Monday, April 6, 2026
Monday, April 6, 2026
Home Blog Page 1298

B.C. Patil ಬಿಜೆಪಿ ಸರ್ಕಾರ ರೈತರ ಆದಾಯ ವೃದ್ಧಿಗೆ ಕಟೀಬದ್ಧ-ಸಚಿವ ಬಿ.ಸಿ.ಪಾಟೀಲ್

0

B.C. Patil  ಬಿಜೆಪಿ ಸರ್ಕಾರ ಕೃಷಿಯಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತರುವ ಮೂಲಕ ರೈತರ ಆದಾಯ ವೃದ್ಧಿಗೆ ಕಠಿಬದ್ಧವಾಗಿ ನಡೆಯುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪುನರುಚ್ಚರಿಸಿದರು.

ಕೃಷಿ ಇಲಾಖೆಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ” ಸಂಗಮ ಸಭಾಂಗಣ”ವನ್ನು ಉದ್ಘಾಟಿಸಿ ಮಾತನಾಡಿದರು‌.

B.C. Patil  ಈ ಬಾರಿ ಬಜೆಟ್‌ನಲ್ಲಿ ರೈತರಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ಅಲ್ಲದೇ ಸಾಲದ ಮೊತ್ತವನ್ನು 5 ಲಕ್ಷ ರೂ.ಗೆ ಸರ್ಕಾರ ಏರಿಸಿದೆ‌ಅಲ್ಲದೇ ಕೃಷಿಕರಿಗಾಗಿ ಹಲವು ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸಿದೆ‌. ಜನಸ್ನೇಹಿ ಬಜೆಟ್ ರೂಪಿಸಿರುವ ಬಿಜೆಪಿ ಸರ್ಕಾರ ಕಿರುಧಾನ್ಯಗಳ ವಿಸ್ತೀರ್ಣ ಉತ್ಪಾದನೆ ಹೆಚ್ಚಿಸಲು ರೈತಸಿರಿ ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ 10 ಸಾವಿರ.ರೂ.ಗಳಪ್ರೋತ್ಸಾಹ ಧನವನ್ನು ನೀಡುತ್ತಿದೆ.

ಸಿರಿಧಾನ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಉತ್ತೇಜನ ನೀಡುತ್ತಿವೆ.ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 2023-24 ನೇ‌ಸಾಲಿನಲ್ಲಿ ಒಟ್ಟಾರೆಯಾಗಿ ,39,031 ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದರು.

ಇದೇ ತಿಂಗಳ‌ ಅಂದರೆ ಫೆ.27 ರಂದು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತನ್ನು ನರೇಂದ್ರ ಮೋದಿ ಅವರು ಶಿವಮೊಗ್ಗದಿಂದಲೇ ರೈತರ ಖಾತೆಗಳಿಗೆ ಜಮಾ ಮಾಡಲಿದ್ದಾರೆ ಎಂದು‌ ಸಂಸದ‌ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿರುವುದಾಗಿ ಇದೇ ವೇಳೆ ಬಿಸಿಪಿ ತಿಳಿಸಿದರು.

ಕೃಷಿ ಇಲಾಖೆ ರೈತಸ್ನೇಹಿಯಾಗಿದ್ದು, ರೈತರು ಸಂಬಂಧಪಟ್ಟ ತಮ್ಮ ವ್ಯಾಪ್ತಿಯಲ್ಲಿನ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿರಬೇಕು‌.ಅಲ್ಲದೇ ಕೃಷಿ ವಿಶ್ವವಿದ್ಯಾಲಯಗಳಿಗೂ ಭೇಟಿ ನೀಡಿ ಅಲ್ಲಿನ‌ಹೊಸತಳಿಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಸಚಿವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖೆಯ ಆಯುಕ್ತ ಶರತ್ ಪಿ, ನಿರ್ದೇಶಕ ಪುತ್ರನ್, ಅಧಿಕಾರಿಗಳಾದ ವೆಂಕಟರಮಣರೆಡ್ಡಿ ಸೇರಿದಂತೆ ಮತ್ತಿತ್ತರು ಉದ್ಘಾಟನಾ ಕಾರ್ಯಕ್ರಮ ವೇಳೆ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Yoga For Health ಯೋಗದಿಂದ ಮನೋಸಾಮರ್ಥ್ಯ ವೃದ್ಧಿ- ರುದ್ರಾರಾಧ್ಯ

0

Yoga For Health ಯೋಗವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮಲ್ಲಿನ ಮನೋಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಶ್ರೀ ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಹೇಳಿದರು.

ಶಿವಮೊಗ್ಗದ ಕೃಷಿ ನಗರದ ರೋಟರಿ ರಿವರ್‌ಸೈಡ್ ಭವನದಲ್ಲಿ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವಿಶ್ವದ ಎಲ್ಲ ದೇಶಗಳಲ್ಲಿಯೂ ಯೋಗದ ಮಹತ್ವ ಅರಿತುಕೊಂಡು ಬಹುತೇಕರು ಯೋಗ ಅಭ್ಯಾಸ ಮಾಡುವ ಜತೆಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಯೋಗದಿಂದ ಆಗುವ ಧನಾತ್ಮಕ ಪರಿಣಾಮಗಳ ಬಗ್ಗೆ ತಿಳವಳಿಕೆ ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

Yoga For Health ದೀರ್ಘಕಾಲ ನೆಮ್ಮದಿಯಾದ ಜೀವನ ನಡೆಸಲು ಆರೋಗ್ಯ ಅತ್ಯಂತ ಮುಖ್ಯ. ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ಯೋಗ ಪ್ರಮುಖ ಮಾರ್ಗವಾಗಿದೆ. ಉತ್ಸಾಹದಿಂದ ಜೀವನ ನಡೆಸಲು ಯೋಗ ಸಹಕಾರಿ ಆಗುತ್ತದೆ. ಬಹುತೇಕ ಕಾಯಿಲೆಗಳಿಗೆ ಯೋಗ ಅಭ್ಯಾಸದ ಮೂಲಕ ಪರಿಹಾರವಿದೆ ಎಂದರು.

ಶಿವಮೊಗ್ಗ ನಗರದ 30 ಕಡೆಗಳಲ್ಲಿ ಶಿವಗಂಗಾ ಯೋಗಕೇಂದ್ರದಿಂದ ಉಚಿತ ಯೋಗ, ಪ್ರಾಣಾಯಾಮ, ಧ್ಯಾನ ತರಗತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಜನರು ಯೋಗ ತರಗತಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗಕೇಂದ್ರದಲ್ಲಿ ಧ್ಯಾನಮೂರ್ತಿ ಶಿವನ ವಿಗ್ರಹಕ್ಕೆ ದೇಣಿಗೆ ನೀಡಿದ ಯೋಗ ಕಲಿಕಾರ್ಥಿಗಳಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಯೋಗ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಯೋಗವನ್ನು ಮನೆ ಮನೆಗಳಿಗೆ ತಲುಪಿಸುವಲ್ಲಿ ಶಿವಗಂಗಾ ಯೋಗಕೇಂದ್ರ ಮಹತ್ತರ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಯೋಗಶಿಕ್ಷಕ ಮಹಾಬಲೇಶ ಹೆಗಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ನೀಲಕಂಠರಾವ್, ನಾಗರತ್ನಮ್ಮ ಚಂದ್ರಶೇಖರ್, ಮಹೇಶ್ವರಪ್ಪ, ರವಿಕುಮಾರ್, ಡಾ. ನಂದಿನಿ, ಬಸವರಾಜ್, ಜಿ.ವಿಜಯ್‌ಕುಮಾರ್, ವಿಜಯಲಕ್ಷ್ಮಿ ಪಾಟೀಲ್, ಬಿಂದು ವಿಜಯ್‌ಕುಮಾರ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Digital Media ಮುದ್ರಣ ಪ್ರಕ್ರಿಯೆಯಿಂದ ಡಿಜಿಟಲ್ ಗೆ ರೂಪಾಂತರವಾಗುತ್ತಿದೆ ಪತ್ರಿಕೋದ್ಯಮ-ಅಶೋಕ್ ರಾಮ್

0

Digital Media ದಿನಪತ್ರಿಕೆಗಳ ನಿಧಾನಗತಿಯ ಪತ್ರಿಕೋದ್ಯಮಕ್ಕೆ ಇನ್ನು ಭವಿಷ್ಯವಿಲ್ಲ. ಎಲ್ಲ ಮಾಧ್ಯಮಗಳು ಸಹ ಇಂದು ತಮ್ಮ ಡಿಜಿಟಲ್ ಮಾದರಿಯನ್ನು ಆರಂಭಿಸಿದ್ದು, ತ್ವರಿತವಾಗಿ ಓದುಗರನ್ನು ತಲುಪುವುದೇ ಬಹುಮುಖ್ಯ ಉದ್ದೇಶವಾಗಿದೆ. ಅದುವೇ ಅಸ್ಥಿತ್ವವನ್ನು ನಿರೂಪಿಸುವ, ವಿಸ್ತರಿಸುವ ಕೆಲಸ ಮಾಡಲು ನಿರ್ಣಾಯಕ ಪಾತ್ರ ವಹಿಸುವುದು ಎಂದು ಈದಿನ ಸುದ್ದಿತಾಣದ ಮುಖ್ಯಸಂಪಾದಕ ಅಶೋಕ್‌ರಾಮ್ ಡಿ. ಆರ್., ಅಭಿಪ್ರಾಯಪಟ್ಟರು.

Digital Media ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಪ್ರೊ. ಡಿ.ಎಸ್. ಪೂರ್ಣಾನಂದ ಅವರ ಗೌರವಾರ್ಥವಾಗಿ ವಿಭಾಗ ಮತ್ತು ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘಗಳು ಜಂಟಿಯಾಗಿ ಫೆ. 23ರಂದು ‘ಡಿಜಿಟಲ್ ಪತ್ರಿಕೋದ್ಯಮ: ಸವಾಲುಗಳು ಮತ್ತು ನಿರೀಕ್ಷೆಗಳು’ ವಿಷಯ ಕುರಿತು ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ನುಡಿಗಳನ್ನಾಡಿದರು. ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ಸುದ್ದಿತಾಣಗಳ ಆರಂಭದಿಂದಾಗಿ ಇಂದು ಪತ್ರಿಕೋದ್ಯಮಕ್ಕೆ ಬಹಳಷ್ಟು ವೇಗದ ಅಂಶ ದೊರೆತಿದೆ. ಸಾಮಾಜಿಕ ಮಾಧ್ಯಮಗಳಿಂದಾಗಿ ಜನಸಾಮಾನ್ಯರ ನಡುವೆ ಪತ್ರಕರ್ತರು ಉದ್ಭವಾಗಿದ್ದು, ಅವರು ಸುದ್ದಿಗಳನ್ನು ತಲುಪಿಸುವಲ್ಲಿ ಸಾಕಷ್ಟು ಪೈಪೋಟಿ ನೀಡುತ್ತಿದ್ದಾರೆ. ಆದರೆ ವಿಶ್ವಾಸಾರ್ಹತೆಗಾಗಿ ನಾವು ವೃತ್ತಿಪರ ಸುದ್ದಿತಾಣಗಳನ್ನೇ ನೋಡಬೇಕು ಎಂದರು.

ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ ವಿದ್ಯುನ್ಮಾನ ಮತ್ತು ಬಹುಮಾಧ್ಯಮ ಸಂಶೋಧನ ಕೇಂದ್ರದ (ಇ.ಎಂ.ಆರ್.ಸಿ.) ನಿರ್ದೇಶಕ ಡಾ. ಅರುಲ್‌ಚೆಲ್ವನ್ ಶ್ರೀರಾಮ್ ವಿಚಾರ ಸಂಕಿರಣದ ದಿಕ್ಸೂಚಿ ನುಡಿಗಳನ್ನಾಡುತ್ತ, ಪ್ರತೀ ತಂತ್ರಜ್ಞಾನವನ್ನು ಈ ಹಿಂದಿನ ಸಮಸ್ಯೆಯನ್ನು ನಿವಾರಿಸಲು ಆವಿಷ್ಕಾರಿಸಲಾಗುತ್ತದೆ. ಆದರೆ ಒಳಿತು ಮತ್ತು ಕೆಡುಕುಗಳು ನಿರ್ಧರಿತವಾಗುವುದು ಅವುಗಳನ್ನು ಬಳಸುವವರ ಮೇಲಾಗಿರುತ್ತದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಪತ್ರಿಕೋದ್ಯಮವನ್ನು ನಾವು ಇದೇ ಹಿನ್ನಲೆಯಲ್ಲಿ ಕಾಣಬೇಕು. ಕೋವಿಡ್ ನಂತರ ಡಿಜಿಟಲ್ ತಾಣಗಳು ಅಪಾರವಾಗಿ ಹೆಚ್ಚಾಗಿವೆ. ತಂತ್ರಜ್ಞಾನ ಯಾವುದೇ ಆದರೂ ವಿಷಯ ಎಂದಿಗೂ ಒಂದೇ. ಸುದ್ದಿನೀಡುವಿಕೆ ಮತ್ತು ಸಾರ್ವಜನಿಕ ಹಿತ ಕಾಯುವುದೇ ಪತ್ರಿಕೋದ್ಯಮಕ್ಕೆ ಮುಖ್ಯವಾಗಬೇಕು. ಈ ಹಿನ್ನಲೆಯಲ್ಲಿ ಡಿಜಿಟಲ್ ಮಾಧ್ಯಮದ ವೇಗ, ಬಳಕೆದಾರ ಸ್ನೇಹಿ ಗುಣ, ಕಡಿಮೆ ವೆಚ್ಚಗಳನ್ನು ಪೂರಕವಾಗಿ ಬಳಸಿಕೊಳ್ಳಬಹುದು ಎಂದು ಸಲಹೆಯಿತ್ತರು.

ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ. ಡಿ. ಎಸ್. ಪೂರ್ಣಾನಂದ, ಪ್ರತಿ ಹೊಸ ತಂತ್ರಜ್ಞಾನ ಆವಿಷ್ಕಾರಗೊಂಡಾಗ ಕ್ರಾಂತಿಕಾರಕ ಬದಲಾವಣೆ ಆಗುತ್ತದೆ, ಒಳಿತಾಗುತ್ತದೆ ಎಂದು ಭಾವಿಸಲಾಗುತ್ತಿತ್ತು. ರೇಡಿಯೋನಿಂದ ಶಾಂತಿ ಸ್ಥಾಪನೆ, ಟೆಲಿಗ್ರಾಫ್‌ನಿಂದ ದೇಶಗಳ ಮಧ್ಯೆ ಗಟ್ಟಿಸಂಬಂಧಗಳ ಸೃಷ್ಟಿ, ಜೈವಿಕತಂತ್ರಜ್ಞಾನದಿಂದ ಹಸಿವಿನ ಅಂತ್ಯವಾಗುತ್ತದೆ ಎಂದು ಹೇಳಲಾಯಿತಾದರೂ ಅದು ಘಟಿಸಲಿಲ್ಲ. ಅಂತೆಯೇ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ಹೆಚ್ಚೆಚ್ಚು ಕೋಮುವಾದ, ದ್ವೇಷ, ಸುಳ್ಳುಸುದ್ದಿಗಳು, ಆಶಾಂತಿಯನ್ನು ಪಸರಿಸಲಾಗುತ್ತಿದೆ. ಆಲ್ಟ್ನ್ಯೂಸ್, ವೆಬ್‌ಕೂಫ್‌ನಂತಹ ಸತ್ಯಪರಿಶೋಧನಾ ವೆಬ್‌ಸೈಟ್‌ಗಳು, ಪರಿಯಂತಹ ತಾಣಗಳು ಡಿಜಿಟಲ್ ಪತ್ರಿಕೋದ್ಯಮದ ಭಾಗವಾಗಿದ್ದು, ಧನಾತ್ಮಕವಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳನ್ನು ನಮ್ಮಮುಂದಿರಿಸಿವೆ ಎಂದರು.

ಪರೀಕ್ಷಾಂಗ ಕುಲಸಚಿವ, ಪ್ರೊ. ನವೀನ್‌ಕುಮಾರ್ ಎಸ್. ಕೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಹನದ ಆರಂಭದ ದಿನಗಳಿಗೆ ಹೋಲಿಸಿದಲ್ಲಿ ಇಂದು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಫೇಸ್‌ಬುಕ್, ಟ್ವಿಟ್ಟರ್, ಮತ್ತು ಇನ್ಸ್ ಟಾಗ್ರಾಂಗಳಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ಜನರಿಂದಲೇ ಡಿಜಿಟಲ್ ಜರ್ನಲಿಸಂ ಆರಂಭವಾಯಿತು. ಪ್ರಸ್ತುತ ಅದು ಅಗಾಧವಾಗಿ, ವೃತ್ತಿಪರವಾಗಿ ಬೆಳೆದಿದ್ದು, ನೂರಾರು ಸಾಫ್ಟ್ವೇರ್‌ಗಳು, ಸತ್ಯಪರಿಶೀಲನಾ ವೆಬ್‌ಸೈಟ್‌ಗಳು ಸೇರಿದಂತೆ ಹಲವು ರೀತಿಯಲ್ಲಿ ಅವಕಾಶಗಳು ಲಭ್ಯವಿರುವುದು ಆಶಾದಾಯಕ ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಭಾಗದ ಮುಖ್ಯಸ್ಥ ಡಾ ಸತ್ಯಪ್ರಕಾಶ್ ಎಂ. ಆರ್., ಮುಖ್ಯವಾಹಿನಿ ಪತ್ರಿಕೋದ್ಯಮವು ಹಲವು ರೀತಿಯ ಒತ್ತಡಗಳ ನಡುವೆ ನಲುಗಿದಾಗ ಭರವಸೆಯಾಗಿ ಬಂದದ್ದು ಡಿಜಿಟಲ್ ಪತ್ರಿಕೋದ್ಯಮ. ಸಿದ್ಧಾರ್ಥ ವರದರಾಜನ್, ಮುಹಮದ್ ಜುಬೈರ್, ಪ್ರತೀಕ್ ಸಿನ್ಹಾ, ಅಭಿನಂದನ್ ಸಿಕ್ರಿ, ಮಧು ತೆಹ್ರಾನ್, ಎಂ. ಕೆ. ವೇಣು ತರಹದ ಪತ್ರಕರ್ತರು ಡಿಜಿಟಲ್ ಮಾಧ್ಯಮ ಬಳಸಿ ಪರ್ಯಾಯ ಪತ್ರಿಕೋದ್ಯಮವನ್ನು ಆರಂಭಿಸಿದ್ದಾರೆ. ದ್ವೇಷ, ಕೋಮುವಾದ, ಸುಳ್ಳುಸುದ್ದಿಗಳಂತಹ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸುವಲ್ಲಿ ಇವರ ಪಾತ್ರ ಶ್ಲಾಘನೀಯ ಎಂದರು.

ವಿಚಾರ ಸಂಕಿರಣಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಇ.ಎಂ.ಆರ್.ಸಿ. ನಿರ್ದೇಶಕ ಡಾ. ಅರುಲ್‌ಚೆಲ್ವನ್ ಶ್ರೀರಾಮ್ ‘ಪ್ರಾದೇಶಿಕ ಭಾಷೆಗಳಲ್ಲಿನ ಡಿಜಿಟಲ್ ಪತ್ರಿಕೋದ್ಯಮದ ಸ್ಥಿತಿಗತಿಗಳು’ ಹಾಗೂ ಈದಿನ ಸುದ್ದಿತಾಣದ ಮುಖ್ಯಸಂಪಾದಕರಾದ ಅಶೋಕ್ ರಾಮ್ ಡಿ. ಆರ್. ‘ಡಿಜಿಟಲ್ ಪತ್ರಿಕೋದ್ಯಮ ಕಲಿಕೆಯ ಸವಾಲುಗಳು’ ವಿಷಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದರು.

ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ. ಸತ್ಯಪ್ರಕಾಶ್ ಎಂ. ಆರ್., ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಪ್ರೊ. ಸತೀಶ್‌ಕುಮಾರ್, ಪ್ರೊ. ವರ್ಗೀಸ್, ಇನ್ನಿತರ ಅಧ್ಯಾಪಕರು, ಸಂಶೋಧನಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿ ವ್ಯಾಪ್ತಿಯ ಐದು ಪತ್ರಿಕೋದ್ಯಮ ಸ್ನಾತಕ ಕಾಲೇಜುಗಳ 60 ವಿದ್ಯಾರ್ಥಿಗಳು ಹಾಜರಿದ್ದರು

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Smart City ಶಿವಮೊಗ್ಗ ವಾರ್ಡ್ 22 ರಲ್ಲಿ ಕಾಮಗಾರಿ ಪೂರೈಸದೇ ತೊಂದರೆ ಸಾರ್ವಜನಿಕರಿಂದ ಮನವಿ ಸಲ್ಲಿಕೆ

0

Book Your Advertisement Now.

Shivamogga Smart City ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವಂತಹ ವಾರ್ಡ್ 22 ಗಾಂಧಿ ಬಜಾರ್ ಪಶ್ಚಿಮ ಭಾಗದಲ್ಲಿ ಎಂ ಕೆ ಕೆ ರಸ್ತೆ, ಕಸ್ತೂರ ಬಾ ರಸ್ತೆಯಲ್ಲಿ ಮಹಾನಗರ ಪಾಲಿಕೆಯಿಂದ ರಸ್ತೆ ಮಾಡುವ ಕಾಮಗಾರಿ ನಡೆಯುತ್ತಿದ್ದು. ಈ ಕಾಮಗಾರಿಯೂ ಸುಮಾರು 25 ದಿನಗಳಿಂದ ನಡೆಯುತ್ತಿದ್ದು ಜಲ್ಲಿ ಬಿಜಾವಣೆ ಮಾಡಿ ಅಲ್ಲಲ್ಲಿ ಗುಂಡಿಗಳನ್ನು ತೆಗೆದು ಕಾಮಗಾರಿಯು ಪೂರ್ಣಗೊಳಿಸದೆ ಅನಾಹುತಗಳಿಗೆ, ಅಪಘಾತಗಳಿಗೆ ಕಾರಣವಾಗಿದೆ. ಗಾಂಧಿ ಬಜಾರ್ ನ ಮುಖ್ಯ ರಸ್ತೆಗಳಾದ ಕಸ್ತೂರಬಾ ರಸ್ತೆ, ಎಂ ಕೆ ಕೆ ರಸ್ತೆಗಳಲ್ಲಿ ಚಿಕ್ಕ ಮಕ್ಕಳು, ವೃದ್ಧರು ಹಾಗೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಪ್ರತಿದಿನವೂ ಅನಾಹುತಗಳಾಗುತ್ತಿವೆ ಇದನ್ನು ಈ ಕೂಡಲೇ ಸರಿಪಡಿಸಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಈ ಕೂಡಲೇ ಸರಿಪಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಇಳಿದು ಹೋರಾಟ ಮಾಡುವುದಾಗಿ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಹಿಂದುಳಿದ ವರ್ಗದ ವತಿಯಿಂದ ಎಚ್ಚರಿಸುತ್ತೇವೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Shivamogga Smart City ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಮೋಹನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಇಮ್ರಾನ್, ಶಿವಮೊಗ್ಗ ನಗರ ಕಾರ್ಮಿಕ ಘಟಕದ ಅಧ್ಯಕ್ಷರಾದ ಗಿರೀಶ್ ಸಕ್ರೆ, ಹರೀಶ್ ಸಂತೋಷ್, ಆರಿಫ್, ಬಾಬು, ವಿಶಾಲ್ ಹಾಗೂ ಇನ್ನು ಹಲವರಿದ್ದರು.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Karnataka State Government ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸರ್ಕಾರಕ್ಕೆ ಗಾಣಿಗ ಮುಖಂಡರಿಂದ ಅಭಿನಂದನೆ

0



Karnataka State Government  ಗಾಣಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸರ್ಕಾರ ಹೊಸ ನಿಗಮ ಸ್ಥಾಪಿಸುವ ಘೋಷಣೆ ಮಾಡಿದೆ. “ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ”ದ ಬಗ್ಗೆ ಕರ್ನಾಟಕ ಸರ್ಕಾರವು ಆದೇಶವನ್ನು ಹೋರಾಡಿಸಿದ್ದಕ್ಕೆ ಮತ್ತು ಗಾಣಿಗರ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಮಾಜದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.


ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಗಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅಖಿಲ ಭಾರತ ಗಾಣಿಗ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶ್ರೀ ಜಯಬಸವ ಸ್ವಾಮಿಜಿ, ರಾಜ್ಯ ಗಾಣಿಗ ಸಮಾಜದ ನಾಗಪ್ಪ, ಜಿಲ್ಲೆಯ ಗಾಣಿಗ ಸಮಾಜದ ರಾಜಕೀಯ ಮುಖಂಡರು, ಗಾಣಿಗ ಸಮಾಜದ ಬಾಂಧವರು ಶ್ರಮಿಸಿದ್ದಾರೆ.

 

ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಶೀಘ್ರ ಕಾರ್ಯರೂಪಕ್ಕೆ ಬರುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಆಗಬೇಕು. ರಾಜ್ಯ ಸರ್ಕಾರ ಕೂಡಲೇ ನಿಗಮದ ಕಾರ್ಯ ಆರಂಭಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.


Karnataka State Government  ನಿಗಮ ಘೋಷಣೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಎಸ್.ಎಸ್.ಜ್ಯೋತಿಪ್ರಕಾಶ್, ಅಧ್ಯಕ್ಷ ಜಿ.ವಿಜಯಕುಮಾರ್, ಉಪಾಧ್ಯಕ್ಷ ಎಸ್.ಎಸ್.ಸತೀಶ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಾನೂರ್, ಅಶೋಕ್.ಎ, ರವಿ, ಭದ್ರಾವತಿ ತಾಲೂಕಿನ ಅಧ್ಯಕ್ಷ ಆನಂದ್ ಕುಮಾರ್, ವಾಗೀಶ್ ಕೋಟಿ, ಮಹೇಶ್ ಕುಮಾರ್, ಶಿಕಾರಿಪುರ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ, ಜಯಂತ್, ಶಿವಮೊಗ್ಗ ಜಿಲ್ಲಾ ಗಾಣಿಗ ರೈ ಸಂಘದ ನಿಕಟಪೂರ್ವ ಅಧ್ಯಕ್ಷ ಹೆಚ್.ಸುಬ್ಬಯ್ಯ, ಅಧ್ಯಕ್ಷ ಎಂ.ನಾಗರಾಜ್, ಕಾರ್ಯದರ್ಶಿ ಎಚ್.ಮಂಜುನಾಥ್ ಗಾಣಿಗ, ಖಜಾಂಚಿ ಡಾ.ಶಿವಕುಮಾರ್.ಕೆ, ನಿರ್ದೇಶಕ ಜನಾರ್ಧನ್‌, ನಾಗೇಶ್.ಎಸ್.ಜಿ ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Photography ಛಾಯಾಗ್ರಹಣ ಒಂದು ಅದ್ಭುತವಾದ ಕಲೆ-ಪುಷ್ಪಾ ರಾಜೇಗೌಡ

Photography  ಬಾಳೆಹೊನ್ನೂರು : ಸಾವಿರಾರು ಪದಗಳ ಒಂದು ಸಮೂಹನವನ್ನು ಒಂದು ಛಾಯಾಚಿತ್ರ ದಿಂದ ಅರ್ಥೈಸಿಕೊಳ್ಳಬಹುದು ಎಂದು ಶ್ರೀಮತಿ ಪುಷ್ಪ ಟಿ.ಡಿ.ರಾಜೇಗೌಡ ಹೇಳಿದರು.

ತಾಲ್ಲೂಕಿನ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಜಿಲ್ಲಾ ಛಾಯಾಗ್ರಾಹಕರ ಹಾಗೂ ತಾಲ್ಲೂಕು ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶೃಂಚಿಕೊನಕ ಛಾಯಾ ಸಮ್ಮಿಲನ- 2023 ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಛಾಯಾಗ್ರಹಣ ಒಂದು ಅದ್ಬುತ ಕಲೆಯಾಗಿದೆ. ಕೆಲವೊಂದು ಸನ್ನಿವೇಶಗಳನ್ನು ತಾಳ್ಮೆಯಿಂದ ಸೆರೆ ಹಿಡಿಯಬೇಕಾಗಿದೆ. ಛಾಯಾಗ್ರಹಣವನ್ನು ನಂಬಿ ಸಾವಿರಾರು ಕುಟುಂಬಗಳೂ ಜೀವನವನ್ನು ಕಂಡುಕೊಂಡಿದೆ. ಕೊರೋನಾ ಸಂದರ್ಭದಲ್ಲಿ ಛಾಯಾಗ್ರಾಹಕರ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಬಳಲಿ ಇತ್ತೀಚಿನ ದಿನಗಳಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ ಎಂದರು.

ಛಾಯಾಗ್ರಾಹಕ ಸಂಘದ ರಾಜ್ಯಾಧ್ಯಕ್ಷ ಪರಮೇಶ್ವರ್ ಮಾತನಾಡಿ ಗ್ರಾಹಕರೇ ನಮ್ಮ ಅನ್ನದಾತರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರದ ಕ್ಯಾಮರಾಗಳು ಮಾರುಕಟ್ಟೆಯಲ್ಲಿ ಬಂದಿವೆ. ಗ್ರಾಮೀಣ ಪ್ರದೇಶದ ಛಾಯಾಗ್ರಾಹಕರಿಗೆ ಕ್ಯಾಮರಾ ತಂತ್ರಜ್ಞಾನವನ್ನು ತಿಳಿಸುವ ಉದ್ದೇಶದಿಂದ ಈ ಶಿಬಿರವನ್ನು ಏರ್ಪಡಿಸ ಲಾಗಿದೆ ಎಂದರು.

Photography  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜಯಚಂದ್ರ ಶಿಬಿರದಲ್ಲಿ ಅಲ್ಪಮ್ ಡಿಸೈನ್, ಪೋಟೋ ಪ್ರೇಮ್, ಮೀಡಿಯಾ ಸ್ಟಾಫ್ಟವೇರ್ ಹಾಗೂ ಛಾಯಾಗ್ರಾಹಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದ್ದು ಎಲ್ಲರ ಈ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಎ.ಮುರುಳಿ, ನಿರ್ದೇಶಕರಾದ ವಸಂತ್‌ಕುಮಾರ್, ಚಂದ್ರಶೇಖರ್, ಜಿಲ್ಲಾ ಗೌರವಾಧ್ಯಕ್ಷ ಎಂ.ಓ. ಜೋಯಿ, ಉಪಾಧ್ಯಕ್ಷರಾದ ಹೇಮಂತ್‌ಕುಮಾರ್, ಕಾರ್ಯದರ್ಶಿ ವಿನಯ್, ದುರ್ಗೇಶ್, ಖಜಾಂಚಿ ಬಾಲಚಂದ್ರ, ಸಹ ಕಾರ್ಯದರ್ಶಿ ಭವಾನಿ ಶಂಕರ್, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಗೋಪಿನಾಥ್, ಕೊಪ್ಪ ಅಧ್ಯಕ್ಷ ಸಂದೀಪ್, ಎನ್.ಆರ್.ಪುರ ಅಧ್ಯಕ್ಷ ಸಾಜು, ಶೃಂಗೇರಿ ಅಧ್ಯಕ್ಷ ಅರುಣ್‌ಕುಮಾರ್, ಕಳಸ ಜಯಂತ್ ತೆಂಡ್ಕೂಲರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Development of Society ಐಕ್ಯತೆ ಸಾಮರಸ್ಯ ಸೌಹಾರ್ದತೆ ಸಾಮಾಜಿಕ ನ್ಯಾಯಗಳಿದ್ದರೆ ಸಮಾಜದ ಅಭಿವೃದ್ಧಿ

0

Development of Society ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯ. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಕಾನೂನು ಅಭೀರಕ್ಷಕ ಎನ್.ಹೆಚ್.ಯೋಗೇಶ್ ಹೇಳಿದರು.

ಚಿಕ್ಕಮಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ರ ಫೆಬ್ರವರಿ 20ರಂದು ಈ ದಿನವನ್ನು ಅಂಗೀಕರಿಸಲಾಯಿತು ಹಾಗೂ 2006ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಲಾಯಿತು.

ಪ್ರತಿ ಸಮಾಜದಲ್ಲೂ ಐಕ್ಯತೆ, ಸಾಮರಸ್ಯ, ಸೌಹಾರ್ದತೆ , ಮೂಲಭೂತ ಹಕ್ಕುಗಳ ನ್ಯಾಯವಿದ್ದರೆ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹ ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿ ಪ್ರಪಂಚದ ಪ್ರತಿಯೊಂದು ದೇಶವು ಸಾಮರಸ್ಯತೆ, ಐಕ್ಯತೆ ಹಾಗೂ ಮೂಲಭೂತ ಹಕ್ಕುಗಳನ್ನು ಹೊಂದಬೇಕಾದರೆ ಸಾಮಾಜಿಕ ನ್ಯಾಯದ ಅತ್ಯವಶ್ಯ ಎಂದು ಹೇಳಿದರು.

Development of Society ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಸಾಮಾಜಿಕ ನ್ಯಾಯ. ಪ್ರತಿಯೊಂದು ರಾಷ್ಟದ ಏಳಿಗೆ, ಶಾಂತಿ, ಸಹಬಾಳ್ವೆ ಮತ್ತು ಸಮೃದ್ಧಿ ಸಾಮಾಜಿಕ ತತ್ವದ ಆಧಾರದ ಮೇಲೆ ನಿಂತಿರುತ್ತದೆ. ಒಂದು ವೇಳೆ ದೇಶವು ಅನ್ಯಾಯ ಅಥವಾ ದಬ್ಬಾಳಿಕೆಗೆ ಒಳಪಟ್ಟರೆ ಜನತೆಯು ದಂಗೆ ಹೇಳುವ ಮೂಲಕ ಆಡಳಿತವನ್ನು ಮೆಟ್ಟಿ ನಿಂತಿರುವ ಹಲವಾರು ಪ್ರಸಂಗಗಳಿವೆ ಎಂದರು.

ಈ ಸಂದರ್ಭದಲ್ಲಿ ಜೈಲರ್ ಎಂ.ಕೆ.ನೆಲಧರಿ, ಅಧಿಕಾರಿಗಳು ವೃಂದ, ಸಿಬ್ಬಂದಿಗಳು ಹಾಗೂ ಕಾರಾಬಂಧಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dr. B.R. Ambedkar ಡಾ.ಅಂಬೇಡ್ಕರ್ ಬಗ್ಗೆ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ

Dr. B.R. Ambedkar ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಕರಪತ್ರವನ್ನು ದಸಂಸ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯ ಸರ್ಕಾರಿ ಬಾಲಕಿಯರ ಹಾಸ್ಟೆಲ್ ಬುಧವಾರ ಬಿಡುಗಡೆ ಗೊಳಿಸಲಾಯಿತು.

ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್‌ಕುಮಾರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಲ್ಲಾ ಜನಾಂಗದ ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆಗೆ ಬರೆಯಬಹುದು. 15 ರಿಂದ 25 ವರ್ಷ ವಯೋ ಮಾನದ ವಿದ್ಯಾರ್ಥಿಗಳು ಹಾಗೂ ಯುವಜನರು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

Dr. B.R. Ambedkar  ರ‍್ಯಾಂಕ್ ವಿಜೇತ 100 ವಿದ್ಯಾರ್ಥಿಗಳಿಗೆ ನಾಡಿನ ಪ್ರತಿಷ್ಟಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದಲ್ಲಿ ಉಚಿತ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ಪ್ರಥಮ ಬಹುಮಾನ ಗಳಿಸಿದವರಿಗೆ 5 ಲಕ್ಷ, ದ್ವೀತಿಯ 2.50 ಲಕ್ಷ ತೃತೀಯ 1 ಲಕ್ಷ ಬಹುಮಾನ ಲಭಿಸಲಿದೆ. ಪ್ರತಿ ಜಿಲ್ಲಾ ರ‍್ಯಾಂಕ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ 15 ಸಾವಿರ, ದ್ವಿತೀಯ 10 ಸಾವಿರ ಹಾಗೂ ತೃತೀಯ 5 ಸಾವಿರ ನಗದು ಬಹುಮಾನ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟನಾಯ್ಕ, ದಸಂಸ ಮುಖಂಡ ರುಗಳಾದ ವಸಂತ್‌ಕುಮಾರ್, ಅರುಣಾಕ್ಷಿ ಜಯರಾಮಯ್ಯ, ಇಲಿಯಾಜ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Airport ಶಿವಮೊಗ್ಗ ಏರ್ ಪೋರ್ಟ್ ಬಹುತೇಕ ಹೂಡಿಕೆದಾರರ ಉದ್ಯಮಕ್ಕೆ ನೆರವಾಗಲಿದೆ-ಡಿ.ಎಸ್.ಅರುಣ್

0

Shivamogga Airport ವಿಮಾನ ನಿಲ್ದಾಣ ಕಾರ್ಯ ಆರಂಭಿಸಿದ ನಂತರ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಾಗುವ ನೀರಿಕ್ಷೆಯಿದೆ.
ವಿಮಾನ ನಿಲ್ದಾಣದಿಂದ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಫೆಬ್ರವರಿ 27 ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಶುಭಾಶಯ ಕೋರುವ ಬಗ್ಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಉದ್ಯಮದಾರರಿಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಬಹುತೇಕ ಹೂಡಿಕೆದಾರರು ವಿಮಾನಯಾನ ಸೌಲಭ್ಯ ಇದೆಯೇ ಎಂದು ಕೇಳುತ್ತಿದ್ದರು.

ಬಹುತೇಕ ಸಂಸ್ಥೆಗಳು ವಿಮಾನಯಾನ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡುತ್ತಿದ್ದರು. ವಿಮಾನಯಾನ ಬಗ್ಗೆ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತರಲಾಯಿತು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ವಿಮಾನ ನಿಲ್ದಾಣ ಆರಂಭಿಸುವ ಬಗ್ಗೆ ಮಹತ್ವದ ಚರ್ಚೆಗಳು ಆಯಿತು. ಬಿ.ಎಸ್.ಯಡಿಯೂರಪ್ಪ ಅವರ ಸಂಪೂರ್ಣ ಪ್ರಯತ್ನದಿಂದ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕೆಲಸ ಆರಂಭಗೊಂಡಿತು. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಪರಿಶ್ರಮದಿಂದ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ವಿಮಾನ ನಿಲ್ದಾಣ ಉದ್ಯಮ ಕ್ಷೇತ್ರಕ್ಕೆ ಅತ್ಯಂತ ಬೇಡಿಕೆಯ ವಿಷಯ ಆಗಿತ್ತು.

Shivamogga Airport ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಪೂರ್ಣ ಪ್ರಯತ್ನದಿಂದ ಬಿ.ಎಸ್.ಯಡಿಯೂರಪ್ಪ ಅವರ ಕನಸು ನನಸಾಗುತ್ತಿದೆ. ವಿಮಾನ ನಿಲ್ದಾಣದಿಂದ ಕೈಗಾರಿಕಾ ಹಾಗೂ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯು ಪ್ರವಾಸೋದ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವ ಜಿಲ್ಲೆ ಆಗಿದ್ದು, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಯು ಆಗುತ್ತಿದೆ. ಮುಂದಿನ ದಿನಗಳಲ್ಲಿ ಕೈಗಾರಿಕಾ, ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಬಳ್ಳೆಕೇರೆ ಸಂತೋಷ್, ಬಿ.ಗೋಪಿನಾಥ್, ಅಶ್ವತ್ಥನಾರಾಯಣ ಶೆಟ್ಟಿ, ಬಿ.ಆರ್.ಸಂತೋಷ್, ಜಿ.ವಿಜಯ್‌ಕುಮಾರ್, ಪರಮೇಶ್ವರ್, ಮಧುಸೂದನ್ ಐತಾಳ್, ಪ್ರದೀಪ್ ಎಲಿ, ರಮೇಶ್ ಹೆಗ್ಡೆ, ಮಂಜೇಗೌಡ ಹಾಗೂ ಎಲ್ಲ ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Aam AAdmi Party ಚಿಕ್ಕಮಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಭ್ರಷ್ಟಮುಕ್ತ ಅಭಿಯಾನ

0

Aam AAdmi Party  ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಚಾರ ಆಡಳಿತ ತೊಲಗಿಸುವ ದೃಷ್ಟಿಯಿಂದ ಜಿಲ್ಲಾ ಆಮ್ ಆದ್ಮಿ ಪಕ್ಷದ ಮುಖಂಡರುಗಳು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ವರೆಗೆ ಮೆರವಣಿಗೆಯಲ್ಲಿ ಸಾಗಿ ನಂತರ ರಸ್ತೆಯನ್ನು ಪರಕೆಯಲ್ಲಿ ಗುಡಿಸುವ ಮೂಲಕ ಭ್ರಷ್ಟಮುಕ್ತ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ ಸರ್ಕಾರವು ಸಾರ್ವಜನಿಕರ ತೆರಿಗೆಯನ್ನು ಹೆಚ್ಚಿಸುವ ಮೂಲಕ ಭ್ರಷ್ಟಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡು ಶೇ.40ರಷ್ಟು ಕಮೀಷನ್ ಪಡೆಯುವ ಮೂಲಕ ಹಿಂದೆಂದು ಕಾಣದ ರೀತಿಯಲ್ಲಿ ಭಾರೀ ಭ್ರಷ್ಟಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.

ರೈತ ಸಮೂಹಕ್ಕೆ ಯಾವುದೇ ಯೋಜನೆಗಳನ್ನು ನೀಡದ ಪರಿಣಾಮ ಕಳೆದ ಮೂರು ವರ್ಷಗಳಿಂದ ಇಲ್ಲಿ ಯವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಮೆಗೆ ಶರಣಾಗಿ ಜೀವ ಕಳೆದುಕೊಂಡಿದ್ದಾರೆ. ಇದುವರೆಗೂ ಆ ಕುಟುಂಬಗಳಿಗೆ ಸರ್ಕಾರ ಪರಿಹಾರವು ಘೋಷಣೆ ಮಾಡದೇ ಅಸಡ್ಡೆ ವಹಿಸುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರೈತಾಪಿ ವರ್ಗವನ್ನು ಸರ್ಕಾರಗಳು ಕಡೆಗಣಿಸಿದರೆ ದೇಶದ ಬೆನ್ನಲುಬು ಕಳಚಿದಂತಾಗುತ್ತದೆ ಎಂದ ಅವರು ಇದೇ ರೀತಿ ಸರ್ಕಾರಗಳು ರೈತರ ವಿಷಯದಲ್ಲಿ ಧೋರಣೆ ನಿರ್ಣಯಗಳನ್ನು ಕೈಗೊಂಡಲ್ಲಿ ಮುಂದಿನ ಯುವಪೀಳಿಗೆ, ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುವ ಆತಂಕ ಎದುರಾಗಲಿದೆ ಎಂದರು.

Aam AAdmi Party  ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಂಡು ಭ್ರಷ್ಟಮುಕ್ತ ಭಾರತ ನಿರ್ಮಾಣ ಮಾಡಲು ಪಣತೊಡ ಬೇಕು. ದೆಹಲಿ ಮಾದರಿಯ ಸಾರ್ವಜನಿಕರ ತೆರಿಗೆ ಹಣವನ್ನು ಸಾರ್ವಜನಿಕರ ಅಭಿವೃದ್ದಿಗೆ ಬಳಸಿದಂತೆ ರಾಜ್ಯದ ಲ್ಲೂ ಆ ರೀತಿಯ ಆಡಳಿತ ನಡೆಸಲು ಎಎಪಿಗೆ ಸಂಪೂರ್ಣ ಬೆಂಬಲ ಸೂಚಿಸಬೇಕು ಎಂದು ಆಗ್ರಹಿಸಿದರು.

ಎಎಪಿ ಜಿಲ್ಲಾಧ್ಯಕ್ಷ ಹೇಮಂತ್ ಮಾತನಾಡಿ ಹಿರಿಯ ನಾಯಕರುಗಳ ಆದೇಶದಂತೆ ಇಡೀ ರಾಜ್ಯಾದ್ಯಂತ ಪರಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ನಗರಸಭೆ, ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಭಾರೀ ಭ್ರಷ್ಟಚಾರದಲ್ಲಿ ತೊಡಗಿದೆ. ಇವುಗಳಿಂದ ಸಾರ್ವಜನಿಕರು ಮುಕ್ತರಾಗಬೇಕಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಜಿಲ್ಲೆಯ ಜನಪ್ರತಿನಿಧಿಗಳು ಎಲ್ಲೆಂದರಲ್ಲಿ ಆಸ್ತಿ ಗಳಿಸುವ ಮೂಲಕ ಜನಸಾಮಾನ್ಯರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಿದ್ದಾರೆ. ಇವುಗಳನ್ನು ಸಾರ್ವಜನಿಕರು ಸೂಕ್ಮವಾಗಿ ಗಮನಿಸಿ ಮುಂದಿನ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯನ್ನು ಬೆಂಬಲಿಸಿದರೆ ದೆಹಲಿ ಮಾದರಿಯ ಆಡಳಿತವನ್ನು ನಮ್ಮ ರಾಜ್ಯದಲ್ಲಿ ಅನುಷ್ಟಾನಕ್ಕೆ ತರಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಸೈಯದ್ ಜಮೀಲ್ ಅಹ್ಮದ್, ಎಂ.ಪಿ.ಈರೇಗೌಡ, ಪರಮೇಶ್, ಅಂತೋಣಿ, ಪಿಲೋಮಿನಾ, ಜಾನ್, ಪುಟ್ಟರಾಜು, ಪವನ್ ಮತ್ತಿತರರು ಹಾಜರಿದ್ದರು.