Theatre ನಮ್ಮ ಹಳ್ಳಿ ಥಿಯೇಟರ್ (ರಿ), ಶಿವಮೊಗ್ಗ ವತಿಯಿಂದ ಕೊಡಲಾಗುವ ವರ್ಷದ ‘ರಂಗಸಾಧಕ’ ಮತ್ತು ‘ಸಮಾಜಸೇವಕ’ ಪ್ರಶಸ್ತಿ ವಿತರಣೆಯನ್ನು ಫೆಬ್ರವರಿ 26ರ ಭಾನುವಾರ ಸಂಜೆ 6:15ಕ್ಕೆ ನಗರದ ಸುವರ್ಣ ಸಾಂಸ್ಕೃತಿಕ ಭವನ, ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ವರ್ಷದ ರಂಗ ಸಾಧಕ -2022ರ ಪ್ರಶಸ್ತಿಯನ್ನು ಹೆಸರಾಂತ ರಂಗಕರ್ಮಿ, ರಂಗ ಸಮಾಜದ ಸದಸ್ಯರಾದ ಶ್ರೀಮತಿ ದಾಕ್ಷಾಯಿಣ ಭಟ್.ಎ ರವರು ಭಾಜನರಾಗಿದ್ದಾರೆ.
Theatre ರಂಗಭೂಮಿಯಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಮೊದಲು ಈ ಪ್ರಶಸ್ತಿಗೆ ಎಸ್ ಮಾಲತಿ, ಪುರುಷೋತ್ತಮ್ ತಲವಾಟ, ಡಾ. ಎಂ ಗಣೇಶ್, ಎಸ್ ಎಂ ಸೇತುರಾಮ್ ಭಾಜನರಾಗಿದ್ದರು.
ಈ ಬಾರಿಯ ವರ್ಷದ ‘ಸಮಾಜಸೇವಕ -2022’ ನೇ ಪ್ರಶಸ್ತಿಯನ್ನು ಶಿವಮೊಗ್ಗದ ಹೆಸರಾಂತ ದಂತ ವೈದ್ಯರಾದ ಹಾಗೂ ರೆಡ್ ಕ್ರಾಸ್ ಕರ್ನಾಟಕ ಶಾಖೆಯ ಉಪಾಧ್ಯಕ್ಷರಾದ ಡಾ. ವಿ.ಎಲ್.ಎಸ್. ಕುಮಾರ್ ರವರು ಭಾಜನರಾಗಿದ್ದಾರೆ.
ಸಮಾಜ ಸೇವೆ ಮತ್ತು ಆಪತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ಕೊಡ ಮಾಡಲಾಗುತ್ತಿದೆ. ಈ ಮೊದಲು ಈ ಪ್ರಶಸ್ತಿಯನ್ನು ಪದ್ಮಶ್ರೀ ಹಾಜಬ್ಬ, ಡಾ. ರಜನಿ ಎ. ಪೈ, ಶ್ರೀಯುತ ಸಂದೇಶ ಜವಳಿ, ಭಾಜನರಾಗಿದ್ದರು.
ನಮ್ಮ ಹಳ್ಳಿ ಥಿಯೇಟರ್ (ರಿ) ತಂಡದ ದಶಮಾನೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು.
ಸಭಾಕಾರ್ಯಕ್ರಮದ ನಂತರ ನಟಮಿತ್ರರು(ರಿ) ತೀರ್ಥಹಳ್ಳಿ ಕಲಾವಿದರು ಅಭಿನಯಿಸುವ ಬಹು ಬೇಡಿಕೆಯ ರಾಜ್ಯ ಪ್ರಶಸ್ತಿ ಪಡೆದ ನಾಟಕ “ತುರುಬ ಕಟ್ಟುವ ಹದನ” ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಮತ್ತು ಪ್ರವೇಶ ಉಚಿತವಿರುತ್ತದೆ ಎಂದು ತಂಡದ ಅಧ್ಯಕ್ಷರಾದ ಪ್ರವೀಣ.ಎಸ್ ಹಾಲ್ಮತ್ತೂರ್ ಮತ್ತು ಕಾರ್ಯದರ್ಶಿ, ಚೇತನ್ ಕುಮಾರ್ ಸಿ ರಾಯನಹಳ್ಳಿ ತಿಳಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.