Monday, April 6, 2026
Monday, April 6, 2026
Home Blog Page 1299

Music Program ವೀರೇಶ್ವರ ಪುಣ್ಯಾಶ್ರಮದಲ್ಲಿ ರಸಿಕರ ಮನಗೆದ್ದ ಸಂಗೀತ ಕಾರ್ಯಕ್ರಮ

0



Music Program  ಶಿವಮೊಗ್ಗ ನಗರದ ಸಾಗರ ರಸ್ತೆಯ ಡಾ. ಪಂಡಿತ ಪುಟ್ಟ ರಾಜಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠ ಶಾಲೆಯಲ್ಲಿ ಗಾನಲಹರಿ 85ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ನಿಮಿತ್ತ ಬನಾರಸ್‌ನ ತೇಜಸ್ವಿನಿ ವೆರೇಕರ್ ಅತಿಥಿ ಗಾಯನ ನಡೆಸಿಕೊಟ್ಟರು.

ವಾಗೇಶ್ವರಿ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ರಾಜ್ಯಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಿದ್ದರು.

Music Program  ಕೈಗಾರಿಕೋದ್ಯಮಿ ಉಮೇಶ್ ಶಾಸ್ತಿç ಹಾಗೂ ಸತೀಶ್ ಶಾಸ್ತ್ರಿ ಭಾಗವಹಿಸಿದ್ದರು.
ಹುಮಾಯೂನ್ ಹರ್ಲಾಪುರ್ ನಿರೂಪಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Job Vacancy ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂದರ್ಶನ

0

Job Vacancy ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅನೇಕ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರುಗಳ ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿ ಸಂಬಂಧ ಮಾರ್ಚ್ 01 ರಂದು ಸಂದರ್ಶನ ನಡೆಯಲಿದೆ.

ಪಶುವೈದ್ಯಕೀಯ ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ ಪಶುವೈದ್ಯಕೀಯ ರೋಗಶಾಸ್ತ್ರ, ಹಾಗೂ ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

Job Vacancy ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ಆಯ್ಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮಾಸಿಕ ರೂ.56,700/- ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪ್ರಮಾಣ ಪತ್ರ ಹೊಂದಿರದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000/- ವೇತನವಾಗಿ ಪಾವತಿಸಲಾಗುವುದು.

ಸಂದರ್ಶನವನ್ನು ಮಾರ್ಚ್ 01 ರ ಬೆಳಗ್ಗೆ 11 ಗಂಟೆಯಿಂದ ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇಲ್ಲಿ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ 08182-200872 ಹಾಗೂ ವಿಶ್ವವಿದ್ಯಾಲಯದ ಜಾಲತಾಣ www.kvafsu.edu.in ನ್ನು ಸಂಪರ್ಕಿಸಬಹುದೆಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Electricity ಫೆ.25 ರಂದು ಶಿವಮೊಗ್ಗದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

0

Shivamogga Electricity  ಶಿವಮೊಗ್ಗ: ಫೆ. 25 ರಂದು 11 ಕೆವಿ ಮಾರ್ಗದ ನಿರ್ವಹಣಾ ಕೆಲಸ ಇರುವುದರಿಂದ 11ಕೆವಿ ಮಾರ್ಗ ಮುಕ್ತತೆ ನೀಡುವ ಕಾರಣ ಬೆಳಿಗ್ಗೆ

Shivamogga Electricity 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕುವೆಂಪು ನಗರ, ಎನ್ಸಪ್ರಾ ಸಿಟಿ, ಶಿವಕುಮಾರ ಸ್ವಾಮಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Water Resource ಜಲ ಸಮಸ್ಯೆಗೆ ಸ್ಪಂದಿಸುವ ಜಲತಜ್ಞ ಶಿವಾನಂದ ಕಳವೆ

0

Water Resource ಎಲ್ಲಾ ಸಾಧನೆಗಳ ಹಿಂದೆ ಜಲಸಂಪನ್ಮೂಲ ಇದ್ದೇ ಇದೆ. ನೀರಿಲ್ಲದೆ ನಾವಿಲ್ಲ. ಎಲ್ಲಾ ಜೀವಿಗಳಿಗೂ ನೀರು ಅವಶ್ಯಕ. ಪ್ರಾಣ , ಪಕ್ಷಿಗಳು ಮೊದಲಾದ ಜೀವಿಗಳಿಗೆ ಸರಹದ್ದು ಇದೆ. ಅವು ಮಿತಬಳಕೆಯ ಪಾಠವನ್ನು ಕಲಿತಿದೆ. ಆದರೆ ಮನುಷ್ಯ ಜೀವಿಗೆ ಸರಹದ್ದು ಇಲ್ಲ. ಬೇಕಾಬಿಟ್ಟಿ ಅತಿಕ್ರಮಣ ಮಾಡುತ್ತಿದ್ದಾರೆ.

ಅಂತರ್‌ಜಲ ಕಡಿಮೆಯಾಗಿದೆ. ಇನ್ನೊಂದು ಟರ್ಕಿಯಂತೆ ಆಗುವ ಮುನ್ನ ಜಲಸಂಪನ್ಮೂಲದ ಅರಿವು ಅತ್ಯಗತ್ಯ ಎಂದು ಖ್ಯಾತ ಪರಿಸರ ತಜ್ಞ ಜಲ,ನೆಲ,ಸಂರಕ್ಷಣೆ, ಜಾಗೃತಿ ಕಾರ್ಯಕ್ರಮವನ್ನು ರಾಜ್ಯದೆಲ್ಲೆಡೆ ನಡೆಸಿ ಕರ್ನಾಟಕದ ಕೆರೆ, ನೀರಾವರಿ ಪರಂಪರೆ ಕುರಿತು ಅಧ್ಯಯನ ಮಾಡಿ ಕಣವೆ/ಕೆರೆಗಳ ನಿರ್ಮಾಣ ಮತ್ತು ಮಾರ್ಗದರ್ಶನಕ್ಕಾಗಿ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳ ಪ್ರವಾಸಮಾಡಿ 5 ಸಾವಿರಕ್ಕೂ ಹೆಚ್ಚು ಕೆರೆಗಳ ವೀಕ್ಷಣೆ ಮತ್ತು ಅವುಗಳ ಪುನರ್‌ನಿರ್ಮಾಣಕ್ಕಾಗಿ ಮಾರ್ಗದರ್ಶನ ಮಾಡಿದ್ದಲ್ಲದೆ, ರಾಜ್ಯದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪರಿಸರ ಸಂಬಂಧಿ ಕಾರ್ಯಾಗಾರಗಳಿಗೆ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿರುವ ಹಾಗೂ ಖ್ಯಾತ ನಟ ಯಶ್‌ರವರ ‘ಯಶೋಮಾರ್ಗ’ ಜಲಕಾಯಕದ ಮುಖ್ಯ ಮಾರ್ಗದರ್ಶಕರಾಗಿರುವ ಶಿವಾನಂದ ಕಳವೆ ಅವರೊಂದಿಗೆ ಶಿರಸಿ ತಾಲ್ಲೂಕಿನ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಪರಿಸರ ಪ್ರೇಮಿ ಪ್ರಕಾಶ್ ಪ್ರಭು ಹಾಗೂ ಪತ್ರಕರ್ತ ನಾಗರಾಜ್‌ಶೆಣೈ ಅವರ ಹಲವು ಪ್ರಶ್ನೆಗಳಿಗೆ ಕಳವೆಯವರ ಉತ್ತರ ಹೀಗಿದೆ.

ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ೧೦ ವರ್ಷಗಳ ಬೆಳವಣಿ ಗೆಗಳನ್ನು ಗಮನಿಸುತ್ತಾ ಬಂದಾಗ 2021 ರಿಂದ ರಾಜ್ಯದಲ್ಲಿ ಬರಗಾಲವನ್ನು ನೋಡುತ್ತಿದ್ದೇವೆ. 2018 ರಲ್ಲಿ ರಾಜ್ಯದಲ್ಲಿ 157 ತಾಲ್ಲೂಕು ಬರಪೀಡಿತವಾಗಿದೆ. ನೀರಿಲ್ಲವಾದರೆ ಅನಾರೋಗ್ಯ ಕಾಡುತ್ತದೆ. ಬಯಲುಸೀಮೆಯಲ್ಲಿ ಅನೇಕ ಜನರು ಗುಳೆ ಹೋಗುತ್ತಿದ್ದರು. ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಹಾಗೂ ಕೃಷಿಯ ಮೇಲೆ ಹಾಗೂ ಸ್ಥಳೀಯ ಆರ್ಥಿಕತೆಯ ಮೇಲೆ ಅಲ್ಲೋಲ ಕಲ್ಲೋಲವಾಗುವಂತಹ ಪರಿಣಾಮ ಬೀರಿತ್ತು.

ಬರವನ್ನು ಗೆಲ್ಲಬೇಕಾದರೆ ಮಳೆಯನ್ನು ನೋಡು ಎಂಬುದು ನಾಣ್ಣುಡಿ. ಊರನ್ನು ಬರನಿರೋಧಕಗೊಳಿಸುವುದು ಹೇಗೆ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು. ಹನಿ ಹನಿ ಕೂಡಿಸುವುದು ಮತ್ತು ಜಲಸಂರಕ್ಷಣೆ ಸಮುದಾಯ ಸಹಭಾಗಿತ್ವದಲ್ಲಿ ನಡೆಯಬೇಕು. ಎಲ್ಲರ ಮನೆಯ ಮನಸ್ಸನ್ನು ಗೆಲ್ಲಬೇಕು. ನೀರಿಲ್ಲದೆ ಬದುಕಿಲ್ಲ, ಸೆಕೆಂಡ್‌ಗೆ ಒಂದು ಹನಿ ನೀರೆಂದರೂ ಒಂದು ವರ್ಷಕ್ಕೆ 15ಸಾವಿರ ಲೀಟರ್ ಆಗುತ್ತದೆ. ಬಳಸಿದ ನೀರಿನ ಮರುಬಳಕೆ, ಮಳೆ ನೀರಿನ ಕೊಯ್ಲು ಮತ್ತು ನೀರಿನ ಮಿತಬಳಕೆಯಿಂದ ಜಲಸಂರಕ್ಷಣೆ ಸಾಧ್ಯ.

ನೀರಿಲ್ಲದೆ ನಾವಿಲ್ಲ ಎಂಬ ಎಚ್ಚರದಿಂದ ಪ್ರತಿಯೊಬ್ಬ ಯುವಕ, ಯುವತಿಯರು ಕಾಲಾಳುಗಳಾದಾಗ ನೀರಿನ ಸಂರಕ್ಷಣೆ ಸಾಧ್ಯ ಎಂದರು.

Water Resource ನಾವು ಅತ್ಯಂತ ವೇಗದ ಜೀವನದಲ್ಲಿದ್ದೇವೆ. ಹಾಗಾಗಿ ಬಿಕ್ಕಟ್ಟುಗಳು ಜಾಸ್ತಿಯಾಗಿದೆ. ಹೊಸ ಯೋಜನೆಯ ಅವಶ್ಯಕತೆಗಿಂತ ಹಳೆಯ ಯೋಜನೆಗಳನ್ನೇ ಸಮರ್ಪಕವಾಗಿ ನಿರ್ವಹಿಸಬೇಕು. ಮಳೆಯ ಪ್ರಮಾಣ ನೋಡಿದರೆ ಅದನ್ನು ಹಿಡಿದಿಟ್ಟುಕೊಂಡರೆ ಕೆರೆಯ ಅತಿಕ್ರಮಣ ನಿಲ್ಲಿಸಿದರೆ ಕಣ ವೆ ಮತ್ತು ಕೊಳ್ಳಗಳ ಹೂಳು ತೆಗೆದು ಜಲ ಸಂಗ್ರಹ ಮಾಡಿದ್ದಲ್ಲಿ ಅಂತರ್‌ಜಲ ಮಟ್ಟ ಏರಲಿದೆ. ಮೊದಲು ಒಂದು ಚದರ ಕಿ.ಮೀ.ಗೆ 50 ಜನ ಇದ್ದಲ್ಲಿ ಈಗ 5 ಸಾವಿರ ಜನರಿದ್ದಾರೆ. ಕೊಳವೆ ಬಾವಿಗಳು ಅಪಾಯಕಾರಿಯಾಗಿದೆ. ನೀರಿನ ಬಳಕೆ ಹೆಚ್ಚುತ್ತಾ ಹೋಗುತ್ತಾ ಕೊಳವೆ ಬಾವಿಗಳ ನಿರ್ಮಾಣ ಜಾಸ್ತಿಯಾಗುತ್ತಿದೆ. ನೀರಿನ ಸಂಗ್ರಹಣೆಯ ವಿಧಾನಗಳ ಬಗ್ಗೆ ನಿರ್ಲಕ್ಷ್ಯತನ ಹೆಚ್ಚಿದೆ ಎಂದರು.

ಈ ರಾಜ್ಯದ ಒಟ್ಟು ಕೃಷಿ ಭೂಮಿಯ ಶೇ.70ರಷ್ಟು ಭಾಗದಲ್ಲಿ 700 ಮಿಲಿ ಮೀಟರ್ ಮಳೆಯಾಗುತ್ತಿದೆ ಎಂದರು.

ಜಲಸಂರಕ್ಷಣೆಯ ತಂತ್ರಗಾರಿಕೆಯನ್ನು ಮಾಡುವಲ್ಲಿ ವಿಫಲರಾಗಿದ್ದೇವೆ. ವಿಪರ್ಯಾಸವೆಂದರೆ ಉಚಿತ ವಿದ್ಯುತ್ ಕೊಡುವುದರಿಂದ ನೀರಿನ ಬೆಲೆ ಗೊತ್ತಿಲ್ಲ. 24 ಗಂಟೆ ಮೋಟಾರ್ ಓಡಿಸುತ್ತಾ ಇರುತ್ತೇವೆ. ವಿದ್ಯಾವಂತರೆ ಇದನ್ನು ಮಾಡುತ್ತಿದ್ದಾರೆ. ನಮ್ಮಲ್ಲಿ ಜಲಸಂರಕ್ಷಣೆ ಮತ್ತು ವನ ಸಾಕ್ಷರತೆ ಇಲ್ಲದ್ದರಿಂದ ಜಲಕ್ಷಾಮ ಕಾಡುತ್ತಿದೆ. ಕೆರೆಯಲ್ಲಿ ಹೂಳು ತುಂಬಿದೆ. ಅದು ತೆಗೆಯುವ ಮುನ್ನ ತಲೆಯಲ್ಲಿರುವ ಹೂಳನ್ನು ತೆಗೆಯಬೇಕಾಗಿದೆ. ನದಿಯ ಗುಂಡಿಗಳು ಆಳವಾಗಿಲ್ಲ. ಅದನ್ನು ಬಟ್ಟಲ್ಲನ್ನಾಗಿ ಮಾಡಿದ್ದೇವೆ. ಹಾಗಾಗಿ ಪ್ರವಾಹಗಳನ್ನು ನಾವೇ ಮಾಡಿಕೊಂಡಿದ್ದೇವೆ.

ರಾಜ್ಯದಲ್ಲಿ 5 ಸಾವಿರ
ಬೋರ್‌ವೆಲ್ ಯಂತ್ರಗಳಿದ್ದವು. ಈಗ 50 ಸಾವಿರಕ್ಕೂ ಹೆಚ್ಚು ಬೋರ್‌ವೆಲ್ ಯಂತ್ರಗಳಿವೆ ಎಂದರು.

ಖಾಸಗಿಯವರು 1,500 ಕ್ಕೂ ಹೆಚ್ಚು ಅಡಿ ಆಳ ನೀರಿಗಾಗಿ ಭೂಮಿಯನ್ನು ಅಗೆಯುತ್ತಾರೆ. ಕೆರೆಗಳು, ಕೃಷಿ ಹೊಂಡಗಳು ಮಾಡುವ ಮೂಲಕ ನದಿಯ ಜೀವವನ್ನು ಉಳಿಸುವುದರ ಮೂಲಕ ಜಲಸಂರಕ್ಷಣೆಯಾಗಬೇಕು. ನೀರಿಗಾಗಿ ಅಂತರ್‌ರಾಜ್ಯ ಕಲಹ, ಕೊಲೆಗಳು ಆಗುತ್ತಿವೆ. ನೀರಿನ ಟ್ಯಾಂಕ್‌ಗಳೆ ಕಳವಾಗಿದೆ. ಬದಲಾವಣೆ, ಅಭಿವೃದ್ಧಿಯ ವೇಗ ಜಾಸ್ತಿಯಾಗಿದೆ. ಬದಲಾವಣೆ ಮತ್ತು ಸುಧಾರಣೆ ಯಾವುದು ಬೇಕು? ಸುಧಾರಣೆ ಆಗುವುದು ಮುಖ್ಯ. ನೀರು ಬೇಕು ಮಳೆ ಬೇಡ ಎಂಬ ಭಾವನೆಯಿದೆ. ಇಂಜಿನಿಯರ್‌ಗಳು ಎಲ್ಲರೂ ವಾಟರ್ ಇಂಜಿನಿಯರ್ ಆಗಬೇಕು. ಪ್ರತಿಯೊಬ್ಬ ಪ್ರಜೆಯು ನೀರಿನ ವಿಚಾರದಲ್ಲಿ ಸ್ವಯಂ ನಿಯಂತ್ರಕರಾಗಬೇಕು. ರಾಜ್ಯದಲ್ಲಿ 39,173 ಕೆರೆಗಳಿವೆ.

ಸರ್ಕಾರಕ್ಕೆ ಇದರ ಹೂಳೆತ್ತುವುದೇ ಸಮಸ್ಯೆಯಾಗಿದೆ.
ರೆಡಿಮೇಡ್ ಸಿದ್ಧಸೂತ್ರಗಳಿಂದ ಕೆರೆಯ ನೀರನ್ನು ಹಿಡಿದಿಟ್ಟುಕೊಳ್ಳುವುದನ್ನು ಮರೆತ್ತಿದ್ದೇವೆ. ಇರುವ ಹಸಿರಿನ ತುಂಡುಗಳು (ಸಣ್ಣ ಕಾಡುಗಳು) ನಾಶವಾಗದ ಹಾಗೆ ಅವುಗಳಿಗೆ ಧಕ್ಕೆಯಾಗದ ಹಾಗೆ ಯೋಜನೆಗಳನ್ನು ಮಾಡಬೇಕು. ಪ್ರವಾಹದ ನೀರು ಬಳಸಲು ನಾವು ಯೋಚನೆಯನ್ನೇ ಮಾಡಲಿಲ್ಲ. ಬೃಹತ್ ಯೋಜನೆಗಳನ್ನು ಕೈಬಿಡಿ. ಸಣ್ಣ ಸಣ್ಣ ಯೋಜನೆಗಳನ್ನು ಮಾಡಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಅರಿವು ಮೂಡಿಸಿ. ಕಾದು ನೋಡಿ ಕೃಷಿ ಮಾಡಿ ಒಂದೇ ಬೆಳೆಯ ಬದಲು ಅಡಿಕೆಯೊಂದಿಗೆ ಹಲವಾರು ಉಪಬೆಳೆಯನ್ನು ಬೆಳೆಸಿ. ಪಶ್ಚಿಮಘಟ್ಟದ ವೈವಿಧ್ಯತೆಯೇ ವಿಶೇಷವಾಗಿದ್ದು, ನೀರಿನ ಜ್ಞಾನ ಬೆಳೆಸಿಕೊಂಡರೆ ಬರಗಾಲವನ್ನು ಗೆಲ್ಲಬಹುದು. ಜಲವಿದ್ದರೆ ಜೀವವಿರುತ್ತದೆ ಎಂಬುದನ್ನು ಅರಿತುಕೊಳ್ಳಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ಜಲಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ವಿಚಾರವಾಗಿ ಜನಜಾಗೃತಿ ಮೂಡಿಸಲು ಅಭಿರುಚಿ ಸಂಸ್ಥೆ ಕುವೆಂಪು ರಂಗಮಂದಿರದಲ್ಲಿ ಫೆ.24 ರಂದು ಶುಕ್ರವಾರ ಬೆಳಿಗ್ಗೆ 10:30ಕ್ಕೆ ಜಲಜಾಗೃತಿ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶಿವಾನಂದ ಕಳವೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲರೂ ಬಂದು ಭಾಗವಹಿಸಿ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Newspaper Distributors ಹಿರಿಯ ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ

0

Newspaper Distributors ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ಪತ್ರಿಕಾ ವಿತರಕರಾಗಿ ಸುದೀರ್ಘ ಸೇವೆಯನ್ನು ಗುರುತಿಸಿ ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷರಾದ ಎನ್. ಮಾಲತೇಶ್ ಕರ್ನಾಟಕ ಸಮಾಜ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Newspaper Distributors ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ, ಗುರು ಬಸವ ಮಹಾಸ್ವಾಮಿಗಳು, ಡಾ ಕಲ್ಮೇಶ್ವರ ಮಹಾಸ್ವಾಮಿಜಿ, ಕರ್ನಾಟಕ ಸಂಘದ ಆದ್ಯಕ್ಷ ಸುಂದರ ರಾಜ, ಚಿತ್ರ ನಟರಾದ ಎಂ ಎನ್ ಸುರೇಶ, ಮೀನಾ, ಸಿದ್ಧರಾಮ ಹೊನ್ಕಲ್, ಸುರ್ವೆ ಕಲ್ಚರಲ್ ಅಕಾಡೆಮಿ ಅದ್ಯಕ್ಷ ರಮೇಶ ಸುರ್ವೆ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Gold Medalist in High Jump ಶಿವಮೊಗ್ಗದ ಗೌತಮಿ ಗೌಡ ಹೈಜಂಪ್ ಸ್ಪರ್ಧೆಯಲ್ಲಿ ಬಂಗಾರದ ಪದಕ

0

Gold Medalist in High Jump  ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಗೌತಮಿಗೌಡ ಎತ್ತರ ಜಿಗಿತದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

Gold Medalist in High Jump 2022 – 23 ನೇ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ,ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಪೆಬ್ರವರಿ 19 ರಿಂದ 22 ರ ವರೆಗೆ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿದ್ದಾರೆ. 17 ವರ್ಷ ವಯೋಮಿತಿ ಒಳಗಿನ ವಿಭಾಗದ ಎತ್ತರ ಜಿಗಿತದಲ್ಲಿ 1.58 ದಾಖಲೆಯ ಇತಿಹಾಸ ನಿರ್ಮಿಸಿ ,ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಈ ಪ್ರತಿಭೆಯು ನಗರದ ಕೆ.ಯು.ವಿಷ್ಣುವರ್ಧನ ಮತ್ತು ಸುಷ್ಮಾ ಇವರ ದಂಪತಿಗಳ ಪುತ್ರಿಯಾಗಿದ್ದಾಳೆ.
ಕ್ರೀಡೆಯ ಜೊತೆಗೆ ಓದಿನಲ್ಲೂ ಮುಂದಿದ್ದು,
ರಾಷ್ಟ್ರ ಮಟ್ಟದ ಎತ್ತರ ಜಿಗಿತದಲ್ಲಿ ಭಾಗವಹಿಸಲಿದ್ದಾರೆ.
ಈ ಕ್ರೀಡಾಪ್ರತಿಭೆಯ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ.ಶ್ರೀ.ಪ್ರಸನ್ನನಾಥ ಸ್ವಾಮೀಜಿಯವರು, ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಹೇಮಾಎಸ್.ಆರ್., ಅಧ್ಯಾಪಕವೃಂದ, ಸಿಬ್ಬಂಧಿವರ್ಗ ಶುಭಹಾರೈಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Freedom Park ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಮೂಲಭೂತ ಸೌಕರ್ಯಕ್ಕೆ ಮನವಿ

0

Shivamogga Freedom Park ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹಾಗೂ ಫ್ರೀಡಂ ಪಾರ್ಕ ಅನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಮನವಿ ಮಾಡಲಾಯಿತು.

Shivamogga Freedom Park ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹಾಗೂ ಫ್ರೀಡಂ ಪಾರ್ಕ ಅನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಮನವಿ ಮಾಡಲಾಯಿತು.
ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಪ್ರತಿನಿತ್ಯ ಸಾವಿರಾರು ಜನ ವಾಕಿಂಗ್ ಅನ್ನು ಮಾಡುತ್ತಾರೆ ಈ ಸಂದರ್ಭದಲ್ಲಿ ಕನಿಷ್ಠ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲದ ವ್ಯವಸ್ಥೆ ಇಲ್ಲ ನೋಡಲು ಕುಡಿಯುವ ನೀರಿನ ವ್ಯವಸ್ಥೆ ಇದ್ದು ಅದರಲ್ಲಿ ನೀರೆ ಬರುವುದಿಲ್ಲ ಹಾಗೂ ಶೌಚಾಲಯದ ನಿರ್ವಹಣೆ ಮಾಡುವವರು ಸರಿಯಾದ ಸಮಯಕ್ಕೆ ಶೌಚಾಲಯವನ್ನು ಓಪನ್ ಮಾಡುವ ಬದಲಾಗಿ ಇಚ್ಛೆ ಬಂದಾಗ ಮಾಡುವರು ಮತ್ತು ಫ್ರೀಡಂ ಪಾರ್ಕ್ ಅಲ್ಲಿ ಕಾರ್ಯಕ್ರಮಗಳು ನಡೆದ ನಂತರ ಕನಿಷ್ಠ ಕಾರ್ಯಕ್ರಮವಾದ ಮರುದಿನ ಸ್ವಚ್ಛಗೊಳಿಸಲು ಕಾರ್ಯಕ್ರಮದ ಆಯೋಜಕರಿಗೆ ತಿಳಿಸಬೇಕು.ಇಲ್ಲಿ ಕಾರ್ಯಕ್ರಮಗಳು ಆದ ವಾರಗಟ್ಟಲೆ ಕಸ ಫ್ರೀಡಂ ಪಾರ್ಕ್ ನಲ್ಲಿ ಹಾಗೆ ಬಿದ್ದಿರುತ್ತದೆ ಇದರಿಂದ ಫ್ರೀಡಂ ಪಾರ್ಕ್ ನ ಪರಿಸರಕ್ಕೂ ಸಹ ಹಾನಿ ಯಾಗುತ್ತಿದೆ.ಮತ್ತು ಬಹು ಮುಖ್ಯವಾಗಿ ಫ್ರೀಡಂ ಪಾರ್ಕ್ ನಲ್ಲಿ ಜಿಲ್ಲಾಡಳಿತದ ಒಬ್ಬರನ್ನು ಅದರ ಮೇಲುಸ್ತುವಾರಿಗಾಗಿ ನೇಮಿಸಿ ಕಚೇರಿಯನ್ನು ತೆರೆಯಬೇಕು.
ಪ್ರತಿನಿತ್ಯ ವಾಕಿಂಗ್ ಸಂದರ್ಭದಲ್ಲಿ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರ ಪಾರ್ಕಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳಲು ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಅಹಿತಕರ ಚಟುವಟಿಕೆಗಳನ್ನು ತಡೆಯಲು ಸೆಕ್ಯೂರಿಟಿ ವ್ಯವಸ್ಥೆಯನ್ನು ಈ ಕೊಡಲೇ ಜಾರಿ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಸರಿಯಾದ ನಿರ್ವಹಣೆಯನ್ನು ಮಾಡಬೇಕೆಂದು ರಾಜ್ಯ ನಾಗರಿಕ ರಕ್ಷಣಾ ಸಮಿತಿ ವತಿಯಿಂದ ಮನವಿಯಲ್ಲಿ ಕೇಳಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಶಿವಮೊಗ್ಗ ವಿನೋದ್ ಅಧ್ಯಕ್ಷರಾದ ಕೆ ಶೇಖರ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪದಾಧಿಕಾರಿಗಳಾದ ಲಕ್ಷ್ಮಿಕಾಂತಪ್ಪ ರಮೇಶ್ ಚಂದನ್ ಹರ್ಷಿತ್ ಲೋಕೇಶ್ ಶರವಣ ಉಪಸ್ಥಿತರಿದ್ದರು.

Book Your Advertisement Now.Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget

Agriculture Fest ಶಿವಮೊಗ್ಗದಲ್ಲಿ ಮಾರ್ಚ್ 17 ರಿಂದ 20 ರವರೆಗೆ ಕೃಷಿ ತೋಟಗಾರಿಕಾ ವಿವಿ ಕೃಷಿಮೇಳ

0

Agriculture Fest  ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ‘ಸುಸ್ಥಿರ ಆದಾಯಕ್ಕಾಗಿ-ಸೆಕೆಂಡರಿ ಕೃಷಿ ತಾಂತ್ರಿಕತೆಗಳು ಮತ್ತು ಮೌಲ್ಯವರ್ಧನೆ’ ಎಂಬ ಘೋಷವಾಕ್ಯದಡಿಯಲ್ಲಿ ನಾಲ್ಕು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಮಾ.17 ರಿಂದ 20 ರವರೆಗೆ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಈ ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ, ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನೂತನ ತಳಿ ಮತ್ತು ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಗಳು, ಕೃಷಿ ಯಂತ್ರೋಪಕರಣಗಳು ಹಾಗೂ ಜೈವಿಕ ಪರಿಕರಗಳ ಪ್ರದರ್ಶನ, ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮಗಳು, ಕೃಷಿ ಸಂಬಂಧಿತ ವಿಚಾರ ಗೋಷ್ಠಿ ಮತ್ತು ತಾಂತ್ರಿಕ ಸಮಾವೇಶವನ್ನು ಏರ್ಪಡಿಸಲಾಗಿರುತ್ತದೆ.

Agriculture Fest  ಪ್ರಸಕ್ತ ವರ್ಷದ ಮೇಳದಲ್ಲಿನ ಪ್ರಮುಖ ವಿಶೇಷತೆಗಳೆಂದರೆ, ಹೈಟೆಕ್ ತೋಟಗಾರಿಕೆ-ಹೈಡ್ರೋಪೇನಿಕ್ ಕೃಷಿ, ಪುಷ್ಪ ಕೃಷಿ, ತಾರಸಿ ತೋಟ ಮತ್ತು ಲಂಬ ತೋಟ, ಸಂರಕ್ಷಿತ ಕೃಷಿ, ಜೇನು ಸಾಕಾಣಿಕೆ ಮತ್ತು ಕೀಟ ಪ್ರಪಂಚ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಸಾವಯವ ಕೃಷಿ, ಅಣಬೆ ಬೇಸಾಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯ ವರ್ಧಿತ ಕೃಷಿ ಉತ್ಪನ್ನಗಳು, ಹವಾಮಾನ ಆಧಾರಿತ ಕೃಷಿಯ ಪ್ರಾತ್ಯಕ್ಷಿಕೆಗಳ ಪ್ರದರ್ಶನವಿರುತ್ತದೆ ಮತ್ತು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಏಳು ಜಿಲ್ಲೆಗಳ ಯಶಸ್ವಿ ಪ್ರಗತಿಪರ ಕೃಷಿಕರುಗಳಿಗೆ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಈ ಮೇಳದಲ್ಲಿ ವಸ್ತು ಪ್ರದರ್ಶನ ಅಥವಾ ಮಾರಾಟಕ್ಕೆ ಮಳಿಗೆಗಳನ್ನು ಕಾಯ್ದಿರಿಸಲು ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣದ www.https://uahs.edu.in ನಿಂದ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಳಿಗೆ ಹಂಚಿಕೆ ಸಮಿತಿಯ ಸಹ ವಿಸ್ತರಣಾ ನಿರ್ದೇಶಕರು ಮತ್ತು ಅಧ್ಯಕ್ಷರಾದ ಡಾ.ಎಸ್.ಯು. ಪಾಟೀಲ್-9448154542 ಮತ್ತು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ.ಸಿ. ಹನುಮಂತಸ್ವಾಮಿ 9480838976 ಇವರನ್ನು ಸಂಪರ್ಕಿಸಬಹುದೆಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ವಿಸ್ತರಣಾ ನಿರ್ದೇಶಕರಾದ ಡಾ.ಬಿ. ಹೇಮ್ಲಾ ನಾಯಕ್ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Pledging Ammunitions ಗ್ರಾಮ ಪಂಚಾಯತಿ ಉಪಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲು ಜಿಲ್ಲಾಧಿಕಾರಿಗಳ ಸೂಚನೆ

0

Pledging Ammunitions ಗ್ರಾಮ ಪಾಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಕಾರಣ ಆ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯಿತಿಯ ಸಾರ್ವಜನಿಕರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಸಮೀಪದ ಪೋಲೀಸ್ ಠಾಣೆಯಲ್ಲಿ ಠೇವಣಿ ಮಾಡಲು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.

Pledging Ammunitions ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೆದ್ದಾರಿಪುರ-12, ನಾಗೋಡಿ(ನಿಟ್ಟೂರು)-18 ಹಾಗೂ ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿ-09 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಠೇವಣಿಯಲ್ಲಿ ಇಡಲಾದ ಶಸ್ತ್ರ/ಆಯುಧಗಳನ್ನು ಸಂಬಂಧಿಸಿದ ಪೋಲೀಸ್ ಠಾಣೆಯ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೇ ಠೇವಣಿ ಮಾಡಿದ ಆಯುಧ ಪರವಾನಿಗೆದಾರರಿಗೆ ಸೂಕ್ತ ರಶೀದಿಯನ್ನು ತಪ್ಪದೇ ನೀಡುವುದು. ಈ ಆಯುಧಗಳನ್ನು ಚುನಾವಣಾ ಫಲಿತಾಂಶವನ್ನು ಘೋಷಿಸಿದ ನಂತರ ಡಿಪಾಸಿಟ್ ಮಾಡಿದ ಪರವಾನಿಗೆದಾರರಿಗೆ ಹೊಂದಿರುಗಿಸಲಾಗುವುದು.

ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗಳಿಗೆ ಎಂ.ಪಿ.ಎಂ/ವಿ.ಐ.ಎಸ್.ಎಲ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಅಧಿಕೃತ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ. ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಜಿಲ್ಲಾ ಆಡಳಿತವು ಕೈಗೊಂಡ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಬೇಕಾಗಿ ಅವರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Women Empowerment ಮಹಿಳೆಯರು ಸ್ವಾವಲಂಬಿಗಳಾದರೆ ಕುಟುಂಬದ ಆರ್ಥಿಕತೆ ಸದೃಢ

0

Women Empowerment  ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಯುವತಿಯರನ್ನು ,ಮಹಿಳೆಯರನ್ನು ಸ್ವಾಲಂಬಿಗಳನ್ನಾಗಿ ಮಾಡಿದರೆ ಕುಟುಂಬದ ಆರ್ಥಿಕ ಪರಿಸ್ಥಿತಿಯು ಸದೃಢವಾಗುತ್ತದೆ.ಇದು ಮೇಕಪ್ ಶಿಕ್ಷಣ ,ಅಧ್ಯಯನ,ಕಲಿಕೆ ಇಂದ ಸಾಧ್ಯ ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ ಹೇಳಿದರು.

Women Empowerment  ಶಿವಮೊಗ್ಗದ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ತಮ್ಮ ಸಂಸ್ಥೆಯ ಮೊದಲ ವರ್ಷದ ವಾರ್ಷಿಕೋತ್ಸವ ಮತ್ತು ೬ನೇ ಬ್ಯಾಚಿನ ಅಧ್ದೂರಿ ಫೋರ್ಟ್ ಫೋಲಿಯೋ ಮುಕ್ತಾಯ ಸಮಾರಂಭ ನಡೆಯಿತು , ಮೇಕಪ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡುತ್ತಾ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯ ನಡೆಸುತ್ತಿದೆ. ಸಮಾಜಮುಖಿ ಆಲೋಚನೆಗಳ ಕಾರ್ಯಗಳನ್ನು ನಡೆಸುತ್ತದೆ.ನಿಮ್ಮ ಮನೆಯ ಹೆಣ್ಣು ಮಕ್ಕಳನ್ನ ಇತರಹದ ಮೇಕಪ್ ಶಿಕ್ಷಣದಂತಹ ಸ್ವ- ಉದ್ಯೋಗ ಗಳಿಗೆ ಪ್ರೋತ್ಸಾಹ ನೀಡಿದರೆ ಮನೆಯಲ್ಲಿ ಒಬ್ಬ ಒಬ್ಬ ಯುವತಿ,ಮಹಿಳೆ ಕೂಡ ಇತರರ ಮೇಲೆ ಅವಲಂಭಿತರಾಗದೆ, ಪ್ರಬಲವಾಗಿ ತನ್ನ ಬದುಕನ್ನ ತಾವೇ ಕಟ್ಟಿಕೊಳ್ಳುವಳು ಎಂದರು.

ಶಿವಮೊಗ್ಗ ನಗರದಲ್ಲಿ ದ್ವಿತೀಯ ಬಾರಿಗೆ ಅಶ್ವಿನೀಸ್ ಮೇಕೋವರ್ ಸ್ಟುಡಿಯೋ ಸಂಸ್ಥೆಯು “ವಿಶ್ವ ಮಹಿಳಾ ದಿನಾಚರಣೆ” ಯ ವಿಶೇಷವಾಗಿ ಮಹಿಳೆಯರಿಗೆ, ಯುವತಿಯರಿಗೆ ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದರು.

26 ಫೆಬ್ರವರಿ 2023ರ ಭಾನುವಾರದ ಒಳಗೆ ಮೇಕಪ್ ಹೊಸ ಕೋರ್ಸ್ ಗೆ ನೋಂದಣಿಯಾದ ವಿದ್ಯಾರ್ಥಿಗಳಿಗೆ ಈ ಬಾರಿಯೂ ತರಬೇತಿ ಶುಲ್ಕದಲ್ಲಿ 60% ವಿಶೇಷ ರಿಯಾಯಿತಿಯನ್ನ ಆಫರ್ ನೀಡಲಾಗುತ್ತಿದೆ.

ಮೊದಲು ನೊಂದಣಿಯಾದ 10 ಜನರಿಗೆ ಮಾತ್ರ ಈ ಅವಕಾಶ ಮತ್ತು ಮೊದಲ ಆದ್ಯತೆ ನೀಡಲಾಗಿದ್ದು ಈ ಕೂಡಲೇ ಕರೆ ಮಾಡಿ ನಿಮ್ಮ ಹೆಸರನ್ನ ನೊಂದಾಯಿಸಿಕೊಳ್ಳಿ, ಈ ತರಬೇತಿ ಪಡೆದವರಿಗೆ ಬೃಹತ್ ವೇದಿಕೆಯಲ್ಲಿ ಆಕರ್ಷಕ ಸರ್ಟಿಫಿಕೇಟ್ ಸಹ ನೀಡಿ ಗೌರವಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಲೀಲಾ ಮಾತನಾಡುತ್ತಾ, 8 ಮಾಚ್೯ 2023ರ ಬುಧವಾರದಿಂದ ಹೊಸ ಬ್ಯಾಚ್ ಆರಂಭಗೊಳ್ಳುತ್ತಿದ್ದು, ಮೇಕಪ್ ಕೊರ್ಸ್ ಗೆ ಸೇರಬಯಸುವ ಯುವತಿಯರು ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಅತ್ಯುನ್ನತ ಗುಣಮಟ್ಟದ ಮೇಕಪ್ ತರಬೇತಿಯನ್ನು ಶಿವಮೊಗ್ಗ ಸಿಟಿಯಲ್ಲೆ ಹೇಳಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9901216093ಗೆ ಸಂಪರ್ಕಿಸಿ ಎಂದರು.

ಕಾರ್ಯಕ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮತ್ತು ಮಾಡೆಲ್ಸ್ ಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಸಾರ್ವಜನಿಕರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.