಕೆ. ಈ. ಕಾಂತೇಶ್ ಅವರು ಕಾರ್ಯಕ್ರಮದ ಯಶಸ್ವಿಗೆ ಸಹಕಾರ ಕೋರಿದರು.ಈ ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯದ ಪ್ರಮುಖರು, ಭಜನಾ ಪರಿಷತ್ತಿನ ಪ್ರಮುಖರು ಪಾಲ್ಗೊಂಡಿದ್ದು ಉಪಸ್ಥಿತರಿದ್ದ ಹಲವು ಪ್ರಮುಖರ ಸಲಹೆ ಸೂಚನೆಗಳನ್ನು ಪಡೆದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sarji Foundation ಸರ್ಜಿ ಫೌಂಡೇಷನ್ ಮೂಲಕ ಶಿವರಾತ್ರಿ ಪ್ರಯುಕ್ತ ರುದ್ರಾಕ್ಷಿ ವಿತರಣೆ

0

Sarji Foundation ಶಿವಮೊಗ್ಗ ಸರ್ಜಿ ಫೌಂಡೇಶನ್‌ ವತಿಯಿಂದ ತೀರ್ಥಹಳ್ಳಿ ರಸ್ತೆಯ ಹರಕೆರೆ ರಾಮೇಶ್ವರ ದೇವಸ್ಥಾನ, ಶಿವಮೊಗ್ಗ ಶ್ರೀ ಭೀಮೇಶ್ವರ ದೇವಸ್ಥಾನ, ವೀರಶೈವ ಕಲ್ಯಾಣ ಮಂದಿರದ ಬಳಿ ಇರುವ ಶಿವಾಲಯ, ವಿನೋಬನಗರ ಶಿವಾಲಯ ಸೇರಿದಂತೆ ನಾನಾ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ರುದ್ರಾಕ್ಷಿಯನ್ನು ವಿತರಿಸಲಾಯಿತು.

ವಿಶೇಷ ರುದ್ರಾಕ್ಷಿ ವಿತರಿಸಿದ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಅವರು ಮಾತನಾಡಿ, ಶಿವನ ಆನಂದಭಾಷ್ಪದಿಂದ ಸೃಷ್ಟಿಯಾದ ಮರದಿಂದ ಬಂದ ರುದ್ರಾಕ್ಷಿ. ವೈಜ್ಞಾನಿಕವಾಗಿ ಈ ರುದ್ರಾಕ್ಷಿಗೆ ಬಿಪಿ ಕಡಿಮೆ ಮಾಡುವಂತಹ ಗುಣವೂ ಇದೆ. ನಮ್ಮ ಕುಂಡಲಿ ಶಕ್ತಿ ಹೆಚ್ಚು ಮಾಡುತ್ತೆ, ಹಾಗಾಗಿ ಈ ರುದ್ರಾಕ್ಷಿ ಧಾರಣೆ ಜನರಿಗೆ ಉತ್ತಮ. ಹಾಗಾಗಿ ನಾನು ಉತ್ತಮ ತಳಿ ರುದ್ರಾಕ್ಷಿಗೆ ತಾಮ್ರದ ತಂತಿಯನ್ನು ಹಾಕಿಸಿ ಜನರಿಗೆ ವಿತರಣೆ ಮಾಡಿರುವುದಾಗಿ ಎಂದರು.

Sarji Foundation ಶಿವರಾತ್ರಿ ನಮಗೆ ವಿಶಿಷ್ಟವಾದಂತಹ ಆಚರಣೆ. ಈ ದಿನ ಶಿವನು ಪಾರ್ವತಿ ಮದುವೆಯಾದ ದಿನ ಎಂದು ಹೇಳುತ್ತಾರೆ. ಇನ್ನು ಶಿವ ವಿಷ ಕಂಠನಾದಾಗ ಪಾರ್ವತಿ ಗಂಟಲನ್ನ ಹಿಡಿದು ವಿಷ ಮುಕ್ತ ಮಾಡಿ ಪ್ರಾಣ ಉಳಿಸಿದ ದಿನವೂ ಶುಭರಾತ್ರಿ ಎಂದು ಹೇಳಲಾಗುತ್ತೆ. ಇಂದು ಜನರೆಲ್ಲ ಉಪವಾಸ ಇದ್ದು ಪೂಜೆ ಮಾಡಿ ರಾತ್ರಿ ಜಾಗರಣೆ ಮಾಡುತ್ತಾರೆ. ಶಿವನೆಂದರೆ ನಿರಾಭರಣ ಅಲಂಕಾರ ರಹಿತ. ಇದೊಂದು ಉತ್ತಮ ಸಂದೇಶ ನೀಡುವ ದಿನವಾಗಿದೆ. ಹಾಗಾಗಿ ಈ ಪುಣ್ಯ ದಿನದಂದು ನಾವು ರುದ್ರಾಕ್ಷಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಶಿವನ ದರ್ಶನಕ್ಕೆ ಬಂದ ಭಕ್ತರಿಗೆ ರುದ್ರಾಕ್ಷಿಯನ್ನು ವಿತರಿಸುವ ಮೂಲಕ ಡಾ.ಧನಂಜಯ ಸರ್ಜಿ ಅವರು ಶುಭ ಕೋರಿದರು.
ಮುಂಜಾನೆಯಿಂದಲೇ ಸಾವಿರಾರು ಭಕ್ತರು ಶಿವ ದರ್ಶನ ಪಡೆದು ಕೃಪೆಗೆ ಪಾತ್ರರಾದರು.

ರುದ್ರಾಕ್ಷಿಯು ದೇಹಕ್ಕೆ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ, ದೇಹ, ಮನಸ್ಸು ಮತ್ತು ಆತ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವಿಶೇಷ ಶಕ್ತಿಯನ್ನು ಹೊರ ಸೂಸುವ ಮೂಲಕ ಏಕಾಗ್ರತೆಯನ್ನು ಸುಧಾರಿಸುತ್ತದೆ, ಹಾನಿಕಾರಕ ಗ್ರಹಗಳ ಪರಿಣಾಮಗಳನ್ನು ತೆಗೆದು ಹಾಕುತ್ತದೆ. ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ, ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಚಕ್ರಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಸಂಭವನೀಯ ಕಾಯಿಲೆಗಳನ್ನು ತಡೆದು ಹಾಕುತ್ತದೆಂಬ ನಂಬಿಕೆ ಇದೆ.

ಶಿವಮೊಗ್ಗ ಸರ್ಜಿ ಫೌಂಡೇಶನ್‌ ವತಿಯಿಂದ ತೀರ್ಥಹಳ್ಳಿ ರಸ್ತೆಯ ಹರಕೆರೆ ರಾಮೇಶ್ವರ ದೇವಸ್ಥಾನ, ಶಿವಮೊಗ್ಗ ಶ್ರೀ ಭೀಮೇಶ್ವರ ದೇವಸ್ಥಾನ, ವೀರಶೈವ ಕಲ್ಯಾಣ ಮಂದಿರದ ಬಳಿ ಇರುವ ಶಿವಾಲಯ, ವಿನೋಬನಗರ ಶಿವಾಲಯ ಸೇರಿದಂತೆ ನಾನಾ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ರುದ್ರಾಕ್ಷಿಯನ್ನು ವಿತರಿಸಲಾಯಿತು.

ವಿಶೇಷ ರುದ್ರಾಕ್ಷಿ ವಿತರಿಸಿದ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಅವರು ಮಾತನಾಡಿ, ಶಿವನ ಆನಂದಭಾಷ್ಪದಿಂದ ಸೃಷ್ಟಿಯಾದ ಮರದಿಂದ ಬಂದ ರುದ್ರಾಕ್ಷಿ. ವೈಜ್ಞಾನಿಕವಾಗಿ ಈ ರುದ್ರಾಕ್ಷಿಗೆ ಬಿಪಿ ಕಡಿಮೆ ಮಾಡುವಂತಹ ಗುಣವೂ ಇದೆ. ನಮ್ಮ ಕುಂಡಲಿ ಶಕ್ತಿ ಹೆಚ್ಚು ಮಾಡುತ್ತೆ, ಹಾಗಾಗಿ ಈ ರುದ್ರಾಕ್ಷಿ ಧಾರಣೆ ಜನರಿಗೆ ಉತ್ತಮ. ಹಾಗಾಗಿ ನಾನು ಉತ್ತಮ ತಳಿ ರುದ್ರಾಕ್ಷಿಗೆ ತಾಮ್ರದ ತಂತಿಯನ್ನು ಹಾಕಿಸಿ ಜನರಿಗೆ ವಿತರಣೆ ಮಾಡಿರುವುದಾಗಿ ಎಂದರು.

ಶಿವರಾತ್ರಿ ನಮಗೆ ವಿಶಿಷ್ಟವಾದಂತಹ ಆಚರಣೆ. ಈ ದಿನ ಶಿವನು ಪಾರ್ವತಿ ಮದುವೆಯಾದ ದಿನ ಎಂದು ಹೇಳುತ್ತಾರೆ. ಇನ್ನು ಶಿವ ವಿಷ ಕಂಠನಾದಾಗ ಪಾರ್ವತಿ ಗಂಟಲನ್ನ ಹಿಡಿದು ವಿಷ ಮುಕ್ತ ಮಾಡಿ ಪ್ರಾಣ ಉಳಿಸಿದ ದಿನವೂ ಶುಭರಾತ್ರಿ ಎಂದು ಹೇಳಲಾಗುತ್ತೆ. ಇಂದು ಜನರೆಲ್ಲ ಉಪವಾಸ ಇದ್ದು ಪೂಜೆ ಮಾಡಿ ರಾತ್ರಿ ಜಾಗರಣೆ ಮಾಡುತ್ತಾರೆ. ಶಿವನೆಂದರೆ ನಿರಾಭರಣ ಅಲಂಕಾರ ರಹಿತ. ಇದೊಂದು ಉತ್ತಮ ಸಂದೇಶ ನೀಡುವ ದಿನವಾಗಿದೆ. ಹಾಗಾಗಿ ಈ ಪುಣ್ಯ ದಿನದಂದು ನಾವು ರುದ್ರಾಕ್ಷಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

Shimogga Airport ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟ ರೈತರಿಗೆ ಪರಿಹಾರ ನೀಡಿ ಉದ್ಘಾಟನೆ ಮಾಡಿ-ತೀ.ನಾ.ಶ್ರೀನಿವಾಸ್

0

Shimogga Airport  ಜಿಲ್ಲೆಯ ಸಂಸದ, ಶಾಸಕರಿಗೆ ಆತ್ಮಸಾಕ್ಷಿ ಇದ್ದರೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿಮಾನ ನಿಲ್ದಾಣ ಉದ್ಘಾಟ ನಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಹಕ್ಕು ಪತ್ರ ಕೊಡಿಸಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿ ಪ್ರಮುಖರಾದ ತಿ.ನಾ. ಶ್ರೀನಿವಾಸ್ ಆಗ್ರಹಿಸಿದರು.

Shimogga Airport  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯ ಸರಕಾರ ಮಲೆನಾಡಿನ ಸಮಸ್ಯೆಗಳ ಬಗ್ಗೆ ಗಂಭೀರವಾಗಿಲ್ಲ. ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಈವರೆಗೆ ಪರಿಹಾರ ನೀಡಿಲ್ಲ.. ಇವರೆಲ್ಲರಿಗೂ ಪರಿಹಾರ ನೀಡಿ, ನಂತರ ವಿಮಾನ ನಿಲ್ದಾಣ ಉದ್ಘಾಟನೆ ಮಾಡಬೇಕು ಎಂದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಬಂದಾಗ ಮಲೆನಾಡಿನ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರು. ಆದರೆ, ಆ ಎಲ್ಲ ಭರವಸೆಗಳು ಹುಸಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದ ಸರಕಾರವಿ ದ್ದರೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿ ಸಲು ಆಗಿಲ್ಲ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಪ್ರೀತ್‌ ನಾಯ್ಕ, ಕುಮಾರ್ ನಾಯ್ಕ್, ತೀರ್ಥಾ ನಾಯ್ಕ್ ಮತ್ತು ಜೈ ರಾಮ್ , ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga ಬಾಹುಸಾರ ಕ್ಷತ್ರಿಯ ಸಮಾಜ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದ ಪ್ರತೀಕ- ಡಾ.ಧನಂಜಯ ಸರ್ಜಿ

0

Shivamogga  ಭಾವಸಾರ ಸಮಾಜ ಸ್ವಾಭಿಮಾನದ ಪ್ರತೀಕವಾಗಿದ್ದು, ನಾಡಿಗೆ ಅದರ ಕೊಡುಗೆ ಅಪಾರ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ಶ್ರೀ ಹಿಂಗುಲಾಂಬಿಕಾ ಮಹಿಳಾ ವಿಕಾಸ ವೇದಿಕೆಯ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Shivamogga ಪರಶುರಾಮ ಮಹಾರಾಜರು ಕ್ಷತ್ರಿಯ ವಂಶವನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಾಗ ಉಳಿದ ಇಬ್ಬರು ಯೋಧರೆಂದರೆ, ಬಾಹು ಮತ್ತು ಸಾರ. ಇವರಿಬ್ಬರು ತಮ್ಮ ಪ್ರಾಣ ರಕ್ಷಣೆಗಾಗಿ ಹಿಂಗುಲಾಂಬಿಕಾ ದೇವಿಯ ಆಶ್ರಯ ಪಡೆದ ಇವರಿಂದ ನಂತರ ಕ್ಷತ್ರಿಯ ವಂಶ ವೃದ್ಧಿಯಾಯಿತು ಎಂಬುದು ಇತಿಹಾಸಗಳಿಂದ ತಿಳಿದು ಬರುತ್ತದೆ.

ನಂತರ ಬಟ್ಟೆ ಹೊಲಿಯುವುದು, ಮತ್ತು ಬಟ್ಟೆ ವ್ಯಾಪಾರ ಮಾಡುವುದು ಬಹುಮುಖ್ಯ ಕಸುಬಾಗಿಸಿಕೊಂಡು ಅತ್ಯಂತ ಸ್ವಾಭಿಮಾನ ಹಾಗೂ ಆತ್ಮಸ್ಥೆರ್ಯದೊಂದಿಗೆ ಅಭಿವೃದ್ಧಿ ಹೊಂದುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಸಮಾಜದ ಮಹಿಳಾ ಬಂಧುಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯತೆಯೊಂದಿಗೆ ಸಮರ್ಥವಾಗಿ ಮುನ್ನಡೆಸಿಕೊಂಡು ಒಗ್ಗಟ್ಟಿನೊಂದಿಗೆ ಸಂಸ್ಥೆ ಬೆಳೆಯುತ್ತಿರುವುದು ಶ್ಲಾಘನೀಯ ಎಂದರು.

ಈ ಬೆಳ್ಳಿ ಮಹೋತ್ಸವ ಅಂಗವಾಗಿ ಹೊರ ತರಲಾಗಿರುವ ಸ್ಮರಣ ಸಂಚಿಕೆ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಅದರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ, ಭಾವಸಾರ ಸಮಾಜದ ಆಚಾರ-ವಿಚಾರ, ಸಂಪ್ರದಾಯ ಆಚರಣೆಗಳ ಬಗ್ಗೆ ಅಭಿವ್ಯಕ್ತಿಸಲಾಗಿದೆ. ಸನಾತನ ಧರ್ಮದ ಆಚರಣೆಗಳಿಗೂ ವೈಜ್ಞಾನಿಕ ಕಾರಣವಿದೆ. ಈ ಆಚರಣೆಗಳ ಬಗ್ಗೆ ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಿರುವುದು ಅಭಿನಂದನೀಯ ಎಂದರು.

ಈ ಸಂದರ್ಭ ಡಾ.ಧನಂಜಯ ಸರ್ಜಿ ಅವರು ಸನ್ಮಾನ ಸ್ವೀಕರಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು.

ಹಿಂಗುಲಾಂಬಿಕಾ ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾದ ವಾಣಿ ಸತೀಶ್ಚಂದ್ರ ಕಮಿತ್‌ಕರ್‌, ಉಪಾಧ್ಯಕ್ಷೆ ರೋಹಿಣಿ ಪುರುಷೋತ್ತಮ್, ಕಾರ್ಯದರ್ಶಿ ಶೀಲಾ ಕೆ. ಮೂರ್ತಿ, ಜಂಟಿ ಕಾರ್ಯದರ್ಶಿ ವೀಣಾ ಗೋಪಾಲಕೃಷ್ಣ ರಂಗದೋಳ್‌ ಅವರೇ, ಖಜಾಂಚಿ ಗೌರಿ ಆತ್ಮ ರಂಗದೊಳ್‌, ಭಾವಸಾರ ವಿಕಾಸ ವೇದಿಕೆಯ ಅಧ್ಯಕ್ಷರಾದ ಗೋಪಾಲಕೃಷ್ಣ ರಂಗದೋಳ್‌, ಭಾವಾಸಾರ ಶ್ರೀರಾಮ ಸೇವಾ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾದ ಓಂಪ್ರಕಾಶ್‌ ತೇಲ್ಕರ್‌, ಭದ್ರಾವತಿ ಭಾವಸಾರ ಸಮಾಜದ ಅಧ್ಯಕ್ಷರಾದ ರಾಘವೇಂದ್ರ ರಾವ್ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Forest Department ಕಾಡ್ಗಿಚ್ಚು ನಂದಿಸಲು ಹೋದ ವನಪಾಲಕ ತೀರ್ಥಹಳ್ಳಿ ಸುಂದರೇಶ್ ದಾರುಣ ಸಾವು

0

Forest Department  ಹಾಸನದ ಸಕಲೇಶಪುರದ ಕಾಡ್ಗಿಚ್ಚು ನಂದಿಸಲು ತೆರಳಿದ್ದ ತೀರ್ಥಹಳ್ಳಿ ತಾಲೂಕು ಕೊಂಡ್ಲುರು ಸಮೀಪದ ಹೊಸ ಮನೆ ಸಂಪಿಗೆ ಸರದ ಅರಣ್ಯ ಇಲಾಖೆ ವನಪಾಲಕ ಸುಂದರೇಶ್ (40) ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅವರ ಪಾರ್ಥಿವ ಶರೀರವನ್ನು ತೀರ್ಥಹಳ್ಳಿಗೆ ಜೀರೋ ಟ್ರಾಫಿಕ್ ಮೂಲಕ ತರಲಾಗುತ್ತದೆ ಎಂದು ತಿಳಿದುಬಂದಿದೆ.

Forest Department ಕಳೆದ ಎರಡು ದಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದ ಸುರೇಶ್ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನ ಹೆಚ್ಚಿನ ಚಿಕಿತ್ಸೆಗಾಗಿ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು. ಶುಕ್ರವಾರ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೆ ರಾಜ್ಯ ಗೃಹ ಸಚಿವ ಆರಗ ಜ್ಞಾನಂದ್ರ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕ ಎಚ್ ಕೆ ಕುಮಾರಸ್ವಾಮಿ ಭೇಟಿ ನೀಡಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಹೊಂದಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Theatre ಶಿವಮೊಗ್ಗದ ನಮ್ಮ ಹಳ್ಳಿ ಥಿಯೇಟರ್ ನಿಂದ ವಿವಿಧ ಪ್ರಶಸ್ತಿಗಳ ವಿತರಣೆ

0

Theatre ನಮ್ಮ ಹಳ್ಳಿ ಥಿಯೇಟರ್ (ರಿ), ಶಿವಮೊಗ್ಗ ವತಿಯಿಂದ ಕೊಡಲಾಗುವ ವರ್ಷದ ‘ರಂಗಸಾಧಕ’ ಮತ್ತು ‘ಸಮಾಜಸೇವಕ’ ಪ್ರಶಸ್ತಿ ವಿತರಣೆಯನ್ನು ಫೆಬ್ರವರಿ 26ರ ಭಾನುವಾರ ಸಂಜೆ 6:15ಕ್ಕೆ ನಗರದ ಸುವರ್ಣ ಸಾಂಸ್ಕೃತಿಕ ಭವನ, ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ವರ್ಷದ ರಂಗ ಸಾಧಕ -2022ರ ಪ್ರಶಸ್ತಿಯನ್ನು ಹೆಸರಾಂತ ರಂಗಕರ್ಮಿ, ರಂಗ ಸಮಾಜದ ಸದಸ್ಯರಾದ ಶ್ರೀಮತಿ ದಾಕ್ಷಾಯಿಣ ಭಟ್.ಎ ರವರು ಭಾಜನರಾಗಿದ್ದಾರೆ.

Theatre ರಂಗಭೂಮಿಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಮೊದಲು ಈ ಪ್ರಶಸ್ತಿಗೆ ಎಸ್ ಮಾಲತಿ, ಪುರುಷೋತ್ತಮ್ ತಲವಾಟ, ಡಾ. ಎಂ ಗಣೇಶ್, ಎಸ್ ಎಂ ಸೇತುರಾಮ್ ಭಾಜನರಾಗಿದ್ದರು.
ಈ ಬಾರಿಯ ವರ್ಷದ ‘ಸಮಾಜಸೇವಕ -2022’ ನೇ ಪ್ರಶಸ್ತಿಯನ್ನು ಶಿವಮೊಗ್ಗದ ಹೆಸರಾಂತ ದಂತ ವೈದ್ಯರಾದ ಹಾಗೂ ರೆಡ್ ಕ್ರಾಸ್ ಕರ್ನಾಟಕ ಶಾಖೆಯ ಉಪಾಧ್ಯಕ್ಷರಾದ ಡಾ. ವಿ.ಎಲ್.ಎಸ್. ಕುಮಾರ್ ರವರು ಭಾಜನರಾಗಿದ್ದಾರೆ.

ಸಮಾಜ ಸೇವೆ ಮತ್ತು ಆಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ಕೊಡ ಮಾಡಲಾಗುತ್ತಿದೆ. ಈ ಮೊದಲು ಈ ಪ್ರಶಸ್ತಿಯನ್ನು ಪದ್ಮಶ್ರೀ ಹಾಜಬ್ಬ, ಡಾ. ರಜನಿ ಎ. ಪೈ, ಶ್ರೀಯುತ ಸಂದೇಶ ಜವಳಿ, ಭಾಜನರಾಗಿದ್ದರು.
ನಮ್ಮ ಹಳ್ಳಿ ಥಿಯೇಟರ್ (ರಿ) ತಂಡದ ದಶಮಾನೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.

ಸಭಾಕಾರ್ಯಕ್ರಮದ ನಂತರ ನಟಮಿತ್ರರು(ರಿ) ತೀರ್ಥಹಳ್ಳಿ ಕಲಾವಿದರು ಅಭಿನಯಿಸುವ ಬಹು ಬೇಡಿಕೆಯ ರಾಜ್ಯ ಪ್ರಶಸ್ತಿ ಪಡೆದ ನಾಟಕ “ತುರುಬ ಕಟ್ಟುವ ಹದನ” ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಮತ್ತು ಪ್ರವೇಶ ಉಚಿತವಿರುತ್ತದೆ ಎಂದು ತಂಡದ ಅಧ್ಯಕ್ಷರಾದ ಪ್ರವೀಣ.ಎಸ್ ಹಾಲ್ಮತ್ತೂರ್ ಮತ್ತು ಕಾರ್ಯದರ್ಶಿ, ಚೇತನ್ ಕುಮಾರ್ ಸಿ ರಾಯನಹಳ್ಳಿ ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

DCC Bank ಶಿವಮೊಗ್ಗ ಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳ ಸಂದರ್ಶನ ದಿನಾಂಕ ಬದಲಾಯಿಸಲಾಗಿದೆ

0

DCC Bank ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ ಇಲ್ಲಿ ಖಾಲಿ ಇರುವ ಕಿರಿಯ ಸಹಾಯಕರು/ನಗದು ಗುಮಾಸ್ತರು/ಕ್ಷೇತ್ರಾಧಿಕಾರಿಗಳು, ಅಟೆಂಡರ್ ವಾಹನ ಚಾಲಕರ ಹಾಗೂ ಜಲಗಾರರ ಹುದ್ದೆಗಳಿಗೆ ಸಂದರ್ಶನ ದಿನಾಂಕವನ್ನು ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಿದೆ.

DCC Bank ಫೆ. 25 ಕ್ಕೆ ನಡೆಯಬೇಕಿದ್ದ ಸಂದರ್ಶನವನ್ನು ಫೆ. 28 ಕ್ಕೆ ಹಾಗೂ ಫೆ.26 ರಂದು ನಡೆಯಬೇಕಿದ್ದ ಸಂದರ್ಶನವನ್ನು ಮಾ.01 ರಂದು ನಡೆಸಲು ತೀರ್ಮಾನಿಸಲಾಗಿದೆ.

ಸಂಬಂಧಿಸಿದ ಅಭ್ಯರ್ಥಿಗಳಿಗೆ ಸಂದರ್ಶನ ಕರೆಯೋಲೆ ಕಳುಹಿಸಲಾಗಿದೆ. ಇನ್ನುಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.D