Friday, April 10, 2026
Friday, April 10, 2026
Home Blog Page 1275

Ugadi Festival ಶೋಭಾಯಮಾನವಾಗಲಿ ಬದುಕು

0

Ugadi Festival  ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ…


ಯುಗಾದಿ ಹಬ್ಬ ಬಂತು ಅಂದ್ರೆ, ಏನೋ,ಖುಷಿ…
ನಮಗೆ ಯುಗಾದಿ ಹಬ್ಬ ಅಂತ ಬಂದಾಗ ಮೊದಲು ನೆನಪಾಗುವುದು, ಬೇವು – ಬೆಲ್ಲ , ಜೊತೆಗೆ ಒಬ್ಬಟ್ಟಿನ ಊಟ.

ಚಂದ ಚಂದ ಬಟ್ಟೆಗಳನ್ನ ತೊಟ್ಟುಕೊಂಡು, ದೇವರ ಪೂಜೆಯನ್ನು ಮಾಡಿ ಬೇವು ಬೆಲ್ಲವನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ನಂತರದಲ್ಲಿ ಮನೆ ಮಂದಿ ಎಲ್ಲಾ ಕುಳಿತು ಒಬ್ಬಟ್ಟಿನ ಊಟ ಮಾಡೋದ್ರಲ್ಲಿ ಇರೋ ಮಜಾನೇ ಬೇರೆ ಅಲ್ವಾ…!


ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬ ವನ್ನು ಹೊಸ ವರ್ಷ ಅರ್ಥಾತ್ ಹೊಸ ಸಂವತ್ಸರದ ಆರಂಭ ಎಂದು ಸಂಭ್ರಮದಿಂದ ಆಚರಿಸುತ್ತೇವೆ. ಈ ದಿನ ವರ್ಷದ ಮೊದಲ ದಿನ. ಶೋಭಕೃತ ನಾಮ ಸಂವತ್ಸರ ಇಂದಿನಿಂದ ಆರಂಭಗೊಳ್ಳುತ್ತದೆ. ಬೇವು-ಬೆಲ್ಲವನ್ನ ಸಮಾನವಾಗಿ ಸ್ವೀಕರಿಸುತ್ತೇವೆ. ಯಾಕೆ ಬೇವುಬೆಲ್ಲವನ್ನ ಸಮಾನವಾಗಿ ಸ್ವೀಕರಿಸುತ್ತೇವೆ ಎಂದರೆ…?

ನಮ್ಮ ಜೀವನದಲ್ಲಿ ಕಷ್ಟ- ಸುಖ ಎರಡು ಸಮಾನವಾಗಿ ಬರಲಿ ಎಂಬ ಸಂಕೇತವನ್ನು ಬೇವು ಬೆಲ್ಲ ಸೂಚಿಸುತ್ತದೆ.


ಯುಗಾದಿ ಎಂಬುದು ಹೊಸತನದ ಸಂಕೇತ. ಗಿಡ ಮರಗಳಲ್ಲಿ ಒಣಗಿರುವ ಎಲೆಗಳು ಉದುರಿ, ಹೊಸ ಚಿಗುರಿನ ಆಗಮನದ ಸಂದರ್ಭ. ಈ ಸಂದರ್ಭದಲ್ಲಿ ಪ್ರಕೃತಿಯನ್ನು ನೋಡಿದರೆ ಪ್ರಕೃತಿ ಮಾತೆ ತನ್ನ ಹಸಿರು ಸೆರಗನ್ನ ಊರು ತುಂಬಾ ಹಾಸು ಹೊಂದಿದ್ದಾಳೆ ಎಂದೆನಿಸುತ್ತದೆ ಅಲ್ಲವೇ…!

 

Ugadi Festival  ದ .ರಾ ಬೇಂದ್ರೆ ಅವರು ಹೇಳಿರುವ ಹಾಗೆ,
ಯುಗ ಯುಗಾದಿ ಕಳೆದರು, ಯುಗಾದಿ ಮರಳಿ ಬರುತಿದೆ…
ಹೊಸ ವರುಷವ ಹೊಸ ಹರುಷವ ತರುತಿದೆ…
ಆಹಾ…! ಎಂಥ ಅದ್ಭುತ ಸಾಲುಗಳು ಅಲ್ಲವೇ… ಈ ಸಾಲುಗಳು ಎಂದೆಂದಿಗೂ ಅಜರಾಮರ…

ಹೊಸ ವರುಷ, ಹೊಸ ಸಂವತ್ಸರದ ಹೊಸ ದಿನ, ಹೊಸ ಕನಸುಗಳೆಲ್ಲ ಹೊಸದುಕೊಳ್ಳಲಿ, ಈ ಯುಗಾದಿ ಹಬ್ಬ ನಿಮ್ಮ ಕನಸುಗಳು ನನಸಾಗಲಿ ಎಂದು ಕೆ ಲೈವ್ ಬಳಗ ಹಾರೈಸುತ್ತದೆ…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Scouts and Guides ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾಗಿ ಶ್ರೀಮತಿ ಭಾರತಿ ಚಂದ್ರಶೇಖರ್ ಆಯ್ಕೆ

0

Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಭಾರತಿ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. ರೋಟರಿ ಜಿಲ್ಲಾ ಗವರ್ನರ್ ಪ್ರೊ. ಎ.ಎಸ್.ಚಂದ್ರಶೇಖರ್ ಅವರ ಪತ್ನಿ ಭಾರತಿ ಚಂದ್ರಶೇಖರ್ ಅವರು ಇದೀಗ 3ನೇ ಬಾರಿ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಭಾರತಿ ಚಂದ್ರಶೇಖರ್ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿಯು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾ ಗೈಡ್ ಕಮೀಷನರ್ ಆಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ 38 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಮಾಡಿದ್ದಾರೆ.

Scouts and Guides ಅಂತರಾಷ್ಟ್ರೀಯ ಇನ್ನರ್‌ವ್ಹೀಲ್, ಜಿಲ್ಲಾ ಚೇರ‍್ಮನ್ ಆಗಿ ಯಶಸ್ವಿಯಾಗಿ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕೀರ್ತಿ ಇವರದು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ನಿರ್ದೇಶಕಿ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಉಪಾಧ್ಯಕ್ಷೆ, ಜಿಲ್ಲಾ ಬಳಕೆದಾರರ ವೇದಿಕೆ ಹಾಗೂ ವಿವಿಧ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಭಾರತೀಯ ಕುಟುಂಬ ಯೋಜನಾ ಸಂಸ್ಥೆ ಶಿವಮೊಗ್ಗ ಶಾಖೆಯ ಉಪಾಧ್ಯಕ್ಷೆ, ಜನಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯೆ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ರಾಜ್ಯ ಮಹಿಳಾ ಘಟಕದ ಉಪಾಧಕ್ಷೆ, ಕನ್ನಡ ಸಾಹಿತ್ಯ ಪರಿಷತ್, ಗಮಕ ಪರಿಷತ್, ಅಖಿಲ ಭಾರತ ಲೇಖಕಿಯರ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ ಮೈಸೂರ ಶ್ರೀ ಶಿವರಾತ್ರಿಶ್ವರ ಗುರುಗಳಿಂದ ಕಡಲಿಗೆ ಶ್ರೀ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

UAHS Shivamogga ನಾವು ಸಾಂಪ್ರದಾಯಿಕ ಸುಸ್ಥಿರ ನಿಸರ್ಗ ನಿರ್ಮಾಣ ಮಾಡಬೇಕು- ಡಾ.ಆರ್.ಸಿ.ಜಗದೀಶ

0

UAHS Shivamogga ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ವತಿಯಿಂದ ವಿಶ್ವ ಅರಣ್ಯ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ
ಸುಸ್ಥಿರ ಕೃಷಿ ಉತ್ಪಾದನೆಗೆ ಮರ ಆಧಾರಿತ ಕೃಷಿ ಕಾರ್ಯಾಗಾರ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಬಿದಿರಿನ ಗಿಡ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಕುಲಪತಿಗಳಾದ RC ಜಗದೀಶ್ ರವರು ಮಾತನಾಡಿ, ಇದೊಂದು ವಿಶೇಷ ದಿನ ನಮಗೆ ಸ್ವತಂತ್ರ ಬರುವ ಮುನ್ನ ಶೇ35% ಅರಣ್ಯ ಇತ್ತು. ಆದರೆ ಈಗ ಕೈಗಾರಿಕೆ ಗಳಿಗೆ,ರಸ್ತೆಗಳಿಗೆ,ಕಟ್ಟಡಗಳಿಗೆ,ಮೊದಲಾದವುಗಳಿಗೆ ಅರಣ್ಯ ಅವಶ್ಯಕ ದೇಶದಲ್ಲಿ ಏನೇ ಅಭಿವೃದ್ಧಿಯಾದರೆ ಮೊದಲು ನಾಶವಾಗುವುದು ಅರಣ್ಯ. ಈಗ ಸೆಟಲೈಟ್ ನ ಪ್ರಕಾರ ಈಗ 18% ಅರಣ್ಯಇದೆ. ಈಗ ಕಾಡು ನಾಶವಾಗುತ್ತಿದೆ. ಜನಸಂಖ್ಯೆ ಜಾಸ್ತಿಯದಂತೆ ಅದು ಪರಿಣಾಮ ಬಿರುವುದು ಅರಣ್ಯದ ಮೇಲೆ . ನಮಗೆ ಮಳೆ ಬರುವುದಕ್ಕೆ ಅರಣ್ಯ UAHS Shivamogga ಬೇಕು ,ಇಂಗಾಲದ ಡೈ ಆಕ್ಸೈಡ್ ಕಡಿಮೆ ಮಾಡಲು ಅರಣ್ಯ ಬೇಕು, ಆಮ್ಲಜನಕ ಹೆಚ್ಚುಮಡ ಲು ಅರಣ್ಯ ಬೇಕು ಆಹಾರ ಮತ್ತು ಔಷಧಿಗಳಿಗೆ ಅರಣ್ಯ ಅವಶ್ಯಕತೆ ಇದೆ. ದೇಶದಲ್ಲಿ 80% ಔಷಧಿಗಳು ಸಿಗುವುದು ಅರಣ್ಯ ದಿಂದ ನಾವು ಬಳಷ್ಟು ಅರಣ್ಯಕ್ಕೆ ಅವಲಂಬಿತವಾಗಿದ್ದೇವೆ. ನಮ್ಮ ದೇಶದಲ್ಲಿ121 ಕೋಟಿ ಜನಸಂಖ್ಯೆ ಇದೆ. ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟರೆ 121ಕೋಟಿ ಗಿಡ ನೆಟ್ಟ0ತಗುತ್ತದೆ.ಇದರಿಂದಾಗಿ ದೇಶದಲ್ಲಿ ಅರಣ್ಯ ಜಾಸ್ತಿಯಾದಂತಾಗುತ್ತದೆ.ನಾವು ಸಾಂಪ್ರದಾಯಿಕ ಸುಸ್ಥಿರ ನಿಸರ್ಗ ಮಾಡಬೇಕು. ಆದ್ದರಿಂದ, ಅರಣ್ಯ ಕೃಷಿಯನ್ನು ಆರಂಭಿಸಬೇಕು ಬೆಳೆಗಳ ಪಕ್ಕದಲ್ಲಿ ಮರಗಳನ್ನು ಬೆಳೆಯುವ ಮೂಲಕ ಅರಣ್ಯ ಹೆಚ್ಚಿಸಬಹುದು ಎಂದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Clock Tower in Shimoga Akka Mahadevi Circle ಶಿವಮೊಗ್ಗ ಅಕ್ಕ ಮಹಾದೇವಿ ವೃತ್ತದಲ್ಲಿ ಗಡಿಯಾರ ಗೋಪುರ ಉದ್ಘಾಟನೆ

0

Clock Tower in Shimoga Akka Mahadevi Circle ಶಿವಮೊಗ್ಗ ಉಷಾನರ್ಸಿಂಗ್‌ ಹೋಂ ಬಳಿ ಅಕ್ಕಮಹಾದೇವಿ ವೃತ್ತದಲ್ಲಿ ಸೋಮವಾರ ಸಂಜೆ ಕ್ಲಾಕ್‌ ಟವರ್‌ನ್ನು ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್‌.ಅರುಣ್‌ ಅವರು ಉದ್ಘಾಟಿಸಿದರು.

Clock Tower in Shimoga Akka Mahadevi Circle ಈ ಸಂದರ್ಭ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ, ಮಹಾನಗರ ಪಾಲಿಕೆ ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಲಕ್ಷ್ಮಿ ಶಂಕರ್‌, ಪಾಲಿಕೆ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್‌, ಸೂಡಾ ಅಧ್ಯಕ್ಷರಾದ ಎನ್‌.ಜಿ.ನಾಗರಾಜ್‌, ಪಾಲಿಕೆ ಸದಸ್ಯೆ ಆರತಿ ಪ್ರಕಾಶ್‌ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Dr. Dhananjaya Sarji ಬಿಜೆಪಿ ಪ್ರಣಾಳಿಕೆ ಸಮಿತಿ ಜನರ ಬಳಿಗೆ ತೆರಳಿ ಸ್ಪಂದಿಸುತ್ತಿದೆ- ಡಾ.ಸರ್ಜಿ

0

Dr. Dhananjaya Sarji  ಡಬಲ್‌ ಎಂಜಿನ್‌ ಬಿಜೆಪಿ ಸರಕಾರ ಕೈಗೊಂಡ ಮಹತ್ತರವಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿಯೊಬ್ಬರಿಗೂ ಮುಟ್ಟಿಸುವಂತಹ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನ ಸಮಿತಿ ಜಿಲ್ಲಾಸಂಚಾಲಕರಾದ ಡಾ.ಧನಂಜಯ ಸರ್ಜಿ ಹೇಳಿದರು.

ನಗರದ ಸಾಗರ ರಸ್ತೆಯ ಹರ್ಷ ದಿ ಫರ್ನ್‌ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಅಟಲ್‌ ಬಿಹಾರಿ ವಾಜಪೇಯಿ ಅವರು ಅಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ನಾವು ಸರಿಯಾಗಿ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಿಲ್ಲ. ಈಗ ಬಿಜೆಪಿ ಡಬಲ್‌ ಎಂಜಿನ್‌ ಸರಕಾರ ಕೈಗೊಂಡಂತಹ ಮಹತ್ತರ ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಪ್ರಣಾಳಿಕೆಗೆ ಸಲಹೆ ಪಡೆಯುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಬಿಜೆಪಿ ಪ್ರಬುದ್ಧರ ಪಕ್ಷ. ಕೊಠಡಿಯಲ್ಲಿ ಕುಳಿತು ಪ್ರಣಾಳಿಕೆ ಸಿದ್ಧಪಡಿಸುವಂತ ಪ್ರಬುದ್ಧತೆ ಇದೆ. ಆದರೆ, ಜನರ ಬೇಕು, ಬೇಡಗಳನ್ನು ತಿಳಿಯುವ ಸಲುವಾಗಿ ಜನರ ಹತ್ತಿರ ಹೋಗಿ ಸ್ಪಂದಿಸುತ್ತಿದೆ. ಇಂತಹ ಕೆಲಸ ಬಿಜೆಯಿಂದ ಮಾತ್ರ ಸಾಧ್ಯ ಎಂದು ನಾವು ಧೈರ್ಯವಾಗಿ ಹೇಳಬಹುದು ಎಂದರು.

Dr. Dhananjaya Sarji  ಕೇಂದ್ರ ಸರಕಾರ 3 ಕೋಟಿ ನಿರ್ಮಿಸಿಕೊಟ್ಟಿದೆ. ರಾಜ್ಯದಲ್ಲಿ 7 ಲಕ್ಷ 50 ಸಾವಿರ ಮನೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದೆ. ಈವರೆಗೂ ವಿದ್ಯುತ್‌ ಕಾಣದ 19 ಸಾವಿರ ಹಳ್ಳಿಗಳಿಗೆ ಬೆಳಕನ್ನು ನೀಡಿದೆ. ನಮ್ಮ ಜಿಲ್ಲೆಯ ಚಿತ್ರಶೆಟ್ಟಿದಹಳ್ಳಿ ಕೂಡ ಸೇರಿದೆ. 2014ಕ್ಕೆ ಮೊದಲು ಒಂದು 11.3 ಕಿ.ಮೀ. ಹೈವೇ ಆಗ್ತಿತ್ತು, ಇವತ್ತು ಒಂದು ದಿನಕ್ಕೆ 33.6 ಕಿ.ಮೀ ಹೈವೇ ಅಭಿವೃದ್ಧಿಯಾಗುತ್ತಿದೆ, ಸ್ವಾತಂತ್ರ್ಯ ಬಂದ ನಂತರ 65 ವರ್ಷಗಳಲ್ಲಿ 6750 ಕಿ.ಮೀ. ಹೈವೇ ಅಭಿವೃದ್ಧಿಯಾಗಿದ್ದರೆ, ಕೇವಲ 8 ವರ್ಷಗಳಲ್ಲಿ 13 ಸಾವಿರ ಐದುನೂರು ಕಿ.ಮೀ. ಹೈವೇ ಅಗಿದೆ. ಅಲ್ಲದೇ 8.50 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಶೌಚಕ್ಕೆ ಕಡಿವಾಣ ಹಾಕಿದೆ. ಇದು ಅಭಿವೃದ್ಧಿಯ ವೇಗಕ್ಕೆ ಸಾಕ್ಷಿಯಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ ಎಂದರು.

ಇನ್ನು ರಾಜ್ಯದಲ್ಲಿ 2014 ಮೊದಲು 65 ವರ್ಷದಲ್ಲಿ ಏಳು ವಿಮಾನ ನಿಲ್ದಾಣಗಳು ಮಂಜೂರಾಗಿದ್ದರೆ, 2014 ರ ನಂತರ ಏಳು ವಿಮಾ ನಿಲ್ದಾಣಗಳು ಮಂಜೂರಾಗಿವೆ. ರೈಲ್ವೆಗೆ ಸಂಬಂಧಿಸಿದಂತೆ 2014 ಮೊದಲು 16 ಕಿ.ಮೀ. ಇದ್ದರೆ, ಕೇವಲ 8 ವರ್ಷದಲ್ಲಿ 1600 ಕಿ.ಮೀ. ಅಭಿವೃದ್ಧಿಯಾಗಿದೆ. ಕೇವಲ ಬೆಂಗಳೂರಿಗೆ ರೈಲ್ವೆಗೆ ಬಂದಂತಹ ಅನುದಾನ 65 ಸಾವಿರ ಕೋಟಿ ರೂ., ರಾಜ್ಯಕ್ಕೆ ರಸ್ತೆ ಅಭಿವೃದ್ಧಿಗೆ ಬಂದಂತಹ ಅನುದಾನ 1.15 ಲಕ್ಷ ಕೋಟಿ ರೂ., 2014 ಕ್ಕಿಂತ ಮೊದಲು ಕೇವಲ ಏಳು ಕಿ.ಮೀ.ಇದ್ದ ಮೆಟ್ರೋ ಈಗ 52 ಕಿ.ಮೀ.ಆಗಿದೆ, ಇನ್ನೂ ಮೂರು ವರ್ಷದಲ್ಲಿ 122 ಕಿ.ಮೀ.ಆಗಲಿದೆ. ಇದು ಡಬಲ್‌ ಎಂಜಿನ್‌ ಸರಕಾರ ಸಾಧನೆ. ಈ ಸಾಧನೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಕೋವಿಡ್‌ ಸಂದರ್ಭ 1ಲಕ್ಷದ 92 ಸಾವಿರ ವಿಮಾನಗಳನ್ನು ಹಾರಾಟ ಮಾಡಿಸಿ, ಭಾರತದಿಂದ ಹೊರ ಹೋಗಿದ್ದ ಒಂದು ಕೋಟಿ 90 ಲಕ್ಷ ಜನರನ್ನು ಸುರಕ್ಷಿತವಾಗಿ ಕರೆ ತಂದವರು ಮೋದಿಜೀ ಅವರು. ಬೇರೆ ದೇಶಗಳಿಂದ ಕೋವಿಡ್‌ ವ್ಯಾಕ್ಸಿನ್‌ ಸಾಲವಾಗಿ ಪಡೆಯಲಾಗುತ್ತಿತ್ತು. ಅಂತಹ ಸಂದರ್ಭ 250 ಕೋಟಿ ಡೋಸ್‌ನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ಕೊಟ್ಟು 100 ಬೇರೆ ದೇಶಗಳಿಗೆ ಉಚಿತವಾಗಿ ವ್ಯಾಕ್ಸಿನೇಷನ್‌ ನ್ನು ನೀಡುವ ಮೂಲಕ ಭಾರತಕ್ಕೆ ಶಕ್ತಿ ತುಂಬಿದ್ದು ಬಿಜೆಪಿ ಸರಕಾರ. ಮೊದಲು ವೈದ್ಯರು, ದಾದಿಯರಿಗೆ ವ್ಯಾಕ್ಸಿನ್ ನೀಡಿ ಜನ ಸೇವೆಗೆ ಅನುಕೂಲ ಮಾಡಿಕೊಟ್ಟಿದ್ದು ಹೆಮ್ಮೆಯ ಸಂಗತಿ ಎಂದರು.

ಬಿಜೆಪಿ ನಗರ ಅಧ್ಯಕ್ಷ ಎನ್‌.ಕೆ.ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ್ರು, ಡಿ.ಎಸ್‌.ಅರುಣ್‌, ನಗರ ಚುನಾವಣಾ ಪ್ರಭಾರಿಗಳಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಮುಖಂಡರಾದ ಕೆ.ಇ.ಕಾಂತೇಶ್‌, ಗಿರೀಶ್‌ ಪಟೇಲ್‌, ಎಸ್‌.ಎಸ್‌.ಜ್ಯೋತಿಪ್ರಕಾಶ್‌, ಮಹಾನಗರ ಪಾಲಿಕೆ ಮೇಯರ್‌ ಶಿವಕುಮಾರ್‌ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Save Ragigudda campaign ರಾಗಿಗುಡ್ಡ ಉಳಿಸಿ ಅಭಿಯಾನಕ್ಕೆ ಜರ್ಮನ್ ಪರಿಸರ ಆಸಕ್ತರು ಮತ್ತು ವಕೀಲರ ಸಂಘದ ಬೆಂಬಲ

0

Save Ragigudda campaign  ಇಂದು ರಾಗಿಗುಡ್ಡ ಉಳಿಸಿ ಅಭಿಯಾನ ವಕೀಲರ ಭವನ ಆವರಣದಲ್ಲಿ ಕೈ ಗೊಳ್ಳಲಾಯಿತು.

ಇದಕ್ಕೆ ಜರ್ಮನ್ ಪರಿಸರ ಆಸಕ್ತರು ಕೈ ಜೊಡಿಸಿದರು. ಇದಿಂಗೆ 10000 ಜನರು ಸಹಿಮಾಡುವ ಮೂಲಕ ವ್ಯಾಪಕ ಬೆಂಬಲ Save Ragigudda campaign ವ್ಯಕ್ತವಾಗಿದೆ ಎಂದು ಅಭಿಯಾನದ ಸಂಯೋಜಕರಲ್ಲಿ ಓರ್ವರಾದ ವಸಂತಕುಮಾರ್
ಕೆ ಲೈವ್ ಗೆ ಸಂದೇಶ ಕಳಿಸಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಗಿಗುಡ್ಡ ಉಳಿಸಿ ಅಭಿಯಾನಕ್ಕೆ ವಕೀಲರ ಸಂಘದ ಬೆಂಬಲ

Rippanpete Warrior Sandeep ಕರ್ತವ್ಯ ನಿರ್ವಹಣೆಯಲ್ಲೇ ಗುಂಡು ತಗುಲಿ ಪ್ರಾಣ ಬಿಟ್ಟ ರಿಪ್ಪನ್ ಪೇಟೆಯ ಯೋಧ ಸಂದೀಪ್

0

Rippanpete Warrior Sandeep ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಿಪ್ಪನಪೇಟೆಯ ಶಬರೀಶ ನಗರದ ಯೋಧ ಸಂದೀಪ್ ಅವರು ಈಶಾನ್ಯ ರಾಜ್ಯ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದಾಗ ಸಾವನಪ್ಪಿದ್ದಾರೆ.

ಸಂದೀಪ್ ಅವರು ಮಣಿಪುರದ ಅಸ್ಸಾಂ ರೈಫಲ್ಸ್ ನಲ್ಲಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಇವರು ರಿಪ್ಪನಪೇಟೆಯ ಶ್ರೀಮತಿ ವಿನೋದಮ್ಮ, ಹಿರಿಯಣ್ಣ ಅವರ ಮಗನಾಗಿದ್ದರು.

ಸಂದೀಪ್ ಅವರು ಮಾರ್ಚ್ 20 ಬೆಳಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗುಂಡುಹಾರಿ ಸಾವನ್ನಪ್ಪಿದ್ದಾರೆ. ಇವರ ಸಾವಿನ ವಿಷಯ ತಿಳಿಯುತ್ತಿದ್ದಂತೆ ರಿಪ್ಪನ ಪೇಟೆಯ ಸ್ಥಳೀಯರು ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇವರು ಕರ್ತವ್ಯದಲ್ಲಿ ಇದ್ದಾಗ ಗುಂಡು ತಗಲಿ ಮೃತಪಟ್ಟಿದ್ದಾರೆ ಎಂದು ಮಿಲಿಟರಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

Rippanpete Warrior Sandeep ಸಾಗರ ಶಾಸಕರಾದ ಹರತಾಳು ಹಾಲಪ್ಪ ಅವರು ಯೋಧ ಸಂದೀಪ್ ಅವರ ಸಾವಿನ ಸುದ್ದಿ ತಿಳಿದು ಸಂತಾಪ ಸೂಚಿಸಿದ್ದಾರೆ.
ಭಾರತೀಯ ಸೇನೆಯ, ಅಸ್ಸಾಂ ರೈಫಲ್ಸ್ ನಲ್ಲಿ (ಮಣಿಪುರ) ಸೇವೆ ಸಲ್ಲಿಸುತ್ತಿದ್ದ, ರಿಪ್ಪನಪೇಟೆ, ಶಬರೀಶ ನಗರದ ಸಂದೀಪ್ ರವರು ಮೃತ ಪಟ್ಟಿರುವ ವಿಷಯ ಅತೀವ ನೋವುಂಟು ಮಾಡಿದೆ.

ಭಗವಂತ ಮೃತರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕರುಣಿಸಿ, ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Gandhi Bazaar Tulaja Bhavani Temple ಶಿವಮೊಗ್ಗದಲ್ಲಿ ಮಾರ್ಚ್ 30 ರಿಂದ ದಿಂಡಿ ಮಹೋತ್ಸವ

0

Gandhi Bazaar Tulaja Bhavani Temple  ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜದಿಂದ ಗಾಂಧಿಬಜಾರಿನ ಶ್ರೀ ತುಳಜಾ ಭವಾನಿ ಅಮ್ಮನವರ ದೇವಳದಲ್ಲಿ 104ನೇ ವರ್ಷದ ಶ್ರೀ ರಾಮನವಮಿ ನಿಮಿತ್ತ ಮಾ. 30ರ ಗುರುವಾರ ಬೆಳಿಗ್ಗೆ 9ರಿಂದ ಮಾ. 31ರ ಶುಕ್ರವಾರ ಬೆಳಿಗ್ಗೆ 5.30ರವರೆಗೆ ಶ್ರೀ ವಿಠೋಬ ರುಖುಮಾಯಿ ದಿಂಡಿ ಮಹೋತ್ಸವ ಜರುಗಲಿದ್ದು, ಈ ಸಂದರ್ಭದಲ್ಲಿ ಕೀರ್ತನೆ, ಭಜನೆ, ಅಖಂಡ ಜಾಗರಣೆ, ಸಂತವಾಣಿ, ಪಾಳಿ ಭಜನೆ ಇರುತ್ತದೆ. ಮಾ. 31ರ ಶುಕ್ರವಾರ ಬೆಳಿಗ್ಗೆ 8.30ರಿಂದ 11.30 ರವರೆಗೆ ರಾಜಬೀದಿ ಉತ್ಸವ ನಡೆಯಲಿದೆ.

Gandhi Bazaar Tulaja Bhavani Temple  ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಮಾಜದ ಅಧ್ಯಕ್ಷ ಎಸ್. ಗೋಪಾಲ್ ನವಲೆ ಮತ್ತು ಸಮಿತಿಯವರು ಕೋರಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Job Vacancy Apply Now ಗುತ್ತಿಗೆ ಆಧಾರಿತ ಆರೋಗ್ಯ ಶಿಕ್ಷಣಾಧಿಕಾರಿಗಳ ನೇಮಕಾತಿಗೆ ಅರ್ಜಿ ಆಹ್ವಾನ

job vacancy apply now ಜಿಲ್ಲಾ ತರಬೇತಿ ಕೇಂದ್ರ(ಆರೋಗ್ಯ), ಶಿವಮೊಗ್ಗ ಇಲ್ಲಿಗೆ ಆರೋಗ್ಯ ಶಿಕ್ಷಣಾಧಿಕಾರಿ(ಹೆಚ್‍ಇಓ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯ ವಯಸ್ಸು 60 ರಿಂದ 65 ವರ್ಷಗಳ ಒಳಗಿರಬೇಕು. ಹಿರಿಯ ಆರೋಗ್ಯ ಸಹಾಯಕರು ಅಥವಾ ಇನ್ನೂ ಹೆಚ್ಚಿನ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿರಬೇಕು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ನಿರ್ವಹಿಸಿದ ಹಾಗೂ ತರಬೇತಿ ನೀಡಿದ ಅನುಭವ ಮತ್ತು ಸಾಮಥ್ರ್ಯವಿರಬೇಕು.

job vacancy apply now ಅರ್ಜಿಯನ್ನು ಜಿಲ್ಲಾ ತರಬೇತಿ ಕೇಂದ್ರ(ಆರೋಗ್ಯ), ಶಿವಮೊಗ್ಗ ಇಲ್ಲಿಗೆ ದಿನಾಂಕ: 03-04-2023 ರೊಳಗೆ ಸಲ್ಲಿಸಬೇಕೆಂದು ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Nurse Job Interview Results ಶುಶ್ರೂಷಕಿ ಮತ್ತು ರಿಹ್ಯಾಬಿಲಿಟೇಷನ್ ಕಾರ್ಯಕರ್ತರ ಆಯ್ಕೆ ಪಟ್ಟಿ ಪ್ರಕಟ

0

Nurse Job Interview Results ದಿನಾಂಕ: 22-02-2023 ರಂದು ಎನ್‍ಪಿಪಿಸಿ ಕಾರ್ಯಕ್ರಮದಡಿ ಖಾಲಿ ಇರುವ ಶುಶ್ರೂಷಕಿ ಹಾಗೂ ರಿಹ್ಯಾಬಿಲಿಟೇಷನ್ ವರ್ಕರ್‍ಗಳ ನೇರ ಸಂದರ್ಶನ ಏರ್ಪಡಿಸಲಾಗಿತ್ತು.

ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಎನ್‍ಸಿಡಿ ಘಟಕ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಇಲ್ಲಿ ಪ್ರಕಟಿಸಲಾಗಿದೆ.

Nurse Job Interview Results  ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ಏನಾದರೂ ಆಕ್ಷೇಪಣೆ ಇದ್ದಲ್ಲಿ ದಿ: 24-03-2023 ರೊಳಗಾಗಿ ಸಲ್ಲಿಸಬಹುದೆಂದು ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.