Friday, April 10, 2026
Friday, April 10, 2026
Home Blog Page 1276

K. S. Eshwarappa ಶಿವಮೊಗ್ಗದ ಡೀಸಿ ಕಚೇರಿ ಕಟ್ಟಡದ ಮೇಲೆ ಆಜಾನ್ ಕೂಗಿದ ಪ್ರಕರಣದ ಬಗ್ಗೆ ಕೆ .ಎಸ್.ಈಶ್ವರಪ್ಪ ಪ್ರತಿಕ್ರಿಯೆ

0

K. S. Eshwarappa ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರು,
ಶಿವಮೊಗ್ಗ ಡಿಸಿ ಕಚೇರಿ ಮೇಲೆ ಯುವಕನೊಬ್ಬ ಆಜಾನ್ ಕೂಗಿದ ವಿಚಾರ,
ಎಸ್.ಡಿ.ಪಿ.ಐ. ಕೋಮು ಸೌಹಾರ್ಧತೆಯನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಇವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕು.
ನಾನು ಮುಖ್ಯಮಂತ್ರಿ ಅವರಲ್ಲಿ ಈ ಬಗ್ಗೆ ಮನವಿ ಮಾಡುತ್ತೇನೆ.
ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದು ಸಂವಿಧಾನ ವಿರೋಧಿ ಕ್ರಮವಾಗಿದೆ.
ಆಜಾನ್ ಕೂಗಿವ ಬಗ್ಗೆ ಅಲ್ಲಿನ ಶಬ್ಧದ ಬಗ್ಗೆ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ.
ನಾನು ಕೊಡಗು, ಮಂಗಳೂರಿನಲ್ಲಿ ಆಜಾನ್ ಮೈಕ್ ನಲ್ಲಿ ಕೂಗಿರುವ ಬಗ್ಗೆ ಕೋರ್ಟ್ ವಿಚಾರ ಪ್ರಸ್ತಾಪ ಮಾಡಿದ್ದೇನೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಆಜಾನ್ ಕೂಗಿರುವುದು ಅಕ್ಷಮ್ಯ ಅಪರಾಧ.
ಕೇವಲ CRPC 107 ಸೆಕ್ಷನ್ ಹಾಕಿ ಅವನನ್ನು ಬಿಡಬಾರದು.
ಕೇವಲ ಅವರನ್ನು ಬಿಟ್ಟರೆ ಸಾಲದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ವಿಧಾನಸೌಧದಲ್ಲಿ ಕೂಗುತ್ತೇನೆ ಎಂದಿದ್ದು ಕೂಡ ರಾಷ್ಟ್ರದ್ರೋಹ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪಿ.ಎಫ್.ಐ. ನಲ್ಲಾದರೂ ಇರಲಿ, ಎಸ್.ಡಿ.ಪಿ.ಐ. ಮತ್ತೊಂದು ಸಂಘಟನೆಯಲ್ಲಾದರಲ್ಲೂ ಇರಲಿ.
ಪೊಲೀಸರು ಈ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳಬೇಕು.
ಪೊಲೀಸರು ಅಲ್ಲಿದ್ದರೂ ಕ್ರಮ ತೆಗೆದುಕೊಳ್ಳದೇ ಇರುವುದು ಕೂಡ ನಾನು ಹೇಳುತ್ತೇನೆ.
ಅಲ್ಲಾಗೆ ಅಪಮಾನ ಮಾಡುತ್ತಿರುವವರೇ ಅವರು.
ಮೈಕ್ ನಲ್ಲಿ ಅಲ್ಲಾ ಎಂದು ಕೂಗಿ ಅಪಮಾನ ಮಾಡುತ್ತಿದ್ದಾರೆ.
ನಾಲ್ಕು, ನಾಲ್ಕು ಮೈಕ್ ಹಾಕಿಕೊಂಡು ಕೂಗುತ್ತಾರೆ.
ಕೇವಲ ಮೈಕ್ ನಲ್ಲಿ ಕೂಗಿದರೆ ಮಾತ್ರನಾ ಅಲ್ಲಾನಿಗೆ ತೃಪ್ತಿಯಾಗುತ್ತಾ ಎಂದು ಹೇಳಿದ್ದಾರೆ.

K. S Eshwarappa  ಸುಪ್ರೀಂ ಕೋರ್ಟ್ ಆದೇಶ ಬಂದ ಸಂದರ್ಭದಲ್ಲಿ ಮಾತ್ರ ಬಿಗಿ ಕ್ರಮ ತೆಗೆದುಕೊಳ್ಳುತ್ತಾರೆ.
ಬಾಕಿ ಸಂದರ್ಭದಲ್ಲೂ ಬಿಗಿ ಕ್ರಮವಾಗಬೇಕು.
ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ, ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ.
ಬಾಕಿ ಸಂದರ್ಭದಲ್ಲೂ ಈ ಬಗ್ಗೆ ಬಿಗಿ ಕ್ರಮ ತೆಗೆದುಕೊಳ್ಳಬೇಕು.
ಎಲ್ಲಾ ಮುಸಲ್ಮಾನರೂ ಕೆಟ್ಟವರಲ್ಲ, ಒಳ್ಳೆಯ ಮುಸಲ್ಮಾನರೂ ಇದ್ದಾರೆ.
ಈ ಕೆಟ್ಟ ಮುಸಲ್ಮಾನರು, ಒಳ್ಳೆಯ ಮುಸಲ್ಮಾನರನ್ನು ಹಾಳು ಮಾಡುತ್ತಿದ್ದಾರೆ.
ಈ ಬಗ್ಗೆ ಒಳ್ಳೆಯ ಮುಸಲ್ಮಾನರು ಎಚ್ಚರದಿಂದಿರಬೇಕು ಎಂದು ಹೇಳಿದ್ದೇನೆ.
ಇದು ನಾನು ಹೇಳಿದ್ದು ತಪ್ಪಾ ಎಂದು ಹೇಳಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Klive Special Article ಮನಸ್ಸಿನಿಂದ ಮನಸ್ಸಿಗೆ-20

0

Klive Special Article ನಾನೊಂದು ಮೀನು…….

ಸಾಗರವೇ ನಮ್ಮ ಮನೆ……

ನಮಗೆ ನಿಮ್ಮಂತೆ ಪ್ರಕೃತಿಯನ್ನು ಘಾಸಿಗೊಳಿಸಿ ಕಟ್ಟಿದ ಕಟ್ಟಡಗಳಿಲ್ಲ,

ವಿಶಾಲ ಸಮುದ್ರದಲ್ಲಿ ಬೃಹತ್ ಜಲಚರ ಕುಟುಂಬದ ಜೊತೆ ವಾಸ,

ನಿಮ್ಮಂತೆ ನಮಗೆ ಹಲವು ಭಾಷೆಗಳಿಲ್ಲ, ಇರುವುದೊಂದೇ ಭಾಷೆ,

ಜಾತಿ ಧರ್ಮಗಳು ನಮಗೆ ಗೊತ್ತೇ ಇಲ್ಲ,

ನಿಮ್ಮಂತೆ ಯಾವ ಕಾನೂನುಗಳು ನಮ್ಮನ್ನು ಕಟ್ಟಿಹಾಕಿಲ್ಲ, ಸ್ವತಂತ್ರರು ನಾವು,

ಕಳ್ಳರಲ್ಲ ನಾವು, ಅದಕ್ಕೆ ನಮಗೆ ಪೋಲೀಸರೇ ಇಲ್ಲ,

ನಮಗೆ ನಾವೇ ರಾಜರು,
ನಮ್ಮನ್ನಾಳುವ ಯಾವ ಪುಢಾರಿಗಳು ಇಲ್ಲ,

ನಿಮ್ಮಂತೆ ನಮಗೆ ವಾಚು, ಕ್ಯಾಲೆಂಡರ್ ಗಳಿಲ್ಲ,

ಹುಟ್ಟಿದಾಗಿನಿಂದ ಉಸಿರು ನಿಲ್ಲುವವರೆಗೂ ಜೀವಿಸಿರುವುದೇ ನಮ್ಮ ಬದುಕು,

ನಮ್ಮಲ್ಲಿ ಡಾಕ್ಟರ್ ಗಳಿಲ್ಲ,
ಆಕ್ಟರ್ ಗಳಿಲ್ಲ, ಇ೦ಜಿನಿಯರ್ ಗಳು, ಸಾಪ್ಟ್ ವೇರ್ ಗಳೂ ಇಲ್ಲ,

ಪೂಜಾರಿಗಳ ಮಂತ್ರಗಳಿಲ್ಲ, ಜ್ಯೋತಿಷಿಗಳ ತಂತ್ರಗಳಿಲ್ಲ,
ಪ್ರಾದ್ರಿಗಳ ಪ್ರಾರ್ಥನೆಗಳಿಲ್ಲ.
ಮೌಲ್ವಿಗಳ ನಮಾಜುಗಳಿಲ್ಲ,

Klive Special Article ಬುದ್ಧಿಜೀವಿಗಳೂ ಇಲ್ಲ,
ಲದ್ದಿ ಜೀವಿಗಳು ಇಲ್ಲ,

ದೇಶಭಕ್ತರೂ ಇಲ್ಲ,
ದೇಶದ್ರೋಹಿಗಳೂ ಇಲ್ಲ,

ಚಳುವಳಿಗಳೂ ಇಲ್ಲ,
ಪ್ರದರ್ಶನಗಳೂ ಇಲ್ಲ,
ಸಮಾಜ ಸೇವಕರೂ ಇಲ್ಲ,

ತಲೆ ಒಡೆಯುವವರೂ ಇಲ್ಲ,
ತಲೆ ಹಿಡಿಯುವವರೂ ಇಲ್ಲ,
ಬೆನ್ನಿಗೆ ಚೂರಿ ಹಾಕುವವರೂ ಇಲ್ಲ,
ಹೃದಯಕ್ಕೆ ಘಾಸಿಗೊಳಿಸುವವರೂ ಇಲ್ಲ,

ಬ್ಯಾಂಕ್‌ ಅಕೌಂಟುಗಳೂ ಇಲ್ಲ,
ಕಪ್ಪು ಹಣವು ಇಲ್ಲವೇ ಇಲ್ಲ,

ಚಿಕನ್ ಕಬಾಬ್ ಗಳಿಲ್ಲ,
ಹೋಳಿಗೆ ತುಪ್ಪಗಳೂ ಇಲ್ಲ,

ಅರಿಶಿನ ಕುಂಕುಮಗಳಿಲ್ಲ,
ಕಾಯಿ ಕರ್ಪೂರಗಳು ಗೊತ್ತೇ ಇಲ್ಲ,

ಮದುವೆಗಳಿಲ್ಲ,
ಡೈವೋರ್ಸ ಗಳೂ ತಿಳಿದಿಲ್ಲ,

ಜೀನ್ಸ್ ಪ್ಯಾಂಟುಗಳಿಲ್ಲ,
ಮಿಡಿ ಚೂಡಿದಾರ್ ಗಳೂ ಇಲ್ಲ,
ಬ್ಯೂಟಿ ಪಾರ್ಲರಗಳೂ ಇಲ್ಲ,
ಯೋಗ ಧ್ಯಾನ ಸೆಂಟರ್‌ ಗಳೂ ಇಲ್ಲ,

ಅಶ್ಲೀಲವೂ ಇಲ್ಲ,
ಸೌಂದರ್ಯವೂ ಇಲ್ಲ,
ಸ್ವಚ್ಛಂದ ಬದುಕು, ನಿಷ್ಕಲ್ಮಶ ಸಂತಾನ,

ಕಷ್ಟಗಳೂ, ಅಪಾಯಗಳು ನಮಗೂ ಇವೆ, ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ,

ಕ್ಷಮಿಸಿ,
ನಾವು ನಿಮ್ಮಂತೆ ನಾಗರಿಕ ಮನುಷ್ಯರಲ್ಲ ಅನಾಗರಿಕ ಜಲಚರಗಳು,

ಆದರೂ ನಿಮ್ಮಲ್ಲೇ ಕೆಲವರು ನನಗೆ ಮಾತನಾಡುತ್ತಿದ್ದುದು ಕೇಳಿಸಿತು,

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು,
ನಿಜವೇ ?……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Puneeth Rajkumar Birthday ಶಿವಮೊಗ್ಗದಲ್ಲಿ ಕರ್ನಾಟಕ ರತ್ನ ಪುನೀತ್ ಜನ್ಮದಿನ ಆಚರಣೆ

0

Puneeth Rajkumar Birthday ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜಯ ಕರ್ನಾಟಕ ಜಿಲ್ಲಾ ಸಮಿತಿ, ಸರ್ಜಿ ಆಸ್ಪತ್ರೆಗಳ ಸಮೂಹ, ಸರ್ಜಿ ಫೌಂಡೇಶನ್‌ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಜುವೆಲ್‌ ರಾಕ್‌ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿವಮೊಗ್ಗದ, ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಶಿಬಿರಕ್ಕೆ ಚಾಲನೆ ನೀಡಿದರು.

Puneeth Rajkumar Birthday ಬಿಜೆಪಿ ಯುವ ಮುಖಂಡರಾದ ಕೆ.ಇ.ಕಾಂತೇಶ್‌, ಜಿಲ್ಲಾ ಸಮಿತಿ ಅಧ್ಯಕ್ಷರಾದ ಬಿ.ಎ.ಸುರೇಶ್‌ ಶೆಟ್ಟಿ ಮತ್ತಿತರರು ಹಾಜರಿದ್ದರು. ಬೆಳಗ್ಗೆ 8 ಗಂಟೆಯಿಂದಲೇ ಸರ್ಜಿ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ 100 ಕ್ಕೂ ಹೆಚ್ಚು ಮಂದಿಗೆ ಮದುಮೇಹ ಹಾಗೂ ರಕ್ತ ಪರೀಕ್ಷೆ ನಡೆಸಲಾಯಿತು. ಶಿಬಿರದಲ್ಲಿ ಜನರಲ್‌ ಪಿಜಿಷಿಯನ್‌ ಡಾ.ಆನಂದ್‌, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ರಕ್ಷಿತಾ, ಮೂಳೆ ರೋಗ ತಜ್ಞರಾದ ಡಾ. ಸಿದ್ದರಾಮೇಶ್‌, ಮಕ್ಕಳ ತಜ್ಞರಾದ ಡಾ. ರಶ್ಮಿ, ದಂತ ವೈದ್ಯರಾದ ಡಾ. ಅರುಣ್‌ ಕುಮಾರ್‌ ಅವರು ರೋಗಿಗಳಿಗೆ ತಪಾಸಣೆ ನಡೆಸಿ, ಸಲಹೆ ಸೂಚನೆ ನೀಡಿದರು. ಈ ಸಂದರ್ಭ ಆಸ್ಪತ್ರೆಯ ದಾದಿಯರು ಹಾಗೂ ಸಿಬ್ಬಂದಿ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Krishimela Dog Show ಕೃಷಿಮೇಳದಲ್ಲಿ ಜನಮನ ಸೆಳೆದ ಶ್ವಾನ ಪ್ರದರ್ಶನ

0

Krishimela Dog Show ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ಅದ್ದೂರಿಯಾಗಿ ನಡೆದಿದೆ.

ಕೃಷಿ ಮೇಳದಲ್ಲಿ ಡಾಗ್ ಶೋ ಜನರ ಕಣ್ಮನ ಸೆಳೆಯಿತು. ಡಾಗ್ ಶೋ ವೀಕ್ಷಿಸಲು ಜಿಲ್ಲೆಯ ಹಲವು ಕಡೆಯಿಂದ ಜನರು ಆಗಮಿಸಿದ್ದರು.


ವಿಶೇಷವಾಗಿ ಪೋಲಿಸ್ ಶ್ವಾನದಳ ಎಲ್ಲರನ್ನ ಮೂಕ ವಿಸ್ಮಿತರನ್ನಾಗಿ ಮಾಡಿತು. ಶ್ವಾನಗಳ ವಿಧೇಯತೆಯ ತರಬೇತಿ, ಅವುಗಳ ಚಾಣಾಕ್ಷತನ ಎಲ್ಲರಲ್ಲಿ ಆಶ್ಚರ್ಯ ಉಂಟು ಮಾಡಿತು.


ಈ ಡಾಗ್ ಶೋ ನಲ್ಲಿ ಸುಮಾರು 20 ಶ್ವಾನಗಳನ್ನ ನೋಂದಣಿ ಮಾಡಿಸಲಾಗಿತ್ತು. ಶಿವಮೊಗ್ಗದ ಅನೇಕ ಕಡೆಯಿಂದ ಶ್ವಾನಗಳೊಂದಿಗೆ ಜನರು ಆಗಮಿಸಿದ್ದರು. ತಮ್ಮ ತಮ್ಮ ಪ್ರೀತಿಯ ಶ್ವಾನಗಳೊಂದಿಗೆ ಜನರು ಸೆಲ್ಫಿಯನ್ನು ತೆಗೆದುಕೊಂಡರು.


Krishimela Dog Show ಬೀಗಲ್, ಡಾಬರ್ ಮನ್, ಜ್ಯಾಕ್ ರಸಲ್ ಟೆರಿಯರ್, ರೆಟ್ರಿ ವರ್, ಪಿಟ್ ಬುಲ್ ಹೀಗೆ ವಿವಿಧ ಪ್ರಭೇದಗಳ ಶ್ವಾನಗಳು ಎಲ್ಲರನ್ನು ಆಕರ್ಷಿಸಿದವು.

ಶ್ವಾನಗಳ ಜಿಗಿತ, ಓಟ ಕಂಡು ಜನರು ಸಂತೋಷ ಪಟ್ಟರು.

ನೆರೆದಿರುವ ಜನರು ಶ್ವಾನಗಳ ಕ್ಯೂಟ್ ಪರ್ಫಾರ್ಮೆನ್ಸ್ ನೋಡಿ ಬೆರಗಾದರು…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Protest in Shivamogga ಶಿವಮೊಗ್ಗ ಡಿಸಿ ಕಚೇರಿ ಕಟ್ಟಡದ ಮೇಲೆ ಆಜಾನ್ ಕೂಗಿದ ಬಗ್ಗೆ ಬಜರಂಗದಳ ಪ್ರತಿಭಟನೆ

Protest in Shivamogga ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ಆಜಾನ್ ಕೂಗಿದ ಘಟನೆ ಬಗ್ಗೆ  ಬಜರಂಗದಳದಿಂದ ಖಂಡನೆ, ಪ್ರತಿಭಟನೆ ನಡೆಯಿತು.

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಮುಸಲ್ಮಾನರು ಮತಾಂಧತೆ ಹರಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿದರು.

ಗೂಂಡಾ ಮುಸಲ್ಮಾನರು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ವಿರೋಧಿ ಎಸ್.ಡಿ.ಪಿ.ಐ. ನಾಯಿಗಳಿಗೆ ದಿಕ್ಕಾರ ಎಂದು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಗೋಮೂತ್ರ ಸಿಂಪಡಣೆಗೆ ಬಜರಂಗದಳ ಕಾರ್ಯಕರ್ತರು ಮುಂದಾದರು.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಗೋಮೂತ್ರ ಸಿಂಪಡಿಸಲು ಕಾರ್ಯಕರ್ತರು ಮುಂದಾದರು.

Protest in Shivamogga ಈ ಸಂದರ್ಭದಲ್ಲಿ
ಗೋಮೂತ್ರದ ಬಾಟಲಿಗಳನ್ನು ಪೊಲೀಸರು ಕಸಿದುಕೊಂಡರು.
ರಾಮನ ಮಕ್ಕಳು ನಾವೆಲ್ಲಾ, ಬಾಬರ್ ಸಂತತಿ ಬೇಕಿಲ್ಲ ಎಂದು ಘೋಷಣೆ ಕೂಗಿದರು.

ದೇಶದ್ರೋಹಿ ಮತಾಂಧ ಮುಸಲ್ಮಾನರಿಗೆ ಧಿಕ್ಕಾರ ಎಂದು ಘೋಷಣೆಗಳು ಕೇಳಿ ಬಂತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Gangavathi Pranesh Nage Habba in Shivamogga ಶಿವಮೊಗ್ಗದಲ್ಲಿ ಮಾರ್ಚ್ 22 ರಂದು ಗಂಗಾವತಿ ಪ್ರಾಣೇಶ್ ನಗೆ ಹಬ್ಬ

0

Gangavathi Pranesh Nage Habba in Shivamogga  ಶಿವಮೊಗ್ಗ ನಗರದ ಜನಪ್ರಿಯ ಯುವ ಮುಖಂಡರಾದ ಶ್ರೀ ಕೆಇ ಕಾಂತೇಶ್ ಅವರ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗದ ವತಿಯಿಂದ ನಿರ್ಧರಿಸಲಾಗಿದೆ.

ಇದರ ಅಂಗವಾಗಿ ಶಿವಮೊಗ್ಗ ನಗರದ ಮಂಜುನಾಥ ಬಡಾವಣೆ, ರಾಜೀವ ಗಾಂಧಿ ಬಡಾವಣೆ, ಗುಂಡಪ್ಪ ಶೇಡ್, ಅಂಬೇಡ್ಕರ್ ನಗರ, ಬೆಂಕಿ ನಗರ, ನ್ಯೂ ಮಂಡ್ಲಿ, ಶಾಂತಿನಗರದ ಅವಶ್ಯಕತೆ ಇರುವ ನಿವಾಸಿಗಳಿಗೆ ಸೊಳ್ಳೆ ಪರದೆ ವಿತರಣೆ ಮಾಡಲಾಗುತ್ತದೆ.

ಈ ಸೇವಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾರ್ಚ್ 21 ರ ಬೆಳಗ್ಗೆ 9 ಗಂಟೆಗೆ ಗುರುಪುರ ನಂಜುಂಡೇಶ್ವರ ಸಭಾಭವನದಲ್ಲಿ ನಡೆಸಲಾಗುತ್ತದೆ. ಶಿವಮೊಗ್ಗ ಬೆಕ್ಕಿನ ಕಲ್ಮಟ್ಟದ ಪೂಜ್ಯ ಶ್ರೀ.ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿವಮೊಗ್ಗ ಬಸವ ಕೇಂದ್ರದ ಪೂಜ್ಯ ಶ್ರೀ. ಬಸವ ಮರುಳಸಿದ್ದ ಸ್ವಾಮಿಗಳು, ಹೊಸದುರ್ಗ ಕನಕ ಗುರು ಪೀಠದ ಪೂಜ್ಯ ಶ್ರೀ ಈಶ್ವರನಂದ ಪುರಿ ಸ್ವಾಮಿಗಳು, ಚಿತ್ರದುರ್ಗ ಮಾದಾರ ಗುರುಪೀಠದ ಪೂಜ್ಯ ಶ್ರೀ ಮಾದರ ಚೆನ್ನಯ್ಯ ಸ್ವಾಮಿಗಳು ಮತ್ತು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಇನ್ನು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

Gangavathi Pranesh Nage Habba in Shivamogga  ಈ ದಿನ ಶಿವಮೊಗ್ಗದ ಶಾರದ ಅಂದರ ವಿಕಾಸ ಕೇಂದ್ರ, ತಾಯಿ ಮನೆ, ಮಾತೃ ಛಾಯ, ಜೀವನ ಸಂಜೆ, ತರಂಗ, ಗುಡ್ ಲಕ್ ಹಾರೈಕೆ ಕೇಂದ್ರ, ವೃದ್ದಾಶ್ರಮಗಳಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಮಾರ್ಚ್ 22ರ ಯುಗಾದಿಯ ಸಂಜೆ ವಿಶೇಷ ಯುಗಾದಿ ಸಂಭ್ರಮ ಕಾರ್ಯಕ್ರಮವನ್ನು ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಶ್ರೀ ಶನೀಶ್ಚರ ದೇವಾಲಯದ ಆವರಣ, ಶುಭ ಮಂಗಳ ಸಮುದಾಯ ಭವನ ದಲ್ಲಿ ಆಯೋಜಿಸಲಾಗಿದೆ.

ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಗಂಗಾವತಿ ಪ್ರಾಣೇಶ್ ಮತ್ತು ಶ್ರೀ ಬಸವರಾಜ್ ಹಾದಿಮನಿಯವರು ಹಾಸ್ಯ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

ಯುಗಾದಿ ವಿಶೇಷ ಪಂಚಾಂಗ ಶ್ರವಣ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಲಿದೆ. ಶಿವಮೊಗ್ಗ ನಗರದ ಶಾಸಕರಾದ ಕೆ ಎಸ್ ಈಶ್ವರಪ್ಪ  ಯುಗಾದಿ ಸಂಭ್ರಮ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಇ ಕಾಂತೇಶ್ ಕೂಡ ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಪತ್ರಿಕಾ ವರದಿಯ ಮೂಲಕ ಕಾಂತೇಶ್ ಸ್ನೇಹಿತರ ಬಳಗ ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kuvempu University ಕುವೆಂಪು ವಿವಿಯ ಡಾ.ಗಿರೀಶ್ ಗೆ ಸರ್ ಸಿ.ವಿ.ರಾಮನ್ ಪ್ರಶಸ್ತಿ

0

Kuvempu University  ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಿತಶಾಸ್ತ್ರ ಮತ್ತು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಬಿ. ಜೆ. ಗಿರೀಶ್ ಅವರು ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸರ್ ಸಿ. ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಈ ಕುರಿತು ಅಧಿಕೃತವಾಗಿ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು ಭೌತಿಕ ವಿಜ್ಞಾನ ಕ್ಷೇತ್ರದ ಸಂಶೋಧನಾ ಚಟುವಟಿಕೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ 2020ನೇ ಸಾಲಿನ ಸರ್. ಸಿ. ವಿ. ರಾಮನ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬರುವ ಮಾರ್ಚ್ 23ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಯ ಜೆ ಎನ್ ಟಾಟಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರಶಸ್ತಿ ವಿತರಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಸಿ. ಎನ್. ಅಶ್ವತ್ಥ್ ನಾರಾಯಣ, ಪ್ರೊ. ಸಿ. ಎನ್. ಆರ್. ರಾವ್ ಭಾಗವಹಿಸಲಿದ್ದಾರೆ.

Kuvempu University  ಡಾ. ಗಿರೀಶ್ ಅವರು ಕಳೆದ ಹಲವು ವರ್ಷಗಳಿಂದ ರಾಜ್ಯದ ಮಂಚೂಣಿಯ ಸಂಶೋಧಕರಾಗಿ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನದಂಡಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈಗ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸದ ವಿಚಾರ. ಇದು ವಿಶ್ವವಿದ್ಯಾಲಯದ ಇತರೆ ಅಧ್ಯಾಪಕರಿಗೆ ಸ್ಫೂರ್ತಿಯಾಗಲಿ ಎಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Women’s Day Competition ಮತ್ತೆ ಆಡೋಣ ಬನ್ನಿ ನಾಟಕ’ ಸ್ಪರ್ಧೆಯ ಫಲಿತಾಂಶ

0

Women’s Day Competition ಮನ್ವಂತರ ಮಹಿಳಾ ಮಂಡಳ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಂಯುಕ್ತವಾಗಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕೇಂದ್ರಿತ ವಿಷಯಗಳನ್ನೊಳಗೊಂಡ `ಮತ್ತೆ ಆಡೋಣ ಬನ್ನಿ ನಾಟಕ’ ಸ್ಪರ್ಧೆಯ ಫಲಿತಾಂಶ ಈ ರೀತಿಯಿದೆ.

ಸದಭಿರುಚಿ ಸಂಸ್ಥೆಯು ಪ್ರಸ್ತುತ ಪಡಿಸಿದ `ಆನು ಒಲಿದಂತೆ ಹಾಡುವೆ’ ಶೀರ್ಷಿಕೆಯ ನಾಟಕಕ್ಕೆ ಪ್ರಥಮ ಸ್ಥಾನ ಬಂದಿದೆ.

ಶಾರದಾ ಮಹಿಳಾ ಒಕ್ಕೂಟವು ಪ್ರಸ್ತುತ ಪಡಿಸಿದ `ನೀನೇ ಎಲ್ಲ ನಿನ್ನಿಂದಲೇ ಎಲ್ಲ’ ಶೀರ್ಷಿಕೆಯ ನಾಟಕ ದ್ವಿತೀಯ ಸ್ಥಾನ ಮತ್ತು ಸ್ವಪ್ನ ತಂಡ ಪ್ರಸ್ತುತ ಪಡಿಸಿದ `ಮನಸ್ವಿನಿ’ ಶೀರ್ಷಿಕೆಯ ನಾಟಕ ತೃತೀಯ ಸ್ಥಾನ ಗಳಿಸಿದೆ.

ಐಎಂಎ ಮಹಿಳಾ ಘಟಕದ ಸದಸ್ಯರು ಪ್ರಸ್ತುತಪಡಿಸಿದ ಆ ದಿನಗಳು ನಾಟಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ನಾಟಕ ಎಂದು ಮನ್ನಣೆ ಗಳಿಸಿತು. ಉಳಿದಂತೆ 9 ತಂಡಗಳು ಸಮಾಧಾನಕರ ಬಹುಮಾನ ಗಳಿಸಿದವು.

Women’s Day Competition ತೀರ್ಪುಗಾರರಾಗಿ ಹೊನ್ನಾಳಿ ಚಂದ್ರಶೇಖರ್, ಕಾಂತೇಶ್ ಕದರಮಂಡಲಗಿ ಮತ್ತು ಪ್ರೊ. ಕಿರಣ್ ದೇಸಾಯಿ ಪಾಲ್ಗೊಂಡಿದ್ದರು.

ಮನ್ವಂತರ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್. ಮಂಜುನಾಥ್, ಗೋಪಾಲ್ ಯಡಗೆರೆ, ಜೋಯ್ಸ್ ರಾಮಾಚಾರ್, ವಾರಿಜಾ ರಾಮಾಚಾರ್, ಡಾ. ಶ್ರೀಧರ್ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Corona Updates ದೇಶದಲ್ಲಿ 1071 ಕೋವಿಡ್ ಪ್ರಕರಣಗಳ ಪತ್ತೆ

0

Corona Updates ದೇಶದಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 1071 ಪ್ರಕರಣಗಳು ವರದಿಯಾಗಿವೆ.

ನಾಲ್ಕು ತಿಂಗಳುಗಳಲ್ಲಿ ಒಂದೇ ದಿನದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು ಇದೇ ಮೊದಲು.

129 ದಿನಗಳ ನಂತರ ದೇಶದಲ್ಲಿ ಈ ಮಟ್ಟದಲ್ಲಿ ಪ್ರಕರಣಗಳು ಮಟ್ಟದ ಪ್ರಕರಣಗಳು ವರದಿಯಾಗಿದೆ.

Corona Updates ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 5,915 ಆಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಮೂರು ಜನ ಕೊರೋನದಿಂದ ಸಾವನಪ್ಪಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಕಟ್ಟುನಿಟ್ಟಾದ ನಿಯಮಗಳನ್ನ ಜಾರಿಗೊಳಿಸಬೇಕು. ಆಗ ಮಾತ್ರ ಕೊರೋನದ ವಿರುದ್ಧ ಹೋರಾಡಲು ಸಾಧ್ಯ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Aam Aadmi Party ಚಿಕ್ಕಮಗಳೂರಿನಲ್ಲಿ ಮತದಾರರಿಗೇ ಪ್ರಣಾಳಿಕೆ ಆಶಯ ಬರೆಯಲು ಕೋರಿದ ಆಮ್ ಆದ್ಮಿ ಪಕ್ಷ

0

Aam Aadmi Party  ಚಿಕ್ಕಮಗಳೂರು, ನಗರದ ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣ ಸಮೀಪದಲ್ಲಿ ಜಿಲ್ಲಾ ಎಎಪಿ ವತಿಯಿಂದ ಕ್ಷೇತ್ರದ ಜನತೆಗೆ ಬೇಕಾದ ಸೌಲಭ್ಯಗಳನ್ನು ನೀವೇ ಆಯ್ಕೆಗೊಳಿಸಿ ಎಂದು ಕ್ಷೇತ್ರ ಪ್ರಣಾಳಿಕೆ ಕರಪತ್ರವನ್ನು ಶನಿವಾರ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ವಿತರಿಸಿದರು.

Aam Aadmi Party ಈ ಸಂದರ್ಭದಲ್ಲಿ ಎಎಪಿ ರಾಜ್ಯ ಜಂಟಿ ಕಾರ್ಯದರ್ಶಿ ಡಾ|| ಕೆ.ಸುಂದರಗೌಡ, ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್, ಆಕಾಂಕ್ಷಿ ಈರೇಗೌಡ, ಮಹಿಳಾ ಅಧ್ಯಕ್ಷೆ ನಾಸಿರ್ ಬೇಗಂ, ಉಸ್ತುವಾರಿ ಹರ್ಷನ್, ಮುಖಂಡರುಗಳಾದ ಸೈಯದ್ ಜಮೀಲ್ ಅಹ್ಮದ್, ಪರಮೇಶ್, ರಂಗನಾಥ್ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.