Sunday, August 23, 2026
Sunday, August 23, 2026

ಶಿಕ್ಷಣ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ಒಂದೊಂದು ಶಾಲೆ- ಕಾಲೇಜು ದತ್ತು ಸ್ವೀಕರಿಸಲಿ

Date:

ತಾಲೂಕು ಹಾಗೂ ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ರಾಜ್ಯದಲ್ಲಿ ಒಂದು ಪದವಿ ಪೂರ್ವ ಕಾಲೇಜು ಹಾಗೂ ಶಾಲೆಯನ್ನು ದತ್ತು ಪಡೆಯಲು ಸೂಚಿಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಆದೇಶಿಸಿದ್ದಾರೆ.

ಇದು ಕೇವಲ ಶಿಕ್ಷಣ ಇಲಾಖೆ ಮಾತ್ರವಲ್ಲದೇ ತಾಲೂಕು ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೂ ಅನ್ವಯವಾಗಲಿದೆ.
ದತ್ತು ಸ್ವೀಕರಿಸುವ ಸಂಸ್ಥೆಯ ಶೈಕ್ಷಣಿಕ ಅಭಿವೃದ್ಧಿ ಹಾಗೂ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಆದೇಶದಲ್ಲಿ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ 47,000 ಸರ್ಕಾರಿ ಶಾಲೆಗಳು ಹಾಗೂ 1,200 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ದತ್ತು ಪಡೆದ ಸಂಸ್ಥೆಗೆ ಅಧಿಕಾರಿಗಳು ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಭೇಟಿ ನೀಡಬೇಕು. ಈ ವೇಳೆ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಬೇಕು ಹಾಗೂ ಸೂಕ್ತ ನಿರ್ದೇಶನಗಳನ್ನು ನೀಡಬೇಕು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಬೇಕು. ಅವರ ಆಸಕ್ತಿಗಳನ್ನು ಅರಿಯಬೇಕು ಹಾಗೂ ಜೀವನದಲ್ಲಿ ಗುರಿ ಹೊಂದಲು ಪ್ರೇರೇಪಿಸಬೇಕು ಎಂದು ಸೂಚನೆ ನೀಡಲಾಗಿದೆ.

ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಇತರ ಉನ್ನತ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳನ್ನು ದತ್ತು ಪಡೆಯುವುದಕ್ಕೆ ಹಂಚಿಕೆ ಮಾಡಲಿದ್ದಾರೆ.

ದತ್ತು ಪಡೆಯಲು ಹಂಚಿಕೆ ಮಾಡಲಿರುವ ಶಾಲೆಗಳ ಪೈಕಿ ಬಹುತೇಕ ಶಾಲೆಗಳು ಗ್ರಾಮೀಣ ಶಾಲೆಗಳಾಗಿರಲಿದ್ದು, ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಇಲಾಖೆ, ಪದವಿ ಪೂರ್ವ ಇಲಾಖೆಯ ಉಪ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರಲಿದ್ದು ಮಾಸಿಕ ವರದಿ ಸಲ್ಲಿಸಲಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಮುಂದಿನ ಎರಡುವರ್ಷಗಳಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣದ ಉದ್ದೇಶವಿದೆ- ಮಧು ಬಂಗಾರಪ್ಪ.

Madhu Bangarappa ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ...

Breaking News ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಬಸ್ ಮತ್ತು ಗೂಡ್ಸ್ ವಾಹನ ಢಿಕ್ಕಿ:ಚಾಲಕ ಗಾಯಾಳು

Breaking News ತೀರ್ಥಹಳ್ಳಿ - ಉಡುಪಿ ಮಾರ್ಗ ಮಧ್ಯೆಯ ಘಂಟೆಹಕ್ಲು...

B.Y. Raghavendra ಶಿವಮೊಗ್ಗ ಗ್ರಾಮಾಂತರ ರೈತರ ನೀರಿನ ಬವಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಿ- ಬಿ.ವೈ.ರಾಘವೇಂದ್ರ.

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದ...