Monday, April 6, 2026
Monday, April 6, 2026
Home Blog Page 1300

Ayushman Card ಮುಂದಿನ ಮೂರು ತಿಂಗಳೊಳಗೆ ಎಲ್ಲರಿಗೂ ಆಯುಷ್ಮಾನ್ ಕಾರ್ಡ್-ಡಾ.ಸುಧಾಕರ್

0

Ayushman Card ಮುಂಬರುವ ಮೂರು ತಿಂಗಳೊಳಗೆ ನೋಂದಾಯಿತ ಎಲ್ಲರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಮಾಹಿತಿ ನೀಡಿದರು.

ತುರ್ತು ಸಂದರ್ಭದಲ್ಲಿ ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಯಾವುದೇ ದಾಖಲೆ ಇಲ್ಲದೆ ಇದ್ದರೂ ಚಿಕಿತ್ಸೆ ನೀಡಬೇಕು. ಈ ಸಂಬಂಧ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಇತರೆ ಸಿಬ್ಬಂದಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆಯಲ್ಲಿ ತಿಳಿಸಲಾಗಿದೆ.

Ayushman Card ವೈದ್ಯರ ಶಿಫಾರಸು ಪತ್ರದೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದು, ಈ ವ್ಯವಸ್ಥೆ ರದ್ದು ಮಾಡಲು ಸಾಧ್ಯವಿಲ್ಲ. ಶಿಫಾರಸು ಪತ್ರ ಇಲ್ಲದೆ ಚಿಕಿತ್ಸೆ ನೀಡಲು ಮುಂದಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಯಾರೂ ಬರಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 39.48 ಕೋಟಿ ಜನರಿಗೆ ಚಿಕಿತ್ಸೆ ನೀಡಲಾಗಿದೆ. 3000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Free bus pass to students and working women ಏಪ್ರಿಲ್ 1 ರಿಂದ ದುಡಿಯುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್- ಬೊಮ್ಮಾಯಿ

0

Free bus pass to students and working women  ಏಪ್ರಿಲ್‌ 1ರಿಂದ ದುಡಿಯುವ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್‌ ಸಿಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

Free bus pass to students and working women ವೋಲ್ವೋ ಅಂಬಾರಿ ಬಸ್‌ ಸೇವೆಗೆ ಚಾಲನೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮಾಹಿತಿ ನೀಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4 -9600 ಸ್ಲೀಪರ್ ಬಸ್’ಗಳನ್ನು ಲೋಕಾರ್ಪಣೆ ಮಾಡಲಾಯಿತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Service to Temple ಬ್ರಹ್ಮಕಲಶೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಣೆ

0

Service to Temple ಶ್ರೀ ಹಿರೇದೇವಿರಮ್ಮ ಬನಶ್ರೀ ಅಯ್ಯಪ್ಪ ಸ್ವಾಮಿ ಪುಣ್ಯ ಕ್ಷೇತ್ರ ಮೂಡಿಗೆರೆ ಬ್ರಹ್ಮ ಕಲಶೋತ್ಸವದ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಲೆಯಾಳಿ ಸಮಾಜ ಸೇವಾ ಸಂಘದ ವತಿಯಿಂದ ಕಳಸ ಪಟ್ಟಣದಲ್ಲಿ ಭಕ್ತರಿಂದ ಹೊರೆ ಕಾಣ ಕೆ ಸಮರ್ಪಣೆಯ ಆಮಂತ್ರಣ ಪತ್ರಿಕೆಯನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ|| ಸಿ.ಆರ್.ಮೋಹನ್ ಕುಮಾರ್ ಬಿಡುಗಡೆಗೊಳಿಸಿದರು.

Service to Temple ಈ ಸಂದರ್ಭದಲ್ಲಿ ಮೂಡಿಗೆರೆ ಮಲೆಯಾಳಿ ಸಮಾಜದ ಅಧ್ಯಕ್ಷ ಸಿ.ವಿ.ಮಹೇಶ್, ಸಹ ಕಾರ್ಯದರ್ಶಿ ರಾಜೇಶ್, ಖಜಾಂಚಿ ಸುಧಾಕರ್, ಸಂಘಟನಾ ಕಾರ್ಯದರ್ಶಿ ಜಗನ್ ಮೋಹನ್, ಪ್ರಕಾಶ್, ಮೋಹನ್, ಅನಿಶ್, ಉನ್ನಿ ಕೃಷ್ಣನ್, ರಾಜು, ಎಂ.ಸಿ.ರವಿ, ಕಳಸ ತಾಲ್ಲೂಕು ಅಧ್ಯಕ್ಷ ಅಯ್ಯಪ್ಪನ್, ಖಜಾಂಚಿ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Importance of Books ವಿದ್ಯೆ ಕೇವಲ ಪುಸ್ತಕದ ಮಾಹಿತಿಯಲ್ಲ-ಡಾ.ಮೋಹನ್ ಕುಮಾರ್

0

Importance of Books ವಿದ್ಯೆ ಎಂಬುದು ಕೇವಲ ಪುಸ್ತಕದ ಮಾಹಿತಿಯಲ್ಲ ಬದಲಿಗೆ ವಿವೇಕ, ಪ್ರಜ್ಞೆ, ಬುದ್ದಿವಂತಿಕೆ ಹಾಗೂ ಸಂಸ್ಕೃತಿ ಕಲೆಯನ್ನು ಒಳಗೊಂಡಿರುವ ಸಾಧನ ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ|| ಸಿ.ಆರ್.ಮೋಹನ್ ಕುಮಾರ್ ಹೇಳಿದರು.

ಚಿಕ್ಕಮಗಳೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶ್ರೀ ಶಾರದಾ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿದ್ಯೆಯನ್ನು ಆರಾಧಿಸುವ ಮೂಲಕ ವಿದ್ಯೆ ವಿವೇಕಗಳನ್ನು ಪಡೆಯಲು ಸಾಧ್ಯ ಎಂಬ ನಂಬಿಕೆಯಿಂದ ಶಾರದದೇವಿಯನ್ನು ಪೂಜಿಸುತ್ತೇವೆ ಎಂದ ಅವರು ವಿದ್ಯೆ ಸಿದ್ದಿಸುವ ಮುಖ್ಯ ಗುರಿ ವಿನಯ, ಇದು ಒಂದು ತಪಸ್ಸು ಜೊತೆಗೆ ನಿರಂತರ ಕಠಿಣ ಶ್ರಮ ಅಗತ್ಯ. ಉತ್ತಮ ಗುರುವಿನ ಮಾರ್ಗದರ್ಶನದಿಂದ ಉತ್ತಮ ಜೀವನ ರೂಪಿಸಿಕೊ ಳ್ಳಬಹುದು ಎಂದರು.

Importance of Books ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಯ ಸದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಂಡು. ಜೊತೆಗೆ ಜೀವನದಲ್ಲಿ ಬಂದಂತಹ ಅವಕಾಶ ಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು ಎಂದರು.

ಶಾಲಾ ಸಮಿತಿ ಸದಸ್ಯ ರಿಜ್ವನ್ ಮಾತನಾಡಿ ವಿದ್ಯಾರ್ಥಿಗಳು ಕಲಿಕಾ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ಮಾತನಾಡಿ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ತಂದೆ ತಾಯಿ, ಗುರುಹಿರಿಯರನ್ನು ಗೌರವಿಸಿ ಜೀವನದಲ್ಲಿ ಯಾವುದೇ ದುಡುಕಿನ ನಿರ್ಧಾರವನ್ನು ಮಾಡಬಾರದು ಎಂದರು.

ಇದೇ ವೇಳೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಸಮಿತಿ ಸದಸ್ಯರಾದ ವಸಂತ್, ರೂಪ ಶ್ರೀ, ಚೈತ್ರಶ್ರೀ, ಪ್ರಮೀಳಾ, ಕವಿತಾ ಶಿಕ್ಷಕಿರಾದ ಶ್ರೀದೇವಿ, ಶುಭ, ಲಲಿತ, ನಾಗರತ್ನ, ರಂಜಿತಾ, ರೇಖಾ, ಶೈಲಾ, ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಸ್ವಾಗತಿಸಿದರು. ನಗ್ಮ್ ಬಾನು ವಂದಿಸಿದರು. ಪುರುಷೋತ್ತಮ ನಿರೂಪಿಸಿದರು‌.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Tippu Sultan ರಾಜಕಾರಣಿಗಳಿಗೆ ಇತಿಹಾಸದ ಬಗ್ಗೆ ಅರಿವಿರಬೇಕು

0

Tippu Sultan  ದೇಶಕ್ಕಾಗಿ ಪ್ರಾಣತ್ಯಾಗಗೈದ ಟಿಪ್ಪುಸುಲ್ತಾನ್ ಅವರ ಇತಿಹಾಸವನ್ನು ಅರಿಯದೇ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವಥ್ ನಾರಾಯಣ್ ಅವರನ್ನು ಕೂಡಲೇ ಸಂಪುಟ ದಿಂದ ಕೈಬಿಟ್ಟು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಹಜ್ಹರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಮಂಗಳವಾರ ಒತ್ತಾಯಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಜಂಶೀದ್ ಖಾನ್ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಸರ್ಕಾರ ಇದೀಗ ಒಂದನೇ ಸ್ಥಾನದಲ್ಲಿದ್ದರೂ ಕೂಡಾ ಅಭಿವೃದ್ದಿ ಶೂನ್ಯವಾಗಿದೆ. ಜನಪ್ರತಿನಿಧಿಯಾಗಿ ಸಮಾಜಕ್ಕೆ ಮಾದರಿಯಾಗುವಂತೆ ಕಾರ್ಯನಿರ್ವಹಿಸುವ ಬದಲು ಕೋಮು ಗಲಭೆಗಳನ್ನು ಸೃಷ್ಟಿಸುವ ಮಾತುಗಳನ್ನಾಡಿ ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

Tippu Sultan  ಚುನಾವಣೆ ಸಮೀಪಿಸುತ್ತಿದ್ದಂತೆ ವಿಷಪೂರಿತವಾಗಿ ಮಾತನಾಡುವ ಮೂಲಕ ಸಮಾಜವನ್ನು ಒಡೆಯುವುದೇ ಬಿಜೆಪಿ ಸಚಿವರ ಕಸುಬಾಗಿದೆ. ದೇಶದ ಇತಿಹಾಸದಲ್ಲಿ ಹೆಮ್ಮೆಯ ಹೆಸರನ್ನು ಪಡೆದುಕೊಂಡಿರುವ ಟಿಪ್ಪುಸುಲ್ತಾನ್ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆಗಳು, ಉತ್ತಮ ಅಭಿಪ್ರಾಯಗಳನ್ನು ಹೊಂದಿದ್ದು. ಇದರ ಅರಿವಿ ಲ್ಲದೇ ಬೇಕಾಬಿಟ್ಟ ಹೇಳಿಕೆ ನೀಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳಿಗೆ ಇತಿಹಾಸದ ಬಗ್ಗೆ ಅರಿವಿದ್ದರೆ ಬಹಿರಂಗ ಚರ್ಚೆಗೆ ಬಂದು ತಮ್ಮ ಶಕ್ತಿ ಪ್ರದರ್ಶನಗೊಳಿ ಸುವುದನ್ನು ಬಿಟ್ಟು ಟಿಪ್ಪು ಹೊಡೆದ ರೀತಿಯಲ್ಲೇ ಸಿದ್ದರಾಮಯ್ಯ ಹೊಡೆಯುತ್ತೇವೆ ಎಂದು ಹೇಳಿಕೆ ನೀಡಿ ಸಾಮರಸ್ಯ ಕದಡುವಲ್ಲಿ ಸಚಿವ ಅಶ್ವಥ್ ನಾರಾಯಣ್ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದ್ದಾರೆ.

ದಿನನಿತ್ಯ ಜನಸಾಮಾನ್ಯರ ಬದುಕಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ದಿನೋಪಯೋಗಿ ವಸ್ತುಗಳ ಬೆಲೆಏರಿಕೆ, ನಿರುದ್ಯೋಗ, ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಮನುಷ್ಯ ಇಂದು ಬದುಕಲಾರದ ಸ್ಥಿತಿಗೆ ತಲುಪಿಸಿದ್ದಾರೆ. ಧರ್ಮದ ಹೆಸರಿನಲ್ಲಿ ದೇಶದ ಚುನಾವಣೆ ನಡೆಸಿ ಶಾಂತಿ ಕದಡಲಾಗಿದೆ ಎಂದಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲೂ ಸಹ ರೈತರಿಗೆ ಯಾವುದೇ ಅನುಕೂಲಕರವಾದ ಭರವಸೆಗಳನ್ನು ನೀಡದೇ ಕೇವಲ ಚುನಾವಣೆ ಗಿಮಿಕ್‌ಗೆ ಒತ್ತು ನೀಡಿರುವ ಜನವಿರೋಧಿ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

MESCOM ಬಿ.ಬೀರನಹಳ್ಳಿಯಲ್ಲಿ ಮೆಸ್ಕಾಂ ವಿದ್ಯುತ್ ಅದಾಲತ್

0

MESCOM ಶಿವಮೊಗ್ಗ ತಾಲೂಕು ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಫೆ .28 ರ ಬೆಳಗ್ಗೆ 11:00 ಕ್ಕೆ ಮೆಸ್ಕಾಂ ವಿದ್ಯುತ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ.

MESCOM ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರು ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಹವಾಲನ್ನು ಸಲ್ಲಿಸುವಂತೆ ಮೆಸ್ಕಾಂ ಆಡಳಿತ ಮಂಡಳಿ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Training on poultry ದಾವಣಗೆರೆಯಲ್ಲಿ ಕೊಳಿ ಸಾಕಾಣಿಕೆ ಬಗ್ಗೆ ತರಬೇತಿ

0

Training on poultry ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ.ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಫೆಬ್ರವರಿ-2022ರ 23 ಮತ್ತು 24 ರಂದು ಕೋಳಿ ಸಾಕಾಣ ಕಾ ತರಬೇತಿಯನ್ನು ಆಯೋಜಿಸಿದ್ದು, ತರಬೇತಿಯಲ್ಲಿ ಭಾಗವಹಿಸಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.

Training on poultry ಈ ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ತರಬೇಕು.

ಹೆಚ್ಚಿನ ವಿವರಕ್ಕಾಗಿ ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ದೂ. ಸಂ.: 0819-233787 ನ್ನು ಸಂಪರ್ಕಿಸುವಂತೆ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Nidhi Apke nikat program ಶಿವಮೊಗ್ಗ ಮತ್ತು ಹರಿಹರದಲ್ಲಿ ನಿಧಿ ಆಪ್ ಕೆ ನಿಕಟ್ ಕಾರ್ಯಕ್ರಮ

0

Nidhi Apke nikat program  ನಿವೃತ್ತ ಜೀವನಕ್ಕೆ ಸಾಮಾಜಿಕ ಭದ್ರತೆ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರತಿ ತಿಂಗಳು 27ರಂದು ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಭವಿಷ್ಯ ನಿಧಿ ಸದಸ್ಯರ ಕುಂದುಕೊರತೆ ಹಾಗೂ ಅಹವಾಲು ಸ್ವೀಕರಿಸಲಾಗುತ್ತಿದೆ.

Nidhi Apke nikat program  27 ಫೆಬ್ರವರಿ 2023 ರಂದು ಬೆಳಿಗ್ಗೆ 1:00ರಿಂದ ಮಧ್ಯಾಹ್ನ 01:00ರವರೆಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಹಾಗೂ ಮಧ್ಯಾಹ್ನ 2:30 ರಿಂದ 4:00 ರವರೆಗೆ ಪಿಂಚಣಿದಾರರಿಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಾಚೇನಹಳ್ಳಿ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮತ್ತು ದಾವಣಗೆರೆ ಜಿಲ್ಲೆಯ ಹರಿಹರದ ಮಾರಿಯಾ ನಿವಾಸ ಹೈಸ್ಕೂಲ್ ಮಾತಾ ಬಸಲಿಕಾ ಚರ್ಚ್ ಕ್ಯಾಂಪಸ್, ಓಲ್ಸ್ ಪಿಬಿ ರಸ್ತೆ ಇಲ್ಲಿ ನಿಧಿ ಆಪ್ಕೆ ನಿಕಟ್ ಸಭೆ ನಡೆಸಲಾಗುತ್ತಿದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ತಿಳಿಸಿರುತ್ತಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sudhamurthy ಶಿವಮೊಗ್ಗದ ಸಮಾರಂಭದಲ್ಲಿ ಸುಧಾಮೂರ್ತಿ ಅವರಿಗೆ ವಿಜ್ಞಾತಂ ಪುರಸ್ಕಾರ ಅರ್ಪಣೆ

0

Sudhamurthy  ವಿಜ್ಞಾನ-ತಂತ್ರಜ್ಞಾನದ ನಡುವೆ ಜ್ಞಾನವನ್ನು ನೀಡಿದರೆ ವಿವೇಕ ಮೂಡುತ್ತದೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಮಂಡ್ಯ ಜಿಲ್ಲೆ ನಾಗಮಂಗಲದ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳವರ ಪಟ್ಟಾಭಿಷೇಕ ದಶಮಾನೋತ್ಸವ ಹಾಗೂ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವಿವೇಕ ರಹಿತ ವಿಜ್ಞಾನದ ಬಳಕೆ ಮನುಕುಲಕ್ಕೆ ಅಪಾಯಕಾರಿ ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿವೇಕಯುಕ್ತವಾಗಿ ಬಳಸಬೇಕು ಎಂದರು.

Sudhamurthy ವಿಜ್ಞಾನಿಗಳು ಹಲವು ವರ್ಷಗಳ ಕಾಲ ಶ್ರಮಪಟ್ಟು ಕಂಡು ಹಿಡಿದ ಸಂಶೋಧನೆಗಳನ್ನು ನಾವುಗಳು ಇಂದು ಬಳಸಿಕೊಳ್ಳುತ್ತಾ ವ್ಯವಸ್ಥಿತವಾದ ಮತ್ತು ಸುಖಮಯವಾದ ಜೀವನವನ್ನು ನಡೆಸುತ್ತಿದ್ದೇವೆ ಎಂದ ಅವರು, ನಮ್ಮ ಸಮಾಜದಲ್ಲ ಇರುವಂತಹ ಅನೇಕ ವ್ಯವಸ್ಥೆಗಳು ಮತ್ತು ಅನುಕೂಲತೆಗಳ ಹಿಂದೆ ಹಿರಿಯ ವಿಜ್ಞಾನಿಗಳ ಮತ್ತು ಸಂಶೋಧಕರ ಶ್ರಮ ಅಡಗಿದೆ ಎಂದರು.

ನಮ್ಮ ಹಿರಿಯ ವಿಜ್ಞಾನಿಗಳು ನೂರರಿಂದ ಸಾವಿರ ಬಾರಿ ಸಂಶೋಧನಾ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ತದ ನಂತರ ಯಶಸ್ಸನ್ನು ಗಳಿಸಿದ್ದಾರೆ. ಇದು ನಮ್ಮ ಕಂಡು ಮುಂದೆಯೇ ಇದೆ. ನಮ್ಮ ಪೋಷಕರು ತಮ್ಮ ಮಕ್ಕಳು ಒಂದು ವಿಷಯದಲ್ಲಿ ಅಂಕವನ್ನು ಕಡಿಮೆ ತೆಗೆದರೆ ಜೀವನವೇ ಮುಗಿದು ಹೋಯಿತು ಎಂಬಂತೆ ತಲೆಯ ಮೇಲೆ ಕೈ ಹೊತ್ತು ಕೂರುತ್ತಾರೆ. ಇದು ಆಗಬಾರದು ಹಲವು ವಿಫಲತೆಗಳ ಹಿಂದೆ ಮುಂದಿನ ಯಶಸ್ಸು ಅಡಗಿರುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.

ಕಾರ‍್ಯಕ್ರಮದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮೀಜಿರವರು, ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠಗಳ ಎಲ್ಲಾ ಪೂಜ್ಯ ಸ್ವಾಮೀಜಿರವರು, ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಇಲಾಖೆಯ ರಾಜ್ಯ ಸಚಿವ ಭಗವಂತ ಖೂಬಾ, ನಾಗಮಂಗಲ ಶಾಸಕ ಕೆ ಸುರೇಶಗೌಡರು, ಮೇಲುಕೋಟೆ ಶಾಸಕ ಸಿ ಎಸ್ ಪುಟ್ಟರಾಜು , ಆದಿಚುಂಚನಗಿರಿ ವಿ ವಿ ಉಪಕುಲಪತಿ ಡಾ.ಎಂ.ಎ.ಶೇಖರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಇದೇ ಶುಭ ಸಂದರ್ಭದಲ್ಲಿ ಪರಮಪೂಜ್ಯ ಮಹಾಸ್ವಾಮೀಜಿರವರು ಡಾ. ಸುಧಾಮೂರ್ತಿ ಅವರಿಗೆ ವಿಜ್ಞಾತಂ – 2023 ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಆಶೀರ್ವದಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Neglected newspaper distributers in State Budget ರಾಜ್ಯ ಬಜೆಟ್ಟಿನಲ್ಲಿ ಪತ್ರಿಕಾ ವಿತರಕರ ಬಗ್ಗೆ ಅಲಕ್ಷ್ಯ-ಮಾಲತೇಶ್

0

Neglect of Press Distributors in State Budget  2018 ರ ಬಡ್ಜೆಟ್ಟಿನಲ್ಲಿ ಪತ್ರಿಕಾ ವಿತರಕರಿಗಾಗಿ ‘ ‘ಕ್ಷೇಮಾಭಿವೃದ್ಧಿ ನಿಧಿ ‘ಎರಡು ಕೋಟಿ ಘೋಷಣೆ ಮಾಡಿದ್ದು ಬಿಟ್ಟರೆ ಅದರ ನಂತರ ಬಂದ ಸರ್ಕಾರಗಳು ಪತ್ರಿಕಾ ವಿತರಕರ ಬಗ್ಗೆ ಏನನ್ನು ಮಾಡಿರುವುದಿಲ್ಲ.

ನಾವುಗಳು ಅಂದರೆ ರಾಜ್ಯ ಒಕ್ಕೂಟ ಹಾಗೂ ಜಿಲ್ಲಾ ನಗರ ಸಂಘ ತಾಲೂಕು ಸಂಘಗಳು ಮುಖಂಡರುಗಳು ಸೇರಿ ಹಲವಾರು ಬಾರಿ ಮುಖ್ಯಮಂತ್ರಿಗಳ ಜಿಲ್ಲಾ ಉಸ್ತುವಾರಿ ಸಚಿವರಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೇವೆ.

Neglected newspaper  Distributors in State Budget ಈ ಸಲದ ಬಜೆಟ್ಟಿನಲ್ಲಿ ಪತ್ರಿಕಾ ವಿತರಕರಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದ್ದವು.

ಈ ಬಾರಿಯೂ ಏನನ್ನು ಘೋಷಣೆ ಮಾಡಿರುವುದಿಲ್ಲ ಹಾಗಾಗಿ ಪೂರಕ ಬಜೆಟ್ಟಿನಲ್ಲಿ ವಿತರಕರ ಮನವಿಯನ್ನು ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಆಶಾಭಾವನೆಯನ್ನು ಹೊಂದಿದ್ದೇವೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಎನ್. ಮಾಲತೇಶ್ ಪ್ರಧಾನ ಕಾರ್ಯದರ್ಶಿ ಮುಕ್ತರ ಅಹ್ಮದ್ ( ನಜೀರ್ ) ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.